Tag: RSS activist

  • ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಆರ್‌ಎಸ್‌ಎಸ್ ಕಾರ್ಯಕರ್ತ

    ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಆರ್‌ಎಸ್‌ಎಸ್ ಕಾರ್ಯಕರ್ತ

    ಬೆಳಗಾವಿ: ಕುಂದಾನಗರಿಯ ಹನುಮಾನ ನಗರದ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ನಗರದ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ ಎಂಬುವವರ ಮಿದುಳು ನಿಷ್ಕ್ರಿಯಗೊಂಡಿತ್ತು. ಇದರಿಂದ ಆತನ ಕುಟುಂಬಸ್ಥರು ಅಂಗಾಗ ದಾನ ಮಾಡಲು ಮುಂದಾಗಿದ್ದಾರೆ. ಈ ಮೂಲಕ ನಾಲ್ವರ ಜೀವ ಉಳಿಸಿ ಅಂಧರಿಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

     ನಿನ್ನೆ ತಡರಾತ್ರಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಅವರನ್ನು ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಅವರ ಅಂಗಾಂಗಗಳನ್ನು ಝೀರೋ ಟ್ರಾಫಿಕ್‍ನಲ್ಲಿ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ಕೆಎಲ್‍ಇ ಆಸ್ಪತ್ರೆಯಲ್ಲೇ ಇರುವ ರೋಗಿಗೆ ಹೃದಯ ದಾನ ಮಾಡಿದ್ದಾರೆ. ಕೆಎಲ್‍ಇ ಆಸ್ಪತ್ರೆಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಝೀರೋ ಟ್ರಾಫಿಕ್‍ನಲ್ಲಿ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ಲಿವರ್ ರವಾನೆ ಮಾಡಲಾಗಿದೆ. ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ಒಂದು ಕಿಡ್ನಿ, ಹುಬ್ಬಳ್ಳಿ ತತ್ವದರ್ಶ ಆಸ್ಪತ್ರೆಗೆ ಮತ್ತೊಂದು ಕಿಡ್ನಿಯನ್ನು ಅಂಬುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ. ಝೀರೋ ಟ್ರಾಫಿಕ್‍ನಲ್ಲಿಯೇ ಧಾರವಾಡ, ಹುಬ್ಬಳ್ಳಿಗೆ ಎರಡು ಪ್ರತ್ಯೇಕ ಅಂಬುಲೆನ್ಸ್‌ಗಳಲ್ಲಿ ಕಿಡ್ನಿ ರವಾನೆ ಮಾಡಲಾಯಿತು.

  • ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    ಚೆನ್ನೈ: ಇಬ್ಬರು ಕ್ರೈಸ್ತ  ಸನ್ಯಾಸಿನಿಯರಿಗೆ ಕಿರುಕುಳ ಕೊಟ್ಟಿದ್ದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS)ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಇಲುಪ್ಪುರ್ ಬಳಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದಾರೆಂದು RSS ಕಾರ್ಯಕರ್ತ ಗಣೇಶ್ ಬಾಬು ಕಿರುಕುಳ ಕೊಡುತ್ತಿದ್ದರು. ಈ ವೇಳೆ ಅವರ ಬಳಿ ಇದ್ದ ಫೋನ್ ಹಾಗೂ ಬೈಕ್ ಕಸಿದುಕೊಂಡಿದ್ದರು. ಈ ಆರೋಪದ ಮೇಲೆ ಇಲುಪ್ಪುರ್ ಪೊಲೀಸರು ಗಣೇಶ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    Goa RSS rebel faction dissolved, merged with parent organisation | Goa News - Times of India

