Tag: RTO Officers

  • ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

    ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

    ಬೆಂಗಳೂರು/ನೆಲಮಂಗಲ: ವ್ಯಕ್ತಿಯೊಬ್ಬರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ಐಷಾರಾಮಿ ಕಾರನ್ನು ವಶಪಡಿಸಿಕೊಂಡಿದ್ದ ಆರ್‌ಟಿಓ ಅಧಿಕಾರಿಗಳು ಇದೀಗ ರಿಲೀಸ್ ಮಾಡಿದ್ದಾರೆ.

    ಬೇರೆ ರಾಜ್ಯದ ಕಾರುಗಳು ತೆರಿಗೆ ವಂಚಿಸಿ ಕರ್ನಾಟಕ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನ ಸ್ಪೆಷಲ್ ತಂಡದ ಆರ್‌ಟಿಓ ಅಧಿಕಾರಿಗಳು ನಗರದ ಯುಬಿ ಸಿಟಿ ಹಾಗೂ ಇನ್ನಿತರ ಕಡೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಬು ಎಂಬವರು ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಸದ್ಯ ಆರ್‌ಟಿಓ ಅಧಿಕಾರಿಳಿಗೆ ಈ ಕಾರಿನ ದಾಖಲೆಗಳನ್ನು ನೀಡಿ ತೆರಿಗೆ ಕಟ್ಟಿ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ: ಅಮಿತಾಭ್ ಬಚ್ಚನ್

    ಅಮಿತಾಭ್ ಬಚ್ಚನ್ ಅವರಿಗೆ 1.5 ಕೋಟಿ ರೂಪಾಯಿಯನ್ನು ಆರ್‌ಟಿಜಿಎಸ್‌ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ಟ್ಯಾಕ್ಸ್ ಕಟ್ಟಲಾಗಿದೆ. ಬಚ್ಚನ್‍ರಿಂದ ಕಾರು ಖರೀದಿ ಮಾಡಿದ ನಂತರವೂ ದಾಖಲೆಗಳನ್ನು ಬದಲಾಯಿಸದೇ ಕಾರಿನ ಇನ್ಶೂರೆನ್ಸ್ ನನ್ನು ಅಮಿತಾಭ್ ಹೆಸರಲ್ಲಿ ಈಗ ಕಟ್ಟಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಕಾರು ಯಾವಾಗ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿದೆ ಎನ್ನುವುದರ ಬಗ್ಗೆ ಆರ್‌ಟಿಓ ಅಧಿಕಾರಿಗಳ ಬಳಿ ದಾಖಲೆ ಇಲ್ಲ. ಮೊನ್ನೆ ವಶಪಡಿಸಿಕೊಂಡ ಪಾಂಡಿಚೇರಿ ರಿಜಿಸ್ಟ್ರೇಷನ್‍ನ ಕಾರಿಗೆ 35 ಲಕ್ಷ ತೆರಿಗೆ ಕಟ್ಟಿಸಲಾಗಿದೆ. ಇದನ್ನೂ ಓದಿ:ನಟ ಅಮಿತಾಭ್ ಬಚ್ಚನ್ ಕಾರು ವಶಕ್ಕೆ

    ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಬಾಬು, ನನ್ನದು ಮುಂಬೈನಲ್ಲಿ ಬ್ಯುಸಿನೆಸ್ ಇದೆ ಹಾಗಾಗಿ ಅಲ್ಲೇ ಈ ಕಾರು ಓಡಿಸುತ್ತಿದ್ದೆ. ಈಗ ಬೆಂಗಳೂರಿಗೆ ಬಂದಿದ್ದೇನೆ, ಕೆಲ ದಾಖಲೆಗಳು ನೋಡಿಕೊಂಡಿಲ್ಲ. ಹಾಗಾಗಿ ಈ ರೀತಿಯ ಯಡವಟ್ಟು ಆಗಿದೆ. ಆದಷ್ಟು ಬೇಗ ನಿಯಮದಂತೆ ದಂಡ ಕಟ್ಟಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಆರ್ ಟಿಓ ಅಧಿಕಾರಿಗಳ ಪ್ರಕಾರ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಸಾಕಷ್ಟು ಜನ ರಾಜಕೀಯ ಮುಖಂಡರು, ಉದ್ಯಮಿಗಳು ಇದೇ ರೀತಿ ಟ್ಯಾಕ್ಸ್ ಕಟ್ಟದೇ, ಇನ್ಷುರೆನ್ಸ್ ಕಟ್ಟದೇ, ಒಂದೇ ಕಾರಿನ ನಂಬರ್‌ನಲ್ಲಿ ಬೇರೆ ಬೇರೆ ಕಾರುಗಳನ್ನು ಓಡಿಸುತ್ತಿರುವುದು ಗೊತ್ತಾಗಿದೆ. ಆದಷ್ಟು ಬೇಗ ಅಂಥವರ ಪಟ್ಟಿ ಮಾಡಿ ಎಲ್ಲರಿಗೂ ದಂಡ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

