Tag: RRR

  • ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಬಾಲಿವುಡ್ ಬಹುಬೇಡಿಕೆಯ ನಟಿಯರಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ ಕೂಡ ಒಬ್ಬರು. ತಮ್ಮ ಬೋಲ್ಡ್ ನಟನೆ ಮೂಲಕ ಇಡೀ ಚಿತ್ರರಂಗವನ್ನೆ ಸೆಳೆದಿರುವ ಮೊದಲಬಾರಿಗೆ ‘RRR’ ಸಿನಿಮಾ ಮೂಲಕ ದಕ್ಷಿಣ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಎಂಟ್ರಿ ಕೊಟ್ಟ ಮೊದಲ ಸಿನಿಮಾ RRRನಲ್ಲಿ ಪ್ರೇಕ್ಷಕರಿಗೆ ಆಲಿಯಾ ಕಾಣಿಸಿಕೊಳ್ಳುವುದು ಕೆಲವೇ ನಿಮಿಷಗಳು. ಈ ಸಿನಿಮಾ ಕ್ರೆಡಿಟ್ ಜ್ಯೂ.ಎನ್‍ಟಿಆರ್, ರಾಮ್‍ಚರಣ್ ಮತ್ತು ನಿರ್ದೇಶಕ ರಾಜಮೌಳಿಗೆ ಹೋಗುತ್ತಿದೆ. ಇದರಿಂದ ಆಲಿಯಾ ಬೇಸರಗೊಂಡಿದ್ದಾರೆ ಎಂಬ ಸುದ್ದಿ ಎಲ್ಲಕಡೆ ಹಬ್ಬಿದೆ.

    ಆಲಿಯಾ ಹಲವು ದೃಶ್ಯಗಳನ್ನು ‘RRR’ ಸಿನಿಮಾಗಾಗಿ ರಾಜಮೌಳಿ ಚಿತ್ರೀಕರಿಸಿದ್ದರು. ಆದರೆ ಸಿನಿಮಾದ ಅವಧಿ ಉದ್ದವಾದ ಕಾರಣ ಅವಕ್ಕೆ ಕತ್ತರಿ ಹಾಕಿದ್ದಾರೆ. ಇದು ಆಲಿಯಾಗೆ ಬೇಸರ ತಂದಿದ್ದು, ಇನ್‍ಸ್ಟಾದಿಂದ ‘RRR’ ಸಿನಿಮಾದ ಪೋಸ್ಟರ್ ಮತ್ತು ರಾಜಮೌಳಿ ಅವರನ್ನು ಅನ್‍ಫೌಲೋ ಮಾಡಿದ್ದಾರೆ.  ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಈ ಕುರಿತು ಗಾಸಿಪ್ ಕ್ರಿಯೇಟ್ ಆದ ಬಳಿಕ ಆಲಿಯಾ ಪ್ರತಿಕ್ರಿಯೆ ಕೊಟ್ಟಿದ್ದು, ನಾನು RRR ಸಿನಿಮಾತಂಡದ ಮೇಲೆ ಬೇಸರಗೊಂಡಿದ್ದು, ಸಿನಿಮಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಎಲ್ಲಕಡೆ ಸುದ್ದಿ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಾವು ಏನು ಪೋಸ್ಟ್ ಮಾಡುತ್ತೇವೆ ಅದನ್ನೆ ನಂಬಿ ಈ ರೀತಿಯ ಊಹಿಸುವುದು ತಪ್ಪು. ನಾನು ನನ್ನ ಇನ್‍ಸ್ಟಾ ಪ್ರೋಫೈಲ್ ರಿಫ್ರೆಶ್ ಮಾಡುತ್ತಿರುತ್ತೇನೆ. ಕೆಲವು ಫೋಟೋಗಳನ್ನು ತೆಗೆದುಹಾಕುತ್ತೇನೆ. ಅದೇ ರೀತಿ RRR ಸಿನಿಮಾ ಪೋಸ್ಟ್ ಸಹ ಡಿಲೀಟ್ ಮಾಡಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    RRR ಜಗತ್ತಿಗೆ ನಾನು ಭಾಗಿಯಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ. ಸೀತಾ ಪಾತ್ರ ನನಗೆ ತುಂಬಾ ಇಷ್ಟವಾಯಿತು. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಿದ್ದು ನನಗೆ ಸಂತೋಷವಿದೆ. ಎನ್‍ಟಿಆರ್ ಮತ್ತು ರಾಮ್‍ಚರಣ್ ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದುಕೊಟ್ಟಿದೆ. ಈ ಅದ್ಭುತವಾದ ಚಿತ್ರಕ್ಕೆ ಜೀವತುಂಬಲು ರಾಜಮೌಳಿ ಮತ್ತು ತಂಡ ತುಂಬಾ ಕಷ್ಟಪಟ್ಟಿದೆ. ಹಲವು ವರ್ಷಗಳನ್ನು ಈ ಸಿನಿಮಾಗಾಗಿ ಕೊಟ್ಟಿದ್ದಾರೆ. ಕಷ್ಟಪಟ್ಟು ಮಾಡಿರುವ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾಹಿತಿ ಹಬ್ಬಿಸಬೇಡಿ. ಇದನ್ನು ನಾನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    RRR ಸಿನಿಮಾದಲ್ಲಿ ಆಲಿಯಾ ಪಾತ್ರದ ಬಗ್ಗೆ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದರು. ಆದರೆ ಈ ಸಿನಿಮಾದಲ್ಲಿ ಆಲಿಯಾ ಪಾತ್ರ ತುಂಬಾ ಚಿಕ್ಕದಾಗಿದ್ದು, ಅಷ್ಟು ಮಹತ್ವವನ್ನು ಕೊಟ್ಟಿಲ್ಲದೇ ಇರುವ ಕಾರಣ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಬಿ’ಟೌನ್‍ನಲ್ಲಿ ಭಾರೀ ಚರ್ಚೆಯಾಗುತ್ತಿತ್ತು. ಇದರ ನಡುವೆಯೇ ಆಲಿಯಾ ಇನ್‍ಸ್ಟಾದಿಂದ RRR ಸಿನಿಮಾ ಪೋಸ್ಟರ್ ಡಿಲೀಟ್ ಮಾಡಿದ್ದು, ಅವರು ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಗಾಸಿಪ್ ಎಲ್ಲಕಡೆ ಹಬ್ಬಿತ್ತು.

  • ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವಿಟ್ ವಾಪಸ್ಸು ಅವರ ಬುಡಕ್ಕೆ ಬಂದಿದೆ. ನಿರ್ದೇಶಕ ರಾಜಮೌಳಿ ಅವರನ್ನು ಕಾಲೆಳೆಯಲು ಹೋಗಿ, ಅಭಿಮಾನಿಗಳಿಂದ ತಾವೇ ಕಾಲೆಳಿಸಿಕೊಂಡಿದ್ದಾರೆ ವರ್ಮಾ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ. ಆ ಹುಡುಗಿಯರು ಯಾರು ಎನ್ನುವುದನ್ನೂ ಬಹಿರಂಗ ಪಡಿಸಿದ್ದಾರೆ.  ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಸದ್ಯ ರಾಮ್ ಗೋಪಾಲ್ ವರ್ಮಾ ‘ಖತ್ರಾ ಡೇಂಜರಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಅದು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವ ಮೊದಲ ಲೆಸ್ಬಿಯನ್ ಚಿತ್ರ. ನೈನಾ ಮತ್ತು ಅಪ್ಸರಾ ಲೆಸ್ಬಿಯನ್ ಗಳಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರನ್ನೇ ವರ್ಮಾ ಡೇಂಜರಸ್ ಹುಡುಗಿಯರು ಎಂದು ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ವರ್ಮಾ ಬೆಂಗಳೂರಿಗೆ ಕೂಡ ಬಂದಿದ್ದರು.

    ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಕುರಿತಾಗಿ ಸಾಕಷ್ಟು ಪೋಸ್ಟ್ ಮಾಡಿದ್ದಾರೆ ವರ್ಮಾ. ಅದಕ್ಕೂ ಮುನ್ನ ಈ ಕಲಾವಿದೆಯರ ಜತೆ ಪಬ್, ಹೊಟೇಲ್ ಅಂತ ಸುತ್ತಾಡಿ ಸುದ್ದಿ ಆಗಿದ್ದರು. ಅಲ್ಲದೇ, ಈ ಹುಡುಗಿಯರ ಹಾಟ್ ಹಾಟ್ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಪಡ್ಡೆಗಳ ನಿದ್ದೆ ಗೆಡಿಸಿದ್ದರು.

    ರಾಮ್ ಗೋಪಾಲ್ ವರ್ಮಾ ಅವರ ಟ್ವಿಟ್ ಅನ್ನು ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ತಮ್ಮ ಹುಡುಗಿಯರಿಗೂ ಟ್ಯಾಗ್ ಮಾಡಿದ್ದಾರೆ. ಯಾರೂ, ಅಷ್ಟಾಗಿ ವರ್ಮಾ ಅವರ ಟ್ವಿಟ್ ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ರಾಜಮೌಳಿ ಮತ್ತು ಇತರ ಕಲಾವಿದರ ಅಭಿಮಾನಿಗಳು ಮಾತ್ರ ವರ್ಮಾ ಮೇಲೆ ರೊಚ್ಚಿಗೆದ್ದಿದ್ದಾರೆ. ‘ನೀನು 100 ರೂಪಾಯಿ ಟಿಕೆಟ್ ನ ಸಿನಿಮಾ ಮಾಡುವವನು. ದೊಡ್ಡವರಿಗೆ ಹೋಲಿಸಿಕೊಳ್ಳಬೇಡ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

  • ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಶ್ ನಟನೆಯ ‘ಕೆಜಿಎಫ್ 2’ ರಿಲೀಸ್ ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅಂದೇ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ಕೂಡ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಥಿಯೇಟರ್ ನಲ್ಲಿ ಜೇಮ್ಸ್ ಸಿನಿಮಾ ಇನ್ನೂ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಆರ್.ಆರ್.ಆರ್ ಸಿನಿಮಾದ ಅಬ್ಬರದ ನಡುವೆಯೂ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಇದೆ. ಬಿಡುಗಡೆಯಾಗಿ ಒಂದು ತಿಂಗಳ ಮುಂಚೆಯೇ ಓಟಿಟಿಯಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್

    ಒಂದು ಕಡೆ ಯಶ್ ನಟನೆಯ ಕೆಜಿಎಫ್ 2 ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಆರ್.ಆರ್.ಆರ್ ಸಿನಿಮಾ ಕೂಡ ಬಿಡುಗಡೆ ಆಗಿದೆ. ಅಲ್ಲದೇ, ತಮಿಳಿನ ವಿಜತ್ ಅವರ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಸಹಜವಾಗಿಯೇ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ.