    ಈ ಕುರಿತು ವಿವರಿಸಿದ ಪೊಲೀಸರು, ಘಟನೆ ವೇಳೆ ಗಣೇಶ್ ಜೊತೆ 20ರಿಂದ 30 ಮಂದಿ ಇದ್ದರು. ಜನವರಿ 21 ರಂದು ಈ ಘಟನೆ ನಡೆದಿದ್ದು, ಗಣೇಶ್ ಅವರನ್ನು ಶನಿವಾರ ಬಂಧಿಸಲಾಗಿದೆ. ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಸ್ತುತ ಆರೋಪಿಯನ್ನು ಅರಂತಂಗಿ ಉಪ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಘಟನೆ ವಿವರ:
    ಕ್ರೈಸ್ತ ಸನ್ಯಾಸಿನಿಯರು ತಮಗೆ ಪರಿಚಯವಿದ್ದ ಗರ್ಭಿಣಿಯನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಗಣೇಶ್ ಮತ್ತು ತಂಡದವರು ಅವರನ್ನು ತಡೆದಿದ್ದಾರೆ. ಗಣೇಶ್ ಅವರ ಗುಂಪು ಸನ್ಯಾಸಿನಿಯರನ್ನು, ನೀವು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದೀರಾ ಎಂದು ಅವರ ಬಳಿ ಇದ್ದ ಮೊಬೈಲ್ ಮತ್ತು ಬೈಕ್ ಅನ್ನು ಕಸಿದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಮವಸ್ತ್ರದಲ್ಲಿ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ: ರಘುಪತಿ ಭಟ್ ಎಚ್ಚರಿಕೆ

    POLICE JEEP

    ಕ್ರೈಸ್ತ ಸನ್ಯಾಸಿನಿಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಾವು ಫೋನ್ ಮತ್ತು ಬೈಕ್ ಕಿತ್ತುಕೊಂಡಿಲ್ಲ ಎಂದು ವಾದಿಸಿದರು. ನಂತರ ಗಣೇಶ್, ನಾಳೆ ನಾನೇ ಬಂದು ಶರಣಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಬರಲಿಲ್ಲ. ಪರಿಣಾಮ ಶನಿವಾರ ರಾತ್ರಿ ಗಣೇಶ್‍ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಗಣೇಶ್‍ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಲವು ಗುಂಪು, ಕೇಸರಿ ಸ್ಕಾರ್ಫ್‍ಗಳನ್ನು ಧರಿಸಿ ಭಾನುವಾರ ಇಲುಪ್ಪುರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಹಾಡಹಗಲೇ ಕೇರಳದಲ್ಲಿ RSS ಕಾರ್ಯಕರ್ತನ ಬರ್ಬರ ಹತ್ಯೆ

    ಹಾಡಹಗಲೇ ಕೇರಳದಲ್ಲಿ RSS ಕಾರ್ಯಕರ್ತನ ಬರ್ಬರ ಹತ್ಯೆ

    ತಿರುವನಂತಪುರಂ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನನ್ನು ಹಾಡಹಗಲೇ ಹತ್ಯೆ ಮಾಡಿದ ಘಟನೆ ಕೇರಳದ ಮಂಬರಂ ಪಟ್ಟಣದಲ್ಲಿ ನಡೆದಿದೆ.

    ಮೃತ ಸಂಜೀತ್ (27) ತನ್ನ ಹೆಂಡತಿಯನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಪತ್ನಿಯ ಎದುರೇ ದುಷ್ಕರ್ಮಿಗಳು ಹತ್ಯೆಯನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ – ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

    ಈ ಕೃತ್ಯದ ಹಿಂದೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಕಾರ್ಯಕರ್ತರ ಪಾತ್ರ ಇದೆ ಎಂದು ಬಿಜೆಪಿ ಶಂಕಿಸಿದೆ. ಸಂಜೀತ್ ತನ್ನ ಹೆಂಡತಿಯನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರನ್ನು ಹಿಂಬಲಿಸಿದ್ದು, ತಮ್ಮ ವಾಹನದಿಂದ ಸಂಜೀತ್ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ನಿಂದ ಕೆಳಗೆ ಬಿದ್ದಾಗ ಪತ್ನಿಯ ಎದುರೇ ಸಂಜೀತ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

    ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಧ್ಯಕ್ಷ ಕೆ ಸುರೇಂದ್ರನ್ ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿದ್ದು, ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಲು ಪೊಲೀಸರು ಮತ್ತು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ

    ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಕೊಲೆಯಾಗಿದೆ. ಎಸ್‍ಡಿಪಿಐ ಮತ್ತು ಸಿಪಿಐ ನಡುವೆ ಮೈತ್ರಿಯಿಲ್ಲ. ಹೀಗಾಗಿ ನಾನು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೊಲೆಯಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಸಿಎಂ ಪಿಣರಾಯಿ ವಿಜಯನ್‍ಗೆ ವಿನಂತಿಸುತ್ತೇನೆ. ಪೊಲೀಸರು ಮತ್ತು ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಸುರೇಂದ್ರನ್ ಕಿಡಿಕಾರಿದ್ದಾರೆ.

  • ಹಾಸನ ರಾಜಕೀಯ ಗಲಭೆಗೆ ಸಿಕ್ತು ಬಿಗ್ ಟ್ವಿಸ್ಟ್

    ಹಾಸನ ರಾಜಕೀಯ ಗಲಭೆಗೆ ಸಿಕ್ತು ಬಿಗ್ ಟ್ವಿಸ್ಟ್

    ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಗಲಭೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಾಸನ ಘರ್ಷಣೆಗೆ ಮೊದಲು ಪ್ರಚೋದನೆ ನೀಡಿದ್ದು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಜೆಡಿಎಸ್ ಆರೋಪ ಮಾಡುತ್ತಿದೆ.

    ಉಡುಪಿ ಮೂಲದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಹುಲ್ ಕಿಣಿಗೆ ಗಲಭೆಯಲ್ಲಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ರಾಹುಲ್ ಕಿಣಿ ಬಿಜೆಪಿ ಕಾರ್ಯಕರ್ತನ ಅಥವಾ ಆರ್‌ಎಸ್‌ಎಸ್‌ ಕಾರ್ಯಕರ್ತನ ಎಂದು ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ಹಾಸನ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೆಸೆತ ಪ್ರಕರಣ – 8 ಮಂದಿ ವಿರುದ್ಧ ಎಫ್‍ಐಆರ್ ದಾಖಲು

    ಪ್ರೀತಂಗೌಡ ಮನೆ ಮುಂದೆ ಶಾಂತಿಯುತ ಧರಣಿಗೆ ಜೆಡಿಎಸ್ ಮುಂದಾಗಿತ್ತು. ಆದರೆ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡ ಪುನಿತ್ ಎಗರಾಡಿದ್ದರು. ಪುನೀತ್ ಹಿಂದೆ ನಿಂತು ಗಲಭೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಪ್ರಚೋದನೆಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

    ಗಾಯಾಳು ರಾಹುಲ್ ಕಿಣಿ ಮೂಲತಃ ಉಡುಪಿ ಜಿಲ್ಲೆಯವನಾಗಿದ್ದು, ಹಾಸನಕ್ಕೆ ಯಾಕೆ ಬಂದಿದ್ದಾನೆ ಎಂಬ ಚರ್ಚೆ ಎದ್ದಿದೆ. ಘಟನೆಯಲ್ಲಿ ರಾಹುಲ್ ಕಿಣಿ ತಲೆಗೆ ಕಲ್ಲೇಟು ಬಿದ್ದಿತ್ತು. ಪ್ರತಿಭಟನೆ ಸುಳಿವು ಸಿಕ್ಕಿ ಪ್ರೀತಂಗೌಡ ಮನೆ ಮುಂದೆ ಆರ್‌ಎಸ್‌ಎಸ್‌ ಕಾರ್ಯಕರ್ತ ಪ್ರತ್ಯಕ್ಷನಾಗಿದ್ದು, ಶಾಂತಿಯುತ ಧರಣಿ ಮುಗಿಸಿ ವಾಪಸ್ ಆಗುವ ಐದು ನಿಮಿಷ ಮೊದಲು ಗಲಭೆಗೆ ಪ್ರಚೋದನೆ ನೀಡಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ್ದೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಎನ್ನೊದು ಜೆಡಿಎಸ್ ಕಾರ್ಯಕರ್ತರ ಆರೋಪವಾಗಿದೆ.

    ಆರ್‌ಎಸ್‌ಎಸ್‌ ಕಾರ್ಯಕರ್ತರ ಪ್ರಚೋದನೆ ಬಳಿಕ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ್ದೇ ಆರ್‌ಎಸ್‌ಎಸ್‌ನ ರಾಹುಲ್ ಕಿಣಿ ಎಂದು ಜೆಡಿಎಸ್ ಆರೋಪವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಕಾರ್ಯಕರ್ತರ ಪೋಸ್ಟ್ ವೈರಲ್ ಆಗಿದೆ.

    https://www.youtube.com/watch?v=V2Yszl9rLEg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂಡಬಿದ್ರೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆಗೆ ಯತ್ನ

    ಮೂಡಬಿದ್ರೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆಗೆ ಯತ್ನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆಗೆ ಯತ್ನ ನಡೆದಿದೆ.

    ಮೂಡಬಿದ್ರೆ ಠಾಣೆ ವ್ಯಾಪ್ತಿಯ ಗಂಟಾಲ್ ಕಟ್ಟೆ ಎಂಬಲ್ಲಿ ಬೆಳಗ್ಗೆ 6.30ಕ್ಕೆ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಇಮ್ತಿಯಾಜ್ (30) ಮೇಲೆ ತಲವಾರಿನಿಂದ ಕಡಿದು ಪರಾರಿಯಾಗಿದೆ.

    ಇಮ್ತಿಯಾಜ್ ಗಂಟಾಲ್ಕಟ್ಟೆಯಲ್ಲಿ ಹೊಟೇಲ್ ಹೊಂದಿದ್ದು, ಇನ್ನೋವಾದಲ್ಲಿ ಬಂದಿದ್ದ ಯುವಕರು ಬೆಳಗ್ಗೆ ಚಹಾ ಕುಡಿಯಲೆಂದು ಹೊಟೇಲ್ ಒಳಗೆ ಬಂದಿದ್ದರು. ಹೀಗಾಗಿ ಟೀ ಮಾಡಲೆಂದು ಇಮ್ತಿಯಾಜ್ ಒಳ ಹೋದಾಗಲೇ ತಲವಾರಿನೊಂದಿಗೆ ನುಗ್ಗಿದ ತಂಡ, ಆತನ ತಲೆ ಮತ್ತು ಕಾಲಿಗೆ ಕಡಿದು ಪರಾರಿಯಾಗಿದೆ. ಗಂಭೀರವಾಗಿ ಹಲ್ಲೆಗೊಳಗಾದ ಇಮ್ತಿಯಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಮ್ತಿಯಾಜ್, ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಹೀಗಾಗಿ ಪ್ರತೀಕಾರಕ್ಕಾಗಿ ಕೊಲೆ ಯತ್ನ ನಡೆದಿರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಡಬಿದ್ರೆ ಠಾಣೆ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

    ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಎರಡು ವರ್ಷಗಳ ಹಿಂದೆ ಮೂಡಬಿದ್ರೆ ಪೇಟೆಯಲ್ಲಿ ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆ ಕಡಿದು ಹತ್ಯೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನವನ್ನೂ ಸೃಷ್ಟಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

    ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ಮನೆಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿದ್ದಾರೆ.

    ಘಟನೆ ನಡೆದು ಒಂಬತ್ತು ದಿನಗಳ ಬಳಿಕ ರೈ ಬಂಟ್ವಾಳದ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿ ಶರತ್ ತಂದೆ ತನಿಯಪ್ಪ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಭೇಟಿ ವೇಳೆ ಸ್ಥಳೀಯರಿಗೆ ಮಾತ್ರ ರೈ ಬೆಂಬಲಿಗರು ಸೂಚನೆ ನೀಡಿದ್ದು, ಮಾಧ್ಯಮದವರ ಪ್ರವೇಶವನ್ನು ನಿರಾಕರಿಸಿದ್ದಾರೆ. ಅಲ್ಲದೇ ಯಾರೂ ಕೂಡ ಫೊಟೋ ಕ್ಲಿಕ್ಕಿಸದಂತೆ ಸೂಚಿಸಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    20 ವರ್ಷ ರಮಾನಾಥ ರೈ ಬಟ್ಟೆ ಒಗೆದು ಇಸ್ತ್ರಿ ಮಾಡಿಕೊಟ್ಟಿದ್ರೂ ಇಂದು ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಶರತ್ ತಂದೆ ತನಿಯಪ್ಪ ಮಡಿವಾಳ ಮಾಧ್ಯಮದ ಮುಂದೆ ಕಣ್ಣೀರಿಟ್ಟ ಬಳಿಕ ಇದೀಗ ಯಾರಿಗೂ ಮಾಹಿತಿ ನೀಡದೆ ರೈ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ತನಿಖೆ ಮಾಡಿ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.

