Tag: RTI Worker

  • ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ ಭಾರೀ ಅಕ್ರಮ – ಲೋಕಾಯುಕ್ತಕ್ಕೆ ದೂರು

    ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ ಭಾರೀ ಅಕ್ರಮ – ಲೋಕಾಯುಕ್ತಕ್ಕೆ ದೂರು

    ಮಂಡ್ಯ: ನಿರ್ಮಿತಿ ಕೇಂದ್ರ ಸರ್ಕಾರಿ ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳನ್ನು ಅಂದ್ರೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದಲ್ಲಿ ಕಟ್ಟಿಕೊಡುವ ಒಂದು ಇಲಾಖೆ ಆಗಿದೆ. ಆದ್ರೆ ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ (Mandya Nirmithi Kendra) ಮಾತ್ರ ಇದ್ದಕ್ಕೆ ತದ್ವಿರುದ್ಧವಾಗಿ ಕೆಲಸಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

    ಹೌದು. ಮಂಡ್ಯದ ನಿರ್ಮಿತಿ ಕೇಂದ್ರ ಕಳೆದ ಹಲವು ತಿಂಗಳಿನಿಂದ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದೆ. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರು ಸಿಬ್ಬಂದಿ ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಇಲ್ಲಿನ ಅಧಿಕಾರಿಗಳು ನಕಲಿ ಬಿಲ್ (Duplicate Bill) ಸೃಷ್ಟಿ ಮಾಡಿರುವುದರ ಜೊತೆಗೆ ನಕಲಿ ಕಾಮಗಾರಿಗೆ ಕೋಟಿ ಕೋಟಿ ಮುಗಂಡ ಹಣ ಬಿಡುಗಡೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ

    ಮಂಡ್ಯ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (Nirmithi Kendra MD) ನರೇಶ್ ಅವರ ಅವಧಿಯಲ್ಲಿ ಈ ಅಕ್ರಮಗಳು ಜರುಗಿವೆ ಎಂದು ಆರ್‌ಟಿಐ ಕಾರ್ಯಕರ್ತ ಮಧು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿಯನ್ನು ಆರಂಭಿಸಿದ ಬಳಿಕ ಮುಗಂಡ ಹಣವನ್ನು ಪಡೆದುಕೊಳ್ಳಬೇಕು. ಆದರೆ ಮದ್ದೂರಿನ ಹರಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಕಾಮಗಾರಿಯನ್ನು ಆರಂಭಿಸದೇ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ಇಷ್ಟೇ ಅಲ್ಲ ಇಲ್ಲಿ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಸುನೀಲ್ ಎಂಬ ಸಿಬ್ಬಂದಿ ಹೆಸರಿನಲ್ಲಿ 1,09,610 ರೂ. ಬಿಲ್ ಸೃಷ್ಠಿ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಇನ್ನೂ ಮಂಡ್ಯ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಐಟಿಐ ಕಾಲೇಜುಗಳ ವರ್ಕ್ ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್‌ಗಳ ಕಾಮಗಾರಿ ಸಿಎಸ್ಆರ್ ಅನುದಾನದ ಅಡಿ ಆರಂಭಗೊಂಡಿತ್ತು. ಆದರೆ ನಿರ್ಮಿತಿ ಕೇಂದ್ರ ಅಧಿಕಾರಿಗಳು ನಕಲಿ ಬಿಲ್ ಸೃಷ್ಠಿ ಮಾಡಿ ಹಣ ಡ್ರಾ ಮಾಡಿಕೊಂಡಿದ್ದು, ಇಲ್ಲೂ ಕೋಟಿ ಕೋಟಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: 

    ಈ ಪ್ರಕರಣಗಳ ಸಂಬಂಧ ಆರ್‌ಟಿಐ ಕಾರ್ಯಕರ್ತ ಲೋಕಾಯುಕ್ತಕ್ಕೆ (Lokayukta) ದಾಖಲೆ ಸಮೇತ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಲೋಕಾಯುಕ್ತ ಮುಂದೆ ಯಾವ ಕ್ರಮವನ್ನು ಅನುಸರಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್