     

    ಜೇಮ್ಸ್ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಓಟಿಟಿಯಲ್ಲಿ ಏಪ್ರಿಲ್ 14ಕ್ಕೆ ಸ್ಟ್ರೀಮಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ತಂದೆ, ತಾತನ ಹೆಸರು ಬಳಸಿಕೊಳ್ಳದೆ ಜಿಪಂ ಸ್ಥಾನ ಗೆಲ್ಲಲಿ: ನಿಖಿಲ್‍ಗೆ ಸುಮಲತಾ ಸವಾಲು

    ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಈ ನಾಲ್ಕೂ ಭಾಷೆಗಳಲ್ಲೂ ಜೇಮ್ಸ್ ರಿಲೀಸ್ ಆಗುತ್ತಿದೆ. ಈ ಕಾರಣದಿಂದಾಗಿ ಸ್ಯಾಂಡಲ್ ವುಡ್ ಪಾಲಿಗೆ ಡಬಲ್ ಸಂಭ್ರಮ ತಂದಿದೆ. ಒಂದು ಕಡೆ ಯಶ್ ನಟನೆಯ ಸಿನಿಮಾ ಮತ್ತೊಂದು ಕಡೆ ಪುನೀತ್ ಅವರ ಜೇಮ್ಸ್. ಎರಡೂ ಸಿನಿಮಾಗಳನ್ನೂ ನೋಡಿ ಆನಂದಿಸಬಹುದಾಗಿದೆ.

  • ಆರ್.ಆರ್.ಆರ್ ನಿಖರ ಗಳಿಕೆ  ರೂ.611ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಆರ್.ಆರ್.ಆರ್ ನಿಖರ ಗಳಿಕೆ ರೂ.611ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಗಳಿಕೆಯ ಬಗ್ಗೆ ಹೆಚ್ಚಾಗಿ ಊಹಾಪೋಹಗಳಿಗೆ ಹರಿದಾಡಿದವು. ಒಂದೇ ದಿನಕ್ಕೆ 100 ಕೋಟಿ, ಮೂರೇ ದಿನಕ್ಕೆ 250 ಕೋಟಿ ಎಂಬ ಸುದ್ದಿಯೂ ಬಂತು. ಆದರೆ, ನಿಖರವಾಗಿ ಇಂತಿಷ್ಟೇ ಹಣ ಬಂದಿದೆ ಎಂದು ಅಧಿಕೃತವಾಗಿ ಚಿತ್ರತಂಡವು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ನಿರ್ಮಾಪಕರೇ ತಮ್ಮ ಚಿತ್ರದ ಗಳಿಕೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್

    ಬುಧವಾರ ನಿರ್ಮಾಪಕರು ನೀಡಿರುವ ಮಾಹಿತಿಯಂತೆ ಈವರೆಗೂ ಆರ್.ಆರ್.ಆರ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಶ್ವದಾದ್ಯಂತ ರೂ. 611 ಕೋಟಿಯಂತೆ. ಇದರಲ್ಲಿ ಭಾರತದಿಂದಲೇ 474 ಕೋಟಿ ಸಂಗ್ರಹವಾಗಿದೆ ಎಂದಿದ್ದಾರೆ. ಕೇವಲ ಹಿಂದಿ ಅವತರಣಿಕೆಯಿಂದಲೇ ಬರೋಬ್ಬರಿ 107 ಕೋಟಿ ಹಣ ಬಂದಿದೆಯಂತೆ. ಇದನ್ನೂ ಓದಿ: ತಂದೆ, ತಾತನ ಹೆಸರು ಬಳಸಿಕೊಳ್ಳದೆ ಜಿಪಂ ಸ್ಥಾನ ಗೆಲ್ಲಲಿ: ನಿಖಿಲ್‍ಗೆ ಸುಮಲತಾ ಸವಾಲು

    ಮಾರ್ಚ್ 25 ರಂದು ರಿಲೀಸ್ ಆಗಿರುವ ಈ ಸಿನಿಮಾ ಆರು ದಿನಕ್ಕೆ ಒಟ್ಟು 611 ಕೋಟಿ ರೂಪಾಯಿ ಗಳಿಸಿದ್ದು, ವಾರಾಂತ್ಯಕ್ಕೆ ಸಾವಿರ ಕೋಟಿ ರೂಪಾಯಿ ಮುಟ್ಟುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಹಾಗಾಗಿ ಹಣ ಮತ್ತಷ್ಟು ಹರಿದು ಬರಲಿದೆ ಎಂದಿದೆ ಡಿವಿವಿ ಎಂಟರ್ ಟೈನ್ ಮೆಂಟ್ ನಿರ್ಮಾಣ ಸಂಸ್ಥೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ರಾಜಮೌಳಿ ಅವರ ಹಿಂದಿನ ಎಲ್ಲ ಸಿನಿಮಾಗಳಿಗೂ ಹೋಲಿಸಿದರೆ, ಈ ಪ್ರಮಾಣದಲ್ಲಿ ಹಣ ಹರಿದು ಬಂದಿದ್ದು ಇದೇ ಮೊದಲ ಬಾರಿಗೆ. ಬಾಹುಬಲಿ ಚಿತ್ರಕ್ಕಿಂತಲೂ ಬಾಕ್ಸ್ ಆಫೀಸ್ ಕಲೆಕ್ಷನ್ ಆರ್.ಆರ್.ಆರ್ ನಲ್ಲಿ ಜೋರಾಗಿದೆಯಂತೆ. ತಮಿಳು, ಕನ್ನಡ, ತೆಲುಗು, ಹಿಂದಿ ಮಲಯಾಳಂ ಹೀಗೆ ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಯಶ್ ನಟನೆಯ ಕೆಜಿಎಫ್ ಸಿನಿಮಾ ಮತ್ತು ತಮಿಳಿನ ವಿಜಯ್ ಅವರ ಚಿತ್ರಗಳು ತೆರೆ ಕಾಣುವತನಕ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹಾಗಾಗಿ ಚಿತ್ರದ ಓಟಕ್ಕೆ ಯಾವುದೇ ಅಡೆತಡೆ ಕಾಣುತ್ತಿಲ್ಲ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಸ್ವಾತಂತ್ರ್ಯ ಪೂರ್ವದಲ್ಲಿ ಕ್ರಾಂತಿಕಾರಿಗಳಾದ ಕೋಮರಾಮ್ ಭೀಮ್ ಮತ್ತು ಸೀತಾರಾಮ ರಾಜು ಅವರನ್ನು ಹೋಲುವಂತಹ ಕಾಲ್ಪನಿಕ ಕಥೆಗಳನ್ನಾಧರಿಸಿ ಈ ಸಿನಿಮಾ ಮಾಡಿದ್ದಾರೆ ರಾಜಮೌಳಿ. ಹಾಗಾಗಿ ಈ ಸಿನಿಮಾ ಕಥೆಯಿಂದಲೂ ಮತ್ತು ಮೇಕಿಂಗ್ ನಿಂದಲೂ ಗಮನ ಸೆಳೆದಿದೆ.

  • ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಬಾಲಿವುಡ್‍ನ ಬಹು ಬೇಡಿಕೆಯ ನಟಿಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ಟಾಪ್ ಹೀರೋಯಿನ್‍ಗಳಿಗೆ ಟಫ್ ಕಾಂಪಿಟೇಷನ್ ನೀಡುತ್ತಿರುವ ಆಲಿಯಾ ಭಟ್ ಸದ್ಯ ಬಾಲಿವುಡ್‍ನ ದಿ ಮೋಸ್ಟ್ ಬ್ಯುಸಿಯಷ್ಟ್ ನಟಿಯಾಗಿದ್ದಾರೆ. ಗಂಗೂಬಾಯಿ ಕಾಥಿಯಾವಾಡ ಸಿನಿಮಾ ಸಕ್ಸಸ್ ಬಳಿಕ ಅವರು ಅಭಿನಯಿಸಿದ್ದ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸುವುದರ ಜೊತೆಗೆ ಹೊಸ ದಾಖಲೆ ಸೃಷ್ಟಿಸಿದೆ.

    ಇದೇ ಮೊದಲ ಬಾರಿಗೆ ಆಲಿಯಾ ಆರ್‌ಆರ್‌ಆರ್ ಸಿನಿಮಾ ಮೂಲಕ ಸೌತ್ ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದು, ಚಿತ್ರದಲ್ಲಿ ನಟ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್‍ಟಿಆರ್ ನಾಯಕರಾಗಿ ಮಿಂಚಿದ್ದರೆ, ಪ್ರಮುಖ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿ ಇಂಡಸ್ಟ್ರಿಯ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿ ಆರ್‌ಆರ್‌ಆರ್ ಅದ್ದೂರಿ ಪ್ರದರ್ಶನ ಕಾಣುತ್ತಿದ್ದರೂ, ಆಲಿಯಾ ಮಾತ್ರ ಕೊಂಚ ಬೇಸರದಲ್ಲಿದ್ದಾರೆ.

    ಹೌದು, ಆಲಿಯಾ ಭಟ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಕೆಲವು ಆರ್‌ಆರ್‌ಆರ್ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ನಿರ್ದೇಶಕ ರಾಜಮೌಳಿ ಅವರನ್ನು ಅನ್‍ಫಾಲೋ ಮಾಡಿದ್ದಾರೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಮೊದಲಿಗೆ ಆರ್‌ಆರ್‌ಆರ್ ಚಿತ್ರದ ಪ್ರಮೋಷನ್‍ನಲ್ಲಿ ಕಾಣಿಸಿಕೊಂಡಿದ್ದ ಆಲಿಯಾ ಭಟ್ ನಂತರ ನಡೆದ ಸಿನಿಮಾದ ದೊಡ್ಡ ಇವೆಂಟ್‍ಗೆ ಗೈರಾಗಿದ್ದರು. ಅಲ್ಲದೇ ಆರ್‌ಆರ್‌ಆರ್ ಸಿನಿಮಾದಲ್ಲಿ ಆಲಿಯಾಗೆ ಉತ್ತಮ ಪಾತ್ರ ನೀಡುವಲ್ಲಿ ರಾಜಮೌಳಿ ವಿಫಲರಾಗಿದ್ದಾರೆ. ಹಾಗಾಗಿ ಈ ಎಲ್ಲ ಕಾರಣಗಳಿಂದ ಆಲಿಯಾ ಬೇಸರಗೊಂಡಿದ್ದು, ಇದೀಗ ಆಲಿಯಾ ರಾಜಮೌಳಿ ಅವರನ್ನು ಅನ್‍ಫಾಲೋ ಮಾಡಿ, ಆರ್‌ಆರ್‌ಆರ್ ಸಿನಿಮಾದ ಪೋಸ್ಟರ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ

  • ಕನ್ನಡದ ಸಣ್ಣ ಬಜೆಟ್ ಚಿತ್ರಗಳಿಗೆ ಥಿಯೇಟರ್ ಇಲ್ಲ: ಆತಂಕದಲ್ಲಿ ನಿರ್ಮಾಪಕ

    ಕನ್ನಡದ ಸಣ್ಣ ಬಜೆಟ್ ಚಿತ್ರಗಳಿಗೆ ಥಿಯೇಟರ್ ಇಲ್ಲ: ಆತಂಕದಲ್ಲಿ ನಿರ್ಮಾಪಕ

    ತಿಂಗಳು ಭಾರೀ ಬಜೆಟ್ ಸಿನಿಮಾಗಳು ರಿಲೀಸ್ ಆಗಿವೆ. ಹಾಗಾಗಿ ಸಣ್ಣ ಬಜೆಟ್ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಎಲ್ಲ ಭಾಷೆ ಸೇರಿ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಜೇಮ್ಸ್ ಇನ್ನೂ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಎರಡೂ ಸಿನಿಮಾಗಳ ಜತೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಕೂಡ ನೂರಾರು ಚಿತ್ರಮಂದಿರಗಳಲ್ಲಿದೆ. ಹೀಗಾಗಿ ಕನ್ನಡದ ಸಣ್ಣ ಬಜೆಟ್ ಚಿತ್ರಗಳು ಥಿಯೇಟರ್ ಕೊರತೆ ಎದುರಾಗಿದೆ. ಹಾಗಾಗಿ ಅನಿವಾರ್ಯವಾಗಿ ಆಯಾ ನಿರ್ಮಾಪಕರು ತಮ್ಮ ತಮ್ಮ ಚಿತ್ರಗಳ ರಿಲೀಸ್ ಅನ್ನು ಮುಂದೂಡುವ  ಅನಿವಾರ್ಯತೆ ಸೃಷ್ಟಿಯಾಗಿದೆ.  ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಈ ಹಿಂದೆ ಹರೀಶ್ ವಯಸ್ಸು 36 ಸಿನಿಮಾಗೂ ಹೀಗೆಯೇ ಆಗಿತ್ತು. ಅವರು ಕೂಡ ಥಿಯೇಟರ್ ಸಮಸ್ಯೆಯಿಂದಾಗಿ ಅತೀ ಕಡಿಮೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದರು.  ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ಹೊಸಬರ ‘ತ್ರಿಕೋನ’ ಸಿನಿಮಾ ಕೂಡ ಏಪ್ರಿಲ್ 1 ರಂದು ರಿಲೀಸ್ ಆಗಬೇಕಿತ್ತು. ಈ ಚಿತ್ರಕ್ಕೂ ಚಿತ್ರಮಂದಿರಗಳು ಸಿಕ್ಕಿಲ್ಲ. ಹಾಗಾಗಿ ಏಪ್ರಿಲ್ 8ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಹೊರಟಿದೆ ಚಿತ್ರತಂಡ. ಈ ಕುರಿತು ಮಾತನಾಡಿರುವ ನಿರ್ದೇಶಕ ಚಂದ್ರಕಾಂತ್ ‘ಏಪ್ರಿಲ್ ಮೊದಲ ವಾರದಲ್ಲಿ 7 ಚಿತ್ರಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ನಮ್ಮ ಚಿತ್ರವನ್ನು ಏಪ್ರಿಲ್ 8ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಅಲ್ಲದೇ, ಈ ವಾರ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ತಲೆದಂಡ’ ಕೂಡ ಬಿಡುಗಡೆ ಆಗುತ್ತಿದೆ. ಇದಕ್ಕೂ ಥಿಯೇಟರ್ ಸಮಸ್ಯೆ ಎದುರಾಗಿದೆ. ಇದು ವಿಜಯ್ ನಟನೆಯ ಕೊನೆಯ ಸಿನಿಮಾವಾಗಿದ್ದರಿಂದ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಿ ಎನ್ನುವುದು ನಿರ್ದೇಶಕರ ಬೇಡಿಕೆ. ಆದರೆ, ಈಗ ಚಿತ್ರಮಂದಿರದಲ್ಲಿರುವ  ಅಷ್ಟೂ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾಗಿ ಅವುಗಳ ಬದಲು ಹೊಸ ಸಿನಿಮಾ ಹಾಕುವುದು ಕಷ್ಟವಾಗಲಿದೆ.

  • RRR- ಥಿಯೇಟರ್ ಗೆ ‘ಗನ್’ ತಂದ ಅಭಿಮಾನಿ, ಆಗಿದ್ದೇನು?

    RRR- ಥಿಯೇಟರ್ ಗೆ ‘ಗನ್’ ತಂದ ಅಭಿಮಾನಿ, ಆಗಿದ್ದೇನು?

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಂದು ಕಡೆ ಬಾಕ್ಸ್ ಆಫೀಸ್ ಭರ್ತಿ ಆಗುತ್ತಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಅತಿರೇಕ ವರ್ತನೆಗಳು ನಡೆಯುತ್ತಿದೆ. ಹೀಗಾಗಿ ಸ್ವತಃ ಆರ್.ಆರ್.ಆರ್ ಚಿತ್ರತಂಡವೇ ತಲೆ ಕೆಡಿಸಿಕೊಂಡು ಕೂತಿದೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಸಿನಿಮಾದ ಫಸ್ಟ್ ಶೋಗೆ ಬಂದಿದ್ದ ಚಿತ್ತೂರು ಅಭಿಮಾನಿ ಖುಷಿಯಲ್ಲಿ ಸಂಭ್ರಮಿಸುತ್ತಲೇ ಹೃದಯಾಘಾತವಾಗಿ ತೀರಿಕೊಂಡ. ಆನಂತರ ಆಂಧ್ರದ ಇಬ್ಬರು ಅಭಿಮಾನಿಗಳು ಟಿಕೆಟ್ ಸಿಗಲಿಲ್ಲ ಎಂದು ಬೇಸರದಲ್ಲಿ ಬೈಕ್ ಓಡಿಸಿಕೊಂಡು ಹೋಗುವಾಗ ಅಪಘಾತವಾಗಿ ಜೀವ ಕಳೆದುಕೊಂಡರು. ಇಲ್ಲೊಬ್ಬ ಅಭಿಮಾನಿ ಗನ್ ಸಮೇತ ಚಿತ್ರ ನೋಡಲು ಬಂದು, ಆತಂಕ ಸೃಷ್ಟಿ ಮಾಡಿದ್ದಾನೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಈ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ಈಸ್ಟ್ ಗೋಧಾವರಿ ಜಿಲ್ಲೆಯ ಪೀಟಾಪುರಂ ಎಂಬಲ್ಲಿ. ಈ ಊರಿನ ಅನ್ನಪೂರ್ಣ ಚಿತ್ರಮಂದಿರದಲ್ಲಿ ಆರ್.ಆರ್.ಆರ್ ಪ್ರದರ್ಶನದ ವೇಳೆಗೆ ಬಾಲಾಜಿ ಹೆಸರಿನ ಅಭಿಮಾನಿಯೊಬ್ಬ ಗನ್ ತಂದು, ಕ್ಯಾಮೆರಾದ ಮುಂದೆಯೇ ಫೋಸ್ ಕೊಟ್ಟಿದ್ದ. ಥಿಯೇಟರ್ ಒಳಗೆ ಹೋಗಿ ಪರದೆಯ ಮುಂದೆಯೇ ಗನ್ ಹಿಡಿದುಕೊಂಡು ನಿಂತುಬಿಟ್ಟ. ಅದನ್ನು ಮಾಧ್ಯಮಗಳು ಕೂಡ ಪ್ರಸಾರ ಮಾಡಿದವು. ಕ್ಷಣಾರ್ಥದಲ್ಲಿಯೇ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಯಿತು. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಫೋಟೋಗಳು ಮತ್ತು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನ್ನಪೂರ್ಣ ಥಿಯೇಟರ್ ಸರಹದ್ದಿನ ಪೀತಾಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಲಾಜಿಯನ್ನು ವಶಕ್ಕೆ ಪಡೆದಿದ್ದಾರೆ. ಅವನ ಜತೆಗಿದ್ದ ಗನ್ ಅನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈತನಿಗೆ ಗನ್ ಹೇಗೆ ಬಂದಿತು, ಅದರಲ್ಲಿದ್ದ ಗುಂಡುಗಳು ಎಷ್ಟು ಅಪಾಯಕಾರಿ, ಅವನು ಯಾಕೆ ಗನ್ ಅನ್ನು ಥಿಯೇಟರ್ ಗೆ ತಂದ ಹೀಗೆ ಎಲ್ಲಾ ಆಯಾಮಗಳಲ್ಲೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರಂತೆ.

  • RRR ಸಿನಿಮಾದಲ್ಲಿ ತಾಂತ್ರಿಕ ದೋಷ- ಥಿಯೇಟರ್‌ ಗಾಜು ಹೊಡೆದ ಫ್ಯಾನ್ಸ್‌, ಟಿಕೆಟ್‌ ದರ ವಾಪಸ್‌

    RRR ಸಿನಿಮಾದಲ್ಲಿ ತಾಂತ್ರಿಕ ದೋಷ- ಥಿಯೇಟರ್‌ ಗಾಜು ಹೊಡೆದ ಫ್ಯಾನ್ಸ್‌, ಟಿಕೆಟ್‌ ದರ ವಾಪಸ್‌

    ದಾವಣಗೆರೆ: ತ್ರಿಬಲ್ ಆರ್ ಸಿನಿಮಾ ಭಾರತದಾತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ ದಾವಣಗೆರೆಯಲ್ಲಿ ಸಿನಿಮಾ ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಂಡುಬಂದು ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಇಡೀ ಚಿತ್ರಮಂದಿರದ ಗಾಜನ್ನು ಪುಡಿ-ಪುಡಿ ಮಾಡಿರುವ ಘಟನೆ ಶುಕ್ರವಾರ(ನಿನ್ನೆ) ರಾತ್ರಿ ಜಗಳೂರಿನ ಭಾರತ ಚಿತ್ರಮಂದಿರದಲ್ಲಿ ನಡೆದಿದೆ.

    ಜಗಳೂರು ತಾಲೂಕಿನ ಭಾರತ ಚಿತ್ರಮಂದಿರದಲ್ಲಿ ಕಳೆದ ದಿನ ಬೆಳಗ್ಗೆಯಿಂದ ಮೂರ್ನಾಲ್ಕು ಶೋ ತ್ರಿಬಲ್ ಆರ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಕಳೆದ ದಿನ ಮೂರನೇ ಶೋ ಪ್ರದರ್ಶನದ ವೇಳೆ ತಾಂತ್ರಿಕ ದೋಷದಿಂದ ವೀಡಿಯೋ ಕಟ್ ಕಟ್ ಆಗಿ ಬರುವುದಲ್ಲದೆ ಸೌಂಡ್ ಎಫೆಕ್ಟ್ ಬಾರದಿರುವುದಕ್ಕೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪರಿಣಾಮ ಚಿತ್ರಮಂದಿರದ ಪಿಓಪಿ ಶೀಟ್ ಹಾಗೂ ಕೆಲವು ವಸ್ತುಗಳನ್ನು ಮುರಿದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ:  ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಅಭಿಮಾನಿಗಳ ಗಲಾಟೆಯಿಂದ ಚಿತ್ರಮಂದಿರದ ಸಿಬ್ಬಂದಿ ಕ್ಷಮೆಯಾಚಿಸುವ ಮೂಲಕ ಅಂದಿನ ರಾತ್ರಿಯ ಶೋ ರದ್ದು ಮಾಡಿದ್ದಾರೆ. ಅಲ್ಲದೇ ಟಿಕೆಟ್ ದರವನ್ನು ವಾಪಸ್ ನೀಡಿ ಅಭಿಮಾನಿಗಳನ್ನು ಕಳುಹಿಸಿದ್ದಾರೆ. ಇದಲ್ಲದೆ 20 ರಿಂದ 30 ಕಿಲೋಮೀಟರ್‌ಗಳು ಕ್ರಮಿಸಿ ಚಿತ್ರ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳು ನಿರಾಸೆಯಿಂದ ಮನೆ ಕಡೆ ಮುಖ ಮಾಡಿದ್ದಾರೆ.

  • ಫಸ್ಟ್ ಡೇ ಕಲೆಕ್ಷನ್ RRR ದಾಖಲೆ – ಬಾಕ್ಸ್ ಆಫೀಸ್ ಕಿಂಗ್ ರಾಜಮೌಳಿ

    ಫಸ್ಟ್ ಡೇ ಕಲೆಕ್ಷನ್ RRR ದಾಖಲೆ – ಬಾಕ್ಸ್ ಆಫೀಸ್ ಕಿಂಗ್ ರಾಜಮೌಳಿ

    ಹೈದರಾಬಾದ್: ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದಿರುವ ಆರ್‌ಆರ್‌ಆರ್ ಸಿನಿಮಾ ಭಾರತದ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದೆ.

    ಶುಕ್ರವಾರವಷ್ಟೇ ಬಿಡುಗಡೆಯಾದ ಆರ್‌ಆರ್‌ಆರ್ ಸಿನಿಮಾ ಮೊದಲ ದಿನದಂದೇ ಎಲ್ಲಾ ಭಾಷೆಗಳಿಂದಲೂ 240 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

    ಈ ಹಿಂದೆ ರಾಜಮೌಳಿ ನಿರ್ದೇಶಿಸಿದ್ದ ನಟ ಪ್ರಭಾಸ್ ಅಭಿನಯ ಬಾಹುಬಲಿ-2 ಸಿನಿಮಾದ ಮೊದಲ ದಿನದ ಕಲೆಕ್ಷನ್‍ನನ್ನು ಆರ್‌ಆರ್‌ಆರ್ ಸಿನಿಮಾ ಬ್ರೇಕ್ ಮಾಡಿದೆ. ನಟ ರಾಮ್‍ಚರಣ್ ತೇಜ ಹಾಗೂ ಜೂ.ಎನ್‍ಟಿಆರ್ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದು, ಆರ್‌ಆರ್‌ಆರ್ ಸಿನಿಮಾವು ಮೊದಲ ದಿನವೇ ಕೇವಲ ತೆಲುಗಿನ ವಿವಿಧ ಪಾಂತ್ಯಗಳಲ್ಲಿ ಸುಮಾರು 120 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತವನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದೆ.

    ವಿಶ್ವದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿರುವ ಆರ್‌ಆರ್‌ಆರ್ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ತಮಿಳಿನಲ್ಲಿ 10 ಕೋಟಿ, ಹಿಂದಿಯಲ್ಲಿ 25 ಕೋಟಿ, ಕನ್ನಡದಲ್ಲಿ 14 ಕೋಟಿ, ಮಲಯಾಳಂನಲ್ಲಿ 4 ಕೋಟಿ ರೂ.ವನ್ನು ಗಳಿಸಿದೆ. ಜೊತೆಗೆ ಯುಎಸ್‍ಎ, ಯುಕೆ, ಆಸ್ಟ್ರೇಲಿಯಾ, ಕೆನಡಾ ಮತ್ತು ಮಧ್ಯಪ್ರಾಚ್ಯದಲ್ಲಿ ಈ ಚಿತ್ರವು 75 ಕೋಟಿ ರೂ.ಗೂ ಹೆಚ್ಚು ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ.

    ಸದ್ಯ ಆರ್‌ಆರ್‌ಆರ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಎಲ್ಲ ಚಿತ್ರಮಂದಿರಗಳಲ್ಲಿಯೂ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದೆ. ಹೀಗಿದ್ದರೂ ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮತ್ತು ಯುಪಿಯ ಕೆಲವು ಸ್ಥಳಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

    ಬಾಹುಬಲಿ ಬಳಿಕ ರಾಜಮೌಳಿ ಅವರು ಆರ್‌ಆರ್‌ಆರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಮತ್ತು ಜೂನಿಯರ್ ಎನ್‍ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಸಮುದ್ರಕನಿ, ಅಜಯ್ ದೇವಗನ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ.

  • RRR ಎಂಟ್ರಿಗೆ ಬಾಕ್ಸ್ ಆಫೀಸ್ ಶೇಕ್ – ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

    RRR ಎಂಟ್ರಿಗೆ ಬಾಕ್ಸ್ ಆಫೀಸ್ ಶೇಕ್ – ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?

    ಟಾಲಿವುಡ್ ನಟ ರಾಮ್‍ಚರಣ್ ತೇಜ ಹಾಗೂ ಜೂ.ನಿಯರ್ ಎನ್‍ಟಿಆರ್ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ.

    ಬಾಹುಬಲಿಯ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಗೊಂಡಿದ್ದು, 500 ಕೋಟಿ ಬಿಗ್ ಬಜೆಟ್‍ನಲ್ಲಿ ತಯಾರಾಗಿರುವ ಈ ಸಿನಿಮಾ ವಿಶ್ವಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿದೆ. ದುಬಾರಿ ವೆಚ್ಚದಲ್ಲಿ ನಿರ್ಮಾ ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

    ಆರ್‌ಆರ್‌ಆರ್ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದು, ಮೊದಲ ದಿನವೇ ಹಿಂದಿಯಲ್ಲಿ 18 ಕೋಟಿ ರೂ. ಗಳಿಸಿದೆ ಮತ್ತು ಎಲ್ಲಾ ಸಿನಿಮಾದ ದಾಖಲೆಗಳನ್ನು ಬ್ರೇಕ್ ಮಾಡಿ ತೆಲುಗು ರಾಜ್ಯಗಳಲ್ಲಿ ಆರ್‌ಆರ್‌ಆರ್ 100 ಕೋಟಿ ರೂ.ಗೂ ಹೆಚ್ಚು ಗಳಿಸಿದೆ ಎಂದು ಸಿನಿಮಾ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

    ಜೊತೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನಲ್ಲೂ ಆರ್‌ಆರ್‌ಆರ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಯುರೋಪ್‍ನಲ್ಲಿ 2.40 ಕೋಟಿ ಗಳಿಸಿದೆ. ಈಗಾಗಲೇ 200ಕ್ಕೂ ಹೆಚ್ಚು ಕೋಟಿ ರೂ.ವನ್ನು ಜೋಳಿಗೆ ಹಾಕಿಕೊಂಡಿರುವ ಆರ್‌ಆರ್‌ಆರ್ ಸಿನಿಮಾ ಮೇಲೆ ಓವರಾಲ್ 800 ಕೋಟಿ ಗಳಿಕೆಯ ನಿರೀಕ್ಷೆ ಇದೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

    ಆರ್‌ಆರ್‌ಆರ್ ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನ ಕಥೆ ಆಧರಿಸಿದ ಕಾಲ್ಪನಿಕ ಚಿತ್ರವಾಗಿದ್ದು, ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಮತ್ತು ಜೂನಿಯರ್ ಎನ್‍ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಸಮುದ್ರಕನಿ, ಅಜಯ್ ದೇವಗನ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಬಣ್ಣಹಚ್ಚಿದ್ದಾರೆ.