Tag: RRR Film

  • `ಆರ್‌ಆರ್‌ಆರ್’ ಚಿತ್ರಕ್ಕೆ ಬಾಲಿವುಡ್ ಸಿನಿಮಾ ಎಂದ ನಟಿಗೆ ನೆಟ್ಟಿಗರಿಂದ ಖಡಕ್ ಉತ್ತರ

    `ಆರ್‌ಆರ್‌ಆರ್’ ಚಿತ್ರಕ್ಕೆ ಬಾಲಿವುಡ್ ಸಿನಿಮಾ ಎಂದ ನಟಿಗೆ ನೆಟ್ಟಿಗರಿಂದ ಖಡಕ್ ಉತ್ತರ

    ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಸಿನಿಮಾ ತೆಲುಗು ಪ್ರಿಯರಿಗೆ ಮಾತ್ರವಲ್ಲ ಹಾಲಿವುಡ್ ಮಂದಿಯ ಗಮನ ಸೆಳೆದಿದೆ. ಈಗ ಸಿನಿಮಾವನ್ನ ಹೊಗಳುವ ಭರದಲ್ಲಿ ಹಾಲಿವುಡ್ ನಟಿ ಜೇನ್ ಫೋಂಡಾ (Janefonda) ಎಡವಟ್ಟು ಮಾಡಿದ್ದಾರೆ. ನಟಿಗೆ ನೆಟ್ಟಿಗರಿಂದ ಕ್ಲಾಸ್ ಆಗಿದೆ.

    ಇತ್ತೀಚಿಗೆ ಹಾಲಿವುಡ್ ನಟಿ ಜೇನ್ ಫೋಂಡಾ `ಆರ್‌ಆರ್‌ಆರ್’ (RRR) ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರದ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಹೊಗಳುವ ಭರದಲ್ಲಿ ರಾಜಮೌಳಿ ಚಿತ್ರವನ್ನು ಬಾಲಿವುಡ್ ಸಿನಿಮಾ ಎಂದು ಕರೆದಿದ್ದಾರೆ.

    ಬಾಲಿವುಡ್ (Bollywood) ಚಿತ್ರ ಎಂದರೆ ಹಿಂದಿ ಭಾಷೆಯ ಸಿನಿಮಾಗಳು ಎಂದರ್ಥ. ಇದು ಟಾಲಿವುಡ್ (tollywood) ಚಿತ್ರ. `RRR’ ತೆಲುಗು ಭಾಷೆಯ ಸಿನಿಮಾ ಎಂದು ನೆಟ್ಟಿಗನೊಬ್ಬ ಖಡಕ್ ಆಗಿ ಉತ್ತರಿಸಿದ್ದಾರೆ. ಇದು ಬಾಲಿವುಡ್ ಚಿತ್ರ ಅಲ್ಲ ಎಂದು ಅವರಿಗೆ ಹೇಳಿ ಕಾಮೆಂಟ್ ಬಾಕ್ಸ್‌ನಲ್ಲಿ ರಿಪ್ಲೈ ಹಾಕಿದ್ದಾರೆ.

     

    View this post on Instagram

     

    A post shared by Jane Fonda (@janefonda)

    ನಾನು ʻಟು ಲೆಸ್ಲಿʼ ಸಿನಿಮಾವನ್ನು ನೋಡಲು ಅನೇಕರಿಗೆ ಸಲಹೆ ನೀಡಿದ್ದೆ. ಆದರೆ ನಾನು RRR ಚಿತ್ರವನ್ನು ನೋಡಿದೆ. ಈ ಸಿನಿಮಾದ ಪ್ರಕಾರವೇ ಹೊಸದಾಗಿದೆ ನನಗೆ ಆಶ್ಚರ್ಯ ಉಂಟು ಮಾಡಿದೆ. ಇದು ಬೆಸ್ಟ್ ಫಾರಿನ್ ಸಿನಿಮಾ ವಿಭಾಗದಲ್ಲಿ ನಾಮಿನೇಟ್ ಆಗಿರುವ ಕಾರಣ ಇದನ್ನು ನಾನು ನೋಡಿದ್ದು, ಇದು ಇಂಡಿಯಾನ ಜೋನ್ಸ್ ಹಾಗೂ ಇಂಪೀರಿಯಲಿಸಮ್ ಇರುವ ಬಾಲಿವುಡ್ ಸಿನಿಮಾ ಎಂದು ನಟಿ ಜೇನ್ ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ: ಆಲಿಯಾ ಭಟ್ ಮತ್ತೆ ಪ್ರಗ್ನೆಂಟ್? 2ನೇ ಮಗುವಿನ ನಿರೀಕ್ಷೆಯಲ್ಲಿ ರಣ್‌ಬೀರ್ ದಂಪತಿ!

     

    View this post on Instagram

     

    A post shared by Jane Fonda (@janefonda)

    ಬಾಲಿವುಡ್ ಸಿನಿಮಾ ಎಂದ ನಟಿಯ ತಪ್ಪನ್ನ ನೆಟ್ಟಿಗರು ತಿದ್ದಿದ್ದಾರೆ. ಇದನ್ನ ಇಂಡಿಯನ್ ಸಿನಿಮಾ ಎಂದರೆ ತಪ್ಪಾಗಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻಗೋಲ್ಡನ್ ಗೋಬ್ಸ್ʼ ಬಳಿಕ ಎರಡೆರಡು ಪ್ರಶಸ್ತಿ ಬಾಚಿಕೊಂಡ `ಆರ್‌ಆರ್‌ಆರ್’ ಸಿನಿಮಾ

    ʻಗೋಲ್ಡನ್ ಗೋಬ್ಸ್ʼ ಬಳಿಕ ಎರಡೆರಡು ಪ್ರಶಸ್ತಿ ಬಾಚಿಕೊಂಡ `ಆರ್‌ಆರ್‌ಆರ್’ ಸಿನಿಮಾ

    ರಾಜಮೌಳಿ (Rajamouli) ನಿರ್ದೇಶದ `ಆರ್‌ಆರ್‌ಆರ್’ (RRR Film)  ಸಿನಿಮಾ ಜಗತ್ತಿನದ್ಯಾಂತ ಸದ್ದು ಮಾಡ್ತಿದೆ. ಗೋಲ್ಡನ್ ಗ್ಲೋಬ್ (Golden globes) ಪ್ರಶಸ್ತಿ ಬಾಚಿಕೊಂಡಿರುವ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿಯನ್ನ `ಆರ್‌ಆರ್‌ಆರ್’ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಏಲ್ಲೆಡೆ ರಾಜಮೌಳಿ ಸಿನಿಮಾ ಸೌಂಡ್ ಮಾಡ್ತಿದೆ. ಮೊನ್ನೆ ಮೊನ್ನೆಯಷ್ಟೇ ಗೋಲ್ಡನ್ ಗೋಬ್ಸ್ನಲ್ಲಿ ನಾಟು ನಾಟು (Naatu Naatu Song)  ಹಾಡಿಗೆ ಪ್ರಶಸ್ತಿ ಬಾಚಿಕೊಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಕ್ರಿಟಿಕ್ಸ್ ಚಾಯ್ಸ್ನಲ್ಲಿ ಮತ್ತೆರಡು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ.

    `ಕ್ರಿಟಿಕ್ಸ್ ಚಾಯ್ಸ್’ನಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ಅವಾರ್ಡ್ ಹಾಗೂ ನಾಟು ನಾಟು.. ಹಾಡು ಅತ್ಯುತ್ತಮ ಒರಿಜನಲ್ ಸಾಂಗ್ ಪ್ರಶಸ್ತಿ ಪಡೆದಿದ್ದಕ್ಕೆ ಆರ್‌ಆರ್‌ಆರ್ ತಂಡಕ್ಕೆ ಧನ್ಯವಾದಗಳು ಎಂದು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ಇದನ್ನೂ ಓದಿ: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ರಾಜಮೌಳಿ ಆಸ್ಕರ್ (Oscar) ಮೇಲೆಯೂ ಕಣ್ಣಿಟ್ಟಿದ್ದಾರೆ. ಭಾರತದ ಯಾವ ಚಿತ್ರಕ್ಕೂ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. `ಆರ್‌ಆರ್‌ಆರ್’ ಸಿನಿಮಾ ಆಸ್ಕರ್ ಅವಾರ್ಡ್ಸ್ ಪಡೆಯುವ ರೇಸ್‌ನಲ್ಲಿದೆ. ಈ ಚಿತ್ರ ಆಸ್ಕರ್ ಗೆದ್ದರೆ ಹೊಸ ದಾಖಲೆ ನಿರ್ಮಾಣ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿಮ್ಮ ಆಸ್ಕರ್ ಅವಾರ್ಡ್ ಮುಟ್ಟಲು ಅವಕಾಶ ಕೊಡ್ತೀರಾ: ರಾಮ್ ಚರಣ್‌ಗೆ ಕಿಂಗ್ ಖಾನ್ ಮನವಿ

    ನಿಮ್ಮ ಆಸ್ಕರ್ ಅವಾರ್ಡ್ ಮುಟ್ಟಲು ಅವಕಾಶ ಕೊಡ್ತೀರಾ: ರಾಮ್ ಚರಣ್‌ಗೆ ಕಿಂಗ್ ಖಾನ್ ಮನವಿ

    ಸ್ಕರ್ 2023 ಭಾರತೀಯರಿಗೆ ಬಾರಿ ನಿರೀಕ್ಷೆ ಮೂಡಿಸಿದೆ. ಈ ಬಾರಿ ಆಸ್ಕರ್ ಅಂಗಳದಲ್ಲಿ ಭಾರತದ ಅನೇಕ ಸಿನಿಮಾಗಳಿವೆ. ಇದರ ಮಧ್ಯೆ ಶಾರುಖ್ ಟ್ವೀಟ್ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. `ಆರ್‌ಆರ್‌ಆರ್’ (RRR Film) ಸ್ಟಾರ್ ರಾಮ್ ಚರಣ್‌ಗೆ ಬಾಲಿವುಡ್ ಬಾದಷಾ ಶಾರುಖ್ ಖಾನ್ (Sharukh Khan) ವಿಶೇಷ ಮನವಿವೊಂದು ಮಾಡಿದ್ದಾರೆ.

