Tag: RTO

  • RTO ದಾಳಿ – 2 ಐಷಾರಾಮಿ ಕಾರಿಗೆ ಬರೋಬ್ಬರಿ 38 ಲಕ್ಷ ತೆರಿಗೆ ಕಟ್ಟಿದ ಕೆಜಿಎಫ್ ಬಾಬು

    RTO ದಾಳಿ – 2 ಐಷಾರಾಮಿ ಕಾರಿಗೆ ಬರೋಬ್ಬರಿ 38 ಲಕ್ಷ ತೆರಿಗೆ ಕಟ್ಟಿದ ಕೆಜಿಎಫ್ ಬಾಬು

    – ಅಮಿತಾಬ್ ಬಚ್ಚನ್, ಆಮೀರ್ ಖಾನ್‌ರಿಂದ ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿದ್ದ ಉದ್ಯಮಿ

    ಬೆಂಗಳೂರು: ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳಿಗೆ ಉದ್ಯಮಿ ಕೆಜಿಎಫ್‌ ಬಾಬು (KGF Babu) ಬರೋಬ್ಬರಿ 38 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ.

    ಆಮೀರ್‌ ಖಾನ್‌ರಿಂದ ಖರೀದಿಸಿದ್ದ ರೋಲ್ಸ್‌ ರಾಯ್ಸ್‌ ಕಾರಿಗೆ (Rolls Royce Car) 19.73 ಲಕ್ಷ ರೂ. ಹಾಗೂ ಅಮಿತಾಬ್ ಬಚ್ಚನ್ ರಿಂದ ಖರೀದಿಸಿದ್ದ ಮತ್ತೊಂದು ರೋಲ್ಸ್‌ ರಾಯ್ಸ್‌ ಕಾರಿಗೆ 18.53 ಲಕ್ಷ ರೂ. ಟ್ಯಾಕ್ಸ್‌ (Tax) ಪಾವತಿ ಮಾಡಿದ್ದಾರೆ. ತೆರಿಗೆ ವಸೂಲಿ ಬಳಿಕ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ.

    ಏನಾಗಿತ್ತು?
    ಬೆಂಗಳೂರಿನ ವಸಂತನಗರದಲ್ಲಿರುವ ಉದ್ಯಮಿ ಕೆಜಿಎಫ್ ಬಾಬು ಅವರ ಮನೆ ಮೇಲೆ ಆರ್‌ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಬಾಬು ಅವರು ಅಮಿತಾಬ್ ಬಚ್ಚನ್, ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳನ್ನು ಸೀಜ್ ಮಾಡಲು ಮುಂದಾಗಿತ್ತು. ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಆರ್‌ಟಿಓ ತಂಡ ಕಾರು ಜಪ್ತಿಗೆ ಮುಂದಾಗಿತ್ತು. ಈ ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಬಾಬುಗೆ ಸೇರಿದ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದರು. ಆದ್ರೆ ಬಾಬು ಮನೆಯ ಗೇಟ್ ತೆರೆಯದಿರುವುದರಿಂದ, ಆರ್‌ಟಿಓ ತಂಡವು ಮನೆಯ ಹೊರಗಡೆಯೇ ಕಾದು ನಿಂತಿದ್ದರು. ಅಧಿಕಾರಿಗಳ ಮನವರಿಕೆ ಬಳಿಕ ಟ್ಯಾಕ್ಸ್‌ ಪಾವತಿ ಮಾಡಿದ್ದಾರೆ.

    ಟ್ಯಾಕ್ಸ್‌ ಪಾವತಿ ಬಳಿಕ ಬಾಬು ಹೇಳಿದ್ದೇನು?
    ಅಮೀರ್ ಖಾನ್ ಹಾಗೂ ಅಮಿತಾಬ್ ಬಚ್ಚನ್‌ ಅವರಿಂದ ಎರಡು ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿದ್ದೆ. ಎರಡೂ ಕಾರುಗಳನ್ನು ಬಾಂಬೆಯಲ್ಲಿ ರಿಜೆಸ್ಟ್ರೇಷನ್‌ ಮಾಡಿಸಲಾಗಿತ್ತು. ಅಲ್ಲದೇ ಲೈಫ್‌ ಟ್ಯಾಕ್ಸ್‌ ಕೂಡ ಕಟ್ಟಿದೆ. ಆದ್ರೆ ಕರ್ನಾಟಕದಲ್ಲೂ ಟ್ಯಾಕ್ಸ್ ಕಟ್ಟಬೇಕು ಅಂತ ಅಧಿಕಾರಿಗಳು ಹೇಳಿದ್ರು. ನನಗೆ ಈ ಟ್ಯಾಕ್ಸ್‌ ವಿಚಾರ ಗೊತ್ತಿರಲಿಲ್ಲ. ಗೊತ್ತಿಲ್ಲದೇ ನಾನು ತಪ್ಪು ಮಾಡಿದ್ದೀನಿ. ಆರ್‌ಟಿಓ ಅಧಿಕಾರಿಗಳು ನನಗೆ ಈ ಬಗ್ಗೆ ಮನವರಿಕೆ ಮಾಡಿದ್ರು. ನಂತರ ಅಮೀರ್ ಖಾನ್ ಅವರಿಂದ ಖರೀದಿಸಿದ್ದ ಕಾರಿಗೆ 19.73 ಲಕ್ಷ ರೂ. ಹಾಗೂ ಬಿಗ್‌ ಅಮಿತಾಬ್‌ ಬಚ್ಚನ್‌ ರಿಂದ ಖರೀದಿಸಿದ ಕಾರಿಗೆ 18.53 ಲಕ್ಷ ರೂ. ತೆರಿಗೆ ಕಟ್ಟದ್ದೇನೆ ಎಂದು ವಿವರಿಸಿದ್ರು.

    ಆರ್‌ಟಿಓ ಅಧಿಕಾರಿಗಳ ಪ್ರತಿಕ್ರಿಯೆ ಏನು?
    ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭ ಮಾತನಾಡಿ, ಮಹಾರಾಷ್ಟ್ರ ರಿಜಿಸ್ಟ್ರೇಷನ್ ಕಾರುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ ಅನ್ನೋ ಮಾಹಿತಿ ಇತ್ತು. ಮಾಹಿತಿ ಹಿನ್ನೆಲೆ ನಾವು ಬೆಳಗ್ಗೆ ಬಂದು ಪರಿಶೀಲನೆ ನಡೆಸಿದ್ದೇವೆ. ಟ್ಯಾಕ್ಸ್ ವಿಚಾರ ಗೊತ್ತಿರಲಿಲ್ಲ ಅಂದ್ರು, ನಾವು ಎಲ್ಲಾ ಟ್ಯಾಕ್ಸ್ ಲೆಕ್ಕ ಮಾಡಿ ಹೇಳಿದ್ವಿ, ಕೂಡಲೇ ಕೆಜಿಎಫ್ ಬಾಬು ಡಿಡಿ ಮೂಲಕ ಟ್ಯಾಕ್ಸ್ ಕಟ್ಟಿದ್ದಾರೆ ಅಂತ ತಿಳಿಸಿದ್ರು.

  • ಕೆಜಿಎಫ್‌ ಬಾಬುಗೆ ಆರ್‌ಟಿಓ ಶಾಕ್‌ – ಬಿಗ್‌ ಬಿ, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ?

    ಕೆಜಿಎಫ್‌ ಬಾಬುಗೆ ಆರ್‌ಟಿಓ ಶಾಕ್‌ – ಬಿಗ್‌ ಬಿ, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ?

    ಬೆಂಗಳೂರು: ಉದ್ಯಮಿ ಕೆಜಿಎಫ್‌ ಬಾಬು (KGF Babu) ಅವರಿಗೆ ಆರ್‌ಟಿಓ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದ್ದಾರೆ. ಬೆಂಗಳೂರಿನ (Bengaluru) ವಸಂತನಗರದಲ್ಲಿರುವ ತಮ್ಮ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಮಿತಾಬ್ ಬಚ್ಚನ್, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್‌ ಕಾರುಗಳನ್ನು ಸೀಜ್‌ ಮಾಡಲು ಮುಂದಾಗಿದ್ದಾರೆ.

    ಕೆಜಿಎಫ್‌ ಬಾಬು ಐಷಾರಾಮಿ ಕಾರುಗಳ ಟ್ಯಾಕ್ಸ್ (Tax) ಕಟ್ಟದೇ ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಆರ್‌ಟಿಓ ತಂಡ (RTO Team) ಕಾರು ಜಪ್ತಿಗೆ ಮುಂದಾಗಿದೆ. ಸದ್ಯ ಅಧಿಕಾರಿಗಳ ತಂಡ ಕೆಜಿಎಫ್‌ ಬಾಬು ಅವರ ಮನೆ ಮುಂದೆಯೇ ಬೀಡುಬಿಟ್ಟಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಇಂದು ಮತ್ತೆ ವಿಚಾರಣೆ, FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೈರತಿ ಬಸವರಾಜ್

    ಬಾಗಿಲು ತೆರೆಯದೇ ಬಾಬು ಮೊಂಡಾಟ
    ಆರ್‌ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದ ತಂಡವು ಕೆಜಿಎಫ್ ಬಾಬು ಅವರ ವಸಂತನಗರದ ಮನೆ ಮೇಲೆ ದಾಳಿ ನಡೆದಿದೆ. ಬಾಬು ರೋಲ್ಸ್ ರಾಯ್ಸ್, ವೆಲ್ಫೇರ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದು, ಈ ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಬಾಬುಗೆ ಸೇರಿದ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ, ಬಾಬು ಮನೆಯ ಗೇಟ್ ತೆರೆಯದಿರುವುದರಿಂದ, ಆರ್‌ಟಿಓ ತಂಡವು ಮನೆಯ ಹೊರಗಡೆಯೇ ಕಾದು ನಿಂತಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್; ಆರೋಪಿ ಜಗ್ಗನ ಮೇಲೆ ಲುಕ್‌ಔಟ್ ನೋಟಿಸ್‌ಗೆ ಸಿದ್ಧತೆ

    ಬಾಬು ಹೇಳೋದೇನು?
    ಒಂದು ರೋಲ್ಸ್‌ ರಾಯ್ಸ್‌ ಕಾರನ್ನ ನಟ ಅಮಿತಾಬ್ ಬಚ್ಚನ್ ಮತ್ತೊಂದು ರೋಲ್ಸ್‌ ರಾಯ್ಸ್‌ ಕಾರನ್ನ ಆಮೀರ್‌ ಖಾನ್‌ ಅವರಿಂದ ಖರೀದಿ ಮಾಡಿದ್ದೀನಿ. ಎರಡೂ ಕೂಡ ಬಾಂಬೆ ರಿಜಿಸ್ಟ್ರೇಷನ್‌, ನಾನು ಟ್ಯಾಕ್ಸ್‌ ಕಟ್ಟು ಹಾಗಿಲ್ಲ. ಈಗ ಆರ್‌ಟಿಓ ಅಧಿಕಾರಿಗಳು ಬಂದಿದ್ದಾರೆ. ಟ್ಯಾಕ್ಸ್‌ ಎಷ್ಟು ಅಂತ ಹೇಳಿದ್ರೆ ಕಟ್ತೀನಿ. ಅದನ್ನ ಬಿಟ್ಟು ಏಕಾಏಕಿ ಸೀಜ್‌ ಮಾಡ್ರೀನಿ ಅಂದ್ರೆ ಹೇಗೆ ಅಂತ ಬಾಬು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

  • ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

    ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ (Rain) ಆರಂಭವಾಗಿದೆ. ಜಿಲ್ಲೆಯ ನಾನಾ ಭಾಗದಲ್ಲಿ ಈಗಾಗಲೇ ಸಣ್ಣಪುಟ್ಟ ಭೂಕುಸಿತಗಳು (Landslide) ಉಂಟಾಗುತ್ತಿದೆ. ಈ ಹಿನ್ನಲೆ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು. ಆದೇಶ ಉಲ್ಲಂಘಿಸಿದ 12 ಲಾರಿಗಳನ್ನು ಪೊಲೀಸರು ಹಾಗೂ ಆರ್‌ಟಿಓ (RTO) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಮಳೆಗಾಲ ಅರಂಭ ಅದ್ರೆ ಸಾಕು ಕೊಡಗಿನ ಬೆಟ್ಟಗುಡ್ಡದ ನಿವಾಸಿಗಳು ಅತಂಕಕ್ಕೆ ಒಳಗಾಗುತ್ತಾರೆ. ಈ ನಡುವೆ ಜಿಲ್ಲೆಯ ನಾನಾ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತಗಳು ಉಂಟಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕಗಳಲ್ಲಿ ವ್ಯತ್ಯಯಗಳು ಉಂಟಾಗಬಾರದು ಎಂದು ಭಾರೀ ವಾಹನಗಳಿಗೆ ನಿಷೇಧ ಹೇರಲಾಗಿತ್ತು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜು.6ರಿಂದ ಆ.5ರವರೆಗೆ 18.500 ಕೆಜಿಗಿಂತ ಹೆಚ್ಚಿನ ಸಾಗಾಣಿಕೆ ವಾಹನ, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಮಲ್ಟಿ ಆಕ್ಸಿಲ್ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.

    ಅದರೆ ಕೆಲ ಲಾರಿ ಚಾಲಕರು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ, ರಾತ್ರಿ ವೇಳೆಯಲ್ಲಿ ಮಡಿಕೇರಿಗೆ ಆಗಮಿಸುತ್ತಿದ್ದ ಲಾರಿಗಳನ್ನು ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಭಾರೀ ವಾಹನಗಳಿಗೆ ನಿಷೇಧ ಹೇರಿದ್ದರು. ಚೆಕ್‌ಪೋಸ್ಟ್ ಸಿಬ್ಬಂದಿ ನಿರ್ಲಕ್ಷö್ಯದಿಂದಲೇ ವಾಹನಗಳು ಓಡಾಟ ನಡೆಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಆದೇಶ ಉಲ್ಲಂಘಿಸಿ 12 ಲಾರಿಗಳು ವಿವಿಧೆಡೆಗಳಿಂದ ಮಡಿಕೇರಿ ಮೂಲಕ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಸಂಚರಿಸುತ್ತಿರುವ ಕುರಿತು ಸ್ಥಳೀಯ ಚಾಲಕರಿಗೆ ಮಾಹಿತಿ ತಿಳಿದು ಬಂದಿತ್ತು. ತಕ್ಷಣ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಳಿ ಲಾರಿಗಳನ್ನು ತಡೆದು ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಉಪನಿರೀಕ್ಷಕಿ ಅನ್ನಪೂರ್ಣ, ಸಂಚಾರಿ ಠಾಣಾಧಿಕಾರಿ ಶ್ರೀಧರ್, ಆರ್‌ಟಿಓ ಅಧಿಕಾರಿ ಮೋಹನ್ ಕುಮಾರ್ ಹಾಗೂ ಪೊಲೀಸರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಜೂನ್‌ನಲ್ಲೇ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ರಸ್ತೆ ಹಾಳಗುತ್ತದೆ ಎಂದು ಆದೇಶ ಮಾಡಲಾಗಿತ್ತು. ಇದೇ ಮೊದಲು ಈ ರೀತಿಯಾಗಿದೆ. ಕುಶಾಲನಗರ ಮೂಲಕ ಲಾರಿ ಚಾಲಕರು ಬಂದಿದ್ದಾರೆ. ಚೆಕ್‌ಪೋಸ್ಟ್ಗಳ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಭಾರೀ ವಾಹನಗಳು ಜಿಲ್ಲೆಗೆ ಪ್ರವೇಶಿಸಿದೆ. ಈ ಬಗ್ಗೆ ಕೊಡಗು ಎಸ್ಪಿ ಅವರೊಂದಿಗೆ ಸಭೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಆಟೋ ಚಾಲಕರೇ ಗಮನಿಸಿ, ಹಿಂದೆ ಜಾಹೀರಾತು ಹಾಕ್ತೀರಾ? ಹಣದಾಸೆಗೆ ಪೋಸ್ಟರ್ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

    ಆಟೋ ಚಾಲಕರೇ ಗಮನಿಸಿ, ಹಿಂದೆ ಜಾಹೀರಾತು ಹಾಕ್ತೀರಾ? ಹಣದಾಸೆಗೆ ಪೋಸ್ಟರ್ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

    ಬೆಂಗಳೂರು: ನಗರದಲ್ಲಿ ಅನೇಕ ಆಟೋಗಳ (Auto) ಹಿಂದೆ ಕಲರ್ ಕಲರ್ ಜಾಹೀರಾತು (Advertisement) ಹಾಕಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಆರ್‌ಟಿಓ ಬಿಸಿ ಮುಟ್ಟಿಸಿದೆ. 500 ಹಾಗೂ ಸಾವಿರದಾಸೆಗೆ ಪೋಸ್ಟರ್ ಅಂಟಿಸಿ ಅಧಿಕಾರಿಗಳಿಗೆ ತಗ್ಲಾಕೊಂಡು ಸಾವಿರಾರು ರೂ. ಫೈನ್ ಕಟ್ಟುವಂತಾಗಿದೆ.

    ಆಟೋಗಳ ಮೇಲೆ ಪೋಸ್ಟರ್ ಅಂಟಿಸಿದವರಿಗೆ ಆರ್‌ಟಿಓ (RTO) ಫೈನ್ ಅಸ್ತ್ರ ಪ್ರಯೋಗ ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5,000 ರೂ. ದಂಡ ಪ್ರಯೋಗ ಮಾಡಿರುವುದು ಆಟೋ ಚಾಲಕರ ಪಾಲಿಗೆ ಬಿಗ್ ಶಾಕ್ ಆಗಿದೆ. ಇದನ್ನೂ ಓದಿ: 2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

    ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಏನೇ ಜಾಹೀರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ 5,000 ರೂ. ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ, ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ. ಆದರೆ ಈ ನಿಯಮದ ಬಗ್ಗೆ ನಗರದ ಬಹುತೇಕ ಆಟೋ ಚಾಲಕರಿಗೆ ಅರಿವೇ ಇಲ್ಲ. ಅನುಮತಿ ಪಡೆಯದೇ ಹಾಗೂ ಹಣದ ಆಸೆಗೆ ಆಟೋ ಹಿಂದೆ ಜಾಹೀರಾತು ಪೋಸ್ಟರ್ ಹಾಕಿಸಿ ಆರ್‌ಟಿಓ ಫೈನ್ ಸುಳಿಯಲ್ಲಿ ಚಾಲಕರು ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮೊಳಕಾಲ್ಮೂರಲ್ಲಿ ಬೀದಿಗೆ ಬಂದ ‘ಕೈ’ ನಾಯಕರ ಶೀತಲ ಸಮರ – ಪ.ಪಂ. ಕಚೇರಿ ಬಳಿ ಯೋಗೀಶ್ ಬಾಬು ಧರಣಿ

    ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಸಾರಿಗೆ ಸಚಿವರ ಸೂಚನೆ ಮೇರೆಗೆ ಆಟೋ ಚಾಲಕರ ಎಫ್‌ಸಿ, ಪರ್ಮಿಟ್, ಮೀಟರ್ ಅಳವಡಿಕೆಯನ್ನ ಆರ್‌ಟಿಓ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಕೆಲವೊಂದು ಪೋಸ್ಟರ್ ಆಟೋ ಹಿಂದೆ ಹಾಕಿದ್ದಕ್ಕೆ ನಗರದ ಸಾವಿರಾರು ಆಟೋಗಳಿಗೆ ದಂಡದ ಬಿಸಿ ತಟ್ಟಿದೆ. ಇದನ್ನೂ ಓದಿ: ಡಿವೋರ್ಸ್‌ ಘೋಷಿಸಿದ ಸೈನಾ ನೆಹ್ವಾಲ್‌-ಪರುಪಳ್ಳಿ ಕಶ್ಯಪ್ ದಂಪತಿ

