Tag: RT Nagar

  • ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಬೆಂಗಳೂರು: ಬ್ರೆಜಿಲ್ (Brazil) ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಮೇಲೆ ಡೆಲಿವರಿ ಬಾಯ್‌ನನ್ನು (Delivery Boy) ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಆರೋಪಿಯನ್ನು ಕುಮಾರ್ ರಾವ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ:ಪಶ್ಚಿಮ ಟರ್ಕಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳು ನೆಲಸಮ

    ಈ ಸಂಬಂಧ ಸಂತ್ರಸ್ತೆ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ ಡೆಲಿವರಿ ಬಾಯ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ, ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

    ಅ.17ರಂದು ಬ್ರೆಜಿಲ್ ಮೂಲದ ಮಾಡೆಲ್ ಆ್ಯಪ್ ಒಂದರಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಬಾಯ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೀಡಾದ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಕೂಡಲೇ ಡೆಲಿವರಿ ಬಾಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಮಾಡೆಲ್ ತಾನು ಕೆಲಸ ಮಾಡುವ ಕಂಪನಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತ ಕೆಲಸ ಮಾಡುತ್ತಿದ್ದ ಕಂಪನಿ ಕೂಡ ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಹೇಳಿದ್ದು, ತನಿಖೆಗೆ ಸಹಕರಿಸುವುದಾಗಿ ಹೇಳಿದೆ ಎನ್ನಲಾಗಿದೆ.ಇದನ್ನೂ ಓದಿ:ಗೋವಾ-ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ; ಇಬ್ಬರು ಪೊಲೀಸರ ವಶಕ್ಕೆ

  • ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಗಲಾಟೆಯಾಗಿ ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸದಾಶಿವನಗರದಲ್ಲಿ (Sadashiva Nagar) ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಶಂಕರ್ ಮತ್ತು ಅರವಿಂದ್ ಎಂದು ಗುರುತಿಸಲಾಗಿದ್ದು, ಸಿಗರೇಟ್ ಖರೀದಿಸುವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡು ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಆರ್‌ಟಿ ನಗರದ (RT Nagar) ಬಾರ್ ಬಳಿಯಿರುವ ಪಾನ್‌ಶಾಪ್‌ವೊಂದಕ್ಕೆ ಇಬ್ಬರು ತೆರಳಿದ್ದರು. ಈ ವೇಳೆ ಅಂಗಡಿಯವನಿಗೆ ಇಬ್ಬರು ಒಟ್ಟಿಗೆ ಸಿಗರೇಟ್ ಕೊಡುವಂತೆ ಕೇಳಿದ್ದರು. ಅಂಗಡಿಯವ ಇಬ್ಬರ ಪೈಕಿ ಒಬ್ಬನಿಗೆ ಸಿಗರೇಟ್ ನೀಡಿದ್ದ. ಆಗ ಇನ್ನೋರ್ವ ನಾನು ಮೊದಲು ಸಿಗರೇಟ್ ಕೇಳಿದ್ದು, ಹೀಗಾಗಿ ನಾನೇ ಮೊದಲು ಸಿಗರೇಟ್ ತೆಗೆದುಕೊಳ್ಳಬೇಕು ಎಂದು ಕಿರಿಕ್ ಮಾಡಿದ. ಅಲ್ಲಿಂದ ಇಬ್ಬರ ನಡುವೆ ಜಗಳ ಶುರುವಾಯಿತು.

    ಆರ್‌ಟಿ ನಗರದಿಂದ ಇಬ್ಬರು ಆರೋಪಿಗಳು ಸದಾಶಿವ ನಗರದ (Sadashiva Nagar) ಕಡೆಗೆ ಬಂದಿದ್ದಾರೆ. ಈ ವೇಳೆ ಓರ್ವ ರಿಪೀಸ್‌ ಪಟ್ಟಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.

    ಘಟನೆ ಬಳಿಕ ಸದಾಶಿವ ನಗರ ಪೊಲೀಸರು (Sadashiva Nagar Police) ಕೊಲೆಯತ್ನ ಕೇಸ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

  • ಬೆಂಗಳೂರಲ್ಲಿ ಧರೆಗೆ ಉರುಳಿದ ಬೃಹತ್ ಮರದ ಕೊಂಬೆ – ನಾಲ್ವರು ಜಸ್ಟ್ ಮಿಸ್!

    ಬೆಂಗಳೂರಲ್ಲಿ ಧರೆಗೆ ಉರುಳಿದ ಬೃಹತ್ ಮರದ ಕೊಂಬೆ – ನಾಲ್ವರು ಜಸ್ಟ್ ಮಿಸ್!

    ಬೆಂಗಳೂರು: ಬೃಹತ್ ಮರದ ಕೊಂಬೆಯೊಂದು ಧರೆಗುರುಳಿದ್ದು, ನಾಲ್ವರು ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ಬ್ಯಾಂಕ್ (Mysuru Bank) ಸರ್ಕಲ್ ಬಳಿಯ ಪ್ಯಾಲೇಸ್ ರೋಡ್‌ನ (Palace Road) ಅಂಡರ್‌ಪಾಸ್ ಬಳಿ ನಡೆದಿದೆ.

    ನಿನ್ನೆ (ಡಿ.06) ರಾತ್ರಿ 11:20ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಚಾಲಕ ಕಾರ್ತಿಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.ಇದನ್ನೂ ಓದಿ: ಗೇಮಿಂಗ್ ಆಪ್‍ನಲ್ಲಿ 3 ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

    ಮಗು ಸೇರಿದಂತೆ ನಾಲ್ವರು ಕಾರಿನಲ್ಲಿ ಆರ್.ಟಿ ನಗರ (RT Nagar) ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ಯಾಲೇಸ್ ರೋಡ್‌ನ ಅಂಡರ್‌ಪಾಸ್ ಬಳಿ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಂಡರ್‌ಪಾಸ್‌ನ ತಡೆಗೋಡೆಯಿಂದಾಗಿ ನಾಲ್ವರ ಜೀವ ಉಳಿದಿದೆ.

    ಕಾರು ರೋಡಿನ ಮಧ್ಯ ಭಾಗದಲ್ಲಿದ್ದ ಕಾರಣ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಿದರು. ತಡರಾತ್ರಿ 1 ಗಂಟೆ ಸುಮಾರಿಗೆ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

  • ಬೆಂಗಳೂರಿನಲ್ಲಿ ಹೈಟೆನ್ಶನ್ ವೈಯರ್‌ಗೆ ಬಾಲಕ ಬಲಿ

    ಬೆಂಗಳೂರಿನಲ್ಲಿ ಹೈಟೆನ್ಶನ್ ವೈಯರ್‌ಗೆ ಬಾಲಕ ಬಲಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೈಟೆನ್ಶನ್ ವೈಯರ್ ಗೆ ಮತ್ತೊಂದು ಜೀವ ಬಲಿಯಾಗಿದೆ. ಆರ್‍ಟಿ ನಗರದ ಚಾಮುಂಡಿ ನಗರದ ಚಿಂಗಮ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.

    ಗಾಳಿಪಟ ಬಿಡಲು ಹೋಗಿ ಹೈ ಟೆನ್ಶನ್ ವೈಯರ್ (High Tension Wire) ತಗುಲಿ 11 ವರ್ಷದ ಅಬೂಬಕ್ಕರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಸೋಮವಾರ ಈ ಘಟನೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆ (Victoria Hospital) ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಅಬೂಬಕ್ಕರ್ ಮೃತಪಟ್ಟಿದ್ದಾನೆ.

    ಇದೇ ಜಾಗದಲ್ಲಿ ಈ ಹಿಂದೆ ನಾಲ್ವರು ಬಾಲಕರು ಹೈ ಟೆನ್ಶನ್ ವೈಯರ್ ಗೆ ಬಲಿಯಾಗಿದ್ದು, ಇದು ಐದನೇ ಘಟನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮನೆಯ ಮೇಲೆಯೇ ಹಾದು ಹೋಗಿರುವ ಹೈಟೆನ್ಶ್ ವೈಯರ್, ಟೆರೇಸ್ ಮೇಲಿಂದ ಕೈಗೆ ತಾಕುವಂತಿದೆ. ಇದನ್ನೂ ಓದಿ: ಕಾಮಾಕ್ಷಿ ಪಾಳ್ಯದಲ್ಲೊಂದು ವಿಚಿತ್ರ ಕೊಲೆ- ತಾನು ನಿಲ್ಲಿಸಿದ್ದ ಜಾಗದಲ್ಲಿ ಬಸ್ ನಿಲ್ಲಿಸಿದ್ದಕ್ಕೆ ಮರ್ಡರ್

    ಹೈಟೆನ್ಶನ್ ವೈಯರ್ ಗಿಂತ ಮನೆಗಳು ಎತ್ತರದಲ್ಲಿವೆ. ಹೀಗಾಗಿ ವೈಯರ್‍ಗಳು ಮನೆಯ ಮೇಲೆ ಕೈಗೆ ತಾಕುವಂತಿವೆ. ಹೆನ್ಶನ್ ವೈಯರ್ ಹಾದು ಹೋದ ಜಾಗದಲ್ಲಿ ಪಾರ್ಕ್ ಕೂಡ ಇದೆ. ಈ ಪಾರ್ಕ್ ಗೆ ಬರೋ ಮಕ್ಕಳಿಗೆ, ವೃದ್ಧರಿಗೂ ಕಂಟಕ ಎದುರಾಗುವ ಸಾಧ್ಯತೆಗಳಿವೆ. ಘಟನೆ ನಡೆದ ಬಳಿಕವೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಬೆಸ್ಕಾಂ ಅಧಿಕಾರಿಗಳ ಮೇಲೆ ದೂರು ದಾಖಲಿಸಿಕೊಳ್ಳಲು, ಆರ್ ಟಿ ನಗರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಮಗುವಿನದ್ದೇ ತಪ್ಪು ಎಂದು ದೂರು ದಾಖಲಿಸಿಕೊಳ್ಳದೇ, ಪೋಷಕರನ್ನ ಬೈದು ಕಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲಿ ಸಾವು

    ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲಿ ಸಾವು

    – ಬಿಬಿಎಂಪಿಗೆ ಸವಾಲಾದ ಸಾವಿನ ಪ್ರಕರಣ

    ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆ ವಾಕಿಂಗ್ ಬಂದಿದ್ದ ವ್ಯಕ್ತಿ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.

    ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವುದು ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿದೆ. ಇದರ ನಡುವೆ ಏಕಾಏಕಿ ವರದಿಯಾಗುತ್ತಿರುವ ಸಾವಿನ ಪ್ರಕರಣಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಬದಲಾಗುತ್ತಿವೆ.

    ಸದ್ಯ ನಗರದ ಆರ್.ಟಿ ನಗರದ ಪಾರ್ಕಿನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಮೃತ ವ್ಯಕ್ತಿ ಯಾರು ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಪಾರ್ಕಿನಲ್ಲಿ ವ್ಯಕ್ತಿ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೊರೊನಾ ಭಯದ ಕಾರಣ ಸಾರ್ವಜನಿಕರು ವ್ಯಕ್ತಿ ಕುಸಿದು ಬಿದ್ದರೂ ಯಾರು ವ್ಯಕ್ತಿಯ ಬಳಿ ತೆರಳಿ ಸಹಾಯ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಸದ್ಯ ಮೃತ ದೇಹದ ಕೊರೊನಾ ಪರೀಕ್ಷೆ ನಡೆದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

    ನಗರದಲ್ಲಿ ಏಕಾಏಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾತ್ತಿದ್ದು, ಹಲವು ಪ್ರಕರಣಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿವೆ. ಅಲ್ಲದೇ ಮೃತರ ಮನೆಯವರಿಗೂ ಪಾಸಿಟಿವ್ ಪತ್ತೆ ಆಗುತ್ತಿದೆ. ಸದ್ಯ ಇಂತಹ ಸಾವಿನ ಪ್ರಕರಣಗಳು ಬಿಬಿಎಂಪಿ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ.

  • ಮುಖ್ಯ ಪೇದೆಗೆ ಚಾಕು ಇರಿದ ದುಷ್ಕರ್ಮಿಗಳು

    ಮುಖ್ಯ ಪೇದೆಗೆ ಚಾಕು ಇರಿದ ದುಷ್ಕರ್ಮಿಗಳು

    ಬೆಂಗಳೂರು: ಮಫ್ತಿಯಲ್ಲಿದ್ದ ಮುಖ್ಯ ಪೇದೆಗೆ ದುಷ್ಕರ್ಮಿಗಳು ಹೊಟ್ಟೆಯ ಭಾಗಕ್ಕೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಚಾಮುಂಡಿ ನಗರದಲ್ಲಿ ನಡೆದಿದೆ.

    ನಾಗರಾಜ್ ದುಷ್ಕರ್ಮಿಗಳಿಂದ ಚಾಕು ಇರಿತಕೊಳಗಾದ ಮುಖ್ಯ ಪೇದೆ. ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಚಾಮುಂಡಿ ನಗರದಲ್ಲಿ ಪುಡಾರಿಗಳನ್ನ ಮಟ್ಟ ಹಾಕಲು ನಾಗರಾಜ್ ಮಪ್ತಿಯಲ್ಲಿ ಸ್ಥಳಕ್ಕೆ ಹೋಗಿದ್ದರು. ನಾಲ್ಕೈದು ಮಂದಿ ಪುಡಾರಿಗಳು ನಿರ್ಮಾಣ ಹಂತದ ಕಟ್ಟದ ಒಳಗಡೆ ಕುಳಿತು ತಲೆ ಹರಟೆ ಮಾಡುತ್ತಿದ್ದರು.

    ಕೂಡಲೇ ನಾಗರಾಜ್ ಪುಂಡರನ್ನ ಬಂಧಿಸಲು ಹೋಗಿದ್ದಾರೆ. ನಾಲ್ಕೈದು ಯುವಕರಲ್ಲಿ ಮೂವರು ನಾಗರಾಜ್ ಬಳಿ ಇದ್ದ ವಾಕಿಟಾಕಿ ನೋಡಿ ಎಸ್ಕೇಪ್ ಆಗಿದ್ದಾರೆ. ಉಳಿದ ಇಬ್ಬರನ್ನ ಬಂಧಿಸಿ ಠಾಣೆಗೆ ಕರೆತರಲು ಮುಂದಾಗಿದ್ದ ನಾಗರಾಜ್ ಹೊಟ್ಟೆಯ ಭಾಗಕ್ಕೆ ಚಾಕು ಚುಚ್ಚಿ ಎಸ್ಕೇಪ್ ಆಗಿದ್ದಾರೆ.

    ಘಟನೆಯಲ್ಲಿ ಗಾಯಗೊಂಡಿರುವ ನಾಗಾರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ. ನಗರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.