Tag: RTI activist

  • ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನ ಶವ ಪತ್ತೆ

    ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನ ಶವ ಪತ್ತೆ

    ಬೆಂಗಳೂರು: ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆರ್‌ಟಿಐ ಕಾರ್ಯಕರ್ತನೊಬ್ಬನ (RTI Activist) ಶವ ಆನೆಕಲ್‍ನ (Anekal) ಜಿಗಣಿ ಸಮೀಪದ ಮಾದಪಟ್ಟಣದಲ್ಲಿ ಪತ್ತೆಯಾಗಿದೆ. ಆರ್‌ಟಿಐ ಕಾರ್ಯಕರ್ತನ ಧಿಡೀರ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಮೃತ ಕಾರ್ಯಕರ್ತನನ್ನು ಪ್ರದೀಪ್ (38) ಎಂದು ಗುರುತಿಸಲಾಗಿದೆ. ಕಾರಿನ ಶೆಡ್‍ನಲ್ಲಿ ಆತನ ದೇಹ ಅರೆನಗ್ನವಾಗಿ ಪತ್ತೆಯಾಗಿದೆ. ಶೆಡ್‍ನಲ್ಲಿದ್ದ ಕಬ್ಬಿಣದ ಪೈಪ್ ಒಂದಕ್ಕೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದನ್ನೂ ಓದಿ: ವಿವಾಹಿತ ಮಹಿಳೆ ಜೊತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ – ಮಂಗಳೂರು ಮೂಲದ ವ್ಯಕ್ತಿ ಬಂಧನ

    ಶವ ಚೇರ್ ಮೇಲೆ ಇಳಿ ಬಿದ್ದಿದ್ದು, ಹಲವು ಅನುಮಾನಗಳಿಗೆ ಸಹ ಕಾರಣವಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾಗಭೂಷಣ್ ಕಾರು ಅಪಘಾತ: ಕುಡಿದಿರಲಿಲ್ಲ, ಸ್ಟೇಶನ್ ಬೇಲ್ ನೀಡಲಾಗಿದೆ- ಡಿಸಿಪಿ ಪ್ರತಿಕ್ರಿಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸೇತುವೆ ಮೇಲಿನಿಂದ ಹಾರಿ ವ್ಯಕ್ತಿ ಸಾವು

    ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸೇತುವೆ ಮೇಲಿನಿಂದ ಹಾರಿ ವ್ಯಕ್ತಿ ಸಾವು

    ದಾವಣಗೆರೆ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ವ್ಯಕ್ತಿಯೋರ್ವ ಸೇತುವೆ (Bridge) ಮೇಲಿನಿಂದ ಹಾರಿ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

    ಆರ್‌ಟಿಐ ಕಾರ್ಯಕರ್ತ (RTI Activist) ಹರೀಶ್ ಹಳ್ಳಿ (34) ಸಾವನ್ನಪ್ಪಿದ ವ್ಯಕ್ತಿ. ದಾವಣಗೆರೆ ತಾಲೂಕಿನ ತೋಳಹುಣಸೆ (Tolahunase) ಬಳಿಯ ಸೇತುವೆಯ ಬಳಿ ಘಟನೆ ನಡೆದಿದ್ದು, ಪೊಲೀಸ್ ಜೀಪಿನಿಂದ ತಪ್ಪಿಸಿಕೊಂಡು ಸೇತುವೆ ಮೇಲಿನಿಂದ ಜಿಗಿದು ಹರೀಶ್ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಕಬ್ಬಳ ಗ್ರಾಮದ ನಿವಾಸಿಯಾಗಿರುವ ಹರೀಶ್ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಸೈಟ್ ಅನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ ಆರೋಪವನ್ನು ಎದುರಿಸುತ್ತಿದ್ದ. ಈ ಕುರಿತು ಪೊಲೀಸರು ಆತನ ಪತ್ನಿಯ ಊರಾದ ಚನ್ನಗಿರಿ ಕಾಕನೂರು ಗ್ರಾಮದಿಂದ ಆತನನ್ನು ಕರೆತರುತ್ತಿದ್ದರು. ಇದನ್ನೂ ಓದಿ: ಸೈಟ್ ವಿಚಾರಕ್ಕೆ ಗ್ರಾಮಪಂಚಾಯ್ತಿ ಸಿಬ್ಬಂದಿಯಿಂದ ಮಹಿಳೆಗೆ ಚಾಕು ಇರಿತ

