Tag: RRR

  • `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    ಮುಂಬೈ: ಟೀಂ ಇಂಡಿಯಾ  (Team India) ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಒಂದಿಲ್ಲೊಂದು ವಿಷಯಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಆಗಾಗ್ಗೆ ಮೈದಾನದಲ್ಲಿ ನೃತ್ಯದ ಝಲಕ್ ನೀಡುತ್ತಾ ತಮ್ಮ ಅಭಿಮಾನಿಗಳನ್ನ ರಂಜಿಸುತ್ತಿರುತ್ತಾರೆ. ಹಾಗೆಯೇ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಆರ್‌ಆರ್‌ಆರ್ (RRR) ಚಿತ್ರದ ನಾಟು ನಾಟು ಹಾಡಿಗೆ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ.

    ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್ ಆರಂಭಿಸುವುದಕ್ಕೂ ಮುನ್ನ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದ ವೇಳೆ ನಾಟು ನಾಟು ಹಾಡಿಗೆ ಕೊಹ್ಲಿ ಸ್ಟೆಪ್ ಹಾಕಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ವೀಡಿಯೋ ತುಣುಕು ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಡಾನ್ಸ್ (Kohli Dance) ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

    ಈಗಾಗಲೇ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭಿಸಿದೆ. ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದು, ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್ ರಾಹುಲ್, ಜಡೇಜಾ, ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಂಡದಲ್ಲಿದ್ದಾರೆ. ಇದನ್ನೂ ಓದಿ: Oscar Winner List:ಆಸ್ಕರ್ 2023 ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

    `ನಾಟು ನಾಟು’ ಹಾಡು ಆಸ್ಕರ್ (Oscar) ಪ್ರಶಸ್ತಿ ಪಡೆಯುವ ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಟ್ರೆಂಡ್ ಸೃಷ್ಟಿಸಿದೆ. ರಾಜಮೌಳಿ (Rajamouli) ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್‌ಆರ್‌ಆರ್ ಸಿನಿಮಾದ ಗೀತೆ ಇದಾಗಿದ್ದು, ಎಂ.ಎಂ ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು, ಆಸ್ಕರ್ ಪ್ರಶಸ್ತಿ ಪಡೆದ ನಂತರವೂ 50 ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ಸಾಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ತೆಲುಗಿನ (Telagu) ನಟ ಜ್ಯೂ.ಎನ್‌ಟಿಆರ್ (Jr.Ntr) ಮತ್ತು ರಾಮ್ ಚರಣ್ (Ram Charan) ಜಬರ್‌ದಸ್ತ್ ಆಗಿ ಕುಣಿದಿದ್ದ `ನಾಟು ನಾಟು’ (Naatu Naatu) ಹಾಡಿಗೆ ಈ ವರ್ಷ ಆಸ್ಕರ್ ಅವಾರ್ಡ್ (Oscar Award) ಒಲಿದಿದೆ. ವಿಶ್ವದ ಎಲ್ಲೆಡೆ ಈ ಹಾಡು ಈಗ ಸಂಚಲನ ಮೂಡಿಸುತ್ತಿದೆ. ಹೀಗಿರುವಾಗ ಆಸ್ಕರ್ ವೇದಿಕೆಯಲ್ಲಿ ತಾರಕ್- ಚರಣ್ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಬೇಕಿತ್ತು. ಕೊನೆಯ ಹಂತದಲ್ಲಿ ಪ್ರದರ್ಶನ ಕ್ಯಾನ್ಸಲ್ ಆಗಿದ್ದೇಕೆ ಎಂಬುದನ್ನ ನಿರ್ಮಾಪಕ ರಾಜ್‌ ಕಪೂರ್  ಅಸಲಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.

    `ಆರ್‌ಆರ್‌ಆರ್’ (RRR) ಸಿನಿಮಾಗಾಗಿ ರಾಜಮೌಳಿ ಮತ್ತು ಟೀಮ್ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. `ನಾಟು ನಾಟು’ ಹಾಡನ್ನ ಉಕ್ರೇನ್‌ನಲ್ಲಿ ಅದ್ದೂರಿಯಾಗಿ ಶೂಟಿಂಗ್ ಮಾಡಲಾಗಿತ್ತು. ತೆರೆಯ ಮೇಲೆ ಕಮಾಲ್ ಮಾಡಿದ್ದಂತಹ ನಾಟು ನಾಟು ಸಾಂಗ್‌ಗೆ ಆಸ್ಕರ್ ವೇದಿಕೆಯಲ್ಲೂ ಪ್ರದರ್ಶನ ಮಾಡುವ ಯೋಜನೆ ಇತ್ತು. ಕಡೆಯ ಕ್ಷಣದಲ್ಲಿ ಬದಲಾಗಿದ್ದು ಯಾಕೆ ಎಂಬುದನ್ನ ನಿರ್ಮಾಪಕ ರಾಜ್ ಕಪೂರ್ (Raj Kapoor) ಇದೀಗ ತಿಳಿಸಿದ್ದಾರೆ.

    ರಾಮ್ ಚರಣ್ ಮತ್ತು ತಾರಕ್ ಇಬ್ಬರೂ ಪ್ರತಿಷ್ಠಿತ ವೇದಿಕೆಯಲ್ಲಿ ಡಾನ್ಸ್ ಮಾಡಲು ಆರಾಮದಾಯಕವಾಗಿರದ ಕಾರಣ ಪ್ರದರ್ಶನ ನೀಡಿಲ್ಲ ಎಂದು ರಾಜ್ ಕಪೂರ್ ಬಹಿರಂಗಪಡಿಸಿದ್ದಾರೆ. ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವ ಮುನ್ನ ಮತ್ತೆ ಕಾರ್ಯಕ್ರಮದ ಸಿದ್ಧತೆ ಸಮಯದ ಅಭಾವವಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಗಾಯಕರ ಜೊತೆ ಇವರಿಬ್ಬರೂ ಪ್ರದರ್ಶನ ನೀಡಬೇಕಿತ್ತು. ಎಂ.ಎಂ ಕೀರವಾಣಿ ಹೇಳಿದ ಬಳಿಕ ನಾವು ರಾತ್ರೋರಾತ್ರಿ ಭಾರತದ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಕೋರಿಯೋಗ್ರಾಫರ್‌ಗಳಿಗೆ ಕರೆ ಮಾಡಿ ಮಾತನಾಡಿದೆವು. ನಾವು ಕಾಸ್ಟಿಂಗ್ ಆಯ್ಕೆಗಳು, ವಸ್ತ್ರ ವಿನ್ಯಾಸ ಮತ್ತು ಭಾರತದ ತಂಡದೊಂದಿಗೆ ಸ್ಟೇಜ್ ರೆಂಡರಿಂಗ್ ಎಲ್ಲವೂ ಸಿದ್ಧತೆ ಮಾಡಿಕೊಂಡಿದ್ದೇವು. ಆದರೆ ಎಲ್ಲದಕ್ಕೂ ಸಮಯದ ಅಭಾವವಿತ್ತು ಎಂದಿದ್ದಾರೆ. ಪ್ರತಿಷ್ಠಿತ ವೇದಿಕೆಯಲ್ಲಿ ನೃತ್ಯ ಮಾಡೋದಾದ್ರೆ ಅದಕ್ಕೆ ಸಿದ್ಧತೆ ಕೂಡ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಪ್ರದರ್ಶನ ನೀಡಲಾಗಲಿಲ್ಲ‌ ಬಳಿಕ ಹಾಲಿವುಡ್‌ ನಟಿ ಲಾರೆನ್‌ ಮತ್ತು ಅವರ ತಂಡ ಅದ್ಭುತವಾಗಿ ಪ್ರದರ್ಶಿಸಿದರು ಎಂದು ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.

  • ‘ಆಸ್ಕರ್’ ಪಡೆದ ನಂತರ ತವರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್ : ಅದ್ಧೂರಿ ಸ್ವಾಗತ

    ‘ಆಸ್ಕರ್’ ಪಡೆದ ನಂತರ ತವರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್ : ಅದ್ಧೂರಿ ಸ್ವಾಗತ

    ಳೆದೊಂದು ವಾರದಿಂದ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದ ಆರ್.ಆರ್.ಆರ್ (RRR) ಚಿತ್ರತಂಡ ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಮುಗಿಸಿಕೊಂಡು ಇಂದು ಬೆಳಗ್ಗೆ ಹೈದರಾಬಾದ್ ಗೆ (Hyderabad) ಆಗಮಿಸಿದೆ. ಹೈದರಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ವಿಷಯವನ್ನು ತಿಳಿದ ಅಭಿಮಾನಿಗಳು ಏರ್ ಪೋರ್ಟ್ ಮುಂದೆ ಜಮಾಯಿಸಿದ್ದರು. ಜ್ಯೂನಿಯರ್ ಎನ್.ಟಿ.ಆರ್ (Jr NTR), ರಾಮ್ ಚರಣ್ ತೇಜ ಸೇರಿದಂತೆ ಹಲವರಿಗೆ ಜಯಘೋಷ ಹಾಕಿ, ಅಭಿನಂದಿಸಿದ್ದರು. ಮುಗಿ ಬಿದ್ದು ಸೆಲ್ಫಿ ಕೂಡ ತಗೆದುಕೊಂಡರು.

    ನಾಟು ನಾಟು (Natu Natu) ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಗುತ್ತಿದ್ದಂತೆಯೇ ಜಗತ್ತೇ ಆರ್.ಆರ್.ಆರ್ ತಂಡವನ್ನು ಅಭಿನಂದಿಸಿದೆ. ಈ ನಡುವೆ ಆರ್.ಆರ್.ಆರ್ ಅನ್ನು ವಿರೋಧಿಸಿದ್ದ ಹಲವರಿಗೆ ಪ್ರಶ್ನೆ ಕೇಳುವ ಮೂಲಕ ಟಾಂಗ್ ಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ ನಟ ಪ್ರಕಾಶ್ ರೈ ಮತ್ತು ರಮ್ಯಾ. ‘ನಾಟು ನಾಟು’ ಹಾಡಿಗೆ ಆಸ್ಕರ್ ಬರುತ್ತಿದ್ದಂತೆಯೇ ಮತ್ತೆ ಬಾಲಿವುಡ್ ಮೇಲೆ ಹಲವರು ಮುಗಿ ಬಿದ್ದಿದ್ದಾರೆ. ಪ್ರಕಾಶ್ ರೈ ಸೇರಿದಂತೆ ಕೆಲ ನಟರು ಆಸ್ಕರ್ ‍ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನ್ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ನಟಿ ರಮ್ಯಾ ಕೂಡ ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲೇ ಟ್ವೀಟ್ ಮಾಡಿದ್ದು, ಹಿಂದಿ ಮಾತಾಡಲ್ಲ ಎಂದು ವೈರಲ್ ಆಗಿದ್ದ ಆಟೋಡ್ರೈವರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಯಾರೂ ಯಾರ ಮೇಲೆ ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ’ ಎಂದು ಟಾಂಗ್ ನೀಡಿದ್ದಾರೆ.

    ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ದಕ್ಷಿಣ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ. ನಾಟು ನಾಟು ತೆಲುಗಿನ ಸಿನಿಮಾ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ. ರಮ್ಯಾ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿರುವ ಹಾಗೂ ಗುನೀತ್ ಮೊಂಗಾ ನಿರ್ಮಾಣದ ಭಾರತದ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ (The Elephant Whisperers) ಬೆಸ್ಟ್ ಡಾಕ್ಯುಮೆಂಟ್ ಶಾರ್ಟ್ ಫಿಲಂ ಕೆಟಗರಿಯಲ್ಲಿ ಆಸ್ಕರ್ (Oscar) ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಿನಿಮಾ ರಂಗದಲ್ಲಿ ಅತ್ಯುತ್ತಮ ಗೌರವಕ್ಕೆ ಈ ಕಿರುಚಿತ್ರ ಪಾತ್ರವಾಗಿದೆ.

    ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ಅನಾಥ ಆನೆ ಮರಿಯ ಕಥೆಯಾಗಿದೆ. ಸ್ಥಳೀಯ ದಂಪತಿ ಬೆಳ್ಳಿ ಹಾಗೂ ಬೊಮ್ಮನ್ ಆರೈಕೆಯಲ್ಲಿ ಆನೆ ಮರಿ ಬೆಳೆಯುವ, ಬಾಂಧವ್ಯವನ್ನು ಸೂಚಿಸುವ ಹಾಗೂ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವ ವಿಷಯಗಳು ಸಿನಿಮಾದಲ್ಲಿದೆ. ಇದನ್ನೂ ಓದಿ: Breaking- ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ : ಸಂಭ್ರಮದಲ್ಲಿ ಭಾರತ

    ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ಜೊತೆಗೆ ಜಾಗತಿಕವಾಗಿ ವೈರ್ ಆಗಿರುವ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಕೂಡಾ ಆಸ್ಕರ್‌ ಲಭಿಸಿದೆ. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

  • ‘ಆಸ್ಕರ್’ ಪ್ರಶಸ್ತಿಗಾಗಿ 80 ಕೋಟಿ ಖರ್ಚು ಮಾಡಿದ ರಾಜಮೌಳಿ : ತೆಲುಗು ನಿರ್ದೇಶಕ ಕಿಡಿಕಿಡಿ

    ‘ಆಸ್ಕರ್’ ಪ್ರಶಸ್ತಿಗಾಗಿ 80 ಕೋಟಿ ಖರ್ಚು ಮಾಡಿದ ರಾಜಮೌಳಿ : ತೆಲುಗು ನಿರ್ದೇಶಕ ಕಿಡಿಕಿಡಿ

    ಬಾರಿ ಆಸ್ಕರ್ (Oscar) ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಧಾವಂತದಲ್ಲಿದೆ ಆರ್.ಆರ್.ಆರ್ (RRR) ಚಿತ್ರತಂಡ. ಈ ಪ್ರಶಸ್ತಿಯಲ್ಲಿ ಭಾಗಿಯಾಗಲು ಹಲವು ನಿಯಮಗಳಿದ್ದು ಆ ಎಲ್ಲ ನಿಯಮಗಳನ್ನು ಪೂರೈಸಿ, ಇದೀಗ ಅಂತಿಮ ಹಂತವನ್ನೂ ಅದು ತಲುಪಿದೆ. ಮಾರ್ಚ್ 12ಕ್ಕೆ ಪ್ರಶಸ್ತಿ ಘೋಷಣೆ ಮತ್ತು ಪ್ರದಾನ ಸಮಾರಂಭವೂ ನಡೆಯಲಿದ್ದು, ಈ ವೇದಿಕೆಯ ಮೇಲೆ ಆರ್.ಆರ್.ಆರ್ ಚಿತ್ರದ ನಾಯಕರಾದ ಜ್ಯೂನಿಯರ್ ಎನ್.ಟಿ.ಆರ್ (Jr. NTR,) ಹಾಗೂ ರಾಮ್ ಚರಣ್ (Ram Charan) ‘ನಾಟು ನಾಟು’ ಗೀತೆಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡೇ ಅಂತಿಮ ಸುತ್ತಿಗೆ ಆಯ್ಕೆಯೂ ಆಗಿದೆ.

    ಆರ್.ಆರ್.ಆರ್ ಸಿನಿಮಾದ ಹಾಡಿಗೆ ಆಸ್ಕರ್ ಬರಲಿ ಎಂದು ದೇಶಕ್ಕೆ ದೇಶವೇ ಪ್ರಾರ್ಥಿಸುತ್ತಿದ್ದರೆ, ತೆಲುಗಿನ ಹಿರಿಯ ನಿರ್ದೇಶಕ ತಮ್ಮಾರೆಡ್ಡಿ (Thamarreddy Bharadwaj) ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನು ಪಡೆಯಲೆಂದು ಆರ್.ಆರ್.ಆರ್ ಚಿತ್ರದ ನಿರ್ದೇಶಕ ರಾಜಮೌಳಿ (Rajamouli) ಬರೋಬ್ಬರಿ 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೊತ್ತದಲ್ಲಿ ತಾವು ಹತ್ತು ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

    ‘ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು ತಂಡ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಎಂಬತ್ತು ಕೋಟಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸಿನಿಮಾ ಬಿಡುಗಡೆ, ಪ್ರಚಾರ, ತಂಡದ ಖರ್ಚು ಮತ್ತು ಆಸ್ಕರ್ ಪ್ರಶಸ್ತಿಗಾಗಿ ಮಾಡಬೇಕಾದ ಖರ್ಚು ಹೀಗೆ ಕೋಟಿ ಕೋಟಿ ಸುರಿದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?’ ಎಂದು ಅವರು ತಮ್ಮಾರೆಡ್ಡಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

    ಕನ್ನಡದ ಕೆಜಿಎಫ್ 2 ಚಿತ್ರಕ್ಕೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆಸ್ಕರ್ ಪ್ರಶಸ್ತಿಗಾಗಿ ಆರ್.ಆರ್.ಆರ್ ಎಂಬತ್ತು ಕೋಟಿ ಖರ್ಚು ಮಾಡಿದ್ದಾರೆ. ಇಪ್ಪತ್ತು ಕೋಟಿ ಸೇರಿಸಿದ್ದರೆ ಮತ್ತೊಂದು ಕೆಜಿಎಫ್ ಮಾದರಿಯ ಚಿತ್ರ ಮಾಡಬಹುದಿತ್ತು ಎಂದು ತಮ್ಮಾರೆಡ್ಡಿ ಲೇವಡಿ ಮಾಡಿದ್ದಾರೆ. ಇವರ ಮಾತು ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ.

  • ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ರಾಜಮೌಳಿ (Rajamouli) ಅವರೇ ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ಅನೇಕರು ನಿಮ್ಮ ಮೇಲೆ ಅಸೂಯೆ ಪಡುತ್ತಿದ್ದಾರೆ. ನಿಮ್ಮನ್ನು ಕೊಲ್ಲಲೆಂದೇ ನಿರ್ದೇಶಕರು ಒಂದು ಗುಂಪನ್ನಾಗಿ ಮಾಡಿಕೊಂಡಿದ್ದಾರೆ. ಆ ಗುಂಪಿನಲ್ಲಿ ನಾನೂ ಇದ್ದೇನೆ. ಇದೀಗ ನಾನು ನಾಲ್ಕು ಪೆಗ್‍ ತಗೆದುಕೊಂಡಿದ್ದೇನೆ ಹಾಗಾಗಿ ಸತ್ಯ ನುಡಿಯುತ್ತಿದ್ದೇನೆ ಎಂದು ಹೇಳುವ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ಒಂದು ಕ್ಷಣ ರಾಜಮೌಳಿ ಅಭಿಮಾನಿಗಳನ್ನು ದಂಗಾಗಿಸಿದ್ದರು.

    ಈ ವಿಷಯವನ್ನು ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮೊದ ಮೊದಲು ಎಲ್ಲರೂ ಇದನ್ನು ಗಂಭೀರವಾಗಿಯೇ ತಗೆದುಕೊಂಡಿದ್ದರು. ಆನಂತರ ಸರಣಿಯವಾಗಿ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಷಯಗಳನ್ನು ಬರೆದುಕೊಂಡಿದ್ದಾರೆ. ಹಾಗಾಗಿ ಇದು ತಮಾಷೆ ಮತ್ತು ರಾಜಮೌಳಿಯನ್ನು ಕಾಲು ಎಳೆಯುವ ತಂತ್ರ ಎಂದು ನಿಟ್ಟುಸಿರಿಟ್ಟಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಸರಣಿಯ ಟ್ವೀಟ್ ನಲ್ಲಿ ರಾಜಮೌಳಿಯನ್ನು ಹೊಗಳಿರುವ ವರ್ಮಾ, ಅವರನ್ನು ದಾದಾ ಸಾಹೇಬ್ ಫಾಲ್ಕೆಗೆ ಹೋಲಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕರನ್ನೂ ದಾಟಿಕೊಂಡು ಮುಂದೆ ಹೋಗಿದ್ದೀರಿ ಎಂದಿದ್ದಾರೆ. ಈ ಸ್ಥಾನದಲ್ಲಿ ನೀವು ಇರುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ನಿಮ್ಮ ಕಿರುಬೆರಳನ್ನು ಒಂದು ಸಲ ಚೀಪಬೇಕು ಎಂದು ಯತ್ವಾತದ್ವಾ ಹೊಗಳಿದ್ದಾರೆ ರಾಮ್ ಗೋಪಾಲ್ ವರ್ಮಾ.

    ಇತ್ತೀಚೆಗಷ್ಟೇ ರಾಜಮೌಳಿ ಹಾಲಿವುಡ್ ನಿರ್ದೇಶಕರನ್ನು ಭೇಟಿ ಮಾಡಿದ್ದರು. ಅವರು ಆರ್.ಆರ್.ಆರ್ (RRR) ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಲ್ಲದೇ, ಈ ಸಿನಿಮಾದ ಹಾಡಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಬಂದಿತ್ತು. ಇದೀಗ ಆಸ್ಕರ್ ಪ್ರಶಸ್ತಿಯ ರೇಸ್‍ ನಲ್ಲೂ ಕೂಡ ಆರ್.ಆರ್.ಆರ್ ಸಿನಿಮಾವಿದೆ. ಈ ಹಿನ್ನೆಲೆಯಲ್ಲಿ ವರ್ಮಾ ಮೆಚ್ಚುಗೆಯ ಮಾತುಗಳ ಮೂಲಕ ಅಭಿನಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎರಡು ಬಾರಿ ‘ಆರ್.ಆರ್.ಆರ್’ ಸಿನಿಮಾ ನೋಡಿದ ಅವತಾರ್ ಚಿತ್ರ ನಿರ್ದೇಶಕ

    ಎರಡು ಬಾರಿ ‘ಆರ್.ಆರ್.ಆರ್’ ಸಿನಿಮಾ ನೋಡಿದ ಅವತಾರ್ ಚಿತ್ರ ನಿರ್ದೇಶಕ

    ಗತ್ತಿನ ಅತ್ಯುತ್ತಮ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ‘ಅವತಾರ್’ (Avatar) ಖ್ಯಾತಿಯ ಜೇಮ್ಸ್ ಕ್ಯಾಮರೂನ್ (James Cameron). ಇವರನ್ನು ಜಗತ್ತಿನ ಸಿನಿಮಾ ರಂಗ ವಿಶ್ವವಿದ್ಯಾಲಯ ಎಂದೇ ಕರೆಯುತ್ತದೆ. ಇವರು ಮಾಡಿದ ಸಿನಿಮಾಗಳಿಗೆ ಜನರು ಯಾವತ್ತಿಗೂ ಮನ್ನಣೆ ಕೊಡುತ್ತಲೇ ಬಂದಿದ್ದಾರೆ. ಅತೀ ಹೆಚ್ಚು ಬಜೆಟ್ ನಲ್ಲಿ ಇವರ ಚಿತ್ರಗಳು ನಿರ್ಮಾಣವಾಗುತ್ತದೆ. ಲಾಭವನ್ನೂ ಹಾಗೆಯೇ ತಂದುಕೊಡುತ್ತವೆ. ಇಂತಹ ಮಹಾನ್ ನಿರ್ದೇಶಕರು, ರಾಜಮೌಳಿ (Rajamouli) ನಿರ್ದೇಶನದ ಆರ್.ಆರ್.ಆರ್ (RRR) ಸಿನಿಮಾವನ್ನು ಎರಡು ಬಾರಿ ನೋಡಿದ್ದಾರಂತೆ.

    ಈ ವಿಷಯವನ್ನು ಸ್ವತಃ ರಾಜಮೌಳಿ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಕೂಡ ಶೇರ್ ಮಾಡಿದ್ದಾರೆ. ‘ಆರ್.ಆರ್.ಆರ್ ಸಿನಿಮಾವನ್ನು ತಾವು ಎರಡು ಬಾರಿ ನೋಡಿದ್ದಲ್ಲೇ, ತಮ್ಮ ಪತ್ನಿಗೂ ನೋಡುವಂತೆ ಸಲಹೆ ನೀಡಿದ್ದು, ನನಗೆ ಸಿಕ್ಕ ಮಹಾನ್ ಗೌರವ. ಹತ್ತು ನಿಮಷಗಳ ಕಾಲ ಸಿನಿಮಾ ಬಗ್ಗೆ ವಿಶ್ಲೇಷಿಸಿದ್ದನ್ನು ನಾನು ಮರೆಯುವುದಕ್ಕೆ ಸಾಧ್ಯವೇ ಇಲ್ಲ’ ರಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಜಗತ್ತಿನ ಅತ್ಯುತ್ತಮ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು ಎಂದು ಜೇಮ್ಸ್ ಕ್ಯಾಮರೂನ್ ಗುಣಗಾನ ಮಾಡಿದ್ದಾರಂತೆ. ಈ ಮಾತು ರಾಜಮೌಳಿ ಅವರಲ್ಲಿ ಮತ್ತಷ್ಟ ಸಂಭ್ರಮ ತಂದಿದೆ. ‘ನಿಮ್ಮೊಂದಿಗೆ ನಾನೂ ಇದ್ದೇನೆ ಎನ್ನುವುದೇ ಖುಷಿ. ಇಬ್ಬರಿಗೂ ಧನ್ಯವಾದಗಳು ಎಂದು ರಾಜಮೌಳಿ ಅವರು ಫೋಟೋ ಜೊತೆ ಬರೆದುಕೊಂಡಿದ್ದಾರೆ. ಆ ಕ್ಷಣವನ್ನು ಇನ್ನೂ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಭಾವನೆಯನ್ನು ಇವರು ಹಂಚಿಕೊಂಡಿದ್ದಾರೆ. ಇಂಥದ್ದೊಂದು ಅವಕಾಶ ಸಿಕ್ಕಿದ್ದು ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಎನ್ನುವ ಮಾಹಿತಿಯನ್ನೂ ರಾಜಮೌಳಿ ಹಂಚಿಕೊಂಡಿದ್ದಾರೆ.

    ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜಮೌಳಿ ಅವರು ಮತ್ತೋರ್ವ ಹೆಸರಾಂತ ನಿರ್ದೇಶಕ ಸ್ಟೀಲ್ ಬರ್ಗ್ (Steelberg) ಅವರನ್ನು ಭೇಟಿ ಮಾಡಿದ್ದರು. ದೇವರನ್ನೇ ನಾನು ನೋಡಿದೆ ಎಂದು ಅವರು ಬರೆದುಕೊಂಡಿದ್ದರು. ಒಂದೇ ವಾರದಲ್ಲಿ ಇಬ್ಬರು ಖ್ಯಾತ ನಿರ್ದೇಶಕರನ್ನು ಭೇಟಿ ಮಾಡುವ ಮೂಲಕ ರಾಜಮೌಳಿ ಡಬಲ್ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವರನ್ನು ಭೇಟಿಯಾದರಂತೆ ನಿರ್ದೇಶಕ ರಾಜಮೌಳಿ

    ದೇವರನ್ನು ಭೇಟಿಯಾದರಂತೆ ನಿರ್ದೇಶಕ ರಾಜಮೌಳಿ

    ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದು ಬೀಗುತ್ತಿರುವ ನಿರ್ದೇಶಕ ರಾಜಮೌಳಿ, ಅದೇ ಖುಷಿಯಲ್ಲೇ ಒಂದು ಪೋಸ್ಟ್ ಮಾಡಿದ್ದಾರೆ. ಕೊನೆಗೂ ನಾನು ದೇವರನ್ನು ಭೇಟಿ ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಆ ದೇವರು ಯಾರು ಎನ್ನುವುದಕ್ಕಾಗಿ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ದೇವರ ಜೊತೆ ಕೆಲ ಹೊತ್ತು ಕಳೆದು ಸಂಭ್ರಮಿಸಿದ್ದಾರೆ.

    ಅಂದಹಾಗೆ ರಾಜಮೌಳಿ ದೇವರು ಅಂತ ಕರೆದದ್ದು ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವನ್ ಸ್ಟೀಲ್ ಬರ್ಗ್ ಅವರನ್ನು. ಹಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಟೀವನ್, ರಾಜಮೌಳಿ ಅವರ ಅತ್ಯಂತ ಹೆಮ್ಮೆ ನಿರ್ದೇಶಕರಂತೆ. ಅನೇಕ ಬಾರಿ ಇವರ ಕುರಿತು ರಾಜಮೌಳಿ ಹೇಳಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಅವರ ಜೊತೆ ಕೆಲಸ ಮಾಡುವುದಾಗಿಯೂ ಈ ಹಿಂದೆ ಹೇಳಿಕೊಂಡಿದ್ದರು. ತಮ್ಮ ಆರಾಧ್ಯ ನಿರ್ದೇಶಕನನ್ನು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ರಾಜಮೌಳಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಇದೇ ಸಮಾರಂಭದಲ್ಲಿ ಸ್ಟೀವನ್ ಸ್ಟೀಲ್ ಬರ್ಗ್ ಕೂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇವರ ನಿರ್ದೇಶನದ ಫ್ಯಾಬೆಲ್ಮ್ಯಾನ್ಸ್ ಸಿನಿಮಾ ಎರಡು ಪ್ರಶಸ್ತಿಗಳನ್ನು ಪಡೆದಿದೆ. ಈ ಸಿನಿಮಾಗೆ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಸಂದಿವೆ. ಸ್ಟೀವನ್ ಜೊತೆ ಫೋಟೋ ಕೂಡ ತಗೆಸಿಕೊಂಡಿರುವ ರಾಜಮೌಳಿ, ಆ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್.ಆರ್.ಆರ್ ಸಿನಿಮಾಗೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ನಾಟು ನಾಟು ಹಾಡು, ಈ ಬಾರಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿಮಾ ಟೀಮ್ ತಮ್ಮ ಕುಟುಂಬದೊಂದಿಗೆ ಹಾಜರಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k