Tag: RRR

  • ಸಿಎಂ ಬೊಮ್ಮಾಯಿ ಅಣ್ಣನ ಸ್ಥಾನದಲ್ಲಿ ನಿಂತು ನಮ್ಮಷ್ಟೇ ದುಃಖ ಅನುಭವಿಸಿದ್ದಾರೆ: ಶಿವಣ್ಣ

    ಸಿಎಂ ಬೊಮ್ಮಾಯಿ ಅಣ್ಣನ ಸ್ಥಾನದಲ್ಲಿ ನಿಂತು ನಮ್ಮಷ್ಟೇ ದುಃಖ ಅನುಭವಿಸಿದ್ದಾರೆ: ಶಿವಣ್ಣ

    RRR’ ಪ್ರೀ-ರಿಲೀಸ್ ಇವೆಂಟ್‍ನಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಮಾತನಾಡಿದ್ದಾರೆ. ಇವೆಂಟ್‍ನಲ್ಲಿ ಅವರು, ಅಪ್ಪು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರ ಕಣ್ಣುಗಳು ನಮ್ಮನ್ನ ನೋಡುತ್ತಿವೆ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

    ಅಪ್ಪು ‘ಜೇಮ್ಸ್’ ಸಿನಿಮಾ ರಿಲೀಸ್ ಮಾಡಿದಾಗಿನಿಂದಲ್ಲೂ ಜನರು ಅವರನ್ನು ನೆನಪಿಸಿಕೊಳ್ಳುತ್ತ ಸಿನಿಮಾ ನೋಡುತ್ತಿದ್ದಾರೆ. ರಿಲೀಸ್ ಆಗಿ ಮೂರು ದಿನದಲ್ಲಿ ಜೇಮ್ಸ್ ವಿದೇಶದಲ್ಲಿಯೂ ಬಾರಿ ಸದ್ದು ಮಾಡುತ್ತಿದೆ. ಇದನ್ನು ನೆನಪಿಸಿಕೊಂಡ ಶಿವಣ್ಣ RRR ಸಿನಿಮಾಗೆ ಶುಭ ಕೋರಿ ಮಾತನಾಡಿದ್ದು, ನನಗೆ ತುಂಬಾ ಸಂತೋಷ ಆಗುತ್ತಿದೆ. ಜೊತೆಯಲ್ಲಿ ಸ್ವಲ್ಪ ದುಃಖನೂ ಇದೆ. ಅಪ್ಪುನ ಕಳೆದುಕೊಂಡು ನಾವೆಲ್ಲಾ 4 ತಿಂಗಳಿಂದ ದುಃಖದಲ್ಲೇ ಇದ್ದೀವಿ. ನಮ್ಮ ದುಃಖದಲ್ಲಿ ಇಡೀ ಭಾರತೀಯ ಚಿತ್ರರಂಗ, ಸರ್ಕಾರ ಇದೆ ಎಂದರು.  ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಸಿಎಂ ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತು ನಮ್ಮಷ್ಟೇ ದುಃಖ ಅವರಿಗೂ ಆಗಿದೆ. ರಾಮ್‍ಚರಣ್ ಹಾಗೂ ಎನ್‌ಟಿಆರ್‌ ಬಂದು ನಾವು ನಿಮ್ಮವರೆ ಅಂದಾಗ ತುಂಬಾ ಹೆಮ್ಮೆ ಅನಿಸುತ್ತೆ. ಅಪ್ಪುನಾ ನಾನು ಇವರಲ್ಲಿ ಕಾಣುತ್ತೇನೆ ನಿಮ್ಮಲ್ಲಿ ಕಾಣುತ್ತೇನೆ. ಅಪ್ಪು ಎಲ್ಲಿಗೂ ಹೋಗಿಲ್ಲ ಅವರ ಕಣ್ಣುಗಳು ನೋಡುತ್ತಿವೆ. ನಮ್ಮ ಮನಸ್ಸಲ್ಲಿ ನಿಮ್ಮ ಮನಸ್ಸುಗಳಲ್ಲಿ ಪ್ರತಿಯೊಬ್ಬರ ಮನಸ್ಸಲ್ಲೂ ಅಪ್ಪು ಇದ್ದಾರೆ ಎಂದು ದುಃಖಿತರಾದರು.

