Tag: RTPCR

  • ಕೊರೊನಾ ರೀ ಎಂಟ್ರಿ – ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್

    ಕೊರೊನಾ ರೀ ಎಂಟ್ರಿ – ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್

    – ಸಾರಿ ಕೇಸ್‌ಗಳ ಕಡ್ಡಾಯ ಟೆಸ್ಟಿಂಗ್‌ಗೆ ಸೂಚನೆ

    ಬೆಂಗಳೂರು: ಮಹಾಮಾರಿ ಕೊರೊನಾ (Corona) ಮತ್ತೆ ಎಂಟ್ರಿ ಕೊಟ್ಟ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ (Health Department) ಟೆಸ್ಟಿಂಗ್ ಟಾರ್ಗೆಟ್ ನೀಡಿದೆ. ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್ ನೀಡಲಾಗಿದೆ.

    ಸಾರಿ (SARI) ಕೇಸ್‌ಗಳ ಕಡ್ಡಾಯ ಟೆಸ್ಟಿಂಗ್‌ಗೆ ಸೂಚನೆ ನೀಡಿದ್ದು, ಸರ್ಕಾರಿ ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನಿಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಕೋವಿಡ್-19 ಟೆಸ್ಟಿಂಗ್‌ಗೆ ಅಗತ್ಯ ಟೆಸ್ಟಿಂಗ್ ಕಿಟ್‌ಗಳು ಲಭ್ಯವಿದ್ದು, ಸಾರಿ ಪ್ರಕರಣ ಇಂದಿನಿಂದ ಟೆಸ್ಟಿಂಗ್ ನಡೆಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮಳೆ-ಗಾಳಿಗೆ ನೆಲಕ್ಕೆ ಉದುರಿದ ದಾಳಿಂಬೆ ಹೂಗಳು – ಸಾಲ ಸೋಲ ಮಾಡಿ ಬಂಡವಾಳ ಹೂಡಿದ್ದ ರೈತ ಕಂಗಾಲು

    ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ?
    – ಎಲ್ಲಾ ಸಾರಿ (ಉಸಿರಾಟದ ತೊಂದರೆ) ಪ್ರಕರಣಗಳಿಗೆ ಕಡ್ಡಾಯ.
    – ವಯೋವೃದ್ಧರಲ್ಲಿ ಕೊರೊನಾ ಗುಣಲಕ್ಷಣಗಳು ಇದ್ರೆ ಟೆಸ್ಟಿಂಗ್ ಕಡ್ಡಾಯ.
    – ಗರ್ಭಿಣಿ ಸ್ತ್ರೀಯರಲ್ಲಿ ಗುಣಲಕ್ಷಣಗಳು ಕಂಡು ಬಂದರೆ ಟೆಸ್ಟಿಂಗ್ ಕಡ್ಡಾಯ.

    ಸದ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದ ವಿಆರ್‌ಡಿಎಲ್ ಟೆಸ್ಟಿಂಗ್ ಸೌಲಭ್ಯ ಇರುವ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ಎನ್‌ಐವಿ ಕೇಂದ್ರ ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಟೆಸ್ಟಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಒಂದು ತಿಂಗಳಿಗಾಗುವಷ್ಟು 5,000 ಆರ್‌ಟಿಪಿಸಿಆರ್ ಟೆಸ್ಟಿಂಗ್ ಕಿಟ್‌ಗಳನ್ನ ತೆಗೆದುಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ನೀನೇ ಬೇಕೆಂದು ಪ್ರೀತಿಸಿ ಮದುವೆ – 3 ತಿಂಗಳ ಗರ್ಭಿಣಿ ಮಾಡಿ ಪತಿ ಎಸ್ಕೇಪ್

  • ಮಂಕಿಪಾಕ್ಸ್ ಪತ್ತೆಗೆ RTPCR ಕಿಟ್ ಬಿಡುಗಡೆಗೊಳಿಸಿದ ಅಶ್ವಥ್‍ನಾರಾಯಣ

    ಮಂಕಿಪಾಕ್ಸ್ ಪತ್ತೆಗೆ RTPCR ಕಿಟ್ ಬಿಡುಗಡೆಗೊಳಿಸಿದ ಅಶ್ವಥ್‍ನಾರಾಯಣ

    ಬೆಂಗಳೂರು: ಮಂಕಿಪಾಕ್ಸ್ ಪತ್ತೆಹಚ್ಚಲು ಅಭಿವೃದ್ಧಿಪಡಿಸಿರುವ ಆರ್‌ಟಿಪಿಸಿಆರ್ ಕಿಟ್ ಸೇರಿದಂತೆ ಒಂಬತ್ತು ಉತ್ಪನ್ನಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್‍ನಾರಾಯಣ ಬಿಡುಗಡೆ ಮಾಡಿದರು.

    ನಿಯೋಡೆಎಕ್ಸ್ ಬಯೋಟೆಕ್ ಲ್ಯಾಬ್ಸ್‌ನ ಡಾ.ಪ್ರಭಾಕರ ಕುಲಕರ್ಣಿ ಅಭಿವೃದ್ಧಿಪಡಿಸಿರುವ ಈ ಕಿಟ್‍ನಿಂದ ಸುಲಭವಾಗಿ ಮಂಕಿಪಾಕ್ಸ್ ವೈರಸ್ ಅನ್ನು ಪತ್ತೆಹಚ್ಚಬಹುದಾಗಿದೆ. ಇದೇ ರೀತಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಲು ನೆರವಾಗುವ ಅನ್ಕೊ ಡಿಎಕ್ಸ್, ನ್ಯೂ ಹಾರ್ಟ್ ಮತ್ತು ಪ್ಯೂರ್ ವಾಟರ್ ಹೀಗೆ ಒಂಬತ್ತು ಉತ್ಪನ್ನಗಳನ್ನು ಸಚಿವರು ಬಿಡುಗಡೆ ಮಾಡಿದರು. ಇದನ್ನೂ ಓದಿ: ಸ್ವಾತಂತ್ರ‍್ಯ ಹೋರಾಟಗಾರರ ಮನೆಗಳಿಗೇ ತೆರಳಿ ಸನ್ಮಾನಿಸಲಿದ್ದಾರೆ ರಾಜ್ಯಪಾಲರು

    ಎಲೆಕ್ಟ್ರಾನಿಕ್ಸ್ ಸಿಟಿಯ ಹೆಲಿಕ್ಸ್ ಪಾರ್ಕ್‍ನಲ್ಲಿ ಇರುವ ಮಾನವ ತಳಿಶಾಸ್ತ್ರ ಕೇಂದ್ರವು (ಸಿಎಚ್‍ಜಿ) ಅಪರೂಪದ ರೋಗಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದು, ಅದರ ನೂತನ ಕಟ್ಟಡ ನಿರ್ಮಾಣಕ್ಕೆ ಅಶ್ವಥ್‍ನಾರಾಯಣ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

    ಸುಮಾರು ನಲವತ್ತು ಸಾವಿರ ಚದರ ಅಡಿ ವಿಸ್ತರಣೆಯ ಮೂರು ಮಹಡಿಯ ಕಟ್ಟಡ ನಿರ್ಮಿಸುತ್ತಿದ್ದು, ಇಲ್ಲಿ ಅಪರೂಪದ ಕಾಯಿಲೆ ಹೊಂದಿರುವ ವರ್ಷಕ್ಕೆ ಸುಮಾರು ಎರಡೂವರೆ ಸಾವಿರ ಕುಟುಂಬಗಳಿಗೆ ಸಮಗ್ರ ಅನುವಂಶಿಕ ಸಮಾಲೋಚನೆ ಸೌಲಭ್ಯ, ಎಕ್ಸೋಮ್ ಸೀಕ್ವೆನ್ಸಿಂಗ್ ಸೇರಿದಂತೆ ರೋಗನಿರ್ಣಯದ ಪರೀಕ್ಷಾ ಸೌಲಭ್ಯದ ಸಾಮರ್ಥ್ಯ ಹೆಚ್ಚಿಸಲು ಬಳಸಲಾಗುವುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ತ್ಯಾಗ, ಬಲಿದಾನಗಳ ಸ್ಮರಣೆಯೇ ಅಮೃತ ಮಹೋತ್ಸವ: ಅಶ್ವಥ್‍ನಾರಾಯಣ

    ಪ್ರಸವಪೂರ್ವ ರೋಗನಿರ್ಣಯಕ್ಕಾಗಿ ತರಬೇತಿ ಮತ್ತು ಸೇವಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಗರ್ಭಾವಸ್ಥೆಯಲ್ಲಿನ ಅನುವಂಶಿಕ ರೋಗಗಳನ್ನು ಆರಂಭದಲ್ಲೇ ಗುರುತಿಸುವಿಕೆಗೆ ಸಹಾಯ ಮಾಡುವುದು ಕೂಡ ಇದರ ಮುಖ್ಯ ಉದ್ದೇಶ. ಪ್ರಯೋಗಾಲಯದ ತಳಿಶಾಸ್ತ್ರದಲ್ಲಿ ತರಬೇತಿ ನೀಡುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು. ಒಟ್ಟಿನಲ್ಲಿ ಅಪರೂಪದ ರೋಗಗಳಿಗೆ ಕಡಿಮೆ ವೆಚ್ಚದ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧನೆ ಮತ್ತು ಹೊಸ ಔಷಧಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

    ಮಾನವನ ಆರೋಗ್ಯ ಮತ್ತು ಕಾಯಿಲೆಗೆ ಸಂಬಂಧಿಸಿದಂತೆ ತಳಿಶಾಸ್ತ್ರದಲ್ಲಿ ಶಿಕ್ಷಣ, ಅನುವಂಶಿಕ ಕಾಯಿಲೆಗಳ ತರಬೇತಿ ಮತ್ತು ಸಂಶೋಧನೆಗಾಗಿ ರಾಷ್ಟ್ರಮಟ್ಟದಲ್ಲಿ ಶೇಷ್ಟತೆಯ ಕೇಂದ್ರವೆಂದು ಇದನ್ನು ಗುರುತಿಸಿದ್ದು, ಇಪ್ಪತ್ತು ವರ್ಷಗಳಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಅಪರೂಪದ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಇದಕ್ಕೊಂದು ಕಟ್ಟಡದ ಅಗತ್ಯವನ್ನು ಮನಗಂಡು ನಿರ್ಮಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

    ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು ಮೂವತ್ತೈದು ಸಾವಿರ ಕುಟುಂಬಗಳಿಗೆ ಅನುವಂಶಿಕ ರೋಗಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಸಲಹೆ ನೀಡುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಸಚಿವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ : ಅಮಿತ್ ಶಾ ವಿರುದ್ಧ ಸಿದ್ದು ಕಿಡಿ

    ಕರ್ನಾಟಕ ನಾವಿನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್)ಯಡಿಯ ಬೆಂಗಳೂರು ಜೈವಿಕ ನಾವಿನ್ಯತಾ ಸಂಸ್ಥೆಯಲ್ಲಿ (ಬಿಬಿಸಿ) ಕಾರ್ಯನಿರ್ವಹಿಸುತ್ತಿರುವ ನಮೋದ್ಯಮಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ 500, ಗುಣಮುಖರು 600

    ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ 500, ಗುಣಮುಖರು 600

    ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 530 ಪಾಸಿಟಿವ್ ಕೇಸ್ ವರದಿಯಾಗಿದೆ. ಇಂದು ಹೊಸ ಪ್ರಕರಣಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಣಮುಖರಾಗಿರುವುದರಿಂದ ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 4,928ಕ್ಕೆ (ನಿನ್ನೆ 5,035) ಇಳಿದಿದೆ.

    ಬೆಂಗಳೂರು ನಗರದಲ್ಲೇ 494 ಕೇಸ್ ಪತ್ತೆಯಾಗುವುದರೊಂದಿಗೆ ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 4,723ಕ್ಕೆ ಏರಿಕೆ ಕಂಡಿದೆ. ಆದರೆ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ ಈವರೆಗೆ ಒಟ್ಟು 40,071 ಮರಣ ಪ್ರಕರಣ ಪತ್ತೆಯಾಗಿದೆ. ಇಂದು 637 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಪಾಸಿಟಿವಿಟಿ ದರ ಶೇ.3.59 ಆಗಿದೆ.

    ಈವರೆಗೆ ರಾಜ್ಯದಲ್ಲಿ ಒಟ್ಟು 39,61,361 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,16,320 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 51,925 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

    ಒಟ್ಟು 14,753 ಸ್ಯಾಂಪಲ್ (ಆರ್‌ಟಿಪಿಸಿಆರ್ 11,759 + 2,994 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬೆಂಗಳೂರು ನಗರ ಒಂದರಲ್ಲೇ 494 ಪ್ರಕರಣಗಳು ಪತ್ತೆಯಾಗಿದ್ದು, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ರಾಮನಗರ ಜಿಲ್ಲೆಗಳಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ, ಕಲಬುರಗಿ ಜಿಲ್ಲೆಗಳಲ್ಲಿ ತಲಾ 5 ಪ್ರಕರಣಗಳು, ಮೈಸೂರಿನಲ್ಲಿ 6, ಉಡುಪಿಯಲ್ಲಿ 2 ಹಾಗೂ ವಿಜಯಪುರ, ತುಮಕೂರು, ಶಿವಮೊಗ್ಗ, ಗದಗ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv

  • ಲಸಿಕೆ ಹಾಕಿಸಿಕೊಳ್ಳದ ರೋಗಿಗಳಿಗೆ ಸಿಗಲ್ಲ ಉಚಿತ ಕೋವಿಡ್‌ ಚಿಕಿತ್ಸೆ : ಕೇರಳ ಸರ್ಕಾರ

    ಲಸಿಕೆ ಹಾಕಿಸಿಕೊಳ್ಳದ ರೋಗಿಗಳಿಗೆ ಸಿಗಲ್ಲ ಉಚಿತ ಕೋವಿಡ್‌ ಚಿಕಿತ್ಸೆ : ಕೇರಳ ಸರ್ಕಾರ

    ತಿರುವನಂತಪುರಂ: ಓಮಿಕ್ರಾನ್ ವೈರಸ್‍ ಭೀತಿ ಹೆಚ್ಚಾಗುತ್ತಿದೆ. ಕೊರೊನಾ ಲಸಿಕೆ ಪಡೆಯುವಂತೆ ಉತ್ತೇಜಿಸಲು ಲಸಿಕೆ ಹಾಕದ ಕೋವಿಡ್ -19 ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಕೋವಿಡ್ ತಡೆಗಟ್ಟುವ ಕ್ರಮಗಳೊಂದಿಗೆ ಸಹಕರಿಸದವರಿಗೆ ಉಚಿತ ಚಿಕಿತ್ಸೆ ಇಲ್ಲ. ಲಸಿಕೆ ಪಡೆಯದ ಶಿಕ್ಷಕರು ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಅಥವಾ ಸಾರ್ವಜನಿಕರೊಂದಿಗೆ ಸಂವಹನ ನಡೆಸುವ ಉದ್ಯೋಗಿಗಳು, ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು RTPCR ಪರೀಕ್ಷೆಗಳಿಗೆ ತಾವೇ ಹಣ ಪಾವತಿಸಬೇಕಾಗುತ್ತದೆ ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡುವ ಮೂಲಕವಾಗಿ ಜನರಿಗೆ ಜಾಗೃತಿಯ ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ನಿನ್ನೆ ನಡೆದ ಕೋವಿಡ್-19 ಪರಿಶೀಲನಾ ಸಭೆಯ ಬಳಿಕ ಸಿಎಂ ಪಿಣರಾಯಿ ವಿಜಯನ್ ಇಂತಹುದೊಂದು ನಿರ್ಧಾರಕ್ಕೆ ಬಂದಿದ್ದು, ಕೊರೊನಾ ನಿಯಂತ್ರಣ ಕ್ರಮಗಳೊಂದಿಗೆ ಸಹಕರಿಸದ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ. ಲಸಿಕೆಯನ್ನು ತೆಗೆದುಕೊಳ್ಳದವರಿಗೆ ಚಿಕಿತ್ಸಾ ವೆಚ್ಚವನ್ನೂ ಸರ್ಕಾರ ಭರಿಸುವುದಿಲ್ಲ. ಅಲರ್ಜಿ ಅಥವಾ ಯಾವುದೇ ಕಾಯಿಲೆಯ ಹಿನ್ನೆಲೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವವರು ಸರ್ಕಾರಿ ಸೇವೆಯಲ್ಲಿರುವ ವೈದ್ಯರು ನೀಡಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಇದು ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೂ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್‌

