Tag: RRR

  • ಮಹಾಭಾರತ ಸಿನಿಮಾ ಮಾಡುವ ಕನಸಿನ ಯೋಜನೆ ಬಗ್ಗೆ ರಾಜಮೌಳಿ ಮಾಸ್ಟರ್‌ ಪ್ಲ್ಯಾನ್

    ಮಹಾಭಾರತ ಸಿನಿಮಾ ಮಾಡುವ ಕನಸಿನ ಯೋಜನೆ ಬಗ್ಗೆ ರಾಜಮೌಳಿ ಮಾಸ್ಟರ್‌ ಪ್ಲ್ಯಾನ್

    ಗಧೀರ, ಬಾಹುಬಲಿ, ಬಾಹುಬಲಿ 2, ಆರ್‌ಆರ್‌ಆರ್ (RRR) ಸಿನಿಮಾಗಳನ್ನ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ರಾಜಮೌಳಿ ಅವರು ಇದೀಗ ತಮ್ಮ ಕನಸಿನ ಯೋಜನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. RRR ನಂತರ ಮಹಾಭಾರತ (Mahabharatha) ಮಾಡುವ ಬಗ್ಗೆ ರಾಜಮೌಳಿ ರಿಯಾಕ್ಟ್ ಮಾಡಿದ್ದಾರೆ.

    ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡವರು ರಾಜಮೌಳಿ. ಒಂದು ಸಿನಿಮಾ ಮಾಡ್ತಿದ್ದಾರೆ ಅಂದರೆ ಸಾಕಷ್ಟು ವರ್ಷಗಳ ತಯಾರಿಯೊಂದಿಗೆ ರಾಜಮೌಳಿ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಕ್ಸಸ್‌ಫುಲ್ ನಿರ್ದೇಶಕನಾಗಿ ರಾಜಮೌಳಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು

    ಖ್ಯಾತ ನಿರ್ದೇಶಕ ರಾಜಮೌಳಿಗೆ ಕಾರ್ಯಕ್ರಮವೊಂದರಲ್ಲಿ ಮಹಾಭಾರತವನ್ನ ತೆರೆಯ ಮೇಲೆ ತರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಕನಸಿನ ಪ್ರಾಜೆಕ್ಟ್ ಮಹಾಭಾರತ ಕುರಿತಾಗಿ ಈ ಹಿಂದೆ ಮಾತನಾಡಿದ್ದೀರಿ, ಒಂದು ವೇಳೆ ನೀವು ಚಿತ್ರವನ್ನು ಮಾಡುವುದಾದರೆ ಎಷ್ಟು ಭಾಗಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

    ಇದಕ್ಕೆ ಉತ್ತರಿಸಿದ ರಾಜಮೌಳಿ, ಈ ಚಿತ್ರವನ್ನು ಮಾಡುವ ಮೊದಲು ದೇಶದ ಎಲ್ಲ ಆವೃತ್ತಿಗಳಲ್ಲಿ ಸಿಗುವ ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳಲು ಕನಿಷ್ಠ ಒಂದು ವರ್ಷ ಸಮಯಾವಕಾಶ ಬೇಕು. ಅದನ್ನು ಫಿಲ್ಮ್ ರೀತಿ ಮಾಡಬೇಕಾದರೆ ಕನಿಷ್ಠ 10 ಭಾಗಗಳನ್ನಾಗಿ ಮಾಡಬೇಕು. ಆದರೆ ನಿಖರವಾಗಿ ಎಷ್ಟು ಆಗುತ್ತದೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಇನ್ನು, ಈ ವಿಷಯವನ್ನು ಕೇಳಿದ್ದೆ ತಡ ಅಭಿಮಾನಿಗಳು, ರಾಜ್‌ಮೌಳಿ ನಿರ್ದೇಶನದಲ್ಲಿ ಹೇಗೆ ಮಹಾಭಾರತ ಮೂಡಿ ಬರಬಹುದೆಂದು ಎಂದು ಎದುರು ನೋಡ್ತಿದ್ದಾರೆ.

  • ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

    ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

    ಮೆರಿಕದ ಟೈಮ್ಸ್ ಮ್ಯಾಗ್‌ಜಿನ್ 2023ರ ವಿಶ್ವದ ಟಾಪ್ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ರಿಲೀಸ್ ಮಾಡಿದೆ. ಅದರಲ್ಲಿ ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ರಾಜಮೌಳಿ (Rajamouli) ಮತ್ತು ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಸೇರಿಕೊಂಡಿದ್ದಾರೆ. ಇದನ್ನೂ ಓದಿ:Saregamapa 19 Grand Finale: ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ

    ರಾಜಮೌಳಿ- ಶಾರುಖ್ ಖಾನ್ ತಮ್ಮ ಕ್ಷೇತ್ರದಲ್ಲಿ ಸಕ್ಸಸ್ ಕಂಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ RRR ಚಿತ್ರದಿಂದ ರಾಜಮೌಳಿ ಗೆದ್ದು ಬೀಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ (Times Magazine) 2023ನೇ ಸಾಲಿನ ಪ್ರಭಾವಿಗಳ ಪಟ್ಟಿಯಲ್ಲಿ ರಾಜಮೌಳಿ- ಶಾರುಖ್ ಖಾನ್ ಹೆಸರು ಇದೆ. ಇದರಿಂದ ಭಾರತ ಹೆಮ್ಮೆ ಪಡುವಂತೆ ಆಗಿದೆ.

    RRR ಸಿನಿಮಾ ರಿಲೀಸ್ ಆಗಿ ಸುಮಾರು ಒಂದು ವರ್ಷದ ಬಳಿಕ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಸಿಕ್ಕಿತು. ಈ ಮೂಲಕ ರಾಜಮೌಳಿ ಹೆಸರು ವಿಶ್ವಾದ್ಯಂತ ಹಬ್ಬಿತು. ಶಾರುಖ್ ಖಾನ್ ಅವರ ‘ಪಠಾಣ್’ (Pathaan) ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡಿತು. ಸತತ ಸೋಲು ಕಂಡಿದ್ದ ಶಾರುಖ್ ಅವರು ಈ ಚಿತ್ರದಿಂದ ಗೆದ್ದರು. ಶಾರುಖ್ ಖ್ಯಾತಿ ಹೆಚ್ಚಿತು. ಈಗ ಅವರ ಮುಂದಿನ ಚಿತ್ರ ಜವಾನ್, ಡಂಕಿ ಬಗ್ಗೆಯೂ ನಿರೀಕ್ಷೆ ಇದೆ. ಈ ಎಲ್ಲಾ ಕಾರಣದಿಂದ ಪ್ರಭಾವಿಗಳ ಸಾಲಿನಲ್ಲಿ ಅವರು ಸ್ಥಾನ ಪಡೆದಿದ್ದಾರೆ.

    ಸೋಷಿಯಲ್ ಮೀಡಿಯಾ ಖ್ಯಾತಿ, ಚಿತ್ರರಂಗಕ್ಕೆ ಅವರ ಕೊಡುಗೆ, ಅವರ ಟ್ಯಾಲೆಂಟ್, ಕಠಿಣ ಪರಿಶ್ರಮ ಮೊದಲಾದ ವಿಚಾರಗಳನ್ನು ಪರಿಗಣಿಸಲಾಗುತ್ತದೆ. ಸದ್ಯ ರಾಜಮೌಳಿ- ಶಾರುಖ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  • ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಆರ್‌ಆರ್‌ಆರ್ ಸೂಪರ್ ಸಕ್ಸಸ್ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Junior Ntr) ಕೊರಟಾಲ ಶಿವ (Kortala Shiva) ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಬಾಲಿವುಡ್ (Bollywood) ಚಿತ್ರಕ್ಕೆ ಜ್ಯೂ.ಎನ್‌ಟಿಆರ್- ಆಲಿಯಾ ಭಟ್ (Alia Bhatt) ಜೋಡಿಯಾಗಿ ಬರುತ್ತಿದ್ದಾರೆ ಎಂಬ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

    ತಾರಕ್- ಜ್ವಾನಿ ಕಪೂರ್ ಜೋಡಿಯಾಗಿ ನಟಿಸುತ್ತಿರುವ ‘ಎನ್‌ಟಿಆರ್ 30’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. RRR ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ತಾರಕ್ ಸದ್ಯ ಹೃತಿಕ್ ರೋಷನ್ (Hrithik Roshan) ಜೊತೆ ತೆರೆ ಹಂಚಿಕೊಳ್ಳಲು ಓಕೆ ಎಂದಿದ್ದಾರೆ.

    ವಾರ್ ಪಾರ್ಟ್ 1 ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡಿತ್ತು. ಈಗ ‘ವಾರ್ 2’ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ‘ವಾರ್ 2’ಗಾಗಿ (War 2) ಹೃತಿಕ್ ರೋಷನ್- ಜ್ಯೂ.ಎನ್‌ಟಿಆರ್ ಒಟ್ಟಿಗೆ ನಟಿಸುತ್ತಿದ್ದಾರೆ. ತಾರಕ್ ಜೋಡಿಯಾಲಿ ಬಾಲಿವುಡ್ ರಾಧೆ ಆಲಿಯಾ ಭಟ್ ಕಾಣಿಸಿಕೊಳ್ತಿದ್ದಾರೆ ಎಂಬ ಬಿಟೌನ್ ಗಲ್ಲಿಯಲ್ಲಿ ಹರಿದಾಡುತ್ತಿದೆ.

    RRR ಸಿನಿಮಾದಲ್ಲಿ ತಾರಕ್- ರಾಮ್ ಚರಣ್ (Ram Charan) ಜೊತೆ ಆಲಿಯಾ ಭಟ್ ನಟಿಸಿದ್ದರು. ಈ ಚಿತ್ರ ಸೂಪರ್ ಡೂಪರ್ ಸಕ್ಸಸ್ ಕಂಡಿತ್ತು. ರಾಮ್ ಚರಣ್‌ಗೆ ನಾಯಕಿಯಾಗಿ ಆಲಿಯಾ ಮಿಂಚಿದ್ದರು. ಈಗ ತಾರಕ್‌ಗೆ ಆಲಿಯಾ ನಾಯಕಿಯಾಗಲಿದ್ದಾರೆ.

  • ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ಟಾಲಿವುಡ್ (Tollywood) ಸ್ಟಾರ್ ರಾಮ್ ಚರಣ್ (Ram Charan) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜ್ಯೂನಿಯರ್ ರಾಮ್ ಚರಣ್ (Jr.ntr) ಮನೆಗೆ ಬರಲು ದಿನಗಣನೆ ಶುರುವಾಗಿದೆ. ಸದ್ಯ ಚರಣ್ ಪತ್ನಿ ಉಪಾಸನಾ (Upasana) ಬೇಬಿ ಶವರ್ (Baby Shower) ಪಾರ್ಟಿಯನ್ನ ದುಬೈನಲ್ಲಿ ಅದ್ದೂರಿಯಾಗಿ ನಡೆದಿದೆ.

    ಮದುವೆಯಾಗಿ 10 ವರ್ಷಗಳ ನಂತರ ತಾಯಿಯಾಗುತ್ತಿರುವ ಉಪಾಸನಾ ಚೊಚ್ಚಲ ಮಗು ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಸದ್ಯ RRR ಚಿತ್ರದ ಹಾಡಿಗೆ ಆಸ್ಕರ್ ಸಿಕ್ಕ ಸಂತಸದ ಬೆನ್ನಲ್ಲೇ ಪತ್ನಿಯ ಬೇಬಿ ಶವರ್ ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

    ಬೀಚ್ ಬಳಿ ಗ್ರ್ಯಾಂಡ್ ಡೆಕೋರೆಷನ್ ಮಾಡಿ, ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಿದ್ದಾರೆ. ರಾಮ್ ಚರಣ್- ಉಪಾಸನಾ ಜೊತೆ ಇಡೀ ಕುಟುಂಬದವರು ಕೂಡ‌ ಬೇಬಿ ಶವರ್‌ ಪಾಟಿಯಲ್ಲಿ ಭಾಗಿಯಾಗಿದ್ದಾರೆ. ಉಪಾಸನಾ ಸಹೋದರಿ ಅನುಷ್‌ಪಲಾ & ಸಿಂಧೂರಿ ರೆಡ್ಡಿ ಈ ಪಾರ್ಟಿಯನ್ನ ಆಯೋಜನೆ ಮಾಡಿದ್ದಾರೆ. ಸೆಲೆಬ್ರೇಷನ್ ವೀಡಿಯೋವನ್ನ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ನಡೆಗೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್

    ರಾಮ್ ಚರಣ್ RRR, ಸಕ್ಸಸ್ ನಂತರ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ಚರಣ್-ಕಿಯಾರಾ ಕಾಂಬೋದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನ ಶಂಕರ್ ನಿರ್ದೇಶನ ಮಾಡಿದ್ದಾರೆ.

  • ಆಸ್ಕರ್ ಪ್ರಶಸ್ತಿಗಾಗಿ ಖರ್ಚು ಮಾಡಿದ್ದು 80 ಕೋಟಿಯಲ್ಲ, 8 ಕೋಟಿ: ರಾಜಮೌಳಿ ಪುತ್ರನ ಹೇಳಿಕೆ

    ಆಸ್ಕರ್ ಪ್ರಶಸ್ತಿಗಾಗಿ ಖರ್ಚು ಮಾಡಿದ್ದು 80 ಕೋಟಿಯಲ್ಲ, 8 ಕೋಟಿ: ರಾಜಮೌಳಿ ಪುತ್ರನ ಹೇಳಿಕೆ

    ತೆಲುಗಿನ ಆರ್.ಆರ್.ಆರ್ (RRR) ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ (Oscar) ಪ್ರಶಸ್ತಿ ಬಂದದ್ದು ಒಂದು ಕಡೆ ಸಂಭ್ರಮವಾಗಿದ್ದರೆ ಮತ್ತೊಂದು ಕಡೆ ಈ ಪ್ರಶಸ್ತಿಗಾಗಿ ಸಿನಿಮಾ ತಂಡ ಮಾಡಿದ ಖರ್ಚಿನ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ಕೇವಲ ಒಂದು ಪ್ರಶಸ್ತಿಗಾಗಿ ರಾಜಮೌಳಿ 80 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

    ಅದರಲ್ಲೂ ತೆಲುಗಿನ ಹಿರಿಯ ನಿರ್ದೇಶಕರೊಬ್ಬರು ‘ಆಸ್ಕರ್ ಪ್ರಶಸ್ತಿಗಾಗಿ ಮಾಡಿದ ಖರ್ಚಿನಲ್ಲಿ ನಾನು ನಾಲ್ಕು ಸಿನಿಮಾ ಮಾಡುತ್ತಿದ್ದೆ’ ಎಂದು ಹೇಳಿಕೆಯನ್ನೂ ನೀಡಿದ್ದರು. ಅಲ್ಲದೇ, ಇದೇ ಸಿನಿಮಾದ ನಿರ್ಮಾಪಕ ದಾನಯ್ಯ ಕೂಡ ಅನುಮಾನ ಪಡುವ ರೀತಿಯಲ್ಲೇ ಮಾತನಾಡಿ, ಆಸ್ಕರ್ ಖರ್ಚಿನ ಭಾರವನ್ನು ಮತ್ತಷ್ಟು ಹೆಚ್ಚು ಮಾಡಿದ್ದರು. ಈ ಎಲ್ಲ ಕಾರಣದಿಂದಾಗಿಯೇ ಇಷ್ಟೊಂದು ಖರ್ಚು ಮಾಡುವುದು ಬೇಕಿತ್ತಾ? ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಇದನ್ನೂ ಓದಿ: ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ

    ಆಸ್ಕರ್ ಪ್ರಶಸ್ತಿಗಾಗಿ ಮಾಡಿದ ಖರ್ಚಿನ ಬಗ್ಗೆ ದೊಡ್ಡ ಪ್ರಮಾಣದಲ್ಲೇ ಚರ್ಚೆ ನಡೆದಿದ್ದರೂ, ಈ ಕುರಿತು ಒಂದೇ ಒಂದು ಹೇಳಿಕೆ ನೀಡಿರಲಿಲ್ಲ ರಾಜಮೌಳಿ (Rajamouli). ಹಿರಿಯ ನಿರ್ದೇಶಕರೊಬ್ಬರು ಕಾಮೆಂಟ್ ಮಾಡಿದ್ದರೂ, ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ರಾಜಮೌಳಿ ಅವರ ಪುತ್ರ ಎಸ್.ಎಸ್.ಕಾರ್ತಿಕೇನ್ (SS Karthikena) ಇದೇ ಮೊದಲ ಬಾರಿಗೆ ಖರ್ಚಿನ ಕುರಿತು ಮಾತನಾಡಿದ್ದಾರೆ. ಸುದ್ದಿಯಾದಷ್ಟು ನಾವು ಖರ್ಚು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

    ‘ಆಸ್ಕರ್ ಪ್ರಶಸ್ತಿಗಾಗಿ ಒಂದಷ್ಟು ಖರ್ಚು ಮಾಡಲೇಬೇಕಿತ್ತು. ಪ್ರಚಾರ, ಸಿನಿಮಾ ಸ್ಕ್ರೀನ್ ಅಂತೆಲ್ಲ ಇರುತ್ತದೆ.  ಹಾಗಾಗಿ ನಾವು ಅಂದುಕೊಂಡಿದ್ದು 5 ಕೋಟಿ ಖರ್ಚಾಗುತ್ತದೆ ಎಂದು. ಆದರೆ, ಹೆಚ್ಚುವರಿಯಾಗಿ 3.5 ಕೋಟಿ ಖರ್ಚಾಗಿದೆ. ಎಂಟೂವರೆ ಕೋಟಿಯನ್ನು ಆಸ್ಕರ್ ‍ಪ್ರಶಸ್ತಿಯ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದೆ. ಅದಕ್ಕಿಂತ ಚಿತ್ರರಂಗದ ದಿಗ್ಗಜರು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೆಚ್ಚಿದ್ದಾರೆ. ಅದನ್ನು ಯಾವತ್ತೂ ದುಡ್ಡಿನಿಂದ ಖರೀದಿಸಲು ಆಗಲ್ಲ’ ಎಂದಿದ್ದಾರೆ ರಾಜಮೌಳಿ ಪುತ್ರ.

  • `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    `ನಾಟು ನಾಟು’ ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ: ಅಜಯ್ ದೇವಗನ್

    ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾದ `ನಾಟು ನಾಟು’ (Naatu Naatu Song)  ಹಾಡಿಗೆ ಆಸ್ಕರ್ ಬಂದಿರೋದು ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ನಾಟು ನಾಟು ಸಾಂಗ್ ಆಸ್ಕರ್ ಗೆದ್ದಿರೋದ್ದಕ್ಕೆ ಇಡೀ ತಂಡದ ಶ್ರಮವಿದೆ. ಹೀಗಿರುವಾಗ ಹಿಂದಿ ನಟ ಅಜಯ್ ದೇವಗನ್ ಅವರು ʻನಾಟು ನಾಟು ಆಸ್ಕರ್ ಗೆದ್ದಿದ್ದಕ್ಕೆ ನಾನೇ ಕಾರಣʼ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಟ್ರೈಲರ್ ರಿಲೀಸ್

    ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ನಟಿಸಿ, ನಿರ್ದೇಶಿಸಿರುವ `ಭೋಲಾ’ (Bhola) ಸಿನಿಮಾ ಮಾರ್ಚ್ 30ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸದ್ಯ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಾಟು ನಾಟು ಹಾಡಿನ ಬಗ್ಗೆ ಅಜಯ್ ದೇವಗನ್ ತಮಾಷೆ ಮಾಡಿದ್ದಾರೆ.

    `ನಾಟು ನಾಟು’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಚಿತ್ರದ ಸಂಗೀತವೂ ಕಮಾಲ್ ಮಾಡಿದೆ. ಒಟ್ಟಾರೆ ಹಾಡಿನಲ್ಲಿರುವ ಪ್ರತಿ ವಿಚಾರವೂ ಆಸ್ಕರ್ ಗೆಲ್ಲೋಕೆ ಸಹಕಾರಿ ಆಗಿದೆ. ಈಗ ಅಜಯ್ ದೇವಗನ್ ಈ ವಿಚಾರದಲ್ಲಿ ಜೋಕ್ ಮಾಡಿದ್ದಾರೆ. ನಾಟು ನಾಟು’ ಆಸ್ಕರ್ ಗೆಲ್ಲೋಕೆ ನಾನೇ ಕಾರಣ, ಏಕೆಂದರೆ ನಾನು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿಲ್ಲವಲ್ಲ ಎಂದಿದ್ದಾರೆ. ಈ ಮೂಲಕ ತಮಗೆ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದಿದ್ದಾರೆ.

    ಇದೀಗ ಅಜಯ್ ದೇವಗನ್ ಅವರ ಜೋಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಮೊದಲ ಬಾರಿಗೆ ಅವರು ನಗೋದನ್ನ ನೋಡಿದೆವು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

  • NTR 30: ಜ್ಯೂ.ಎನ್‌ಟಿಆರ್‌ – ಜಾನ್ವಿ ಕಪೂರ್ ಚಿತ್ರಕ್ಕೆ ಅಧಿಕೃತ ಚಾಲನೆ

    NTR 30: ಜ್ಯೂ.ಎನ್‌ಟಿಆರ್‌ – ಜಾನ್ವಿ ಕಪೂರ್ ಚಿತ್ರಕ್ಕೆ ಅಧಿಕೃತ ಚಾಲನೆ

    ಜ್ಯೂ.ಎನ್‌ಟಿಆರ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. RRR ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದ ತಾರಕ್ ಇದೀಗ ತಮ್ಮ ಮುಂದಿನ ಚಿತ್ರದ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಜ್ಯೂ.ಎನ್‌ಟಿಆರ್ (Jr.Ntr) ಸಿನಿಮಾ ಕಾರ್ಯಕ್ರಮಕ್ಕೆ ರಾಜಮೌಳಿ (Rajamouli)  ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

     

    View this post on Instagram

     

    A post shared by Yuvasudha Arts (@yuvasudhaarts)

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ಅನ್ನ 1 ವರ್ಷದಿಂದ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗೆ ಗೋಲ್ಡನ್ ಗ್ಲೋಬ್, ಆಸ್ಕರ್ ಅವಾರ್ಡ್ ಚಿತ್ರತಂಡ ಗೆದ್ದಿರೋದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತೂ ಇಂತೂ ಅಭಿಮಾನಿಗಳು ಕಾಯುತ್ತಿದ್ದ NTR 30 ಸಿನಿಮಾಗೆ ಚಾಲನೆ ಸಿಕ್ಕಿದೆ.

     

    View this post on Instagram

     

    A post shared by Yuvasudha Arts (@yuvasudhaarts)

    ತಾರಕ್ ನಟನೆಯ NTR 30 ಸಿನಿಮಾಗೆ ಗುರುವಾರದಂದು ಚಾಲನೆ ಸಿಕ್ಕಿದೆ. ಹೈದರಾಬಾದ್‌ನಲ್ಲಿ ಸಿನಿಮಾ ಪೂಜೆ ಕಾರ್ಯಕ್ರಮ ಜರುಗಿದೆ. ರಾಜಮೌಳಿ ಅವರು ಸಿನಿಮಾ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

     

    View this post on Instagram

     

    A post shared by Yuvasudha Arts (@yuvasudhaarts)

    ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾರಕ್ ಜೊತೆ ಜಾನ್ವಿ, ರಾಜಮೌಳಿ, ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಈ ಸಿನಿಮಾದ ನಂತರ ಪ್ರಶಾಂತ್‌ ನೀಲ್‌ ಜೊತೆಗೆ ತಾರಕ್‌ ಹೊಸ ಸಿನಿಮಾ ಶುರುವಾಗಲಿದೆ.

  • ‘ನಾಟು ನಾಟು’ ಹಾಡಿಗೆ ಸಾವಿರಾರು ಟೆಸ್ಲಾ ಕಾರು ಡಾನ್ಸ್

    ‘ನಾಟು ನಾಟು’ ಹಾಡಿಗೆ ಸಾವಿರಾರು ಟೆಸ್ಲಾ ಕಾರು ಡಾನ್ಸ್

    ವಿಶ್ವದ ಪ್ರತಿಷ್ಠಿತ ಕಾರು ಕಂಪೆನಿ ಟೆಸ್ಲಾ (Tesla Car) ‘ನಾಟು ನಾಟು’ (Natu Natu) ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ (Dance)ಮಾಡಿಸಿದೆ. ನಾಟು ನಾಟು ಹಾಡಿಗೆ ಕಾರುಗಳ ಲೈಟ್‍ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಸಾವಿರಾರು ಕಾರುಗಳನ್ನು ಸಾಲು ಸಾಲಾಗಿ ನಿಲ್ಲಿಸಿ, ನಾಟು ನಾಟು ಹಾಡನ್ನು ಪ್ಲೇ ಮಾಡಲಾಗುತ್ತದೆ. ಕಾರಿನ ವಿಶೇಷ ಲೈಟ್‍ ಗಳು ಮ್ಯೂಸಿಕ್ ಗೆ ತಕ್ಕಂತೆ ಆಫ್ ಮತ್ತು ಆನ್ ಆಗುತ್ತವೆ. ಅದೊಂದು ರೀತಿಯಲ್ಲಿ ನೋಡುವುದಕ್ಕೆ ಹಬ್ಬದಂತೆ ಕಾಣುತ್ತದೆ. ಮ್ಯೂಸಿಕ್  ತಾಳಕ್ಕೆ ಸಖತ್ತಾಗಿಯೇ ಕಾರುಗಳು ಡಾನ್ಸ್ ಮಾಡುತ್ತವೆ.

    ಈ ವಿಡಿಯೋವನ್ನು ಆರ್.ಆರ್.ಆರ್ ಟ್ವಿಟ್ಟರ್ ಖಾತೆಯಿಂದ ಶೇರ್ ಮಾಡಲಾಗಿದ್ದು, ಟೆಸ್ಲಾ ಕಂಪೆನಿಯ ಒಡೆಯ ಎಲನ್ ಮಸ್ಕ್ ಈ ವಿಡಿಯೋವನ್ನು ಮೆಚ್ಚಿದ್ದಾರೆ. ಹಾರ್ಟ್ ಸಿಂಬಲ್ ಹಾಕಿದ್ದಾರೆ. ಅಲ್ಲದೇ, ನಾಟು ನಾಟು ಹಾಡಿನ ಬಗ್ಗೆಯೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದು ಆಸ್ಕರ್ ಪ್ರಶಸ್ತಿಗಾಗಿ ನೀಡಿದ ಗೌರವ ಎಂದು ಹೇಳಿಕೊಂಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಆರ್.ಆರ್.ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ಟೆಸ್ಲಾ ಕಂಪೆನಿ ಸಖತ್ ಐಡ್ಯಾ ಮಾಡಿದೆ. ಕುಣಿಯುವ ಲೈಟ್ ಮೂಲಕ ಗೌರವವನ್ನು ಸೂಚಿಸಿದೆ. ಈ ವಿಡಿಯೋಗೆ ಭಾರೀ ಲೈಕ್ಸ್ ಮತ್ತು ಕಾಮೆಂಟ್ ಕೂಡ ಬರುತ್ತಿವೆ.

  • ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    `RRR’ ಸಿನಿಮಾ ರಿಲೀಸ್ ಆದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಚಿತ್ರದ ʻನಾಟು ನಾಟುʼ ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ (Ram Charan) ಭಾರತಕ್ಕೆ ಮರಳಿದ್ದಾರೆ.

    ಶುಕ್ರವಾರ ತವರಿಗೆ ಮರಳಿದ ಬಳಿಕ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಪಾತ್ರದ ಬಗ್ಗೆ ಕೇಳಿದಾಗ ವಿರಾಟ್‌ ಕೊಹ್ಲಿ (Virat Kohli) ಬಯೋಪಿಕ್‌ನಲ್ಲಿ ನಟಿಸುವಾಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    ಮೊದಲಿಗೆ ನಿಮ್ಮ ನೆಚ್ಚಿನ ಪಾತ್ರ ಯಾವುದು ಎಂದು ಕೇಳಿದಾಗ ಚರಣ್‌, ಕ್ರೀಡೆ ಆಧಾರಿತ ಸಿನಿಮಾದಲ್ಲಿ ಅಭಿನಯಿಸಲು ಇಷ್ಟಪಡುತ್ತೇನೆ. ಅದರಲ್ಲೂ ಕ್ರಿಕೆಟಿಗನಾಗಿ ನಟಿಸಲು ಬಯಸುತ್ತೇನೆ ಎಂದಿದ್ದಾರೆ. ಈ ನಡುವೆ ಟೀಂ ಇಂಡಿಯಾ (Team India) ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಬಯೋಪಿಕ್‌ನಲ್ಲಿ ಏಕೆ ನಟಿಸಬಾರದು? ಎಂದು ಪ್ರಶ್ನಿಸಿದ್ದಕ್ಕೆ, ನಿಜಕ್ಕೂ ಅವರು ಸ್ಫೂರ್ತಿದಾಯಕ. ಒಂದೇ ಒಂದು ಅವಕಾಶ ನೀಡಿದ್ರೂ ಅದ್ಭುತವಾಗಿರುತ್ತೆ. ನಾನೂ ಅದೇ ರೀತಿ ಕಾಣಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್‌ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್‌ ಬುಕ್‌ ಮಾಡೋದು ಹೇಗೆ..?

    ಶುಕ್ರವಾರ  ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಆರಂಭದ ವೇಳೆ ವಿರಾಟ್‌ ಕೊಹ್ಲಿ ಮೈದಾನದಲ್ಲೇ ನಾಟು-ನಾಟು ಹಾಡಿಗೆ ಸ್ಟೆಪ್‌ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು.

  • ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್

    ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್

    `ಆರ್‌ಆರ್‌ಆರ್’ ಸಿನಿಮಾ ರಿಲೀಸ್ ಆದ ದಿನದಿಂದ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಆಸ್ಕರ್ ವೇದಿಕೆಯಲ್ಲಿ ಇಂಡಿಯನ್ ಸಿನಿಮಾ RRR ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ (Oscars 2023) ಗೆದ್ದು ಬೀಗಿದೆ. ಇದೀಗ ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ (Ram Charan) ನೋಡಲು ದೆಹಲಿ ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ.

    ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. `ನಾಟು ನಾಟು’ ಹಾಡಿಗೆ ಓರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಗಿಟ್ಟಿಸಿಕೊಂಡಿತ್ತು. ಚಿತ್ರದಲ್ಲಿ `ನಾಟು ನಾಟು’ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇಬ್ಬರ ಸ್ಟಾರ್ಸ್‌ ಡ್ಯಾನ್ಸ್‌ಗೆ ಸಿನಿಪ್ರಿಯರು ಬೋಲ್ಡ್ ಆಗಿದ್ದರು. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ

    ಆಸ್ಕರ್ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಕಾದು ನಿಂತಿದ್ದರು. ಅಪಾರ ಸಂಖ್ಯೆಯ ಜನ ರಾಮ್ ಚರಣ್ ಕಾರನ್ನು ಸುತ್ತುವರೆದರು. ರಾಮ್ ಚರಣ್ ಎಂದು ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಾಮ್ ಚರಣ್ ಎಲ್ಲರತ್ತ ಕೈ ಬೀಸಿ ಕಾರಿನಲ್ಲಿ ಸಾಗಿದರು. ಚರಣ್ ಎಂಟ್ರಿ ಕೊಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಪತ್ನಿ ಉಪಾಸನಾ (Upasana) ಇಬ್ಬರೂ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಮುದ್ದು ನಾಯಿ ಕೂಡ ಇರುವುದು ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಈ ವೇಳೆ ರಾಮ್ ಚರಣ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಸುತ್ತುವರೆದ ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದೇ ಪೊಲೀಸ್‌ರಿಗೆ ಹರಸಾಹಸ ಪಡುವಂತೆ ಆಗಿದೆ.