    ಮಾಧ್ಯಮಗಳಲ್ಲಿ ಸುದ್ದಿಪ್ರಸಾರವಾಗಿ ಒಂದು ಗಂಟೆಯೊಳಗೆ ಶರತ್ ಮನೆಗೆ ಭೇಟಿ ಮಾಡಿದ ಫೋಟೋವನ್ನು ರೈ ಆಪ್ತ ಕಾರ್ಯದರ್ಶಿ ರಿಲೀಸ್ ಮಾಡಿದ್ದಾರೆ.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    https://www.youtube.com/watch?v=L5WjxAOQ_VE

  • 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಬಟ್ಟೆ ಒಗೆದವ ನಾನು. ಅವರ ಅಂಗಿ ಪ್ಯಾಂಟ್ 20 ವರ್ಷ ಒಗೆದಿದ್ದೇನೆ. ದಿನಂಪ್ರತಿ ಇಸ್ತ್ರಿ ಮಾಡಿಕೊಟ್ಟಿದ್ದೇನೆ. ಆದ್ರೆ ಇದೀಗ ಘಟನೆಯಾಗಿ 8 ದಿನ ಆಗ್ತಾ ಬಂದಿದೆ. ಆದ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಸಜಿಪದಲ್ಲಿ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಶರತ್ ತಂದೆ ತನಿಯಪ್ಪ, ರೈ ಚಿಕ್ಕಂದಿನಿಂದ ನಮ್ಮ ಅಂಗಡಿ ಬಳಿ ಓಡಾಡುತ್ತಿದ್ದರು. ಅಂದು ಸೇವಾ ಮನೋಭಾವನೆ ನನ್ನಲ್ಲಿತ್ತು. ಹೀಗಾಗಿ ಅವರ ಬಟ್ಟೆ ಒಗೆದು, ಇಸ್ತ್ರೀ ಮಾಡಿ ಕೊಟ್ಟಿದ್ದೆ. ಆದ್ರೆ ಇವತ್ತಿಗೆ ಇದನ್ನೆಲ್ಲಾ ಮರೆತ್ರು. ನಾನು ಕಾಂಗ್ರೆಸ್-ಬಿಜೆಪಿ, ಹಿಂದೂ-ಮುಸ್ಲಿಮರೆಂದು ಭೇದ-ಭಾವ ಮಾಡಿಲ್ಲ. ನನ್ನ ಕುಟುಂಬದ ಮೇಲೆ ಅವರಿಗೆ ಯಾಕೆ ಕೋಪ ತಾತ್ಸಾರ ಅಂತ ಶರತ್ ತಂದೆ ಕಣ್ಣೀರು ಹಾಕಿದ್ರು.

    ನನ್ನ ಚಿತೆಗೆ ಶರತ್ ಬೆಂಕಿಯಿಡಬೇಕಿತ್ತು. ಕೊಂದ ದುಷ್ಕರ್ಮಿಗಳು ಭೂಮಿ ಮೇಲೆ ಶಾಶ್ವತವಲ್ಲ. ದೇವರೇ ಅವರನ್ನ ನೋಡಿಕೊಳ್ಳಲಿ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಕುಟುಂಬಕ್ಕೆ ಗತಿಯಿಲ್ಲದಂತಾಗಿದೆ. ದೇವರೇ ನಮ್ಮ ಸಂಸಾರ ನೋಡಿಕೊಳ್ಳಲಿ ಅಂತ ಶರತ್ ತಂದೆ ತನಿಯಪ್ಪ ಹೇಳಿದರು.

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮನೆಯಲ್ಲಿ ಸದ್ಗತಿಯ ಕಾರ್ಯ ನಡೆಯಲಿದ್ದು, ಜುಲೈ 20ಕ್ಕೆ ವೈಕುಂಠ ಸಮಾರಾಧನೆ ನಡೆಯಲಿದೆ. ಬಂಟ್ವಾಳ ನಂದಾವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

  • ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

    ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಬಳಿಕ ದಕ್ಷಿಣಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕಲ್ಲು ತೂರಾಟದ ನಡುವೆಯೇ ಶನಿವಾರ ಶರತ್ ಅಂತಿಮಯಾತ್ರೆ ಕೂಡಾ ನಡೆಯಿತು. ಇತ್ತ ಪ್ರಕ್ಷುಬ್ಧಗೊಂಡಿರುವ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಮತ್ತೊಂದು ಕೊಲೆ ಯತ್ನ ನಡೆದಿದೆ.

    ಮಂಗಳೂರು ಹೊರವಲಯದ ಕುತ್ತಾರು ರಾಣಿಪುರದಲ್ಲಿ ಯುವಕನ ಮೇಲೆ ತಲವಾರಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಂಬ್ಲಮೊಗರು ನಿವಾಸಿಯಾಗಿರುವ ಚಿರಂಜೀವಿ ಮೇಲೆ ನಿನ್ನೆ ಬೈಕಿನಲ್ಲಿ ಚಲಿಸುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಏಕಾಏಕಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಜರಂಗದಳದ ಕಾರ್ಯಕರ್ತ ಚಿರಂಜೀವಿ ಸದ್ಯ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆಗೆ ಹೋರಾಡುತ್ತಿದ್ದಾರೆ.

    ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣ ಭೇಧಿಸುವ ಮುನ್ನವೇ ಇದೀಗ ಮತ್ತೊಂದು ಪ್ರಕರಣ ನಡೆದಿರುವುದು ಪೊಲೀಸರ ತಲೆನೋವು ಜಾಸ್ತಿಮಾಡಿದೆ.

    https://www.youtube.com/watch?v=o40hIeKFh8E

    https://www.youtube.com/watch?v=1DwTIz6sVmQ

    https://www.youtube.com/watch?v=bHr6olvlgmU

  • ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

    ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

    ಶಿವಮೊಗ್ಗ: ಮಂಗಳೂರು ಕೋಮು ಗಲಭೆ ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ದೂರಿದ್ದಾರೆ.

    ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮುಗಲಭೆ ನಡೆಯಲಿ ಎಂಬ ಹಿತಾಸಕ್ತಿ ಸರ್ಕಾರಕ್ಕೆ ಇದೆ ಎಂಬ ಅನುಮಾನ ಮೂಡಿದೆ. ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಇದರಿಂದಾಗಿ ಕೋಮುಗಲಭೆ ಮಾಡುವವರಿಗೆ ಕುಮ್ಮಕ್ಕು ಕೊಟ್ಟಂತಾಗಿದೆ ಎಂದರು.

    ರಾಜ್ಯದಲ್ಲಿ ಕೋಮುಗಲಭೆ, ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳಾಗುತ್ತಿವೆ. ರಾಷ್ಟ್ರ ಭಕ್ತರಿಗೆ ಬೆದರಿಕೆಗಳು ಬರುತ್ತಿವೆ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬೆದರಿಕೆ ಹಾಕಿರೋದು ಯಾರು ಎಂಬುದನ್ನು ಸರ್ಕಾರ ಪತ್ತೆ ಹಚ್ಚಲಿ. ಇಂಥ ವಿಷಯಗಳ ಬಗ್ಗೆ ಸಿಎಂಗೆ ಗಂಭೀರತೆ ಇಲ್ಲ. ಉಡಾಫೆಯಾಗಿ ಮಾತಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.

    ಮಂಗಳೂರಿನ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಫರಂಗಿ ಪೇಟೆಯಲ್ಲಿ 300 ಪೊಲೀಸರ ನಿಯೋಜನೆ ಮಾಡಲಾಗಿದೆ. ಲಾರಿಗಳಲ್ಲಿ ಪೊಲೀಸರನ್ನ ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಚಿಕ್ಕಮಗಳೂರು, ಹಾಸನ, ಕಾರವಾರ, ಶಿವಮೊಗ್ಗದ 1000ಕ್ಕೂ ಹೆಚ್ಚು ಪೊಲೀಸರ ರವಾನೆ ಮಾಡಲಾಗಿದೆ. ಮಸೀದಿಗಳಿಗೆ ಸಿಆರ್‍ಫಿಎಫ್ ಪೊಲೀಸರ ಭದ್ರತೆ ಹಾಗೂ ದೇವಸ್ಥಾನಗಳ ಮುಂಭಾಗದಲ್ಲೂ ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಅಂತಾ ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.