Tag: Rs 10 crore

  • ಪಂಜಾಬ್ ಸಿಎಂ ಸಂಬಂಧಿಯಿಂದ 10 ಕೋಟಿ ರೂ. ನಗದು ವಶ

    ಪಂಜಾಬ್ ಸಿಎಂ ಸಂಬಂಧಿಯಿಂದ 10 ಕೋಟಿ ರೂ. ನಗದು ವಶ

    ಚಂಡೀಗಡ: ಜಾರಿ ನಿರ್ದೇಶನಾಲಯವು(ಇಡಿ) ಪಂಜಾಬ್‍ನಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ನಡೆಸಿದ ದಾಳಿಯಲ್ಲಿ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಸಂಬಂಧಿಯೊಬ್ಬರಿಂದ 10 ಕೋಟಿ ರೂ. ನಗದು ವಶಪಡಿಸಿಕೊಂಡಿದೆ.

    ನೀವೇಶನದಿಂದ 8 ಕೋಟಿ ಸೇರಿದಂತೆ ಸುಮಾರು 10 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ರಾಜ್ಯದ 12 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ತನಿಖೆಯು ಇಂದು ಮುಂಜಾನೆ ಪೂರ್ಣಗೊಂಡಿದೆ. ಸಂಸ್ಥೆಯ ಹಲವಾರು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿವೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ

    ಕಾರ್ಯಾಚರಣೆ ವೇಳೆ ಸರಿ ಸುಮಾರು 10 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಚರಣ್‍ಜಿತ್ ಸಿಂಗ್ ಅವರ ಸೋದರಳಿಯನಾದ ಭೂಪಿಂದರ್ ಸಿಂಗ್ ಅಲಿಯಾಸ್ ಹನಿಗೆ ಸಂಬಂಧಿಸಿದ ಮನೆಯಲ್ಲಿ 8 ಕೋಟಿ ರೂ. ನಗದು ಪತ್ತೆಯಾಗಿದೆ. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ

    ಸಂದೀಪ್ ಕುಮಾರ್ ಎಂಬ ಮತ್ತೋರ್ವ ವ್ಯಕ್ತಿಗೆ ಸಂಬಂಧಿಸಿದ ನಿವೇಶನವು ಕೂಡಾ ದಾಳಿಗೊಳಗಾಗಿದ್ದು, 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟು 12 ಪ್ರದೇಶಗಳ ಮೇಲೆ ಇಡಿ ಅಧಿಕಾರಿಗಳು ದಾಳಿಮಾಡಿದ್ದಾರೆ.

    ದಾಳಿಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಚನ್ನಿ ಅವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆ ಬಂಗಾಳದ ವಿಧಾನಸಭಾ ಚುನಾವಣೆ ವೇಳೆ ಈ ದಾಳಿ ನಡೆಸಲಾಗಿತ್ತು. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಐಎಎಸ್ ಅಧಿಕಾರಿಯಿಂದ 10 ಕೋಟಿ ರೂ. ಬೇಡಿಕೆ: ಮನ್ಸೂರ್ ಬಾಂಬ್

    ಐಎಎಸ್ ಅಧಿಕಾರಿಯಿಂದ 10 ಕೋಟಿ ರೂ. ಬೇಡಿಕೆ: ಮನ್ಸೂರ್ ಬಾಂಬ್

    – ಸಚಿವ ಜಮೀರ್ ಅಹ್ಮದ್‍ಗೆ ಧನ್ಯವಾದ ತಿಳಿಸಿದ ಆರೋಪಿ

    ಬೆಂಗಳೂರು: ಐಎಎಸ್ ಅಧಿಕಾರಿಯೊಬ್ಬರು  10 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾನೆ.

    ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಯೊಂದು ಐಎಂಎನಲ್ಲಿ ಹೂಡಿಕೆ ಮಾಡಲು ಮುಂದಾಗಿತ್ತು. ಈ ಸಂಬಂಧ ಪರವಾನಿಗೆ ನೀಡಲು ಐಎಎಸ್ ಅಧಿಕಾರಿಯೊಬ್ಬರು 10 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಹಣ ಕೊಡುವುದು ವಿಳಂಬವಾಗಿದ್ದಕ್ಕೆ ಪರವಾನಿಗೆ ಪತ್ರವನ್ನು ನೀಡಲಿಲ್ಲ ಎಂದು ತಿಳಿಸಿದ್ದಾನೆ.

    ನಾನು ಒಬ್ಬರನ್ನು ಭೇಟಿಯಾಗಬೇಕಿದೆ. ಟಿಕೆಟ್ ಬುಕ್ ಮಾಡಿಕೊಟ್ಟರೆ ಹೋಗಿ ಆ ವ್ಯಕ್ತಿಯನ್ನು ಭೇಟಿಯಾಗಿ ಭಾರತಕ್ಕೆ ಮರಳುತ್ತೇನೆ. ಇದಕ್ಕೆ ನೀವು ಸಹಾಯ ಮಾಡಬೇಕಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.

    ಸಚಿವ ಜಮೀರ್ ಅಹ್ಮದ್‍ಖಾನ್ ಅವರು ಹೇಳಿರುವ ಒಂದು ವಿಡಿಯೋವನ್ನು ನಾನು ನೋಡಿದ್ದೇನೆ. ನೀವು ವಾಪಸ್ ಬನ್ನಿ. ನಿಮ್ಮ ಬೆಂಬಲಕ್ಕೆ ನಾನು ಇರುವೆ ಎಂದು ಭರವಸೆ ನೀಡಿದ್ದಾರೆ. ಅವರನ್ನು ಹೊರತುಪಡಿಸಿ ನನ್ನ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಮುಜ್ಜಾಯಿದೀನ್ ಕೂಡ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಹೇಳುವ ಮೂಲಕ ಮನ್ಸೂರ್ ಖಾನ್ ಸಚಿವರಿಗೆ ಧನ್ಯವಾದ ತಿಳಿಸಿದ್ದಾನೆ.

    ಹೂಡಿಕೆದಾರರ ಹಣ ಯಾರ ಬಳಿಯಿದೆ ಎನ್ನುವ ಪಟ್ಟಿ ನನ್ನ ಬಳಿಯಿದೆ. ಅವರ ಜೊತೆ ಬೇಕಾದರೆ ನೀವು ಹೋರಾಡಿ ಹಣ ಪಡೆದುಕೊಳ್ಳಿ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವುದಕ್ಕೆ ಎಲ್ಲಾ ಪ್ಲಾನ್ ನಡೆದಿದೆ. ನನ್ನ ಮುಗಿಸುವುದಕ್ಕೂ ಮುನ್ನ ಎಲ್ಲಾ ಸಾಕ್ಷಾಧಾರಗಳನ್ನು ಅಧಿಕಾರಿಗಳ ಮುಂದಿಡುವೆ. ಹಣ ವಸೂಲಿಗೆ ನೀವೂ ನೀವಾಗಿಯೇ ಹೋರಾಡುತ್ತೀರೋ? ಅಧಿಕಾರಿಗಳಿಗಳ ಮೂಲಕ ಹೋರಾಡುತ್ತೀರೋ ನನಗೆ ಗೊತ್ತಿಲ್ಲ. ಅಲೋಕ್ ಕುಮಾರ್ ಸರ್ ನನಗೆ 2-3 ದಿನ ಕಾಲಾವಕಾಶ ಕೊಡಿ. ನಾನು ಮಾನಸಿಕವಾಗಿ ತಯಾರಾಗಿ ಬರುವೆ. ನೀವು ಯಾರ ಮುಂದೆ ಹೇಳುತ್ತೀರೋ ಅವರನ್ನು ಭೇಟಿಯಾಗುವೆ. ವಿಮಾನ ನಿಲ್ದಾಣದಲ್ಲಿ ಟಿಕೆಟ್ ತಗೆದುಕೊಳ್ಳಬೇಕೋ, ಬೇಡವೋ ಎನ್ನುವುದನ್ನು ನೀವೇ ಹೇಳಿ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]