Tag: RS

  • ಪ್ರಬಲ ಎಡಪಂಥೀಯರಿಂದಾಗಿ ಕೇರಳದಲ್ಲಿ ಸಂಘಪರಿವಾರದ ಅಜೆಂಡಾ ವಿಫಲ: ಪಿಣರಾಯಿ ವಿಜಯನ್

    ಪ್ರಬಲ ಎಡಪಂಥೀಯರಿಂದಾಗಿ ಕೇರಳದಲ್ಲಿ ಸಂಘಪರಿವಾರದ ಅಜೆಂಡಾ ವಿಫಲ: ಪಿಣರಾಯಿ ವಿಜಯನ್

    – ಪರಸ್ಪರ ದ್ವೇಷ, ಜನರಲ್ಲಿ ಅನುಮಾನ ಮೂಡಿಸುವುದೇ ಸಂಘಪರಿವಾರದ ಅಜೆಂಡಾ

    ತಿರುವನಂತಪುರಂ: ರಾಜ್ಯದಲ್ಲಿ ಪ್ರಬಲ ಎಡಪಂಥೀಯರಿಂದಾಗಿ ಸಂಘ ಪರಿವಾರದ ಕೋಮುವಾದಿ ಅಜೆಂಡಾವು ಕೇರಳದಲ್ಲಿ ಸಫಲವಾಗಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

    ಕಮ್ಯೂನಿಸ್ಟ್ ಕ್ರಾಂತಿಕಾರಿ ಪಿ.ಕೃಷ್ಣ ಪಿಳ್ಳೈ ಅವರ ಸ್ಮರಣಾರ್ಥ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದ ವಿಜಯನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರ್‍ಎಸ್‍ಎಸ್ ತಮ್ಮ ಕೋಮು ಪ್ರಚಾರವನ್ನು ಹರಡುವ ಮತ್ತು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಈ ಮೂಲಕ ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರ್‍ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಎಡಪಂಥೀಯನ್ನು ದುರ್ಬಲಗೊಳಿಸಲು ಅವರು ವಿವಿಧ ಕೋಮುವಾದಿ ಅಜೆಂಡಾಗಳನ್ನು ಪ್ರಯತ್ನಿಸಿದ್ದಾರೆ. ಆದರೆ ಅವರು ಅದರಲ್ಲಿ ವಿಫಲರಾಗಿದ್ದಾರೆ. ಈಗ ಅವರು ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸುವತ್ತ ಗಮನಹರಿಸಿದ್ದಾರೆ. ಅದರ ಭಾಗವಾಗಿ ಅವರು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುತ್ತಾ, ಕೋಮು ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

    ಹಲಾಲ್ ಆಹಾರದ ಬಗ್ಗೆ ಇತ್ತೀಚಿನ ವಿವಾದವನ್ನು ನೀವೆಲ್ಲರೂ ಗಮನಿಸಿರಬಹುದು. ಇತ್ತೀಚೆಗೆ ಆರ್‍ಎಸ್‍ಎಸ್ ಶಬರಿಮಲೆಯಲ್ಲಿ ನೀಡಲಾಗುವ ಪ್ರಸಾದಕ್ಕೆ ಹಲಾಲ್ ಪ್ರಮಾಣೀಕರಣದ ವಿವಾದವನ್ನು ಮಾಡುತ್ತಿದೆ. ಈ ಮೂಲಕ ಸಮಾಜದಲ್ಲಿ ‘ದ್ವೇಷ’ ವನ್ನು ಹರಡಲು ಪ್ರಯತ್ನಿಸುತ್ತಿದೆ. ಇದು ನಮ್ಮ ಸಮಾಜಕ್ಕೆ ಹೊಸ ವಿಷಯವೇ? ಸಂಸತ್ತಿನಲ್ಲಿಯೂ ಹಲಾಲ್ ಪ್ರಮಾಣೀಕೃತ ಆಹಾರವಿದೆ. ಶಬರಿಮಲೆಯಲ್ಲಿ ಹಲಾಲ್ ಗುರುತು ಹೊಂದಿರುವ ಪ್ರಸಾದವು ಸರಬರಾಜು ಮಾಡಲ್ಪಟ್ಟಿದೆ ಎಂದು ಶಿವಸೇನೆಯ ನಾಯಕರು ಹೇಳಿದರು. ಹಲಾಲ್ ಪ್ರಮಾಣೀಕರಣವು ವಿವಿಧ ದೇಶಗಳಲ್ಲಿ ವ್ಯಾಪಾರ ತಂತ್ರದ ಭಾಗವಾಗಿದೆ. ಇದನ್ನು ಯಾವುದೇ ಒಂದು ನಿರ್ದಿಷ್ಟ ಧರ್ಮ ಮಾಡುವುದಿಲ್ಲ. ಅವರು ಬೇಕೆಂದು ನಮ್ಮಲ್ಲಿ ದ್ವೇಷವನ್ನು ಹರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    BJP - CONGRESS

    ಈ ಸಂಘಪರಿವಾರದ ಕೋಮುವಾದಿ ಅಜೆಂಡಾ ಇತರ ಹಲವು ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿದೆ. ಅದು ಅಲ್ಲದೇ ಅವರು ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೇರಳ ರಾಜ್ಯದಲ್ಲಿ ಎಡ ಚಳುವಳಿಯ ಪ್ರಬಲವಾಗಿದ್ದು, ಸಂಘಪರಿವಾರವು ತನ್ನ ಹಿಡಿತ ಸಾಧಿಸಲು ವಿಫಲವಾಗಿದೆ. ಹಲವು ರಾಜ್ಯಗಳ ದುರದೃಷ್ಟಕರ ಪರಿಸ್ಥಿತಿ ನಮಗೆ ತಿಳಿದಿದೆ. ಆ ರಾಜ್ಯಗಳಲ್ಲಿ ಎಡಪಕ್ಷಗಳಿಲ್ಲ ಮತ್ತು ಅಂತಹ ರಾಜ್ಯಗಳಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರು ಕೋಮುವಾದವನ್ನು ವಿರೋಧಿಸದಿರಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು.

    ಯಾವುದೇ ಧರ್ಮದ ಆಧಾರವಿಲ್ಲದೆ ರೈತರು ಮತ್ತು ಇತರ ಕಾರ್ಮಿಕ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಪರಸ್ಪರ ಹೋರಾಡಿದ ಕಾರಣ ಕಮ್ಯೂನಿಸ್ಟ್ ಚಳುವಳಿಯು ಕೇರಳದಲ್ಲಿ ಯಶಸ್ವಿಯಾಗಿದೆ. ನಾವು ವರ್ಗ ಹೋರಾಟವನ್ನು ನೋಡಿದ್ದೇವೆ. ನಮ್ಮ ಸಮಾಜವು ಹೇಗೆ ಬೆಳೆದಿದೆ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ, ಗ್ರಾಮೀಣ ಪ್ರದೇಶದಲ್ಲಿ ಕೇರಳವು ಅತ್ಯಧಿಕ ಕನಿಷ್ಠ ವೇತನವನ್ನು ಹೊಂದಿದೆ ಎಂಬ ಸಮೀಕ್ಷೆಯ ಫಲಿತಾಂಶವು ಹೊರಬಂದಿದೆ. ಅದು ಎಡಪಕ್ಷಗಳ ಹೋರಾಟದ ಫಲಿತಾಂಶವೂ ಆಗಿದೆ. ಆದರೆ ಸಂಘಪರಿವಾರ ಅಂತಹ ಎಲ್ಲ ಪ್ರಗತಿಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಣಕ್ಕಾಗಿ ಚಾಕುವಿನಿಂದ ಇರಿದು ಯುವಕ ತನ್ನ ಸ್ನೇಹಿತನನ್ನೇ ಕೊಂದ!

    ಪರಸ್ಪರ ದ್ವೇಷ ಹುಟ್ಟುಹಾಕುವುದು, ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸುವುದು ಸಂಘಪರಿವಾರದ ಅಜೆಂಡಾವಾಗಿದೆ. ತಲಶ್ಶೇರಿಯಲ್ಲಿ ಆರ್‍ಎಸ್‍ಎಸ್ ಇತ್ತೀಚೆಗೆ ನಡೆಸಿದ ಮೆರವಣಿಗೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ನಿಲ್ಲಿಸಬೇಕು ಎಂದು ಬೆದರಿಕೆ ಹಾಕಿ ಫೋಷಣೆಯನ್ನು ಕೂಗಿದ್ದಾರೆ. ಇಂತಹ ಘೋಷಣೆಗಳನ್ನು ಎತ್ತುವ ಮೂಲಕ ಅವರ ಅಜೆಂಡಾ ಏನು? ಕೇರಳದಲ್ಲಿ ಅವರ ಅಜೆಂಡಾ ಕೆಲಸ ಮಾಡುವುದಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಜನರ ಮನಸ್ಸಿನಲ್ಲಿ ಕೋಮುಗಲಭೆ ಮೂಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

  • RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

    RSS ಬಗ್ಗೆ ಮಾತನಾಡಿದರೆ ವೋಟು ಬರಲ್ಲ: ಪ್ರೀತಂಗೌಡ ವ್ಯಂಗ್ಯ

    ಹಾಸನ: ನಮ್ಮ ಮಾತೃ ಸಂಸ್ಥೆಯಾದ RSS ಬಗ್ಗೆ ಮಾತನಾಡಿದರೆ, ಅವರ ವೋಟು ಅವರಿಗೆ ಬರುವುದಿಲ್ಲ ಎಂದು ಜೆಡಿಎಸ್ ಬಗ್ಗೆ ಪ್ರೀತಂಗೌಡ ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ಹಾಸನದಲ್ಲಿ ಪ್ರೀತಂಗೌಡ ಅವರು ಉಪಚುನಾವಣೆ ಕುರಿತು ಮಾತನಾಡಿದ್ದು, ಉಪಚುನಾವಣೆ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಪ್ರಜ್ವಲ್, ರೇವಣ್ಣ, ನಿಖಿಲ್, ಕ್ಯಾಂಡಿಡೇಟ್ ಹೋಗಿದ್ದರು. ಒಬ್ಬೊಬ್ಬರಿಗೆ ಒಂದು ಸಾವಿರ ವೋಟು ಎಂದರೂ ಆರು ಸಾವಿರ ವೋಟು ಬರಬೇಕಿತ್ತು. ಅಲ್ಲಿ ಐದು ಸಾವಿರ ವೋಟು ಕ್ರಾಸ್ ಆಗಿಲ್ಲ ಎಂದು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ

    ಬಿಜೆಪಿ ಪಕ್ಷ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೂರು ಕಡೆ ಠೇವಣಿ ಕಳೆದುಕೊಂಡಿದೆ ಎಂಬ ರೇವಣ್ಣ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಾದೇಶಿಕ ಪಕ್ಷ ಸದೃಢವಾಗಿರಲಿ ಎಂದು ಆಶಿಸುವುದರಲ್ಲಿ ನಾನೂ ಒಬ್ಬ. ಪ್ರಾದೇಶಿಕ ಪಕ್ಷ ಇರಬೇಕು ನಾಡಿನ ಬಗ್ಗೆ ಹೋರಾಟ ಮಾಡುವ ಶಕ್ತಿ ಉಳಿಸಿಕೊಳ್ಳಬೇಕು ಎಂದು ಸಲಹೆ ಕೊಡುತ್ತೇನೆ. ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ಪಕ್ಷ ಎಂದರೆ ಬಿಜೆಪಿ. ಇವರ ಹತ್ರ ಇರೋದು 40 ಶಾಸಕರು. ಇವರು ಬಿಜೆಪಿ ಬಗ್ಗೆ ವಿಶ್ಲೇಷಣೆ ಮಾಡ್ತಾರೆ ಎಂದು ಹೇಳಿದರೆ ಅದರ ರಿಸಲ್ಟ್ ಹಾನಗಲ್ ಮತ್ತು ಸಿಂಧಗಿಯಲ್ಲಿ ನೋಡಿದ್ದೀರಿ ಎಂದು ಟಾಂಗ್ ಕೊಟ್ಟಿದ್ದಾರೆ.


    ನಮ್ಮ ಮಾತೃ ಸಂಸ್ಥೆಯಾದ RSS ಬಗ್ಗೆ ಮಾತನಾಡಿದರೆ, ಅವರ ವೋಟು ಅವರಿಗೆ ಬಾರದು. ಯಾವತ್ತೂ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮಾತನಾಡಿದರೋ, ಜನ ತೀರ್ಮಾನ ಮಾಡಿದರು. ಇವರು ರಾಜಕಾರಣದಲ್ಲಿ ಯಾವ ಮಟ್ಟಕ್ಕಾದರೂ ಹೋಗ್ತಾರೆ. ಇವರಿಗೆ ಬುದ್ಧಿ ಕಲಿಸಲು ಸೂಕ್ತ ಸಮಯ ಎಂದು ಹೇಳಿ ಅವರಿಗೆ ಆ ಮತವನ್ನು ಕೊಟ್ಟಿದ್ದಾರೆ. ಗೆದ್ದಂತಹ ಕ್ಷೇತ್ರದಲ್ಲಿ ಐದು ಸಾವಿರ ವೋಟನ್ನು ಉಳಿಸಿಕೊಳ್ಳಲು ಜೆಡಿಎಸ್‍ಗೆ ಆಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

  • #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    ನಾಗ್ಪುರ: ಕಾಂಗ್ರೆಸ್ ಹೈಕಮಾಂಡ್ ಹಾಗೂ ನಾಯಕರ ತೀವ್ರ ವಿರೋಧದ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್.ಎಸ್.ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದರು.

    ಆರ್ ಎಸ್‍ಎಸ್‍ನ ತೃತೀಯ ವರ್ಷದ ಸಂಘ ಶಿಕ್ಷಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಅಂಶಗಳನ್ನು ಉಲ್ಲೇಖಿಸಿದರು.

    ವಸುದೈವ ಕುಟುಂಬಕಂ ಎನ್ನುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ರಾಷ್ಟ್ರೀಯತೆ ಮತ್ತು ದೇಶಭಕ್ತಿ ಎರಡೂ ಒಂದೇ. ಸರ್ವೇ ಜನೋ, ಸುಖಿನೋ ಭವಂತು. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ಇದೇ ವೇಳೆ ದೇಶದ ಭವ್ಯ ಇತಿಹಾಸದ ಕುರಿತು ಹಲವು ಘಟನೆಗಳನ್ನು ಸ್ಮರಿಸಿದ ಅವರು, ಚಾಣಕ್ಯನ ಅರ್ಥ ಶಾಸ್ತ್ರ, ಅಶೋಕ, ಮೌರ್ಯರ ಆಡಳಿತ ಸೇರಿದಂತೆ ಬ್ರಿಟಿಷ್ ಆಳ್ವಿಕೆ, ದೇಶಭಕ್ತರು, ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟದ ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

    ರಾಷ್ಟ್ರೀಯತೆ ಕುರಿತು ನೆಹರೂ ಅವರ `ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರೀಯ ಎಂಬುವುದು, ಹಿಂದೂ, ಮುಸ್ಲಿಂ, ಸಿಖ್ ಹಾಗೂ ಭಾರತದ ಇತರ ಧರ್ಮಗಳ ಸೈದ್ಧಾಂತಿಕ ಸಮ್ಮಿಲನದಿಂದ ಮಾತ್ರ ಹೊರಬರಲು ಸಾಧ್ಯ ಎನ್ನುವ ಮನವರಿಕೆಯಾಗಿದೆ ಎಂಬ ಅರ್ಥ ಸಾರುವ ಸಾಲುಗಳನ್ನು ಉಲ್ಲೇಖಿಸಿದರು.

    ಇದೇ ವೇಳೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಮ್ಮನ್ನು ನಡೆಸುತ್ತಿದೆ. ಇವುಗಳು ನಮ್ಮ ಮಾರ್ಗದರ್ಶಿಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುವುದು ಒಂದು ಮಾರ್ಗಸೂತ್ರ. ಒಂದೇ ಸಂವಿಧಾನದ ಅಡಿ, ಒಂದಾಗಿ ಹಲವು ಭಾಷೆ, ಧರ್ಮದವರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

    ಇದಕ್ಕೂ ಮೊದಲು ಅವರು ಆರ್.ಎಸ್.ಎಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಜನ್ಮಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ, ಭಾರತಮಾತೆಯ ಶ್ರೇಷ್ಟ ಪುತ್ರ ಕೆಬಿ ಹೆಡಗೇವಾರ್ ಅವರಿಗೆ ಗೌರವ ಸಲ್ಲಿಸಲು ಆಗಮಿಸಿದ್ದೇನೆ ಎಂದು ಬರೆದು ತಮ್ಮ ಹಸ್ತಾಕ್ಷರ ಮಾಡಿದರು.

    ಇದಕ್ಕೂ ಮುನ್ನ ಇಂದು ಬೆಳಗ್ಗೆಯಿಂದಲೇ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಭೇಟಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರು, ಪ್ರಣಬ್ ದಾ ಇದನ್ನು ನಾವು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್ ಮಾಡಿದ್ದರು.

    ಪ್ರಣಬ್ ಮುಖರ್ಜಿ ಅವರು ಭಾಷಣ ಆರಂಭಿಸುವುದಕ್ಕೂ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆರ್.ಎಸ್.ಎಸ್ ಕೆಲಸ ಕಾರ್ಯಗಳನ್ನು ಟೀಕಿಸಿ ಟ್ವೀಟ್ ಮಾಡಲಾಗಿತ್ತು. ಇಂದಿನ ಭೇಟಿ ವೇಳೆ ಪ್ರಣಬ್ ಮುಖರ್ಜಿ ಅವರು ಏನೆಲ್ಲಾ ಮಾತನಾಡುತ್ತಾರೋ ಎಂದು ಕಾಂಗ್ರೆಸ್ ನಾಯಕರು ಆತಂಕಗೊಳಗಾಗಿದ್ದಂತೂ ಸುಳ್ಳಲ್ಲ.

    ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರತಿವರ್ಷದಂತೆ ಈ ಬಾರಿಯೂ ನಾಗ್ಪುರದಲ್ಲಿ ಸಂಘ ಶಿಕ್ಷಾ ವರ್ಗದ ಸಮಾರೋಪ ನಡೆಯುತ್ತಿದೆ. ಪ್ರತಿಬಾರಿಯೂ ನಾವು ಈ ದೇಶಕ್ಕೆ ಸೇವೆ ಸಲ್ಲಿಸಿದ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸುತ್ತೇವೆ. ಅದರಂತೆಯೇ ನಾವು ಈ ಬಾರಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೇವೆ. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಕ್ಷಣ ಪ್ರಣಬ್ ಬದಲಾಗಲ್ಲ. ಪ್ರಣಬ್ ಅವರು ಪ್ರಣಬ್ ಅವರಾಗಿಯೇ ಉಳಿಯುತ್ತಾರೆ.  ಆರ್ ಎಸ್‍ಎಸ್  ಆರ್ ಎಸ್‍ಎಸ್ ಆಗಿಯೇ ಉಳಿಯುತ್ತದೆ ಎಂದು ಹೇಳಿದರು.

    ವಿವಿಧತೆಯಲ್ಲಿ ಏಕತೆಯನ್ನು ನಾವು ಬಹಳ ವರ್ಷಗಳಿಂದಲೂ ಅನುಸರಿಸುತ್ತಿದ್ದೇವೆ. ನಾವು ಭಾರತೀಯರು. ದೇಶವನ್ನು ಸಂಘಟಿಸುವುದೇ ನಮ್ಮ ಗುರಿ. ಹಾಗಾಗಿ ನಾವು ದೇಶಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.