    ಭಾನುವಾರ ನಸುಕಿನ ಜಾವ 2:30ಕ್ಕೆ ಆತನನ್ನು ವಶಕ್ಕೆ ಪಡೆದು ಕರೆತರುವ ವೇಳೆ ಪೊಲೀಸ್ ಜೀಪಿನಿಂದ ತಪ್ಪಿಸಿಕೊಂಡು ಸೇತುವೆ ಮೇಲಿನಿಂದ ಹಾರಿದ್ದಾನೆ. ಸೇತುವೆ ಮೇಲಿನಿಂದ ಜಿಗಿದ ಪರಿಣಾಮ ಹರೀಶ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ- ವೃದ್ಧೆ ಸಾವು

    ಘಟನೆಯಿಂದ ಮೃತನ ಕುಟುಂಬಸ್ಥರು ಆಸ್ಪತ್ರೆ ಎದರು ಹೋರಾಟ ನಡೆಸುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಕರಣದ ವಿಚಾರವಾಗಿ ತನ್ನ ಪತಿಯನ್ನು ಕರೆದುಕೊಂಡು ಹೋಗಿ ಗಾಂಧಿನಗರ ಪೊಲೀಸ್ ಠಾಣೆಯ ಎಸ್‌ಐ ಕೃಷ್ಣಪ್ಪ ಹಾಗೂ ಇಬ್ಬರು ಪಿಸಿಗಳು ಸೇರಿ ಕೊಲೆ ಮಾಡಿದ್ದಾರೆ ಎಂದು ಹರೀಶ್ ಪತ್ನಿ ದೂರು ದಾಖಲಿಸಿದ್ದಾರೆ. ಈ ಕುರಿತು ದಾವಣಗೆರೆ ಎಸ್ಪಿ ಡಾ.ಕೆ. ಅರುಣ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

  • ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

    ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

    ಜೈಪುರ: ಆರ್‌ಟಿಐ ಕಾಯಕರ್ತನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಆರ್‌ಟಿಐ ಕಾಯಕರ್ತ ಅಮರರಾಮ್ ಗೋದಾರ್ ಹಲ್ಲೆಗೊಳಗಾದ ವ್ಯಕ್ತಿ. ಇವರು ಭ್ರಷ್ಟಾಚಾರ ಮತ್ತು ಗ್ರಾಮಪಂಚಾಯಿತಿ ಏರಿಯಾದಲ್ಲಿ ನಡೆಯತ್ತಿದ್ದ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋದಾರ್ ಅವರ ಮೇಲೆ ಎಂಟು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿ, ಅವರ ಮೇಲೆ ಕಬ್ಬಿಣ ಸಲಾಕೆಯಿಂದ ಬಡಿದು ಕೈಗಳನ್ನು ಮುರಿದಿದ್ದಾರೆ. ಅಲ್ಲದೆ, ಮೊಳೆಗಳಿಂದ ಕೈಕಾಲುಗಳಿಗೆ ಚುಚ್ಚಿ ಚಿತ್ರಹಿಂಸೆ ನೀಡಿದ್ದಾರೆ.

    ನಂತರ ತೀವ್ರ ಗಾಯಗೊಂಡಿದ್ದ ಅವರನ್ನು ನೋಡಿ ಗೋದಾರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೊದಾರ್ ಅವರನ್ನು ಜೋದ್‌ಪುರ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    POLICE JEEP

    ಬರ್ಮರ್ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭಾಗವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೋದಾರ್ ಆರೋಗ್ಯವನ್ನು ವಿಚಾರಿಸಿದ್ದಾರೆ. ಜೊತೆಗೆ ಘಟನೆ ಕುರಿತು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

  • ಗಣ್ಯರ ಜಯಂತಿ ಹೆಸ್ರಲ್ಲಿ ಕೋಟ್ಯಂತರ ರೂ. ಗುಳುಂ- ಆರ್‌ಟಿಐ ಕಾರ್ಯಕರ್ತ ದೂರು

    ಗಣ್ಯರ ಜಯಂತಿ ಹೆಸ್ರಲ್ಲಿ ಕೋಟ್ಯಂತರ ರೂ. ಗುಳುಂ- ಆರ್‌ಟಿಐ ಕಾರ್ಯಕರ್ತ ದೂರು

    ಬೆಂಗಳೂರು: ಗಣ್ಯರ ಜಯಂತಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಬಗ್ಗೆ ಅರೋಪಿಸಿ, ಸೂಕ್ತ ತನಿಖೆ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

    ಆರ್‌ಟಿಐ ಕಾರ್ಯಕರ್ತ ಮರಿಲಿಂಗಗೌಡ ಪಾಟೀಲ್ ಅನ್ಮೋರಿ ಎಂಬವರು ಕೋಟ್ಯಂತರ ರೂ. ವೆಚ್ಚದಲ್ಲಿ ಆಚರಿಸಿದ ವಿವಿಧ ಜಯಂತಿಗಳ ಬಗ್ಗೆ ಮಾಹಿತಿ ಕೊಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಗಳ ವಿರುದ್ಧ ದೂರು ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಹಲವಾರು ಗಣ್ಯರ ಜಯಂತಿ ಹೆಸರಲ್ಲಿ ಬರೋಬ್ಬರಿ 17 ಕೋಟಿ 65 ಲಕ್ಷ ರೂನ್ನು ಖರ್ಚು ಮಾಡಲಾಗಿದೆ. ಅನೇಕರ ಹೆಸರೇ ಗೊತ್ತಿಲ್ಲದ ಜಯಂತಿ ಆಚರಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಆದರೆ ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿವೆಯಾ? ಯಾವಾಗ ಆಚರಣೆ ಮಾಡಿದ್ದಾರೆ? ಯಾರು ಅತಿಥಿಯಾಗಿದ್ರು? ಎಲ್ಲಿ ಆಚರಣೆ ಮಾಡಿದ್ದಾರೆ? ಎಂಬುವುದರ ಬಗ್ಗೆ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

    2013 ರಿಂದ 2018 ವರೆಗೆ ನಡೆದ ವಿವಿಧ ಗಣ್ಯರ ಜಯಂತಿಗಳ ದಾಖಲೆ ಸಂಗ್ರಹಿಸಿದ ಆರ್ ಟಿ ಐ ಕಾರ್ಯಕರ್ತ ಮರಿಲಿಂಗಗೌಡ ಪಾಟೀಲ್ ಅನ್ಮೋರಿ, ಬೆರಳೆಣಿಕೆಯಷ್ಟು ಜಯಂತಿಗಳ ಆಚರಣೆ ಮಾತ್ರ ನೋಡಿದ್ದೇವೆ. ಕೆಲ ಅಧಿಕಾರಿಗಳು ಜಯಂತಿ ಮಾಡದೆ ಸುಳ್ಳು ದಾಖಲೆ ನೀಡಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಯಾವ ಜಯಂತಿಗೆ ಎಷ್ಟು ಖರ್ಚು?:
    1. ದೇವರ ದಾಸಿಮಯ್ಯ ಜಯಂತಿ – 69 ಲಕ್ಷ
    2. ಭಗವಾನ್ ಮಹವೀರ್ ಜಯಂತಿ – 69 ಲಕ್ಷ
    3. ಅಕ್ಕಮಹಾದೇವಿ ಜಯಂತಿ – 10 ಲಕ್ಷ
    4. ಬಸವ ಜಯಂತಿ – 69 ಲಕ್ಷ
    5. ಶಂಕರ ಜಯಂತಿ – 10 ಲಕ್ಷ
    6. ಭಗೀರಥ ಜಯಂತಿ – 69 ಲಕ್ಷ

    7. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ – 15 ಲಕ್ಷ
    8. ಶ್ರೀ ಕೃಷ್ಣ ಜಯಂತಿ – 69 ಲಕ್ಷ
    9. ಬ್ರಹ್ಮಶ್ರೀ ನಾರಾಯಣಗುರು ಜಯಂತಿ – 69 ಲಕ್ಷ
    10. ವಿಶ್ವಕರ್ಮ ಜಯಂತಿ – 69 ಲಕ್ಷ
    11. ಟಿಪ್ಪು ಸುಲ್ತಾನ್ ಜಯಂತಿ – 69 ಲಕ್ಷ
    12. ಕನಕ ಜಯಂತಿ – 69 ಲಕ್ಷ

    13. ಸಿದ್ದರಾಮ ಜಯಂತಿ – 69 ಲಕ್ಷ
    14. ಅಂಬಿಗರ ಚೌಡಯ್ಯ ಜಯಂತಿ – 69 ಲಕ್ಷ
    15. ವಾಲ್ಮೀಕಿ ಜಯಂತಿ – 69 ಲಕ್ಷ
    16. ಶಿವಾಜಿ ಜಯಂತಿ – 69ಲಕ್ಷ
    17. ದಲಿತ ವಚನಕಾರರ ಜಯಂತಿ – 69 ಲಕ್ಷ
    18. ಸರ್ವಜ್ಞ ಜಯಂತಿ – 69 ಲಕ್ಷ
    19. ಭಗೀರಥ ಜಯಂತಿ – 69 ಲಕ್ಷ
    20. ವಿವೇಕಾನಂದ ಜಯಂತಿ – 40 ಲಕ್ಷ

  • ಅಕ್ರಮ ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ

    ಅಕ್ರಮ ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ

    ಮಂಗಳೂರು: ಬಸವ ವಸತಿ ಯೋಜನೆಯ ಅಕ್ರಮವನ್ನು ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನೊಬ್ಬನ ಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿಸಿ ನೀರು ಎರಚಿ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದಿದೆ.

    ಉಜಿರೆ ಗ್ರಾಮ ಪಂಚಾಯತ್‍ಯ ವಿನುತಾ ರಜತ್ ಗೌಡ ಬಿಸಿ ನೀರು ಎರಚಿದ ಉಪಾಧ್ಯಕ್ಷೆ. ಇಂದು ವಿನುತಾ ಅವರ ಮನೆಗೆ ಅಧಿಕಾರಿಗಳ ಜೊತೆಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಆರ್‌ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್(41) ಅವರ ಹಲ್ಲೆ ಮಾಡಿದ್ದಾರೆ.

    ಬಸವ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ರಾಜೀವ ಗಾಂಧಿ ವಸತಿ ನಿಗಮಕ್ಕೆ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ತಾಲೂಕು ಪಂಚಾಯತ್ ಇಓ ಕುಸುಮಾಧರ್ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆಗೆ ಆಗಮಿಸಿದ್ದರು. ಉಜಿರೆ ಗ್ರಾಮದ ಮಲೆಬೆಟ್ಟಿನಲ್ಲಿರುವ ಉಪಾಧ್ಯಕ್ಷೆಯ ಮನೆಯ ಅಂಗಳದಲ್ಲಿ ವಿಚಾರಣೆ ನಡೆಯುತ್ತಿತು. ಈ ವೇಳೆ ವಿನುತಾ ರಜತ್ ಗೌಡ ಮನೆಯ ಒಳಗಿಂದ ಬಿಸಿನೀರು ತಂದು ಬಾಲಸುಬ್ರಹ್ಮಣ್ಯ ಭಟ್ ಮೇಲೆ ಎರಚಿದ್ದಾರೆ.

    ಬಾಲಸುಬ್ರಹ್ಮಣ್ಯ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚುಕಿತ್ಸೆ ಅಗತ್ಯವಾಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಜಿರೆ ಗ್ರಾಮ ಪಂಚಾಯತ್‍ನಲ್ಲಿ ಅನೇಕ ಅಕ್ರಮಗಳು ನಡೆದಿವೆ. ಈ ಕುರಿತು ನಾನು ದೂರು ನೀಡಿದ್ದರಿಂದ ನನ್ನ ಮೇಲೆ ಬಿಸಿ ನೀರು ಎರಚಿದ್ದಾರೆ. ಬೆನ್ನಿನ ಎಡಭಾಗದಲ್ಲಿ ಗುಳ್ಳೆಗಳಾಗಿದ್ದು, ಉರಿಯಲು ಆರಂಭಿಸಿವೆ ಎಂದು ಬಾಲಸುಬ್ರಹ್ಮಣ್ಯ ಭಟ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪೆಂಡಿಕ್ಸ್ ಇಲ್ಲದಿದ್ರೂ ಹಣದ ಆಸೆಗೆ ಆಪರೇಷನ್- ಮಿಮ್ಸ್ ವೈದ್ಯರ ವಿರುದ್ಧ ಗಂಭೀರ ಆರೋಪ

    ಅಪೆಂಡಿಕ್ಸ್ ಇಲ್ಲದಿದ್ರೂ ಹಣದ ಆಸೆಗೆ ಆಪರೇಷನ್- ಮಿಮ್ಸ್ ವೈದ್ಯರ ವಿರುದ್ಧ ಗಂಭೀರ ಆರೋಪ

    ಮಂಡ್ಯ: ಅಪೆಂಡಿಕ್ಸ್ ಇಲ್ಲದಿದ್ದರೂ ಹಣದಾಸೆಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆ ವೈದ್ಯ ಗೋಪಾಲಕೃಷ್ಣ ಆಪರೇಷನ್ ಮಾಡಲು ಮುಂದಾಗಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಕೇಶವಮೂರ್ತಿ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಅಪೆಂಡಿಕ್ಸ್ ಇಲ್ಲದಿದ್ದರೂ ವೈದ್ಯರು ಆಪರೇಷನ್ ಮಾಡಲು ಮುಂದಾಗಿದ್ದಾರೆ. ಅದ್ದರಿಂದ ಅವರು ಮಾಧ್ಯಮ ಮುಂದೆಯೇ ಬಹಿರಂಗವಾಗಿ ಆಪರೇಷನ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ಡಾಕ್ಟರ್ ಗೋಪಾಲಕೃಷ್ಣ ಅವರ ಬಳಿ ಯಾರೇ ಹೊಟ್ಟೆನೋವು ಎಂದು ಹೇಳಿಕೊಂಡು ಹೋದರೂ ಅವರಿಗೆ ಅಪೆಂಡಿಕ್ಸ್ ಇದೆ ಎಂದು ಹಣ ಕೇಳುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಪರೀಕ್ಷಿಸುವ ಸಲುವಾಗಿ ನಾನು ಅವರ ಬಳಿ ಸುಳ್ಳು ಹೇಳಿಕೊಂಡು ಹೊಟ್ಟೆ ನೋವು ಎಂದು ಹೋಗಿದ್ದೆ. ನನ್ನನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ತಪಾಸಣೆ ಮಾಡಿಸಿ, ನಿಮಗೆ ಅಪೆಂಡಿಕ್ಸ್ ಇದೆ ಎಂದು ಸುಳ್ಳು ಹೇಳಿ ಆಪರೇಷನ್ ಮಾಡಲು 5 ಸಾವಿರ ಖರ್ಚಾಗುತ್ತೆ ಎಂದು ಡಾಕ್ಟರ್ ಗೋಪಾಲಕೃಷ್ಣ ಹೇಳಿದ್ದರು. ಅಷ್ಟೇ ಅಲ್ಲದೇ ನನ್ನ ಬಳಿ ಒಂದೂವರೆ ಸಾವಿರ ಹಣ ಮುಂಗಡ ಪಡೆದು, ಆಪರೇಷನ್ ಮಾಡುವ ದಿನ ಉಳಿದ ಮೂರೂವರೆ ಸಾವಿರ ಹಣ ನೀಡುವಂತೆ ಹೇಳಿದ್ದಾರೆ ಎಂದು ಕೇಶವಮೂರ್ತಿ ಆರೋಪ ಮಾಡಿದ್ದಾರೆ.

    ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಲು ಸೌಲಭ್ಯವಿದ್ದರೂ ರೋಗಿಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗೆ ಪರೀಕ್ಷೆ ಮಾಡಿಸಿಕೊಳ್ಳಲು ಕಳುಹಿಸುತ್ತಾರೆ. ಅಷ್ಟೇ ಅಲ್ಲದೇ ಡಾಕ್ಟರ್ ಗೋಪಾಲಕೃಷ್ಣ ಮತ್ತು ನಾನು ಅಪೆಂಡಿಕ್ಸ್ ಆಪರೇಷನ್ ಬಗ್ಗೆ ಮಾತನಾಡಿರುವುದು ಹಾಗೂ ನಾನು ಅವರಿಗೆ ದುಡ್ಡು ಕೊಟ್ಟಿರುವುದನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದೇನೆ. ಈ ಬಗ್ಗೆ ದಾಖಲೆಗಳ ಸಮೇತ ಜಿಲ್ಲಾಧಿಕಾರಿ ಮಂಜುಶ್ರೀ, ಮಿಮ್ಸ್ ನಿರ್ದೇಶಕರಾದ ಪ್ರಕಾಶ್ ಹಾಗೂ ಉಸ್ತುವಾರಿ ಸಚಿವ ಪುಟ್ಟರಾಜು ಅವರಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

    ಒಂದೊಮ್ಮೆ ನನಗೆ ಅಪೆಂಡಿಕ್ಸ್ ಇದ್ದರೆ ಮಾಧ್ಯಮದ ಎದುರು ಬಹಿರಂಗವಾಗಿ ಆಪರೇಷನ್ ಮಾಡಲಿ ಎಂದು ದೂರುದಾರ ಕೇಶವಮೂರ್ತಿ ತಿಳಿಸಿದ್ದಾರೆ. ಆದರೆ ಎಲ್ಲ ಆರೋಪಗಳನ್ನು ನಿರಾಕರಿಸಿರುವ ವೈದ್ಯ ಗೋಪಾಲಕೃಷ್ಣ, ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv