Tag: Rs. 2000 Note

  • 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    – ಮಾರುಕಟ್ಟೆಯಲ್ಲಿದ್ದ 50% ರಷ್ಟು 2,000ದ ನೋಟುಗಳು ವಾಪಸ್

    ನವದೆಹಲಿ: 500 ರೂ. ನೋಟುಗಳನ್ನು (Rs. 500 Note) ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಅಥವಾ 1,000 ರೂ. ನೋಟುಗಳನ್ನು (Rs. 1,000 Note) ಮರು ಪರಿಚಯಿಸುವ ಯಾವುದೇ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಗುರುವಾರ ಹೇಳಿದ್ದಾರೆ.

    ಆರ್ಥಿಕ ವರ್ಷ 2024 ರ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಬಿಐ 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ, ಊಹಾಪೋಹ ಮಾಡದಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

    2,000 ನೋಟುಗಳನ್ನು (Rs. 2,000 Note) ಚಲಾವಣೆಯಿಂದ ಹಿಂದೆ ಪಡೆದ ಬಳಿಕ ಮಾರುಕಟ್ಟೆಯಲ್ಲಿದ್ದ 3.62 ಲಕ್ಷ ಕೋಟಿ ರೂ. ಪೈಕಿ 1.82 ಲಕ್ಷ ಕೋಟಿ ರೂ. ಬ್ಯಾಂಕುಗಳಿಗೆ ಮರಳಿದೆ. ಇದರ ಪ್ರಮಾಣ 50% ರಷ್ಟಾಗಿದೆ. ಬ್ಯಾಂಕುಗಳಿಗೆ ಬಂದ ಹಣದ ಪೈಕಿ 85% ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ಹಿಂತಿರುಗಿದರೆ, ಉಳಿದ ಪ್ರಮಾಣದ ಹಣ ನೋಟು ವಿನಿಮಯಕ್ಕಾಗಿ ಬಂದಿವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ

    ಆರ್‌ಬಿಐ ಮೇ 19 ರಂದು ತನ್ನ ಅತ್ಯಧಿಕ ಮೌಲ್ಯದ 2,000 ರೂ. ಕರೆನ್ಸಿ ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಜನರು ಸೆಪ್ಟೆಂಬರ್ 30 ರವರೆಗೆ ದಿನಕ್ಕೆ 20,000 ರೂ.ವರೆಗೆ ಠೇವಣಿ ಅಥಾವ ವಿನಿಮಯ ಮಾಡುವ ಮೂಲಕ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • ಒಂದೇ ವಾರದಲ್ಲಿ 2,000 ರೂ. ನೋಟುಗಳ 14,000 ಕೋಟಿ ಡೆಪಾಸಿಟ್: SBI

    ಒಂದೇ ವಾರದಲ್ಲಿ 2,000 ರೂ. ನೋಟುಗಳ 14,000 ಕೋಟಿ ಡೆಪಾಸಿಟ್: SBI

    – 3,000 ಕೋಟಿ ಬೆಲೆಯ ನೋಟುಗಳು ಎಕ್ಸ್‌ಚೇಂಜ್
    – ಮಾರುಕಟ್ಟೆಯ 20% ನೋಟುಗಳು ಎಸ್‌ಬಿಐನಲ್ಲಿ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 19 ರಂದು 2,000 ರೂ. ಮುಖಬೆಲೆಯ ನೋಟುಗಳನ್ನು (Rs. 2000 Note) ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಇದುವರೆಗೆ ಅಂದಾಜು 17,000 ಕೋಟಿ ರೂ. ಮೌಲ್ಯದ 2,000 ರೂ.ಯ ನೋಟುಗಳನ್ನು ಠೇವಣಿ ಹಾಗೂ ವಿನಿಮಯ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

    ಆರ್‌ಬಿಐ ಮೇ 19 ರಂದು ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿತು. ಸಾರ್ವಜನಿಕರು 2,000 ರೂ.ಯ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿ ಇಡಲು ಹಾಗೂ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಮೇ 23 ರಿಂದ ಅನುಮತಿ ನೀಡಿದ್ದು, ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಿದೆ.

    ನೋಟುಗಳನ್ನು ಬದಲಿಸಿಕೊಳ್ಳಲು (Note Exchange) ಅನುಮತಿ ನೀಡಿದ ವಾರದ ಬಳಿಕ ಮಂಗಳವಾರ ಮಾಹಿತಿ ನೀಡಿರುವ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ, ತಮ್ಮ ಬ್ಯಾಂಕ್‌ನಲ್ಲಿ ಇಲ್ಲಿಯವರೆಗೆ ಸುಮಾರು 14,000 ಕೋಟಿ ರೂ. ಮೌಲ್ಯದ 2,000 ರೂ.ಯ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲಾಗಿದೆ. ಸುಮಾರು 3,000 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಲಾಗಿದೆ. ಇದು ಮಾರುಕಟ್ಟೆಯಲ್ಲಿರುವ ಸುಮಾರು 20% ದಷ್ಟು ನೋಟುಗಳು ಈಗ ನಮ್ಮಲ್ಲಿದೆ ಎಂದು ತಿಳಿಸಿದ್ದಾರೆ.

    ನೋಟು ಬದಲಾವಣೆ ಹಾಗೂ ಠೇವಣಿ ಇಡುವ ಬಗ್ಗೆ ಮಾಹಿತಿ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, 2,000 ರೂ. ನೋಟುಗಳನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಯಾವುದೇ ರೀತಿಯ ಆತಂಕ ಬೇಡ. ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. ನಾವು ಒಟ್ಟು ಎಷ್ಟು ನೋಟುಗಳು ವಾಪಸಾಗುತ್ತವೆ ಎಂಬುದನ್ನು ಕಾದು ನೋಡಲಿದ್ದೇವೆ. ಸೆಪ್ಟೆಂಬರ್ 30ರ ವರೆಗೆ ಏನಾಗುತ್ತದೆ ಎಂಬುದನ್ನು ಈಗಲೇ ಊಹೆ ಮಾಡಲು ಸಾಧ್ಯವಿಲ್ಲ ಎಂದು ದಾಸ್ ತಿಳಿಸಿದ್ದಾರೆ.

    ಆರ್‌ಬಿಐ ನೋಟು ಬದಲಾವಣೆಗೆ ಸೆಪ್ಟೆಂಬರ್ 30ರ ವರೆಗೆ ಸಮಯಾವಕಾಶ ನೀಡಿದ್ದು, ಒಂದು ಬಾರಿ 2,000 ರೂ. 10 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ನಿರ್ಬಂಧವಿಲ್ಲ. ಒಂದು ಬಾರಿಗೆ ಡೆಪಾಸಿಟ್ ಮಾಡಬಹುದಾದ ಗರಿಷ್ಠ ಮಿತಿಯನ್ನು ಆರ್‌ಬಿಐ ನಿಗದಿಪಡಿಸಿಲ್ಲ. ಇದನ್ನೂ ಓದಿ: ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

    ಒಂದು ಖಾತೆಗೆ 50,000 ರೂ.ಗಿಂತಲೂ ಕಡಿಮೆ ಮೊತ್ತದ ಹಣವನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆಗಳ ಅಗತ್ಯವಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚು ಹಣವನ್ನು ಡೆಪಾಸಿಟ್ ಮಾಡುವುದಾದರೆ ಆದಾಯ ತೆರಿಗೆ ನಿಯಮದ ಅನ್ವಯ ಮಾಡಲಾಗುತ್ತದೆ ಎಂಬುದು ತಿಳಿದಿರಬೇಕು. ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವಾಗ ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ – ಜೂನ್‌ 3, 4ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

  • ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

    ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

    ನವದೆಹಲಿ: 2,000 ರೂ. ಮುಖಬೆಲೆಯ ನೋಟುಗಳನ್ನು (Rs. 2000 Note) ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಿಂಪಡೆದಿದ್ದು, ಮಂಗಳವಾರದಿಂದ ಸಾರ್ವಜನಿಕರಿಗೆ ಬ್ಯಾಂಕುಗಳಿಂದ (Bank) ನೋಟ್ ವಿನಿಮಯ ಮಾಡಿಕೊಳ್ಳು ಅನುಮತಿಸಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆ (IT) ಹವಾಲಾ ಹಣದ (Hawala Money) ಮೇಲೆ ಕಣ್ಣಿಟ್ಟಿದೆ.

    ಸದ್ಯ ಆರ್‌ಬಿಐ 3 ತಿಂಗಳು ನೋಟು ವಿನಿಮಯಕ್ಕೆ ಅವಕಾಶ ಕೊಟ್ಟಿದೆ. ಈ ನಡುವೆ ಹವಾಲಾ ದಂಧೆಕೋರರಿಂದ ನೋಟು ವಿನಿಮಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಇಡಿ ಹಾಗೂ ಐಟಿ ಇಲಾಖೆಗಳು ಹವಾಲಾ ದಂಧೆಕೋರರ ಮೇಲೆ ನಿಗಾ ಇರಿಸಿದ್ದು, ಈ ಕುರಿತು ಪೊಲೀಸರಿಗೆ ಸೂಚನೆ ನೀಡಲಾಗಿದೆ.

    ಹವಾಲಾ ದಂಧೆಕೋರರು ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದು, ಹೀಗಾಗಿ ನೋಟು ಹಿಂಪಡೆಯಲು ಮುಂದಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಕಾಳಸಂತೆಯಲ್ಲಿ ಹವಾಲಾ ದಂಧೆಕೋರರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಹೀಗಾಗಿ ನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಪ್ರಮುಖವಾಗಿ ಪೆಟ್ರೋಲ್ ಬಂಕ್‌ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಇದನ್ನೂ ಓದಿ: ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ನೋಟು ವಿನಿಮಯಕ್ಕೆ ಸೆಪ್ಟೆಂಬರ್ 30ರ ವರೆಗೆ ಆರ್‌ಬಿಐ ಅವಕಾಶ ನೀಡಿದೆ. ಆದರೆ ನೋಟು ಬದಲಾವಣೆ ವೇಳೆ ಸಾರ್ವಜನಿಕರು ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ಹೀಗಾಗಿ ಕಾಳಸಂತೆಯ ಹವಾಲಾ ದಂಧೆಕೋರರಿಗೆ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಸುವರ್ಣ ಅವಕಾಶವಾಗಿದೆ. ಆದರೆ ಒಬ್ಬರಿಗೆ ದಿನಕ್ಕೆ 20 ಸಾವಿರ ರೂ. ಮಾತ್ರವೇ ಬದಲಾಯಿಸಿಕೊಳ್ಳಲು ಅವಕಾಶವಿದ್ದು, ಹೀಗಾಗಿ ಹವಾಲಾ ದಂಧೆಕೋರರು ಸಾರ್ವಜನಿಕರ ಮೂಲಕ ನೋಟು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ.

    ಈ ಹಿಂದೆ ಹವಾಲಾ ಹಣದೊಂದಿಗೆ ಸಿಕ್ಕಿರವವರ ಮೇಲೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದು, ಬ್ಯಾಂಕ್‌ಗಳ ಬಳಿ ಮಫ್ತಿಯಲ್ಲಿದ್ದಾರೆ. ಇದನ್ನೂ ಓದಿ: ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