Tag: rto officer

  • ಆರ್‌ಟಿಒ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ – 3 ಲಕ್ಷ ಹಣ, ಚಿನ್ನಾಭರಣ ವಶ

    ಆರ್‌ಟಿಒ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ – 3 ಲಕ್ಷ ಹಣ, ಚಿನ್ನಾಭರಣ ವಶ

    ಬಳ್ಳಾರಿ: ಆರ್‌ಟಿಒ ಕಚೇರಿಯ ಸಿಬ್ಬಂದಿ ಮನೆ ಮೇಲೆ ಲೋಕಾಯುಕ್ತ ದಾಳಿ (Lokayukta Raid) ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆದಿದೆ.

    ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿವೇಕಾನಂದ ನಗರದಲ್ಲಿರುವ ಆರ್‌ಟಿಒ ಕಚೇರಿಯ ಎಸ್‌ಡಿಸಿ ನಾಗೇಶ ಅವರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಲೋಕಾಯುಕ್ತ ಬಳ್ಳಾರಿ ಇನ್‌ಸ್ಪೆಕ್ಟರ್‌ ಮಹಮ್ಮದ್ ರಫೀಕ್ ನೇತೃತ್ವದಲ್ಲಿ ದಾಳಿ ನಡೆದಿತ್ತು. 3 ಲಕ್ಷ ನಗದು ಸೇರಿ ಬೆಳ್ಳಿ-ಬಂಗಾರ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

  • ಅಪಘಾತಗಳಿಗೆ ಬ್ರೇಕ್ ಹಾಕಲು ಆರ್‌ಟಿಓ ಅಧಿಕಾರಿಗಳಿಂದ ಜಾಗೃತಿ

    ಅಪಘಾತಗಳಿಗೆ ಬ್ರೇಕ್ ಹಾಕಲು ಆರ್‌ಟಿಓ ಅಧಿಕಾರಿಗಳಿಂದ ಜಾಗೃತಿ

    ನೆಲಮಂಗಲ: ಈ ವಾರವನ್ನು 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ. ಆದರೂ ಹೆಲ್ಮೆಟ್ ಬಳಸದೆ ವಾಹನ ಸವಾರರ ಓಡಾಟ ಇನ್ನೂ ನಿಂತಿಲ್ಲ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ.ಡಿ.ಎಸ್ ಒಡೆಯರ್ ಕಳವಳ ವ್ಯಕ್ತಪಡಿಸಿದ್ದಾರೆ.

    ರಸ್ತೆ ಸುರಕ್ಷಾ ಸಪ್ತಾಹದ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿಯ ಖಾಸಗಿ ಕಂಪನಿ ಸಹಯೋಗದೊಂದಿಗೆ ರಸ್ತೆ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಹೆದ್ದಾರಿಯ ಅಪಘಾತಗಳ ಬಗ್ಗೆ ಮಾಹಿತಿ, ಅಪಘಾತಗಳಿಗೆ ಕಾರಣಗಳು ಹಾಗೂ ರಕ್ಷಣೆಯ ಉಪಾಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿಕೊಡಲಾಯಿತು.

    ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಖಾಸಗಿ ಕಂಪನಿ ಸಂಯುಕ್ತ ಆಶ್ರಯದಲ್ಲಿ ಈ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ. ಡಿ.ಎಸ್ ಒಡೆಯರ್ ಮಾತನಾಡಿ, 21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಸುತ್ತಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರಸ್ತೆ ನಿಯಮದ ಅರಿವು ಎಲ್ಲರಿಗೂ ಅತ್ಯಗತ್ಯ. ಸವಾರರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸಬೇಕು ಎಂದು ತಿಳಿಸಿದರು.

  • ನಟಿ ರಾಗಿಣಿ ಗೆಳೆಯರ ಗಲಾಟೆ ಕೇಸ್‍ಗೆ ಹೊಸ ಟ್ವಿಸ್ಟ್..!

    ನಟಿ ರಾಗಿಣಿ ಗೆಳೆಯರ ಗಲಾಟೆ ಕೇಸ್‍ಗೆ ಹೊಸ ಟ್ವಿಸ್ಟ್..!

    ಬೆಂಗಳೂರು: ನಟಿ ರಾಗಿಣಿ ಸ್ನೇಹಿತರ ಗಲಾಟೆ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ತುಪ್ಪದ ಬೆಡಗಿ ಗೆಳೆಯ ರವಿಗೆ ಆತನ ಪತ್ನಿಯೇ ಫೋನ್ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಆ ಬೆನ್ನಲ್ಲೇ ರವಿಗೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪತಿ ರವಿಗೆ ಕರೆ ಮಾಡಿದ ಪತ್ನಿ, ನೀನು ರಾಗಿಣಿ ಜೊತೆ ಹೋಗಿದ್ದೀಯಾ? ನಿನಗೆ ಯಾರಾದ್ರೂ ಬಂದು ಒದೆ ಕೊಡುತ್ತಾರೆ. ನನ್ನ ಬಾಳು ಹಾಳು ಮಾಡಿದ್ದೀಯ. ನಿನ್ನನ್ನ ನಾನು ಬಿಡಲ್ಲ. ಮದುವೆ ಆಗಿ ಬೇರೆ ಹುಡುಗಿಯರ ಜೊತೆ ಸುತ್ತಾಡುತ್ತಿದ್ದಿ. ನಿನಗೆ ಏನು ಮಾಡಿದ್ರೂ ಬುದ್ಧಿ ಬರಲ್ಲ. ನೀನು ಎಲ್ಲಿದ್ದೀಯ ಎಂದು ಗೊತ್ತು. ಅಲ್ಲಿಗೆ ಬಂದು ಒಬ್ಬ ಬುದ್ಧಿ ಕಲಿಸುತ್ತಾನೆ ಎಂದು ಪತ್ನಿಯೇ ರವಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಈ ವಾರ್ನಿಂಗ್ ಬಳಿಕ ಹೋಟೆಲ್‍ಗೆ ಬಂದಿದ್ದ ರವಿಗೆ ಗಣಿ ಉದ್ಯಮಿ ಶಿವಕುಮಾರ್ ಥಳಿಸಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?:
    ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಇಬ್ಬರು ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ಕಿತ್ತಾಡಿಕೊಂಡಿದ್ದರು. ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಯೊಂದಿಗೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು.

    ನಟಿ ರಾಗಿಣಿ ದ್ವಿವೇದಿ ಮೊದಲು ಉದ್ಯಮಿ ಶಿವಪ್ರಕಾಶ್ ನನ್ನ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ಆಫೀಸರ್ ಆಗಿ ರವಿ ಕಾರ್ಯನಿರ್ವಹಿಸುತ್ತಿರುವ ರವಿ ಅವರೊಂದಿಗೆ ಒಡನಾಟ ಹೆಚ್ಚಿತ್ತು. ರಾತ್ರಿ ನಡೆದ ಗಲಾಟೆಯ ಬಳಿಕ ಶಿವಪ್ರಕಾಶ್, ರಾಗಿಣಿ ಅವರ ಬಳಿ ಇದ್ದ ಮರ್ಸಿಡೀಸ್ ಬೆಂಜ್ ಕಾರು ಕಿತ್ತುಕೊಂಡಿದ್ದಾರೆ. ರಾಗಿಣಿ ಅವರ ಬಳಿ ಇದ್ದ ಕಾರನ್ನು ಶಿವಪ್ರಕಾಶ್ ಕೊಡಿಸಿದ್ದರು ಎನ್ನಲಾಗಿದ್ದು, ಆದ್ದರಿಂದಲೇ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಶಿವಪ್ರಕಾಶ್ ಸ್ಪಷ್ಟನೆ:
    ಗಲಾಟೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಪ್ರಕಾಶ್, ನನ್ನ ಗೆಳತಿ ರಾಗಿಣಿಯೇ ಬೇರೆ. ನಟಿ ರಾಗಿಣಿಯೇ ಬೇರೆ. ನಾನು ರವಿಶಂಕರ್ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಹೊಟ್ಟೆಪಾಡಿಗೆ ಚಿಲ್ರೆ ಅಂಗಡಿ ಇಟ್ಕೊಂಡ ಮಹಿಳೆಗೆ ಆರ್‍ಟಿಓ ಅಧಿಕಾರಿಯಿಂದ ಬೆದರಿಕೆ

    ಹೊಟ್ಟೆಪಾಡಿಗೆ ಚಿಲ್ರೆ ಅಂಗಡಿ ಇಟ್ಕೊಂಡ ಮಹಿಳೆಗೆ ಆರ್‍ಟಿಓ ಅಧಿಕಾರಿಯಿಂದ ಬೆದರಿಕೆ

    ಬೆಂಗಳೂರು: ಹೊಟ್ಟೆಪಾಡಿಗಾಗಿ ಚಿಲ್ಲರೆ ಅಂಗಡಿ ಇಟ್ಟುಕೊಂಡ ಮಹಿಳೆಯೊಬ್ಬರಿಗೆ ಆರ್‍ಟಿಒ ಅಧಿಕಾರಿ ಬೆದರಿಸಿ ಜೀವ ಭಯ ತಂದಿರೋ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ಭಾರತಿ ಎಂಬ ಮಹಿಳೆ ತನ್ನ ಗಂಡನ ಸಾವಿನ ಬಳಿಕ ಇಬ್ಬರು ಮಕ್ಕಳನ್ನು ಸಾಕಲು ಆರ್‍ಟಿಓ ಕಚೇರಿ ಮುಂದೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ ನೆಲಮಂಗಲದ ಆರ್‍ಟಿಓ ಲಿಂಗರಾಜು ಭಾರತಿ ಅವರ ಮನೆಗೆ ನುಗ್ಗಿ ಬೆದರಿಸಿದ್ದಾರೆ. ಅಂಗಡಿ ಮತ್ತು ಮನೆ ಸರ್ಕಾರಿ ಜಾಗದಲ್ಲಿದೆ. ಹೀಗಾಗಿ ಜೆಸಿಬಿ ಮೂಲಕ ಡೆಮಾಲಿಷನ್ ಮಾಡ್ತೀನಿ ಅಂತಾ ಬೆದರಿಸಿದ್ದಾರೆ.

    ಇದೇ ಜಾಗದಲ್ಲಿ ಆರ್‍ಟಿಓ ಕಚೇರಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ಕನಿಕರದ ಆಧಾರದ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಉತ್ತರ ತಹಶೀಲ್ದಾರ್ ಈ ವಿಧವೆಗೆ 2 ಗುಂಟೆ ನಿವೇಶನ ನೀಡಿದ್ದಾರೆ. ಆದ್ರೂ ಈ ದಾಖಲೆಯನ್ನು ಆರ್‍ಟಿಓ ಅಧಿಕಾರಿಗಳು ನೋಡ್ತಿಲ್ಲ. ನೊಂದ ಮಹಿಳೆ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

    ಇತ್ತ ಮಹಿಳೆಯ ಮಕ್ಕಳು ಸಹ ಅಧಿಕಾರಿಗಳ ಕಿರುಕುಳದಿಂದ ಮನನೊಂದಿದ್ದಾರೆ.