Tag: RRR

  • ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಿದೆ. 25ನೇ ದಿನದತ್ತ ಮುನ್ನುಗ್ಗಿದ್ದರೂ, ಕಲೆಕ್ಷನ್ ಮಾತ್ರ ಯಾವುದೇ ರೀತಿಯಲ್ಲಿ ಕಡಿಮೆಯಾಗಿಲ್ಲ. ಈವರೆಗೂ ಕೆಜಿಎಫ್ 2 ಅಂದಾಜು 1129.38 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಈ ಮೂಲಕ ಆರ್.ಆರ್.ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನೂ ಕೆಜಿಎಫ್ 2 ಪುಡಿಪುಡಿ ಮಾಡಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    25ನೇ ದಿನದೊಳಗಿನ ಆರ್.ಆರ್.ಆರ್ ಸಿನಿಮಾದ ಒಟ್ಟು ಲೆಕ್ಕಾಚಾರ 1127.65 ಕೋಟಿ ಎಂದು ಹೇಳಲಾಗಿತ್ತು. ಕೆಜಿಎಫ್ 2 ಸಿನಿಮಾ 1129.38 ಕೋಟಿ ಗಳಿಕೆ ಮಾಡುವ ಮೂಲಕ ಆರ್.ಆರ್.ಆರ್ ದಾಖಲೆಯನ್ನು ಮುರಿಯಲಾಗಿದೆ. ಅಲ್ಲಿಗೆ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಕೀರ್ತಿಗೆ ಕೆಜಿಎಫ್ 2 ಪಾತ್ರವಾಗಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    2022 ನಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಗೂ ಕೆಜಿಎಫ್ 2 ಕಾರಣವಾಗಿದ್ದರೆ, ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾದ್ದು. ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ಕೆಜಿಎಫ್ 2 ಮುರಿದು, ಹೊಸ ದಾಖಲೆಯನ್ನು ಬರೆಯಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಸದ್ಯ ಆರ್. ಆರ್. ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನು ಕೆಜಿಎಫ್ 2 ಮುರಿದಿದ್ದು, ದಂಗಲ್ ಮತ್ತು ಆರ್.ಆರ್.ಆರ್ ಸಿನಿಮಾದ ಒಟ್ಟು ಕಲೆಕ್ಷನ್ ದಾಖಲೆಯನ್ನು ಸದ್ಯದಲ್ಲೇ ದಾಟಲಿದೆ ಎನ್ನುತ್ತಿವೆ ಬಾಕ್ಸ್ ಆಫೀಸ್ ಮೂಲಗಳು. ಈ ಮೂಲಕ ಕನ್ನಡದ ಸಿನಿಮಾವೊಂದು ಐತಿಹಾಸಿಕ ದಾಖಲೆ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ ಆಗಿದೆ.

  • ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಕಳೆದೆರಡು ವರ್ಷಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಹಲವಾರು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಭಾರತೀಯ ಸಿನಿಮಾದಲ್ಲಿ ದಕ್ಷಿಣ ಭಾರತದ ಪುಷ್ಪಾ, RRR ಮತ್ತು ಕೆಜಿಎಫ್-2 ಸಿನಿಮಾಗಳ ಯಶಸ್ಸು ಬಾಲಿವುಡ್ ಮಂದಿಯಲ್ಲಿ ಅಭದ್ರತೆಯನ್ನು ಸೃಷ್ಟಿಸಿದೆ ಎಂಬ ಮಾತು ಬಿ’ಟೌನ್‍ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಮಾಧ್ಯಮಗಳು ಬಾಲಿವುಡ್ ಸ್ಟಾರ್ ನವಾಜುದ್ದೀನ್ ಸಿದ್ದಿಕಿ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಖಡಕ್ ಉತ್ತರ ಕೊಟ್ಟಿದ್ದಾರೆ.

    Nawazuddin Siddiqui Builds A Mansion In Mumbai; Names It After His Late Father - View Pics

    ಸಿನಿಮಾ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಮುಕ್ತವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ನವಾಜುದ್ದೀನ್ ಸಿದ್ದಿಕಿ, ಒಂದು ಸಿನಿಮಾ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಪ್ರತಿಯೊಬ್ಬರೂ ಸೇರಿಕೊಳ್ಳುತ್ತಾರೆ. ಅದನ್ನು ಬಹುಶಃ ಅರ್ಹತೆಗಿಂತ ಹೆಚ್ಚು ಹೊಗಳುತ್ತಾರೆ. ಹಾಗೆಯೇ ಒಂದು ಚಲನಚಿತ್ರವು ಹಿಟ್ ಆಗದಿದ್ದರೆ, ಅದೇ ಜನರು ಅದನ್ನು ಅರ್ಹತೆಗಿಂತ ಹೆಚ್ಚು ಟೀಕಿಸುತ್ತಾರೆ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್ 

    ಇದು ಫ್ಯಾಷನ್‍ನಂತೆ, ಈಗ ಬಾಲಿವುಡ್ ಚಿತ್ರವು ದೊಡ್ಡ ಹಿಟ್ ಆಗಿದ್ದರೆ ಈ ಎಲ್ಲ ಮಾತುಕತೆಗಳು ಬದಲಾಗುತ್ತವೆ. ಇದು ಕೇವಲ ಪ್ರವೃತ್ತಿ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಅಭದ್ರತೆಯ ಮಾತು ಬರುವುದಿಲ್ಲ ಎಂದು ಉತ್ತರಿಸಿದರು.

    ನವಾಜುದ್ದೀನ್ ‘ಟಿಕು ವೆಡ್ಸ್ ಶೇರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕಂಗನಾ ರಣಾವತ್ ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

  • ತೆಲುಗು, ಕನ್ನಡ ಕೋವಿಡ್ ಹೊಡೆತಕ್ಕೆ ಬಾಲಿವುಡ್ ಸೋಂಕಿತ : ಬೆಂಕಿ ಹಚ್ಚಿದ ರಾಮ್ ಗೋಪಾಲ್ ವರ್ಮಾ

    ತೆಲುಗು, ಕನ್ನಡ ಕೋವಿಡ್ ಹೊಡೆತಕ್ಕೆ ಬಾಲಿವುಡ್ ಸೋಂಕಿತ : ಬೆಂಕಿ ಹಚ್ಚಿದ ರಾಮ್ ಗೋಪಾಲ್ ವರ್ಮಾ

    ಕೆಜಿಎಫ್ 2, ಆರ್.ಆರ್.ಆರ್, ಪುಷ್ಪಾ ಸಿನಿಮಾಗಳು ಬಾಲಿವುಡ್ ನಲ್ಲಿ ಕಮಾಯಿ ಮಾಡುತ್ತಿದ್ದಂತೆಯೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಪರೀತ ಆಕ್ಟಿವ್ ಆಗಿದ್ದಾರೆ. ದಕ್ಷಿಣದ ಸಿನಿಮಾಗಳನ್ನು ಹಿಗ್ಗಾಮುಗ್ಗಾ ಹೊಗಳಿ, ಹಿಂದಿ ಸಿನಿಮಾಗಳ ಬಗ್ಗೆ ಸಖತ್ ಟಾಂಗ್ ಕೊಡುತ್ತಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಮೊನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಬೆಂಗಳೂರಿನಲ್ಲಿ ನಡೆಯಿತು. ಈ ಸಿನಿಮಾದ ಪತ್ರಿಕಾಗೋಷ್ಠಿಯಲ್ಲೂ ಕೆಜಿಎಫ್ 2 ಸಿನಿಮಾದ ಬಗ್ಗೆ ಮೆಚ್ಚಿ ಮಾತನಾಡಿದರೆ, ಅದರ ದಾಖಲೆಯನ್ನು ವಿವರಿಸಿದರು. ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ಹೇಗೆಲ್ಲ ಜಾಗೃತವಾಗಿರುವಂತೆ ಮಾಡಿದೆ ಎನ್ನುವುದನ್ನು ಹೇಳಿದ್ದರು. ಇದೀಗ ಇದೇ ವಿಷಯವಾಗಿ ಟ್ವಿಟ್ ವೊಂದನ್ನು ಮಾಡಿದ್ದಾರೆ ಆರ್.ಜಿ.ವಿ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ತೆಲುಗು ಮತ್ತು ಕನ್ನಡ ಸಿನಿಮಾಗಳು ಹಿಂದಿ ಚಿತ್ರಗಳನ್ನು ಕೋವಿಡ್ 19 ರೀತಿಯಲ್ಲಿ ಸೋಂಕಿತರನ್ನಾಗಿ ಮಾಡಿವೆ. ಅತೀ ಶೀಘ್ರದಲ್ಲೇ ಬಾಲಿವುಡ್ ವ್ಯಾಕ್ಸಿನ್ ತಗೆದುಕೊಂಡು ಮರಳಲಿದೆ ಎಂದು ಟ್ವಿಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದು, ನೂರಾರು ಹಿಂದಿ ಸಿನಿಮಾಗಳ ಅಭಿಮಾನಿಗಳು ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ತೆಲುಗಿನ ಆರ್.ಆರ್.ಆರ್ ಮತ್ತು ಕನ್ನಡದ ಕೆಜಿಎಫ್ 2 ಸದ್ಯ ಬಾಲಿವುಡ್ ಅನ್ನು ಆಳುತ್ತಿವೆ. ನೂರಾರು ಕೋಟಿ ಕೊಳ್ಳೆ ಹೊಡೆದಿವೆ. ಅದರಲ್ಲೂ ಕನ್ನಡದ ಕಜಿಎಫ್ 2 ಚಿತ್ರ ಮುನ್ನೂರು ಕೋಟಿ ಕ್ಲಬ್ ತಲುಪಿ, ಇನ್ನೂ ಮುನ್ನುಗ್ಗುತ್ತಿದೆ. ಬಾಲಿವುಡ್ ಕಲಾವಿದರು ಈ ಓಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕೆಲವು ಕಲಾವಿದರು ತಮ್ಮದೇ ಆದ ರೀತಿಯಲ್ಲಿ ರಿಯ್ಯಾಕ್ಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಹತ್ವ ಪಡೆದಿದೆ.

  • RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    ಗಾಗಲೇ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಆರ್‌ಆರ್‌ಆರ್ ಚಿತ್ರತಂಡವು ವೀಕೆಂಡ್‌ನಲ್ಲಿ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ.

    ವೀಕೆಂಡ್ ಖುಷಿಯಲ್ಲಿರುವ ಅಭಿಮಾನಿಗಳಿಗಾಗಿ ಚಿತ್ರದ ಆರಂಭದಲ್ಲೇ ಬರುವ `ಕೊಮ್ಮ ಉಯ್ಯಾಲ’ ಗೀತೆಯನ್ನು ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು, ಮಲಯಾಳಂ ಭಾಷೆಗಳಲ್ಲೂ ಯುಟ್ಯೂಬ್‌ನಲ್ಲಿ ಸಾಂಗ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದಿದೆ. ಇದನ್ನೂ ಓದಿ: ಆಲಿಯಾ- ರಣಬೀರ್ ಮದುವೆಗೆ ರಾಕಿ ಸಾವಂತಗಿಲ್ಲ ಆಹ್ವಾನ: ರಾಕಿ ಆ ಬಯಕೆ ಈಡೇರಲೇ ಇಲ್ಲ

    RRR NEW SONG ONE

    ಆರ್‌ಆರ್‌ಆರ್ ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿರುವ `ನಾಟು ನಾಟು’ ಸಾಂಗ್ 5 ಭಾಷೆಗಲ್ಲೂ ಸಖತ್ ಸೌಂಡ್ ಮಾಡಿದೆ. ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಈ ಹಾಡಿಗೆ ಹಾಕಿರುವ ಜಬರ್ದಸ್ತ್ ಸ್ಟೆಪ್‌ಗಳು ಅಭಿಮಾನಿಗಳನ್ನು ಹುಚ್ಚೆಂದು ಕುಣಿಯುವಂತೆ ಮಾಡಿದೆ.

    ಇದೀಗ ಪ್ರತಿಯೊಬ್ಬರಿಗೂ ಇಷ್ಟವಾಗುವಂತ ಕೊಮ್ಮಾ ಉಯ್ಯಾಲ ಗೀತೆಯನ್ನು 5 ಭಾಷೆಗಳಲ್ಲೂ ಬಿಡುಗಡೆ ಮಾಡಿದ್ದು, ಮೆಚ್ಚುಗೆ ಗಳಿಸಿದೆ. ಅಜಾದ್ ವರದರಾಜ್ ಅವರು ಬರೆದಿರುವ ಈ ಸಾಂಗ್ ಅನ್ನು ಎಂ.ಎಂ.ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಖ್ಯಾತ ಗಾಯಕಿ ಪ್ರಕೃತಿ ರೆಟ್ಟಿ ಹಾಡಿ ಮಿಂಚಿದ್ದಾರೆ. 2.49 ನಿಮಿಷದ ಗೀತೆ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್ 

    ಹಸಿರು ಪ್ರಕೃತಿಯ ಅನಾವರಣದಿಂದ ಆರಂಭವಾಗುವ ಈ ಗೀತೆಗೆ ನುಡಿಸಿರುವ ವಾದ್ಯಗಳು ಹಾಗೂ ವಾತಾವರಣ ಅಪ್ಪಟ ಜನಪದ ಶೈಲಿಯಿಂದ ಕೂಡಿದಂತಿದೆ. ಕಾಡುಜನರ ಮುಗ್ಧ ಮನಸ್ಥಿತಿಯನ್ನೂ ಮುಖಭಾವದಲ್ಲಿ ಅರಳಿಸಿದ್ದಾರೆ. ಅಲ್ಲಲ್ಲಿ ಚಿತ್ರದ ಸನ್ನಿವೇಶಗಳನ್ನು ಹಿಡಿದಿದ್ದರೂ ಪ್ರಕೃತಿ ಸೌಂದರ್ಯವನ್ನೇ ಹೆಚ್ಚಾಗಿ ಕೇಂದ್ರೀಕರಿಸಿದೆ. ವಾದ್ಯಕ್ಕೆ ದನಿಗೂಡಿಸಿದಂತೆ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ನಾದ ಪ್ರಕೃತಿ ಪ್ರಿಯರನ್ನೂ ಸೆಳೆಯುತ್ತದೆ.

    RRR NEW SONG (1)

    ತೆಲುಗಿನಲ್ಲಿ `ಕೋಮ್ಮಾ ಉಯ್ಯಾಲಾ ಕೋನಾ ಜಂಪಾಲ, ಅಮ್ಮಾ ಉಳ್ಳೋ ನೇನು ರೋಜು ವೋಗಾಲ ರೋಜು ವೋಗಾಲ’, ಕನ್ನಡದಲ್ಲಿ `ಕೊಂಬೆ ಉಯ್ಯಾಲೆ, ಕಾಡೆ ಹೊಂಬಾಳೆ, ಅಮ್ಮನ ಮಡಿಲೆನಗೆ ಲಾಲಿ ಸುವ್ವಾಲಿ’ ಹಾಗೂ ಹಿಂದಿ ಭಾಷೆಯಲ್ಲಿ `ಅಂಬರ್‌ಸೆ ತೋಡ, ಸೂರಜ್‌ಕೋ ಪ್ಯಾರಾ’ ಶೀರ್ಷಿಕೆಯೊಂದಿಗೆ ಮೂಡಿ ಬಂದಿರುವ ಈ ಗೀತೆ ಲಕ್ಷಾಂತರ ಅಭಿಮಾನಿಗಳಿಂದ ಬೇಶ್ ಎನಿಸಿಕೊಂಡಿದೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಕೊಮ್ಮ ಉಯ್ಯಲ ಹಾಡನ್ನು ಬಳ್ಳಾರಿಯ ಪ್ರಕೃತಿ ರೆಡ್ಡಿ ಹಾಡಿದ್ದಾಳೆ. 2010 ಜುಲೈ 21ರಂದು ಬಳ್ಳಾರಿಯಲ್ಲಿ ಜನಿಸಿದ ಈಕೆ ತೆಲುಗಿನ ಸರಿಗಮಪ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದಳು. ಪ್ರಸ್ತುತ ಈಕೆ ಪೋಷಕರ ಜೊತೆ ಮುಂಬೈನಲ್ಲಿ ನೆಲೆಸಿದ್ದಾಳೆ.

  • 1000 ಕೋಟಿ ಕ್ಲಬ್ ಸೇರಿತು ಆರ್‌ಆರ್‌ಆರ್ ಸಿನಿಮಾ: ತಂಡದ ಟಾರ್ಗೆಟ್ 2500?

    1000 ಕೋಟಿ ಕ್ಲಬ್ ಸೇರಿತು ಆರ್‌ಆರ್‌ಆರ್ ಸಿನಿಮಾ: ತಂಡದ ಟಾರ್ಗೆಟ್ 2500?

    ಜಾಗತಿಕವಾಗಿ ಈಗಾಗಲೇ ಅನೇಕ ದಾಖಲೆಗಳನ್ನು ಮಾಡಿರುವ ಆರ್‍ಆರ್‍ಆರ್ ಸಿನಿಮಾ ನಿರೀಕ್ಷೆಯಂತೆ 1000 ಕೋಟಿ ಕ್ಲಬ್ ಸೇರಿದಂತೆ. ಈ ಮೂಲಕ 1000 ಕೋಟಿ ಕ್ಲಬ್ ದಾಟಿದ ಕೆಲವೇ ಕೆಲವು ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಇದು ಕೂಡ ಸೇರ್ಪಡೆ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಸಿನಿಮಾ ಬಿಡುಗಡೆ ಆಗಿ ಇವತ್ತಿಗೆ 16 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಕ್ರೇಜ್ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರ್ ಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಅದರಲ್ಲೂ ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್, ಎಡಿಟಿಂಗ್ಸ್ ನೋಡಿದರೆ ಎಂಥವರಿಗೂ ಒಂದು ಕ್ಷಣ ಮೈ ಜುಮ್ಮೆನಿಸುತ್ತದೆ.

    ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದ್ದು, ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಈವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ. ಆದಾಗ್ಯೂ ಚಿತ್ರವು ಇವತ್ತಿಗೆ ವಿಶ್ವದಾದ್ಯಂತ ಬರೋಬ್ಬರಿ ಅಂದಾಜು 1000 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 16ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಹಿಂದೆ ಜಾಗತಿಕವಾಗಿ ವಿಶ್ವದಾದ್ಯಂತ 1000 ಕೋಟಿ ರೂ. ದಾಟಿದ ಚಿತ್ರಗಳೆಂದರೆ ‘ದಂಗಲ್’ ಮತ್ತು ‘ಬಾಹುಬಲಿ 2’ ಆಗಿದ್ದವು. ಇದೀಗ ಆ ಪಟ್ಟಿಗೆ ‘ಆರ್‍ಆರ್‍ಆರ್’ ಚಿತ್ರವೂ ಸೇರಿದೆ.

     

    View this post on Instagram

     

    A post shared by RRR Movie (@rrrmovie)

    ವಿಶ್ವಾದ್ಯಂತ ಅತೀ ಹೆಚ್ಚು ಗಳಿಕೆ ಮಾಡಿದ ಹತ್ತು ಭಾರತೀಯ ಚಿತ್ರಗಳು
    ದಂಗಲ್ – ರೂ. 2008.30 ಕೋಟಿ
    ಬಾಹುಬಲಿ 2 – ರೂ. 1754.50 ಕೋಟಿ
    ಆರ್‍ಆರ್‍ಆರ್ – ರೂ. 1000 ಕೋಟಿ ಅಂದಾಜು 16 ದಿನಗಳು ಇನ್ನೂ ಎಣಿಸಲಾಗುತ್ತಿದೆ
    ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
    ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
    ಪಿಕೆ – ರೂ. 762 ಕೋಟಿ
    2.0 – ರೂ. 666.30 ಕೋಟಿ
    ಸುಲ್ತಾನ್ – ರೂ. 616.60 ಕೋಟಿ
    ಸಂಜು – ರೂ. 588.30 ಕೋಟಿ
    ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ

     

    View this post on Instagram

     

    A post shared by RRR Movie (@rrrmovie)

    ಈಗಾಗಲೇ ಈ ಸಿನಿಮಾ ಹಲವು ದಾಖಲೆಗಳನ್ನೂ ಬರೆದಿದೆ. ಡಾಲ್ಬಿ ತಂತ್ರಜ್ಞಾನದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ತೆಲುಗು ಭಾಷೆಯ ಅವಧಿಯ ಆ್ಯಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.

  • ಬರೋಬ್ಬರಿ 900 ಕೋಟಿ ಬಾಚಿ 12ನೇ ದಿನದತ್ತ ಮುನ್ನುಗುತ್ತಿದೆ RRR ಚಿತ್ರ

    ಬರೋಬ್ಬರಿ 900 ಕೋಟಿ ಬಾಚಿ 12ನೇ ದಿನದತ್ತ ಮುನ್ನುಗುತ್ತಿದೆ RRR ಚಿತ್ರ

    ಹೈದರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಸಿನಿಮಾವು ಬಿಡುಗಡೆಗೊಂಡು ಇವತ್ತಿಗೆ 11 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಹವಾ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತವಾದ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್ ಎಡಿಟಿಂಗ್ಸ್‌ಗಳನ್ನು ನೋಡಿದರೆ ಎಂತಹವರಿಗೂ ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತದೆ.

    ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದೆ. ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಹಿಡಿದು ಇಲ್ಲಿಯವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬರುತ್ತಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಅಂತಾನೇ ಹೇಳಬಹುದು. ಆದಾಗ್ಯೂ ಚಿತ್ರವು ಇವತ್ತಿಗೆ ಬರೋಬ್ಬರಿ 900 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 11ನೇ ದಿನದತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಈ ಕುರಿತು ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯನ್ ಸಾಮಾಜಿಕ ಜಾಲತಾಣದ ಮೂಲಕ ಆರ್‍ಆರ್‍ಆರ್ ಚಿತ್ರವು 11 ದಿನದಲ್ಲಿ ಒಟ್ಟು 900 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರದ ಕಲೆಕ್ಷನ್ ಅನ್ನು ಉಡೀಸ್ ಮಾಡಿದೆ. ಆರ್‍ಆರ್‍ಆರ್ ಚಿತ್ರವು ಈಗಾಗಲೇ ದಾಖಲೆಯ 500 ಕೋಟಿ ರೂ. ದಾಟಿದ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಸಾರ್ವಕಾಲಿಕ ಹತ್ತು ಭಾರತೀಯ ಚಲನಚಿತ್ರಗಳನ್ನು ನೋಡೋಣ:
    ದಂಗಲ್ – ರೂ. 2008.30 ಕೋಟಿ
    ಬಾಹುಬಲಿ 2 – ರೂ. 1754.50 ಕೋಟಿ
    ಆರ್‍ಆರ್‍ಆರ್ – ರೂ. 939 ಕೋಟಿ ಅಂದಾಜು 11 ದಿನಗಳು, ಇನ್ನೂ ಎಣಿಸಲಾಗುತ್ತಿದೆ
    ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
    ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
    ಪಿಕೆ – ರೂ. 762 ಕೋಟಿ
    2.0 – ರೂ. 666.30 ಕೋಟಿ
    ಸುಲ್ತಾನ್ – ರೂ. 616.60 ಕೋಟಿ
    ಸಂಜು – ರೂ. 588.30 ಕೋಟಿ
    ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ

    ಎಸ್ ಎಸ್ ರಾಜಮೌಳಿಯವರ ‘ಆರ್‍ಆರ್‍ಆರ್’ ಡಾಲ್ಬಿ ಸಿನಿಮಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರವಾಗಿದೆ. ತೆಲುಗು ಭಾಷೆಯ ಅವಧಿಯ ಆಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.

  • ಬರಲಿದೆ ಬಾಹುಬಲಿ 3 – ರಾಜಮೌಳಿ ನಂತರ ನಿರ್ಮಾಪಕರ ಪ್ರತಿಕ್ರಿಯೆ

    ಬರಲಿದೆ ಬಾಹುಬಲಿ 3 – ರಾಜಮೌಳಿ ನಂತರ ನಿರ್ಮಾಪಕರ ಪ್ರತಿಕ್ರಿಯೆ

    ಬಾಹುಬಲಿ, ಬಾಹುಬಲಿ-2 ಎರಡೂ ಸಿನಿಮಾಗಳು ವರ್ಲ್ಡ್ ವೈಡ್ ಭಾರೀ ಸಂಚಲನ ಮೂಡಿಸಿದವುಗಳು. ಈ ಎರಡೂ ಸಿನಿಮಾಗಳು ನಟ ಪ್ರಭಾಸ್‍ಗೆ ನೇಮ್ ಮತ್ತು ಫ್ರೇಮ್ ತಂದು ಕೊಡುವ ಜೊತೆಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಟ್ಟಿವೆ. ಪ್ರಭಾಸ್‍ಗೆ ನ್ಯಾಷನಲ್ ಆ್ಯಕ್ಟರ್ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಸಹಾಯ ಮಾಡಿವೆ. ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದ ಈ ಎರಡೂ ಸಿನಿಮಾಗಳು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದವು. ಸದ್ಯ ಮತ್ತೆ ಪ್ರಭಾಸ್ ಹಾಗೂ ರಾಜಮೌಳಿ ಕಾಂಬೀನೇಷನ್‍ನಲ್ಲಿ ಬಾಹುಬಲಿ-3 ಸೆಟ್ಟೆರಲಿದೆ ಎಂದು ಹೇಳಲಾಗುತ್ತಿದೆ.

    ಹೌದು ಇತ್ತೀಚೆಗಷ್ಟೇ ಟಾಲಿವುಡ್ ನಟ ರಾಮ್‍ಚರಣ್ ತೇಜ ಹಾಗೂ ಜೂ.ನಿಯರ್ ಎನ್‍ಟಿಆರ್ ಒಟ್ಟಾಗಿ ಅಭಿನಯಿಸಿದ್ದ ಆರ್‌ಆರ್‌ಆರ್‌ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಾಜಮೌಳಿ ಅವರು, ಈ ಸಿನಿಮಾದ ಪ್ರಮೋಷನ್ ವೇಳೆ ಬಾಹುಬಲಿ -3 ಚಿತ್ರವನ್ನು ನಿರ್ದೇಶಿಸುವ ಪ್ಲಾನ್ ಹೊಂದಿರುವ ಬಗ್ಗೆ ಸುಳಿವು ನೀಡಿದ್ದರು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?

    ಇದೀಗ ಮಧ್ಯಮವೊಂದರಲ್ಲಿ ಬಾಹುಬಲಿ ಸಿನಿಮಾದ ನಿರ್ಮಾಪಕ ಪ್ರಸಾದ್ ದೇವಿನೇನಿ, ಎಸ್‍ಎಸ್ ರಾಜಮೌಳಿ ಅವರು ಮತ್ತೊಂದು ಬಾಹುಬಲಿ ಕಥೆಯನ್ನು ಹೇಳುವ ಸಾಧ್ಯತೆ ಇದೆ. ಜೀವನಕ್ಕಿಂತ ಪ್ರಪಂಚ ಮತ್ತು ಪಾತ್ರಗಳು ದೊಡ್ಡದಾಗಿದೆ. ಆದರೆ ನಾವು ಈಗಲೇ ಬಾಹುಬಲಿ-3 ಸಿನಿಮಾವನ್ನು ಪ್ರಾರಂಭಿಸುವುದರ ಬಗ್ಗೆ ಯೋಚಿಸಿಲ್ಲ. ಏಕೆಂದರೆ ರಾಜಮೌಳಿ ಅವರು ಒಂದೆರಡು ಕಮಿಟ್‍ಮೆಂಟ್‍ಗಳನ್ನು ಹೊಂದಿದ್ದಾರೆ. ಅದೆಲ್ಲ ಮುಗಿದ ಬಳಿಕ ನಾವು ಈ ಬಗ್ಗೆ ಯೋಚಿಸುತ್ತೇವೆ. ಎಲ್ಲವೂ ಸರಿಯಾಗಿದ್ದರೆ ಖಂಡಿತವಾಗಿಯೂ ಬಾಹುಬಲಿ-3 ಸಿನಿಮಾ ಮಾಡುತ್ತೇವೆ. ಸದ್ಯಕ್ಕೆ ಇದರ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.

     

    ಇತ್ತೀಚೆಗೆ ನಾವು ಬಾಹುಬಲಿ ಸಿನಿಮಾ ಕಥೆಯನ್ನು ಬರೆದಿದ್ದ, ಕೆ.ವಿ ವಿಜಯೇಂದ್ರ ಪ್ರಸಾದ್ ಅವರನ್ನೂ ಸಂಪರ್ಕಿಸಿದ್ದೆವು. ಅವರು ಖಂಡಿತವಾಗಿವಾಗಿಯೂ ಬಹುಬಲಿ-3 ಸಿನಿಮಾಕ್ಕೆ ಕಥೆಯನ್ನು ಬರೆದುಕೊಡುತ್ತೇನೆ. ಆದರೆ ಅದಕ್ಕೂ ಮುನ್ನ ಮಹೇಶ್ ಬಾಬು ಅವರ ಪ್ರಾಜೆಕ್ಟ್ ಮುಗಿಯಬೇಕು. ಅದಕ್ಕೂ ಮುನ್ನ ಈ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:  ಮೂರು ವರ್ಷದ ಪ್ರೀತಿ ಖತಂ: ಅನನ್ಯಾ ಪಾಂಡೆ ದೂರವಾಗಲು ಕಾರಣವೇನು?

    ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್‌ಆರ್‌ಆರ್‌ ಸಕ್ಸಸ್ ಅಲೆಯಲ್ಲಿ ರಾಜಮೌಳಿ ತೇಲುತ್ತಿದ್ದು, ಚಿತ್ರದಲ್ಲಿ ಜೂ. ಎನ್‍ಟಿಆರ್ ಮತ್ತು ರಾಮ್ ಚರಣ್ ನಾಯಕರಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಆಲಿಯಾ ಭಟ್ ಮತ್ತು ನಟ ಅಜಯ್ ದೇವಗನ್ ಕೂಡ ಕಾಣಿಸಿಕೊಂಡಿದ್ದಾರೆ.

  • ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

    ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಈವರೆಗಿನ ಎಲ್ಲಾ ದಾಖಲೆಗಳನ್ನು ಅದು ಮುರಿದು ಮುನ್ನುಗ್ಗುತ್ತಿದೆ. ಹತ್ತಿರ ಹತ್ತಿರ ಸಾವಿರ ಕೋಟಿ ಸಮೀಪಕ್ಕೆ ಸಿನಿಮಾ ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಬಾಲಿವುಡ್ ನ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಹೇಳುವುದೇ ಬೇರೆ. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಭಾರತೀಯ ಬಹುತೇಕ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಇತರ ದೇಶಗಳ ಭಾಷೆಗಳಿಗೂ ಅದು ಡಬ್ ಆಗಿ ಬಿಡುಗಡೆ ಆಗಿದೆ. ಮೊದಲ ಮೂರು ದಿನಗಳ ಗಳಿಕೆಯಲ್ಲೇ ಅದು ದಾಖಲೆ ನಿರ್ಮಿಸಿತ್ತು. ರಿಲೀಸ್ ಆದ ವಾರದೊಳಗೆ ಹಿಂದಿಯೊಂದರಲ್ಲೇ ಅದು ನೂರು ಕೋಟಿ ಕ್ಲಬ್ ಸೇರಿ ಆಗಿದೆ. ಆದರೆ, ಅದೆಲ್ಲ ಸುಳ್ಳು ಪ್ರಚಾರ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ. ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ಬಾಲಿವುಡ್ ನ ಸ್ವಯಂ ವಿಮರ್ಶಕ ಖ್ಯಾತಿಯ ಈ ಕಮಲ್ ಆರ್ ಖಾನ್ ಇಂತಹ ಅಚ್ಚರಿಯ ಹೇಳಿಕೆಯನ್ನು  ಕೊಡುವುದು ಇದೇ ಮೊದಲೇನೂ ಅಲ್ಲ. ಬಾಲಿವುಡ್ ನ ಬಹುತೇಕ ಸ್ಟಾರ್ ನಟ ನಟಿಯರನ್ನು ಕಾಲೆಳೆದು ಕಂಗೆಣ್ಣಿಗೆ ಗುರಿಯಾದವರು ಇವರು. ನಿರ್ದೇಶಕರನ್ನೂ, ನಿರ್ಮಾಪಕರನ್ನೂ ಬಿಡದೇ ತಮ್ಮದೇ ಆದ ರೀತಿಯಲ್ಲಿ ಕಟುವಾಗಿ ಟೀಕಿಸುತ್ತಲೇ ಇರುತ್ತಾರೆ ಕಮಲ್. ಇದೀಗ ಆರ್.ಆರ್.ಆರ್ ವಿಷಯದಲ್ಲೂ ಅದನ್ನೇ ಮಾಡಿದ್ದಾರೆ.

     

    ‘ನನ್ನ ಪ್ರಕಾರ ಆರ್.ಆರ್.ಆರ್ ಸಿನಿಮಾವನ್ನು ಜನರು ತಿರಸ್ಕರಿಸಿದ್ದಾರೆ. ಅಷ್ಟೊಂದು ಪ್ರಮಾಣದಲ್ಲಿ ಬಾಕ್ಸ್ ಆಫೀಸ್ ತುಂಬುವುದಕ್ಕೆ ಹೇಗೆ ಸಾಧ್ಯ? ನಿರ್ಮಾಪಕರು ಮತ್ತು ನಿರ್ದೇಶಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಈ ಸಿನಿಮಾ 680 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಅದು ಕೂಡ ಸುಳ್ಳು. ಜನರಿಗೆ ಬಜೆಟ್ ಅರ್ಥವಾಗಲ್ಲ. ಆ ಪ್ರಮಾಣದಲ್ಲಿ ಈ ಚಿತ್ರಕ್ಕೆ ಹಣ ಹೂಡಿಲ್ಲ ಎಂದು ಮುಂದಿನ ದಿನಗಳಲ್ಲಿ ಸಾಬೀತು ಮಾಡುವುದಾಗಿ’ ನಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಕಮಲ್ ಈ ರೀತಿ ಟ್ವಿಟ್ ಮಾಡುತ್ತಿದ್ದಂತೆಯೇ ರಾಜಮೌಳಿ, ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್ ಮತ್ತು ಆಲಿಯಾ ಭಟ್ ಅಭಿಮಾನಿಗಳು ಒಟ್ಟಾಗಿ ಕಮಲ್ ಮೇಲೆ ಮುಗಿಬಿದ್ದಿದ್ದಾರೆ. ಕಮಲ್ ಕುರಿತಾಗಿ ನಿಂದಿಸಿದ್ದಾರೆ. ಕಮಲ್ ಯಾರು ಎನ್ನುವುದನ್ನೂ ಕೆಲವರು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿರುವ ಆರ್.ಆರ್.ಆರ್ ತನ್ನದೇ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಅತೀ ಶೀಘ್ರದಲ್ಲೇ ಅದು ಮೈಲುಗಲ್ಲು ಸ್ಥಾಪಿಸಲಿದೆ ಎಂದಿದ್ದಾರೆ ಅಭಿಮಾನಿಗಳು.

  • ಜಾನ್ ಒಂದು ಹೇಳಿಕೆಯಿಂದ ಬಿತ್ತು ಭಾರೀ ಪೆಟ್ಟು – ಮಕಾಡೆ ಮಲಗಿದ `ಅಟ್ಯಾಕ್’

    ಜಾನ್ ಒಂದು ಹೇಳಿಕೆಯಿಂದ ಬಿತ್ತು ಭಾರೀ ಪೆಟ್ಟು – ಮಕಾಡೆ ಮಲಗಿದ `ಅಟ್ಯಾಕ್’

    ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಮಣೆ ಹಾಕ್ತಿರಲಿಲ್ಲ. ಸೌತ್ ಚಿತ್ರಗಳನ್ನ ಅಲ್ಲಿನ ಕಲಾವಿದರನ್ನ ಬಾಲಿವುಡ್ ಮಂದಿ ಅಸಡ್ಡೆಯಿಂದ ನೋಡ್ತಿದ್ರು. ಈಗ ಭಾರತೀಯ ಚಿತ್ರರಂಗದ ಸ್ವರೂಪವೇ ಬದಲಾಗಿದೆ.

    ದಕ್ಷಿಣದ ಸಿನಿಮಾಗಳನ್ನ ಬಿಟೌನ್‌ನಲ್ಲಿ ಅಪ್ಪಿ ಒಪ್ಪಿಕೊಳ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ `ಪುಷ್ಪ’ ಸಿನಿಮಾ, ಈಗೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಲಿವುಡ್ ಮನ್ನಣೆ ದೊರೆಯುತ್ತಿದೆ. ಸೌತ್ ಚಿತ್ರಗಳನ್ನ ಹಿಂದಿ ಸಿನಿಮಾ ರಸಿಕರು ಮುಗಿಬಿದ್ದು ನೋಡ್ತಿದ್ದಾರೆ. ಆದರೆ ಇತ್ತೀಚಿನ ಬಿಟೌನ್ ನಟ ಜಾನ್ ಅಬ್ರಹಾಂ ಕೊಟ್ಟಿರೋ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

    ಜಾನ್ ಅಬ್ರಾಹಾಂ ನಟನೆಯ ಅಟ್ಯಾಕ್ ಚಿತ್ರ ಏ.೧ರಂದು ತೆರೆಕಂಡಿತ್ತು. ಈ ಚಿತ್ರದ ಪ್ರಚಾರದ ವೇಳೆ ನಟ ಜಾನ್, ನಾನು ಎಂದೂ ತೆಲುಗು ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್ ಹೀರೋ, ಬಿಸಿನೆಸ್ ಮಾಡುವ ಸಲುವಾಗಿ ತೆಲುಗು ಅಥವಾ ಪರಭಾಷಾ ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಜಾನ್ ನಟನೆಯ `ಅಟ್ಯಾಕ್’ ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ.

    ಜಾನ್ ಅಬ್ರಾಹಾಂ ನಟನೆಯ `ಅಟ್ಯಾಕ್’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ೩.೫ ಕೋಟಿ ಗಳಿಸಿ ಚಿತ್ರ ಸೋಲುವ ಲಕ್ಷಣ ಕಾಣುತ್ತಿದೆ. `ಅಟ್ಯಾಕ್’ ಚಿತ್ರಕ್ಕೆ ಪೈಪೋಟಿ ನೀಡುತ್ತಿರುವ ಚಿತ್ರ `ಆರ್‌ಆರ್‌ಆರ್’ ಈ ಚಿತ್ರವನ್ನ ಅಭಿಮಾನಿಗಳು ಮುಗಿಬಿದ್ದು ನೋಡ್ತಿದ್ದಾರೆ. ಇದನ್ನು ಓದಿ:ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    `ಆರ್‌ಆರ್‌ಆರ್’ ಚಿತ್ರದ ಎದುರು ಹೀನಾಯವಾಗಿ ಅಟ್ಯಾಕ್ ಸೋಲ್ತಿರೋದಕ್ಕೆ ನೆಟ್ಟಿಗರು ನಟ ಜಾನ್‌ರನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ತೆಲುಗಿನಲ್ಲಿ ಬಿಗ್ ಬಜೆಟ್ ಚಿತ್ರ, ತಮಿಳಿನಲ್ಲಿ ಹೈ ಒಲ್ಟೇಜ್ ಆಕ್ಷನ್, ಮಲೆಯಾಳಂನಲ್ಲಿ ಸೂಪರ್ ಕಂಟೆAಟ್, ಕನ್ನಡದಲ್ಲಿ ಭಿನ್ನ ಕಾನ್ಸೆಪ್ಟ್ ಇರುತ್ತದೆ. ಇಂತಹ ಚಿತ್ರಗಳಲ್ಲಿ ನಟಿಸಬೇಕು ಅಂದ್ರು ನಿಮಗೆ ಯಾರು ಅವಕಾಶ ಕೊಡಲ್ಲ ಅಂತಾ ಜಾನ್‌ಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

  • ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

    ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

    ಕ್ಷಿಣದ ಖ್ಯಾತ ನಿರ್ದೇಶಕ ರಾಜಮೌಳಿ ಅವರು ʼಆರ್‌ಆರ್‌ಆರ್‌’ ವಿಶ್ವದಾದ್ಯಂತ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರದ ಕಡೆ ಹೆಚ್ಚು ಸಿನಿಪ್ರಿಯರು ಮುಖ ಮಾಡುತ್ತಿದ್ದಾರೆ. ಇದರಿಂದ ಸಿನಿಮಾ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲೇ 100 ಮಿಲಿಯನ್ ಡಾಲರ್(758 ಕೋಟಿ ರೂ.) ಕಲೆಕ್ಷನ್ ಸಮೀಪಿಸಿದೆ. ದಾಖಲೆಯ ರೀತಿಯ ಕಲೆಕ್ಷನ್ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿದೆ.

    ‘ʼಆರ್‌ಆರ್‌ಆರ್‌ʼ’ ಸಿನಿಮಾ ಜಾಗತಿಕ ಥಿಯೇಟರ್‌ನಲ್ಲಿ ಬಿಡುಗಡೆಯಾದ ಆರು ದಿನಗಳ ನಂತರ, ವಿಶ್ವದಾದ್ಯಂತ ಸುಮಾರು 88 ಮಿಲಿಯನ್ ಡಾಲರ್(667 ಕೋಟಿ ರೂ.) ಗಳಿಸಿದೆ. ಗುರುವಾರ ಮತ್ತು ಭಾನುವಾರ 9.5 ಮಿಲಿಯನ್ ಡಾಲರ್(72 ಕೋಟಿ ರೂ.) ಕಲೆಕ್ಷನ್ ಆಗಿತ್ತು. ಕೋವಿಡ್ ನಿರ್ಬಂಧ ಮುಗಿಯುವುದಕ್ಕಾಗಿ ಕಾಯುತ್ತಿದ್ದ ಚಿತ್ರತಂಡ ಮೂರು ವರ್ಷಗಳ ನಂತರ ಭರ್ಜರಿಯಾಗಿ ಸಿನಿಮಾ ರಿಲೀಸ್ ಮಾಡಿತ್ತು. ಪ್ರೇಕ್ಷಕರ ನಿರೀಕ್ಷೆಯಂತೆ ರಾಜಮೌಳಿ ಸಿನಿಮಾ ಜ್ಯೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ಕಾಂಬಿನೇಷನ್ ಗೆಲ್ಲಿಸುವಲ್ಲಿ ಸಫಲವಾಗಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಈ ಸಿನಿಮಾದ ಕಲೆಕ್ಷನ್ ಜೊತೆ ಸಿನಿಪ್ರಿಯರನ್ನು ಆಕರ್ಷಿಸುತ್ತಿದೆ. ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಸಹ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿರುವ ಗ್ರಾಫಿಕ್, ಫ್ರೇಮಿಂಗ್, ಡಿಒಪಿ ಸಿನಿಪ್ರಿಯರ ಕಣ್ಣಿಗೆ ಹಬ್ಬ ತಂದಿದೆ. ರಾಮ್‌ಚರಣ್ ಮತ್ತು ಎನ್‌ಟಿಆರ್ ಕಾಂಬಿನೇಷನ್ ಸೀನ್ ಸಖತ್ ಆಗಿ ಮೂಡಿಬಂದಿದೆ.

    ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಪಾತ್ರವೂ ಸಿನಿಮಾದಂತ ಆಕರ್ಪಿಸುವಂತೆ ಮಾಡುತ್ತೆ. ಈ ಸಿನಿಮಾದಲ್ಲಿ ಬರುವ ಪ್ರತಿ ಪಾತ್ರವನ್ನು ರಾಜಮೌಳಿ ಬಹಳ ನಾಜೂಕಿನಿಂದ ಹಂಚಿಕೆ ಮಾಡಿದ್ದು, ಸಿನಿಮಾ ಎಲ್ಲಿಯೂ ಬೇಸರವಾಗದಂತೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು