Tag: RTPS

  • PUBLiC TV Impact | ಕೃಷ್ಣಾ ನದಿಗೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ

    PUBLiC TV Impact | ಕೃಷ್ಣಾ ನದಿಗೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ

    – ಶೀಘ್ರವೇ ಆರ್‌ಟಿಪಿಎಸ್, ವೈಟಿಪಿಎಸ್‌ಗೆ ನೋಟಿಸ್

    ರಾಯಚೂರು: ರಾಯಚೂರಿನಲ್ಲಿ (Raichuru) ಕೃಷ್ಣಾ ನದಿಗೆ (Krishna River) ವಿದ್ಯುತ್ ಕೇಂದ್ರಗಳು ಎಗ್ಗಿಲ್ಲದೆ ರಾಸಾಯನಿಕ ವಸ್ತುಗಳನ್ನು ಹರಿಬಿಡುತ್ತಿವೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿಯನ್ನು ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದೀಗ ಅಧಿಕಾರಿಗಳು ವೈಟಿಪಿಎಸ್ ಹಾಗೂ ಆರ್‌ಟಿಪಿಎಸ್‌ಗೆ ನೋಟಿಸ್ ಕೊಡಲು ಮುಂದಾಗಿದ್ದಾರೆ.

    ಜಿಲ್ಲೆಯ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಜಿಲ್ಲೆಯ ಹೆಮ್ಮೆ. ಆದರೆ ಇವುಗಳಿಂದ ಜಿಲ್ಲೆಯ ಜನರಿಗೆ ಯಾವುದೇ ಖುಷಿಯಿರಲಿಲ್ಲ. ಇದರಲ್ಲಿ ವಿದ್ಯುತ್ ಕೇಂದ್ರಗಳು ಜೀವಮಾರಕವಾಗಿರುವ ರಾಸಾಯನಿಕಯುಕ್ತ ತಳ ಬೂದಿಯನ್ನು ನೇರವಾಗಿ ಕೃಷ್ಣಾ ನದಿಗೆ ಹರಿಬಿಡುತ್ತಿದೆ. ಈ ಮೂಲಕ ಜನರ ಆರೋಗ್ಯ, ಜಾನುವಾರು, ಜಲಚರಗಳ ಜೀವದ ಜೊತೆ ಅಧಿಕಾರಿಗಳು ಆಟವಾಡುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.ಇದನ್ನೂ ಓದಿ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸಂಸದ ಬಸವರಾಜ ಬೊಮ್ಮಾಯಿ

    ವಿದ್ಯುತ್ ಕೇಂದ್ರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಬಗ್ಗೆ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿಗಳ ತಂಡ ಪರಿಶೀಲನೆಗೆ ಮುಂದಾಗಿದೆ. ಸ್ಥಳದಲ್ಲಿ ಸಂಗ್ರಹಿಸಿರುವ ನೀರಿನ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇಷ್ಟು ದೊಡ್ಡಮಟ್ಟದ ನಿರ್ಲಕ್ಷ್ಯ ಕಂಡು ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಜಿಲ್ಲಾ ಪರಿಸರ ಅಧಿಕಾರಿ ಪ್ರಕಾಶ್ ಮಾತನಾಡಿ, ಥರ್ಮಲ್ ಪವರ್ ಪ್ಲ್ಯಾಂಟ್‌ಗಳು ರೆಡ್ ಕೆಟಗರಿಗೆ ಬರುವುದರಿಂದ ಹಿರಿಯ ಅಧಿಕಾರಿಗಳಿಂದ ತನಿಖೆಗೆ ಪತ್ರ ಬರೆಯುತ್ತೇವೆ. ವಿದ್ಯುತ್ ಕೇಂದ್ರಗಳಿಗೆ ಕೂಡಲೇ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

    ಸಂಗ್ರಹವಾಗುವ ದ್ರವರೂಪದ ತಳಬೂದಿಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡದೇ ವಿದ್ಯುತ್ ಕೇಂದ್ರದ ಅಧಿಕಾರಿಗಳು ನೇರವಾಗಿ ನದಿಗೆ ಬಿಡುತ್ತಿದ್ದಾರೆ. ಇದೇ ನೀರನ್ನು ಜನ, ಜಾನುವಾರು ಕುಡಿಯುವುದರಿಂದ ಸ್ಲೋ ಪಾಯಿಸನ್ ಜನರ ದೇಹ ಸೇರುತ್ತಿದೆ. ಕೇವಲ ನೋಟಿಸ್‌ಗೆ ಸೀಮಿತವಾಗದೇ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ದೇವೇಗೌಡರು ನನ್ನ ಸೊಕ್ಕು ಮುರಿಯುತ್ತೇನೆ ಎಂದಿದ್ದು ಸರಿಯೇ – ಜಮೀರ್‌ ಹೇಳಿಕೆಯನ್ನ ಖಂಡಿಸಿದ್ದಕ್ಕೆ ಸಿಎಂ ತಿರುಗೇಟು

  • ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ನದಿಗೆ ವಿಷಕಾರಿ ರಾಸಾಯನಿಕ ಬಿಡುಗಡೆ – ಕಲುಷಿತಗೊಂಡ ಕೃಷ್ಣೆಯ ಒಡಲು

    ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ನದಿಗೆ ವಿಷಕಾರಿ ರಾಸಾಯನಿಕ ಬಿಡುಗಡೆ – ಕಲುಷಿತಗೊಂಡ ಕೃಷ್ಣೆಯ ಒಡಲು

    ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಹಾರುವ ಬೂದಿ ನಿರ್ವಹಣೆ ಕೊರತೆಯಿಂದ ಇಲ್ಲಿನ ಜನ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಗಾಳಿಯಲ್ಲಿ ತೇಲಿ ಬರುವ ಬೂದಿ ಸಮಸ್ಯೆ ಒಂದೆಡೆಯಾದರೆ, ದ್ರವರೂಪದ ಬೂದಿ ಸಂಗ್ರಹಣ ಹೊಂಡಗಳಿಂದ ಈಗ ಹೊಸ ಸಮಸ್ಯೆ ಎದುರಾಗಿದೆ. ಕೃಷ್ಣಾ ನದಿಯನ್ನೇ (Krishna River) ಮಾಲಿನ್ಯ ಮಾಡಲು ಹೊರಟಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ನಾನಾ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

    ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ ರಾಜ್ಯಕ್ಕೆ ಶೇ.45 ರಷ್ಟು ಪ್ರಮಾಣದ ವಿದ್ಯುತ್ ಸರಬರಾಜಾಗುತ್ತಿದೆ. ನಿಜ, ಆದರೆ ದೀಪದ ಕೆಳಗೆ ಕತ್ತಲು ಅನ್ನುವ ಹಾಗೇ ಇಡೀ ರಾಜ್ಯಕ್ಕೆ ಬೆಳಕು ನೀಡುವ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ನಿಂದ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಗಾಳಿಯಲ್ಲಿ ತೇಲಿ ನೇರವಾಗಿ ಮನುಷ್ಯರ ಶ್ವಾಸಕೋಶ ಸೇರುವ ಬೂದಿ ಸಮಸ್ಯೆ ಹಾಗೂ ದ್ರವ ರೂಪದ ತಳಬೂದಿಯನ್ನ ನೇರವಾಗಿ ಕೃಷ್ಣಾನದಿಗೆ ಹರಿಸುವ ಮೂಲಕ ಆರ್‌ಟಿಪಿಎಸ್ (RTPS) ಹಾಗೂ ವೈಟಿಪಿಎಸ್ (YTPS)  ಅಧಿಕಾರಿಗಳು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದನ್ನೂ ಓದಿ: ಸಂಡೂರು ಉಪ ಚುನಾವಣೆ – ಮಾಸ್ಟರಿಂಗ್ ಕಾರ್ಯ ಪೂರ್ಣ

    ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಸುಟ್ಟಾಗ ಬೂದಿಯಾಗಿ ಬರುವ ಹಾರುವ ಬೂದಿ ನಾನಾ ರಾಸಾಯನಿಕ ಅಂಶಗಳನ್ನ ಹೊಂದಿರುತ್ತದೆ. ಇದಕ್ಕೆ ನೀರನ್ನ ಬೆರಸಿ ಹೊಂಡಕ್ಕೆ ಹರಿಸಲಾಗುತ್ತದೆ. ಈ ಹೊಂಡಗಳ ನಿರ್ವಹಣೆ ವೈಫಲ್ಯದಿಂದ ನಾನಾ ರಾಸಾಯನಿಕ ಪದಾರ್ಥಗಳ ಮಿಶ್ರಣವಾದ ಬೂದಿಯನ್ನ ನೇರವಾಗಿ ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಇದು ಜಲಚರಗಳಿಗೆ ಜೀವಕ್ಕೆ ಮಾರಕವಾಗಿದೆ. ಕೃಷ್ಣಾ ನದಿ ನೀರನ್ನೇ ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯಲು ಸರಬರಾಜು ಮಾಡುವುದರಿಂದ ಜನ ಈಗ ನೀರು ಕುಡಿಯಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ನದಿ ಪಾತ್ರದ ದೇವಸುಗೂರು ಸೇರಿದಂತೆ ಹಲವು ಹಳ್ಳಿಗಳ ಜನ ಈ ವಿದ್ಯುತ್ ಕೇಂದ್ರಗಳಿಂದ ನೇರ ದುಷ್ಪಪರಿಣಾಮಗಳಿಗೆ ಆಗಾಗ ತುತ್ತಾಗುತ್ತಲೇ ಇದ್ದಾರೆ. ಈ ಹಿಂದೆಯೂ ಬೂದಿಯನ್ನು ನೇರವಾಗಿ ಕೃಷ್ಣಾನದಿಗೆ ಬಿಡಲಾಗಿತ್ತು. ಜನ ಮೈತುರಿಕೆ ಸೇರಿದಂತೆ ಚರ್ಮರೋಗಗಳಿಗೆ ತುತ್ತಾಗಿದ್ದರು. ಆರೋಗ್ಯದ ಮೇಲೂ ನಾನಾ ಪರಿಣಾಮ ಬೀರಿತ್ತು. ಈಗ ಪುನಃ ನದಿಗೆ ಬೂದಿ ಎಗ್ಗಿಲ್ಲದೆ ಬಿಡಲಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲ ಹಾಗೂ ನದಿಯಲ್ಲಿ ನೀರು ತುಂಬಿ ಹರಿಯುವಾಗ ಯಾವ ಮುಲಾಜಿಲ್ಲದೆ ಬೂದಿಯನ್ನು ನದಿಗೆ ಬಿಡುತ್ತಾರೆ. ಆದರೆ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಿದ್ದಾಗ ಜನ ಹಾಗೂ ಜಲಚರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    ಸಂಗ್ರಹವಾಗುವ ಬೂದಿಯನ್ನ ಸರಿಯಾಗಿ ನಿರ್ವಹಣೆ ಮಾಡದೇ ಅಧಿಕಾರಿಗಳು ನೇರವಾಗಿ ನದಿಗೆ ಹರಿಬಿಟ್ಟು ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಬೂದಿ ಸಮಸ್ಯೆಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಜನರಿಗೆ ಈಗ ಹೊಸ ಸಮಸ್ಯೆ ತಲೆದೂರಿದಂತಾಗಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಕಾಣಿಸಿಕೊಳ್ಳುವ ಮೊದಲೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನ ಹರಿಸಬೇಕಿದೆ.ಇದನ್ನೂ ಓದಿ: ಶಿವಮೊಗ್ಗ | ದಾನವಾಡಿ ಅರಣ್ಯದಲ್ಲಿ ಕಡವೆ ಬೇಟೆ – ಆರೋಪಿ ಅರೆಸ್ಟ್

  • ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಸಿತ: ಆರ್‌ಟಿಪಿಎಸ್‌ನ ಐದು ಘಟಕಗಳು ಬಂದ್

    ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಸಿತ: ಆರ್‌ಟಿಪಿಎಸ್‌ನ ಐದು ಘಟಕಗಳು ಬಂದ್

    ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಸಿತ ಹಿನ್ನೆಲೆ ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್ (Raichur Thermal Power Station) ವಿದ್ಯುತ್ ಕೇಂದ್ರಕ್ಕೆ ತಾತ್ಕಾಲಿಕ ವಿಶ್ರಾಂತಿ ನೀಡಲಾಗಿದೆ. ವಿದ್ಯುತ್ ಕೇಂದ್ರದ ಐದು ಘಟಕಗಳನ್ನು ಬಂದ್ ಮಾಡಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.ಇದನ್ನೂ ಓದಿ: ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ

    ರಾಜ್ಯದ ಅರ್ಧದಷ್ಟು ಭಾಗಕ್ಕೆ ವಿದ್ಯುತ್ ಕೊಡುವ ರಾಯಚೂರು (Raichur) ವಿದ್ಯುತ್ ಉತ್ಪಾದನಾ ಕೇಂದ್ರದ ಒಟ್ಟು ಎಂಟು ಘಟಕಗಳಲ್ಲಿ 2, 3, 4, 6 ಮತ್ತು 7ನೇ ವಿದ್ಯುತ್ ಘಟಕಗಳ ಉತ್ಪಾದನೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. 1ನೇ ಘಟಕ ತಾಂತ್ರಿಕ ಸಮಸ್ಯೆಯಿಂದ ಈ ಮೊದಲೇ ಬಂದ್ ಆಗಿದೆ. ಸದ್ಯ 5 ಮತ್ತು 8 ನೇ ಘಟಕಗಳಿಂದ ಕೇವಲ 310 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

    ರಾಜ್ಯದಲ್ಲಿ ಸುರಿದ ಉತ್ತಮ ಮಳೆಯಿಂದ ಜಲಾಶಯಗಳು ಭರ್ತಿಯಾಗಿದ್ದು, ಜಲ ವಿದ್ಯುತ್ ಉತ್ಪಾದನೆ ಹೆಚ್ಚಳ ಹಿನ್ನೆಲೆ ಆರ್‌ಟಿಪಿಎಸ್ ಘಟಕಗಳಿಗೆ ರೆಸ್ಟ್ ನೀಡಲಾಗಿದೆ. ವಿದ್ಯುತ್ ಬೇಡಿಕೆ ಗಣನೀಯ ಕುಸಿದ ಹಿನ್ನೆಲೆ ಘಟಕಗಳಿಗೆ ವಿಶ್ರಾಂತಿ ನೀಡಿ ನಿರ್ವಹಣೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಇದನ್ನೂ ಓದಿ: ‘ಹಲೋ ಸರ್’ ಚಿತ್ರಕ್ಕೆ ಮುಹೂರ್ತ : ಕೆ.ಶಂಕರ್ ನಿರ್ದೇಶನದ ಸಿನಿಮಾ

  • ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಬಂದ್ – ವಿದ್ಯುತ್ ಕ್ಷಾಮ ಭೀತಿ

    ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಬಂದ್ – ವಿದ್ಯುತ್ ಕ್ಷಾಮ ಭೀತಿ

    ರಾಯಚೂರು: ರಾಯಚೂರಿನ (Raichuru) ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನ (RTPS) ನಾಲ್ಕು ಘಟಕಗಳು ಸ್ಥಗಿತವಾಗಿದ್ದು, ರಾಜ್ಯಕ್ಕೆ ವಿದ್ಯುತ್ ಕೊರತೆಯ ಶಾಕ್ ಎದುರಾಗಿದೆ.

    ಬರಗಾಲ ಹಿನ್ನೆಲೆ ರಾಜ್ಯದಲ್ಲಿ ಈಗಾಗಲೇ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಈಗ ಬಿರು ಬೇಸಿಗೆಯಲ್ಲಿ ವಿದ್ಯುತ್ ಕ್ಷಾಮ ಸಹ ಎದುರಾಗುವ ಭೀತಿ ಉಂಟಾಗಿದೆ. ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಪೂರೈಸುವ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ತಲೆದೂರಿದ್ದು, ಆರ್‌ಟಿಪಿಎಸ್‌ನ ಎಂಟು ಘಟಕಗಳಲ್ಲಿ ನಾಲ್ಕು ಘಟಕ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಿವೆ. ಇದನ್ನೂ ಓದಿ: ಬಿಜೆಪಿ ನಡೆಗೆ ಬೇಸರ; ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಶ್ರೀನಿವಾಸ್‌ ಪ್ರಸಾದ್‌ ಬೆಂಬಲ?

    ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆಯಿಂದ ಘಟಕಗಳು ಸ್ಥಗಿತಗೊಂಡಿವೆ. 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೇಂದ್ರದಲ್ಲಿ ಈಗ ಕೇವಲ 665 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ.

    ವಿದ್ಯುತ್ ಕೇಂದ್ರದ 1,2,3 ಹಾಗೂ 6 ನೇ ಘಟಕ ಬಂದ್ ಆಗಿದ್ದು, ಬೇಸಿಗೆಯಲ್ಲಿ ಹೆಚ್ಚು ಒತ್ತಡ ಇರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲೇ ಉತ್ಪಾದನೆ ಕುಂಠಿತವಾಗಿದೆ. ನೀರಿನ ಸಮಸ್ಯೆ ಬೆನ್ನಲ್ಲೆ ತಾಂತ್ರಿಕ ಸಮಸ್ಯೆಯಿಂದ ಘಟಕಗಳು ಬಂದ್ ಆಗಿದ್ದು, ಬೇಸಿಗೆಯಲ್ಲಿ ವಿಪರೀತ ಲೋಡ್ ಶೆಡ್ಡಿಂಗ್ ಭೀತಿ ಎದುರಾಗಿದೆ. ಇದನ್ನೂ ಓದಿ: ಅಕ್ರಮ ಗೋಮಾಂಸ ಮಾರಾಟಕ್ಕೆ 60 ಕ್ಕೂ ಹೆಚ್ಚು ಗೋವುಗಳ ವಧೆ – 10 ಸಾವಿರ ಕೆಜಿ ಗೋಮಾಂಸ ಪೊಲೀಸರ ವಶಕ್ಕೆ

  • ರಾಯಚೂರು ವಿದ್ಯುತ್ ಕೇಂದ್ರಗಳ ಕಲ್ಲಿದ್ದಲು ಕಳ್ಳಾಟ ಪ್ರಕರಣ- ಇಬ್ಬರ ವಿರುದ್ಧ ಎಫ್‌ಐಆರ್

    ರಾಯಚೂರು ವಿದ್ಯುತ್ ಕೇಂದ್ರಗಳ ಕಲ್ಲಿದ್ದಲು ಕಳ್ಳಾಟ ಪ್ರಕರಣ- ಇಬ್ಬರ ವಿರುದ್ಧ ಎಫ್‌ಐಆರ್

    ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಕಳ್ಳಾಟ ಕುರಿತ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಆರ್‌ಟಿಪಿಎಸ್ (RTPS) ಹಾಗೂ ವೈಟಿಪಿಎಸ್ (YTPS) ಅಧಿಕಾರಿಗಳು ಈಗ ಅಲರ್ಟ್ ಆಗಿದ್ದಾರೆ. ಕಲ್ಲಿದ್ದಲು ಕಳ್ಳತನ (Coal Theft) ಆರೋಪಿಸಿ ರೈಲ್ವೆ ವ್ಯಾಗಾನ್ ಸ್ವಚ್ಛತಾ ಗುತ್ತಿಗೆದಾರ (Contractor) ಶ್ರೀನಿವಾಸಲು ಹಾಗೂ ಯರಮರಸ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

    ವೈಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ರಾಯಚೂರು (Raichir) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ವೈಟಿಪಿಎಸ್‌ಗೆ ಬಂದ ಕಲ್ಲಿದ್ದಲಿನಲ್ಲಿ ಕಳ್ಳತನ ನಡೆದಿದೆ. ಅಕ್ಟೋಬರ್ 19 ರಿಂದ ನವೆಂಬರ್ 20 ರವರೆಗೆ ಅಂದಾಜು 5 ಲಕ್ಷ ರೂ. ಮೌಲ್ಯದ ಸುಮಾರು 120 ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಕಳ್ಳತನ ಮಾಡಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಲ್ಲಿದ್ದಲು ಕಳ್ಳತನ ಕೇಸ್‌ – ಇದ್ದ ಮೂವರಲ್ಲಿ ಕಳ್ಳ ಯಾರು? ವೈಟಿಪಿಎಸ್ ಅಧಿಕಾರಿಗಳು ಹೇಳೋದು ಏನು?

    ಇನ್ನೂ ಆರ್‌ಟಿಪಿಎಸ್ ಅಧಿಕಾರಿಗಳು ಕಲ್ಲಿದ್ದಲು ಕಳ್ಳತನ ವಿದ್ಯುತ್ ಕೇಂದ್ರದ ಹೊರಗಡೆ ನಡೆದಿದೆ, ತನಿಖೆ ಮಾಡಿ ಎಂದು ಪೊಲೀಸರಿಗೆ ಅರ್ಜಿ ನೀಡಿದ್ದಾರೆ. ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಪ್ರಕರಣ ದಾಖಲಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: PUBLiC TV Impact ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

    ಏನಿದು ಪ್ರಕರಣ?
    ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿವೆ. ಈಗ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಹಿಂದೆ ಬಿದ್ದಿವೆ. ಇದರ ಹಿಂದೆ ಕಲ್ಲಿದ್ದಲು ಕಳ್ಳಾಟ ನಡೆಯುತ್ತಿರುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲು ಮಾಡಿತ್ತು. ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

    ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಸರಬರಾಜಾಗುವ ಕಲ್ಲಿದ್ದಲನ್ನು ಸಂಪೂರ್ಣವಾಗಿ ಬಳಕೆ ಮಾಡದೆ, ಅಲ್ಪ ಪ್ರಮಾಣದ ಕಲ್ಲಿದ್ದಲನ್ನು ಉಳಿಸಿ ಕಳುಹಿಸುತ್ತಿರುವುದು ಬಯಲಾಗಿದೆ. ಈ ಅಲ್ಪ ಪ್ರಮಾಣದ ಕಲ್ಲಿದ್ದಲೇ ಈಗ ನೂರಾರು ಟನ್ ಇದ್ದು, ಲಕ್ಷಾಂತರ ರೂಪಾಯಿ ಗೋಲ್ ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಲ್ಲಿದ್ದಲು ರೇಕ್‌ನ ವ್ಯಾಗನಾರ್‌ಗಳ ಸ್ವಚ್ಛತೆ ಹೆಸರಲ್ಲಿ ಟನ್‌ಗಟ್ಟಲೇ ಕಲ್ಲಿದ್ದಲು ಮಾಯಾವಾಗುತ್ತಿದೆ. ಇಡೀ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದ್ದರೆ ಇಲ್ಲಿ ಕಲ್ಲಿದ್ದಲಿನ ಕಳ್ಳ ದಂಧೆ ನಡೆಯುತ್ತಿರೋದು ಸ್ಪಷ್ಟವಾಗಿದೆ. ಇದನ್ನೂ ಓದಿ: ಕರ್ನಾಟಕದ ಹಿಂದೂಗಳು ಒಂದಾಗಬೇಕು: ಯತ್ನಾಳ್

  • PUBLiC TV Impact  ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

    PUBLiC TV Impact ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

    ರಾಯಚೂರು: ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (RTPS) ಸಂಪೂರ್ಣವಾಗಿ ತಲುಪಬೇಕಾದ ಕಲ್ಲಿದ್ದಲಿನಲ್ಲಿ (Coal) ದೊಡ್ಡ ಗೋಲ್‌ಮಾಲ್‌ (Golmaal) ನಡೆಯುತ್ತಿರುವುದನ್ನು ಬಯಲಿಗೆಳೆದ ಪಬ್ಲಿಕ್ ಟಿವಿ (PUBLiC TV) ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ.

    ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಕೆಪಿಸಿ ಎಂ.ಡಿ ಗೌರವ ಗುಪ್ತ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.

     

    ವ್ಯಾಗನ್ ಸ್ವಚ್ಛತೆ ಹೆಸರಲ್ಲಿ ಗುತ್ತಿಗೆದಾರ ನೂರಾರು ಟನ್ ಕಲ್ಲಿದ್ದಲು ಎತ್ತುವಳಿ ಮಾಡುತ್ತಿರುವುದರ ಹಿಂದೆ ವೈಟಿಪಿಎಸ್ ಅಧಿಕಾರಿಗಳು, ಸಿಬ್ಬಂದಿ ಪಾತ್ರ ಬಯಲಾಗಿದೆ. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತು ಸ್ಥಳಕ್ಕೆ ಓಡಿ ಬಂದ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.‌

    ಕೆಪಿಸಿ ಎಂಡಿ ಅವರ ಖಡಕ್ ಸೂಚನೆ ಮೇರೆಗೆ ಪ್ರಾಥಮಿಕ ವರದಿಯನ್ನು ಕೆಪಿಸಿ ಕೇಂದ್ರ ಕಚೇರಿಗೆ ನೀಡಿದ್ದಾರೆ. ಇಡೀ ಸರ್ಕಾರವೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಗೃಹ ಸಚಿವರು, ಕೃಷಿ ಸಚಿವರು ಸಹ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

     

    ಪಬ್ಲಿಕ್ ಟಿವಿ ಎಳೆ ಎಳೆಯಾಗಿ ವರದಿ ಪ್ರಸಾರ ಮಾಡುತ್ತಿದ್ದಂತೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳು ಕೇಂದ್ರ ಕಚೇರಿಯಿಂದಲೇ ಅಂತಿಮ ವರದಿ ಬರಲಿದೆ ಅಂತ ತಿಳಿಸಿದ್ದಾರೆ. ತನಿಖೆ ಬಳಿಕ ಕಳ್ಳಾಟ ನಡೆಸಿರುವ ಅಧಿಕಾರಿಗಳು ಹಾಗೂ ಕಾಣದ ಕೈಗಳ ವಿವರ ಹೊರಬರಲಿವೆ.

  • RTPS ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

    RTPS ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

    ರಾಯಚೂರು: ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (RTPS) ‌ಮೂರು ಘಟಕಗಳು ಸ್ಥಗಿತಗೊಂಡಿದ್ದು ವಿದ್ಯುತ್ (Eectricity) ಉತ್ಪಾದನೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

    ತಾಂತ್ರಿಕ ಸಮಸ್ಯೆಯಿಂದ 1, 2 ಹಾಗೂ ಮೂರನೇ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. 1720 ಮೆಗಾ ವ್ಯಾಟ್ ಸಾಮರ್ಥ್ಯದ ಬೃಹತ್ ವಿದ್ಯುತ್ ಕೇಂದ್ರದಲ್ಲಿ ಸದ್ಯ 5 ಘಟಕಗಳಿಂದ ಕೇವಲ 678 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹಾರೋ ಬೂದಿ ಸಾಗಣೆ ಬಂಕ್ಲರ್ ಕುಸಿದು ಬಿದ್ದ ಹಿನ್ನೆಲೆ ಕಳೆದ 11 ತಿಂಗಳಿನಿಂದ ಒಂದನೇ ಘಟಕ ದುರಸ್ತಿಯಲ್ಲಿದೆ. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?

     
    ತಾಂತ್ರಿಕ ಸಮಸ್ಯೆಯಿಂದ ಬಂದ್ ಆಗಿದ್ದ ಆರನೇ ಘಟಕ ಇಂದು ಆರಂಭವಾಗಿದೆ. ಆದರೆ ತಾಂತ್ರಿಕ ಸಮಸ್ಯೆ ಬಗೆಹರಿಯದ ಹಿನ್ನೆಲೆ 2 ಹಾಗೂ 3ನೇ ಘಟಕ ಇನ್ನೂ ವಿದ್ಯುತ್ ಉತ್ಪಾದಿಸುತ್ತಿಲ್ಲ. ಇತ್ತೀಚಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ (K. J. George) ಆರ್‌ಟಿಪಿಎಸ್ ಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದರು. ಆದರೆ ಇಂಧನ ಸಚಿವರ ಭೇಟಿ ಬಳಿಕವೂ ತಾಂತ್ರಿಕ ಸಮಸ್ಯೆಗಳು ಬಗೆಹರಿದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕತ್ತಲೆಯತ್ತ ಶಾಖೋತ್ಪನ್ನ ವಿದ್ಯುತ್ ಕೇಂದ್ರ – ಒಂದೊಂದಾಗಿ ಮುಚ್ಚುತ್ತಿದೆ RTPS ಘಟಕ

    ಕತ್ತಲೆಯತ್ತ ಶಾಖೋತ್ಪನ್ನ ವಿದ್ಯುತ್ ಕೇಂದ್ರ – ಒಂದೊಂದಾಗಿ ಮುಚ್ಚುತ್ತಿದೆ RTPS ಘಟಕ

    ರಾಯಚೂರು: ರಾಜ್ಯದ ಪ್ರಥಮ ಶಾಖೋತ್ಪನ್ನ ವಿದ್ಯುತ್ ಕೇಂದ್ರ (RTPS) ಈಗ ಹಂತ ಹಂತವಾಗಿ ಮುಚ್ಚುವ ಸಿದ್ಧತೆಯಲ್ಲಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕೇಂದ್ರದ ಎರಡು ಘಟಕಗಳು ತಿಂಗಳಾನುಗಟ್ಟಲೇ ಕಾರ್ಯಸ್ಥಗಿತಗೊಂಡಿದ್ದು, ಒಂದೇ ಒಂದು ವ್ಯಾಟ್ ವಿದ್ಯುತ್ (Electricity) ಉತ್ಪಾದಿಸಿಲ್ಲ. ಪದೇ, ಪದೇ ಅವಘಡಗಳು ಸಂಭವಿಸುತ್ತಿರುವುದು, ಹಳೆಯದಾದ ಘಟಕಗಳ ನವೀಕರಣ ನಡೆಯದಿರುವುದು ಅನುಮಾನ ಮೂಡಿಸಿದೆ.

    ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 70 ರಷ್ಟು ಪಾಲನ್ನು ಹೊಂದಿದ್ದ ರಾಯಚೂರಿನ (Raichur) ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನ ಸಾಮರ್ಥ್ಯ ಈಗ ಕಡಿಮೆಯಾಗಿದೆ. ಒಟ್ಟು 1,720 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಈಗ ಕೇವಲ 666 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ 5 ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 35 ವರ್ಷಕ್ಕೂ ಹಳೆಯದಾದ ಒಂದು ಮತ್ತು ಎರಡನೇ ಘಟಕ ಕಳೆದ ಮೂರು ತಿಂಗಳಿನಿಂದ ಕಾರ್ಯಸ್ಥಗಿತಗೊಳಿಸಿವೆ. ಇದನ್ನೂ ಓದಿ: RTPSನಲ್ಲಿ ಅಗ್ನಿ ಅವಘಡ – 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿ

    ವಿದ್ಯುತ್ ಉತ್ಪಾದನೆ ಕುಂಠಿತಕ್ಕೆ ಅಧಿಕಾರಿಗಳು ವಿದ್ಯುತ್ ಬೇಡಿಕೆ ಕುಸಿತ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣ ಹೇಳುತ್ತಿದ್ದಾರೆ. ಆದ್ರೆ ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ 6,555 ಮೆಗಾ ವ್ಯಾಟ್ ಇದ್ದು ರಾಜ್ಯದ ವಿದ್ಯುತ್ ಉತ್ಪಾದನೆ 2,342 ಮೆಗಾ ವ್ಯಾಟ್ ಇದೆ. ರಾಜ್ಯ ಸರ್ಕಾರ ಹೊಸ ಶಾಖೋತ್ಪನ್ನ ವಿದ್ಯುತ್ ಕೇಂದ್ರ ತೆರೆಯುವ ಆಸಕ್ತಿ ಹೊಂದಿಲ್ಲ ನಿಜ ಆದ್ರೆ ಇರುವ ವಿದ್ಯುತ್ ಕೇಂದ್ರವನ್ನು ಸರಿಯಾಗಿ ನಿರ್ವಹಣೆ ಮಾಡದೇ ಹಳೆಯ ಘಟಕಗಳನ್ನು ಒಂದೊಂದಾಗೇ ಮುಚ್ಚಲು ಮುಂದಾಗಿದೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.

    ಕೆಪಿಸಿಎಲ್ ಖಾಸಗಿ ಸಂಸ್ಥೆ ಕೈಯಲ್ಲಿ ನಿರ್ವಹಣೆ ಜವಾಬ್ದಾರಿ ಕೊಟ್ಟಿದ್ದು ಆರ್‌ಟಿಪಿಎಸ್‌ನಲ್ಲಿ ಅವಘಡಗಳ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ಆಗಸ್ಟ್ ತಿಂಗಳಲ್ಲಿ ಹಾರೋ ಬೂದಿ ಸಾಗಿಸುವ ಬಂಕರ್‌ಗಳು ಕಳಚಿ ಬಿದ್ದಿದ್ದವು. ಘಟನೆಯಿಂದ ಮೂರು ತಿಂಗಳಾದರೂ ಒಂದನೇ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇತ್ತೀಚೆಗೆ ಕಲ್ಲಿದ್ದಲು ಸರಬರಾಜು ಮಾಡುವ ಕನ್ವೇಯರ್ ಬೆಲ್ಟ್‌ಗೆ ಬೆಂಕಿ ಹೊತ್ತಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. 85ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿಯಾಗಿವೆ. ಇಂತಹ ಘಟನೆಗಳು ಮರುಕಳಿಸುತ್ತಲೇ ಒಂದೊಂದೇ ಘಟಕ ವಿದ್ಯುತ್ ಉತ್ಪಾದನೆ ನಿಲ್ಲಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಎಲ್ಲಿ ಆತಂಕಗಳು ಹೆಚ್ಚಾಗುತ್ತೋ ಆಗ ಕ್ಷೇತ್ರ ಪರ್ಯಟನೆ ನಡೆಯುತ್ತೆ: ಸಿದ್ದು ಬಗ್ಗೆ ಬಿ.ವೈ.ರಾಘವೇಂದ್ರ ವ್ಯಂಗ್ಯ

    ಅಗತ್ಯ ಪ್ರಮಾಣದ ಕಲ್ಲಿದ್ದಲು ಕೊರತೆ ಜೊತೆಗೆ ನಿರಂತರ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಆರ್‌ಟಿಪಿಎಸ್‌ ನಿರ್ವಹಣೆ ಕೊರತೆಯನ್ನೂ ಎದುರಿಸುತ್ತಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ವಿದ್ಯುತ್ ಕೇಂದ್ರ ಕತ್ತಲೆಡೆಗೆ ಜಾರುತ್ತಿದೆಯಾ ಅನ್ನೋ ಆತಂಕ ಇಲ್ಲಿನ ನೌಕರರನ್ನು ಕಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • RTPSನಲ್ಲಿ ಅಗ್ನಿ ಅವಘಡ – 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿ

    RTPSನಲ್ಲಿ ಅಗ್ನಿ ಅವಘಡ – 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿ

    ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ (Thermal Power Station) ಆರ್‌ಟಿಪಿಎಸ್ (RTPS) ಮತ್ತೊಮ್ಮೆ ಅವಘಡ ನಡೆದಿದೆ. ಕಲ್ಲಿದ್ದಲು (Coal) ಸರಬರಾಜು ಮಾಡುವ ಕನ್ವೇಯರ್ ಬೆಲ್ಟ್‌ಗೆ ಬೆಂಕಿ ಹೊತ್ತಿ ಲಕ್ಷಾಂತರ ರೂ. ಹಾನಿಯಾಗಿದೆ.

    ಘಟನೆಯಲ್ಲಿ 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿಯಾಗಿವೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಸುಮಾರು 70 ಲಕ್ಷ ರೂ. ಹಾನಿ ಸಂಭವಿಸಿದೆ. 5 ಮತ್ತು 8ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಮಾಡುವ ಬೆಲ್ಟ್ ಬೆಂಕಿಗಾಹುತಿಯಾಗಿದೆ. ಬೆಲ್ಟ್ ಸುಟ್ಟ ಹಿನ್ನೆಲೆ ಕಲ್ಲಿದ್ದಲು ಸರಬರಾಜು ಬಂದ್ ಆಗಿದೆ. ಆಂಧ್ರಪ್ರದೇಶ ಮೂಲದ ಖಾಸಗಿ ಸಂಸ್ಥೆ ನಿರ್ವಹಣೆ ಪಡೆದಿದ್ದು, ನಿರ್ವಹಣೆ ವೈಫಲ್ಯದಿಂದ ಅವಘಡ ನಡೆದಿದೆ. ಇದನ್ನೂ ಓದಿ: ಬಿಜೆಪಿಯವರು ನನ್ನನ್ನು ಕ್ರಿಮಿನಲ್ ಮಾಡಿದ್ದಾರೆ: ಡಿಕೆಶಿ

    ಕೆಪಿಸಿಎಲ್ (KPCL) ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಹಾರೋ ಬೂದಿ ಸಾಗಿಸುವ ಬಂಕರ್‌ಗಳು ಕಳಚಿ ಬಿದ್ದಿದ್ದವು. ಘಟನೆಯಿಂದ ಮೂರು ತಿಂಗಳಾದರೂ ಒಂದನೇ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈಗ ಮತ್ತೊಮ್ಮೆ ಅವಘಡ ನಡೆದಿದ್ದು ವಿದ್ಯುತ್ ಕೇಂದ್ರದಲ್ಲಿನ ನಿರ್ವಹಣೆ ವೈಫಲ್ಯ ಎದ್ದು ಕಾಣುತ್ತಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ

    Live Tv
    [brid partner=56869869 player=32851 video=960834 autoplay=true]

  • RTPSನಲ್ಲಿ ಕಳಚಿಬಿದ್ದ ಬಂಕರ್‌ಗಳು – ವಿದ್ಯುತ್ ಉತ್ಪಾದನೆ ಸ್ಥಗಿತ

    RTPSನಲ್ಲಿ ಕಳಚಿಬಿದ್ದ ಬಂಕರ್‌ಗಳು – ವಿದ್ಯುತ್ ಉತ್ಪಾದನೆ ಸ್ಥಗಿತ

    ರಾಯಚೂರು: ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ RTPSನಲ್ಲಿ ಅವಘಡ ನಡೆದಿದ್ದು, ಕೋಟ್ಯಾಂತರ ರೂಪಾಯಿ ಹಾನಿ ಸಂಭವಿಸಿದೆ.

    ವಿದ್ಯುತ್ ಕೇಂದ್ರದ ಒಂದನೇ ಘಟಕದಲ್ಲಿ ಕಲ್ಲಿದ್ದಲು ಸಂಗ್ರಹಗೊಂಡಿದ್ದ ಮೂರು ಬಂಕರ್‌ಗಳು ಕಳಚಿ ಬಿದ್ದಿವೆ. ಘಟನೆಯಿಂದ ವಿದ್ಯುತ್ ಉತ್ಪಾದನೆ ಅಸಾಧ್ಯವಾಗಿದ್ದು, ಜೊತೆಗೆ ಕೋಟ್ಯಾಂತರ ರೂಪಾಯಿ ಹಾನಿ ಸಂಭವಿಸಿದೆ. ಸುಮಾರು ದಿನಗಳಿಂದ ಕಲ್ಲಿದ್ದಲು ಸಾಗಿಸದೆ ಸಂಗ್ರಹಿಸಿಟ್ಟ ಪರಿಣಾಮ ಘಟನೆ ನಡೆದಿದೆ. ಕಲ್ಲಿದ್ದಲು ಭಾರ ಹೆಚ್ಚಾಗಿದ್ದರಿಂದ ಬಂಕರ್‌ಗಳು ಕಳಚಿ ಬಿದ್ದಿವೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು: ಅಶ್ವಥ್ ನಾರಾಯಣ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

    ಬಾಯ್ಲರ್ ಬಳಿ ಘಟನೆ ನಡೆದಿದ್ದು, ನೀರಿನ ಮಾರ್ಗ ಹಾಳಾಗಿ ನೀರು ಪೋಲಾಗಿದೆ. ಬಂಕರ್‌ಗಳಿಂದ ಮಿಲ್ ಮೂಲಕ ರವಾನಿಸಬೇಕಿದ್ದ ಕಲ್ಲಿದ್ದಲು ಲೋಡ್ ಹೆಚ್ಚಾಗಿ ಕುಸಿತವಾಗಿದೆ. ಕಳಚಿ ಬಿದ್ದ ಬಂಕರ್‌ಗಳ ಪುನರ್ ಜೋಡಣೆಗೆ ತಿಂಗಳುಗಟ್ಟಲೆ ಸಮಯ ಬೇಕಿದೆ.

    ವ್ಯವಸ್ಥೆ ಸರಿಪಡಿಸುವವರೆಗೂ ಒಂದನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. RTPS ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಅವಘಡ ನಡೆದಿದೆ. ಇದನ್ನೂ ಓದಿ:  ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿದೆ, ನಿತೀಶ್‍ರದ್ದು ಒಳ್ಳೆಯ ನಿರ್ಧಾರ: ಶರದ್ ಪವಾರ್

    Live Tv
    [brid partner=56869869 player=32851 video=960834 autoplay=true]