Tag: RSS shorts

  • RSS ಚಡ್ಡಿ ಸುಟ್ಟ ಫೋಟೋ ಅಪ್ಲೋಡ್ – ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

    RSS ಚಡ್ಡಿ ಸುಟ್ಟ ಫೋಟೋ ಅಪ್ಲೋಡ್ – ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

    ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‍ಎಸ್) ಚಡ್ಡಿಯನ್ನು ಸುಡುತ್ತಿರುವ ಫೋಟೋವನ್ನು ಕಾಂಗ್ರೆಸ್ ಶೇರ್ ಮಾಡಿಕೊಳ್ಳುವುದರ ಮೂಲಕ ಬಿಜೆಪಿಯನ್ನು ಕಟುವಾಗಿ ಟೀಕಿಸಿದೆ.

    ಆರ್‌ಎಸ್‍ಎಸ್ ಚಡ್ಡಿ ಸುಡುತ್ತಿರುವ ಫೋಟೋವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡ ಬಳಿಕ ರಾಜಕೀಯದಲ್ಲಿ ಘರ್ಷಣೆ ಶುರುವಾಗಿದೆ. ಬಿಜೆಪಿಯಿಂದ ಟೀಕಿಸುವ ಭರದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಚಾರ ನಡೆಸುತ್ತಿರುವ ವೇಳೆಯೇ ಕಾಂಗ್ರೆಸ್ ಆರ್‌ಎಸ್‍ಎಸ್ ಚಡ್ಡಿಯ ಫೋಟೋವನ್ನು ಶೇರ್ ಮಾಡಿದ್ದು ಎರಡು ಪಕ್ಷಗಳ ನಡುವೆ ಇದೀಗ ವಾಗ್ವಾದ ಆರಂಭವಾಗಿದೆ.

    ಚಡ್ಡಿ ಸುಡುತ್ತಿರುವ ಫೋಟೋ ಜೊತೆಗೆ, ದೇಶವನ್ನು ದ್ವೇಷದ ಸಂಕೋಲೆಯಿಂದ ಮತ್ತು ಬಿಜೆಪಿ-ಆರ್‌ಎಸ್‍ಎಸ್ ಹಾನಿಯಿಂದ ಮುಕ್ತಗೊಳಿಸಲು ನಾವು ಹಂತ ಹಂತವಾಗಿ ಗುರಿ ತಲುಪುತ್ತಿದ್ದೇವೆ ಎಂದು ಕಾಂಗ್ರೆಸ್ ಬರೆದುಕೊಂಡಿದೆ. ಇದನ್ನೂ ಓದಿ: 3 ತಿಂಗಳಲ್ಲಿ 100 ಕೋಟಿ ರೂ. ಸೀಜ್ ಮಾಡಿದ ED – ಈ ಹಣ ಏನ್ ಮಾಡ್ತಾರೆ ಗೊತ್ತಾ?

    ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, ನಾನು ರಾಹುಲ್ ಗಾಂಧಿಗೆ ಈ ದೇಶದಲ್ಲಿ ಹಿಂಸೆ ಬೇಕೇ ಎಂಬ ಪ್ರಶ್ನೆಯನ್ನು ಕೇಳಲು ಬಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಮತ್ತೊಂದೆಡೆ ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು, ಈ ಫೋಟೋವು ಕಾಂಗ್ರೆಸ್ ರಾಜಕೀಯದ ಸಂಕೇತವಾಗಿದ್ದು, ದೇಶದಲ್ಲಿ ಬೆಂಕಿ ಹೊತ್ತಿಸುತ್ತಿದೆ. ಈ ಹಿಂದೆ ಅವರು ಹಚ್ಚಿದ ಬೆಂಕಿ ದೇಶದ ಬಹುತೇಕ ಭಾಗವನ್ನು ಸುಟ್ಟು ಹಾಕಿದೆ. ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಉಳಿದಿರುವ ಕೆಂಡ ಶೀಘ್ರದಲ್ಲೇ ಬೂದಿಯಾಗಲಿದೆ ಎಂದು ಹೇಳಿದ್ದಾರೆ.

    1984ರಲ್ಲಿ ಕಾಂಗ್ರೆಸ್ ಬೆಂಕಿ ದೆಹಲಿಯನ್ನು ಸುಟ್ಟು ಹಾಕಿತು. 2002ರಲ್ಲಿ ಗೋದ್ರಾದಲ್ಲಿ 59 ಕರಸೇವಕರನ್ನು ಜೀವಂತವಾಗಿ ಸುಟ್ಟು ಹಾಕಿತು. ಈಗ ಮತ್ತೆ ಹಿಂಸೆಯ ಕರೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]