ಬಾಲಿವುಡ್ (Bollywood) ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಅವರು ಭಾರತೀಯ ಚಿತ್ರರಂಗವನ್ನು (India) ಪ್ರತಿನಿಧಿಸಿ ಆಸ್ಕರ್ ಅವಾರ್ಡ್‌ನಲ್ಲಿ ನಿರೂಪಣೆ ಮಾಡಿದ್ದರು. ʻನಾಟು ನಾಟುʼ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ, ಹಾಡಿನ ವಿಶೇಷತೆಯನ್ನು ವಿವರಿಸಿದರು. ಇದೀಗ ಆಸ್ಕರ್ ಸಮಾರಂಭದಲ್ಲಿ ನಟಿ ಬೋಲ್ಡ್ ಲುಕ್‌ನಿಂದ ಕಂಗೊಳಿಸಿದ್ದಾರೆ. ಈ ಫೋಟೋಶೂಟ್ ಸದ್ಯ ಸದ್ದು ಮಾಡ್ತಿದೆ. ಇದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?
ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಒಂದ್ ಕಡೆ ನಿರೂಪಣೆಯ ವಿಚಾರವಾಗಿ ಗಮನ ಸೆಳೆದಿದ್ದರೆ, ಇನ್ನೊಂದ್ ಕಡೆ ತನ್ನ ಭಿನ್ನ ಡ್ರೆಸ್ ಸೆನ್ಸ್‌ನಿಂದ ನಟಿ ಹೈಲೈಟ್ ಆಗಿದ್ದಾರೆ.
ಕ್ಲಾಸಿ ಕಪ್ಪು ಬಣ್ಣದ ಗೌನ್‌ನಲ್ಲಿ ದೀಪಿಕಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಕಪ್ಪು ಬಣ್ಣದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅದಷ್ಟೇ ಅಲ್ಲದೇ, ಪಿಂಕ್ ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಕೂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಪಾರ್ಟಿ ಅರೆಂಜ್ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
View this post on Instagram
ಇನ್ನೂ ಆಸ್ಕರ್ ವೇದಿಕೆಯಲ್ಲಿ ಭಾರತವು ಎರಡು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ. ಬೆಸ್ಟ್ ಕಿರುಚಿತ್ರ ವಿಭಾಗದಲ್ಲಿ `ದಿ ಎಲಿಫೆಂಟ್ ವಿಸ್ಪರರ್ಸ್’ ಮತ್ತು ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಸಾಂಗ್ ಪ್ರಶಸ್ತಿ ಬಾಚಿಕೊಂಡಿದೆ. ʻನಾಟು ನಾಟುʼ ಹಾಡಿಗೆ ಚಿತ್ರತಂಡ ಪ್ರಶಸ್ತಿ ಪಡೆಯುವಾಗ ದೀಪಿಕಾ ಭಾವುಕರಾಗಿದ್ದಾರೆ.
























ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ಇಂದು ಆಸ್ಕರ್ ಪ್ರಶಸ್ತಿಯ (Oscar 2023)ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ನಡೆದಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 7 ಗಂಟೆಯ ಹೊತ್ತಿಗೆ ಈ ಪ್ರಕ್ರಿಯೆ ನಡೆದಿದೆ. ಯಾವೆಲ್ಲ ಸಿನಿಮಾಗಳು ನಾಮಿನೇಷನ್ ಆಗಲಿವೆ ಎನ್ನುವ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.