Tag: RS sodhi

  • ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಗಾಂಧಿನಗರ: ಅಮೂಲ್ ಬ್ರ್ಯಾಂಡ್‌ನ ಅಡಿಯಲ್ಲಿ ಉತ್ಪನ್ನ ತಯಾರಿಸುವ GCMMF ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

    ಗುಜರಾತಿನ ಆನಂದ್ ಪಟ್ಟಣದ ಸಮೀಪ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಸೋಧಿ ಅವರು ಪ್ರಾಣಾಪಾಯಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?: ಸೋಧಿ ಅವರು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಆನಂದ್-ಬಕ್ರೋಲ್ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದ ಪರಿಣಾಮ ಉರುಳಿ ಬಿದ್ದಿದೆ. ಕಾರು ನಿಯಂತ್ರಣ ಕಳೆದುಕೊಳ್ಳಲು ನಿಖರ ಕಾರಣ ಏನೆಂಬುದು ಕಂಡುಬಂದಿಲ್ಲ. ಆದರೆ ಸ್ಥಳೀಯ ಮೂಲಗಳು ಹೇಳುವಂತೆ ಚಾಲಕ ದ್ವಿಚಕ್ರ ವಾಹವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿ, ತಿರುವು ತೆಗೆದುಕೊಂಡಿದ್ದರಿಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತ ಸಂಭವಿಸಿದೆ ಎಂಬುದಾಗಿ ತಿಳಿದು ಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿಡಿ ಜಡೇಜಾ ತಿಳಿಸಿದ್ದಾರೆ.

    CRIME

    ಅಪಘಾತಕ್ಕೀಡಾದ ಸೋಧಿ ಹಾಗೂ ಚಾಲಕನನ್ನು ಸ್ಥಳೀಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮಾಹಿತಿ ನೀಡಿದ್ದಾರೆ.

    ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಸಂಸ್ಥೆ ನಿಯಮಿತವು (GCMMF) ಆನಂದ್ ಪಟ್ಟಣದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಅಮೂಲ್ ಬ್ರ‍್ಯಾಂಡ್ ಹೆಸರಿನ ಅಡಿ ಅದು ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸೋಧಿ ಅವರು 2019 ರಿಂದಲೂ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv