Tag: rs 2000

  • ಎಟಿಎಂನಲ್ಲಿ ನಕಲಿ 2 ಸಾವಿರ ನೋಟಿನ ಅಸಲಿ ಮುಖ ಕೊನೆಗೂ ಬಯಲು

    ಎಟಿಎಂನಲ್ಲಿ ನಕಲಿ 2 ಸಾವಿರ ನೋಟಿನ ಅಸಲಿ ಮುಖ ಕೊನೆಗೂ ಬಯಲು

    ನವದಹಲಿ: ಎಸ್‍ಬಿಐ ಎಟಿಎಂನಲ್ಲಿ ನಕಲಿ 2 ಸಾವಿರ ರೂ. ನೋಟ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

    27 ವರ್ಷದ ಮೊಹಮ್ಮದ್ ಇಶಾ ಬಂಧಿತ ಆರೋಪಿ. ಈತ ಎಟಿಎಂ ಕ್ಯಾಶ್ ಲೋಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಗಮ್ ವಿಹಾರ್‍ನ ಎಸ್‍ಬಿಐ ಎಟಿಎಂನಲ್ಲಿ ನಕಲಿ ನೋಟು ಪತ್ತೆಯಾದ ದಿನ ಈತನೇ ಕ್ಯಾಶ್ ಕಸ್ಟೋಡಿಯನ್ ಆಗಿದ್ದ.

    ಇತ 5 ಒರಿಜಿನಲ್ ನೋಟ್‍ಗಳನ್ನ ತೆಗೆದು ಅದರ ಬದಲು ನಕಲಿ ನೋಟ್‍ಗಳನ್ನ ಇಟ್ಟಿದ್ದಾನೆ. ಈ ನೋಟುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಇವನ್ನು ಮಕ್ಕಳು ಆಟವಾಡಲು ಬಳಸುತ್ತಾರೆ ಎಂದು ಡಿಸಿಪಿ ರೋಮಿಲ್ ಬಾನಿಯಾ ಹೇಳಿದ್ದಾರೆ.

    ಮೊದಲಿಗೆ ಹಣವಿದ್ದ ಬಾಕ್ಸ್ ಹೊಂದಿದ್ದ ವಾಹನವನ್ನು ದಕ್ಷಿಣ ದೆಹಲಿಯ ಡಿಯೋಲಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಎಟಿಎಂಗೆ ಹಣ ತುಂಬಿಸಿದ ನಂತರ ಸಂಗಮ್ ವಿಹಾರ್‍ನತ್ತ ಬಂದಿದ್ದಾರೆ. ಇಶಾ ಡಿಯೋಲಿಯಲ್ಲಿಯೇ ನಕಲಿ ನೋಟ್ ಬದಲಾಯಿಸಿದ್ದಾನೆ. ಈ ಕೆಲಸ ಮಾಡಲು ಇವನ್ನೊಬ್ಬನಿಂದಲೇ ಸಾಧ್ಯ ಎಂದು ತನಿಖಾಧಿಕಾರೊಯೊಬ್ಬರು ಹೇಳಿದ್ದಾರೆ.

    ಇಶಾ ಬದಲಾಯಿಸಿದ್ದಾನೆ ಎನ್ನಲಾದ ನೋಟ್‍ಗಳನ್ನು ಪೊಲೀಸರು ಇನ್ನೂ ವಶಪಡಿಸಿಕೊಂಡಿಲ್ಲ. ಈತನ ಬಳಿ ಈಗಿರುವ 2 ಸಾವಿರ ರೂ. ನೋಟ್‍ಗಳು ಎಟಿಎಂಗೆ ಹಾಕಬೇಕಿದ್ದ ಹಣದಿಂದ ಕದ್ದಿದ್ದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲದೆ ಘಟನೆ ನಡೆದು ತುಂಬಾ ಸಮಯವಾಗಿರುವುದರಿಂದ ಈಗಾಗಲೇ ಆತ ಹಣವನ್ನು ಖರ್ಚು ಮಾಡಿರಲೂಬಹುದು ಎಂದು ವಿವರಿಸಿದ್ದಾರೆ.

    ಎಟಿಎಂನಲ್ಲಿ ಸಿಕ್ಕ ನಕಲಿ ನೋಟುಗಳು ದೆಹಲಿಯ ಮಾರುಕಟ್ಟೆಯಲ್ಲಿ 40 ರೂ. ಬೆಲೆಗೆ ಸುಲಭವಾಗಿ ಸಿಗುತ್ತವೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

  • 2 ಸಾವಿರ ರೂ. ಪಿಂಕ್ ನೋಟು ಹಂಚುತ್ತಿದ್ದಾರೆ ಈ ನವಜೋಡಿ!

    2 ಸಾವಿರ ರೂ. ಪಿಂಕ್ ನೋಟು ಹಂಚುತ್ತಿದ್ದಾರೆ ಈ ನವಜೋಡಿ!

    ಬೆಂಗಳೂರು: ಹೊಸ ಎರಡು ಸಾವಿರ ನೋಟ್ ಹಿಡ್ಕೊಂಡು, ಫೇಸ್ ಬುಕ್, ವಾಟ್ಸಪ್‍ನಲ್ಲಿ ಪೋಸ್ ಕೊಟ್ಟಿದ ದಿನಗಳು ಮುಗಿದು, ಎಲ್ಲರ ಕೈಯಲ್ಲಿ ದುಡ್ಡು ಓಡಾಡೋಕೆ ಶುರುವಾದರೂ ಎರಡು ಸಾವಿರ ರೂಪಾಯಿ ಕ್ರೇಜ್ ಮಾತ್ರ ಇನ್ನು ಕಮ್ಮಿಯಾಗಿಲ್ಲ. ಅದಕ್ಕೆ ಅನಿಸುತ್ತೆ ಇಲ್ಲೊಂದು ನವ ಜೋಡಿ ತಮ್ಮ ಮದುವೆಗೆ ಎರಡು ಸಾವಿರ ರೂಪಾಯಿ ವಿನ್ಯಾಸ ಹೊಸ ಪಿಂಕ್ ನೋಟ್ ಹಂಚುತ್ತಿದ್ದಾರೆ.

    ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶ್ವೇತಾ ಮತ್ತು ಅಶೋಕ್ ಎರಡು ಸಾವಿರ ರೂ. ಮುಖಬೆಲೆಯ ನೋಟಿನ ವಿನ್ಯಾಸದಲ್ಲಿ ಮದುವೆ ಆಹ್ವಾನ ಪತ್ರಿಕೆಯನ್ನು ತಯಾರಿಸಿದ್ದಾರೆ. ಸ್ನೇಹಿತರನ್ನು, ಬಂಧುಗಳನ್ನು ಈ ನೋಟ್ ಆಕರ್ಷಿಸುತ್ತಿದ್ದು, ಹೊಸ ಟ್ರೆಂಡ್‍ಗೆ ಫಿದಾ ಆಗಿದ್ದಾರೆ. ಒಂದು ಆಹ್ವಾನ ಪತ್ರಿಕೆ ಕೊಟ್ರೆ ಮತ್ತೊಂದು ಕೊಡಿ ಅಂತ ಕೇಳಿ ಕೇಳಿ ಪಡೆಯುತ್ತಿದ್ದಾರೆ ಎಂದು ವಧು ಶ್ವೇತಾ ಹೇಳುತ್ತಾರೆ.

    ನೋಟಿನ ಬಣ್ಣ ಬಿಟ್ರೆ ಮತ್ಯಾವುದೇ ಪ್ರಿಂಟ್‍ಗಳನ್ನು ಬಳಸಿಕೊಂಡಿಲ್ಲ. ಸದ್ಯ ಈಗ ಈ ನೋಟಿನ ವಿನ್ಯಾಸದ ಆಹ್ವಾನ ಪತ್ರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮುದ್ರಣ ಸಂಸ್ಥೆಯ ರಮೇಶ್ ಹೇಳಿದ್ದಾರೆ.