  • ನನ್ನ ಅಪ್ಪು, ನಾನು ಹೇಗೆ ಮರೆಯಲು ಸಾಧ್ಯ: ಬೊಮ್ಮಾಯಿ

    ನನ್ನ ಅಪ್ಪು, ನಾನು ಹೇಗೆ ಮರೆಯಲು ಸಾಧ್ಯ: ಬೊಮ್ಮಾಯಿ

    ಚಿಕ್ಕಬಳ್ಳಾಪುರ: ನನ್ನ ಅಪ್ಪು ನಾನು ಹೇಗೆ ಮರೆಯಲು ಸಾಧ್ಯ..? ಕನ್ನಡಿಗರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಅಪ್ಪು ಪಡೆದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದ ಆರ್‌ಆರ್‌ಆರ್‌ ಸಿನಿಮಾ ಫ್ರೀ ರಿಲೀಸ್ ಇವೆಂಟ್‍ನಲ್ಲಿ ಮಾತನಾಡಿದ ಅವರು, ನಾನು ಯಾದಗಿರಿಯ ಸುರಪುರಕ್ಕೆ ಹೋಗಿದ್ದೆ. ಎಲ್ಲಿ ನೋಡಿದರೂ ಅಪ್ಪು ಕಾಣುತ್ತಾನೆ. ಕನ್ನಡಿಗರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಅಪ್ಪು ಪಡೆದಿದ್ದಾರೆ. ಒಂದು ಮಾತು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವುದು ಸಾಧನೆ, ನಮ್ಮ ಅಪ್ಪು ಒಬ್ಬ ಸಾಧಕ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾನೆ. ಕರ್ನಾಟಕ ರತ್ನವನ್ನು ಶೀಘ್ರದಲ್ಲೇ ನಮ್ಮ ಅಪ್ಪುಗೆ ಕೊಡುತ್ತೇವೆ. ಆ ಕಾರ್ಯಕ್ರಮವನ್ನು ಸಹ ಇಷ್ಟೇ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ. ಅಪ್ಪು ಹೆಸರು ಸೂರ್ಯ ಚಂದ್ರ ಇರುವವರೆಗೂ ಎಲ್ಲರ ಹೃದಯದಲ್ಲಿ ಶಾಶ್ವತವಾಗಿರುತ್ತೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

    ಆರ್‌ಆರ್‌ಆರ್‌ ಸಿನಿಮಾ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾ. ಇದು ಸ್ವಾತಂತ್ರ್ಯ ಹೋರಾಟಗಾರರ ಸಿನಿಮಾ ಆದ ಕಾರಣ ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಬ್ರಿಟಿಷರ ವಿರುದ್ಧ ರಣಕಹಳೆ ಊದಿದ್ದು, ಮೊದಲು ಕಿತ್ತೂರು ರಾಣಿ ಚೆನ್ನಮ್ಮ. ಸ್ವಾತಂತ್ರ್ಯ ಬರಲು ತಮ್ಮ ಪ್ರಾಣವನ್ನ ಬಲಿ ನೀಡಿ ಸ್ವಾತಂತ್ರ್ಯ ನೀಡಿದ್ದಾರೆ. ಈಗ ಅಂತಹ ಸತ್ಯಗಳೆಲ್ಲವೂ ಹೊರಗೆ ಬರಬೇಕು ಯುವ ಪೀಳಿಗೆಗೆ ಸತ್ಯ ಗೊತ್ತಾಗಬೇಕು. ಆಗ ಮಾತ್ರ ಭವ್ಯ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ರಾಜಮೌಳಿಯವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಆರ್‌ಆರ್‌ಆರ್‌ ಸಿನಿಮಾ ಭಾರತ ದೇಶ ನೋಡಿ ಹೆಮ್ಮೆ ಪಡುತ್ತದೆ ಎನ್ನುವ ವಿಶ್ವಾಸ ನನಗಿದೆ. ನಿಜವಾದ ದೇಶ ಪ್ರೇಮಿಗಳು ಆರ್‌ಆರ್‌ಆರ್‌ ಸಿನಿಮಾ ಥಿಯೇಟರ್‌ಗೆ ಹೋಗಿ ನೋಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ

    ಆರ್‌ಆರ್‌ಆರ್‌ ಸಿನಿಮಾ ಅತ್ಯಂತ ಯಶಸ್ವಿಯಾಗಲಿ. ಈ ಸಿನಿಮಾವನ್ನ ಸ್ವಾತಂತ್ರ್ಯ ಹೋರಾಟಗಾರರಿಗೆ ಅರ್ಪಣೆ ಮಾಡುವಂತೆ ಕೋರಿದರು.  ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಆಜಾದ್, ಲಾಲಾ ಲಜಪತ್ ರಾಯ್, ಕಿತ್ತೀ ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಇವರೆಲ್ಲರಿಗೂ ಈ ಸಿನಿಮಾ ಅರ್ಪಣೆ ಮಾಡುವಂತೆ ಮನವಿ ಮಾಡಿಕೊಂಡರು.