  • ಸ್ನೇಹಮಹಿ ಕೃಷ್ಣ ಹೆಸರಲ್ಲಿ ಹಲವರ ಮೇಲೆ ಅನಾಮಧೇಯರಿಂದ ದೂರು

    ಸ್ನೇಹಮಹಿ ಕೃಷ್ಣ ಹೆಸರಲ್ಲಿ ಹಲವರ ಮೇಲೆ ಅನಾಮಧೇಯರಿಂದ ದೂರು

    ಮೈಸೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣನ (Snehamayi krishna) ಹೆಸರಿಗೆ ಈಗ ಸೂಪರ್ ಪವರ್ ಬಂದಿದೆ. ಸ್ನೇಹಮಯಿ ಹೆಸರನ್ನು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರಗಳು ಹೋಗುತ್ತಿವೆ ಅನ್ನೋ ಆರೋಪ ಕೇಳಿಬಂದಿದೆ.

    ಮೈಸೂರಿನ ಜಯಪುರ ಪೊಲೀಸ್ ಠಾಣೆಗೆ (Mysuru Jayapura Police) ಗಿರೀಶ್ ಎಂಬುವವರ ವಿರುದ್ಧ ದೂರು ಹೋಗಿದೆ. ಅಸಲಿಗೆ ಗಿರೀಶ್ ಯಾರು ಎಂಬುದೇ ಸ್ನೇಹಮಹಿ ಕೃಷ್ಣಗೆ ಗೊತ್ತಿಲ್ಲ. ವಿಚಾರಣೆ ಹೋದಾಗಲೇ ತಮ್ಮ ಹೆಸರು ದುರ್ಬಳಕೆಯಾಗಿರುವುದು ಸ್ನೇಹಮಹಿ ಕೃಷ್ಣಗೆ ಗೊತ್ತಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼಗೆ ಹೇಳಿಕೆ ನೀಡಿದ ಸ್ನೇಹಮಯಿ ಕೃಷ್ಣ, ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಪ್ರಶಿಕ್ಷಣಾರ್ಥಿಯ ಬಳಿ ಹಣ ಕೇಳಿದ ಬಗ್ಗೆ ದೂರು ಹೋಗಿದೆ. ಇದನ್ನೂ ಓದಿ: ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?

    ಸಂಚಾರಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದರೆ ನನ್ನ ಹೆಸರು ಹೇಳಿ ಶುಲ್ಕ ಕಟ್ಟದೇ ಹೋಗುತ್ತಿದ್ದಾರೆ. ಮೈಸೂರಿನ ಅರ್ಜುನ್‌ ಗೂರುಜಿ ವಿರುದ್ಧವು ದೂರು ಹೋಗಿದೆ. ನನ್ನ ಹೆಸರನ್ನ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರ ವೈಯಕ್ತಿಕ ವಿಚಾರಕ್ಕೆ ನನಗೆ ಕೆಟ್ಟ ಹೆಸರು ತರುಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡುತ್ತಿರುವ ಸ್ನೇಹಮಯಿ ಹೆಸರು ಬಳಸಿಕೊಂಡರೆ ನಮ್ಮ ಕೆಲಸ ಆಗುತ್ತದೆ ಎಂದು ಜನ ತಿಳಿದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

    ಒಳ್ಳೆತನಕ್ಕೆ ನನ್ನ ಹೆಸರು ಬಳಸಿಕೊಂಡು ಅದರಿಂದ ಸಮಾಜಕ್ಕೆ ಒಳ್ಳೆಯದಾದರೆ ತೊಂದರೆ ಇಲ್ಲ. ನಿಮ್ಮ ಬಳಿ ದಾಖಲೆಗಳಿದ್ರೆ ನನಗೆ ಕೊಡಿ ನಿಮ್ಮ ಪರ ನಾನು ಹೋರಾಟ ಮಾಡುತ್ತೇನೆ. ಆದ್ರೆ ನನ್ನ ಹೆಸರು ದುರ್ಬಳಕೆಯಾದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಡುಪಿ| ಮರದ ದಿಮ್ಮಿಗೆ ಡಿಕ್ಕಿಯಾಗಿ ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