Tag: RRR Film

  • ‘ಪುಷ್ಪ’ ಡೈರೆಕ್ಟರ್ ಜೊತೆ ಮತ್ತೆ ಕೈ ಜೋಡಿಸಿದ ರಾಮ್ ಚರಣ್

    ‘ಪುಷ್ಪ’ ಡೈರೆಕ್ಟರ್ ಜೊತೆ ಮತ್ತೆ ಕೈ ಜೋಡಿಸಿದ ರಾಮ್ ಚರಣ್

    ‘ಆರ್‌ಆರ್‌ಆರ್’ ಸ್ಟಾರ್ ರಾಮ್ ಚರಣ್ (Ram Charan) ಹೋಳಿ ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಗೇಮ್ ಚೇಂಜರ್’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಆರ್ ಸಿ 16 ಸಿನಿಮಾಗೆ ಬುಚ್ಚಿ ಬಾಬು ಆಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಟೇಕಾಫ್‌ಗೂ ಮೊದಲೇ ರಾಮ್ ಚರಣ್ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.

    ಮೈತ್ರಿ ಮೂವೀ ಮೇಕರ್ಸ್, ರಾಮ್ ಚರಣ್- ‘ಪುಷ್ಪ’ ಡೈರೆಕ್ಟರ್ ಸುಕುಮಾರ್ (Sukumar) ಮತ್ತೆ ಒಂದಾಗಿದ್ದಾರೆ. ರಂಗಸ್ಥಳಂ ಮೂಲಕ ಧಮಾಕ ಎಬ್ಬಿಸಿದ್ದ ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಬಣ್ಣದ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

    ‘ಆರ್‌ಆರ್‌ಆರ್’ (RRR) ಸಿನಿಮಾ ಬಳಿಕ ಶಂಕರ್ ಸಾರಥ್ಯದ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ನಟಿಸುತ್ತಿದ್ದಾರೆ. ಜೊತೆಗೆ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬುಗೂ ಕಾಲ್‌ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚೋದಿಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ಹಣ ಹಾಕುತ್ತಿರುವ ಈ ಸಿನಿಮಾಗೆ ರಾಕ್ ಸ್ಟಾರ್ ದೇವಿ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆದ ‘ರಂಗಸ್ಥಳಂ’ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದ ಡಿಎಸ್ ಪಿ ಮತ್ತೆ ಸುಕುಮಾರ್ ಹಾಗೂ ರಾಮ್ ಸಿನಿಮಾ ಮೂಲಕ ಧಮಾಕ ಏಬ್ಬಿಸಲಿದ್ದಾರೆ. ಅಂದಹಾಗೆ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಚಿತ್ರ ಮೂಡಿಬರಲಿದೆ.

  • ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    ‘ಆರ್‌ಆರ್‌ಆರ್’ (RRR Film) ಸಿನಿಮಾದ ಸಕ್ಸಸ್ ನಂತರ ರಾಜಮೌಳಿ (Rajamouli), ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಪ್ಲ್ಯಾನ್ ನಡೆಯುತ್ತಿದೆ. ಹೀಗಿರುವಾಗ ಸಿನಿಮಾ ಆರಂಭಕ್ಕೂ ಮುನ್ನವೇ ರಾಜಮೌಳಿ ಅವರು ತಮ್ಮ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಜ್ಯೂ.ಎನ್‌ಟಿಆರ್, ರಾಮ್ ಚರಣ್ (Ram Charan) ನಟನೆಯ ‘ಆರ್‌ಆರ್‌ಆರ್’ (RRR) ಸಿನಿಮಾ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯಲ್ಲಿ ಶೇಕ್ ಮಾಡಿತ್ತು. ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಆಸ್ಕರ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಚಿತ್ರಕ್ಕೆ ಲಭಿಸಿತು. ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಯೋಜನೆಯನ್ನ ರಾಜಮೌಳಿ ರೂಪಿಸುತ್ತಿದ್ದಾರೆ. ಸಿನಿಮಾ ಕೆಲಸ ಶುರುವಾಗುವ ಮುನ್ನ ತಮಿಳುನಾಡಿನ ತೂತುಕುಡಿಗೆ ಜಕ್ಕಣ್ಣ ಫ್ಯಾಮಿಲಿ ಬೀಡು ಬಿಟ್ಟಿದ್ದಾರೆ.

    ಪ್ರತಿಬಾರಿ ಒಂದು ಸಿನಿಮಾ ಮುಗಿದ ಬಳಿಕ ಫ್ಯಾಮಿಲಿ ಜೊತೆ ರಜೆಯ ಮಜಾ ಸವಿದು ಮತ್ತೆ ಹೊಸ ಸಿನಿಮಾ ಬಗ್ಗೆ ರಾಜಮೌಳಿ ಕೈ ಹಾಕುತ್ತಾರೆ. ಈ ವಿಚಾರವನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಜಕ್ಕಣ್ಣನ ಫ್ಯಾಮಿಲಿ ರೆಸಾರ್ಟ್‌ವೊಂದರಲ್ಲಿ ಬೀಡುಬಿಟ್ಟಿದೆ. ಅಲ್ಲಿ ಗಿಡಗಳನ್ನು ನೆಟ್ಟಿರುವ ಫೋಟೊ, ತೂಗುಯ್ಯಾಲೆಯಲ್ಲಿ ಫ್ಯಾಮಿಲಿ ಜೊತೆ ಜಕ್ಕಣ್ಣ ಇರುವ ಮತ್ತೊಂದು ಫೋಟೂ ವೈರಲ್ ಆಗ್ತಿದೆ. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಮತ್ತೊಂದು ಕಡೆ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಜಕ್ಕಣ್ಣ ಮಾಡಲಿರುವ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸ ನಡೀತಿದೆ. ಇತ್ತೀಚೆಗೆ ರಾಜಮೌಳಿ ತಂದೆ ಬರಹಗಾರ ವಿಜಯೇಂದ್ರ ಪ್ರಸಾದ್ ಮಾತನಾಡಿ ಜುಲೈ ಅಂತ್ಯದ ವೇಳೆಗೆ ಸ್ಕ್ರಿಪ್ಟ್ ರಾಜಮೌಳಿ ಕೈಗೆ ಕೊಡುತ್ತೇನೆ ಎಂದಿದ್ದಾರೆ. ಸದ್ಯ ಜಕ್ಕಣ್ಣ ವಕೇಷನ್‌ಗೆ ಹೋಗಿರುವುದು ನೋಡಿದರೆ ಶೀಘ್ರದಲ್ಲೇ ಸಿನಿಮಾ ಕೆಲಸ ಆರಂಭಿಸುವ ಸುಳಿವು ಸಿಕ್ತಿದೆ.

    ‘ಗುಂಟೂರು ಖಾರಂ’ ಸಿನಿಮಾ ಕೆಲಸದ ಬಳಿಕ ಮಹೇಶ್ ಬಾಬು- ರಾಜಮೌಳಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಸದ್ಯ ಪೂಜಾ ಹೆಗ್ಡೆ ಸಿನಿಮಾದಿಂದ ಹೊರನಡೆದ ಮೇಲೆ ಬೇರೇ ನಟಿಯ ಎಂಟ್ರಿಯಾಗಿದೆ. ಶ್ರೀಲೀಲಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಮಣ್ಣಿಗೆ ಘನತೆಯಿದೆ- G20 ಸಭೆಯಲ್ಲಿ ರಾಮ್ ಚರಣ್‌ ಮಾತು

    ಭಾರತದ ಮಣ್ಣಿಗೆ ಘನತೆಯಿದೆ- G20 ಸಭೆಯಲ್ಲಿ ರಾಮ್ ಚರಣ್‌ ಮಾತು

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ದೇಶದೆಲ್ಲೆಡೆ ರಾಮ್ ಚರಣ್ (Ram Charan) ಸದ್ದು ಮಾಡ್ತಿದ್ದಾರೆ. ಸದ್ಯ ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ನಟ ರಾಮ್ ಚರಣ್ ಗಮನ ಸೆಳೆದಿದ್ದಾರೆ. ಈ ಸಭೆಯಲ್ಲಿ ಭಾರತದ ಸಿನಿಮಾ (Indian Films) ಮತ್ತು ಸಂಸ್ಕೃತಿ (Culture) ಬಗ್ಗೆ ನಟ ಮಾತನಾಡಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ (Game Changer) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಯಶಸ್ಸಿನ ನಂತರ ಸ್ಕ್ರಿಪ್ಟ್ ಸೆಲೆಕ್ಷನ್‌ನಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ.

    ಭಾರತೀಯ ಚಿತ್ರರಂಗದ ಸ್ಟಾರ್ ಆಗಿ ಮಿಂಚ್ತಿರುವ ರಾಮ್ ಚರಣ್, ಶ್ರೀನಗರದಲ್ಲಿ ನಡೆದ ಜಿ20 (G20) ಸಭೆಯಲ್ಲಿ ರಾಮ್ ಚರಣ್ ಭಾಗವಹಿಸಿದ್ದಾರೆ. ಭಾರತದ ಸಿನಿಮಾ- ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ನನಗೆ ಭಾರತವನ್ನು ಇನ್ನಷ್ಟು ಶೋಧಿಸುವ ಆಸೆಯಿದೆ. ಭಾರತದ ಮಣ್ಣಿಗೆ ಘನತೆಯಿದೆ. ಇಲ್ಲಿನ ಭಾವನೆಗಳ ಕುರಿತು ಜನರಿಗೆ ತಲುಪಿಸುವ ಆಸೆಯಿದೆ ಎಂದಿದ್ದಾರೆ. ಇದನ್ನೂ ಓದಿ:‘ಕೆರಾಡಿ’ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ರಿಷಬ್‌ ಶೆಟ್ಟಿ ಎಂಟ್ರಿ

     

    View this post on Instagram

     

    A post shared by Ram Charan (@alwaysramcharan)

    ಒಂದು ಸಿನಿಮಾವನ್ನು ಶೂಟ್ ಮಾಡಲು ಅದ್ಭುತ ಜಾಗವೆಂದರೆ ಅದು ಕಾಶ್ಮೀರ. ನನ್ನ ತಂದೆ ಸಾಕಷ್ಟು ಸಿನಿಮಾಗಳನ್ನ ಕಾಶ್ಮೀರದಲ್ಲಿಯೇ ಶೂಟ್ ಮಾಡಿದ್ದಾರೆ. 95 ವರ್ಷಗಳಿಂದ ಚಿತ್ರರಂಗ ಇಲ್ಲಿಯೇ ಚಿತ್ರೀಕರಣ ಮಾಡುತ್ತಿದೆ. ಕಾಶ್ಮೀರ ಶೋಧಿಸಲು 95 ವರ್ಷ ಸಾಲದು ಎಂದು ಕಾಶ್ಮೀರ ಬಗ್ಗೆ ಬಣ್ಣಿಸಿ ರಾಮ್ ಚರಣ್ ಮಾತನಾಡಿದ್ದಾರೆ.‌ ಒಟ್ನಲ್ಲಿ  ರಾಮ್‌ ಚರಣ್‌ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿದ್ದಾರೆ.

  • ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ರಾಮ್ ಚರಣ್ ಪತ್ನಿ

    ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ರಾಮ್ ಚರಣ್ ಪತ್ನಿ

    ಟಾಲಿವುಡ್ (Tollywood) ನಟ ರಾಮ್ ಚರಣ್- ಉಪಾಸನಾ (Upasana)  ಜೋಡಿ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ವಿಶ್ವ ತಾಯಂದಿರ ದಿನದಂದು ಬೇಬಿ ಬಂಪ್ (Baby Bump)ಫೋಟೋವನ್ನ ಉಪಾಸನಾ ರಿವೀಲ್ ಮಾಡಿದ್ದಾರೆ.

    ರಾಮ್ ಚರಣ್- ಉಪಾಸನಾ 5 ವರ್ಷಗಳ ಕಾಲ ಪ್ರೀತಿಸಿ ಬಳಿಕ 2012ರಲ್ಲಿ ಮದುವೆಯಾದರು. ಇದೀಗ ವೈವಾಹಿಕ ಜೀವನದಲ್ಲಿ 10 ವರ್ಷಗಳ ಬಳಿಕ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಚರಣ್ ದಂಪತಿ ಇದ್ದಾರೆ. ಇದನ್ನೂ ಓದಿ:7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ

    ಮೊದಲ ಬಾರಿಗೆ ತನ್ನ ಬೇಬಿ ಬಂಪ್ ಲುಕ್‌ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಸರಿಯಾದ ಕಾರಣಗಳಿಗಾಗಿ ನಾನು ಮಾತೃತ್ವವನ್ನ ಸ್ವೀಕರಿಸಲು ಹೆಮ್ಮೆ ಪಡುತ್ತೇನೆ. ಸಮಾಜದ ನಿರೀಕ್ಷೆಗಳಿಗೆ ಅನುಗುಣವಾಗಿ ಅಥವಾ ಹೊಂದಿಕೊಳ್ಳಲು ನಾನು ತಾಯಿಯಾಗಿಲ್ಲ. ನನ್ನ ಮಗ/ಮಗಳು ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ಭಾವನಾತ್ಮಕವಾಗಿ ಸಿದ್ಧಳಾಗಿದ್ದೇನೆ. ನನ್ನ ಮೊದಲ ತಾಯಂದಿರ ದಿನವನ್ನು ಆಚರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ಪೋಸ್ಟ್‌ಗೆ ನಟಿ ಸಮಂತಾ ರಿಯಾಕ್ಟ್ ಮಾಡಿ, ‘ಹ್ಯಾಪಿ ಮದರ್ಸ್ ಡೇ ಬ್ಯೂಟಿಫುಲ್’ ಎಂದಿದ್ದಾರೆ. ಕಾಜಲ್ ಅಗರ್‌ವಾಲ್, ಹ್ಯಾಪಿ ಮದರ್ಸ್ ಡೇ ಲವ್ಲಿ ಮಮ್ಮಿ ಎಂದಿದ್ದಾರೆ. ಈ ಮೂಲಕ ರಾಮ್ ಚರಣ್ ಪತ್ನಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ರಾಮ್‌ ಚರಣ್‌ ಪತ್ನಿ ಉಪಾಸನಾ ಬೇಬಿ ಶವರ್ ಸೆಲೆಬ್ರೇಶನ್

    ರಾಮ್‌ ಚರಣ್‌ ಪತ್ನಿ ಉಪಾಸನಾ ಬೇಬಿ ಶವರ್ ಸೆಲೆಬ್ರೇಶನ್

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ರಾಮ್ ಚರಣ್- ಉಪಾಸನಾ (Upasana) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ನಡುವೆ ಚರಣ್ ನಿವಾಸದಲ್ಲಿ ಉಪಾಸನಾ ಬೇಬಿ ಶವರ್ ಕಾರ್ಯಕ್ರಮದಲ್ಲಿ ತಾರೆಯರು ಭಾಗವಹಿಸಿದ್ದಾರೆ.

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ಖುಷಿಯ ನಡುವೆ ಮನೆಗೆ ಹೊಸ ಅತಿಥಿಯ ಆಗಮನ ರಾಮ್ ಚರಣ್ (Ramcharan) ಕುಟುಂಬಕ್ಕೆ ಖುಷಿ ಕೊಟ್ಟಿದೆ. ಇತ್ತೀಚಿಗಷ್ಟೇ ದುಬೈನಲ್ಲಿ ಸ್ನೇಹಿತರ ಜೊತೆ ಉಪಾಸನಾ ಬೇಬಿ ಶವರ್ ಕಾರ್ಯಕ್ರಮವನ್ನ ಅದ್ದೂರಿಯಾಗಿ ಮಾಡಲಾಗಿತ್ತು.

    ಇದೀಗ ಮತ್ತೆ ಹೈದರಾಬಾದ್‌ನಲ್ಲಿ ರಾಮ್ ಚರಣ್ ನಿವಾಸದಲ್ಲಿ ಮತ್ತೆ ಉಪಾಸನಾ ಬೇಬಿ ಶವರ್ ಕಾರ್ಯಕ್ರಮ ಮಾಡಲಾಯಿತು. ಈ ಸಂಭ್ರಮದಲ್ಲಿ ರಾಮ್ ಚರಣ್ ದಂಪತಿ ಜೊತೆ ಲಕ್ಷ್ಮಿ ಮಂಚು, ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಪ್ರಮುಖ ತಾರೆಯರು ಸೇರಿದ್ದರು. ಇದನ್ನೂ ಓದಿ:ಪತಿ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಫೋಟೋಶೂಟ್

     

    View this post on Instagram

     

    A post shared by Ram Charan (@alwaysramcharan)

    ರಾಮ್ ಚರಣ್ ಸದ್ಯ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್‌ಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ.

  • ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ಹುಭಾಷಾ ನಟಿ ಶ್ರೀಯಾ ಶರಣ್‌ಗೆ (Shriya Saran) ಇದೀಗ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ ‘ಕಬ್ಜ’ (Kabzaa) ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ನಟಿಸಿದ ಮೇಲೆ ಶ್ರೀಯಾ ಬಂಪರ್ ಆಫರ್‌ವೊಂದು ಸಿಕ್ಕಿದೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಅದಕ್ಕೆ ದುಬಾರಿ ಸಂಭಾವನೆ ಕೂಡ ಶ್ರೀಯಾ ಡಿಮ್ಯಾಂಡ್ ಮಾಡಿದ್ದಾರೆ.

    ಮದುವೆಯಾಗಿ ಮುದ್ದಾದ ಮಗಳಿದ್ರು ಕೂಡ ಶ್ರೀಯಾ ಶರಣ್ ಅವರು ತನ್ನ ಬ್ಯೂಟಿ ಮತ್ತು ಫಿಟ್‌ನೆಸ್‌ ಕಡೆ ತುಸು ಜಾಸ್ತಿ ಗಮನ ಕೊಡುತ್ತಾರೆ. ಸಂತೂರ್ ಮಮ್ಮಿ ಹಾಗೇ ಮಿಂಚೋ ಶ್ರೀಯಾ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ.

    ‘ಆರ್‌ಆರ್‌ಆರ್’, ‘ಕಬ್ಜ’ ಸಿನಿಮಾಗಳು ಭರ್ಜರಿ ಹಿಟ್ ಆದಮೇಲೆ ಕೇಳಬೇಕಾ? ತಮ್ಮ ಸಂಭಾವನೆ ಕೂಡ ಏರಿಸಿಕೊಂಡಿದ್ದಾರೆ. ಈ ನಡುವೆ ಮೆಗಾ ಸ್ಟಾರ್ ಚಿರಂಜೀವಿ(Mega Star Chiranjeevi) ನಟನೆ ‘ಭೋಲಾ ಶಂಕರ್’ (Bola Shankar) ಚಿತ್ರದಲ್ಲಿ ಸೊಂಟ ಬಳುಕಿಸಲು ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಕಬ್ಜ ನಟಿ 1 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಚಿತ್ರತಂಡದ ಕಡೆಯಿಂದ ಈ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ.‌ ಇದನ್ನೂ ಓದಿ:ಮದುವೆಯಾಗದೇ ಮಗು ವಿಚಾರ : ನಟಿ ಇಲಿಯಾನ ಡಿ ಕ್ರೂಸ್ ಗೆ ಸಂಕಷ್ಟ

    ಕತ್ರಿನಾ, ಕರೀನಾ, ಸಮಂತಾ (Samantha) ಇವರೆಲ್ಲರೂ ಸ್ಟಾರ್ ನಟಿಯಾಗಿದ್ರು ಕೂಡ. ಐಟಂ ಹಾಡಿಗೆ ಹೆಜ್ಜೆ ಹಾಕಿ, ಗೆದ್ದವರು. ಹಾಗಾಗಿ ಶ್ರೀಯಾ ಶರಣ್ ಕೂಡ ಇದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ವಿಭಿನ್ನ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದ್ದಾರೆ.

  • ತಂದೆ ರಾಜಮೌಳಿ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಕಾರ್ತಿಕೇಯ

    ತಂದೆ ರಾಜಮೌಳಿ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಕಾರ್ತಿಕೇಯ

    ‘ಆರ್‌ಆರ್‌ಆರ್’ (RRR) ಸಿನಿಮಾದ ಮಾಸ್ಟರ್ ಮೈಂಡ್ ರಾಜಮೌಳಿ (Rajamouli) ಅವರು ಸದಾ ಸಿನಿಮಾ ವಿಚಾರವಾಗಿಯೇ ಹೆಚ್ಚು ಸುದ್ದಿ ಮಾಡುತ್ತಾರೆ. ಆದರೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಅವರೆಲ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ. ನಿರ್ದೇಶಕ ರಾಜಮೌಳಿ- ರಮಾ ದಂಪತಿ ಪುತ್ರ ಕಾರ್ತಿಕೇಯ (Karthikeya) ಅವರು ತಮ್ಮ ತಂದೆ ರಾಜಮೌಳಿ ಬಗ್ಗೆ ಮಾತನಾಡಿದ್ದಾರೆ.

    ಕಾರ್ತಿಕೇಯ ಅವರು ಚಿತ್ರರಂಗದಲ್ಲಿ ತಮ್ಮದೇ ಶೈಲಿನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕ-ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕೇಯ ಅವರು ರಾಜವೌಳಿ ಅವರ ಸ್ವಂತ ಮಗ ಅಲ್ಲ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ರಾಜಮೌಳಿ- ರಮಾ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಅವರ ಮದುವೆಗೂ ಮುನ್ನವೇ 8 ವರ್ಷಗಳ ಹಿಂದೆ ಕಾರ್ತಿಕೇಯ ಹುಟ್ಟಿದ್ದರು. ಈ ಹಿಂದೆ ರಾಜಮೌಳಿ ಅವರ ಮದುವೆ ಪ್ರಪೋಸಲ್‌ನ ರಮಾ ತಿರಸ್ಕರಿಸಿದರು. ಆದರೆ ರಾಜಮೌಳಿ ಅವರು, ಕಾರ್ತಿಕೇಯ ತೋರುತ್ತಿದ್ದ ಪ್ರೀತಿ ಕಂಡು ಮದುವೆಗೆ ರಮಾ ಸಮ್ಮತಿ ನೀಡಿದ್ದರು. ನನ್ನ ತಾಯಿನ ಮದುವೆ ಆಗೋಕು ಮೊದಲೇ ರಾಜವಳಿ ಅವರ ಪರಿಚಯವಿತ್ತು. ಆಗಲೇ ರಾಜಮೌಳಿ ಅವರನ್ನ ತಂದೆ ಎಂದು ಫಿಕ್ಸ್ ಆಗಿದ್ದೆ ಎಂದು ಸಂದರ್ಶನವೊಂದರಲ್ಲಿ ಕಾರ್ತಿಕೇಯ ಹೇಳಿದ್ದಾರೆ. ಇದನ್ನೂ ಓದಿ:ಮದುವೆಗೂ ಮುನ್ನ ನಟಿ ಇಲಿಯಾನ ಮಗು : ಬೆಂಬಲಿಸಿದ ತಾಯಿ

    ನಿಮ್ಮ ಅಮ್ಮ ಸಿಂಗಲ್ ಮದರ್. ಆ ಸಮದಲ್ಲಿ ರಾಜಮೌಳಿ ಅವರು ಬಂದು ಅವರನ್ನು ಮದುವೆ ಆಗುತ್ತೀನಿ ಅಂದಾಗ ನಿಮಗೆ ಹೇಗನಿಸಿತು ಎಂದು ಕಾರ್ತಿಕೇಯಗೆ ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿದೆ. ಅಮ್ಮ, ರಾಜಮೌಳಿ ಅವರು ಮದುವೆ ಆಗುವುದಕ್ಕೆ ಒಂದು ವರ್ಷ ಮುಂಚಿನಿಂದಲೂ ನಮ್ಮ ಮನೆಗೆ ಬರುತ್ತಿದ್ದರು. ನನ್ನನ್ನು ಅಮ್ಮನನ್ನು ಡಿನ್ನರ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅವರು ಶೂಟಿಂಗ್ ಬ್ಯುಸಿಯಲ್ಲಿ ಬರದೇ ಇದ್ದರೆ ನಾನೇ ಫೋನ್ ಮಾಡಿ ಯಾಕೆ ಬಂದಿಲ್ಲ ಎಂದು ಕೇಳುತ್ತಿದ್ದೆ, ಸಂಬಂಧಿಕರೇ ಆಗಿದ್ದರಿಂದ ರಾಜಮೌಳಿ ಅವರು ಮೊದಲಿನಿಂದಲೂ ಗೊತ್ತಿತ್ತು.

    ಆದರೆ ಮದುವೆಗೂ ಒಂದು ವರ್ಷ ಮೊದಲು ಮನೆಗೆ ಹೆಚ್ಚು ಬರುತ್ತಿದ್ದರು. ನನಗೆ ಆಗ 8ರಿಂದ 9 ವರ್ಷ ವಯಸ್ಸು. ಅಮ್ಮ, ನಾನು ಅವರೊಟ್ಟಿಗೆ ಹೊರಗೆ ಹೋಗುತ್ತಿದ್ದೆವು. ಆಗಲೇ ನನಗೆ ತಂದೆಯ ವೈಬ್ ಬಂದುಬಿಟ್ಟಿತ್ತು. ಒಬ್ಬ ತಂದೆ ರೀತಿ ಫೀಲ್ ಆಗುತ್ತಿತ್ತು. ಮೈಂಡ್‌ನಲ್ಲಿ ತಂದೆ ಅಂತ ಫಿಕ್ಸ್ ಆಗಿಬಿಟ್ಟಿದ್ದೆ. ಅವರನ್ನು ಬಿಡಬೇಕು ಎಂದು ಅನ್ನಿಸಲಿಲ್ಲ ಎಂದು ಕಾರ್ತಿಕೇಯ ವಿವರಿಸಿದ್ದಾರೆ.

  • ಬಾಲಿವುಡ್‌ಗೆ ಜ್ಯೂ.ಎನ್‌ಟಿಆರ್, ಹೃತಿಕ್ ರೋಷನ್‌ಗೆ ತಾರಕ್ ಸಾಥ್

    ಬಾಲಿವುಡ್‌ಗೆ ಜ್ಯೂ.ಎನ್‌ಟಿಆರ್, ಹೃತಿಕ್ ರೋಷನ್‌ಗೆ ತಾರಕ್ ಸಾಥ್

    ‘ಆರ್‌ಆರ್‌ಆರ್’ ಚಿತ್ರದ ಸೂಪರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ಅವರು ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ತಾರಕ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಮೂಲಕ ಬಾಲಿವುಡ್‌ಗೆ ತಾರಕ್ ಲಗ್ಗೆ ಇಡ್ತಿದ್ದಾರೆ.

    ರಾಜಮೌಳಿ ನಿರ್ದೇಶನದ RRR ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಮಿಂಚಿದ ಮೇಲೆ ಅವರ ಖದರ್ ಬದಲಾಗಿದೆ. ರಾಮ್ ಚರಣ್- ತಾರಕ್‌ಗೆ ಅದೃಷ್ಟ ಬದಲಾಗಿದೆ. ತಾರಕ್- ಜಾನ್ವಿ ಕಪೂರ್ (Janhavi Kapoor) ಕಾಂಬಿನೇಷನ್ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಬಾಲಿವುಡ್ ಅಂಗಳದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ `ಜೋಶ್’ ನಾಯಕಿ ಪೂರ್ಣಾ

    ‘ಪಠಾಣ್’ (Pathaan) ನಿರ್ದೇಶಕ ಸಿದ್ಧಾರ್ಥ್ ಆನಂದ್ ವಾರ್ 2 ಸಿನಿಮಾಗೆ ತೆರೆಮರೆಯಲ್ಲಿ ಕೆಲಸ ಮಾಡ್ತಿದ್ದಾರೆ. ಹೃತಿಕ್ ರೋಷನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೃತಿಕ್‌ಗೆ ಸೌತ್ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ ಸಾಥ್ ನೀಡುತ್ತಿದ್ದಾರೆ. ‘ವಾರ್ 2’ನಲ್ಲಿ ಖಡಕ್ ಆಗಿ ತಾರಕ್ ಕಾಣಿಸಿಕೊಳ್ತಿದ್ದಾರೆ.

    ‘ವಾರ್’ ಪಾರ್ಟ್ ಒನ್‌ನಲ್ಲಿ ಹೃತಿಕ್- ಟೈಗರ್ ಶ್ರಾಫ್ ಮಿಂಚಿದ್ದರು. ಈ ಸಿನಿಮಾ ಸಿನಿಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ `ವಾರ್’ ಪಾರ್ಟ್ 2ಗೆ ಸಿದ್ಧತೆ ನಡೆಯುತ್ತಿದೆ. ಹೃತಿಕ್ ರೋಷನ್- ಜ್ಯೂ.ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿದೆ. ಇಬ್ಬರ ಖಡಕ್ ಕಾಂಬೋ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾಗಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ ಆ್ಯಂಡ್ ಟೀಂ

    ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾಗಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ ಆ್ಯಂಡ್ ಟೀಂ

    ಭಾರತಕ್ಕೆ ಆಸ್ಕರ್ ಅವಾರ್ಡ್ (Oscars 2023) ಬರುವಂತೆ ಮಾಡಿರುವ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರ ಶ್ರಮ ಸಾಕಷ್ಟಿದೆ. ಅಷ್ಟೇ ಅಲ್ಲದೇ, ಇಡೀ RRR ಚಿತ್ರದ ತಂಡದ ಟೀಂ ವರ್ಕ್ ಎಂದೇ ಹೇಳಬಹುದು. ಈ ಸಿನಿಮಾವನ್ನ ಆಸ್ಕರ್‌ಗೆ ನಾಮಿನೇಟ್ ಮಾಡಿಸಲು ನಡೆಸಿದ ಕ್ಯಾಂಪೇನ್‌ಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದ ರಾಜಮೌಳಿ ಆ್ಯಂಡ್ ಟೀಂ ಆಸ್ಕರ್ ಸಮಾರಂಭದಲ್ಲಿ ಸಹ ದೊಡ್ಡ ಮೊತ್ತದ ಹಣವನ್ನೇ ತೆತ್ತಿದ್ದಾರೆ.

    ಆಸ್ಕರ್ ಅಂಗಳದಲ್ಲಿ ಭಾರತದ ಎರಡು ಸಿನಿಮಾ ಆಸ್ಕರ್ ಅವಾರ್ಡ್ (Oscars 2023) ಪಡೆದು ಗೆದ್ದು ಬೀಗಿದೆ. ಹೀಗಿರುವಾಗ RRR ಚಿತ್ರದ `ನಾಟು ನಾಟು’ (Naatu Naatu) ಸಾಂಗ್‌ನ ನಾಮಿನೇಟ್ ಮಾಡಿಸಲು ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಅದಕ್ಕಾಗಿ ಹಣದ ಹೊಳೆಯನ್ನೇ ಹರಿಸಿದ್ದರು. ಆದರೆ ಮತ್ತೊಂದು ಅಚ್ಚರಿಯ ಮಾಹಿತಿ ಸಿಕ್ಕಿದೆ. ರಾಜಮೌಳಿ ಚಿತ್ರತಂಡ ತಮ್ಮ ಕುಟುಂಬದ ಜೊತೆ ಆಸ್ಕರ್ ಅವಾರ್ಡ್‌ನಲ್ಲಿ ಭಾಗಿಯಾಗಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ಆಸ್ಕರ್ ನಾಮಿನೇಟ್ ಆದವರಿಗಷ್ಟೆ ಪ್ರಶಸ್ತಿಯ ಆಯೋಜಕರಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಆಂಡ್ ಸೈನ್ಸ್ ನವರು ಟಿಕೆಟ್ ಕಳಿಸುತ್ತಾರೆ. ಹಾಗಾಗಿ ನಾಮಿನೇಟ್ ಆಗಿದ್ದ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಮತ್ತು ಚಿತ್ರ ಸಾಹಿತಿ ಚಂದ್ರಭೋಸ್ ಹಾಗೂ ಅವರ ಕುಟುಂಬದವರಿಗಷ್ಟೆ ವಿಮಾನ ಟಿಕೆಟ್ ಹಾಗೂ ಆಸ್ಕರ್ ಹಾಲ್‌ಗೆ ಉಚಿತ ಎಂಟ್ರಿ ನೀಡಲಾಗಿತ್ತು. ರಾಜಮೌಳಿ, ರಾಮ್ ಚರಣ್, ತಾರಕ್ ಅವರ ಕುಟುಂಬಗಳಿಗೆ ಟಿಕೆಟ್ ನೀಡಿರಲಿಲ್ಲ. ಅವರುಗಳು ಸ್ವಂತ ಖರ್ಚಿನಲ್ಲಿಯೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಆಸ್ಕರ್ ಸಮಾರಂಭ ವೀಕ್ಷಿಸಲು, ರೆಡ್ ಕಾರ್ಪೆಟ್ ಇವೆಂಟ್‌ನಲ್ಲಿ ಭಾಗವಹಿಸಲು ಮತ್ತು ಇನ್ನಿತರೆಗಳಿಗೆ ಭಾರಿ ದೊಡ್ಡ ಮೊತ್ತದ ಟಿಕೆಟ್ ಅನ್ನು ಖರೀದಿಸಬೇಕಾಗುತ್ತದೆ. ಈ ಹಿಂದಿಗಿಂತಲೂ ಈ ಬಾರಿ ಟಿಕೆಟ್ ಬೆಲೆ ಹೆಚ್ಚು ನಿಗದಿಪಡಿಸಲಾಗಿತ್ತು. ಹಾಗಾಗಿ ರಾಜಮೌಳಿ ಬರೋಬ್ಬರಿ 25000 ಡಾಲರ್ ನೀಡಿ ಟಿಕೆಟ್ ಖರೀದಿ ಮಾಡಿದ್ದರಂತೆ. ಭಾರತದ ರೂಪಾಯಿ ಲೆಕ್ಕದಲ್ಲಿ ಒಂದು ಟಿಕೆಟ್‌ಗೆ ಜಕ್ಕಣ್ಣ 20.60 ಲಕ್ಷ ಹಣ ತೆತ್ತಿದ್ದಾರೆ. ರಾಜಮೌಳಿಯವರು ತಮ್ಮ ಪತ್ನಿ ಹಾಗೂ ಪುತ್ರ ಹಾಗೂ ಸೊಸೆಯೊಡನೆ ಇವೆಂಟ್‌ಗೆ ಹೋಗಿದ್ದರಾದ್ದರಿಂದ ಸುಮಾರು 80 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕೇವಲ ಟಿಕೆಟ್‌ಗೆ ಖರ್ಚು ಮಾಡಿದ್ದಾರೆ.

    20 ಲಕ್ಷ ಒಬ್ಬ ವ್ಯಕ್ತಿಗೆ ನೀಡಿದ್ದರೂ ಸಹ ಅದು ವಿಐಪಿ ಟಿಕೆಟ್ ಆಗಿರಲಿಲ್ಲ ವಿಐಪಿ ಟಿಕೆಟ್ ಪಡೆಯಲು 40 ಲಕ್ಷಕ್ಕಿಂತಲೂ ಹೆಚ್ಚು ಹಣ ತೆರಬೇಕಿತ್ತು. ಇದೇ ಕಾರಣಕ್ಕೆ ರಾಜಮೌಳಿ ಹಾಗೂ ಅವರ ಕುಟುಂಬ ಸದಸ್ಯರು ಆಸ್ಕರ್ ನಡೆಯುತ್ತಿದ್ದ ಹಾಲ್‌ನ ಕೊನೆಯ ಸಾಲಿನಲ್ಲಿ ಕೂತು ಇವೆಂಟ್ ಅನ್ನು ವೀಕ್ಷಿಸಿದ್ದರು.

  • ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

    ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

    ಮೆಗಾ ಫ್ಯಾಮಿಲಿಯಲ್ಲಿ (Mega Family) ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್‌ಗಳಿದ್ದಾರೆ. ಒಬ್ಬರು ರಾಮ್ ಚರಣ್ (Ram Charan) ಮತ್ತೊಬ್ಬರು ಅಲ್ಲು ಅರ್ಜುನ್. ಇಬ್ಬರ ಇದೀಗ ಸಂಬಂಧ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಘಟನೆಯೊಂದು ನಡೆದಿದೆ. `ನಾಟು ನಾಟು’ ಹಾಡಿಗೆ ಅಲ್ಲು ಅರ್ಜುನ್ (Allu Arjun) ಟ್ವೀಟ್ ಮಾಡಿರುವ ರೀತಿ ರಾಮ್ ಚರಣ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾದ `ನಾಟು ನಾಟು’ (Naatu Naatu) ಹಾಡಿಗೆ ಇತ್ತೀಚಿಗೆ ಆಸ್ಕರ್ (Oscars 2023) ಪ್ರಶಸ್ತಿ ಲಭಿಸಿದೆ. ಟಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಿಂದ ತಂಡಕ್ಕೆ ಶುಭಕೋರುತ್ತಿದ್ದಾರೆ. ಅದರಂತೆಯೇ ಅಲ್ಲು ಅರ್ಜುನ್ ಕೂಡ ಟ್ವೀಟ್ ಮೂಲಕ ಇಡೀ `ಆರ್‌ಆರ್‌ಆರ್’ ಟೀಮ್‌ಗೆ ಶುಭಕೋರಿದ್ದರು. ಈ ವೇಳೆ ಜೂ.ಎನ್‌ಟಿಆರ್‌ಗೆ ಕುರಿತು ಮಾಡಿದ ಒಂದೇ ಒಂದು ಟ್ವೀಟ್ ರಾಮ್ ಚರಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಇದನ್ನೂ ಓದಿ: ಜಿನಿವಾದಲ್ಲಿ ನಾಳೆ ‘ಕಾಂತಾರ’ ಸಿನಿಮಾ ಪ್ರದರ್ಶನ : ರಿಷಬ್ ಶೆಟ್ಟಿ ಭಾಗಿ

    ಭಾರತಕ್ಕೆ (India) ಇದೊಂದು ಅದ್ಭುತ ಕ್ಷಣ. ತೆಲುಗು ಹಾಡೊಂದು ಆಸ್ಕರ್ ವೇದಿಕೆಯಲ್ಲಿ ಶೇಕ್ ಮಾಡುವುದನ್ನು ನೋಡಿ ಖುಷಿಯಾಗುತ್ತಿದೆ. ಎಂ.ಎಂ ಕೀರವಾಣಿಯವರಿಗೆ, ಚಂದ್ರಬೋಸ್ ಅವರಿಗೆ, ಪ್ರೇಮ್ ರಕ್ಷಿತ್ ಅವರಿಗೆ, ಕಾಲ ಭೈರವ ಅವರಿಗೆ, ರಾಹುಲ್ ಅವರಿಗೆ, ನನ್ನ ಸಹೋದರ ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.

    ಹಾಗೆಯೇ ನಮ್ಮ ತೆಲುಗಿನ ಹೆಮ್ಮೆ, ತಮ್ಮ ಹೆಜ್ಜೆಗಳಿಂದ ಪ್ರಪಂಚವನ್ನೇ ಕುಣಿಯುವಂತೆ ಮಾಡಿದ ಜ್ಯೂ.ಎನ್‌ಟಿಆರ್ ಅವರಿಗೆ, ಈ ಎಲ್ಲಾ ಮ್ಯಾಜಿಕ್ ಹಿಂದಿರುವ ವ್ಯಕ್ತಿ ರಾಜಮೌಳಿಯವರಿಗೆ ಅಭಿನಂದನೆ ಎಂದಿದ್ದರು. ಭಾರತೀಯ ಸಿನಿಮಾ ರಂಗಕ್ಕೆ ಹೃದಯ ಸ್ಪರ್ಷಿಸಿದ ಕ್ಷಣ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

    ಐಕಾನ್ ಸ್ಟಾರ್ ಅವರು ತಾರಕ್‌ಗೆ ತೆಲುಗಿನ ಹೆಮ್ಮೆ ಎಂದಿದ್ದಕ್ಕೆ ರಾಮ್ ಚರಣ್ ಫ್ಯಾನ್ಸ್ ಅಲ್ಲು ಅರ್ಜುನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ʻಪುಷ್ಪʼ ಸ್ಟಾರ್ ವಿರುದ್ಧ ಚರಣ್‌ ಅಭಿಮಾನಿಗಳು ಕಿಡಿಕಾರಿದ್ದಾರೆ.