  • RRR ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪೊಲೀಸರ ಮೇಲೆ ಬಾಟಲಿ, ಚಪ್ಪಲಿ ತೂರಿ ಅಭಿಮಾನಿಗಳ ಅತಿರೇಕದ ವರ್ತನೆ

    RRR ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪೊಲೀಸರ ಮೇಲೆ ಬಾಟಲಿ, ಚಪ್ಪಲಿ ತೂರಿ ಅಭಿಮಾನಿಗಳ ಅತಿರೇಕದ ವರ್ತನೆ

    ಚಿಕ್ಕಬಳ್ಳಾಪುರ: ರಾಜಮೌಳಿ ನಿರ್ದೆಶನದ ಮಲ್ಟಿ ಸ್ಟಾರ್ ಸಿನಿಮಾ ಇದೇ 25 ರಂದು ವಿಶ್ವದಾದ್ಯಂತ ತೆರೆಗೆ ಸಜ್ಜಾಗಿದೆ. ಈ ನಡುವೆ ಸಿನಿ ತಂಡ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಆದರೆ ಇವೆಂಟ್ ಆರಂಭಕ್ಕೂ ಮುನ್ನ ಅಭಿಮಾನಗಳ ಅತಿರೇಕದ ವರ್ತನೆ ಕಂಡುಬಂತು.

    ಆರ್‌ಆರ್‌ಆರ್ ಮೂವಿ ಸಾಂಗ್, ಟ್ರೈಲರ್‌ಗಳಿಂದ ಸಖತ್ ಸದ್ದು ಮಾಡ್ತಿದ್ದು, ಮಲ್ಟಿ ಸ್ಟಾರ್ ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ. ಈ ನಡುವೆ ಚಿತ್ರತಂಡ ಇವತ್ತು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಿತ್ತು. ಕಾರ್ಯಕ್ರಮದ ಆರಂಭದಲ್ಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ ಆರ್‌ಆರ್‌ಆರ್ ಚಿತ್ರತಂಡ ಹಾಡಿನ ಮೂಲಕ ನಮನ ಸಲ್ಲಿಸಿತು. ಅಪ್ಪು ನೆನೆದು ನೆರೆದಿದ್ದವರು ಭಾವುಕರಾದ್ರು. ಬೃಹತ್ ವೇದಿಕೆಯಲ್ಲಿ ನಟ ರಾಮ್‍ಚರಣ್, ನಟ ಜ್ಯೂನಿಯರ್ ಎನ್‌ಟಿಆರ್‌ ಸೇರಿದಂತೆ ಕಲಾವಿದರು ಚಿತ್ರದ ಹಾಡುಗಳಿಗೆ ಸ್ಪೆಪ್ಸ್ ಹಾಕಿದರು. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ನಾ ಮುಂದು ತಾ ಮುಂದು ಅಂತ ಒಬ್ಬರ ಮೇಲೊಬ್ಬರು ಮುನ್ನುಗ್ಗಿದ್ರು. ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದ್ರು. ಮುನ್ನುಗ್ಗಿ ವೇದಿಕೆಯ ಮುಂಭಾಗಕ್ಕೆ ಧಾವಿಸಿದರು. ಎಷ್ಟೇ ಹೇಳಿದ್ರೂ, ಯಾರೇ ಹೇಳಿದ್ರೂ ಅಭಿಮಾನಿಗಳಂತೂ ಯಾರ ಮಾತು ಕೇಳಲಿಲ್ಲ ಕೈಗೆ ಸಿಕ್ಕ ವಸ್ತುಗಳು, ಚೇರ್‌ಗಳನ್ನು ಬಿಸಾಡಿದ್ರು. ಪುಡಿ ಪುಡಿ ಮಾಡಿದ್ರು. ಪೊಲೀಸರ ಮೇಲೆಯೇ ಬಾಟಲಿ, ಚಪ್ಪಲಿ ತೂರಿ ಅಸಭ್ಯ ವರ್ತನೆ ತೋರಿದ್ರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾದರು.

    ಕಾರ್ಯಕ್ರಮಲ್ಲಿ ಅಭಿಮಾನದ ಸಾಗರವೇ ಹರಿದು ಬಂದಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ನಟ ಶಿವಣ್ಣ, ಸಚಿವ ಸುಧಾಕರ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

  • ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಇವೆಂಟ್‍ಗೆ ಅಭಿಮಾನಿಗಳ ಜಾತ್ರೆಯೇ ನೆರದಿದ್ದು, ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು.

