Tag: RSS publictv

  • ಏನಯ್ಯ ಪ್ರಮೋದ್ ಬಿಜೆಪಿ ಸೇರ್ತಿಯಂತೆ- ಸಿಎಂ ಪ್ರಶ್ನೆಗೆ ಸಚಿವ ಉತ್ತರಿಸಿದ್ದು ಹೀಗೆ

    ಏನಯ್ಯ ಪ್ರಮೋದ್ ಬಿಜೆಪಿ ಸೇರ್ತಿಯಂತೆ- ಸಿಎಂ ಪ್ರಶ್ನೆಗೆ ಸಚಿವ ಉತ್ತರಿಸಿದ್ದು ಹೀಗೆ

    ಮಂಗಳೂರು: ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಸಂಪೂರ್ಣ ಅಲ್ಲಗಳೆದಿದ್ದಾರೆ.

    ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಮೋದ್ ಈ ಬಗ್ಗೆ ನೂರು ಸಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೂ ಬಿಜೆಪಿಯವರು ಬೇಕೆಂದೇ ಇಂಥ ಹೇಳಿಕೆ ನೀಡಿ ಪ್ರಮೋದ್ ಇಮೇಜ್ ಹಾಳು ಮಾಡುತ್ತಿದ್ದಾರೆ. ಇದು ಮಧ್ವರಾಜ್ ತೇಜೋವಧೆ ಮಾಡುವ ಯತ್ನ ಅಂತಾ ದೂರಿದ್ರು.

    ಅಲ್ಲದೆ, ಸ್ವತಃ ಪ್ರಮೋದ್ ಮಧ್ವರಾಜ್ ಅವರನ್ನೇ ಹತ್ತಿರಕ್ಕೆ ಕರೆದು ಸ್ಪಷ್ಟನೆ ಕೊಡುವಂತೆ ಹೇಳಿದ್ರು. ಸಿಎಂ ಮಾತಿಗೆ ಸಚಿವ ಪ್ರಮೋದ್ ಕೂಡ ದನಿಗೂಡಿಸಿದ್ರು. ಇನ್ನು ಸಂಸದ ನಳಿನ್ ಕುಮಾರ್ ಈ ಬಗ್ಗೆ ಹೇಳಿದ್ದಾರಲ್ಲ ಅನ್ನೋ ಪ್ರಶ್ನೆಗೆ ನಳಿನ್ ಕುಮಾರ್ ಗೆ ಬುದ್ಧಿಯಿಲ್ಲ. ಸಂಸ್ಕಾರ ಇಲ್ಲ. ಏನ್ ಮಾತಾಡ್ತಾರೆ ಅಂತ ಅವರಿಗೇ ಗೊತ್ತಿರಲ್ಲ. ಅವರ ಬಗ್ಗೆ ಯಾಕಪ್ಪಾ ಮಾತನಾಡುತ್ತೀರಿ ಅಂತಾ ಮರು ಪ್ರಶ್ನೆ ಮಾಡಿದ್ರು.

    ಬಿಜೆಪಿ – ಆರ್ ಎಸ್‍ಎಸ್ ನ ಸಾಕಷ್ಟು ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ಅದನ್ನೆಲ್ಲ ಹೇಳೋಕಾಗುತ್ತಾ ಅಂತಾ ಪ್ರಮೋದ್ ಮಧ್ವರಾಜ್ ವ್ಯಂಗ್ಯವಾಡಿದ್ರು.

    ಇದನ್ನೂ ಓದಿ: ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

    ಪ್ರಮೋದ್ ಮಧ್ವರಾಜ್ ಅವರು ಉಡುಪಿಯ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್ 16ರಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಅವರನ್ನು ಭೇಟಿ ಆಗಿದ್ದರು. ಭೇಟಿ ಬಳಿಕ ಪ್ರಮೋದ್ ಅವರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎನ್ನುವ ಚರ್ಚೆ ಆರಂಭವಾಗಿತ್ತು. ಆದರೆ ಇದನ್ನು ನಿರಾಕರಿಸಿದ್ದ ಪ್ರಮೋದ್ ಮಧ್ವರಾಜ್, ಇದೊಂದು ಆಕಸ್ಮಿಕ ಭೇಟಿ ಎಂದು ಹೇಳಿ ಚರ್ಚೆಗೆ ವಿರಾಮ ಹಾಕಿದ್ದರು.

    https://www.youtube.com/watch?v=RE3QRb67N_Q

  • ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ- ಆರ್‍ಎಸ್‍ಎಸ್ ಪ್ರಮುಖರಿಗೆ ಮೋಹನ್ ಭಾಗವತ್ ಸೂಚನೆ

    ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ- ಆರ್‍ಎಸ್‍ಎಸ್ ಪ್ರಮುಖರಿಗೆ ಮೋಹನ್ ಭಾಗವತ್ ಸೂಚನೆ

    ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಇದೀಗ ನೇರವಾಗಿ ಆರ್‍ಎಸ್‍ಎಸ್ ರಂಗಕ್ಕಿಳಿದಿದೆ. ಸ್ವತಂತ್ರ ಧರ್ಮದ ಬೇಡಿಕೆಯಿಂದ ಹಿಂದೆ ಸರಿಯುವಂತೆ ಲಿಂಗಾಯತ ಮಠಾಧೀಶರು ಹಾಗೂ ಮುಖಂಡರ ಮನವೊಲಿಸುವಂತೆ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರಾಂತ ಬೈಠಕ್‍ನಲ್ಲಿ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

    ವೀರಶೈವರು ಮತ್ತು ಲಿಂಗಾಯತರ ನಡುವೆ ಸಹಮತ ಮೂಡಿಸಬೇಕು. ಅವರು ಒಗ್ಗಟ್ಟಿನಿಂದ ಇರುವ ಹಾಗೆ ನೋಡಿಕೊಳ್ಳಬೇಕು. ಇದು ರಾಜಕೀಯ ಹಾಗೂ ಧಾರ್ಮಿಕವಾಗಿಯೂ ಪ್ರಮುಖವಾದ ಕೆಲಸ. ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಘದ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕು. ಅನ್ಯಾಯವಾದರೆ ತಕ್ಷಣ ಸ್ಪಂದಿಸಬೇಕು ಎಂದು ಮೋಹನ್ ಭಾಗವತ್ ಕರೆ ನೀಡಿದ್ರು ಎಂದು ತಿಳಿದುಬಂದಿದೆ.