  • ದುಪ್ಪಟ್ಟು ಹಣ ವಸೂಲಿ – ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋ ಸೀಜ್

    ದುಪ್ಪಟ್ಟು ಹಣ ವಸೂಲಿ – ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋ ಸೀಜ್

    – ಆ್ಯಪ್ ಆಧಾರಿತ ಆಟೋಗಳೇ ಹೆಚ್ಚು

    ಬೆಂಗಳೂರು: ಪ್ರಯಾಣಿಕರ ಬಳಿ ಮನಸೋ ಇಚ್ಛೆ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಸಮರ ಸಾರಿದ್ದ ಆರ್‌ಟಿಓ (RTO) ಭರ್ಜರಿ ಕಾರ್ಯಚರಣೆ ಮುಂದುವರೆಸಿದ್ದು, ಕಳೆದೊಂದು ವಾರದಲ್ಲೇ ಸಾವಿರಕ್ಕೂ ಹೆಚ್ಚು ಆಟೋಗಳಿಗೆ (Auto) ಶಾಕ್ ನೀಡಿದೆ.

    ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾಗಿದ್ದಾರೆ ಅನ್ನೋ ಆರೋಪಗಳು, ದೂರುಗಳು ಹೆಚ್ಚಾಗಿದ್ದ ಕಾರಣ, ಕಳೆದ ಒಂದು ವಾರದಿಂದ ಆರ್‌ಟಿಓ, ಆಟೋ ಚಾಲಕರ ವಿರುದ್ಧ ಸಮರ ಸಾರಿತ್ತು. ಅದರಂತೆ ತಂಡಗಳ ರಚನೆ ಮಾಡಿ ವಲಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿತ್ತು. ಕಾರ್ಯಚರಣೆ ಭರ್ಜರಿ ಯಶಸ್ಸು ಸಾಧಿಸಿದ್ದು,  ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋಗಳ ವಿರುದ್ಧ ಕ್ರಮಕೈಗೊಂಡಿದೆ. ಇದನ್ನೂ ಓದಿ: ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಜೀವಾವಧಿ ಶಿಕ್ಷೆ

    ಕಳೆದ ಒಂದು ವಾರದಿಂದ ನಗರದ 11 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ ವಸೂಲಿ ಇನ್ಶೂರೆನ್ಸ್, ಡಾಕ್ಯುಮೆಂಟ್‌ಗಳಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನ ಸೀಜ್ (Auto Seize) ಮಾಡಿದ್ದಾರೆ. ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ವಿದೇಶಿ ಮಹಿಳೆಯ ರಕ್ಷಣೆ

    ಯಾವ್ಯಾವ ಆರ್‌ಟಿಓ ವ್ಯಾಪ್ತಿಯಲ್ಲಿ ಎಷ್ಟೆಷ್ಟು ವಾಹನ ಜಪ್ತಿ?
    ಕಚೇರಿ – ಕೇಸ್ ದಾಖಲು – ಸೀಜ್
    ಬೆಂ.ಕೇಂದ್ರ – 143 – 69
    ಬೆಂ.ಪಶ್ಚಿಮ – 90 – 21
    ಬೆಂ.ಪೂರ್ವ – 115 – 13
    ಬೆಂ.ಉತ್ತರ – 140 – 12
    ಬೆಂ.ದಕ್ಷಿಣ – 147 – 15
    ಜ್ಞಾನಭಾರತಿ – 43 – 34
    ಯಲಹಂಕ – 51 – 6
    ಎಲೆಕ್ಟ್ರಾನಿಕ್ ಸಿಟಿ – 117 – 22
    ಕೆ.ಆರ್.ಪುರಂ – 78 – 19
    ಚಂದಾಪುರ – 49 – 18
    ದೇವನಹಳ್ಳಿ – 33 – 4
    ಒಟ್ಟು – 1006 – 233

    ಇನ್ನೂ ಈ ಆಟೋಗಳ ಪೈಕಿ ಅತಿ ಹೆಚ್ಚು ಆಟೋಗಳು ಆ್ಯಪ್ ಆಧಾರಿತ ಸಂಚಾರ ಮಾಡುತ್ತಿದ್ದ ಆಟೋಗಳೇ. ನಗರವ್ಯಾಪಿ ಆ್ಯಪ್ ಆಧಾರಿತ ಆಟೋಗಳ ಮೇಲೆಯೇ ಅತಿ ಹೆಚ್ಚು ದೂರಗಳಿದ್ದು, ಅದರಂತೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚುವರಿ ದರ ಪಡೆದು ಸಂಚಾರ ಮಾಡುತ್ತಿದ್ದ ಆ್ಯಪ್ ಆಧಾರಿತ ಆಟೋಗಳಿಗೂ ಆರ್‌ಟಿಓ ಬಿಸಿ ಮುಟ್ಟಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    ಯಾವ್ಯಾವ ಆ್ಯಪ್‌ಗಳ ಆಟೋಗಳ ಮೇಲೆ ಕ್ರಮ?
    ಆ್ಯಪ್ – ಕೇಸ್ ದಾಖಲು – ಸೀಜ್
    ಓಲಾ – 35 – 4
    ಊಬರ್ – 59 – 14
    ರ‍್ಯಾಪಿಡೋ – 92 – 32
    ನಮ್ಮಯಾತ್ರಿ – 25 – 4
    ಇತರೆ ಆ್ಯಪ್ – 795 – 179

    ಒಟ್ಟಾರೆ ನಗರದಾದ್ಯಂತ ಆರ್‌ಟಿಓ ಕಾರ್ಯಚರಣೆ ಮುಂದುವರೆಯುತ್ತಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಆಟೋಗಳಿಗೆ ಆರ್‌ಟಿಓ ಗಾಳ ಹಾಕಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ – ಕಾರಿನ ಮೇಲೆ ಬಿದ್ದ ಬೃಹತ್‌ ಮರ, ಚಾಲಕ ಗ್ರೇಟ್‌ ಎಸ್ಕೇಪ್‌

  • RTO ಕಣ್ತಪ್ಪಿಸಿ ಓಡಾಡ್ತಿದ್ದ ಫೆರಾರಿ ಕಾರು ಸೀಜ್‌ – 1.58 ಕೋಟಿ ತೆರಿಗೆ ಕಟ್ಟಲು ಸಂಜೆವರೆಗೆ ಡೆಡ್‌ಲೈನ್‌ ಫಿಕ್ಸ್‌