    ತಮ್ಮ ನೆಚ್ಚಿನ ನಟರಾದ ಜ್ಯೂ.ಎನ್‍ಟಿಆರ್, ರಾಮ್‍ಚರಣ್‍ತೇಜ ಮತ್ತು ನಿರ್ದೇಶಕ ರಾಜಮೌಳಿಯನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿಕೊಂಡಿದ್ದರು. ಈ ವೇಳೆ ಪೊಲೀಸರನ್ನು ಲೆಕ್ಕಿಸದೆ ಅಭಿಮಾನಿಗಳು ಸ್ಟೇಜ್‌ ಬಳಿ ನುಗ್ಗಿದರು ಹೋದರು. ಭದ್ರತೆಗೆ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಓಡಿದರು. ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಈ  ಹಿನ್ನೆಲೆ ‘RRR’ ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ನಡೆಸಿಕೊಟ್ಟರು. ಇದನ್ನೂ ಓದಿ: ಇಂದು ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಅಭಿಮಾನಿಗಳ ಪ್ರತಿಕ್ರಿಯೆ ನೋಡಿದ ಸಿನಿಮಾ ತಂಡ ಫುಲ್ ಖುಷ್ ಆಗಿದ್ದು, ಗಲಾಟೆ ಮಾಡದಂತೆ ವಿನಂತಿ ಮಾಡಿಕೊಂಡಿದೆ. ಇವೆಂಟ್‍ಗೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ತಮ್ಮ ಸಿನಿಮಾಗಳ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಭಾವುಕರಾಗಿ ಮಾತನಾಡಿದ್ದಾರೆ.

  • ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ದೇ ಮೊದಲ ಬಾರಿಗೆ ತೆಲುಗಿನ ಇಬ್ಬರೂ ಸ್ಟಾರ್ ನಟರು ಒಂದಾಗಿ ‘ಆರ್.ಆರ್.ಆರ್’ ಸಿನಿಮಾ ಮಾಡಿದ್ದಾರೆ. ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈ ಇಬ್ಬರೂ ಕಲಾವಿದರ ಅಭಿಮಾನಿಗಳಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರೆ, ರಾಜಮೌಳಿ ಈ ಸಿನಿಮಾದಲ್ಲಿ ಇಬ್ಬರನ್ನೂ ಒಟ್ಟಾಗಿಸಿಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್ ಎಂಬ ಚರ್ಚೆ ಶುರುವಾಗಿದೆ.

    ಇಂದು ಆರ್.ಆರ್.ಆರ್ ಚಿತ್ರತಂಡ ಕರ್ನಾಟಕಕ್ಕೆ ಆಗಮಿಸಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಪ್ರಿ  ರಿಲೀಸ್ ಇವೆಂಟ್ ನಲ್ಲಿ ಭಾಗವಹಿಸುತ್ತಿದೆ. ಅದಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಚಿತ್ರತಂಡ ಹಲವು ವಿಷಯಗಳನ್ನು ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಇಬ್ಬರೂ ನಾಯಕರಾ? ಅಥವಾ ಒಬ್ಬರು ವಿಲನ್ ಮತ್ತೊಬ್ಬರು ಹೀರೋನಾ ಎಂಬ ಪ್ರಶ್ನೆ ನಿರ್ದೇಶಕರಿಗೆ ಎದುರಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಸಿನಿಮಾದ ಟ್ರೇಲರ್ ನೋಡಿದರೆ, ಒಬ್ಬರು ಖಳನಟರಂತೆ ಮತ್ತೊಬ್ಬರು ನಟರಂತೆ ಬಿಂಬಿಸಲಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಯಾರು, ಯಾವ ಪಾತ್ರ ಮಾಡಿದ್ದಾರೆ ಎನ್ನುವ  ಕುತೂಹಲ ಹೆಚ್ಚಾಗಿದೆ. ಹೀಗಾಗಿ ನಿರ್ದೇಶಕ ರಾಜಮೌಳಿಗೆ ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನಿರ್ದೇಶಕರಿಂದ ಬಂದ ಉತ್ತರ ಮಜವಾಗಿದೆ. ಈ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? ಎಂದು ಕೇಳಲಾದ ಪ್ರಶ್ನೆಗೆ, ಜಾಣತನದಿಂದಲೇ ಉತ್ತರ ನೀಡಿದ್ದಾರೆ ರಾಜಮೌಳಿ. ‘ಈ ಪ್ರಶ್ನೆಗೆ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರೇ ಉತ್ತರಿಸಬೇಕು’ ಎಂದು ಜಾರಿಕೊಂಡರು.

    ಕೂಡಲೇ ಈ ಪ್ರಶ್ನೆಗೆ ಉತ್ತರಸಿದ ಜೂನಿಯರ್ ಎನ್.ಟಿ.ಆರ್. ನಾವಿಬ್ಬರೂ ವಿಲನ್. ಜತೆಗೆ ರಾಜಮೌಳಿ ಅವರೂ ವಿಲನ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲಿಗೆ ಇಬ್ಬರಲ್ಲ ಒಬ್ಬರು ನೆಗೆಟಿವ್ ಶೇಡ್ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವುದು ಖಾತ್ರಿಯಾಗಿದೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

    ಆರ್.ಆರ್.ಆರ್. ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ರಾಮ್ ಚರಣ್ ತೇಜ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಎಂ.ಎಂ.ಕೀರವಾಣಿ ಸಂಗೀತ  ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಹಿಟ್ ಆಗಿವೆ. ಟ್ರೇಲರ್ ಕೂಡ ಭರವಸೆ ಮೂಡಿಸಿದೆ. ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

  • ಜೇಮ್ಸ್ ಸಿನಿಮಾ ನೋಡಿಲ್ಲ, ನೋಡ್ತೀನಿ: ಜ್ಯೂ.ಎನ್.ಟಿ.ಆರ್

    ಜೇಮ್ಸ್ ಸಿನಿಮಾ ನೋಡಿಲ್ಲ, ನೋಡ್ತೀನಿ: ಜ್ಯೂ.ಎನ್.ಟಿ.ಆರ್

    ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ತಮ್ಮ ಆರ್.ಆರ್.ಆರ್ ಸಿನಿಮಾದ ಕಾರ್ಯಕ್ರಮಕ್ಕಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಆತ್ಮೀಯ ಸ್ನೇಹಿತರಾದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ನೋಡುವುದಕ್ಕೆ ಆಗಿಲ್ಲ. ಆರ್.ಆರ್.ಆರ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವೆ. ಇದು ಸಿನಿಮಾ ರಿಲೀಸ್ ಆದ ತಕ್ಷಣವೇ ಜೇಮ್ಸ್ ಸಿನಿಮಾ ನೋಡುವೆ’ ಎಂದಿದ್ದಾರೆ ಜ್ಯೂನಿಯರ್.

    ಜ್ಯೂ.ಎನ್ಟಿಆರ್ ಮತ್ತು ಪುನೀತ್ ರಾಜ್ ಕುಮಾರ್ ಸ್ನೇಹ ಗಾಢವಾದದ್ದು. ಗೆಳೆತನದ ಕಾರಣಕ್ಕಾಗಿ ಪುನೀತ್ ಅವರ ಚಿತ್ರಕ್ಕೆ ಜೂ.ಎನ್.ಟಿ.ಆರ್ ಹಾಡು ಹೇಳಿದ್ದರು. ಇವರ ಕಾರ್ಯಕ್ರಮಕ್ಕಾಗಿ ಹಲವು ಬಾರಿ ಪುನೀತ್ ರಾಜ್ ಕುಮಾರ್ ಹೈದರಾಬಾದ್ ಗೆ ಹೋಗಿದ್ದಾರೆ. ಅಷ್ಟೊಂದು ಸ್ನೇಹ ಇವರಲ್ಲಿತ್ತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಪುನೀತ್ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಜ್ಯೂನಿಯರ್ ಚಿತ್ರವೂ ರಿಲೀಸ್ ಆಗುತ್ತಿದೆ. ಜೇಮ್ಸ್ ಒಳ್ಳೆಯ ಓಪನಿಂಗ್ ಪಡೆದಿದೆ. ಆರ್.ಆರ್.ಆರ್. ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

    ರಾಮ್ ಚರಣ್ ತೇಜ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಎಂ.ಎಂ.ಕೀರವಾಣಿ ಸಂಗೀತ  ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಹಿಟ್ ಆಗಿವೆ. ಟ್ರೇಲರ್ ಕೂಡ ಭರವಸೆ ಮೂಡಿಸಿದೆ. ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

  • ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭದ್ರತಾ ಮುಖ್ಯಸ್ಥನಿಗೆ ಕರೆ ಮಾಡಿದ್ದರಂತೆ ರಾಮ್ ಚರಣ್

    ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭದ್ರತಾ ಮುಖ್ಯಸ್ಥನಿಗೆ ಕರೆ ಮಾಡಿದ್ದರಂತೆ ರಾಮ್ ಚರಣ್

    ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ನಟನೆಯ, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕೆಲ ದೃಶ್ಯಗಳು ಉಕ್ರೇನ್ ನಲ್ಲಿ ಚಿತ್ರೀಕರಣವಾಗಿದೆ. ಕೆಲ ದಿನಗಳ ಕಾಲ ಇಡೀ ಚಿತ್ರತಂಡ ಉಕ್ರೇನ್ ನಲ್ಲಿಯೇ ಬೀಡುಬಿಟ್ಟು, ಅಲ್ಲಿನ ಸುಂದರ ತಾಣಗಳನ್ನು ಸೆರೆ ಹಿಡಿದಿತ್ತು. ಅದಾದ ಕೆಲವೇ ತಿಂಗಳ ಬಳಿಕೆ ಉಕ್ರೇನ್ ಮತ್ತು ರಷ್ಯಾ ಯುದ್ಧ ಶುರುವಾಯಿತು. ಇಡೀ ದೇಶಕ್ಕೆ ದೇಶವೇ ಯುದ್ಧದ ಭಯದಲ್ಲಿ ಬದುಕಿತ್ತು. ಈ ಸಂದರ್ಭದಲ್ಲಿ ನಟ ರಾಮ್ ಚರಣ್ ತೇಜ್, ತಮಗೆ ಪರಿಚಯ ಇರುವ ಭದ್ರತಾ ಸಿಬ್ಬಂದಿಯ ಮುಖ್ಯಸ್ಥರಿಗೆ ಕರೆ ಮಾಡಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದಾರೆ.

    ಭದ್ರತಾ ಸಿಬ್ಬಂದಿಯು ನೀಡಿದ ಮಾಹಿತಿ ರಾಮ್ ಚರಣ್ ಅವರಲ್ಲೂ ಆತಂಕ ಮೂಡಿಸಿತ್ತಂತೆ. “ನನ್ನ ತಂದೆ ಬಂದೂಕಿನೊಂದಿಗೆ ರಸ್ತೆಯಲ್ಲಿದ್ದಾರೆ. ಯಾವ ಕಡೆಯಿಂದ ಏನು ಬರುತ್ತದೋ ಗೊತ್ತಿಲ್ಲವೆಂದು’ ಭದ್ರತಾ ಸಿಬ್ಬಂದಿಯ ಮುಖ್ಯಸ್ಥರು ತಿಳಿಸಿದ್ದಾರೆ. “ನನ್ನ ಕೈಲಾದ ಸಹಾಯವನ್ನು ನಾನೂ ಮಾಡುತ್ತೇನೆ. ನಿಮ್ಮ ದೇಶಕ್ಕೆ ಬರಲು ಆಗದೇ ಇರಬಹುದು. ಇಲ್ಲಿಂದಲೇ ನಾನು ಶಾಂತಿಗಾಗಿ ಪ್ರಾರ್ಥಿಸುವೆ” ಎಂದು ಮರು ಉತ್ತರ ಕೊಟ್ಟಿದ್ದರಂತೆ ರಾಮ್ ಚರಣ್ ತೇಜ್. ಈ ಘಟನೆಯನ್ನು ಅವರು ಆರ್.ಆರ್.ಆರ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ ಮೆಗಾ ಪವರ್ ಸ್ಟಾರ್. ಅಲ್ಲದೇ, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ನಾನು ಇಲ್ಲಿಯವರೆಗೆ ಚಿತ್ರೀಕರಿಸಿದ ಅತ್ಯುತ್ತಮ ದೇಶಗಳಲ್ಲಿ ಉಕ್ರೇನ್ ದೇಶವು ಕೂಡ ಒಂದಾಗಿದೆ’ ಎಂದು ಉಕ್ರೇನ್ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

    ದೇಶದ ಜನತೆ ಮತ್ತು ವಿಶ್ವದಾದ್ಯಂತ ಇರುವ ಅವರು ತಮ್ಮ ಅಭಿಮಾನಿಗಳ ಜತೆ ತಾವು ಸದಾ ಇರುವುದನ್ನು ಅವರು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇದ್ದಾರೆ. ಕೋವಿಡ್-19 ಸಮಯದಲ್ಲೂ ಅವರು ಹತ್ತಾರು ಕೆಲಸಗಳನ್ನು ಮಾಡಿದ್ದರು. ಸಾಕಷ್ಟು ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದರು. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ‘ಆರ್‍ಆರ್‍ಆರ್’ ಕುರಿತು ಹೇಳುವುದಾದರೆ, ಉಕ್ರೇನ್ ಮತ್ತು ಬಲ್ಗೇರಿಯಾದಲ್ಲಿ ಈ ಚಿತ್ರದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. 400 ಕೋಟಿ ರೂಪಾಯಿ ಬಜೆಟ್‍ನಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಆರಂಭದಲ್ಲಿ ಜುಲೈ 30, 2020 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತಿಮವಾಗಿ, ಚಿತ್ರವನ್ನು ಮಾರ್ಚ್ 25, 2022 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  • ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು?

    ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು?

    ಬಾಹುಬಲಿ ಭಾಗ 1 ಮತ್ತು 2 ಸಿನಿಮಾ ಇಡೀ ಸಿನಿಕ್ಷೇತ್ರವೇ ಭಾರತ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಫೇಮ್‍ನಿಂದ ಪ್ರಭಾಸ್ ಅವರನ್ನು ಬೇರೆ ಪಾತ್ರದಲ್ಲಿ ಪ್ರೇಕ್ಷಕರು ಒಪ್ಪಿಕೊಂಡಿಲ್ಲ. ಈ ವೇಳೆ ಪ್ರಭಾಸ್ ಅವರಿಗೆ ಬಾಹುಬಲಿ ಭಾಗ 3 ಮಾಡುವ ಯೋಜನೆ ಇದ್ಯ ಎಂದು ಕೇಳಿದ್ದಕ್ಕೆ, ಎಸ್‍ಎಸ್ ರಾಜಮೌಳಿ ಬಯಸಿದರೆ ಮಾತ್ರ ಬಾಹುಬಲಿ 3 ಸಾಧ್ಯವಾಗುತ್ತೆ ಎಂದು ನಕ್ಕಿದರು.

    ‘ರಾಧೆ ಶ್ಯಾಮ್’ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಪ್ರಭಾಸ್‍ಗೆ ಬಾಹುಬಲಿ 3 ಬರುತ್ತ ಎಂಬ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಗುತ್ತ ಉತ್ತರ ಕೊಟ್ಟ ಅವರು, ಬಾಹುಬಲಿ 3 ಆಗಬೇಕಾದರೆ, ಅದು ಖಂಡಿತವಾಗಿಯೂ ಸಮಯ ತೆಗೆದುಕೊಳ್ಳುತ್ತದೆ. ಅದು ಎಸ್‍ಎಸ್ ರಾಜಮೌಳಿ ಕೈಯಲ್ಲಿದೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಮಾಡಬೇಕಾದ ಸಿನಿಮಾ ಈಗ ವಿರಾಟ್ ಪಾಲು! – ಕೊನೆಗೂ ಈಡೇರಲಿಲ್ಲ ದಿನಕರ್ ಕನಸು!

    ಬಾಹುಬಲಿ ನನ್ನ ಹೃದಯಕ್ಕೆ ಬಹಳ ಹತ್ತಿರವಿರುವ ಚಿತ್ರ. ನನ್ನ ವೃತ್ತಿಜೀವನದಲ್ಲಿ ಆ ಸಿನಿಮಾ ಬೀರಿದ ಪ್ರಭಾವವನ್ನು ಎಂದಿಗೂ ಬೇರೆ ಜೊತೆ ಹೊಂದಿಸಲು ಸಾಧ್ಯವಿಲ್ಲ. ಬಾಹುಬಲಿ 3 ಬರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಅದನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ. ಅದು ರಾಜಮೌಳಿ ಬಯಸಿದರೆ ಮಾತ್ರ ಆಗುತ್ತೆ ಎಂದು ಉತ್ತರಿಸಿದರು.

    ಬಾಹುಬಲಿ ಸಿನಿಮಾವನ್ನು ಬಿಟ್ಟು ಪ್ರಭಾಸ್ ಯಾವುದೇ ಪಾತ್ರ ಮಾಡಿದರೂ ಅದನ್ನು ಮೀರಿಸುವಂತಹ ಪಾತ್ರ ಅವರಿಗೆ ಸಿಗುತ್ತಿಲ್ಲ. ಅದಕ್ಕೆ ಅಭಿಮಾನಿಗಳು ಮತ್ತೆ ರಾಜಮೌಳಿ ಮತ್ತು ಪ್ರಭಾಸ್ ಒಟ್ಟಿಗೆ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದಾರೆ. ಬಾಹುಬಲಿಯಲ್ಲಿ ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿತ್ತು.

    ತಮ್ಮ ವೃತ್ತಿಜೀವನದಲ್ಲಿ ಇಬ್ಬರು ಫುಲ್ ಬ್ಯುಸಿಯಾಗಿದ್ದಾರೆ. ಪ್ರಭಾಸ್ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಇದ್ರೆ, ರಾಜಮೌಳಿ ಅವರು ತಮ್ಮ ‘RRR’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

  • ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಬಾಹುಬಲಿ ಸಿನಿಮಾದ ನಂತರ ರಾಜಮೌಳಿ ಮತ್ತು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕಾಂಬಿನೇಷನ್ ನ ಆರ್.ಆರ್.ಆರ್ ಸಿನಿಮಾ ಸಂಗೀತದ ಕಾರಣದಿಂದಾಗಿಯೂ ಗಮನ ಸೆಳೆಯುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ‘ಜನನಿ’, ‘ದೋಸ್ತಿ’ ಹಾಗೂ ‘ಹಳ್ಳಿನಾಟು’ ಹಾಡುಗಳು ಟಾಪ್ ಲಿಸ್ಟ್ ನಲ್ಲಿವೆ. ಈಗ ಮತ್ತೊಂದು ಹಾಡು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 14 ರಂದು ‘ಎತ್ತುವ ಜಂಡಾ’ ಸಾಂಗ್ ಬಿಡುಗಡೆ ಆಗಲಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ಈ ಹಾಡಿನ ವಿಶೇಷತೆ ಅಂದರೆ, ಸ್ಫೂರ್ತಿ ತುಂಬಬಲ್ಲಂತ ಸಾಹಿತ್ಯವನ್ನು ಒಳಗೊಂಡಿದೆ. ಅಲ್ಲದೇ, ಹಲವು ಅಪರೂಪದ ವಾದ್ಯಗಳನ್ನೂ ಈ ಹಾಡಿಗೆ ಕೀರವಾಣಿ ಬಳಸಿಕೊಂಡಿದ್ದಾರಂತೆ. ಹಾಗಾಗಿ ಬೇರೆ ರೀತಿಯ ಸೌಂಡ್ ಈ ಹಾಡಿನಲ್ಲಿದೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಬಾಹುಬಲಿ ಸಿನಿಮಾ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂ.ಎನ್.ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ‘ಆರ್‌ಆರ್‌ಆರ್‌’ ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ.

  • ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

    ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

    ಕ್ಷಿಣದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಎರಡು ಸಿನಿಮಾದಲ್ಲಿ ಈಗಾಗಲೇ ನಟಿಸಿರುವ ಕಿಚ್ಚ ಸುದೀಪ್, ಇದೀಗ ಅವರ ಮತ್ತೊಂದು ಸಿನಿಮಾದಲ್ಲಿ ಒಂದಾಗಿದ್ದಾರೆ. ಅದು ಆರ್.ಆರ್.ಆರ್ ಸಿನಿಮಾದಲ್ಲಿಯೇ ಎನ್ನುವುದು ಬಿಗ್ ಸರ್ ಪ್ರೈಸ್. ಇದನ್ನೂ ಓದಿ : ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    “ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಕಿಚ್ಚನಿಗೆ ಒಂದೊಳ್ಳೆ ಪಾತ್ರ ಕೊಟ್ಟು ತಮ್ಮ ಟೀಮ್ ಗೆ ಸೇರಿಸಿಕೊಂಡಿದ್ದರು ರಾಜಮೌಳಿ. ಮತ್ತೆ ಮತ್ತೆ ಸುದೀಪ್ ಅವರ ಜತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದರು. ಆದರೆ, ಆರ್.ಆರ್.ಆರ್ ಸಿನಿಮಾದಲ್ಲಿ ಸುದೀಪ್ ಅವರಿಗೆ ಸೂಟ್ ಆಗುವಂತಹ ಪಾತ್ರ ಇರಲಿಲ್ಲವಂತೆ. ಹಾಗಾಗಿ ಈ ಸಿನಿಮಾದಲ್ಲಿ ಕಿಚ್ಚನಿಗೆ ನಟಿಸುವುದಕ್ಕೆ ಆಗಲಿಲ್ಲ. ಆದರೇನಂತೆ, ಈ ಸಿನಿಮಾದಲ್ಲಿಯೂ ಕಿಚ್ಚ ಇರಲಿದ್ದಾರೆ. ಅದು ಟ್ರೇಲರ್ ರೂಪದಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಇನ್ನೇರಡು ವಾರ ಕಳೆದರೆ, ಆರ್.ಆರ್.ಆರ್ ಸಿನಿಮಾ ತೆರೆಯ ಮೇಲಿರುತ್ತದೆ. ಇತ್ತ ಸುದೀಪ್ ನಟನೆಯ ವಿಕ್ರಾಂತ್ ರೋಣ ಕೂಡ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಿನಿಮಾದ ಟ್ರೇಲರ್ ಅನ್ನು ಆರ್.ಆರ್.ಆರ್ ಸಿನಿಮಾ ತೆರೆಕಂಡ ಚಿತ್ರಮಂದಿರಗಳಲ್ಲಿ ಒಟ್ಟಿಗೆ ನೋಡಬಹುದಂತೆ. ಆಗೊಂದು ಪ್ಲ್ಯಾನ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    ಆರ್.ಆರ್.ಆರ್ ಸಿನಿಮಾ ಪ್ರದರ್ಶನ ಕಾಣುವಾಗ ತಮ್ಮೊಂದು ಟ್ರೇಲರ್ ತೋರಿಸಲು ಈಗಾಗಲೇ ಸಾಕಷ್ಟು ಚಿತ್ರ ನಿರ್ಮಾಪಕರು ರಾಜಮೌಳಿ ಅವರಿಗೆ ಮನವಿ ಮಾಡಿಕೊಂಡಿದ್ದಾರಂತೆ. ಆದರೆ, ಸಿನಿಮಾ ಉದ್ದ ಇರುವ ಕಾರಣಕ್ಕಾಗಿ ಹೆಚ್ಚಿನ ಚಿತ್ರಗಳಿಗೆ ಅವಕಾಶ ಸಿಕ್ಕಿಲ್ಲ. ಕಿಚ್ಚ ಸುದೀಪ್ ಅವರಿಗೂ ರಾಜಮೌಳಿ ಅವರಿಗೆ ಒಳ್ಳೆಯ ಬಾಂಧವ್ಯ ಇದೆ. ಹಾಗಾಗಿ ಆರ್.ಆರ್.ಆರ್ ಸಿನಿಮಾ ಮಧ್ಯೆ ವಿಕ್ರಾಂತ್ ರೋಣನಿಗೆ ಎಂಟ್ರಿ ಸಿಕ್ಕಿದೆ.