    `ಆರ್‌ಆರ್‌ಆರ್’ ಸಿನಿಮಾ ಇದೀಗ ಆಸ್ಕರ್ ರೇಸ್‌ನಲ್ಲಿದೆ. 10ಕ್ಕೂ ಹೆಚ್ಚು ಚಿತ್ರಗಳು ಪ್ರತಿಷ್ಠಿತ ಅಕಾಡೆಮಿ ಅವಾರ್ಡ್ ರೇಸ್‌ನಲ್ಲಿ ಇರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಯಾವ ಸಿನಿಮಾ ಆಸ್ಕರ್ (Oscar Award) ಗೆದ್ದು ಭಾರತಕ್ಕೆ ತರುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಈ ನಡುವೆ ಶಾರುಖ್ ಖಾನ್ ಟ್ವೀಟ್ ಅಚ್ಚರಿ ಮೂಡಿಸಿದೆ. ಆಸ್ಕರ್ ತಂದಾಗ ದಯವಿಟ್ಟು ಮುಟ್ಟಲು ಕೊಡಿ ಎಂದು ಕೇಳಿಕೊಂಡಿದ್ದಾರೆ. ಹೌದು, ಈ ಬಾರಿಯ ಆಸ್ಕರ್ ರೇಸ್‌ನಲ್ಲಿ ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾ ಕೂಡ ಇದೆ. `ಆರ್‌ಆರ್‌ಆರ್’ ತಂಡಕ್ಕೆ ಬಾಲಿವುಡ್ ಕಿಂಗ್ ಖಾನ್ ವಿಶೇಷ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಸೌತ್ ಸಿನಿಮಾಗಳ (South Film Industry)  ಸಕ್ಸಸ್ ನಂತರ ಇದೀಗ ಹಿಂದಿ ಚಿತ್ರರಂಗದ ಸ್ಟಾರ್ ನಟರು ದಕ್ಷಿಣದ ಸ್ಟಾರ್‌ಗಳ ಜೊತೆ ಉತ್ತಮ ಬಾಂಧವ್ಯಹೊAದಿದ್ದಾರೆ. ಆಗಾಗ ದಕ್ಷಿಣ ಹೀರೋಗಳ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಶಾರುಖ್ ಮತ್ತು ರಾಮ್ ಚರಣ್ ಇಬ್ಬರೂ ಉತ್ತಮ ಸ್ನೇಹಿತರು. ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ `ಪಠಾಣ್’ (Pathan) ಟ್ರೈಲರ್ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಆಸ್ಕರ್ ಪ್ರಶಸ್ತಿಯನ್ನು `ಆರ್‌ಆರ್‌ಆರ್’ (RRR) ಚಿತ್ರತಂಡ ಭಾರತಕ್ಕೆ (India) ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್ ಎಂದು ಶಾರುಖ್ ಮನವಿ ಮಾಡಿದ್ದಾರೆ. ನಟನ ಮಾತಿಗೆ ರಾಮ್ ಚರಣ್ ಕೂಡ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಶಾರುಖ್ ಸರ್. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು ಎಂದು ಟ್ವೀಟ್ ಮಾಡಿದ್ದಾರೆ. ಈ ನಟರಿಬ್ಬರ ಟ್ವಿಟರ್ ಮಾತುಕತೆ ವೈರಲ್ ಆಗಿದೆ. ಇಬ್ಬರ ನಡುವಿನ ಸ್ನೇಹವನ್ನು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

    ರಾಜಮೌಳಿ (Rajamouli) ನಿರ್ದೇಶನ `ಆರ್‌ಆರ್‌ಆರ್’ (RRR) ಸಿನಿಮಾದ ನಾಟು ನಾಟು ಹಾಡಿನ ಸಂಗೀತಕ್ಕೆ ಹಾಲಿವುಡ್‌ನ `ಗೋಲ್ಡನ್ ಗ್ಲೋಬ್ಸ್’ ಎಂಬ ಪ್ರಶಸ್ತಿಗೆ ಬಾಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಂ ಕ್ಷೀರವಾಣಿಗೆ ಗೋಲ್ಡನ್ ಗೋಬ್ಸ್ ಪ್ರಶಸ್ತಿ (Golden Globe Awards) ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರದ ಹೊರತಾಗಿ ಪ್ರಶಸ್ತಿ ಗೆದ್ದವರ ಬಗ್ಗೆ ಇಲ್ಲಿದೆ ಡೀಟೈಲ್ಸ್. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

    ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡ್ತಿರುವ ಸಿನಿಮಾ ಅಂದ್ರೆ `ಆರ್‌ಆರ್‌ಆರ್’ (RRR Film) ಸಿನಿಮಾ. ಈ ಚಿತ್ರದ ನಾಟು ನಾಟು (Naatu Naatu Song) ಸಾಂಗ್‌ಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಬಾಚಿಕೊಂಡಿದೆ. ಗೋಲ್ಡನ್ ಗ್ಲೋಬ್‌ನಲ್ಲಿ ಗೆದ್ದ ಸಿನಿಮಾಗಳು ಆಸ್ಕರ್‌ನಲ್ಲಿಯೂ ಗೆಲ್ಲವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನೂ ಗೋಲ್ಡನ್ ಗೋಬ್ಸ್‌ನಲ್ಲಿ ಬೇರೇ ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಎಂಬ ಸಂಪೂರ್ಣ ವಿವರ ಇಲ್ಲಿದೆ.

    ಗೋಲ್ಡನ್ ಗ್ಲೋಬ್ಸ್ ವಿಜೇತರ ಪಟ್ಟಿ 2023

    ಅತ್ಯುತ್ತಮ ಡ್ರಾಮಾ ಸಿನಿಮಾ- ದಿ ಫ್ಯಾಬಲ್‌ಮ್ಯಾನ್ಸ್

    ಸಂಗೀತ ಹಾಗೂ ಕಾಮಿಡಿ ಜಾನರ್‌ನ ಅತ್ಯುತ್ತಮ ಸಿನಿಮಾ- ದಿ ಬನ್‌ಶೀಸ್ ಆಫ್ ಇನೆಶೆರಿನ್

    ಅತ್ಯುತ್ತಮ ಟಿವಿ ಸೀರೀಸ್- ಹೌಸ್ ಆಫ್ ಡ್ರ‍್ಯಾಗನ್ಸ್

    ಸಂಗೀತ ಹಾಗೂ ಕಾಮಿಡಿ ಜಾನರ್‌ನ ಟಿವಿ ಸೀರೀಸ್- ಅಬಾಟ್ ಎಲಿಮೆಂಟ್ರಿ

    ಅತ್ಯುತ್ತಮ ಟಿವಿ ಸಿನಿಮಾ- ದಿ ವೈಟ್ ಲೋಟಸ್: ಸಿಸಿಲಿ

    ಟಿವಿ ಸೀರೀಸ್‌ನ ಅತ್ಯುತ್ತಮ ನಟ- ಕೆವಿನ್ ಕೋಸ್ಟರ್ (ಯೆಲ್ಲೊಸ್ಟೋನ್)

    ಟಿವಿ ಸಿನಿಮಾದ ಅತ್ಯುತ್ತಮ ನಟ- ಇವಾನ್ ಪೆಟರ್ಸ್ (ಮಾನ್‌ಸ್ಟರ್; ದಿ ಜೆಫ್ರಿ ಡಾಮೆರ್ ಸ್ಟೋರಿ)

    ಟಿವಿ ಸಿನಿಮಾದ ಅತ್ಯುತ್ತಮ ನಟಿ- ಅಮಾಂಡಾ ಸೇಫ್ರೆಡ್ (ದಿಡ್ರಾಪೌಟ್)

    ಟಿವಿ ಸಿನಿಮಾ ಅತ್ಯುತ್ತಮ ಪೋಷಕ ನಟಿ- ಜೆನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)

    ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟ- ಪೌಲ್ ವಾಲ್ಟರ್ (ಬ್ಲಾಕ್ ಬರ್ಡ್)

    ಅತ್ಯುತ್ತಮ ಚಿತ್ರಕಥೆ- ದಿ ಬ್ಯಾನ್‌ಶೀಸ್ ಆಫ್ ಇನೆಶೆರೀನ್

    ಅತ್ಯುತ್ತಮ ನಿರ್ದೆಶಕ- ಸ್ಟಿವನ್ ಸ್ಪೀಲ್‌ಬರ್ಗ್, (ದಿ ಫೇಬಲ್‌ಮ್ಯಾನ್ಸ್)

    ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ- ಅರ್ಜೆಂಟೀನಾ 1985 (ಆರ್‌ಆರ್‌ಆರ್ ಸಿನಿಮಾ ಈ ವಿಭಾಗದಲ್ಲಿ ಸೋತಿದೆ)

    ಅತ್ಯುತ್ತಮ ನಟಿ- ಕೇಟ್ ಬ್ಲಾಂಚೆಟ್ (ಕಾರ್)

    ಅತ್ಯುತ್ತಮ ನಟ- ಆಸ್ಟಿನ್ ಬಟ್ಲರ್ (ಎಲ್ವಿಸ್)

    ಟಿವಿ ಸೀರೀಸ್ ಅತ್ಯುತ್ತಮ ಪೋಷಕ ನಟಿ- ಜೂಲಿಯಾ ಗಾರ್ನರ್ (ಓಜಾರ್ಕ್)

    ಅತ್ಯುತ್ತಮ ಪೋಷಕ ನಟ- ಕೆ ಹ್ಯು ಕಾನ್ (ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್)

    ಅತ್ಯುತ್ತಮ ಪೋಷಕ ನಟಿ- ಆಂಗೆಲಾ ಬೆಸೆಟ್ (ವಕಾಂಡಾ ಫಾರೆವರ್)

    ಅತ್ಯುತ್ತಮ ನಟ ಟಿವಿ ಸೀರೀಸ್- ಟೈಲರ್ ಜೇಮ್ಸ್ ವಿಲಿಯಮ್ಸ್ (ಅಬಾಟ್ ಎಲಿಮೆಂಟ್ರಿ)

    ಅತ್ಯುತ್ತಮ ಸಂಗೀತ- ಜಸ್ಟಿನ್ ಹರ್‌ವಿಟ್ಜ್ (ಬ್ಯಾಬಿಲಾನ್)

    ಅತ್ಯುತ್ತಮ ಹಾಡು- ನಾಟು-ನಾಟು (ಆರ್‌ಆರ್‌ಆರ್‌)

    ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಪಿನಾಕಿಯೋ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಆರ್‌ಆರ್‌ಆರ್’ ಪಾರ್ಟ್ 2 ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಜಮೌಳಿ

    `ಆರ್‌ಆರ್‌ಆರ್’ ಪಾರ್ಟ್ 2 ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಜಮೌಳಿ

    ಸಿನಿಮಾರಂಗದಲ್ಲಿ ಹವಾ ಕ್ರಿಯೇಟ್ ಮಾಡಿರುವ ಸಿನಿಮಾ ಅಂದ್ರೆ ರಾಜಮೌಳಿ(RajaMouli) ನಿರ್ದೇಶನದ `ಆರ್‌ಆರ್‌ಆರ್'(RRR) ಚಿತ್ರ. ರಾಮ್‌ಚರಣ್(Ramcharan) ಮತ್ತು ತಾರಕ್ (Tarak) ಜುಗಲ್‌ಬಂದಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ `ಆರ್‌ಆರ್‌ಆರ್’ ಪಾರ್ಟ್ 2 ಬರೋದರ ಬಗ್ಗೆ ಸಂದರ್ಶನವೊಂದರಲ್ಲಿ ರಾಜಮೌಳಿ ರಿವೀಲ್ ಮಾಡಿದ್ದಾರೆ.

    ಈ ವರ್ಷ ತ್ರಿಬಲ್ ಆರ್ ಭಾರತದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಚಿತ್ರ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದರು. ಇತ್ತೀಚೆಗೆ ಈ ಚಿತ್ರವನ್ನು ಜಪಾನ್ ನಲ್ಲೂ ರಿಲೀಸ್ ಮಾಡಲಾಯಿತು. ಅಲ್ಲೂ ಕೂಡ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಸಿನಿಮಾದ ಸೀಕ್ವೆಲ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಆರ್‌ಆರ್‌ಆರ್ ಪಾರ್ಟ್ 2(RRR Part 2) ಬಗ್ಗೆ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮದುವೆ ಸುದ್ದಿ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ರು ಹನ್ಸಿಕಾ ಮೋಟ್ವಾನಿ

    ನಿರ್ದೇಶಕ ರೌಜಮೌಳಿ ಆರ್‌ಆರ್‌ಆರ್ -2 ಬರುವುದು ಕನ್ಫರ್ಮ್ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಮೌಳಿ ಆರ್‌ಆರ್‌ಆರ್ ಸೀಕ್ವೆಲ್ ಬಗ್ಗೆ ವಿವರಿಸಿದ್ದಾರೆ. ಆರ್ ಆರ್ ಆರ್-2 ಬರುತ್ತಾ ಇಲ್ವೋ ಎನ್ನುವ ಅಭಿಮಾನಿಗಳ ಗೊಂದಲಕ್ಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಆರ್‌ಆರ್‌ಆರ್ ನಿರ್ದೇಶಕ, ನನ್ನ ಎಲ್ಲಾ ಸಿನಿಮಾಗಳಿಗೆ ನನ್ನ ತಂದೆಯೇ ಕಥೆ ಬರೆಯುವುದು. ನಾವು `ಆರ್‌ಆರ್‌ಆರ್ 2′ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರೇ ಕಥೆಯ ಮೇಲೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

    `ಬಾಹುಬಲಿ’ ಬಳಿಕ ರೌಜಮೌಳಿ ಆರ್‌ಆರ್‌ಆರ್ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದರು. ಇಡೀ ವಿಶ್ವ ಟಾಲಿವುಡ್ ಕಡೆ ತಿರುಗಿ ನೋಡುವಂತೆ ಮಾಡಿದರು. ದಕ್ಷಿಣದ ಸಿನಿಮಾಗಳ ಬಗ್ಗೆ ಮತ್ತೆ ದೇಶ ವಿದೇಶಗಳಲ್ಲಿ ಚರ್ಚೆಯಾಗುವಂತೆ ಮಾಡಿದರು. ಇದೀಗ ಆರ್‌ಆರ್‌ಆರ್ ಸೀಕ್ವೆಲ್ ಬಗ್ಗೆ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಭಾರತದಲ್ಲಿ(India) ಭರ್ಜರಿ ಸಕ್ಸಸ್ ಕಂಡ ತ್ರಿಬಲ್ ಆರ್ ಸಿನಿಮಾ ಇದೀಗ ಜಪಾನ್‌ನಲ್ಲಿ ರಿಲೀಸ್ ಆಗಿದೆ. ಅಲ್ಲೂ ಕೂಡ ರಾಮ್ ಚರಣ್ ಮತ್ತು `ಆರ್‌ಆರ್‌ಆರ್'(RRR Film) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈ ಚಿತ್ರದ ಪ್ರಚಾರಕ್ಕೆ ಇಡೀ ತಂಡ ಜಪಾನ್‌ಗೆ ಹಾರಿದ್ದಾರೆ. ಈ ವೇಳೆ ಜ್ಯೂ.ಎನ್‌ಟಿಆರ್‌ನ ನೋಡಿ ಫ್ಯಾನ್ಸ್ ಭಾವುಕರಾಗಿದ್ದಾರೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್'(RRR Film)ಭಾರತದ ಮೂಲೆ ಮೂಲೆ ಕೋಟಿ ಕೋಟಿ ಕಲೆಕ್ಷನ್ ಮಾಡಿ, ಸಿನಿಮಾ ಗೆದ್ದಿತ್ತು. ಈ ಮೂಲಕ ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್‌ಗೆ(Jr.Ntr) ನಟನೆಗೆ ಫ್ಯಾನ್ಸ್ ಸೆಲ್ಯೂಟ್ ಹೊಡೆದಿದ್ದರು. ಇದೀ `ಆರ್‌ಆರ್‌ಆರ್’ ಸಿನಿಮಾ ಜಪಾನ್ ಅಂಗಳಕ್ಕೂ ಲಗ್ಗೆ ಇಟ್ಟಿದೆ. ಜಪಾನ್ ಅಂಗಳದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ. ಸಿನಿಮಾಗಾಗಿ ಇಡೀ ತಂಡ ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Viral Bhayani (@viralbhayani)


    ಜಪಾನ್‌ನಲ್ಲೂ ರಾಜಮೌಳಿ ಸಿನಿಮಾಗೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಚಿತ್ರದ ಸ್ಟಾರ್‌ಗಳನ್ನ ಬರಮಾಡಿಕೊಂಡಿರು ಜಪಾನಿ ಪ್ರಜೆಗಳು ಸಿಕ್ಕಾಪಟಟೆ ಖುಷಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್‌ನ ಭೇಟಿಯಾದ ಕೆಲವರು ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಸಮಂತಾ ನೋ ಅಂದಿದ್ಯಾಕೆ?

    ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಸಮಂತಾ ನೋ ಅಂದಿದ್ಯಾಕೆ?

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್‌ಗೆ ಮತ್ತಷ್ಟು ಡಿಮ್ಯಾಂಡ್ ಜಾಸ್ತಿ ಆಗಿದೆ. ಸದ್ಯ ಡೈರೆಕ್ಟರ್ ಕೊರಟಾಲ ಶಿವ ನಿರ್ದೇಶನದ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನೂ ಟಿಟೌನ್ ಅಡ್ಡಾದಲ್ಲಿ ಹೊಸ ವಿಚಾರವೊಂದು ಸೌಂಡ್ ಮಾಡುತ್ತಿದೆ. ಜ್ಯೂ.ಎನ್‌ಟಿಆರ್ ಈ ಹೊಸ ಸಿನಿಮಾಗೆ ಸಮಂತಾ ನೋ ಅಂದಿದ್ದಾರೆ.

    ಟಾಲಿವುಡ್ ಸ್ಟಾರ್ ನಟ ಜ್ಯೂ.ಎನ್‌ಟಿಆರ್ `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಚಿತ್ರದ ಸೆಲೆಕ್ಷನ್‌ನಲ್ಲಿ ಮತ್ತಷ್ಟು ಚ್ಯೂಸಿಯಾಗಿದ್ದಾರೆ. ಸದ್ಯ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಓಕೆ ಅಂದಿದ್ದಾರೆ. ಭಿನ್ನ ಕಥೆಯ ಮೂಲಕ ಮತ್ತೆ ತಾರಕ್ ಎಂಟ್ರಿ ಕೊಡಲಿದ್ದಾರೆ.

    ಜ್ಯೂ.ಎನ್‌ಟಿಆರ್ ನಟನೆಯ ಹೊಸ ಚಿತ್ರಕ್ಕೆ ನಾಯಕಿ ನಟಿಸಲು ಸಮಂತಾಗೆ ಆಫರ್ ನೀಡಲಾಗಿತ್ತು. ಪುಷ್ಪ ಚಿತ್ರದ ಸಕ್ಸಸ್ ನಂತರ ಸಮಂತಾ ಮೇಲಿನ ಕ್ರೇಜ್ ಮತ್ತಷ್ಟು ಜಾಸ್ತಿಯಾಗಿದೆ. ಹಾಗಾಗಿ ಸಮಂತಾ ಅವರೇ ಸೂಕ್ತ ಎಂದೆನಿಸಿ ಚಿತ್ರತಂಡ ನಟಿಸಲು ಕೇಳಿಕೊಂಡಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಹೀರೋಯಿನ್‌ಗೆ 2.5 ಕೋಟಿ ಆಫರ್ ಮಾಡಿದ್ದರಂತೆ. ಆದರೆ ಸಮಂತಾ 4 ಕೋಟಿ ರೂಪಾಯಿ ಸಮಂತಾ ಬೇಡಿಕೆ ಇಟ್ಟಿದ್ದಾರೆ. ಸಂಭಾವನೆ ವಿಚಾರ ಸರಿ ಹೋಗದ ಕಾರಣ ಸ್ಯಾಮ್ ಈ ಚಿತ್ರಕ್ಕೆ ನೋ ಅಂದಿದ್ದಾರೆ. ಇದನ್ನೂ ಓದಿ:ಹಾಲಿವುಡ್‌ಗೆ ಹಾರಿದ ಸ್ಟಾರ್ ನಟ ಅಲ್ಲು ಅರ್ಜುನ್

    ಈ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ಸಮಂತಾ ಕಾಂಬಿನೇಷನ್‌ನಲ್ಲಿ `ಜನತಾ ಗ್ಯಾರೇಜ್’ ಚಿತ್ರ ಅಭಿಮಾನಿಗಳ ಮನಗೆದ್ದಿತ್ತು. ಆದರೆ ಮತ್ತೆ ಈ ಜೋಡಿಯನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಫ್ಯಾನ್ಸ್ಗೆ ನಿರಾಸೆ ಆಗಿದೆ. ಆದಷ್ಟು ಬೇಗ ಈ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಆಲಿಯಾ ಭಟ್ ಪ್ರೆಗ್ನೆಂಟ್: ಇಷ್ಟು ಬೇಗ ಮಗುನಾ ಅಂದ ಅಭಿಮಾನಿಗಳು

    ಆಲಿಯಾ ಭಟ್ ಪ್ರೆಗ್ನೆಂಟ್: ಇಷ್ಟು ಬೇಗ ಮಗುನಾ ಅಂದ ಅಭಿಮಾನಿಗಳು

    ಟಿ ಆಲಿಯಾ ಭಟ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ತಾವು ತಾಯಿಯಾಗುತ್ತಿರುವ ಖುಷಿಯ ವಿವಾರವನ್ನು ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಹೇಳಿಕೊಂಡಿದ್ದಾರೆ.

    ಹಲವು ವರ್ಷಗಳ ಡೇಟಿಂಗ್ ನಂತರ ಏಪ್ರಿಲ್ 14ರಂದು ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಏರಡುವರೆ ತಿಂಗಳಾಗಿದ್ದು, ಈಗ ಫ್ಯಾನ್ಸ್‌ಗೆ ಆಲಿಯಾ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆಲಿಯಾ ಭಟ್ ಪ್ರೆಗ್ನೆಂಟ್ ಆಗಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಆಲಿಯಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ದುಬೈಗೆ ಹಾರಿದ ಸಮಂತಾ: ಸ್ನೇಹಿತೆಯರ ಜೊತೆ ನೈಟ್ ಔಟ್ 

    ನಟಿ ಆಲಿಯಾ ಬಿಟೌನ್‌ನ ಸಕ್ಸಸ್‌ಫುಲ್ ನಾಯಕಿ, ಜತೆಗೆ ಪ್ಯಾನ್ ಇಂಡಿಯಾ ನಾಯಕಿಯಾಗಿ ಸಿಕ್ಕಾಪಟ್ಟೆ ಬೇಡಿಕೆಯಿರುವಾಗಲೇ ಹಸೆಮಣೆ ಏರಿದ್ದರು. ಈಗ ಆಲಿಯಾ ಕಪೂರ್‌ ಕುಟುಂಬಕ್ಕೆ ಗುಡ್‌ ನ್ಯೂಸ್‌  ಕೊಟ್ಟಿದ್ದಾರೆ. ತಾಯಿಯಾಗುತ್ತಿರುವ ಕ್ಷಣವನ್ನ ಏಂಜಾಯ್ ಮಾಡ್ತಿದ್ದಾರೆ. ಕೈತುಂಬಾ ಸಿನಿಮಾಗಳಿರುವಾಗ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

     

    View this post on Instagram

     

    A post shared by Alia Bhatt ????☀️ (@aliaabhatt)

    ಸಾಲು ಸಾಲು ಸಿನಿಮಾಗಳಿರುವಾಗ ಮದುವೆ, ಸಂಸಾರ, ಮಗುವಿನ ಆರೈಕೆಯತ್ತ ಆಲಿಯಾ ಮನಸ್ಸು ಮಾಡಿದ್ದಾರೆ. ಒಟ್ನಲ್ಲಿ ಆಲಿಯಾ ಖುಷಿ ನೋಡಿ ಫ್ಯಾನ್ಸ್, ಚಿತ್ರರಂಗದ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.

    Live Tv

  • `ವಿಕ್ರಮ್’ ನಿರ್ದೇಶಕನ ಸಿನಿಮಾದಲ್ಲಿ ಜ್ಯೂ.ಮೆಗಾಸ್ಟಾರ್!

    `ವಿಕ್ರಮ್’ ನಿರ್ದೇಶಕನ ಸಿನಿಮಾದಲ್ಲಿ ಜ್ಯೂ.ಮೆಗಾಸ್ಟಾರ್!

    ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಷಣ್ಮಗಂ ನಿರ್ದೇಶನದ `ಆರ್ 15′ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಬೆನ್ನಲ್ಲೇ `ವಿಕ್ರಮ್’ ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ರಾಮ್‌ಚರಣ್ ಲಿಸ್ಟ್‌ನಲ್ಲಿ ಕೈತುಂಬಾ ಸಿನಿಮಾಗಳಿವೆ. ಇದೀಗ ವಿಕ್ರಮ್ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ರಾಮ್‌ಚರಣ್‌ಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಭೇಟಿಯಾಗಿ ಒನ್‌ಲೈನ್ ಕಥೆ ಹೇಳಿದ್ದು, ರಾಮ್‌ಚರಣ್ ಕಂಟೆಂಟ್ ಇಷ್ಟವಾಗಿದೆ. ಇದನ್ನೂ ಓದಿ: ಅರ್ಜುನ್ ಕಪೂರ್ -ಮಲೈಕಾ ಅರೋರಾ ಮ್ಯಾರೇಜ್ ಡೇಟ್ ಫಿಕ್ಸ್

    ಸದ್ಯ ಶಂಕರ್ ಷಣ್ಮಗಂ ನಿರ್ದೇಶನದ `ಆರ್ 15′ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಇದಾದ ಬಳಿಕ `ಜೆರ್ಸಿ’ ನಿರ್ದೇಶಕ ಗೌತಮ್ ಸಿನಿಮಾಗೆ ಸಹಿ ಹಾಕಿದ್ದಾರೆ. ಇತ್ತ ಲೋಕೇಶ್ ಕನಗರಾಜ್ ಲಿಸ್ಟ್‌ನಲ್ಲಿ ಸಾಕಷ್ಟು ಚಿತ್ರಗಳಿವೆ. ಇವೆಲ್ಲಾ ಚಿತ್ರಗಳ ಮಧ್ಯೆ ಲೋಕೇಶ್ ಮತ್ತು ರಾಮ್ ಚರಣ್ ಕಾಂಬಿನೇಷನ್ ಚಿತ್ರ ಮೂಡಿ ಬರಲಿದೆಯಂತೆ. ಒಟ್ನಲ್ಲಿ ರಾಮ್ ಚರಣ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • ಪತ್ನಿಗೆ ವಿಶೇಷ ಮನವಿ ಮಾಡಿದ ಜ್ಯೂ.ಮೆಗಾಸ್ಟಾರ್

    ಪತ್ನಿಗೆ ವಿಶೇಷ ಮನವಿ ಮಾಡಿದ ಜ್ಯೂ.ಮೆಗಾಸ್ಟಾರ್

    ಟಾಲಿವುಡ್ ಸ್ಟಾರ್ ರಾಮ್‌ಚರಣ್ `ಆರ್‌ಆರ್‌ಆರ್’ ಚಿತ್ರದ ನಂತರ ಸಕ್ಸಸ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜ್ಯೂ.ಮೆಗಾಸ್ಟಾರ್ ರಾಮ್‌ಚರಣ್ ಸಿನಿಮಾ ಶೂಟಿಂಗ್‌ಗಾಗಿ ವಿಶಾಖಪಟ್ಟಣದಲ್ಲಿ ಬೀಡುಬಿಟ್ಟಿದ್ದಾರೆ. ಈ ಗ್ಯಾಪ್‌ನಲ್ಲಿ ಪತ್ನಿ ಉಪಾಸನಾಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗ್ತಿದೆ.

    ರಾಮ್ ಚರಣ್ ನಟನೆಯ `ಆರ್‌ಆರ್‌ಆರ್’ ಚಿತ್ರ ಸೂಪರ್ ಸಕ್ಸಸ್ ಕಂಡಿದೆ. ಆದರೆ `ಆಚಾರ್ಯ’ ಸಿನಿಮಾ ಕಲೆಕ್ಷನ್‌ನಲ್ಲಿ ಸೋತಿದೆ. ಈ ಎರಡು ಸಿನಿಮಾಗಳ ನಂತರ ಬ್ರೇಕ್ ತೆಗೆದುಕೊಳ್ಳದೇ ಜ್ಯೂ.ಮೆಗಾಸ್ಟಾರ್ ಶಂಕರ್ ನಿರ್ದೇಶನದ `ಆರ್‌ಸಿ 15′ ಚಿತ್ರದ ಶೂಟಿಂಗ್‌ಗೆ ವಿಶಾಖಪಟ್ಟಣಕ್ಕೆ ತೆರೆಳಿದ್ದಾರೆ. ಹೀಗಾಗಿ ವಕೇಶನ್‌ಗೆ ತೆರಳಲು ಇನ್ನೂ ಒಂದಿಷ್ಟು ಸಮಯ ಕಾಯಬೇಕಾಗುತ್ತದೆ ಅಂತಾ ಪತ್ನಿಗೆ ತಿಳಿಸಿದ್ದಾರೆ.

    ಕೊವೀಡ್ ಕಾರಣದಿಂದ ಒಂದು ಚಿತ್ರ ಮುಗಿದ ತಕ್ಷಣ ಬೇರೆ ಪ್ರಾಜೆಕ್ಟ್ ಕೈಗಿತ್ತಿಕೊಳ್ತಿದ್ದಾರೆ. ಹಾಗಾಗಿ ಬ್ರೇಕ್‌ಯಿಲ್ಲದೇ ಕೆಲಸ ಮಾಡ್ತಿರೋ ರಾಮ್‌ಚರಣ್ ಇದೀಗ ತಮ್ಮ ಫೋಟೋ ಶೇರ್ ಮಾಡಿ, ಮಡದಿಗೆ ವಿಶೇಷವಾಗಿ ಮನವಿ ಮಾಡಿದ್ದಾರೆ. ವಕೇಶನ್‌ಗೆ ಹೋಗಲು ಇನ್ನು ಒಂದಿಷ್ಟು ಸಮಯ ಬೇಕು ಅಂತಾ ಪ್ರೀತಿಯಿಂದ ಮನವಿ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗ್ತಿದೆ. ಇದನ್ನೂ ಓದಿ: ಕಾಲಿವುಡ್‌ನಲ್ಲೂ ಯಶ್‌ ಮೇನಿಯಾ: 100 ಕೋಟಿ ಬಾಚಿದ `ಕೆಜಿಎಫ್ 2′

     

    View this post on Instagram

     

    A post shared by Ram Charan (@alwaysramcharan)

    ರಾಮ್‌ಚರಣ್ ನಟನೆಯ 15ನೇ ಸಿನಿಮಾಗೆ ಶಂಕರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರ ಗಮನ ಸೆಳೆಯಲು ಸಜ್ಜಾಗಿದ್ದಾರೆ.