Tag: RRR

  • ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ರಡೂವರೆ ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿರುವ ಭಾರತೀಯ ಸಿನಿಮಾ ರಂಗ, ಚೇತರಿಸಿಕೊಳ್ಳಲು ಇನ್ನೂ ಹರಸಾಹಸ ಪಡುತ್ತಿದೆ. ಅಷ್ಟರಲ್ಲಿ ಚಿತ್ರರಂಗಕ್ಕೆ ಕ್ರಿಕೆಟ್ ಎಂಬ ಗುಮ್ಮ ಎದುರಾಗಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಕೋವಿಡ್  ಕಾರಣದಿಂದಾಗಿ ಬಿಗ್ ಬಜೆಟ್ ನ ಸಾಕಷ್ಟು ಚಿತ್ರಗಳು ಮಾರ್ಚ್ ನಲ್ಲಿ ರಿಲೀಸ್ ಆಗಲು ಪ್ಲ್ಯಾನ್ ಆಗಿದ್ದವು. ಅದರಲ್ಲೂ ಮಾರ್ಚ್ ಎರಡನೇ ವಾರದ ನಂತರ ಕನ್ನಡದ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿಂದ ಶುರುವಾಗುತ್ತಿದ್ದ ಈ ಬಿಡುಗಡೆಯ ಜೈತ್ರ ಯಾತ್ರೆ ಕೆಜಿಎಫ್ 2, ತೆಲುಗಿನ ಆರ್.ಆರ್.ಆರ್, ರಾಧೆ ಶ್ಯಾಮ್, ದಳಪತಿ ವಿಜಯ್ ಅವರ ‘ಬೀಸ್ಟ್’, ಮೆಗಾ ಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸೇರಿದಂತೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು. ಈಗ ಸರಿಯಾಗಿ ಥಿಯೇಟರ್ ಗೆ ಪೆಟ್ಟುಕೊಡುವಂತೆ ಮಾರ್ಚ್ 27 ರಿಂದ ಮೇ 28 ರವರೆಗೆ. ಬರೋಬ್ಬರು ಒಂದು ತಿಂಗಳ ಕಾಲ ಭಾರತದ ಹೆಸರಾಂತ ಐಪಿಎಲ್ ಪಂದ್ಯಾವಳಿ ಆರಂಭವಾಗಲಿವೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಒಂದು ತಿಂಗಳ ಕಾಲ ನಿರಂತರವಾಗಿ, ಅದರಲ್ಲೂ ವೀಕೆಂಡ್ ನಲ್ಲೂ ಈ ಕ್ರಿಕೆಟ್ ಹಾವಳಿ ಇರುವುದರಿಂದ, ಜನರು ಚಿತ್ರಮಂದಿರಗಳತ್ತ ಬರುವುದು ಅನುಮಾನ. ಈ ಹಿಂದೆಯೂ ಐಪಿಎಲ್ ಮತ್ತು ಸಾಕಷ್ಟು ಕ್ರಿಕೆಟ್ ಪಂದ್ಯಾವಳಿಗಳು ಸಿನಿಮಾಗಳ ಬಾಕ್ಸ್ ಆಫೀಸಿಗೆ ಭಾರೀ ಹೊಡೆತ ಕೊಟ್ಟಿವೆ. ಹಾಗಾಗಿ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು, ಐಪಿಎಲ್ ಗೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಮನರಂಜನಾ ಮಾಧ್ಯಮಕ್ಕೂ ಐಪಿಎಲ್ ಸಾಕಷ್ಟು ತೊಂದರೆ ಮಾಡಿದೆ. ಹಾಗಾಗಿ ಈ ವೇಳೆಯಲ್ಲಿ ಹೊಸ ಧಾರಾವಾಹಿಗಳಾಗಲಿ, ಹೊಸ ಹೊಸ ಶೋಗಳಾಗಲಿ ಪ್ರಾರಂಭವಾಗುತ್ತಿಲ್ಲ. ಐಪಿಎಲ್ ನಂತರವೇ ಹೊಸ ಹೊಸ ಕಾರ್ಯಕ್ರಮಗಳಿಗೆ ಪ್ಲ್ಯಾನ್ ಮಾಡಲಿವೆಯಂತೆ ಮನರಂಜನಾ ವಾಹಿನಿಗಳು.

    ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರಗಳ ನಿರ್ಮಾಪಕರು ಐಪಿಎಲ್ ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡಬಹುದಾ? ಅಥವಾ ಐಪಿಎಲ್ ನಂತರ ರಿಲೀಸ್ ಮಾಡಬೇಕಾ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ಸಿನಿಮಾಗಳನ್ನು ಮುಂದು ಹಾಕಿದರೆ, ಅದರಿಂದ ಬೇರೆ ಬೇರೆ ರೀತಿಯಲ್ಲಿ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಹಾಗಾಗಿ ಬಹುತೇಕ ಭಾರತೀಯ ಸಿನಿಮಾ ರಂಗಕ್ಕೆ ಆಘಾತಕ್ಕೆ ಒಳಗಾಗಿದೆ.

  • ಜಗತ್ತಿನ ಅತ್ಯಂತ ದುಬಾರಿ ನಟನಿಗೆ ಗಾಳ ಹಾಕಿದ ರಾಜಮೌಳಿ

    ಜಗತ್ತಿನ ಅತ್ಯಂತ ದುಬಾರಿ ನಟನಿಗೆ ಗಾಳ ಹಾಕಿದ ರಾಜಮೌಳಿ

    ಬಾಹುಬಲಿ, ಆರ್.ಆರ್.ಆರ್ ಸಿನಿಮಾಗಳ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ಧೂಳ್ ಎಬ್ಬಿಸಿರುವ ನಿರ್ದೇಶಕ ರಾಜಮೌಳಿ ಇದೀಗ ಹಾಲಿವುಡ್ ನಟರತ್ತ ದೃಷ್ಟಿ ನೆಟ್ಟಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ನಟ ಎಂದೇ ಖ್ಯಾತರಾಗಿರುವ ಹಾಲಿವುಡ್ ನಟರೊಬ್ಬರನ್ನು ರಾಜಮೌಳಿ ಸಂಪರ್ಕಿಸಿದ್ದಾರೆ. ಇದನ್ನೂ ಓದಿ : ಮಹಾಶಿವರಾತ್ರಿ ದಿನಕ್ಕೆ ಅನನ್ಯ ಭಟ್ ಹಾಡಿರುವ ಶಿವ ಶಿವ ಹಾಡು ರಿಲೀಸ್

    ಭಾರತೀಯ ಸಿನಿಮಾ ರಂಗದಲ್ಲೇ ಅತಿರಥ ಮಹಾರಥರಂತಹ ಕಲಾವಿದರು ಇರುವಾಗ, ನೇರವಾಗಿ ಈ ನಿರ್ದೇಶಕರು ಹಾಲಿವುಡ್ ನಟರತ್ತ ನಡೆದು ಹೊರಟಿದ್ದು ಸಿನಿಮಾ ಮಾಡಲು ಅಲ್ಲ. ಬದಲಾಗಿ ಆರ್.ಆರ್.ಆರ್ ಸಿನಿಮಾದ ಕಾರ್ಯಕ್ರಮಕ್ಕಾಗಿ ಆಹ್ವಾನಿಸಲು.  ಇದನ್ನೂ ಓದಿ : ನಟ ಚೇತನ್ ಬಂಧನ ಅಕ್ರಮ: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

    ಸದ್ಯದಲ್ಲಿಯೇ ದುಬೈನಲ್ಲಿ ಆರ್.ಆರ್.ಆರ್ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆ ಆಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಬರಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರೊಂದಿಗೆ ಆರ್.ಆರ್.ಆರ್ ಚಿತ್ರತಂಡ ಮಾತನಾಡಿದ್ದು, ಜಗತ್ತಿನ ಅತ್ಯಂತ ದುಬಾರಿ ನಟ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರಂತೆ. ಇದನ್ನೂ ಓದಿ : ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

    ಅವೆಂಜರ್ಸ್ ಸೀರಿಸ್ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಟಾಮ್ ಕ್ರೂಸ್, ಹಾಲಿವುಡ್ ನ ಐರಾನ್ ಮ್ಯಾನ್ ಎಂದೇ ಫೇಮಸ್. ಇವರ ನಟನೆಯ ಮಿಷನ್ ಇಂಪಾಸಿಬಲ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇವತ್ತಿಗೂ ದಾಖಲೆಯಲ್ಲಿದೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಅಂದಹಾಗೆ ದುಬೈನಲ್ಲಿ ಈ ಕಾರ್ಯಕ್ರಮ ಯಾವತ್ತು ನಡೆಯಲಿದೆ ಎನ್ನುವ ಮಾಹಿತಿ ಚಿತ್ರತಂಡ ಹೊರಬಿದ್ದಿಲ್ಲ. ಆದರೆ, ಸದ್ಯದಲ್ಲೇ ಕಾರ್ಯಕ್ರಮ ನಡೆಯಲಿದೆಯಂತೆ.

  • ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

    ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

    ತೆಲುಗು ಸಿನಿಮಾ ರಂಗದ ಪಾಲಿಗೆ ಒಂದು ರೀತಿಯಲ್ಲಿ ವಿಲನ್ ಆಗಿದ್ದರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ. ತೆಲುಗು ಸಿನಿಮಾ ರಂಗ ಮತ್ತು ಆಂಧ್ರ ಸರಕಾರ ಒಂದು ರೀತಿಯಲ್ಲಿ ಹಾವು ಮುಂಗಸಿಯಾಗಿದ್ದವು. ಟಿಕೆಟ್ ದರ ಇಳಿಕೆ, ಫ್ಯಾನ್ಸ್ ಶೋ ಬ್ಯಾನ್, ಬೆನಿಫಿಟ್ ಶೋಗಳನ್ನೂ ಕ್ಯಾನ್ಸಲ್ ಮಾಡಿದ್ದ ಆಂಧ್ರ ಸರಕಾರ, ಕೋವಿಡ್ ಕಾರಣದಿಂದಾಗಿ ಶೇ.50ರಷ್ಟು ಆಸನವನ್ನು ಮಾತ್ರ ಉಪಯೋಗಿಸಬೇಕು ಎನ್ನುವ ನಿಯಮ ಹೇರಿತ್ತು. ಹೀಗಾಗಿ ತೆಲುಗಿನ ಭಾರೀ ಬಜೆಟ್ ಚಿತ್ರಗಳು ರಿಲೀಸ್ ಆಗಿರಲಿಲ್ಲ. ಇದನ್ನೂ ಓದಿ : ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ

     ಸತತ ಆರೇಳು ತಿಂಗಳಿಂದ ಜಗನ್ ರೆಡ್ಡಿ ಅವರನ್ನು ತೆಲುಗು ಸಿನಿಮಾ ರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ಅಲ್ಲಿನ ವಾಣಿಜ್ಯ ಮಂಡಳಿ ಭೇಟಿ ಮಾಡಿ ಮನವಿ ಮಾಡಿಕೊಂಡರೂ, ಜಗನ್ ಜಗ್ಗಿರಲಿಲ್ಲ. ಮೊನ್ನೆಯಷ್ಟೇ ಹಿರಿಯ ನಟ ಚಿರಂಜೀವಿ, ನಿರ್ದೇಶಕ ರಾಜಮೌಳಿ ಸೇರಿದಂತೆ ಹಲವು ಕಲಾವಿದರು ಜಗನ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಮಾತುಕತೆ ಫಲ ಕೊಟ್ಟಿದೆ. ಶೇ.100ರಷ್ಟು ಆಸನಕ್ಕೆ ಅವಕಾಶ ಕಲ್ಪಿಸಿರುವ ಸರಕಾರ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಡಲಿಕೆಯನ್ನು ಮಾಡಲಿಂದು ಎಂದು ಹೇಳಿದೆ. ಹಾಗಾಗಿ ತೆಲುಗು ಸಿನಿಮಾ ರಂಗ ನಿಟ್ಟುಸಿರಿಟ್ಟಿದೆ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್


    ಆರ್.ಆರ್.ಆರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾರೀ ಬಜೆಟ್ ಚಿತ್ರಗಳು ಬಿಡುಗಡೆಗಾಗಿ ಕಾದಿವೆ. ಹಿಂದಿ, ಕನ್ನಡ ಸೇರಿದಂತೆ ಇತರ ಭಾಷೆಯ ಸ್ಟಾರ್ ನಟರ ಚಿತ್ರಗಳು ಕೂಡ ತೆಲುಗಿಗೆ ಡಬ್ ಆಗಿ ರಿಲೀಸ್ ಮಾಡಲು ತುದಿಗಾಲಲ್ಲಿ ನಿಂತಿವೆ. ಆಂಧ್ರ ಸರಕಾರದ ಕೊಟ್ಟ ಸಿಹಿ ಸುದ್ದಿಯಿಂದಾಗಿ ಎಲ್ಲರೂ ನಿಟ್ಟುಸಿರಿಟ್ಟಿದ್ದಾರೆ. ಇದನ್ನೂ ಓದಿ : ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ


    ಈ ಸುದ್ದಿ ಸಿಗುತ್ತಿದ್ದಂತೆಯೇ ಆರ್.ಆರ್.ಆರ್ ಮತ್ತು ಇತರ ಚಿತ್ರಗಳ ನಿರ್ದೇಶಕರು ಬಿಡುಗಡೆಯ ದಿನಾಂಕವನ್ನು ಹುಡುಕುತ್ತಿದ್ದಾರೆ.

  • ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಹೈದರಾಬಾದ್: ರಾಜ್‍ಮೌಳಿ ನಿರ್ದೇಶನದ ಬಹುನೀರಿಕ್ಷಿತ  ಆರ್‌ಆರ್‌ಆರ್‌ ಸಿನಿಮಾವನ್ನು ಮಾರ್ಚ್ 25ರಂದು ಬಿಡುಗಡೆ  ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬಂದಿರುವ ಚಿತ್ರ ತಂಡ ಅಧಿಕೃತ ದಿನಾಂಕವನ್ನು ಪ್ರಕಟ ಮಾಡಿದೆ.

    ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್‌ ಸಿನಿಮಾವು ಜನವರಿ 7ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಚ್ 18ರಂದು ಆರ್‌ಆರ್‌ಆರ್‌ ಸಿನಿಮಾವನ್ನು ತೆರೆಕಾಣಿಸಲು ಸಜ್ಜಾಗಿದ್ದರು ರಾಜಮೌಳಿ. ಆ ದಿನಾಂಕ ಹೊಂದಿಕೆಯಾಗದೇ ಇದ್ದರೆ ಏಪ್ರಿಲ್ 28ರ ಮೇಲೆ ಕಣ್ಣಿಟ್ಟಿದ್ದರು. ಇದೀಗ ಅವರೆಡನ್ನೂ ಬಿಟ್ಟು ಹೊಸ ರಿಲೀಸ್ ಡೇಟ್ ಫೈನಲ್ ಮಾಡಲಾಗಿದೆ. ಮಾರ್ಚ್ 25ರಂದು ಆರ್‌ಆರ್‌ಆರ್‌ ರಿಲೀಸ್ ಆಗೋದು ಖಚಿತ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ.

    ರಾಮ್ ಚರಣ್ ತೇಜಾ, ಜೂ.ಎನ್‍ಟಿಆರ್ ಅಭಿನಯಿಸಿರುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾವಾಗಿದೆ.  ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ.

  • ಜೂ.ಎನ್‍ಟಿಆರ್ ಜೊತೆ ನಟಿಸಬೇಕು ಎಂದಾಗ ಶಾಕ್ ಆಗಿತ್ತು: ರಾಮ್ ಚರಣ್

    ಜೂ.ಎನ್‍ಟಿಆರ್ ಜೊತೆ ನಟಿಸಬೇಕು ಎಂದಾಗ ಶಾಕ್ ಆಗಿತ್ತು: ರಾಮ್ ಚರಣ್

    ಚೆನ್ನೈ: ಟಾಲಿವುಡ್ ಮಗಧೀರ ರಾಮ್ ಚರಣ್ ‘RRR’ ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್ ಜೊತೆ ನಟಿಸಿರುವುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

    ಸಂದರ್ಶನವೊಂದರಲ್ಲಿ ಜೂ.ಎನ್‍ಟಿಆರ್ ಜೊತೆ ನೀವು ನಟಿಸಿದಾಗ ಹೇಗೆ ಅನಿಸಿತ್ತು ಎಂಬ ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ ರಾಮ್, ನಾನು ಅವರ ಜೊತೆ ನಟಿಸುತ್ತಿದ್ದೇನೆ ಎಂದು ಹೇಳಿದಾಗ ಖುಷಿಯಿಂದ ಶಾಕ್ ಆಗಿದ್ದೆ. ಅವರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಸಂತೋಷವಾಗಿದೆ ಎಂದರು. ಇದನ್ನೂ ಓದಿ:  ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್

    ಜೂ.ಎನ್‍ಟಿಆರ್ ಅವರ ಜೊತೆಗೆ ಕೆಲಸ ಮಾಡಲು ಯಾವುದೇ ಆತಂಕವಿರಲಿಲ್ಲ. ಈ ವಿಷಯ ತಿಳಿದ ಮೇಲೆ ನಾನು ಆಶ್ಚರ್ಯ ಪಡುತ್ತಲೇ ಇದ್ದೆ. ಆದರೆ ಶೆಡ್ಯೂಲ್ ಆಗಿ ಶೂಟಿಂಗ್‍ಗೆ ಬರುವವರೆಗೂ ನಾನು ಅವರ ಜೊತೆ ನಟಿಸಲು ಉತ್ಸಕರಾಗಿದ್ದೆ. ನಮ್ಮ ಕೆಮಿಸ್ಟ್ರಿ ಹೇಗೆ ಕಾಣಿಸಿಕೊಳ್ಳುತ್ತೆ ಎಂದು ನಾನು ಯೋಚಿಸುತ್ತಿದೆ ಎಂದು ಹೇಳಿದರು.

    ರಾಮ್ ಚರಣ್ ಮತ್ತು ಜೂ.ಎನ್‍ಟಿಆರ್ ಎಸ್‍ಎಸ್ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದನ್ನ ನೋಡಿ ಪ್ರೇಕ್ಷಕರು ಖುಷ್ ಆಗಿದ್ದಾರೆ. ಈ ಟ್ರೈಲರ್ ನಲ್ಲಿಯೇ ಇಬ್ಬರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದೇ ಮೊದಲಬಾರಿಗೆ ಇಬ್ಬರು ಒಟ್ಟಿಗೆ ನಟಿಸುತ್ತಿದ್ದು, ದೊಡ್ಡ ಪರದೆ ಮೇಲೆ ಹೇಗೆ ಕಾಣಿಸುತ್ತಾರೆ ಎಂದು ಎಲ್ಲರು ಕಾಯುತ್ತಿದ್ದಾರೆ.

    ಪ್ರಸ್ತುತ ಈ ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಪಾತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಜನವರಿ 7 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಕೋವಿಡ್-19 ಪರಿಣಾಮ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದನ್ನೂ ಓದಿ: RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

    ಇತ್ತೀಚೆಗೆ RRR ಸಿನಿಮಾ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಮೆಟ್ಟಿಲೇರಿದ್ದಳು. ಈಕೆ ದೂರಿನಲ್ಲಿ, ಈ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಪಾತ್ರ ಬರುತ್ತದೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ. ಹಾಗಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು. ಅಷ್ಟೇ ಅಲ್ಲದೇ ‘ಆರ್‍ಆರ್‍ಆರ್’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

  • ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

    ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

    ಮುಂಬೈ: ಟಾಲಿವುಡ್ ಸ್ಟಾರ್ ರಾಮ್ ಚರಣ್ ಅಭಿಮಾನಿಯೊಬ್ಬರು ‘RRR’ ಸಿನಿಮಾದಲ್ಲಿ ಅವರ ಅವತಾರವನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಅದನ್ನು ನೋಡಿ ರಾಮ್ ಅವರು ಫಿದಾ ಆಗಿದ್ದಾರೆ.

    ರಾಮ್ ಚರಣ್ ದಕ್ಷಿಣ ಭಾರತದ ಪ್ರಮುಖ ಸೂಪರ್‌ಸ್ಟಾರ್ ಚಿರಂಜೀವಿಯವರ ಮಗನಾಗಿದ್ದು, ಟಾಲಿವುಡ್‍ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ತಂದೆಯಂತೆ ಸೂಪರ್ ಸ್ಟಾರ್ ಗರಿಯನ್ನು ತಮ್ಮ ಮೂಡಿಗೆ ಏರಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಎಸ್‍ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾದಲ್ಲಿ ನಟಿಸಿದ್ದು, ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

    ಮುಂಬೈನಲ್ಲಿ ಪ್ರಚಾರದ ವೇಳೆ ಅಭಿಮಾನಿಯೊಬ್ಬರು ರಾಮ್ ಚರಣ್ ಅವರ ಬಳಿ ಫೋಟೋಗಾಗಿ ಬಂದಿದ್ದು, ಅವರು ಹಾಕಿಸಿಕೊಂಡಿದ್ದ ಟ್ಯಾಟೂವನ್ನು ತೋರಿಸಿದ್ದಾರೆ. ಈ ಟ್ಯಾಟೂ ನೋಡಿದ ರಾಮ್ ಸಂತೋಷ ವ್ಯಕ್ತಪಡಿಸಿದ್ದಾರೆ.

    ‘RRR’ ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್‍ರಂತಹ ದೊಡ್ಡ ತಾರಾ ಬಳಗವಿದ್ದು, ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಇದೇ ತಿಂಗಳು 7 ರಂದು ತೆರೆಗೆ ಬರಬೇಕಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾದ ಕಾರಣ ಬಿಡುಗಡೆಯನ್ನು ಮುಂದೂಡಲಾಗಿದೆ. ಇದನ್ನೂ ಓದಿ: ‘RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

    ಪ್ರಿಯಾಂಕಾ ಚೋಪ್ರಾ ಅವರ ಜೊತೆ ರಾಮ್ ಚರಣ್ ‘ಜಂಜೀರ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ರಾಮ್ ಅವರ ನಟನೆ ನೋಡಿದ ಬಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಮೂಲಕ ಬಾಲಿವುಡ್ ನಲ್ಲಿಯೂ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

  • RRR ಸಿನಿಮಾ ಬಿಡುಗಡೆ ಮುಂದೂಡಿಕೆ ಅಧಿಕೃತ

    RRR ಸಿನಿಮಾ ಬಿಡುಗಡೆ ಮುಂದೂಡಿಕೆ ಅಧಿಕೃತ

    ಹೈದರಾಬಾದ್: ಕೊರನಾ ಕಾರಣದಿಂದಾಗಿ ಆರ್‌ಆರ್‌ಆರ್‌ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಕುರಿತಾಗಿ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ.

    ಟ್ವೀಟ್‍ನಲ್ಲಿ ಏನಿದೆ?: ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಚಲನಚಿತ್ರ ಬಿಡುಗಡೆಯನ್ನು ಮುಂದೂಡಲು ಇಚ್ಚಿಸಿದ್ದೇವೆ. ಎಲ್ಲರ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮೂಂದುಡಿದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದೆ.

    ನಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ, ಕೆಲವು ಸನ್ನಿವೇಶಗಳು ನಮ್ಮ ನಿಯಂತ್ರಣವನ್ನು ಮೀರಿದೆ. ಭಾರತದ ಅನೇಕ ರಾಜ್ಯಗಳು ಚಿತ್ರಮಂದಿರಗಳನ್ನು ಮುಚ್ಚುತ್ತಿರುವುದರಿಂದ, ನಿಮ್ಮ ಉತ್ಸಾಹವನ್ನು ಹಿಡಿದಿಟ್ಟುಕೊಳ್ಳಲು ಕೇಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲದಾಗಿದೆ. ನಾವು ಭಾರತೀಯ ಸಿನಿಮಾದ ವೈಭವವನ್ನು ಮರಳಿ ತರುವುದಾಗಿ ಭರವಸೆ ನೀಡುತ್ತಿದ್ದೇವೆ ಮತ್ತು ಸರಿಯಾದ ಸಮಯದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

