Tag: RRR

  • ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆ ಎಂದ ಆಸ್ಕರ್ ಪ್ರಶಸ್ತಿ ವಿಜೇತ ರೆಸೂಲ್

    ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆ ಎಂದ ಆಸ್ಕರ್ ಪ್ರಶಸ್ತಿ ವಿಜೇತ ರೆಸೂಲ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆಯನ್ನು ಹೊಂದಿದೆ ಎಂದು ಈ ಹಿಂದೆ ವಿದೇಶಿಗರು ಆಡಿಕೊಂಡಿದ್ದರು. ಈ ಬಾರಿ ಭಾರತದವರೇ ಆ ರೀತಿಯ ಹೇಳಿಕೆಯನ್ನು ಕೊಡುತ್ತಿದ್ದಾರೆ. ಸೌಂಡ್ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಮಲಯಾಳಂ ಚಿತ್ರರಂಗದ ರೆಸೂಲ್ ಪೂಕಟ್ಟಿ ಆರ್.ಆರ್.ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಸಲಿಂಗ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಎಂದಿದ್ದಾರೆ.

    ರೆಸೂಲ್ ಪೂಕಟ್ಟಿ ಆಸ್ಕರ್ ಪ್ರಶಸ್ತಿ ಪಡೆದ ಸಿನಿಮಾ ಸೌಂಡ್ ಇಂಜಿನಿಯರ್. ಭಾರತದ ಸಿನಿಮಾ ರಂಗಕ್ಕೆ ಒಂದೊಳ್ಳೆ ಹೆಸರು ತಂದು ಕೊಟ್ಟ ತಂತ್ರಜ್ಞ. ಅವರು ಭಾರತೀಯ ಸಿನಿಮಾ ರಂಗವೇ ಹೆಮ್ಮೆ ಪಡುವಂತಹ ಸಿನಿಮಾಗೆ ಈ ರೀತಿ ಹೇಳಿದ್ದು ಸಹಜವಾಗಿಯೇ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ವಿಶ್ವವೇ ಮೆಚ್ಚಿಕೊಂಡಿದ್ದ ಸಿನಿಮಾಗೆ ಆ ರೀತಿ ಅವರು ಹೇಳಬಾರದಿತ್ತು ಎನ್ನುವ ಮಾತೂ ಕೇಳಿ ಬಂದಿದೆ. ಅಲ್ಲದೇ, ಆರ್.ಆರ್.ಆರ್ ಸಿನಿಮಾ ನಿರ್ಮಾಪಕರು ಈ ಕುರಿತು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಸಾವಿರಾರು ಕೋಟಿ ಗಳಿಕೆ ಮಾಡಿದೆ. ಮಿತ್ರರಿಬ್ಬರು ಒಬ್ಬರಿಗೊಬ್ಬರು ಸಹಾಯ ಪಡೆದುಕೊಳ್ಳುತ್ತಾ, ತಮ್ಮ ಹಠವನ್ನು ಹೇಗೆ ಸಾಧಿಸುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಈ ಕಥೆಗೆ ಸಲಿಂಗ ಪ್ರೇಮಕಥೆ ಎಂದು ವ್ಯಂಗ್ಯವಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ವೆಟ್ರಿಮಾರನ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌

    ವೆಟ್ರಿಮಾರನ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌

    `ಆರ್‌ಆರ್‌ಆರ್’ ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್‌ಗೆ ಸಾಲು ಸಾಲು ಸಿನಿಮಾಗಳ ಆರ‍್ಸ್ ಹರಿದು ಬರುತ್ತಿದೆ. ನಿರ್ದೇಶಕ ಕೊರಟಾಲ ಶಿವ ಮತ್ತು ಪ್ರಶಾಂತ್ ನೀಲ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಈಗ ಪ್ಯಾನ್ ಇಂಡಿಯಾ ಸಿನಿಮಾಗೆ ಜ್ಯೂ.ಎನ್‌ಟಿಆರ್ ಓಕೆ ಅಂದಿದ್ದಾರೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ಸಿನಿಮಾ ಆಯ್ಕೆಯಲ್ಲಿ ಸಖತ್ ಸೆಲೆಕ್ಟಿವ್ ಆಗಿದ್ದಾರೆ. ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಎರಡೆರಡು ಪ್ರಾಜೆಕ್ಟ್ ಅನೌನ್ಸ್ ಆಗಿತ್ತು. ಕೊರಟಾಲ ಶಿವ ಮತ್ತು ಪ್ರಶಾಂತ್ ನೀಲ್ ಜತೆಗಿನ ಬಿಗ್ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಈ ಬೆನ್ನಲ್ಲೇ ಈಗ ನಿರ್ದೇಶಕ ವೆಟ್ರಿಮಾರನ್ ಚಿತ್ರದಲ್ಲಿ ನಟಿಸಲು ತಾರಕ್ ಒಪ್ಪಿಗೆ ನೀಡಿದ್ದಾರೆ.‌ ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ನಟ ತಾರಕ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ಸ್ಕೀಪ್ಟ್ ಕೇಳಿ ಜ್ಯೂ.ಎನ್‌ಟಿಆರ್‌ಗೂ ಕಥೆ ಹಿಡಿಸಿದೆಯಂತೆ. ಹಾಗಾಗಿ ವೆಟ್ರಿಮಾರನ್ ಸಿನಿಮಾಗೆ ಜ್ಯೂ.ಎನ್‌ಟಿಆರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವೆಟ್ರಿಮಾರನ್ ಇವರೆಗೂ ನಿರ್ದೇಶನ ಮಾಡಿರುವ ಚಿತ್ರ ಹಿಟ್ ಆಗಿದೆ. ಸೋತ ದಾಖಲೆಗಳೇ ಇಲ್ಲದ ಕಾರಣ, ಜ್ಯೂ.ಎನ್‌ಟಿಆರ್ ಮತ್ತು ವೆಟ್ರಿಮಾರನ್ ಕಾಂಬಿನೇಷನ್ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv

  • ಆರ್.ಆರ್.ಆರ್ ಅಕೌಂಟ್ ಕ್ಲೋಸ್ : ನಿರ್ಮಾಪಕರಿಗೆ ಒಟ್ಟು ಹರಿದು ಬಂದ ಹಣವೆಷ್ಟು?

    ಆರ್.ಆರ್.ಆರ್ ಅಕೌಂಟ್ ಕ್ಲೋಸ್ : ನಿರ್ಮಾಪಕರಿಗೆ ಒಟ್ಟು ಹರಿದು ಬಂದ ಹಣವೆಷ್ಟು?

    ರಾಜಮೌಳಿ ನಿರ್ದೇಶನದ ಬಹುಕೋಟಿ ಬಜೆಟ್ ಸಿನಿಮಾ ಆರ್.ಆರ್.ಆರ್ ಸಿನಿಮಾ ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. ಹಾಗಾಗಿ ಈ ಸಿನಿಮಾ ಎಷ್ಟೆಲ್ಲ ಹಣವನ್ನು ತಂದುಕೊಟ್ಟಿತು ಎನ್ನುವ ಕುತೂಹಲ ಮೂಡಿದೆ. ಸಿನಿಮಾ ರಿಲೀಸ್ ಆಗಿ ಎರಡ್ಮೂರು ವಾರಗಳ ಕಾಲ, ನೂರು ಕೋಟಿ ಬಂತು, ಐನೂರು ಕೋಟಿ ಆಯಿತು ಹೀಗೆ ಸುದ್ದಿಗಳನ್ನು ಓದಿದ್ದೇವೆ. ಇದೀಗ ಒಟ್ಟು ಎಷ್ಟು ಹಣ ಬಂದಿದೆ ಎನ್ನುವ ಪ್ರಶ್ನೆ ಕ್ಯೂರಿಯಾಸಿಟಿ ಮೂಡಿಸಿದೆ.

    ಕೇವಲ ರಾಜಮೌಳಿ ನಿರ್ದೇಶನ ಮಾಡಿದಾಗ, ಬಾಕ್ಸ್ ಆಫೀಸಿನಲ್ಲಿ ಒಂದು ಲೆಕ್ಕಚಾರ ಇದ್ದೇ ಇರುತ್ತದೆ. ಆದರೆ, ಈ ಬಾರಿ ಇಬ್ಬರು ಸೂಪರ್ ಸ್ಟಾರ್ ಜೊತೆ ರಾಜಮೌಳಿ ಬಂದಿದ್ದಾರೆ. ಹಾಗಾಗಿ ಲೆಕ್ಕಾಚಾರ ಭರ್ಜರಿಯಾಗಿಯೇ ಇರುತ್ತದೆ ಎನ್ನುವ ನಂಬಿಕೆ ಚಿತ್ರೋದ್ಯಮದ್ದು. ರಾಜಮೌಳಿಯೂ ಸೇರಿದಂತೆ ಮೂವರು ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಸಮಾಗಮವಾಗಿದ್ದರಿಂದ ಸಾವಿರ ಕೋಟಿಯೇ ನಿರ್ಮಾಪಕರ ಜೇಬಿಗೆ ಹರಿದು ಬಂದಿದೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಸಿನಿ ರಂಗದ ಲೆಕ್ಕಾಚಾರದ ಪಂಡಿತರ ಪ್ರಕಾರ ಥಿಯೇಟರ್ ನಿಂದಲೇ ಒಟ್ಟು 1100 ಕೋಟಿ ಬಂದಿದೆ ಎಂದು ಹೇಳಲಾಗುತ್ತಿದೆ. ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್, ಆಡಿಯೋ ಹಕ್ಕುಗಳನ್ನು ಸೇರಿಸಿದರೆ, 1450 ಕೋಟಿಯಷ್ಟು ಹಣವು ಆರ್.ಆರ್.ಆರ್ ಗಳಿಸಿದೆ ಎನ್ನಲಾಗುತ್ತಿದೆ. ಟ್ಯಾಕ್ಸ್, ಕಮಿಷನ್, ಇತ್ಯಾದಿ ಇತ್ಯಾದಿ ಕಡಿತಗೊಂಡು ನಿರ್ಮಾಪಕರಿಗೆ ಎಷ್ಟು ಹಣ ಸೇರುತ್ತದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಮುಂದಿನ ದಿನಗಳಲ್ಲಿ ಅದೂ ಗೊತ್ತಾಗಬಹುದು.

    Live Tv

  • ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ಕ್ಷಿಣ ಭಾರತ ಚಿತ್ರರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅಂದ್ರೆ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರ. ಇದೀಗ ಈ ಚಿತ್ರದ ಫೈನಲ್ ಕಲೆಕ್ಷನ್ ಕುರಿತ ಅಪ್‌ಡೇಟ್ ಹೊರ ಬಿದ್ದಿದೆ. ಬಾಕ್ಸಾಫೀಸ್‌ನಲ್ಲಿ ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಚಿತ್ರ 1100 ಕೋಟಿ ಬಾಚಿದೆ.

    ಮಲ್ಟಿಸ್ಟರ‍್ಸ್ ನಟಿಸಿರುವ ಆರ್‌ಆರ್‌ಆರ್ ಸಿನಿಮಾ ಈ ವರ್ಷದ ಹಿಟ್ ಲಿಸ್ಟ್ ಸೇರಿದ ಚಿತ್ರಗಳಲ್ಲಿ ಇದು ಒಂದು. ಚಿತ್ರದ ಫೈನಲ್ ಕಲೆಕ್ಷನ್ ಲಿಸ್ಟ್ ಇದೀಗ ಹೊರ ಬಿದ್ದಿದೆ. `ಆರ್‌ಆರ್‌ಆರ್’ ಭಾರತದಲ್ಲಿ 902 ಕೋಟಿ ಕಲೆಕ್ಷನ್ ಮಾಡಿದ್ರೆ, ವಿಶ್ವಾದ್ಯಂತ 1111 ಕೋಟಿ ಕಲೆಕ್ಷನ್ ಮಾಡಿ, ಗಲ್ಲಾಪೆಟ್ಟಿಗೆಯಲ್ಲಿ ಮೂರನೇ ಸ್ಥಾನದಲ್ಲಿದೆ. ರಿಲೀಸ್ ವೇಳೆ ಹಾಲಿವುಡ್‌ನ `ಟೆಂಟ್‌ಪೋಲ್ ದಿ ಬ್ಯಾಟ್‌ಮ್ಯಾನ್’ ಚಿತ್ರಕ್ಕೆ ಸೆಡ್ಡು ಹೊಡೆದು ಭರ್ಜರಿ ಕಲೆಕ್ಷನ್ ಮಾಡಿತ್ತು. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್

    ಇನ್ನು ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ನಲ್ಲಿ ಜ್ಯೂ.ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯಾ ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಚಿತ್ರದ ಫೈನಲ್ ಕಲೆಕ್ಷನ್ ವಿಚಾರವಾಗಿ `ಆರ್‌ಆರ್‌ಆರ್’ ಮತ್ತೆ ಸೌಂಡ್ ಮಾಡುತ್ತಿದೆ.

    Live Tv

  • ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ರಾಜಮೌಳಿ, ಸದ್ದಿಲ್ಲದೇ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಮಹೇಶ್ ಬಾಬು ಅವರಿಗಾಗಿ ಸಿನಿಮಾ ಮಾಡಲಿದ್ದು, ಈ ಕೆಲಸದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರಂತೆ. ಸ್ಕ್ರಿಪ್ಟ್ ಕೆಲಸದಲ್ಲಿ ತಲ್ಲೀಣರಾಗಿರುವ ನಿರ್ದೇಶಕರು ಮಹೇಶ್ ಬಾಬು ಅವರನ್ನು ಈ ಸಿನಿಮಾದಲ್ಲಿ ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಕಥೆಯೇ ಬಗ್ಗೆ ಯಾವುದೇ ಮಾಹಿತಿ ಕೊಡದೇ ಇದ್ದರೂ, ಇದು ಕೂಡ ಐತಿಹಾಸಿಕ ಸಂಬಂಧವನ್ನು ಹೊಂದಿದೆಯಂತೆ.

    ರಾಜಮೌಳಿ ಅವರ ಮುಂದಿನ ಸಿನಿಮಾಗೆ ಮಹೇಶ್ ಬಾಬು ಅವರೇ ನಾಯಕ ಎಂದು ಹೇಳಲಾದರೂ, ನಾಯಕಿ ಯಾರು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಾರಿ ಯಾವ ನಾಯಕಿಗೆ ರಾಜಮೌಳಿ ಅವರು ಅವಕಾಶ ನೀಡಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ತೆಲುಗು ಸಿನಿಮಾ ರಂಗದಲ್ಲಿ ಸದ್ಯ ಐಶ್ವರ್ಯ ರೈ ಅವರ ಹೆಸರು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ನ ಈ ಸಿನಿಮಾ ಸೆಟ್ಟೇರುವುದು ತಡವಾಗಿದ್ದರೂ, ಈಗಾಗಲೇ ಹಲವು ಸುತ್ತು ಚರ್ಚೆಗಳು ನಡೆದಿವೆ. ಸಿನಿಮಾದ ಬಜೆಟ್, ಕಲಾವಿದರ ಆಯ್ಕೆ, ಕಥೆ ಹೀಗೆ ಹಲವು ಕಾರಣಗಳಿಂದಾಗಿ ಸಿನಿಮಾ ಈಗಿನಿಂದಲೇ ನಿರೀಕ್ಷೆ ಮೂಡಿಸಿದೆ. ಆರ್.ಆರ್.ಆರ್ ಸಿನಿಮಾದ ನಂತರ ಈ ಸಿನಿಮಾ ಬರುತ್ತಿರುವುದರಿಂದ ಮತ್ತಷ್ಟು ಬೇಡಿಕೆಯಂತೂ ಹೆಚ್ಚಾಗಲಿದೆ.

  • ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಸಲಿಂಗ ಕಾಮಿಗಳಾ?

    ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಸಲಿಂಗ ಕಾಮಿಗಳಾ?

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್.ಆರ್.ಆರ್ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ ಗಳಿಕೆ, ಸಿನಿಮಾ ಮೂಡಿ ಬಂದ ರೀತಿ ಮತ್ತು ಮೇಕಿಂಗ್ ನಿಂದಾಗಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಸಿನಿಮಾದ ಕಥೆಯಿಂದಾಗಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅದರಲ್ಲೂ ವಿದೇಶಿ ನೋಡುಗರು ಈ ಕಥೆಯನ್ನು ಬೇರೆಯದ್ದಾಗಿಯೇ ಸ್ವೀಕರಿಸಿರುವುದು ಇನ್ನೂ ಸುದ್ದಿಗೆ ಕಾರಣವಾಗಿದೆ.

    ಆರ್.ಆರ್.ಆರ್ ಸಿನಿಮಾ ಓಟಿಟಿಯಲ್ಲಿ ನೋಡಲು ಲಭ್ಯವಿದೆ. ಹೀಗಾಗಿ ಅನೇಕರು ಈ ಸಿನಿಮಾವನ್ನು ಅದೇ ವೇದಿಕೆಯಲ್ಲೇ ವೀಕ್ಷಿಸುತ್ತಿದ್ದಾರೆ. ಸಿನಿಮಾ ನೋಡಿದ ವಿದೇಶಿಗರು ಈ ಸಿನಿಮಾವನ್ನು ಗೇ ಕಥೆಯುಳ್ಳ ಚಿತ್ರ ಎಂದು ಕಾಲೆಳೆದಿದ್ದಾರೆ. ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಪಾತ್ರಗಳು ಸಲಿಂಗ ಕಾಮಿಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಇಂತಹ ಸಾಕಷ್ಟು ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಉತ್ತರಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಉರಿವ ಬೆಂಕಿಗೆ ತುಪ್ಪವಲ್ಲ, ಪೆಟ್ರೊಲ್ ಸುರಿದು ಮತ್ತಷ್ಟು ಬೆಂಕಿ ಉಗುಳುವಂತೆ ಮಾಡಿದ್ದಾರೆ. ‘ಇದೊಂದು ಸಲಿಂಗ ಪ್ರೇಮ ಎನ್ನುವಂತಹ ಕಥೆಯನ್ನು ಈ ಸಿನಿಮಾ ಹೊಂದಿದೆ ಎನ್ನುವ ಅರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಮತ್ತು ರಾಮ್ ಚರಣ್ ತೇಜ್ ಇಬ್ಬರೂ ಒಟ್ಟೊಟ್ಟಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಮುಗಿಯುವ ತನಕ ಒಬ್ಬರಿಗಾಗಿ ಒಬ್ಬರು ಫೈಟ್ ಮಾಡುತ್ತಾರೆ. ನೃತ್ಯ ಮಾಡುತ್ತಾರೆ. ಹೀಗಾಗಿ ಇದೊಂದು ಸಲಿಂಗ ಪ್ರೇಮಕಥೆ ಎಂದು ಉಲ್ಲೇಖಿಸಲಾಗುತ್ತಿದೆ.

  • ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ಎಸ್.ಎಸ್.ರಾಜಮೌಳಿ ನಿರ್ದೇಶನದ ಜೂನಿಯರ್ ಎನ್.ಟಿಆರ್ ಹಾಗೂ ರಾಮ್ ಚರಣ್ ನಟನೆಯ ಆರ್.ಆರ್.ಆರ್ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿತ್ತು. ದಾಖಲೆಯ ರೀತಿಯಲ್ಲಿ ಹಣ ಬಾಚಿಕೊಂಡಿತ್ತು. ಇದೀಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ. ಇದನ್ನೂ ಓದಿ : ‘ಮುದುಕನ ಲವ್ ಸ್ಟೋರಿ’ಗೆ ಕೆಜಿಎಫ್ ತಾತ ಕೃಷ್ಣರಾವ್ ಹೀರೋ

    ಈ ಸಿನಿಮಾ ಜೀ5 ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ದೃಶ್ಯ ವೈಭವ ತ್ರಿಬಲ್ ಆರ್ ಸಿನಿಮಾ, ಜಸ್ಟ್ ಒಂದೇ ಒಂದು ನಿಮಿಷದಲ್ಲಿ 1000 ಮಿಲಿಯನ್ಸ್ ಸ್ಟ್ರೀಮಿಂಗ್ ಪಡೆದುಕೊಂಡಿದ್ದು, ಜೊತೆಗೆ ಜೀ5ಯಲ್ಲಿ ನಾಲ್ಕು ಭಾಷೆಯಲ್ಲಿಯೂ ಟ್ರೇಡಿಂಗ್ ಕಮಾಲ್ ಮಾಡ್ತಿದೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

    ಈ ಕುರಿತು ಟ್ವಿಟ್ ಮಾಡಿರುವ ಜ್ಯೂನಿಯರ್ ಎನ್.ಟಿ.ಆರ್ ‘ಆರ್.ಆರ್.ಆರ್ ಸಿನಿಮಾಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲಿಯೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು,ನಿಮ್ಮ ಅದ್ಭುತ ಪ್ರತಿಕ್ರಿಯೆ ಧನ್ಯವಾದ’ ಎಂದು ಹೇಳಿದ್ದಾರೆ. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

    ರಾಜಮೌಳಿ ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಅದ್ದೂರಿತನ ಬಯಸುತ್ತಾರೆ. ಅದಕ್ಕೆ ತಕ್ಕಂತೆಯೇ ‘ಆರ್​ಆರ್​ಆರ್​’ ಸಿನಿಮಾ ಮೂಡಿಬಂದಿದೆ. ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ಆ್ಯಕ್ಷನ್​ ಖದರ್ ನಲ್ಲಿ ಮೆರೆದಿದ್ದರು. ಜೊತೆಗೆ ಸೆಂಟಿಮೆಂಟ್​ ಕೂಡ ಸಿನಿಮಾದಲ್ಲಿ ಹೈಲೈಟ್​ ಆಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದೆ.

  • ಪ್ಯಾನ್ ಇಂಡಿಯಾ ಸಿನಿಮಾ ಇಂದಿನದ್ದಲ್ಲ : ರಾಜಮೌಳಿಗೆ ಟಾಂಗ್ ಕೊಟ್ಟ ಕಮಲ್ ಹಾಸನ್

    ಪ್ಯಾನ್ ಇಂಡಿಯಾ ಸಿನಿಮಾ ಇಂದಿನದ್ದಲ್ಲ : ರಾಜಮೌಳಿಗೆ ಟಾಂಗ್ ಕೊಟ್ಟ ಕಮಲ್ ಹಾಸನ್

    ಕ್ಷಿಣದ ಭಾರತದ ಸಿನಿಮಾಗಳು ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗಿ, ಹಲವು ಭಾಷೆಗಳಿಗೆ ಡಬ್ ಆಗಿ ಭಾರೀ ಹವಾ ಕ್ರಿಯೇಟ್ ಮಾಡುತ್ತಿವೆ. ಹೀಗಾಗಿಯೇ ಪ್ಯಾನ್ ಇಂಡಿಯಾ ಕಲ್ಪನೆಗೂ ತುಸು ಹೆಚ್ಚಾಗಿಯೇ ದಕ್ಷಿಣದ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಆರ್.ಆರ್.ಆರ್, ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಾಗಿನಿಂದ, ಪ್ಯಾನ್ ಇಂಡಿಯಾ ಚಳವಳಿ ಹುಟ್ಟಿದ್ದು ಇದೇ ಸಿನಿಮಾಗಳಿಂದ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈ ಮಾತಿಗೆ ಕಮಲ್ ಹಾಸನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.  ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಕಮಲ್ ಹಾಸನ್ ನೀಡಿರುವ ಪ್ರತಿಕ್ರಿಯೆಯನ್ನು ರಾಜಮೌಳಿ ಅವರಿಗೆ ಕೊಟ್ಟ ಟಾಂಗ್ ಎಂದೇ ತಮಿಳು ಸಿನಿಮಾ ರಂಗದಲ್ಲಿ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಕಮಲ್ ಹಾಸನ್ ಹೇಳಿದ್ದೇನು ಅಂದರೆ, ‘ಪ್ಯಾನ್ ಇಂಡಿಯಾ ಸಿನಿಮಾಗಳು ಈಗ ಹುಟ್ಟಿಲ್ಲ. ಹಲವು ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲಾಗಿದೆ. ಅವುಗಳಿಗೆ ಪ್ಯಾನ್ ಇಂಡಿಯಾ ಅಂತ ಹೆಸರು ಇರಲಿಲ್ಲವಷ್ಟೆ. ಈಗ ಅದನ್ನೇ ದೊಡ್ಡದು ಮಾಡಿ ಹೇಳಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಆರ್.ಆರ್.ಆರ್, ಕೆಜಿಎಫ್ 2 ಸಿನಿಮಾಗಳಿಗಿಂತ ಮುಂಚೆಯೇ ಪ್ಯಾನ್ ಇಂಡಿಯಾ ಚಿತ್ರಗಳು ಬಂದಿವೆ. ಮಲಯಾಳಂನ ಚಮ್ಮೇನ್, ಮುಘಲ್ ಎ ಅಜಮ್ , ಪಡೋಸನ್ ರೀತಿಯ ಸಿನಿಮಾಗಳನ್ನು ಏನೆಂದು ಕರೆಯಬೇಕು? ನಮ್ಮದು ಹಲವು ಭಾಷೆಗಳನ್ನು ಹೊಂದಿದ ದೇಶ. ಅದನ್ನು ಅರ್ಥ ಮಾಡಿಕೊಂಡರೆ, ಎಲ್ಲವೂ ಅರ್ಥವಾದೀತು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ಕಮಲ್ ಹಾಸನ್. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

    ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳು ಎಂದು ಬೇರ್ಪಡಿಸುವುದನ್ನು ನಾನು ಒಪ್ಪಲಾರೆ ಎಂದಿರುವ ಕಮಲ್ ಹಾಸನ್, ಎಲ್ಲವೂ ನಮ್ಮದೇ ಎಂದು ಸಾಗಬೇಕು. ತಾಜ್ ಮಹಲ್ ನನ್ನದು, ಮಧುರೈ ಮೀನಾಕ್ಷಿ ದೇವಾಲಯ ಕೂಡ ನನ್ನದೇ ಎಂದು ಹೇಳುವ ಮೂಲಕ ದೇಶ, ಭಾಷೆಯನ್ನು ಒಡೆಯಬೇಡಿ ಎಂದಿದ್ದಾರೆ ಕಮಲ್ ಹಾಸನ್.

  • ಆರ್‌ಆರ್‌ಆರ್ ಅಲ್ಲ, ಕೆಜಿಎಫ್ 2 ಸಿನಿಮಾ ನನ್ನ ಆಯ್ಕೆ ಎಂದ ಕಿಚ್ಚ ಸುದೀಪ್

    ಆರ್‌ಆರ್‌ಆರ್ ಅಲ್ಲ, ಕೆಜಿಎಫ್ 2 ಸಿನಿಮಾ ನನ್ನ ಆಯ್ಕೆ ಎಂದ ಕಿಚ್ಚ ಸುದೀಪ್

    ಸಿನಿಮಾ ರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ ಚಿತ್ರಗಳಲ್ಲಿ `ಕೆಜಿಎಫ್ 2′ ಸಿನಿಮಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದೆ. ಒಟ್ಟು 1227 ಕೋಟಿ ಗಳಿಕೆ ಮಾಡಿದ್ದು, ಹಿಂದಿಯಲ್ಲಿ 430ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರದ ಬಗ್ಗೆ ಹಲವು ಸ್ಟಾರ್‌ಗಳು ಪ್ರತಿಕ್ರಿಯೆ ನೀಡಿದ್ದರು. ಈಗ ಕಿಚ್ಚ ಸುದೀಪ್ ಕೂಡ ಈ ಚಿತ್ರದ ಕುರಿತು ಮಾತನಾಡಿದ್ದಾರೆ.

    ಈ ಹಿಂದೆ ಕೆಲ ಕಿಡಿಗೇಡಿಗಳು ಸುದೀಪ್ ಮಾತನಾಡಿದ್ದ ವಿಡಿಯೋವೊಂದು ಹರಿಬಿಟ್ಟು ತಂದಿಟ್ಟು ತಮಾಷೆ ನೋಡಿದ್ದರು. `ಕೆಜಿಎಫ್ 2′ ಚಿತ್ರದ ವಿರುದ್ಧ ಸುದೀಪ್ ಕಿಡಿಕರ‍್ತಿದ್ದಾರೆ ಅನ್ನೋ ಹಾಗೇ ಸುದ್ದಿ ಹಬ್ಬಿಸಿದ್ದರು. ಸುದೀಪ್ ನೀಡಿರೋ ಉತ್ತರ ಈಗ ಎಲ್ಲಾ ಗಾಸಿಪ್‌ ತೆರೆ ಎಳೆದಂತೆ ಆಗಿದೆ.

    ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ವೇಳೆ ನನಗೆ ಕೆಜಿಎಫ್ ಸಿನಿಮಾ ಎಂದರೆ ಇಷ್ಟ ಅಂತಾ ಮಾತನಾಡಿದ್ದಾರೆ. ನಿರೂಪಕ ಆರ್‌ಆರ್‌ಆರ್ ಮತ್ತು ಕೆಜಿಎಫ್ ಚಿತ್ರದಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದಾಗ ಥಟ್ ಅಂತ ಕೆಜಿಎಫ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

    ಈ ವೇಳೆ ಬೇರೆ ಪ್ರಶ್ನೆಗಳಿಗೂ ಉತ್ತರಿಸಿರುವ ಕಿಚ್ಚ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ‌ ಆಯ್ಕೆ ಮಾಡಿ ಎಂದಾಗ ವಿರಾಟ್‌ನ ಆಯ್ಕೆ ಮಾಡಿದ್ದಾರೆ. ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಎಂದಾಗ ಸಲ್ಮಾನ್ ಖಾನ್‌ನ ಆಯ್ಕೆ ಮಾಡಿದ್ರು. ಟೆಸ್ಟ್ ಮತ್ತು ಟಿ20 ಅಲ್ಲಿ ಟಿ20 ಇಷ್ಟ ಅಂದ್ರು. ಬಳಿಕ ಆರ್‌ಆರ್‌ಆರ್ ಮತ್ತು ಕೆಜಿಎಫ್ ಚಿತ್ರದಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದಾಗ ಥಟ್ ಅಂತ ಕೆಜಿಎಫ್ ಎಂದು ಹೇಳಿದ್ದಾರೆ. ಒಟ್ನಲ್ಲಿ `ಕೆಜಿಎಫ್’ ಚಿತ್ರಕ್ಕೆ ನನ್ನ ಸಹಮತವಿದೆ ಕೆಜಿಎಫ್ ಚಿತ್ರ ಇಷ್ಟ ಅಂತಾ ಹೇಳೋದರ ಮೂಲಕ ಎಲ್ಲಾ ಗಾಸಿಪ್‌ಗಳಿಗೂ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

  • ರಾಜಮೌಳಿ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಹೀರೋ

    ರಾಜಮೌಳಿ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಹೀರೋ

    ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ರಾಜಮೌಳಿ ಮುಂದಿನ ಸಿನಿಮಾ ಯಾವುದು  ಎಂಬ ಚರ್ಚೆ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಕುರಿತು ರಾಜಮೌಳಿ ಅವರು ಏನೂ ಹೇಳದೇ ಇದ್ದರೂ, ಅವರ ತಂದೆ ವಿಜಯೇಂದ್ರ ಪ್ರಸಾದ್ ಈ ಕುರಿತು ಮಾತನಾಡಿದ್ದಾರೆ. ಅಂದುಕೊಂಡಂತೆ ಆದರೆ, ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾ 2023ರಲ್ಲಿ ಸೆಟ್ಟೇರಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ರಾಜಮೌಳಿ ಅವರ ಮುಂದಿನ ಚಿತ್ರಕ್ಕೆ ಅವರ ತಂದೆಯೇ ಚಿತ್ರಕತೆ ಬರೆಯುತ್ತಿದ್ದಾರೆ. ಈಗಾಗಲೇ ಕಥೆ ಸಿದ್ದಗೊಂಡಿದ್ದು, ಸ್ಕ್ರೀನ್ ಪ್ಲೇ ಹೆಣೆಯುವಲ್ಲಿ ವಿಜಯೇಂದ್ರ ಪ್ರಸಾದ್ ಬ್ಯುಸಿಯಾಗಿದ್ದಾರಂತೆ. 2023ರ ಜೂನ್‍ನಿಂದ ಚಿತ್ರೀಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದು ಕೂಡ ಭಾರೀ ಬಜೆಟ್ ಸಿನಿಮಾವಾಗಿರಲಿದೆಯಂತೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಂದಹಾಗೆ ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಐತಿಹಾಸಿಕ ಕಥಾವಸ್ತುವನ್ನು ಈ ಸಿನಿಮಾ ಹೊಂದಿದ್ದು, ಮಹೇಶ್ ಬಾಬು ಈ ಪಾತ್ರಕ್ಕಾಗಿ ಕನಿಷ್ಠ ಆರು ತಿಂಗಳ ಕಾಲ ತಯಾರಿ ಮಾಡಿಕೊಳ್ಳಬೇಕಂತೆ. ಸದ್ಯ ಮಹೇಶ್ ಬಾಬು ಅವರು  ‘ಸರ್ಕಾರು ವಾರಿ ಪಾಟ’ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ರಾಜಮೌಳಿ ಅವರ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ವಿಶೇಷ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಈ ಹಿಂದಿನ ಅವರ ಬಾಹುಬಲಿ ಚಿತ್ರ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಬಿರುದಾಂಕಿತಗೊಂಡಿತ್ತು. ಮಹೇಶ್ ಬಾಬುಗಾಗಿ ಬರೆದ ಕಥೆಯು, ಈ ಎರಡೂ ಸಿನಿಮಾಗಳನ್ನೂ ಮೀರಿಸಲಿದೆ ಎಂದು ಸಿನಿಪಂಡಿತರ ಲೆಕ್ಕಾಚಾರ.