    ಲಸಿಕೆ ಹಾಕಿಸಿಕೊಳ್ಳದಿದ್ದರೆ ಪ್ರತಿ ವಾರ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ, ಅದಕ್ಕಾಗಿ ಅವರೇ ವೆಚ್ಚವನ್ನು ಭರಿಸಬೇಕಾಗುತ್ತದೆ. ಪರೀಕ್ಷಾ ವರದಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಕಚೇರಿಗೆ ತೆರಳುವವರಿಗೂ ಇದು ಕಡ್ಡಾಯವಾಗಿದೆ. ಹೀಗೆ ತೆಗೆದುಕೊಂಡ ಕ್ರಮಗಳು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ವಿಜಯನ್ ಜನರಲ್ಲಿ ಕೊರೊನಾ ಜಾಗೃತಿಯ ಕುರಿತಾಗಿ ತಿಳಿಸಿದ್ದಾರೆ.

  • ಕಾನೂನು ತಂದು, ದಂಡ ಹಾಕಿ ಜನರಿಗೆ ಲಸಿಕೆ ಕೊಡುವ ಚಿಂತನೆ ಸರ್ಕಾರಕ್ಕಿಲ್ಲ: ಸುಧಾಕರ್

    ಕಾನೂನು ತಂದು, ದಂಡ ಹಾಕಿ ಜನರಿಗೆ ಲಸಿಕೆ ಕೊಡುವ ಚಿಂತನೆ ಸರ್ಕಾರಕ್ಕಿಲ್ಲ: ಸುಧಾಕರ್

    ಬೆಂಗಳೂರು: ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ತೀವ್ರತೆಯ ಕುರಿತಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಇಲಾಖೆ ಸಮಿತಿ ಸಭೆ ಮಾಡಲಾಗಿದೆ. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡ್ಡಾಯವಲ್ಲ ಎಂದು ಚರ್ಚಿಸಲಾಗಿದೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಭೆಗೆ ಪೂರಕವಾಗಿ ಸಭೆ ಆಗಿದೆ. ಓಮಿಕ್ರಾನ್ ಹೊಸ ತಳಿ ನಿಯಂತ್ರಣದ ಬಗ್ಗೆ ಚರ್ಚೆ ಆಗಿದ್ದು, ಒಂದು ವೇಳೆ ವೈರಸ್ ಬಂದರೆ ಅದಕ್ಕೆ ಸಿದ್ಧತೆ ಹೇಗೆ ಇರಬೇಕು ಅಂತ ಚರ್ಚೆ ಮಾಡಿದ್ದೇವೆ. ವೈದ್ಯರು, ಆಸ್ಪತ್ರೆಗಳ ಸಿದ್ಧತೆ, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸಿದ್ಧತೆ ಬಗ್ಗೆ ಚರ್ಚೆ ಆಗಿದೆ. ಮೊದಲು ಕ್ವಾರಂಟೈನ್ ಇತ್ತು, ಈಗ ಅದನ್ನ ಮತ್ತೆ ಜಾರಿ ಮಾಡುತ್ತೇವೆ. ವಿದೇಶದಿಂದ ಬರೋ ಎಲ್ಲರಿಗೂ RTPCR ಟೆಸ್ಟ್ ಮಾಡುತ್ತೇವೆ. ನೆಗೆಟಿವ್ ಬಂದರೆ ಮನೆಯಲ್ಲಿ ಒಂದು ವಾರ ಕ್ವಾರಂಟೈನ್ ಇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬನ್ನಿ ದೇವೇಗೌಡ್ರೇ… ಇಲ್ಲಿ ಕುಳಿತುಕೊಳ್ಳಿ: ಪ್ರಧಾನಿ ಮೋದಿ

    ರೋಗದ ಲಕ್ಷಣ ಇದ್ದರೆ 5ನೇ ದಿನ ಟೆಸ್ಟ್ ಮಾಡುತ್ತೇವೆ. ರೋಗದ ಲಕ್ಷಣ ಇಲ್ಲದೆ ಹೋದರೆ 7 ನೇ ದಿನ ಟೆಸ್ಟ್ ಮಾಡಿ ಹೊರಗೆ ಓಡಾಟ ಮಾಡಲು ಅವಕಾಶ ಕೊಡುತ್ತೇವೆ. ಟೆಲಿ ಮೆಡಿಸಿನ್, ಟೆಲಿ ಕೌನ್ಸಿಲಿಂಗ್ ಸಿದ್ಧತೆ ಮಾಡಿಕೊಳ್ಳುತ್ತೇವೆ. ಚಿಕಿತ್ಸೆಗೆ ಯುನಿಫಾರ್ಮ್ ವ್ಯವಸ್ಥೆ ಮಾಡಲು ತಂಡ ರಚನೆ ಮಾಡಲಾಗುತ್ತದೆ. ಚಿಕಿತ್ಸೆ ಪ್ರೋಟೋ ಕಾಲ್‍ಗೆ ತಂಡ ರಚನೆಯಾಗಿದ್ದು, ಡಾ. ರವಿ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯಲ್ಲಿ 10 ಜನ ಇರುತ್ತಾರೆ. ಅಗತ್ಯ ಔಷಧಿ ದಾಸ್ತಾನು ಬಗ್ಗೆ ಸಭೆ ಆಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ, ಜಿಟಿಡಿ ನಡುವಿನ ಹೊಸ ಲವ್ ಸಕ್ಸಸ್ ಆಗಲ್ಲ: ಎಸ್.ಟಿ. ಸೋಮಶೇಖರ್

    ಲಸಿಕೆ ಕಡ್ಡಾಯವಾಗಿ 41 ಲಕ್ಷ ಜನ ಎರಡನೇ ಡೋಸ್ ಪಡೆಯಬೇಕು. ಇವರಿಗೂ ಪ್ರತಿ ಜಿಲ್ಲೆಯಲ್ಲಿ ಲಸಿಕೆ ಆದ್ಯತೆ ಮೇಲೆ ಕೊಡುತ್ತೇವೆ. ಇವರಿಗೆ ಲಸಿಕೆ ಕೊಟ್ರೆ 70% ಲಸಿಕೆ ಆಗುತ್ತೆ. ಹೀಗಾಗಿ ಲಸಿಕೆ ನೀಡಲು ಕ್ರಮ ತಗೋತೀವಿ. ಓಮಿಕ್ರಾನ್ ಹರಡುವಿಕೆ ಪ್ರಮಾಣ ಹೆಚ್ಚಿದೆ. ಅದರ ತೀವ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜನರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ. ಲಸಿಕೆ ಜನರು ಬಂದು ಪಡೆಯಬೇಕು. ಲಸಿಕೆ ರೋಗ ನಿರೋಧಕ ಸೃಷ್ಟಿ ಮಾಡುತ್ತೆ. ಜನ ಲಸಿಕೆ ಪಡೆಯಬೇಕು. ಹೈರಿಸ್ಕ್ ದೇಶದಿಂದ ಬರೋ ಪ್ರಯಾಣಿಕರಿಗೆ ಕೆಲ ನಿರ್ಬಂಧ ಹಾಕೋ ಬಗ್ಗೆ ಸಿಎಂ ಚಿಂತನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಸಿಎಂ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ. ಪ್ರಾರಂಭಿಕ ಹಂತದಲ್ಲಿ ನಿಯಂತ್ರಣ ಮಾಡಲು ಸಿಎಂ ಈ ನಿರ್ಧಾರ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಕುರಿತು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಿತ್ಯ ವಿದೇಶದಿಂದ 2.5 ಸಾವಿರ ಜನ ಬೆಂಗಳೂರಿಗೆ ಬರ್ತಾರೆ. ಎಲ್ಲರಿಗೂ RTPCR ಟೆಸ್ಟ್ ಕಡ್ಡಾಯ ಮಾಡಲಾಗುತ್ತೆ ಎಂದರು.

     ಲಸಿಕೆ ಪಡೆಯದೇ ಹೋದರೆ ಸರ್ಕಾರಿ ಸೌಲಭ್ಯ ನೀಡಬಾರದು ಅನ್ನೋ ಶಿಫಾರಸು ವಿಚಾರವಾಗಿ ಮಾತನಾಡಿದ ಅವರು, ಜನರಿಗೆ ಕಾನೂನು ತಂದು, ದಂಡ ಹಾಕಿ ಲಸಿಕೆ ಕೊಡೊ ಚಿಂತನೆ ಸರ್ಕಾರಕ್ಕೆ ಇಲ್ಲ. ಆದರೆ ಎರಡನೇ ಡೋಸ್ ಲಸಿಕೆ ಪಡೆಯದೇ ಇರೋರಿಗೆ ಆಸ್ಪತ್ರೆ ವೆಚ್ಚ ಭರಿಸಬಾರದು ಅಂತ ಸಮಿತಿ ಶಿಫಾರಸ್ಸು ಮಾಡಿದೆ. ಇದರ ಜೊತೆ ಅನೇಕ ಶಿಫಾರಸು ತಜ್ಞರ ತಂಡ ಮಾಡಿದೆ. ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡೋ ಬಗ್ಗೆ ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

    ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

    ನವದೆಹಲಿ: ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ ಆದೇಶದ ವಿರುದ್ಧ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

    ಕೇರಳ ಮೂಲದ ವಕೀಲ ಆರ್ ಎಸ್ ಜೆನಾ ರಿಂದ ಅರ್ಜಿ ಸಲ್ಲಿಸಿದ್ದು ಆದೇಶ ವಾಪಸ್ ಪಡೆಯಲು ಸೂಚಿಸುವಂತೆ ಅರ್ಜಿಯಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಪ್ರವೇಶಕ್ಕೆ 72 ಗಂಟೆಗಳ ಒಳಗಿನ RTPCR ವರದಿ ಕಡ್ಡಾಯ ಮಾಡಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

    ಆರ್‍ಟಿಪಿಸಿಆರ್ ವರದಿ ಕಡ್ಡಾಯದಿಂದ ಗಡಿಯಲ್ಲಿ ಶಿಕ್ಷಣ, ವ್ಯಾಪಾರ, ಉದ್ಯೋಗಗಳು, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಕಾರಣಗಳಿಗಾಗಿ ಪ್ರತಿದಿನ ಕರ್ನಾಟಕಕ್ಕೆ ಭೇಟಿ ನೀಡುವ ಜನರಿಗೆ ತೊಂದರೆಯಾಗಲಿದೆ. ಮತ್ತು ಗಡಿಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್

    ಮಂಜೇಶ್ವರಂ ಕ್ಷೇತ್ರದ ಜನರು ಮಂಗಳೂರಿನ ಮೇಲೆ ಅವಲಂಬಿಸಿರುವ ಬಗ್ಗೆಯೂ ಮಾಹಿತಿ ನೀಡಿರುವ ವಕೀಲರು, ಮಂಗಳೂರಿನ ಮೇಲೆ ಮಂಜೇಶ್ವರದ ಜನರು ಸಂಪೂರ್ಣ ಅವಲಂಬಿಸಿದ್ದು ನಿತ್ಯ ಸಾವಿರಾರು ಜನರು ಸಂಚಾರ ಮಾಡ್ತಾರೆ. ಅವರೆಲ್ಲರೂ ಪ್ರತಿದಿನ ವರದಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಜುಲೈ 31 ರಂದು ಮಂಗಳೂರು ಡಿಸಿ ಹೊರಡಿಸಿರುವ ಆದೇಶ ವಾಪಸ್ ಪಡೆಯುವಂತೆ ಸೂಚಿಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಸೋಂಕು ಹೆಚ್ಚಾಗುವ ಭೀತಿಯಿಂದ ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಜನರು ಆರ್‍ಟಿಪಿಸಿಆರ್ ವರದಿ ಕಡ್ಡಾಯವಾಗಿ ತರುವಂತೆ ಸೂಚಿಸಿ ಜುಲೈ 31 ರಂದು ಆದೇಶ ಮಾಡಲಾಗಿತ್ತು. ಈ ಆದೇಶ ಪ್ರಶ್ನಿಸಿ ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ವಿಚಾರಣೆ ನಡೆಸಿದ ಹೈಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ಸುತ್ತೊಲೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಅದು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿ ಅರ್ಜಿ ವಜಾ ಮಾಡಿತ್ತು. ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಈಗ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.

  • ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

    ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

    ಶಿವಮೊಗ್ಗ: ಕೊರೊನಾ ಮೂರನೇ ಅಲೆ ಭೀತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರಬೇಕಾದರೆ ಎರಡು ದಿನ ಮುಂಚಿತವಾಗಿ ಪಡೆದಿರುವ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.

    ಜಿಲ್ಲೆಯ ಪ್ರವಾಸಿ ತಾಣಗಳಾದ ಜೋಗ ಜಲಪಾತ, ಸಕ್ಕರೆ ಬೈಲು, ಹುಲಿ ಮತ್ತು ಸಿಂಹಧಾಮ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ವಾರಾಂತ್ಯದ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಜ್ಯದಲ್ಲಿ ಮೂರನೇ ಅಲೆ ಭೀತಿ ಈಗಾಗಲೇ ಆರಂಭವಾಗಿದ್ದು, ಪ್ರವಾಸಿಗರು ಇದು ಯಾವುದನ್ನು ಲೆಕ್ಕಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,785 ಕೊರೊನಾ ಕೇಸ್, 25 ಸಾವು

    ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಲುವು ಕೈಗೊಂಡಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲದಿದ್ದರೆ ಮುಲಾಜಿಲ್ಲದೇ ವಾಪಸ್ ಕಳುಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಕೊನೆಗೂ ಎಚ್ಚೆತ್ತ ದ.ಕ ಜಿಲ್ಲಾಡಳಿತ- ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

    ಕೊನೆಗೂ ಎಚ್ಚೆತ್ತ ದ.ಕ ಜಿಲ್ಲಾಡಳಿತ- ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

    ಮಂಗಳೂರು: ಕೇರಳ ಗಡಿಭಾಗದಲ್ಲಿ ಡೆಲ್ಟಾ ಹಾಗೂ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿಗೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಭೇಟಿ ನೀಡಿ ಗಡಿ ತಪಾಸಣೆ ತೀವ್ರಗೊಳಿಸಲು ಸೂಚನೆ ನೀಡಿದ್ದಾರೆ.

    ಗಡಿಯಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಸೇರಿ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದ್ದು, ಕೇರಳ-ಕರ್ನಾಟಕ ನಡುವಿನ ನಾಲ್ಕು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಮಂಗಳೂರಿನ ತಲಪಾಡಿ ಸೇರಿದಂತೆ ಸಾರಡ್ಕ, ನೆಟ್ಟಣಿಗೆ ಮುಡ್ನೂರು, ಜಾಲ್ಸೂರು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಯು.ಟಿ.ಖಾದರ್

    ಗಡಿ ದಾಟಿ ಬರುವ ಕೇರಳದವರು ಆರ್ ಟಿಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮಂಗಳೂರು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ನೆಗೆಟಿವ್ ರಿಪೋರ್ಟ್ ತರದವರಿಗೆ ಗಡಿಯಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಮೆಡಿಕಲ್ ಅಗತ್ಯಕ್ಕೆ ಮಂಗಳೂರಿಗೆ ಬರೋರು ಆಸ್ಪತ್ರೆಗಳಲ್ಲಿ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.