     

    View this post on Instagram

     

    A post shared by Taran Adarsh (@taranadarsh)

    ರಾಮ್ ಚರಣ್ ತೇಜಾ, ಜೂ.ಎನ್‍ಟಿಆರ್ ಅಭಿನಯಿಸಿರುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಆರ್‌ಆರ್‌ಆರ್‌ ಸಿನಿಮಾ 2022ರ ಜನವರಿ 7ರಂದು ಐದು ಭಾಷೆಗಳಲ್ಲಿ ತೆರೆ ಕಾಣಬೇಕಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇದೀಗ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

     

    ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧ ವಿಧಿಸಲಾಗಿದ್ದು, ಬೆಂಗಳೂರಿನಲ್ಲಿಯೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಚಿತ್ರ ಬಿಡುಗಡೆಗೊಳಿಸದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ಆರ್‍ಆರ್‍ಆರ್ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವುದನ್ನು ಬಿಟ್ಟು ನಿರ್ಮಾಪಕರಿಗೆ ಬೇರೆ ದಾರಿ ಇಲ್ಲದಂತಾಗಿದೆ.

    ಬೆಂಗಳೂರಿನಲ್ಲಿ ಆರ್‌ಆರ್‌ಆರ್‌ ಚಿತ್ರದ ಪ್ರಿರಿಲೀಸ್ ಇವೆಂಟ್ ಜನವರಿ 2ಕ್ಕೆ ನಿಗದಿಯಾಗಿತ್ತು. ಆದರೆ ಬೆಂಗಳೂರಿನಲ್ಲಿಯೂ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಪ್ರಮೋಷನ್ ಕಾರ್ಯಕ್ರಮವನ್ನು ಚಿತ್ರತಂಡ ಮೊಟಕುಗೊಳಿಸಿತ್ತು. ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ಮಂದೂಡಿರುವುದಾಗಿ ಆರ್‌ಆರ್‌ಆರ್‌ ಚಿತ್ರತಂಡ ತಿಳಿಸಿದೆ.

  • ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಹೈದರಾಬಾದ್: ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್ ಹಾಗೂ ನಟ ರಾಮ್ ಚರಣ್ ತೇಜ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

    ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಆರ್‌ಆರ್‌ಆರ್‌ ಸಿನಿಮಾ 2022ರ ಜನವರಿ 7ರಂದು ಐದು ಭಾಷೆಗಳಲ್ಲಿ ತೆರೆ ಕಾಣಬೇಕಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇದೀಗ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.

    ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧ ವಿಧಿಸಲಾಗಿದ್ದು, ಬೆಂಗಳೂರಿನಲ್ಲಿಯೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಚಿತ್ರ ಬಿಡುಗಡೆಗೊಳಿಸದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವುದನ್ನು ಬಿಟ್ಟು ನಿರ್ಮಾಪಕರಿಗೆ ಬೇರೆ ದಾರಿ ಇಲ್ಲದಂತಾಗಿದೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಬೆಂಗಳೂರಿನಲ್ಲಿ ಆರ್‌ಆರ್‌ಆರ್‌ ಚಿತ್ರದ ಪ್ರಿರಿಲೀಸ್ ಇವೆಂಟ್ ಜನವರಿ 2ಕ್ಕೆ ನಿಗದಿಯಾಗಿತ್ತು. ಆದರೆ ಬೆಂಗಳೂರಿನಲ್ಲಿಯೂ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಪ್ರಮೋಷನ್ ಕಾರ್ಯಕ್ರಮವನ್ನು ಚಿತ್ರತಂಡ ಮೊಟಕುಗೊಳಿಸಿದೆ. ಕೊರೊನಾ ಏರಿಕೆಯ ಪರಿಸ್ಥಿತಿ ನೋಡಿಕೊಂಡು ಆರ್‌ಆರ್‌ಆರ್‌ ರಿಲೀಸ್ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಸದ್ಯ ಆರ್‌ಆರ್‌ಆರ್‌ ಬಿಡುಗಡೆ ದಿನಾಂಕವನ್ನು ಎರಡು ತಿಂಗಳು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

    ಈ ತಿಂಗಳು ಆರ್‌ಆರ್‌ಆರ್‌ ಹಾಗೂ ರಾಧೆಶ್ಯಾಮ್ ಸೇರಿದಂತೆ ಅನೇಕ ಚಿತ್ರಗಳು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಬಿಡುಗಡೆಯಾಗದ ಹಿನ್ನೆಲೆ ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ಕ್ಲ್ಯಾಶ್ ಆಗುವುದು ಪಕ್ಕಾ ಎಂದೇ ಹೇಳಬಹುದು. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

  • RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    ಮುಂಬೈ: ‘ಆರ್‌ಆರ್‌ಆರ್’ ಸಿನಿಮಾ ದೇಹವಾದರೆ ಅಜಯ್ ದೇವಗನ್ ಆತ್ಮ ಮತ್ತು ಆಲಿಯಾ ಭಟ್ ಶಕ್ತಿ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ.

    ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್’ ಜನವರಿ 7 ರಂದು ರಿಲೀಸ್ ಆಗುವುದೆಂದು ಚಿತ್ರತಂಡ ತಿಳಿಸಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಈ ವೇಳೆ ಸಂದರ್ಶನವೊಂದರಲ್ಲಿ ವರದಿಗಾರರು, ಈ ಸಿನಿಮಾದಲ್ಲಿ ಆಲಿಯಾ ಮತ್ತು ಅಜಯ್ ದೇವಗನ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ಯ ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಅದಕ್ಕೆ ಉತ್ತರಿಸಿದ ರಾಜಮೌಳಿ, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ಪಾತ್ರಗಳು ಬಹಳ ಮುಖ್ಯವಾಗಿವೆ. ನಾವು ಆರ್‌ಆರ್‌ಆರ್ ಅನ್ನು ದೇಹವಾಗಿ ನೋಡಿದರೆ, ಅಜಯ್ ಸರ್ ಈ ಚಿತ್ರದಲ್ಲಿ ಆತ್ಮ. ಈ ಸಿನಿಮಾದಲ್ಲಿ ಎರಡು ಶಕ್ತಿಗಳಿವೆ. ಅವರನ್ನು ಸಮತೋಲನಗೊಳಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರುವ ಒಬ್ಬ ವ್ಯಕ್ತಿ ಇದ್ದಾರೆ. ಅವರೇ ಸೀತೆ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ಎಂದು ಉತ್ತರಿಸಿದರು.

    ಅಜಯ್ ಮತ್ತು ಆಲಿಯಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ಪ್ರೇಕ್ಷಕರನ್ನು ಮೋಸ ಮಾಡಲು ಹೋಗುವುದಿಲ್ಲ. ಆಲಿಯಾ ಮತ್ತು ಅಜಯ್ ಅವರ ಪಾತ್ರ ಈ ಸಿನಿಮಾದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ಅಲ್ಲದೇ ಅವರಿಬ್ಬರು ನಾಯಕರಿಗಿಂತ ಹೆಚ್ಚು ಮುಖ್ಯರಾಗಿದ್ದಾರೆ ಎಂದು ಉತ್ತರಿಸಿದರು.

    ಆರ್‌ಆರ್‌ಆರ್ ಸಿನಿಮಾದಲ್ಲಿ 1920 ರ ದಶಕ ಪೌರಾಣಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಆಧರಿಸಿದ ಕಾಲ್ಪನಿಕ ಕಥೆ ಇದೆ. ಈ ಭಾಗದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್, ಕೊಮ್ಮರಮ್ ಭೀಮ್ ಪಾತ್ರದಲ್ಲಿ ಜೂ.ಎನ್‍ಟಿಆರ್ ಅಭಿನಯಿಸಿದ್ದಾರೆ. ಸೀತಾ ಪಾತ್ರದಲ್ಲಿ ಆಲಿಯಾ ಕಾಣಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಜೂನಿಯರ್ ಎನ್‍ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಕನಿ, ಅಲಿಸನ್ ಡೂಡಿ, ರೇ ಸ್ಟೀವನ್ಸನ್ ಒಳಗೊಂಡಂತೆ ‘ಆರ್‍ಆರ್‍ಆರ್’ ಸಿನಿಮಾ ಬಹುದೊಡ್ಡ ತಾರಾ ಬಳಗವನ್ನು ಹೊಂದಿದೆ.

    ಈ ಸಿನಿಮಾವನ್ನು ಮುಂದಿನ ವರ್ಷ ಜ.7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಆದರೆ ಪ್ರಸ್ತುತ ಕೊರೊನಾ ಹರಡುತ್ತಿರುವ ಹಿನ್ನೆಲೆ ಇದು ಇನ್ನು ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳಿಂದ ತಿಳಿದುಬರುತ್ತಿದೆ.

  • ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ- ಅಪ್ಪು ನೆನೆದು ಜೂ. ಎನ್‍ಟಿಆರ್ ಭಾವುಕ

    ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ- ಅಪ್ಪು ನೆನೆದು ಜೂ. ಎನ್‍ಟಿಆರ್ ಭಾವುಕ

    -ಅಪ್ಪು ಇಲ್ಲದೆ ನನಗೆ ಕರ್ನಾಟಕವೇ ಶೂನ್ಯ ಅನ್ನಿಸ್ತಿದೆ

    ಬೆಂಗಳೂರು: ಸಿನಿಮಾ ರಂಗದಲ್ಲಿ ಭಾರೀ ಸಂಚಲ ಮೂಡಿಸಿರುವ ಸಿನಿಮಾ RRR. ಈ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇವೆಂಟ್‍ನಲ್ಲಿ ಭಾಗಿಯಾದ ಜೂ. ಎನ್‍ಟಿಆರ್ ಆಪ್ತ ಗೆಳೆಯ ಅಪ್ಪುನನ್ನು ನೆನೆದು ಭಾವುಕರಾಗಿದ್ದಾರೆ.

    ಬೆಂಗಳೂರಿನ ಒರಾಯನ್ ಮಾಲ್ PVRನಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ತೇಜಾ, ಆಲಿಯಾ ಭಟ್ ಭಾಗಿಯಾಗಿದ್ದಾರೆ. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್

    ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮದವನ್ನು ಪ್ರಾರಂಭಿಸಲಾಯಿತ್ತು. ತುಂಬಾ ಸಂತೋಷ ಆಗ್ತಿದೆ ಎಕ್ಸ್ಪ್ರೆಸ್ ಮಾಡೋಕೆ ಆಗುತ್ತಿಲ್ಲ. ತುಂಬಾ ಖುಷಿ ಇದೆ ಎಂದು ರಾಜ್‍ಮೌಳಿ ಹೇಳಿದ್ದಾರೆ. ತುಂಬಾ ಬಾರಿ ಬೆಂಗಳೂರಿಗೆ ಬಂದಿದ್ದೇನೆ. ತುಂಬಾ ಖುಷಿ ಆಗ್ತಿದೆ. RRR ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್ ಬರ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: RRR ಟ್ರೇಲರ್ ಔಟ್ – ರಾಮ್ ಚರಣ್, ಜ್ಯೂ. ಎನ್‍ಟಿಆರ್ ಆ್ಯಕ್ಷನ್‍ಗೆ ಫ್ಯಾನ್ಸ್ ಫಿದಾ

    ಕನ್ನಡದಲ್ಲೇ ಮಾತು ಆರಂಭಿಸಿದ ಜೂ. ಎನ್‍ಟಿಆರ್ ನನಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ.ತಪ್ಪಾದರೆ ಕ್ಷಮಿಸಿ. ತುಂಬಾ ಖುಷಿಯಾಗುತ್ತಿದೆ. ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ನಾನೇ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಅಮ್ಮ ಕುಂದಾಪುರದವರು, ಅವರು ಹೇಳಿದ್ರು, ನೀನು ಡಬ್ ಮಾಡದಿದ್ದರೂ ಪರವಾಗಿಲ್ಲ. ತಪ್ಪಾಗಿ ಮಾತನಾಡಬಾರದು. ಏಕೆಂದರೆ ಅಲ್ಲಿ ನಮ್ಮವರಿದ್ದಾರೆ ಅಂತ ಅಮ್ಮ ಹೇಳಿದ್ದರು. ಅಪ್ಪು ಇಲ್ಲದೆ ನನಗೆ ಕರ್ನಾಟಕವೇ ಶೂನ್ಯ ಅನ್ನಿಸ್ತಿದೆ. ತುಂಬಾ ಕಷ್ಟವಾಗುತ್ತಿದೆ. ಚಕ್ರವ್ಯೂಹ ಚಿತ್ರದಲ್ಲಿ ಅಪ್ಪುಗೆ ಹಾಡಿದ್ದ “ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ” ಹಾಡು ಹಾಡಿ ಅಪ್ಪು ಬಗ್ಗೆ ಜೂ.ಎನ್‍ಟಿಆರ್ ಭಾವುಕರಾಗಿದ್ದಾರೆ.

    ಸ್ವತಂತ್ರಪೂರ್ವ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕಥೆ ಆಧಾರಿತ ಸಿನಿಮಾ ಇದಾಗಿದೆ. ಕೊಮರಂ ಭೀಮ್ ಆಗಿ ಜೂನಿಯರ್ ಎನ್ ಟಿಆರ್ ಕಾಣಿಸಿಕೊಂಡಿದ್ದಾರೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಿದ್ದಾರೆ. 400 ಕೋಟಿ ಬಜೆಟ್ ನಲ್ಲಿ ತಯಾರಾದ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ತೆಲುಗು , ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತೆರೆ ಕಾಣಲು ಭರ್ಜರಿ ಸಿದ್ಧತೆ ನಡೆಸಿದೆ.

    ಜನವರಿ 7ಕ್ಕೆ ವಲ್ರ್ಡ್ ವೈಡ್ ರಿಲೀಸ್ ಆಗ್ತಿರೋ RRR ಸಿನಿಮಾದ ಕರ್ನಾಟಕದಲ್ಲಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದಿರೋ ಏಗಿಓ ಪ್ರೊಡೆಕ್ಷನ್ ಪಡೆದುಕೊಂಡಿದೆ. ಈಗಾಗ್ಲೇ ಟ್ರೈಲರ್ ಲಾಂಚ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮಾ ಕುರಿತು ಮಾಧ್ಯಮಗಳ ಜೊತೆ ಚಿತ್ರತಂಡ ಸಂವಾದ ನಡೆಸಿದೆ.