  • ವಾಹನಗಳಿಗೆ ಸ್ಟೈಲಿಶ್ ಆಗಿ ನಂಬರ್, ಹೆಸರು ಹಾಕಿದ್ರೆ ದಂಡ

    ವಾಹನಗಳಿಗೆ ಸ್ಟೈಲಿಶ್ ಆಗಿ ನಂಬರ್, ಹೆಸರು ಹಾಕಿದ್ರೆ ದಂಡ

    ನೆಲಮಂಗಲ: ಕೇಂದ್ರ ಸಾರಿಗೆ ಇಲಾಖೆ ಈಗಾಗಲೇ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಖ್ಯೆ ಬಿಟ್ಟು, ಚಿಹ್ನೆ, ಹೆಸರುಗಳನ್ನ ಹಾಕುವಂತಿಲ್ಲ ಎಂದು ಆದೇಶ ಮಾಡಿದೆ. ಆದರೆ ವಾಹನಗಳ ಮಾಲೀಕರು ಮಾತ್ರ ಎಚ್ಚೆತ್ತಿಲ್ಲ. ಹೀಗಾಗಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಆರ್‌ಟಿಓ ಅಧಿಕಾರಿಗಳು, ವಾಹನಗಳ ಮೇಲೆ ಚಿತ್ರ, ವಿಚಿತ್ರ ರೀತಿಯಲ್ಲಿ ಹೆಸರು, ಪ್ಲೇಟ್ ಡಿಸೈನ್, ಸಂಘ-ಸಂಸ್ಥೆಯ ಹೆಸರುಗಳು ಹೀಗೆ ನಿಯಮ ಮೀರಿ ಇದ್ದ ಎಲ್ಲಾ ವಾಹನಗಳ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೆಲಮಂಗಲ ಸಾರಿಗೆ ಅಧಿಕಾರಿ ಡಾ.ಒಡೆಯರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನೆಲಮಂಗಲ ಭಾಗದಲ್ಲಿನ ವಾಹನ ಸವಾರಿಗೆ ಅರಿವು ಮೂಡಿಸುವುದರ ಜೊತೆಗೆ ಇನ್ಮುಂದೆ ಕಡ್ಡಾಯವಾಗಿ ತೆರವು ಮಾಡಲೇಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು ವಾಹನಗಳ ಚಿತ್ರ-ವಿಚಿತ್ರ ನಂಬರ್ ಪ್ಲೇಟ್‍ಗಳನ್ನ ಸ್ಥಳದಲ್ಲಿಯೇ ತೆರವುಗೊಳಿಸಿ ಹೊಸ ನಂಬರ್ ಪ್ಲೇಟ್‍ಗಳನ್ನ ಹಾಕಿಸಿಕೊಳ್ಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಯಿತು. ಸಾರಿಗೆ ಇಲಾಖೆಯ ಖಡಕ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

  • ನಕಲಿ ನೋಂದಣಿ ಸಂಖ್ಯೆಯ ಕಾರು ಸೀಜ್- ಚಾಲಕನ ಬಂಧನ

    ನಕಲಿ ನೋಂದಣಿ ಸಂಖ್ಯೆಯ ಕಾರು ಸೀಜ್- ಚಾಲಕನ ಬಂಧನ

    – 2 ವರ್ಷಗಳಿಂದ ನಕಲಿ ಸಂಖ್ಯೆಯಲ್ಲೇ ಚಾಲನೆ

    ಶಿವಮೊಗ್ಗ: ಟ್ರ್ಯಾಕ್ಟರ್ ಗಳಿಗೆ ನೀಡಲಾಗುವ ನೋಂದಣಿ ಸಂಖ್ಯೆಯನ್ನು ಕಾರಿಗೆ ಹಾಕಿಕೊಂಡು ರಾಜಾರೋಷವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಲಾಗಿದ್ದು, ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಉಮೇಶ್ ಹೊಸ ಕಾರು ಖರೀದಿಸಿ, ಟ್ರ್ಯಾಕ್ಟರ್ ನಂಬರ್ ಪ್ಲೇಟಿನ ನಂಬರ್ ಹಾಕಿದ್ದಾನೆ. ಕಾರುಗಳಿಗೆ ಒ. ಓ. P ಮತ್ತು Z ಸಿರೀಸ್ ಗಳಲ್ಲಿ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಆದರೆ ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಖಿ ಸಿರೀಸ್ ಇತ್ತು. ಇದು ಟ್ರ್ಯಾಕ್ಟರ್ ಗಳಿಗೆ ನೀಡುವ ಸಿರೀಸ್ ಆಗಿದ್ದು, ಮಾಲೀಕ ಟ್ರ್ಯಾಕ್ಟರ್ ಗಳಿಗೆ ನೀಡುವ ಖಿ ಸಿರೀಸ್ ನಂಬರ್ ಹಾಕಿಕೊಂಡು ಕಳೆದ ಎರಡು ವರ್ಷಗಳಿಂದ ರಾಜಾರೋಷವಾಗಿ ಸಂಚರಿಸುತ್ತಿದ್ದಾನೆ.

    2017 ರಲ್ಲಿ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಉಮೇಶ್ ಎಂಬಾತ ಹೊಸ ಕಾರು ಖರೀದಿಸಿದ್ದಾನೆ. ಆದರೆ ಈತ ಖರೀದಿಸಿದ್ದ ಕಾರಿಗೆ ಖಾಯಂ ಸಂಖ್ಯೆ ಪಡೆಯದೇ ನಕಲಿ ನಂಬರ್ ಹಾಕಿಕೊಂಡು ಚಲಾಯಿಸುತ್ತಿದ್ದ. ಎರಡು ವರ್ಷಗಳಿಂದಲೂ ಇದೇ ನಂಬರ್ ಪ್ಲೇಟ್ ಹಾಕಿಕೊಂಡು ವಾಹನ ಚಲಾಯಿಸಿದ್ದಾನೆ. ಇದೀಗ ತನ್ನ ಕಾರನ್ನು ನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿಯೇ ಪಾರ್ಕ್ ಮಾಡಿ ಬೇರೆಡೆಗೆ ತೆರಳಿದ್ದ. ಕಾರಿನ ನಂಬರ್ ಪ್ಲೇಟ್ ಗಮನಿಸಿದ ಆರ್‌ಟಿಒ ಅಧಿಕಾರಿಗಳಿಗೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

    ಕಾರನ್ನು ನೋಂದಣಿ ಮಾಡಿಸದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ ಹಿನ್ನೆಲೆಯಲ್ಲಿ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮಾಲೀಕ ಉಮೇಶನನ್ನು ಜಯನಗರ ಪೊಲೀಸರಗೆ ಒಪ್ಪಿಸಿದ್ದಾರೆ.

    ಅಪಘಾತವಾದರೆ ಪರಿಹಾರವಿಲ್ಲ:
    ಹೊಸ ಕಾರು ಖರೀದಿಸಿದ ನಂತರ ಒಂದು ತಿಂಗಳಲ್ಲಿ ಕಾಯಂ ನಂಬರ್ ಪಡೆಯಬೇಕು. ಒಂದು ವೇಳೆ ಪಡೆಯದೇ ತಾತ್ಕಾಲಿಕ ಸಂಖ್ಯೆಯಲ್ಲೇ ಅಥವಾ ನಕಲಿ ಸಂಖ್ಯೆ ಹಾಕಿಕೊಂಡು ವಾಹನ ಓಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ಒಂದು ವೇಳೆ ಕಾರು ಅಪಘಾತವಾದಲ್ಲಿ ಯಾವುದೇ ಪರಿಹಾರ, ವಿಮೆ ಹಣ. ಅದಕ್ಕಾಗಿ ವಾಹನ ಮಾಲೀಕರು ಮತ್ತು ಸಾರ್ವಜನಿಕರು ಎಚ್ಚರ ವಹಿಸಬೇಕು ಹಾಗೂ ಇಂತಹ ವಾಹನಗಳು ಕಂಡು ಬಂದರೆ ಆರ್‍ಟಿಒ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ದೀಪಕ್ ಮನವಿ ಮಾಡಿಕೊಂಡಿದ್ದಾರೆ.

  • ಪ್ರಯಾಣಿಕರನ್ನು ಕುರಿಗಳಂತೆ ತುಂಬ್ತಾರೆ, ಟಾಪ್‍ಲ್ಲಿ ಕೂರಿಸ್ತಾರೆ – ತುಮಕೂರಿನಲ್ಲಿ ಖಾಸಗಿ ಬಸ್‍ಗಳಿಂದ ರೂಲ್ಸ್ ಬ್ರೇಕ್

    ಪ್ರಯಾಣಿಕರನ್ನು ಕುರಿಗಳಂತೆ ತುಂಬ್ತಾರೆ, ಟಾಪ್‍ಲ್ಲಿ ಕೂರಿಸ್ತಾರೆ – ತುಮಕೂರಿನಲ್ಲಿ ಖಾಸಗಿ ಬಸ್‍ಗಳಿಂದ ರೂಲ್ಸ್ ಬ್ರೇಕ್

    ತುಮಕೂರು: ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳಿಗೆ ಯಾವುದೇ ಲಂಗು ಲಗಾಮಿಲ್ಲದಂತಾಗಿದೆ. ಬುಧವಾರ ಕೊರಟಗೆರೆಯ ಜಟ್ಟಿ ಅಗ್ರಹಾರದಲ್ಲಿ ಐವರ ಸಾವಿಗೆ ಕಾರಣವಾದ ಖಾಸಗಿ ಬಸ್ಸುಗಳ ಆಟಾಟೋಪ ಮುಂದುವರಿದಿದೆ. ಓವರ್ ಲೋಡ್, ಟಾಪಲ್ಲಿ ಪ್ರಯಾಣ ಎಂದಿನಂತೆ ಸಾಗಿದೆ. ಆದರೂ ಜಿಲ್ಲಾಡಳಿತ, ಆರ್‌ಟಿಓ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದೆ.

    ಬುಧವಾರದಂದು ಕೊರಟಗೆರೆಯ ಜಟ್ಟಿ ಅಗ್ರಹಾರದ ಬಳಿ ಓವರ್ ಸ್ಪೀಡಲ್ಲಿ ಬಂದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಐವರು ಸಾವನಪ್ಪಿ, 29 ಜನರಿಗೆ ಗಾಯಗೊಂಡ ಘಟನೆ ನಡೆದಿತ್ತು. ಆದರೂ ಖಾಸಗಿ ಬಸ್ಸುಗಳ ಆಟಾಟೋಪಕ್ಕೆ ಬ್ರೇಕ್ ಬಂದಿಲ್ಲ. ತುಮಕೂರು- ಕೊರಟಗೆರೆ-ಮಧುಗಿ ಮಾರ್ಗದಲ್ಲಿ ಬಸ್ಸುಗಳ ಅತಿ ವೇಗ ಮತ್ತೆ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

    ಕಡಿಮೆ ಸಮಯದಲ್ಲಿ ತಲುಪಬೇಕು ಎಂಬ ಆತುರದಲ್ಲಿ ಚಾಲಕರು ತಮ್ಮ ಅತೀ ವೇಗದ ಚಾಲನೆ ಮುಂದುವರಿಸಿದ್ದಾರೆ. ಬುಧವಾರ ನಡೆದ ಘಟನೆಯಿಂದ ಎಚ್ಚೆತ್ತುಕೊಳ್ಳದ ಖಾಸಗಿ ಬಸ್ಸಿನ ಚಾಲಕರು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟ ಆಡುತಿದ್ದಾರೆ.

    ತುಮಕೂರು ನಗರದಲ್ಲಿ ಖಾಸಗಿ ಬಸ್ಸಿನ ಟಾಪಲ್ಲಿ ಕೂತು ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇದೆ. ಆದರೆ ಮಧುಗಿರಿ-ಶಿರಾ-ತಿಪಟೂರು ಮಾರ್ಗದಲ್ಲಿ ಖಾಸಗಿ ಬಸ್ಸಿನವರು ಆಡಿದ್ದೇ ಆಟವಾಗಿದೆ. ಈ ಮಾರ್ಗದಲ್ಲಿ ಪ್ರತಿ ಬಸ್ಸಿನ ಟಾಪಲ್ಲಿ ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಾರೆ. ಬಸ್ಸಿನೊಳಗೆ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿ, ಬಾಗಿಲಲ್ಲಿ ನಿಂತು ಪ್ರಯಾಣಿಸುವುದು ಸಾಮಾನ್ಯವಾಗಿದೆ. ವಿಧಿಯಿಲ್ಲದೆ ಸಾರ್ವಜನಿಕರು ಪ್ರಯಾಣಿಸುವಂತಾಗಿದೆ.