    RTO ಕಣ್ತಪ್ಪಿಸಿ ಓಡಾಡ್ತಿದ್ದ ಫೆರಾರಿ ಕಾರು ಸೀಜ್‌ – 1.58 ಕೋಟಿ ತೆರಿಗೆ ಕಟ್ಟಲು ಸಂಜೆವರೆಗೆ ಡೆಡ್‌ಲೈನ್‌ ಫಿಕ್ಸ್‌

    ಬೆಂಗಳೂರು: ಕೋಟಿ ಕೋಟಿ ತೆರಿಗೆ ವಂಚಿಸಿ ನಗರದಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಕಾರು (Car) ಮಾಲೀಕನಿಗೆ ಆರ್‌ಟಿಓ ಅಧಿಕಾರಿಗಳು (RTO Officers) ಬಿಸಿ ಮುಟ್ಟಿಸಿದ್ದಾರೆ. 1.58 ಕೋಟಿ ಬಾಕಿ ತೆರಿಗೆ ಪಾವತಿಸಲು ಇಂದು ಸಂಜೆ ವರೆಗೆ ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಾರೆ.

    ಹೌದು. ಸುಮಾರು ಏಳುವರೆ ಕೋಟಿ ಮೌಲ್ಯದ ಫೆರಾರಿ ಕಾರು (Ferrari Car) ಖರೀಸಿದಿದ್ದ ಮಾಲೀಕನೊಬ್ಬ ತೆರಿಗೆ ಪಾವತಿಸದೇ ಓಡಾಡಿಕೊಂಡಿದ್ದ. ಮಹಾರಾಷ್ಟ್ರ ರಿಜಿಸ್ಟ್ರೇಷನ್‌ ಹೊಂದಿದ ಕಾರು ಇದಾಗಿದೆ. ಮಹಾರಾಷ್ಟ್ರದಲ್ಲಿ 20 ಲಕ್ಷ ರೂ. ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್‌ನಿಂದಲೂ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿದ್ದ. ಕಾರಿನ ಅನಧಿಕೃತ ಓಡಾಟದ ಬಗ್ಗೆ ಆರ್‌ಟಿಓಗೆ ಟ್ರಾಫಿಕ್‌ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದರು. ಬುಧವಾರ (ಜು.2) ಬೆಂಗಳೂರಿನ ಲಾಲ್‌ ಬಾಗ್‌ ಬಳಿ ಕಾರನ್ನು ತಡೆಹಿಡಿದ ಆರ್‌ಟಿಓ ಅಧಿಕಾರಿಗಳು ತಪಾಸಣೆ ನಡೆಸಿದಾಗ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಪಂಜಾಬ್‌ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್‌

    ನಂತರ ಕಾರನ್ನು ವಶಕ್ಕೆ ಪಡೆದ ಅಧಿಕಾರಿಗಳು ಜಯನಗರ 5ನೇ ಬ್ಲಾಕ್‌ನಲ್ಲಿರುವ ಮಾಲೀಕನ ನಿವಾಸದ ಮುಂದೆಯೇ ಮನೆ ಮುಂದೆಯೇ ಕಾರು ನಿಲ್ಲಿಸಿದ್ದಾರೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದು ತೆರಿಗೆ ಪಾವತಿಸಲು ಸಂಜೆ ವರೆಗೆ ಕಾಲಾವಕಾಶ ನೀಡಲಾಗಿದೆ. ಇದನ್ನೂ ಓದಿ: ಕೈಕೊಟ್ಟು ಬೇರೆ ಮದುವೆಯಾಗಲು ನಿರ್ಧರಿಸಿದ ಪ್ರೇಯಸಿ – ಲಾಡ್ಜ್‌ಗೆ ಕರೆಸಿ 20 ಬಾರಿ ಇರಿದು ಕೊಂದ ಪಾಗಲ್‌ ಪ್ರೇಮಿ

    ಟ್ಯಾಕ್ಸ್ ಕಟ್ಟಲು ಕಾರು ಮಾಲೀಕರು ಸಮಯಾವಕಾಶ ಕೇಳಿದ ಹಿನ್ನೆಲೆ ಸಂಜೆ ವರೆಗೆ ಡೆಡ್‌ಲೈನ್‌ ಕೊಟ್ಟಿದ್ದಾರೆ. ಅಷ್ಟರಲ್ಲಿ 1.58 ಕೋಟಿ ತೆರಿಗೆ ಕಟ್ಟದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಯ ತನಕ ಕಾರು ಆರ್‌ಟಿಓ ಅಧಿಕಾರಿಗಳ ಸುಪರ್ದಿಯಲ್ಲೇ ಇರಲಿದೆ ಎಂದು ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: UP | ರಾಂಗ್ ರೂಟ್‌ಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಟ್ರಕ್ – ತಂದೆ, 4 ಮಕ್ಕಳು ಸೇರಿ ಐವರು ದುರ್ಮರಣ

  • ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

    ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

    ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸ್ಥಗಿತಗೊಂಡ ಬೆನ್ನಲ್ಲೇ ಆರ್‌ಟಿಓ (RTO) ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಸೀಜ್ ಮಾಡಿದೆ.

    ಹೌದು, ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜೂ.16ರಿಂದ ಅನಧಿಕೃತ ಬೈಕ್ ಟ್ಯಾಕ್ಸಿಗಳು ಸ್ಥಗಿತಗೊಂಡಿವೆ. ಆದೇಶದ ಬೆನ್ನಲ್ಲೇ ಆರ್‌ಟಿಓ ಅಧಿಕಾರಿಗಳು ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. 11 ಆರ್‌ಟಿಓ ವ್ಯಾಪ್ತಿಯಲ್ಲಿ ಚಲಾಯಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಲಾಗಿದೆ. ಇಂದು ಸಹ ಹಲವು ತಂಡಗಳನ್ನ ರಚಿಸಿ ಆರ್‌ಟಿಒ ಕಾರ್ಯಚರಣೆಗಿಳಿದಿದೆ.ಇದನ್ನೂ ಓದಿ: ಹೊಸ ಐಟಿ ನೀತಿ ಮಾರ್ಗದರ್ಶನಕ್ಕಾಗಿ ಸರ್ಕಾರದಿಂದ ಎಐ ಕೌಶಲ್ಯ ಕುರಿತು ಅಧ್ಯಯನ: ಪ್ರಿಯಾಂಕ್ ಖರ್ಗೆ

    ಕಚೇರಿ                   ಬೈಕ್ ಟ್ಯಾಕ್ಸಿಗಳ ಸಂಖ್ಯೆ
    1.ಆರ್‌ಟಿಓ ಸೆಂಟ್ರಲ್ –         8
    2.ಆರ್‌ಟಿಓ ವೆಸ್ಟ್ –            16
    3.ಆರ್‌ಟಿಓ ಈಸ್ಟ್ –            12
    4.ಆರ್‌ಟಿಓ ನಾರ್ತ್ –         10
    5.ಆರ್‌ಟಿಓ ಸೌತ್ –           10
    6.ಜ್ಞಾನಭಾರತಿ –               5
    7.ದೇವನಹಳ್ಳಿ –                5
    8.ಯಲಹಂಕ. –                4
    9.ಲೆಕ್ಟ್ರಾನಿಕ್ ಸಿಟಿ –          15
    10.ಕೆ.ಆರ್.ಪುರಂ –          13
    11.ಚಂದಾಪುರ –               5

    ಟ್ರಾಫಿಕ್ ಕಡಿಮೆ, ಟ್ರಾವೆಲ್ ದರವೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ವಿಕ್ ಡ್ರಾಪ್ ಪಾಯಿಂಟ್. ಶರವೇಗದಲ್ಲಿ ಜನರಿಗೆ ಬೇಕಾದ ಜಾಗ ತಲುಪಿಸುವ ಕೆಲಸ ಮಾಡುತ್ತಿದ್ದದ್ದು ಬೈಕ್ ಟ್ಯಾಕ್ಸಿ. ವೈಟ್ ಬೋರ್ಡ್ನಲ್ಲಿ ಬೈಕ್ ಟ್ಯಾಕ್ಸಿ ಓಡಿಸೋದು ಸೇರಿ ಸುರಕ್ಷತೆ ವಿಚಾರದಲ್ಲಿ ಬೈಕ್ ಟ್ಯಾಕ್ಸಿ ಒಂದು ಹೆಜ್ಜೆ ಹಿಂದೆಯೇ ಉಳಿದುಕೊಂಡಿದೆ. ಇದೇ ಕಾರಣದಿಂದಾಗಿ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವ ಹಾಗಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಆರ್‌ಟಿಓ ಕೂಡ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸೂಚಿಸಿತ್ತು.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ – ನಿಷೇಧಿತ ವಸ್ತುಗಳು ಪತ್ತೆ

  • ಅಂತರರಾಜ್ಯಗಳಿಗೆ ಸಂಚರಿಸೋ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಆರ್‌ಟಿಓ ಗುಡ್‌ನ್ಯೂಸ್‌

    ಅಂತರರಾಜ್ಯಗಳಿಗೆ ಸಂಚರಿಸೋ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಆರ್‌ಟಿಓ ಗುಡ್‌ನ್ಯೂಸ್‌

    ಬೆಂಗಳೂರು: ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಟೂರಿಸ್ಟ್ ವಾಹನಗಳಿಗೆ ಆರ್‌ಟಿಓ ಗುಡ್‌ನ್ಯೂಸ್‌ ಕೊಟ್ಟಿದೆ. ಕಳೆದ ಹಲವು ವರ್ಷಗಳಿಂದ ಅಂತರರಾಜ್ಯ ಸಂಚಾರಕ್ಕೆ ಬೇಕಿದ್ದ ಸ್ಪೇಷಲ್ ಪರ್ಮಿಟ್ ವಿಚಾರವಾಗಿ, ಯೆಲ್ಲೋ ಬೋರ್ಡ್ ವಾಹನ (Yellow board Vehicle) ಮಾಲೀಕರಿಗೆ ಇದ್ದ ಕೆಲವು ನಿಯಮಗಳನ್ನ ಆರ್‌ಟಿಓ (RTO) ಸರಳೀಕರಣ ಮಾಡಿದೆ. ಹಾಗಾಗಿ ಇನ್ಮುಂದೆ ಹತ್ತೆ ಸೆಕೆಂಡುಗಳಲ್ಲಿ ಸ್ಪೇಷಲ್ ಪರ್ಮಿಟ್ ವಾಹನ ಸವಾರರ ಕೈ ಸೇರಲಿದೆ. ಅಷ್ಟಕ್ಕೂ ಹೇಗೆ ಅಂತೀರಾ ಮುಂದೆ ಓದಿ…

    ಪ್ರತಿದಿನ ಕರ್ನಾಟಕದಿಂದ (Karnataka) ಬೇರೆ ಬೇರೆ ರಾಜ್ಯಗಳಿಗೆ ಟೂರಿಸ್ಟ್ ಸೇರಿದಂತೆ ವ್ಯವಹಾರಿಕ ಕಾರ್ಯಗಳಿಗೆ ಸಾವಿರಾರು ಯೆಲ್ಲೋ ಬೋರ್ಡ್ ವಾಹನಗಳು ಸಂಚಾರ ಮಾಡುತ್ತವೆ. ಅಂತರರಾಜ್ಯಕ್ಕೆ ತೆರಳುವ ಮುನ್ನ ಪ್ರತಿ ಬಾರಿಯೂ ಮಾಲೀಕ ಅಥವಾ ಚಾಲಕ ಯಾವುದೇ ಜಿಲ್ಲೆಯಲ್ಲಿದ್ದರೂ ವಾಹನದ ಮೂಲ ದಾಖಲಾತಿಯೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದು ದಾಖಲೆ ನೀಡಿ ಕಾದು ಸ್ಪೇಷಲ್ ಪರ್ಮಿಟ್ ಪಡೆದ ಬಳಿಕವಷ್ಟೇ ಬೇರೆ ರಾಜ್ಯಗಳ ಎಂಟ್ರಿಗೆ ಅವಕಾಶ ಸಿಗುತ್ತಿತ್ತು. ಇದನ್ನೂ ಓದಿ: ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ – ವಿಜಯಪುರ ಕಾನ್ಸ್‌ಟೇಬಲ್‌ ಮನಕಲುಕುವ ಪೋಸ್ಟ್‌

    ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಕ್ಕೆ ಸುಮಾರು ಎರಡು ಮೂರು ದಿನ ಸಮಯ ಬೇಕಾಗಿತ್ತು. ಸದ್ಯ ಈಗ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ಮುಂದೆ ಬೆರಳ ತುದಿಯಲ್ಲಿ, ಸೆಕೆಂಡ್ ಗಳಲ್ಲೇ ಸ್ಪೆಷಲ್‌ ಪರ್ಮಿಟ್ (Special Permit) ಸಿಗಲಿದೆ.

    ಹೌದು. ರಾಜ್ಯದಿಂದ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಮುನ್ನ ರಾಜ್ಯ ಆರ್‌ಟಿಓನಿಂದ ವಿಶೇಷ ಅನುಮತಿ ಪಡೆಯಬೇಕು. ಅದರಂತೆ ಒಬ್ಬ ಮಾಲೀಕ ಅಥವಾ ಚಾಲಕ ಉದಾಹರಣೆಗೆ ದೂರದ ಬೆಳಗಾವಿಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಸಂಚಾರ ಮಾಡಬೇಕಿದ್ರು, ಬೆಂಗಳೂರಿನ ಕೇಂದ್ರ ಕಚೇರಿಯ ಕರ್ನಾಟಕ ಸಾರಿಗೆ ಅಥಾರಿಟಿಗೆ ಬಂದು ಕಾದು ಪರ್ಮಿಟ್ ಪಡೆದು, ಆ ಬಳಿಕ ರಾಜ್ಯ ಗಡಿ ದಾಟಬೇಕಿತ್ತು. ಜೊತೆಗೆ ಪರ್ಮಿಟ್ ನೀಡುವ ವಿಚಾರದಲ್ಲಿ ಕೆಲವು ಕಡೆ ಲಂಚ ಕೊಡಬೇಕೆಂಬ ಆರೋಪವೂ ಇತ್ತು. ಸದ್ಯ ಈಗ ಇವೆಲ್ಲದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.  ಇದನ್ನೂ ಓದಿ: 9 ವಿಶ್ವವಿದ್ಯಾಲಯಗಳ ಸ್ಥಗಿತ ವಿಚಾರ – ರಾಜ್ಯಪಾಲರ ಮಧ್ಯಪ್ರವೇಶ ಒತ್ತಾಯಿಸಿ ಬಿಜೆಪಿ ದೂರು

    ವಾಹನ್-4 ಆ್ಯಪ್ ಮೂಲಕ ಮಾಲೀಕ ತನ್ನ ವಾಹನದ ಮಾಹಿತಿಯನ್ನ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ್ರೆ, ಕೆಲವೇ ಸೆಕೆಂಡುಗಳಲ್ಲಿ ಪರಿಶೀಲನೆ ಮಾಡಿ, ದಾಖಲಾತಿ ಸರಿಯಿದ್ದಲ್ಲಿ ಹತ್ತೇ ಸೆಕೆಂಡುಗಳಲ್ಲಿ ನಿಮಗೆ ಪರ್ಮಿಟ್ ಸಿಗಲಿದೆ. ಇನ್ನೂ ಇದಕ್ಕೆ ತಗುಲುವ ಸಂಪೂರ್ಣ ವೆಚ್ಚ 2000 ರೂಪಾಯಿಗಳು ಮಾತ್ರ. ಈ ಹಿಂದೆ ಅಧಿಕಾರಿಗಳ ಜೊತೆ ನೇರ ಪರ್ಮಿಷನ್ ಪಡೆಯುವ ಸಂಧರ್ಭಗಳಲ್ಲಿ‌ ಪರ್ಮಿಟ್‌ಗೆ 1,000 ರೂ. ವರೆಗೆ ಖರ್ಚು ಬೀಳುತ್ತಿತ್ತು. ಸದ್ಯ ಆರ್‌ಟಿಓ ಹೊಸ ಯೋಜನೆಯಿಂದ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಸಮಯದ ಜೊತೆ ದುಡ್ಡು ಕೂಡ ಉಳಿತಾಯವಾಗಲಿದೆ.

    ಈ ಸಂಬಂಧ ಕಳೆದ ಹಲವು ವರ್ಷಗಳಿಂದ ಖಾಸಗಿ ಸಾರಿಗೆ ಒಕ್ಕೂಟ ಕೂಡ ಹೋರಾಟ ಮಾಡಿತ್ತು. ಸದ್ಯ ಈಗ ಸಂಘಟನೆಗಳ ಹೋರಾಟಕ್ಕೂ ಜಯ ಸಿಗುವ ಜೊತೆಗೆ ಸಾವಿರಾರು ಯೆಲ್ಲೋ ಬೋರ್ಡ್ ಮಾಲೀಕರಿಗೂ ಅನೂಕೂಲವಾಗಲಿದೆ. ಸದ್ಯ ಇದೇ ವಾರದಿಂದ ಸಂಪೂರ್ಣ ಪ್ರಕ್ರಿಯೆ ಜಾರಿಯಾಗಲಿದೆ. ಇದನ್ನೂ ಓದಿ: ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು – ನಿನ್ನೆ ಸಮರ್ಥನೆ, ಇಂದು ರಮ್ಯಾ ಆಕ್ಷೇಪ

  • ವಾಹನಗಳ ಮೇಲೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿದ್ರೆ ಕಾನೂನು ಕ್ರಮ – ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ!

    ವಾಹನಗಳ ಮೇಲೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿದ್ರೆ ಕಾನೂನು ಕ್ರಮ – ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ!

    – ದರ್ಶನ್‌ ಕೈದಿ ನಂಬರ್‌ ಟ್ರೆಂಡಾದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅರೆಸ್ಟ್ ನಂತರ ಅವರ ಫ್ಯಾನ್ಸ್ (Darshan Fans) ಅಂಧಾಭಿಮಾನ ಮಿತಿ ಮೀರಿದೆ. ವಾಹನಗಳ ಮೇಲೆ ದರ್ಶನ್ ಕೈದಿ ನಂಬರ್ (Darshan Prisoner Number) ಸೇರಿದಂತೆ ತರಹೇವಾರಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಅಭಿಮಾನ ಮೆರೆಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಆರ್‌ಟಿಓ ಎಚ್ಚರಿಕೆ ಕೊಟ್ಟಿದೆ.

    ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ (Bellary Jail) ಶಿಫ್ಟ್ ಆದ್ಮೇಲೆ ಅವರ ಅಭಿಮಾನಿಗಳು ವಾಹನಗಳ ಮೇಲೆ ತರಹೇವಾರಿ ಬರಹ ಬರೆದು ಅಂಧಾಭಿಮಾನ ಮೆರೆಯುತ್ತಿದ್ದಾರೆ. ದರ್ಶನ್‌ಗೆ ನೀಡಿರುವ ಕೈದಿ ಸಂಖ್ಯೆ, ಸೇರಿದಂತೆ ವಾಹನಗಳ (vehicles) ಮೇಲೆ ಪ್ರಚೋದನಕಾರಿ, ಬೇರೆ ನಟರ ಫ್ಯಾನ್ಸ್‌ಗೆ ಟಾಂಗ್ ಕೊಡುವಂತ ಬರಹಗಳ ಸ್ಟಿಕರ್‌ ಅಳವಡಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ನಿಗಾ ವಹಿಸಿರುವ ಪೊಲೀಸರು ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳು (RTO officers) ಹದ್ದಿನ ಕಣ್ಣಿಟ್ಟಿದ್ದು, ʻಡಿಬಾಸ್‌ʼ ಅಭಿಮಾನಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಪಯೋಗಕ್ಕೆ ಬಾರದ ಗೃಹಜ್ಯೋತಿ ಯೋಜನೆ – ವಿದ್ಯುತ್ ಇಲ್ಲದೇ ನಿತ್ಯ ಕತ್ತಲಲ್ಲೇ ಕಾಲ ಕಳೆಯುತ್ತಿದೆ ಈ ಗ್ರಾಮ

    ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ ಬಗ್ಗೆ ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆ. ನೆಚ್ಚಿನ ನಟರ ಫೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು ಬಾಹಿರ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: 1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ

    ಇಲ್ಲಿವರೆಗೆ ನಂಬರ್ ಪ್ಲೇಟ್ ಮೇಲೆ ಫೋಕಸ್ ಮಾಡ್ತಿದ್ವಿ. ಆದ್ರೆ ಕಾನೂನು ಪ್ರಕಾರ ಪ್ರಚೋದನೆ ಮಾಡುವ ಬರಹ ಮಾತ್ರವಲ್ಲ, ಯಾವುದೇ ಸ್ಟಿಕ್ಕರ್‌ಗಳಿಗೂ ಅವಕಾಶವಿಲ್ಲ. ಹಾಗಾಗಿ ಇನ್ಮುಂದೆ ಅನಧಿಕೃತ ಬರಹ ಹಾಕಿದರೆ, ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಒಂದು, ಎರಡು ಬಾರಿ ಎಚ್ಚರಿಕೆ ಕೊಡ್ತೀವಿ. 3ನೇ ಬಾರಿ ಅದೇ ತಪ್ಪು ಮಾಡಿದ್ರೆ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಮಲ್ಲಿಕಾರ್ಜುನ್‌ ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರು ಜಿಲ್ಲೆಯ ಹಲವೆಡೆ ಭಾರೀ ಮಳೆ: ಹಳ್ಳ ದಾಟುವಾಗ ಕೊಚ್ಚಿಹೋದ ಬ್ಯಾಂಕ್ ಉದ್ಯೋಗಿ

    ಹೌದು.. ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಆರ್‌ಟಿಒ ಇಲಾಖೆಗಳಿಗೆ ನಿರ್ದೇಶನ ಕೊಟ್ಟಿದೆ. ಅದರ ಅನ್ವಯವೇ ಅಧಿಕಾರಿಗಳು ಕೇಸು ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್‌ಟಿಒ ಇಲಾಖೆ ಮಾಡಿದೆ. ಕಳೆದ 3 ವರ್ಷಗಳಲ್ಲಿ ಈ ಸಂಬಂಧ ಹಲವು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನಾವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು. ಇನ್ಮೇಲೆ ಈ ರೀತಿ ಸ್ಟಾರ್ ವಾರ್ ರೀತಿ ಅನಾವಶ್ಯಕ ಬರಹ, ಟಾಂಗ್‌ ಕೊಡೋ ಬರಹಗಳನ್ನ ತೆಗೆದು ಹಾಕಿ, ಇಲ್ಲ ನಮ್ಮ ಕಠಿಣ ಕ್ರಮ ಗ್ಯಾರಂಟಿ ಅಂತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಚೀನಾ, ಫಿಲಿಪೈನ್ಸ್‌ ಗಡಿ ವಿವಾದ – ಶಮನವಾಗದ ದಶಕಗಳ ಉದ್ವಿಗ್ನತೆಗೆ ಕಾರಣವೇನು ಗೊತ್ತಾ? 

  • ಆರ್‌ಟಿಓ ಕಚೇರಿಗೆ ಆಟೋ ಡ್ರೈವರ್‌ಗಳ ಮುತ್ತಿಗೆ

    ಆರ್‌ಟಿಓ ಕಚೇರಿಗೆ ಆಟೋ ಡ್ರೈವರ್‌ಗಳ ಮುತ್ತಿಗೆ

    ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಆಟೋ, ಕ್ಯಾಬ್ ಚಾಲಕರು ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ರು. ಸಾವಿರಾರು, ಆಟೋ ಕ್ಯಾಬ್‍ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಶಾಂತಿನಗರದ ಬಿಟಿಎಸ್ ರೋಡ್ ಬ್ಲಾಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು.

    ಆರ್‌ಟಿಓ ಕಚೇರಿಗೆ ನುಗ್ಗಿದ ಚಾಲಕರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಪೊಲೀಸರನ್ನೇ ತಳ್ಳಿ ಸಾರಿಗೆ ಕಚೇರಿಗೆ ನುಗ್ಗಲು ಯತ್ನಿಸಿದ್ರು. ಸರ್ಕಾರ ಫೆಬ್ರವರಿಯಲ್ಲೇ ಒನ್ ಸಿಟಿ ಒನ್ ರೇಟ್ ಆದೇಶ ಹೊರಡಿಸಿದ್ದು, ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶ ಪಾಲನೆ ಮಾಡುತ್ತಿಲ್ಲ. ಆರ್‍ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಕಿಡಿಕಾರಿದ್ರು.

    ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ಲಾಭ ಪಡೆಯುತ್ತಿವೆ. ಆದರೆ ಚಾಲಕರಿಗೆ ಯಾವುದೇ ಲಾಭ ಸಿಗುತ್ತಿಲ್ಲ ಅಂತ ಕಿಡಿಕಾರಿದ್ರು. ಆಟೋ-ಕ್ಯಾಬ್‍ಗಳನ್ನು ರೋಡ್‍ಗೆ ಅಡ್ಡಲಾಗಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆ ಬೆನ್ನಲ್ಲೇ ಸಾರಿಗೆ ಇಲಾಖೆ 11 ವಿಶೇಷ ತಂಡ ರಚಿಸಿದ್ದು, ನಾಳೆಯಿಂದ ಬೈಕ್ ಟ್ಯಾಕ್ಸಿ ಮೇಲೆ ರೇಡ್ ಮಾಡಲಿದೆ. ಇದನ್ನೂ ಓದಿ: ಜು.8 ರಿಂದ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ಚಲುವರಾಯಸ್ವಾಮಿ

    ಆಟೋ ಚಾಲಕರ ಬೇಡಿಕೆಗಳೇನು..?
    1. ಒನ್ ಸಿಟಿ ಒನ್ ಫೇರ್ ಜಾರಿಯಾಗಬೇಕು
    2. ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು
    3. ಆರ್‌ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು
    4. ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು
    5. ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು