Tag: RRR

  • RRR ಟ್ರೇಲರ್ ಔಟ್ – ರಾಮ್ ಚರಣ್, ಜ್ಯೂ. ಎನ್‍ಟಿಆರ್ ಆ್ಯಕ್ಷನ್‍ಗೆ ಫ್ಯಾನ್ಸ್ ಫಿದಾ

    RRR ಟ್ರೇಲರ್ ಔಟ್ – ರಾಮ್ ಚರಣ್, ಜ್ಯೂ. ಎನ್‍ಟಿಆರ್ ಆ್ಯಕ್ಷನ್‍ಗೆ ಫ್ಯಾನ್ಸ್ ಫಿದಾ

    ಹೈದರಾಬಾದ್: ಟಾಲಿವುಡ್ ನಟ ಜೂನಿಯರ್ ಎನ್‍ಟಿಆರ್ ಹಾಗೂ ನಟ ರಾಮ್ ಚರಣ್ ತೇಜ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ.

    ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್‌ಆರ್‌ಆರ್‌ ಸಿನಿಮಾ ಗ್ರ್ಯಾಂಡ್ ಆಗಿ ಸ್ಕ್ರೀನ್ ಮೇಲೆ ಎಂಟ್ರಿ ಕೊಡಲು ಇನ್ನೂ ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಈ ಮಧ್ಯೆ ಚಿತ್ರತಂಡ ಇಂದು ಆರ್‌ಆರ್‌ಆರ್‌ ಸಿನಿಮಾದ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಮತ್ತಷ್ಟು ಕೂತುಹಲ ಕೆರಳಿಸಿದೆ. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್

    ಇಂದು ಬೆಳಗ್ಗೆ 11 ಗಂಟೆಗೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಆರ್‌ಆರ್‌ಆರ್‌ ಟ್ರೇಲರ್ ರಿಲೀಸ್ ಆಗಿದ್ದು, ಮೂರು ನಿಮಿಷವಿರುವ ಈ ಟ್ರೇಲರ್‌ನಲ್ಲಿ ಭರ್ಜರಿ ಸ್ಟಂಟ್ ಸೀಕ್ವೆನ್ಸ್‌ಗಳಿದ್ದು, ನೋಡಲು ಸಖತ್ ಆ್ಯಟ್ರಾಕ್ಟಿವ್ ಆಗಿ ದೃಶ್ಯಗಳು ಮೂಡಿಬಂದಿದೆ.

    RRR

    ಆರ್‌ಆರ್‌ಆರ್‌ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀನಾಧರಿತ ಭಾವನಾತ್ಮಕ ಕಥೆಯಾಗಿದ್ದು, ಟ್ರೇಲರ್‌ನಲ್ಲಿ ಜೂನಿಯರ್ ಎನ್‍ಟಿಆರ್‌ರನ್ನು ಕೊಮರಂ ಭೀಮ್ ಆಗಿ ತಳ ಮಟ್ಟದ ಸಮುದಾಯದ ಜನರನ್ನು ರಕ್ಷಕರಾಗಿ ಕಾಣಿಸಿಕೊಂಡಿದ್ದರೆ, ಭೀಮನಿಗೆ ಪಾಠ ಕಲಿಸಲು ಬ್ರಿಟಿಷ್ ಅಧಿಕಾರಿಯಾಗಿ ರಾಮ್ ಚರಣ್ ತೇಜ ಅವರು ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಇಬ್ಬರು ಸ್ನೇಹಿತರಾಗಿ ಕೊನೆಗೆ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

    ಟ್ರೇಲರ್‌ನಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಸರನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಸಮುದ್ರಕನಿ ಕಾಣಿಸಿಕೊಂಡಿದ್ದು, ಆರ್‌ಆರ್‌ಆರ್‌ ಸಿನಿಮಾ ಇದೇ 2022ರ ಜನವರಿ 7 ರಂದು ಬಹುಭಾಷೆಗಳಲ್ಲಿ ವಿಶ್ವದ್ಯಾಂತ 1,000 ಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ತೆರೆಕಾಣಲಿದೆ. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

     

    View this post on Instagram

     

    A post shared by Jr NTR (@jrntr)

    ಈ ಮುನ್ನ ಡಿಸೆಂಬರ್ 3 ರಂದು ಆರ್‌ಆರ್‌ಆರ್‌ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲು ನಿರ್ಮಾಪಕರು ಯೋಜಿಸಿದ್ದರು. ಆದರೆ ಕಾರಣಾಂತರಗಳಿಂದ ನಿರ್ಮಾಪಕರು ಡಿಸೆಂಬರ್ 9 ಕ್ಕೆ ಟ್ರೇಲರ್ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದರು. ಆರ್‌ಆರ್‌ಆರ್‌ ಸಿನಿಮಾ ಡಿವಿವಿ ದಾನಯ್ಯ ಅವರ ಪ್ರೊಡಕ್ಷನ್ ಹೌಸ್ ಡಿವಿವಿ ಎಂಟರ್​​ಟೈನ್ಮೆಂಟ್ ಅಡಿಯಲ್ಲಿ ಬಿಗ್ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಾಗಿದ್ದು, 450 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ತಯಾರಾಗಿದೆ ಎನ್ನಲಾಗುತ್ತದೆ.

     

  • ಬೆಂಗಳೂರಿನಲ್ಲಿ RRR ಸಿನಿಮಾದ ಹಾಡು ಲಾಂಚ್ – ಕನ್ನಡದಲ್ಲಿ ರಾಜಮೌಳಿ ಮಾತು

    ಬೆಂಗಳೂರಿನಲ್ಲಿ RRR ಸಿನಿಮಾದ ಹಾಡು ಲಾಂಚ್ – ಕನ್ನಡದಲ್ಲಿ ರಾಜಮೌಳಿ ಮಾತು

    ಬೆಂಗಳೂರು: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಹುನಿರೀಕ್ಷಿತ  ಆರ್‌ಆರ್‌ಆರ್‌ (RRR) ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಮಾಲ್‍ನಲ್ಲಿ ನಡೆಯುತ್ತಿದೆ. ಸಿನಿಮಾ ನಿರ್ದೇಶಕ ರಾಜಮೌಳಿ ಅವರು ಸಿನಿಮಾ ಕುರಿತಾಗಿ ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಸಾಂಗ್ ಲಾಂಚ್‍ಗೆ RRR ನಿರ್ದೇಶಕ ರಾಜಮೌಳಿ ಹಾಗೂ ಪತ್ನಿ ರಮಾ ರಾಜಮೌಳಿ ಕೂಡ ಭಾಗಿಯಾಗಿದ್ದಾರೆ. ಜನವರಿ 7ಕ್ಕೆ ಖಖಖ ಸಿನಿಮಾ ರಿಲೀಸ್ ಆಗುತ್ತಿದೆ. ಲಹರಿ ಸಂಸ್ಥೆಯ ವೇಲು ಸೇರಿದಂತೆ ಕೆಲ ವಿತರಕರು ಹಾಗೂ ನಿರ್ಮಾಪಕರು ಭಾಗಿಯಾಗಿದ್ದಾರೆ.

    ಈ ವೇಳೆ ಮಾತನಾಡಿದ ರಾಜಮೌಳಿ ಕನ್ನಡದಲ್ಲಿ ಮಾತು ಶುರು ಮಾಡಿದರು. ಎಲ್ಲರೂ ಚೆನ್ನಾಗಿದ್ದೀರಾ? ಎರಡು ವಿಷಯದಲ್ಲಿ ಕ್ಷಮಿಸಬೇಕು. ಒಂದು ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲ, ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಾನೇ ಬಂದು ಮಾತನಾಡುತ್ತಿದ್ದೇನೆ. ಕರ್ನಾಟಕದಲ್ಲಿ ಮುಂದಿನ ತಿಂಗಳು ಗ್ರ್ಯಾಂಡ್ ಆಗಿ ಟ್ರೇಲರ್ ರಿಲೀಸ್ ಮಾಡಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ ಎಂದರು.

    ಕಂಪ್ಲೀಟ್ ಟೀಮ್ ಜೊತೆಗೆ ಮುಂದಿನ ತಿಂಗಳು ಕರ್ನಾಟಕಕ್ಕೆ ಬರುತ್ತೇವೆ. ಆರ್‌ಆರ್‌ಆರ್‌ ಸಿನಿಮಾದಲ್ಲಿ ಎಲ್ಲಾ ಆ್ಯಕ್ಷನ್‍ಗಳು ಸೂಪರ್ ಆಗಿದೆ. ಎಮೋಷನಲ್ ದೃಶ್ಯಗಳು ತುಂಬಾ ಇದೆ. ಬ್ಯಾಂಗ್ ಗ್ರೌಂಡ್ ಮ್ಯೂಸಿಕ್ ಸಹ ಚೆನ್ನಾಗಿದೆ. ಇವತ್ತು ನಿಮ್ಮ ಜೊತೆ ಅನುಭವ ಶೇರ್ ಮಾಡಿದಕ್ಕೆ ಖುಷಿಯಾಗುತ್ತಿದೆ ಎಂದು ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾಂಗ್ ಲಾಂಚ್ ಬಳಿಕ ರಾಜಮೌಳಿ ಅವರು ಅಪ್ಪು ಮನೆಗೆ ತೆರಳಲಿದ್ದಾರೆ.

    ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ಸಂಸ್ಥೆ ಭಾರೀ ಮೊತ್ತ ನೀಡಿ ಖರೀದಿಸಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್‌ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು. ಇದೀಗ ಆರ್‌ಆರ್‌ಆರ್‌ ಬಾಹುಬಲಿ ದಾಖಲೆಯನ್ನೂ ಮುರಿದಿದೆ ಎನ್ನಲಾಗುತ್ತಿದೆ.

    ಬರೋಬ್ಬರಿ 350 ಕೋಟಿ ರೂಪಾಯಿಗೂ ಅಧಿಕ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಆರ್‌ಆರ್‌ಆರ್‌, ಒಂದು ಐತಿಹಾಸಿಕ ಸಿನಿಮಾ. ಬ್ರಿಟಿಷರು ಹಾಗೂ ಹೈದರಾಬಾದ್ ನಿಜಾಮರ ವಿರುದ್ಧ ಹೋರಾಡಿದ ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಮ್ ಭೀಮ್ ಎಂಬ ಇಬ್ಬರು ಧೀರ ಸ್ವಾತಂತ್ರ್ರ್ಯ ಸೇನಾನಿಗಳ ಜೀವನಾಧಾರಿತ ಚಿತ್ರ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‍ಚರಣ್ ತೇಜ ಹಾಗೂ ಕೊಮರಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ನಟಿಸುತ್ತಿದ್ದು, ಬಾಲಿವುಡ್ ಆ್ಯಕ್ಷನ್ ಕಿಂಗ್ ಅಜಯ್ ದೇವ್ಗನ್, ನಟಿ ಆಲಿಯಾ ಭಟ್, ಸಮುತಿರಕಣಿ, ಶ್ರಿಯಾ ಸರಣ್, ಛತ್ರಪತಿ ಶೇಖರ್, ರಾಜೀವ್ ಕನಕಲ ಜೊತೆಗೆ ಆಲಿಸನ್ ಡೂಡಿ, ರೇ ಸ್ಟೀವನ್ಸನ್ ಸೇರಿದಂತೆ ಹಲವು ಹಾಲಿವುಡ್ ಕಲಾವಿದರೂ ಆರ್‌ಆರ್‌ಆರ್‌ ಚಿತ್ರದಲ್ಲಿ ನಟಿಸಿದ್ದಾರೆ.

  • KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    ಭಾರತೀಯ ಚಿತ್ರರಂಗ ಕಂಡ ಯಶಸ್ವಿ ಹಾಗೂ ಜನಪ್ರಿಯ ನಿರ್ದೇಶಕರಲ್ಲಿ ಎಸ್.ಎಸ್. ರಾಜಮೌಳಿ ಕೂಡ ಒಬ್ಬರು. ದಕ್ಷಿಣ ಭಾರತ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿರುವ ರಾಜಮೌಳಿ ಬಾಹುಬಲಿ ಸಿನಿಮಾ ಮೂಲಕ ಪ್ರಖ್ಯಾತಿಗಳಿಸಿಕೊಂಡಿದ್ದಾರೆ. ಬಾಹುಬಲಿ ನಂತರ ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವಾಗಲೇ ದಿಗ್ಗಜ ನಟರನ್ನು ಒಂದೆಡೆ ಸೇರಿಸಿ ‘RRR’ ಸಿನಿಮಾ ಮೂಲಕ ಮತ್ತೊಮ್ಮೆ ಘರ್ಜಿಸಲು ಶುರು ಮಾಡಿದವರು ರಾಜಮೌಳಿ.

    RRR ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಜನವರಿ 7ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲು ಸಜ್ಜಾಗಿರುವ ಈ ಚಿತ್ರತಂಡದಿಂದ ಸಖತ್ ಸುದ್ದಿಯೊಂದು ಹೊರಬಿದ್ದಿದೆ. ಪಂಚ ಭಾಷೆಯಲ್ಲಿ ತೆರೆ ಮೇಲೆ ಅಬ್ಬರಿಸಲಿರುವ ಈ ಚಿತ್ರದ ಕರ್ನಾಟಕದ ವಿತರಣೆ ಹಕ್ಕು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿದೆ. ಈ ಸಂತಸದ ಸುದ್ದಿಯನ್ನು ಕೆವಿಎನ್ ಪ್ರೊಡಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ.

    ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಖ್ಯಾತಿ ಗಳಿಸಿದೆ. ಸದ್ಯ ಸಖತ್, ಬೈಟು ಲವ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ. ಇದರ ಜೊತೆಗೆ ‘RRR’ ಚಿತ್ರದ ಕರ್ನಾಟಕದ ಹಂಚಿಕೆ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿರುವುದು ಹೆಮ್ಮೆಯ ಸಂಗತಿ.

    ದಕ್ಷಿಣ ಭಾರತ ಹಾಗೂ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಭರವಸೆ ಹುಟ್ಟು ಹಾಕಿರುವ ಸಿನಿಮಾ ‘RRR’. ರಾಮ್ ಚರಣ್, ಜ್ಯೂನಿಯರ್ ಎನ್​ಟಿಆರ್ ನಾಯಕ ನಟರಾಗಿ ತೆರೆ ಮೇಲೆ ಅಬ್ಬರಿಸಲಿರುವ ಈ ಸಿನಿಮಾದಲ್ಲಿ ಬಾಹುಬಲಿ ಮಾಂತ್ರಿಕ ಮತ್ತೇನು ಮ್ಯಾಜಿಕ್ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೂ ಸಜ್ಜಾಗಿ ನಿಂತಿರುವ ಚಿತ್ರತಂಡ ಸಿನಿಮಾದ ಒಂದೊಂದೇ ಝಲಕ್ ಬಿಡುಗಡೆ ಮಾಡಿ ಸೋಶಿಯಲ್ ಮೀಡಿಯಾದಲ್ಲೂ ಧೂಳ್ ಎಬ್ಬಿಸುತ್ತಿದೆ. ದಿನದಿಂದ ದಿನಕ್ಕೆ ಸಖತ್ ಕ್ರೇಜ್ ಕ್ರಿಯೇಟ್ ಮಾಡ್ತಿರುವ RRR ಜನವರಿ 7 ರಂದು ತೆರೆಗೆ ಬರ್ತಿದೆ.

  • RRR ಚಿತ್ರದ ಸೆಟ್‍ನಲ್ಲಿ ಹೀರೋಗೂ ಇದೆ ಐಡಿ ಕಾರ್ಡ್

    RRR ಚಿತ್ರದ ಸೆಟ್‍ನಲ್ಲಿ ಹೀರೋಗೂ ಇದೆ ಐಡಿ ಕಾರ್ಡ್

    ಹೈದ್ರಾಬಾದ್: ತೆಲುಗಿನ ಜನಪ್ರಿಯ ನಟ, ಆರ್​ಆರ್​ಆರ್ ಚಿತ್ರದ ನಾಯಕರಲ್ಲೊಬ್ಬರಾದ ಜೂನಿಯರ್ ಎನ್‍ಟಿಆರ್ ಅವರಿಗೆ ಶೂಟಿಂಗ್ ಸೆಟ್‍ನಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್ಅನ್ನು ನೀಡಲಾಗಿದೆ.

    ಜೂನಿಯರ್ ಎನ್‍ಟಿಆರ್ ಐಡಿ ಕಾರ್ಡ್ ಅನ್ನು ಧರಿಸಿ, ಫೋಟೊಗೆ ಪೋಸ್ ನೀಡಿದ್ದಾರೆ. ಎಲ್ಲರನ್ನೂ ಸೆಳೆದಿರುವುದು ಅವರ ಹಿಂದೆ ಕುಳಿತಿರುವ ರಾಜಮೌಳಿ ಅವರ ಭಂಗಿ. ನನಗೂ ಐಡಿ ಕಾರ್ಡ್ ಇದೆ ಎಂಬ ಭಾವದಲ್ಲಿ ತಮ್ಮ ಐಡಿ ಕಾರ್ಡ್‍ಅನ್ನೂ ರಾಜಮೌಳಿ ಎತ್ತಿ ತೋರಿಸುತ್ತಿದ್ದಾರೆ. ಜೂ.ಎನ್‍ಟಿಆರ್ ಹಂಚಿಕೊಂಡಿರುವ ಮತ್ತೊಂದು ಫೋಟೋದಲ್ಲಿ ತಮ್ಮ ಐಡಿ ಕಾರ್ಡ್‍ನ ಕ್ಲೋಸ್ ಅಪ್ ಫೋಟೋವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Jr NTR (@jrntr)

    ಇತ್ತೀಚೆಗೆ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ. ಅದರಲ್ಲೂ ಚಿತ್ರೀಕರಣದ ಸೆಟ್‍ಗಳಲ್ಲಿ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ, ಇದೇ ಮೊದಲ ಬಾರಿಯಾಗಿದೆ ಎಂದು ಜೂನಿಯರ್ ಎನ್‍ಟಿಆರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಜೆಟ್‍ನಲ್ಲಿ ಆರ್​ಆರ್​ಆರ್ ತಯಾರಾಗುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ಹೊಸತನ್ನು ಪರಿಚಯಿಸುತ್ತಿದೆ. ಅದಕ್ಕೆ ಜೂನಿಯರ್ ಎನ್‍ಟಿಆರ್ ಅವರಿಗೆ ಐಡಿ ಕಾರ್ಡ್ ಕೊಟ್ಟಿದ್ದನ್ನೂ ಸೇರಿಸಿಕೊಳ್ಳಬಹುದು ಬಿಡಿ ಎಂದು ಅಭಿಮಾನಿಗಳು ಹಾಸ್ಯ ಚಟಾಕಿ ಹಾರಿಸಿದ್ದಾರೆ.

     

    View this post on Instagram

     

    A post shared by SS Rajamouli (@ssrajamouli)

    ರಷ್ಯಾದ ಉಕ್ರೇನ್‍ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಉಕ್ರೇನ್‍ಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭವನ್ನೂ ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು. ಸುಮಾರು 450ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

  • ಫ್ರೆಂಡ್‍ಶಿಪ್ ಡೇಗೆ ರಾಜಮೌಳಿ ಬಿಗ್ ಗಿಫ್ಟ್ – ರಿಲೀಸ್ ಆಯ್ತು ‘RRR’ ಫಸ್ಟ್ ಸಾಂಗ್

    ಫ್ರೆಂಡ್‍ಶಿಪ್ ಡೇಗೆ ರಾಜಮೌಳಿ ಬಿಗ್ ಗಿಫ್ಟ್ – ರಿಲೀಸ್ ಆಯ್ತು ‘RRR’ ಫಸ್ಟ್ ಸಾಂಗ್

    ಹೈದರಾಬಾದ್: ಟಾಲಿವುಡ್ ನಟ ಮೆಗಾ ಪ್ರಿನ್ಸ್ ರಾಮ್‍ಚರಣ್ ತೇಜ ಹಾಗೂ ಜ್ಯೂನಿಯರ್ ಎನ್‍ಟಿಆರ್ ಒಟ್ಟಿಗೆ ಅಭಿನಯಿಸಿರುವ ಬಹುನಿರೀಕ್ಷಿತ ‘ಆರ್‌ಆರ್‌ಆರ್’ ಸಿನಿಮಾದ ಮೊದಲ ಮ್ಯೂಸಿಕ್ ವೀಡಿಯೋ ಭಾನುವಾರ ರಿಲೀಸ್ ಆಗಿದೆ.

    ನಿರ್ದೇಶಕ ರಾಜಮೌಳಿಯವರು ಭರವಸೆ ನೀಡಿದಂತೆ ‘ಆರ್‌ಆರ್‌ಆರ್’ ದೋಸ್ತಿ ಎಂಬ ಟೈಟಲ್‍ನ ಮ್ಯೂಸಿಕಲ್ ವೀಡಿಯೋವನ್ನು ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ಎಂ.ಎಂ ಕೀರವಾಣಿ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ರವಿಚಂದ್ರ, ವಿಜಯ್ ಯೇಸುದಾಸ್, ಅಮಿತ್ ತ್ರಿವೇದಿ, ಹೇಮಚಂದ್ರ ಮತ್ತು ಯಾಜಿನ್ ನಿಜಾರ್ ಹಾಡಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೇ ‘ಆರ್‌ಆರ್‌ಆರ್’ ಸಿನಿಮಾದ ನಿರ್ಮಾಪಕರು ಫ್ರೆಂಡ್‍ಶಿಪ್ ಡೇ ದಿನ ಆಗಸ್ಟ್ 1ರಂದು ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು. ಇದೀಗ ಬಿಡುಗಡೆಗೊಂಡಿರುವ ದೋಸ್ತಿ ಹಾಡಿನಲ್ಲಿ ಐವರು ಗಾಯಕರೊಂದಿಗೆ ಕೊನೆಯಲ್ಲಿ ರಾಮ್‍ಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಕೂಡ ಸೂಟ್‍ನಲ್ಲಿ ಮಿಂಚಿದ್ದಾರೆ.

    ಸದ್ಯ ಈ ಹಾಡನ್ನು ರಾಜಮೌಳಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸ್ನೇಹಿತರ ದಿನಾಚರಣೆಯಂದು ರಾಮರಾಜು ಹಾಗೂ ಭೀಮ ಎಂಬ ಇಬ್ಬರು ಪ್ರಬಲ ವ್ಯಕ್ತಿಗಳು ಎದುರಾಳಿಗಳಾಗಿ ಬರುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ರಾಮಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಇದೇ ಮೊದಲ ಬಾರಿಗೆ ‘ಆರ್‌ಆರ್‌ಆರ್’ ಸಿನಿಮಾದ ಮೂಲಕ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದಲ್ಲಿ ರಾಮ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಇದನ್ನೂ ಓದಿ:ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್

  • RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    ಬೆಂಗಳೂರು: ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ RRR ಚಿತ್ರದ ಆಡಿಯೋ ಪಡೆದುಕೊಂಡ ಒಪ್ಪಂದಕ್ಕೆ ಲಹರಿ ಸಂಸ್ಥೆ ಇಂದು ಸಹಿ ಹಾಕಿದೆ.

    ಕೆಲದಿನಗಳ ಹಿಂದೆ ಲಹರಿ ಸಂಸ್ಥೆ ಆರ್‍ಆರ್‍ಆರ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದೀಗ ಲಹರಿ ಸಂಸ್ಥೆಯು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಆರ್‍ಆರ್‍ಆರ್ ಅಗ್ರಿಮೆಂಟ್ ಗೆ ಸೈನ್ ಮಾಡಿರುವ ಅಧಿಕೃತವಾಗಿ ಪತ್ರವನ್ನು ಪಡೆಯುವ ಮೂಲಕ ಹಕ್ಕನ್ನು ಪಡೆದುಕೊಂಡಿದೆ. ಆಗಸ್ಟ್ 1ರ ಬೆಳಗ್ಗೆ 11 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

    ಲಹರಿ ಸಂಸ್ಥೆ ಹೈದರಾಬಾದ್‍ನಲ್ಲಿ ಲಿಖಿತವಾಗಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕೀರವಾಣಿ ಜೊತೆ ಸಭೆಯಲ್ಲಿ ಭಾಗಿಯಾಗಿದ್ದರು. 28 ಕೋಟಿ ರೂ.ಗೆ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ ಎಂದು ತಿಳಿದು ಬಂದಿದೆ.

    ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್‌ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು.  ಇದನ್ನೂ ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    ಈಗಾಗಲೇ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣ ಕೊನೇಯ ಹಂತ ತಲುಪಿದ್ದು, ಇದೇ ಆಗಸ್ಟ್ 1 ರಂದು ವಿಶೇಷ ಹಾಡನ್ನು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಮಧ್ಯೆಯೇ ಜುಲೈ 15ರಂದು ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲು ಸಹ ತಯಾರಿ ನಡೆದಿದೆ. ಈ ಮೇಕಿಂಗ್ ವೀಡಿಯೋ ನಿಮ್ಮನ್ನು ಆರ್‍ಆರ್‍ಆರ್ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಈ ಮೂಲಕ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದರ ಝಲಕ್ ತೋರಿಸಲಾಗುತ್ತಿದೆ.

    ಹೀಗೆ ಆರ್‌ಆರ್‌ಆರ್‌ ಸಿನಿಮಾ ಕುರಿತು ಚಿತ್ರ ತಂಡ ಬ್ಯಾಕ್ ಟು ಬ್ಯಾಕ್ ಅಪ್‍ಡೇಟ್ ನೀಡುತ್ತಿದೆ. ಅಂದಹಾಗೆ ಬಹುನಿರೀಕ್ಷಿತ ಆರ್‍ಆರ್‍ಆರ್ ಸಿನಿಮಾ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗಪ್ಪಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‍ಆರ್‍ಆರ್ ಅಪ್‍ಡೇಟ್ಸ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  • ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ಹೈದರಾಬಾದ್: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂದಿನ ಸಿನಿಮಾ ಆರ್‌ಆರ್‌ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಈ ಮಧ್ಯೆ ತಮ್ಮ ದಿನನಿತ್ಯದ ವರ್ಕೌಟ್ ಮಾತ್ರ ಮಿಸ್ ಮಾಡದೇ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಕ್ಲಿಕ್ಕಿಸಿಕೊಂಡ ಸೆಲ್ಫಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬುಧವಾರ ಬೆಳಗ್ಗೆ ಆಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡವನ್ನು ಸೇರಿದ್ದಾರೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡುವ ಮೂಲಕ ಬೆವರಿಳಿಸಿದ್ದಾರೆ.

    ಇದಕ್ಕೂ ಮುನ್ನ ಆರ್‌ಆರ್‌ಆರ್ ಸೆಟ್‍ನಲ್ಲಿ ಡ್ರೆಸ್ಸಿಂಗ್ ರೂಮ್‍ನ ಕನ್ನಡಿ ಮುಂದೆ ಕುಳಿತು ರೆಡಿಯಾಗುತ್ತಿರುವ ಫೋಟೋವನ್ನು ಆಲಿಯಾ ಭಟ್ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ರೈಸ್ ಮತ್ತು ಶೈನ್, ಬೆಳಗ್ಗೆ 6.41ಕ್ಕೆ ಎಂದು ಟೈಮ್ ಸ್ಟ್ಯಾಂಪ್‍ನಲ್ಲಿ ಹಾಕಿದ್ದಾರೆ.

    ಆರ್‌ಆರ್‌ಆರ್ ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ನಡೆದ ಕಥಾ ಹಂದರವಾಗಿದ್ದು, ಜ್ಯೂನಿಯರ್ ಎನ್‍ಟಿಆರ್ ಸ್ವಾತಂತ್ರ್ಯ ಹೋರಾಟಗಾರ ಕೋಮರಮ್ ಭೀಮ್ ಮತ್ತು ರಾಮ್‍ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ರಾಮ್ ಚರಣ್‍ಗೆ ಜೋಡಿಯಾಗಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 13ರಂದು ಆರ್‌ಆರ್‌ಆರ್ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ. ಇದನ್ನೂ ಓದಿ:ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

  • RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    ಹೈದರಾಬಾದ್: ನಿರ್ದೇಶಕ ಎಸ್.ಎಸ್.ರಾಜಮೌಳಿ ಎಂದರೆ ಸಿನಿಮಾಗಳ ಮಾಂತ್ರಿಕ, ಬಾಹುಬಲಿ ಸಿನಿಮಾ ಮೂಲಕವೇ ತಮ್ಮ ನಿರ್ದೇಶನದ ಕುರಿತು ಬೆರಗು ಮೂಡಿಸಿದ್ದಾರೆ. ಹೀಗಾಗಿ ಇವರ ಸಿನಿಮಾಗಳ ಮೇಲೆ ಇದೀಗ ಪ್ರೇಕ್ಷಕರ ನಿರೀಕ್ಷೆ ಸಹ ಅಷ್ಟೇ ಎತ್ತರಕ್ಕೆ ಏರಿದೆ. ರಾಜಮೌಳಿ ಸಹ ಅಷ್ಟೇ ಎಚ್ಚರದಿಂದ ಸಿನಿಮಾ ಮಾಡುತ್ತಿದ್ದು, ಅವರ ಮುಂದಿನ ಸಿನಿಮಾ ಆರ್‍ಆರ್‍ಆರ್ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಆರ್‍ಆರ್‍ಆರ್ ಚಿತ್ರದ ಹಾಡೊಂದನ್ನು ಅದ್ಭುತವಾಗಿ ಮಾಡುತ್ತಿದ್ದಾರೆ.

    ಆರ್‍ಆರ್‍ಆರ್ ಸಿನಿಮಾ ಈಗಾಗಲೇ ದಕ್ಷಿಣ ಚಿತ್ರ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾ ಆಗಿದೆ. ಜೂ.ಎನ್‍ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಹಲವು ದಿಗ್ಗಜ ನಟರು ಸಿನಿಮಾದ ಭಾಗವಾಗುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಮೇಕಿಂಗ್ ವಿಚಾರದಲ್ಲಿ ರಾಜಮೌಳಿ ಯಾವ ರೀತಿ ಮ್ಯಾಜಿಕ್ ಮಾಡುತ್ತಾರೆ ಎಂಬುದಕ್ಕೆ ಬಾಹುಬಲಿ ಸರಣಿ ಸಿನಿಮಾಗಳೇ ಸಾಕ್ಷಿ. ಹೀಗಾಗಿ ಆರ್‍ಆರ್‍ಆರ್ ಸಿನಿಮಾವನ್ನು ಸಹ ಅಷ್ಟೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಒಂದು ಹಾಡಿನ ಚಿತ್ರೀಕರಣಕ್ಕೆ ರಾಜಮೌಳಿ ಅವರು ಮಾಡಿರುವ ದೊಡ್ಡ ಪ್ಲಾನ್. ಇದನ್ನೂ ಓದಿ: ದಿವಂಗತ ನಟ ಎನ್‍ಟಿಆರ್‌ಗೆ ಭಾರತ ರತ್ನ ನೀಡಿ – ಮೆಗಾಸ್ಟಾರ್ ಮನವಿ

    ಹೌದು ಒಂದು ಹಾಡಿಗಾಗಿ ಬರೋಬ್ಬರಿ ಒಂದು ತಿಂಗಳು ಚಿತ್ರೀಕರಣ ನಡೆಸುತ್ತಿದ್ದಾರಂತೆ. ಒಂದು ಹಾಡು ಚಿತ್ರೀಕರಣಕ್ಕೆ ಸಾಮಾನ್ಯವಾಗಿ 1 ವಾರ ಅಥವಾ 10 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ರಾಜಮೌಳಿಯವರು ಬರೋಬ್ಬರಿ 30 ದಿನ ತೆಗೆದುಕೊಳ್ಳುತ್ತಿದ್ದಾರೆ. ಈ ಹಾಡಿನಲ್ಲಿ ದಿಗ್ಗಜ ನಟರಾದ ಜೂ.ಎನ್‍ಟಿಆರ್, ರಾಮ್‍ಚರಣ್ ಇಬ್ಬರೂ ನಟಿಸುತ್ತಿದ್ದಾರೆ. ಸಾಂಗ್ ಹೇಗೆ ಮೂಡಿಬರಲಿದೆ ಎಂಬುದು ಸದ್ಯ ಅಭಿಮಾನಿಗಳ ಕುತೂಹಲವಾಗಿದೆ. ಅಂದಹಾಗೆ ಈ ಸಿನಿಮಾವನ್ನು ದಾನಯ್ಯ ಅವರು ನಿರ್ಮಿಸುತ್ತಿದ್ದಾರೆ.

    ಶೂಟಿಂಗ್ ಬಹುತೇಕ ಕಂಪ್ಲೀಟ್
    ಇನ್ನೂ ಖುಷಿಯ ವಿಚಾರ ಎಂಬಂತೆ ಆರ್‍ಆರ್‍ಆರ್ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, 2 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಮತ್ತೊಂದು ಹಾಡಿನಲ್ಲಿ ರಾಮ್‍ಚರಣ್ ಹಾಗೂ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಎಂ.ಎಂ.ಕೀರವಾಣಿ ಆರ್‍ಆರ್‍ಆರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಅಲ್ಲದೆ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಪ್ಯಾಚಪ್ ಕೆಲಸಗಳು ಮಾತ್ರ ಬಾಕಿ ಇದ್ದು, ಕೇವಲ 10 ದಿನಗಳ ಕಾಲ ಶೂಟಿಂಗ್ ಮಾಡಬೇಕಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದು, ಲಾಕ್‍ಡೌನ್ ಓಪನ್ ಆಗುತ್ತಿದ್ದಂತೆ ಚಿತ್ರತಂಡ ಶೂಟಿಂಗ್‍ನಲ್ಲಿ ಭಾಗವಹಿಸಲಿದೆ.

    ಆರ್‍ಆರ್‍ಆರ್ ಚಿತ್ರ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಎಲ್ಲ ಭಾಷೆಗಳ ಡಿಜಿಟಲ್ ಹಾಗೂ ಸ್ಯಾಟೆಲೈಟ್ ಹಕ್ಕುಗಳನ್ನು ಜೀ5 ಮತ್ತು ನೆಟ್‍ಫ್ಲಿಕ್ಸ್ ಬರೋಬ್ಬರಿ 325 ಕೋಟಿ ರೂಪಾಯಿಗೆ ಕೊಂಡುಕೊಂಡಿವೆ. ಇನ್ನೂ ವಿಶೇಷ ಎಂಬಂತೆ ಆರ್‍ಆರ್‍ಆರ್ ಚಿತ್ರ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ. ವಿದೇಶಿ ಭಾಷೆಗಳ ಡಬ್ಬಿಂಗ್ ಹಕ್ಕನ್ನು ನೆಟ್‍ಫ್ಲಿಕ್ಸ್ ಪಡೆದುಕೊಂಡಿದೆ. ಆರ್‍ಆರ್‍ಆರ್ ಸಿನಿಮಾದ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ವರ್ಷನ್ ಜೀ5ನಲ್ಲಿ ಪ್ರೀಮಿಯರ್ ಆಗಲಿದೆ. ಹಿಂದಿ ವರ್ಷನ್ ಮಾತ್ರ ನೆಟ್‍ಫ್ಲಿಕ್ಸ್‍ನಲ್ಲಿ ಪ್ರೀಮಿಯರ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ನ್ಯೂಯಾರ್ಕ್ ನಾಸ್ಡಾಕ್ ಕಟ್ಟಡದ ಸ್ಕ್ರೀನ್ ಮೇಲೆ 3ಡಿಯಲ್ಲಿ ರಾಮ್‍ಚರಣ್!

    ನ್ಯೂಯಾರ್ಕ್ ನಾಸ್ಡಾಕ್ ಕಟ್ಟಡದ ಸ್ಕ್ರೀನ್ ಮೇಲೆ 3ಡಿಯಲ್ಲಿ ರಾಮ್‍ಚರಣ್!

    ಹೈದರಾಬಾದ್: ಟಾಲಿವುಡ್ ನಟ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ತೇಜ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಮ್‍ಚರಣ್ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಸದ್ಯ ರಾಮ್‍ಚರಣ್ ತೇಜ ಹುಟ್ಟುಹಬ್ಬದ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಶೇಷವೆಂದರೆ ನ್ಯೂಯಾರ್ಕ್‍ನ ಐಕಾನಿಕ್ ಟೈಮ್ಸ್ ಸ್ಕ್ವೇರ್‍ನ ನಾಸ್ಡಾಕ್ ಕಟ್ಟಡದ ಮೇಲೆ ರಾಮ್‍ಚರಣ್ ತೇಜರ ಫೋಟೋವನ್ನು 3ಡಿಯಲ್ಲಿ ಬಿಗ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗಿದೆ. ಇದನ್ನು ಕಂಡು ರಾಮ್‍ಚರಣ್ ತೇಜ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಕೂಡ ತಮ್ಮ ಮುಂದಿನ ಆಚಾರ್ಯ ಸಿನಿಮಾದ ಪೋಸ್ಟರ್‍ನನ್ನು ಹಂಚಿಕೊಳ್ಳುವ ಮೂಲಕ ಮಗನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಶಿವ ನಿರ್ದೇಶಿಸುತ್ತಿದ್ದು, ಪೂಜಾ ಹೆಗ್ಡೆ ರಾಮ್‍ಚರಣ್‍ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರು ಸಿನಿಮಾದ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನಟಿ ಕಾಜಲ್ ಅಗರ್‍ವಾಲ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಚಾರ್ಯ ಸಿನಿಮಾ ಮೇ 13ರಂದು ಬಿಗ್ ಸ್ಕ್ರೀನ್ ಮೇಲೆ ತೆರೆ ಬರಲಿದೆ.

    ರಾಮ್‍ಚರಣ್ ತೇಜ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಆರ್‍ಆರ್‍ಆರ್ ಚಿತ್ರತಂಡ ನಿನ್ನೆ ಪೋಸ್ಟರ್‍ನನ್ನು ರಿಲೀಸ್ ಮಾಡುವ ಮೂಲಕ ವಿಶ್ ಮಾಡಿದೆ. ಪೋಸ್ಟರ್‍ನಲ್ಲಿ ರಾಮ್‍ಚರಣ್ ತೇಜ ರಾಮನ ಅವತಾರದಲ್ಲಿ ಮಿಂಚಿದ್ದಾರೆ. ಇನ್ನೂ ಈ ಸಿನಿಮಾದ ಮತ್ತೋರ್ವ ಪ್ರಮುಖ ನಾಯಕನಾಗಿ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸಿದ್ದು, ಎಸ್‍ಎಸ್ ರಾಜಮೌಳಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಲಿವುಡ್ ಖ್ಯಾತ ನಿರ್ದೇಶಕ ಶಂಕರ್ ಅವರು ರಾಮ್ ಚರಣ್ ಅವರ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

     

    View this post on Instagram

     

    A post shared by RRR Movie (@rrrmovie)

    ಈ ಹಿಂದೆ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾ ಕಟ್ಟದ ಪರದೆ ಮೇಲೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೀಸರ್‍ನನ್ನು ಬಿಡುಗಡೆಗೊಳಿಸಲಾಗಿತ್ತು.

  • ಆಲಿಯಾ ಅಭಿಮಾನಿಗಳನ್ನ ಚಕಿತಗೊಳಿಸಿದ ರಾಜಮೌಳಿ

    ಆಲಿಯಾ ಅಭಿಮಾನಿಗಳನ್ನ ಚಕಿತಗೊಳಿಸಿದ ರಾಜಮೌಳಿ

    ಮುಂಬೈ: ಇಂದು ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಹುಟ್ಟುಹಬ್ಬ. ಇವತ್ತು ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾದಲ್ಲಿಯ ಆಲಿಯಾ ಭಟ್ ಪಾತ್ರದ ಲುಕ್ ರಿವೀಲ್ ಮಾಡುವ ಮೂಲಕ ಡಿಯರ್ ಜಿಂದಗಿ ಚೆಲುವೆಯ ಅಭಿಮಾನಿ ಬಳಗವನ್ನ ಚಕಿತಗೊಳಿಸಿದ್ದಾರೆ.

    ಸ್ಟುಡೆಂಟ್ ಆಫ್ ದಿ ಇಯರ್ ಫಿಲಂ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಹದಿಹರೆಯದ ಹುಡುಗಿ ಆಲಿಯಾ ಭಟ್. ಚಿಕ್ಕವಯಸ್ಸಿನಲ್ಲಿಯೇ ತನ್ನ ಗ್ಲಾಮರ್ ಲುಕ್, ಡ್ಯಾನ್ಸಿಂಗ್, ತುಟಿಯ ಮೇಲಿನ ಕಡುಗೆಂಪು ನಗುವಿನ ಜೊತೆಯಲ್ಲಿ ಸರಳ ನಟನೆ ಮೂಲಕ ತನ್ನದೇ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡ ಅಪ್ಸರೆ ಆಲಿಯಾ ಭಟ್. ಇನ್ನು ತಾನು ಗ್ಲಾಮರ್ ಪಾತ್ರಕ್ಕೆ ಸೀಮಿತ ಅಲ್ಲ ಅನ್ನೋದನ್ನ ಉಡ್ತಾ ಪಂಜಾಬ್ ಸಿನಿಮಾದಲ್ಲಿ ನಿರೂಪಿಸಿದ್ದರು. ಶಾಹಿದ್ ಕಪೂರ್, ಕರೀನಾ ಕಪೂರ್ ಅಂತಹ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ಆಲಿಯಾ, ತಾನು ಹೊಸಬಳು ಅನ್ನೋದು ತಿಳಿಯದಂತೆ ಸರಿಸಮಾನವಾಗಿ ಆ್ಯಕ್ಟ್ ಮಾಡೋ ಮೂಲಕ ವಿಮರ್ಶಕರ ಮೆಚ್ಚುಗೆಯನ್ನ ಅಲಿಯಾ ಪಡೆದುಕೊಂಡಿದ್ದರು.

    2018ರಲ್ಲಿ ಬಿಡುಗಡೆಗೊಂಡಿದ್ದ ‘ರಾಝಿ’ಯಲ್ಲಿ ಸೆಹಮತ್ ಖಾನ್ ಪಾತ್ರಕ್ಕೆ ಜೀವ ತುಂಬಿದ್ದ ಆಲಿಯಾ ಭಟ್, ತಂದೆಯಿಂದ ಸಿನಿಮಾಕ್ಕೆ ಬಂದ ನಟಿ ಅಂತ ಹೇಳಿದ್ದ ಟೀಕಾಕಾರರಿಗೆ ತಿರುಗೇಟು ನೀಡಿದ್ದರು. ಪಾಕಿಸ್ತಾನದಲ್ಲಿ ಭಾರತದ ಮಗಳಾಗಿ ಗೂಢಾಚಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಲಿಯಾ ಭಟ್, ತನ್ನ ನಟನೆ ಮೂಲಕ ಟೀಕಾಕಾರರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು.

    ಇದೀಗ ಟಾಲಿವುಡ್ ಪ್ರವೇಶಿಸಿರುವ ಆಲಿಯಾ ಭಟ್ ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಹಳೆಯದು. ಆದ್ರೆ ಚಿತ್ರದ ಸೂತ್ರದಾರ ರಾಜಮೌಳಿ ಮಾತ್ರ ಚೆಲುವೆ ಆಲಿಯಾ ಪಾತ್ರದ ಗುಟ್ಟು ಬಿಟ್ಟಕೊಟ್ಟಿರಲಿಲ್ಲ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆಲಿಯಾರ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ. ಭಾನುವಾರವೇ ಫಸ್ಟ್ ಲುಕ್ ರಿಲೀಸ್ ಮಾಡುವ ಕುರಿತು ಸುಳಿವು ನೀಡಿದ್ದ ರಾಜಮೌಳಿ, ಇಂದು ಬೆಳಗ್ಗೆ 11 ಗಂಟೆಗೆ ಸೀತಾ ಪಾತ್ರವನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

    ಸದೃಢ ಇಚ್ಛಾಶಕ್ತಿಯ ಎಲ್ಲ ಸಮಸ್ಯೆಗಳನ್ನ ಪರಿಹರಿಸುವ ಸೀತೆಯನ್ನ ನಾನು ಪರಿಚಯಿಸುತ್ತಿದ್ದೇವೆ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ. ಹಸಿರು ಬಣ್ಣದ ಸೀರೆ, ಮುಡಿ ತುಂಬ ಕನಕಾಂಬರ ಧರಿಸಿ ತದೇಕಚಿತ್ತದಿಂದ ಕುಳಿತು ಯೋಚನೆಯಲ್ಲಿ ಮಗ್ನಳಾಗಿರುವ ಸೀತೆಯಾಗಿ ಆಲಿಯಾ ಮಿಂಚಿದ್ದಾರೆ. ಕೇವಲ ಒಂದೇ ಒಂದು ಲುಕ್, ಸಿನಿಮಾದಲ್ಲಿ ಆಲಿಯಾ ಪಾತ್ರದ ಪ್ರಾಮುಖ್ಯತೆಯನ್ನ ಹೇಳುವಂತಿದೆ. ನಟಿಯ ಹೊಸ ಲುಕ್ ನೋಡಿದ ಅಭಿಮಾನಿಗಳು  ಥ್ರಿಲ್ ಆಗಿದ್ದು, ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ.

     

     

    View this post on Instagram

     

    A post shared by Alia Bhatt ☀️ (@aliaabhatt)