Tag: RSS March Past

  • ನ.2 ರಂದು ಚಿತ್ತಾಪುರದಲ್ಲಿ RSS ಪಥ ಸಂಚಲನ ನಡದೇ ನಡೆಯುತ್ತೆ: ವಿಜಯೇಂದ್ರ

    ನ.2 ರಂದು ಚಿತ್ತಾಪುರದಲ್ಲಿ RSS ಪಥ ಸಂಚಲನ ನಡದೇ ನಡೆಯುತ್ತೆ: ವಿಜಯೇಂದ್ರ

    ಬೆಂಗಳೂರು: ನವೆಂಬರ್ 2 ರಂದು ಚಿತ್ತಾಪುರದಲ್ಲಿ RSS ಪಥ ಸಂಚಲನ (RSS March Past) ನಡದೇ ನಡೆಯುತ್ತದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ‌ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆಗೆ RSS ಟೀಕೆ ಮಾಡೋ ದುರ್ಬುದ್ಧಿ ಯಾಕೆ ಬಂದಿದೆಯೋ ಗೊತ್ತಿಲ್ಲ. RSS ಟೀಕೆ ಮಾಡ್ತಿರೋದು ಪ್ರಚಾರಕ್ಕೋ ಅಥವಾ ಸಿಎಂ ಕುರ್ಚಿಗೆ ಟವಲ್ ಹಾಕೋಕೆ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಿಯಾಂಕ್ ಖರ್ಗೆ ಏಕಾಂಗಿ ಆಗಿದ್ದಾರೆ. ಗಾಂಧಿ ಕುಟುಂಬದಿಂದಲೇ RSS ಮಣಿಸೋಕೆ ಆಗಲಿಲ್ಲ. ಇಂತಹ ಹೇಳಿಕೆ ನಿತ್ಯ ಕೊಡೋ ಮೂಲಕ ವಾಸ್ತವಿಕ ಸತ್ಯ ಮರೆ ಮಾಚೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳೋಕೆ RSS ಟೀಕೆ ಮಾಡ್ತಿದ್ದಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಚಿತ್ತಾಪುರದಲ್ಲಿ 2ನೇ ತಾರೀಖು RSS ‌ಪಥ ಸಂಚಲನ ನಡೆದೇ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗ್ತಿದೆ. ಹಾಗೇ ಚಿತ್ತಾಪುರದಲ್ಲಿ ನಡೆಯುತ್ತದೆ. ಪ್ರಿಯಾಂಗ್‌ ಖರ್ಗೆ ಹೀಗೆ‌ ಟೀಕೆ ಮಾಡಿ RSS ಅವಹೇಳನ ಮಾಡೋದು ಸರಿಯಲ್ಲ. RSS ಇಂತಹ ಅನೇಕ ಅಗ್ನಿ ಪರೀಕ್ಷೆ ಎದುರಿಸಿದೆ. RSS ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡದೇ ಸಮಾಜ ಸೇವೆ ಕೆಲಸ ಮುಂದುವರೆಸಿಕೊಂಡು ಹೋಗ್ತಿದೆ ಅಂತ ತಿಳಿಸಿದರು. ಇದನ್ನೂ ಓದಿ: Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

    ಬಿಜೆಪಿ ಅವರು ಸೀಳು ನಾಯಿಗಳು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಅಪ್ರಬುದ್ಧ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಪ್ರಿಯಾಂಕ್ ಖರ್ಗೆ ಅವರೇ ಕೆಲಸಕ್ಕೆ ಬಾರದ್ದನ್ನ ಮಾತಾಡೋದು ಬಿಡಿ. ನಿಮ್ಮ ಕುಟುಂಬ 40-50 ವರ್ಷಗಳ ಕಾಲ ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡು ಬಂದಿದೆ. ನಿಮ್ಮ ಅಧಿಕಾರದಲ್ಲಿ ಕಲಬುರಗಿ ಏನಾಗಿದೆ ಮೊದಲು ಹೇಳಿ? ಶಿಕ್ಷಣದಲ್ಲಿ ಎಷ್ಟನೇ ಸ್ಥಾನದಲ್ಲಿ ‌ಇದೆ ಮೊದಲು ಹೇಳಿ? ಅವರ ಜಿಲ್ಲೆ ಏನ್ ಅಭಿವೃದ್ಧಿ ಆಗಿದೆ ಮೊದಲು ಪ್ರಿಯಾಂಕ್ ಖರ್ಗೆ ನೋಡಲಿ. ಬಿಜೆಪಿ ಅವಧಿಯಲ್ಲಿ ಕಲಬುರ್ಗಿಗೆ ಎಷ್ಟು ಹಣ ಬಿಡುಗಡೆ ಆಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ? ಮೊದಲು ಪ್ರಿಯಾಂಕ್ ಖರ್ಗೆ ಹೇಳಲಿ ಅಂತ ಪ್ರಿಯಾಂಕ್ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.

  • Kolara | ಕೋರ್ಟ್ ಅನುಮತಿ ಬಳಿಕ ಆರ್‌ಎಸ್‌ಎಸ್ ಬೃಹತ್ ಪಥ ಸಂಚಲನ

    Kolara | ಕೋರ್ಟ್ ಅನುಮತಿ ಬಳಿಕ ಆರ್‌ಎಸ್‌ಎಸ್ ಬೃಹತ್ ಪಥ ಸಂಚಲನ

    ಕೋಲಾರ: ಕೋರ್ಟ್ ಅನುಮತಿ ಬಳಿಕ ಕೋಲಾರದಲ್ಲಿ ಕೊನೆಗೂ ಆರ್‌ಎಸ್‌ಎಸ್ ಪಥ ಸಂಚನಲ (RSS March Past) ನಡೆಸಿದೆ.

    ಆರ್‌ಎಸ್‌ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ವಕ್ಕಲೇರಿಯಿಂದ ಕೋಲಾರ ನಗರದವರೆಗೆ (Kolara City) 16 ಕಿಮೀ ಪಥ ಸಂಚಲನ ನಡೆಯಿತು. ಕೋಲಾರದ ಕ್ಲಾಕ್ ಟವರ್, ಟ್ರಯಾಂಗಲ್ ಸರ್ಕಲ್, ಪಲ್ಲವಿ ಸರ್ಕಲ್‌ನಲ್ಲಿ ಸರ ಸಂಘಚಾಲಕರು ಪಥಸಂಚಲನ ನಡೆಸಿದರು. ಇದನ್ನೂ ಓದಿ: ಕಾಂತರಾಜು ಸಮಿತಿ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ

    ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಬಂದಿದ್ದರು. ಪಥ ಸಂಚಲನ ಹಿನ್ನೆಲೆ ಮಾರ್ಗದುದ್ದಕ್ಕೂ ಸುಮಾರು 1,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಷೆ ಜಾರಿಗೊಳಿಸಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ಅತ್ತ, ಬೆಳಗಾವಿಯಲ್ಲಿ ಸಂಭಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ವಿವಾದವಾಗಿದೆ. ಸರ್ಕಾರದಿಂದ ನಿರ್ಮಾಣವಾಗಿರುವ ಮೂರ್ತಿಯನ್ನು ಉಸ್ತುವಾರಿ ಸತೀಶ್ ಜಾರಕಿಹೊಳಿ ಉದ್ಘಾಟನೆಗೆ ಮುಂದಾಗಿದ್ದರು. ಆದರೆ, ಈ ಕ್ಷೇತ್ರ ಬಿಜೆಪಿ ಶಾಸಕ ಅಭಯ್ ಪಾಟೀಲ್, ಬಿಜೆಪಿ ಮೇಯರ್ ಸವಿತಾ ಕಾಂಬಳೆ ನಾವೇ ಲೋಕಾರ್ಪಣೆ ಮಾಡ್ತೇವೆ ಅಂತ ಪಟ್ಟು ಹಿಡಿದು, ಅಧಿಕಾರಿಗಳು ಕಟ್ಟಿದ್ದ ಪರದೆಯನ್ನು ಒತ್ತಾಯಪೂರ್ವಕವಾಗಿ ತೆಗೆದಿದ್ದಾರೆ. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನ ಹುಡುಕಿ ಕೊಡಿ – ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಲೇವಡಿ