Tag: RRR Cinema

  • ಬಾಲಿವುಡ್‌ಗೆ ರಾಮ್ ಚರಣ್: ಸಲ್ಮಾನ್ ಖಾನ್ ಜೊತೆ ಜ್ಯೂ.ಮೆಗಾಸ್ಟಾರ್

    ಬಾಲಿವುಡ್‌ಗೆ ರಾಮ್ ಚರಣ್: ಸಲ್ಮಾನ್ ಖಾನ್ ಜೊತೆ ಜ್ಯೂ.ಮೆಗಾಸ್ಟಾರ್

    `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಾಮ್ ಚರಣ್ ತೇಜ ಈಗ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಟೌನ್‌ನ ಸೂಪರ್ ಸ್ಟಾರ್ ಜತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದಲ್ಲಿ ನಟಿಸಿದ ಮೇಲೆ ರಾಮ್ ಚರಣ್ ಡಿಮ್ಯಾಂಡ್ ಗಗನಕ್ಕೇರಿದೆ. ಈ ಚಿತ್ರದ ಸಕ್ಸಸ್ ನಂತರ ಪಾತ್ರಗಳ ಆಯ್ಕೆನಲ್ಲಿಯೂ ಸಖತ್ ಚ್ಯೂಸಿ ಆಗಿದ್ದಾರೆ. ಹೀಗಿರುವಾಗ ಜ್ಯೂನಿಯರ್ ಮೆಗಾಸ್ಟಾರ್‌ಗೆ ಬಾಲಿವುಡ್‌ನಲ್ಲಿ ನಟಿಸಲು ಬುಲಾವ್ ಬಂದಿದೆ. ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಚಿತ್ರದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಇದನ್ನೂ ಓದಿ: ಪಾಕ್ ಹೋಟೆಲ್‌ನಲ್ಲಿ ಆಲಿಯಾ ಭಟ್: ನೆಟ್ಟಿಗರು ಗರಂ

    ಈ ಹಿಂದೆಯೇ ಬಾಲಿವುಡ್‌ನ `ಜಂಜೀರ್’ ಚಿತ್ರದಲ್ಲಿ ರಾಮ್ ಚರಣ್ ನಟಿಸಿದ್ದರು. ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಸಾಥ್ ನೀಡಿದ್ದರು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಈ ಚಿತ್ರ ಸೋತಿತ್ತು. ದಶಕಗಳ ನಂತರ ರಾಮ್ ಚರಣ್, ಸಲ್ಮಾನ್ ಖಾನ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    `ಕಭಿ ಈದ್ ಕಭಿ ದಿವಾಲಿ’ ಚಿತ್ರದಲ್ಲಿ ಅತಿಥಿ ಪಾತ್ರಕ್ಕೆ ರಾಮ್ ಚರಣ್ ಓಕೆ ಅಂದಿದ್ದಾರೆ. ಅತಿಥಿ ಪಾತ್ರವಾಗಿದ್ದರು ರಾಮ್ ಚರಣ್ ರೋಲ್‌ಗೆ ಪ್ರಾಮುಖ್ಯತೆಯಿದೆ. ರಿಲೀಸ್ ಬಳಿಕ ಈ ಸೂಪರ್ ಸ್ಟಾರ್‌ಗಳ ಜೋಡಿ ಹೇಗೆಲ್ಲಾ ಕಮಾಲ್ ಮಾಡಬಹುದು ಕಾದುನೋಡಬೇಕಿದೆ.

    Live Tv

  • ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್‌ಗಳ ಕುರಿತಾದ ಚಿತ್ರಗಳು ಸಾಕಷ್ಟು ಯಶಸ್ಸು ಕಾಣುತ್ತಿದೆ. ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಲು ನಿರ್ಮಾಪಕರು ಉತ್ಸಾಹ ತೋರಿಸುತ್ತಿದ್ದಾರೆ. ಈಗ ನಿಜ ಜೀವನದಲ್ಲಿ ಸಾಧನೆ ಮಾಡಿರುವ ಸಾಧಕನ ಕಥೆಯನ್ನು ಹೇಳಲು `ಆರ್‌ಆರ್‌ಆರ್’ ಚಿತ್ರದ ಕಥೆಗಾರ ವಿಜಯೇಂದ್ರ ಪ್ರಸಾದ್ ಹೊರಟಿದ್ದಾರೆ.‌

    `ಮಗಧೀರ’, `ಭಜರಂಗಿ ಭಾಯಿಜಾನ್’, `ಬಾಹುಬಲಿ’, ಮುಂತಾದ ಸೂಪರ್ ಹಿಟ್ ಸಿನಿಮಾಗಳ ಕಥೆಗಾರ ವಿಜಯೇಂದ್ರ ಪ್ರಸಾದ ಈಗ ಅವರು ಖ್ಯಾತ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಬರೋಪಿಕ್ ಸ್ಕ್ರಿಪ್ಟ್ ಬರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರ ಕೊಡುಗೆ ಅಪಾರ. ಕವಿಯಾಗಿ, ಕಾದಂಬರಿಕಾರರಾಗಿ, ಪತ್ರಕರ್ತರಾಗಿ ಬಂಕಿಮ್ ಚಂದ್ರ ಚಟರ್ಜಿ ಸಾಧನೆ ಮಾಡಿದ್ದಾರೆ.‌

    ನಿಜ ಜೀವನದಲ್ಲಿ ಸ್ಪೂರ್ತಿಯ ಚಿಲುವೆಯಾಗಿರುವ ಬಂಕಿಮ್ ಚಂದ್ರ ಚಟರ್ಜಿ ಅವರ ಜೀವನಗಾಥೆಯನ್ನು ತೆರೆಯ ಮೇಲೆ ತೋರಿಸಲು ರಾಮ್ ಕಮಲ್ ಸಜ್ಜಾಗಿದ್ದಾರೆ. ಖ್ಯಾತ ಸಾಹಿತಿಕಾರನ ಇಂಚಿಂಚೂ ಸಾಧನೆಯನ್ನ ಸ್ಟಾರ್ ಡೈರೆಕ್ಟರ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರೆಯಲಿದ್ದಾರೆ. ಇದನ್ನು ಓದಿ:ಚೀನಾಗೆ ಸೆಡ್ಡು ಹೊಡೆದ ಯಶ್ ಫ್ಯಾನ್ಸ್- ಮಾಲೂರಿನಲ್ಲಿ ಮೊಸಾಯಿಕ್ ಆರ್ಟ್ ದಾಖಲೆ

    ರಾಜಮೌಳಿ ಅವರ ಯಶಸ್ಸಿಗೆ ತಂದೆ ವಿಜಯೇಂದ್ರ ಪ್ರಸಾದ್ ಅವರ ಕೊಡುಗೆ ದೊಡ್ಡದಿದೆ. `ಆರ್‌ಆರ್‌ಆರ್’ ಯಶಸ್ಸಿನ ನಂತರ ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್‌ಗೆ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿದೆ. ಖ್ಯಾತ ಸಾಹಿತಿಕಾರನ ಜೀವನ ಸಾಧನೆಯನ್ನ ತೆರೆಯ ತೋರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.

  • ಆರ್‌ಆರ್‌ಆರ್‌ ಸಕ್ಸಸ್ ಪಾರ್ಟಿ- ರಾಕಿ ಸಾವಂತ್ ಸೊಂಟದಲ್ಲಿ ಗನ್

    ಆರ್‌ಆರ್‌ಆರ್‌ ಸಕ್ಸಸ್ ಪಾರ್ಟಿ- ರಾಕಿ ಸಾವಂತ್ ಸೊಂಟದಲ್ಲಿ ಗನ್

    ಬಾಲಿವುಡ್ ಮಂದಿಗಾಗಿಯೇ ಆರ್.ಆರ್.ಆರ್ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ ಆರ್.ಆರ್.ಆರ್ ಸಿನಿಮಾ ತಂಡ ಮತ್ತು ಬಾಲಿವುಡ್ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಆಮೀರ್ ಖಾನ್, ಕರಣ್ ಜೋಹಾರ್, ಜಾವೇದ್ ಅಖ್ತರ್, ದಿ ಕಾಶ್ಮೀರ್ ಫೈಲ್ಸ್ ನಟ ದರ್ಶನ್ ಸಿಂಗ್, ತುಷಾರ್ ಕಪೂರ್ ಹೀಗೆ ಬಾಲಿವುಡ್ ದಿಗ್ಗಜರೇ ಈ ಪಾರ್ಟಿಗೆ ಬಂದಿದ್ದರು. ಯಾರೇ ದಿಗ್ಗಜರು ಬಂದಿದ್ದರೂ, ಅಲ್ಲಿ ಫಳಫಳ ಹೊಳೆದದ್ದು ಮಾತ್ರ ಮಾದಕ ನಟಿ ರಾಕಿ ಸಾವಂತ್. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

    ಪಾರ್ಟಿಗೆ ಅವರು ಬಂದಿದ್ದ ಲುಕ್ಕೇ ವಿಭಿನ್ನವಾಗಿತ್ತು. ತುಂಬಾ ಬೋಲ್ಡ್ ಆಗಿ ಕಾಣುವಂತಹ ರೆಡ್ ಡ್ರೆಸ್ ನಲ್ಲಿ ರಾಕಿ ಆಗಮಿಸಿ, ಎಲ್ಲರ ಗಮನ ಸೆಳೆದರು. ಬರೀ ಕಾಸ್ಟ್ಯೂಮ್ ಮಾತ್ರವಲ್ಲ, ಗೋಲ್ಡನ್ ಕಲರ್ ನಿಂದ ಹೆಣೆಯಲ್ಪಟ್ಟ ಕೇಶ ವಿನ್ಯಾಸ ಮತ್ತು ಸೊಂಟದಲ್ಲಿ ಹಾಕಿಸಿಕೊಂಡಿದ್ದ ರಿವಲ್ವಾರ್ ಟ್ಯಾಟೋ ಕ್ಯಾಮೆರಾಗಳು ಕಣ್ಣಿಗೆ ಆಹಾರವಾಗಿದ್ದಂತೂ ಸುಳ್ಳಲ್ಲ. ಹಾಗಂತ ರಾಕಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಲ್ಲಿಗೆ ಬಂದಿದ್ದ ಅಷ್ಟೂ ಸಿಲಿಬ್ರಿಟಿಗಳ ಜತೆ ಫೋಟೋ ತಗೆಸಿಕೊಂಡರು. ತಮಾಷೆ ಮಾಡಿಕೊಂಡು ಇಡೀ ಪಾರ್ಟಿಗೆ ಕಳೆ ತಂದಿದ್ದಾರೆ. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

    ರಾಕಿಯ ಉತ್ಸಾಹ ಕಂಡು ಎಲ್ಲರೂ ದಂಗಾಗಿದ್ದರು. ಅಲ್ಲದೇ, ತಾನು ಸೊಂಟದಲ್ಲಿ ಬರೆಯಿಸಿಕೊಂಡಿದ್ದ ಗನ್ ಟ್ಯಾಟೋವನ್ನು ಎಲ್ಲರಿಗೂ ತೋರಿಸುವುದೇ ಆ ಸಂದರ್ಭದಲ್ಲಿ ಅವರ ಕಾಯಕವಾಗಿತ್ತು. ಬಂದವರಿಗೆಲ್ಲ ಟ್ಯಾಟೋ ತೋರಿಸಿ, ಮನರಂಜನೆ ನೀಡುತ್ತಿದ್ದರು ರಾಕಿ ಸಾವಂತ್. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಈಗಾಗಲೇ ಆರ್.ಆರ್.ಆರ್ ಸಿನಿಮಾ ವಿಶ್ವದಾದ್ಯಂತ ಭಾರೀ ಗೆಲುವು ಕಂಡಿದೆ. ಇನ್ನೇನು ಸದ್ಯದಲ್ಲೇ 1000 ಕೋಟಿ ಕ್ಲಬ್ ಕೂಡ ಸೇರಲಿದೆ. ಹಿಂದಿಯಲ್ಲೂ ಭರ್ಜರಿ ಹಿಟ್ ಆಗಿದೆ. ಹಾಗಾಗಿ ಇಡೀ ತಂಡ ಬಾಲಿವುಡ್ ಮಂದಿಗೆ ಪಾರ್ಟಿ ಆಯೋಜನೆ ಮಾಡಿತ್ತು. ರಾಮ್ ಚರಣ್ ತೇಜ್, ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರ ತಂಡವೇ ಅಲ್ಲಿತ್ತು.

  • ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ದೇ ಮೊದಲ ಬಾರಿಗೆ ತೆಲುಗಿನ ಇಬ್ಬರೂ ಸ್ಟಾರ್ ನಟರು ಒಂದಾಗಿ ‘ಆರ್.ಆರ್.ಆರ್’ ಸಿನಿಮಾ ಮಾಡಿದ್ದಾರೆ. ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈ ಇಬ್ಬರೂ ಕಲಾವಿದರ ಅಭಿಮಾನಿಗಳಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರೆ, ರಾಜಮೌಳಿ ಈ ಸಿನಿಮಾದಲ್ಲಿ ಇಬ್ಬರನ್ನೂ ಒಟ್ಟಾಗಿಸಿಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್ ಎಂಬ ಚರ್ಚೆ ಶುರುವಾಗಿದೆ.

    ಇಂದು ಆರ್.ಆರ್.ಆರ್ ಚಿತ್ರತಂಡ ಕರ್ನಾಟಕಕ್ಕೆ ಆಗಮಿಸಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಪ್ರಿ  ರಿಲೀಸ್ ಇವೆಂಟ್ ನಲ್ಲಿ ಭಾಗವಹಿಸುತ್ತಿದೆ. ಅದಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಚಿತ್ರತಂಡ ಹಲವು ವಿಷಯಗಳನ್ನು ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಇಬ್ಬರೂ ನಾಯಕರಾ? ಅಥವಾ ಒಬ್ಬರು ವಿಲನ್ ಮತ್ತೊಬ್ಬರು ಹೀರೋನಾ ಎಂಬ ಪ್ರಶ್ನೆ ನಿರ್ದೇಶಕರಿಗೆ ಎದುರಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಸಿನಿಮಾದ ಟ್ರೇಲರ್ ನೋಡಿದರೆ, ಒಬ್ಬರು ಖಳನಟರಂತೆ ಮತ್ತೊಬ್ಬರು ನಟರಂತೆ ಬಿಂಬಿಸಲಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಯಾರು, ಯಾವ ಪಾತ್ರ ಮಾಡಿದ್ದಾರೆ ಎನ್ನುವ  ಕುತೂಹಲ ಹೆಚ್ಚಾಗಿದೆ. ಹೀಗಾಗಿ ನಿರ್ದೇಶಕ ರಾಜಮೌಳಿಗೆ ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನಿರ್ದೇಶಕರಿಂದ ಬಂದ ಉತ್ತರ ಮಜವಾಗಿದೆ. ಈ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? ಎಂದು ಕೇಳಲಾದ ಪ್ರಶ್ನೆಗೆ, ಜಾಣತನದಿಂದಲೇ ಉತ್ತರ ನೀಡಿದ್ದಾರೆ ರಾಜಮೌಳಿ. ‘ಈ ಪ್ರಶ್ನೆಗೆ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರೇ ಉತ್ತರಿಸಬೇಕು’ ಎಂದು ಜಾರಿಕೊಂಡರು.

    ಕೂಡಲೇ ಈ ಪ್ರಶ್ನೆಗೆ ಉತ್ತರಸಿದ ಜೂನಿಯರ್ ಎನ್.ಟಿ.ಆರ್. ನಾವಿಬ್ಬರೂ ವಿಲನ್. ಜತೆಗೆ ರಾಜಮೌಳಿ ಅವರೂ ವಿಲನ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಲ್ಲಿಗೆ ಇಬ್ಬರಲ್ಲ ಒಬ್ಬರು ನೆಗೆಟಿವ್ ಶೇಡ್ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವುದು ಖಾತ್ರಿಯಾಗಿದೆ. ಇದನ್ನೂ ಓದಿ : ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

    ಆರ್.ಆರ್.ಆರ್. ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ರಾಮ್ ಚರಣ್ ತೇಜ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಎಂ.ಎಂ.ಕೀರವಾಣಿ ಸಂಗೀತ  ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಹಿಟ್ ಆಗಿವೆ. ಟ್ರೇಲರ್ ಕೂಡ ಭರವಸೆ ಮೂಡಿಸಿದೆ. ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

  • ಇಂದು ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಇಂದು ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ಕನ್ನಡ ಅವತರಣಿಕೆಯ ಮೆಗಾ ಪ್ರೀ ರಿಲೀಸ್ ಇವೆಂಟ್ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಹಾಗಾಗಿ ಕಲಾವಿದರ ದಂಡೇ ಅಲ್ಲಿ ಸೇರಲಿದೆ. ಸಿನಿಮಾದ ನಟರು ಮತ್ತು ಕಾರ್ಯಕ್ರಮದಲ್ಲಿ ಭಾಗಿ ಆಗಲು ಬರುತ್ತಿರುವ  ನೆಚ್ಚಿನ ನಟರನ್ನು ನೋಡುವುದಕ್ಕಾಗಿ ಅಭಿಮಾನಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದಾರೆ. ಏರ್ ಪೋರ್ಟ್ಗೆ ಅಭಿಮಾನಿಗಳ ಸಾಗರವೇ ಹರಿದು ಬಂದಿದ್ದರಿಂದ, ಅಲ್ಲಿನ ಸಿಬ್ಬಂದಿಗೆ ಮತ್ತೊಂದು ಟೆನ್ ಷನ್ ಶುರುವಾಗಿದೆ.

    ಇಂದು ಸಂಜೆ 06 ಗಂಟೆಗೆ ಆರಂಭವಾಗಲಿರುವ ಪ್ರೀ ರಿಲೀಸ್ ಇವೆಂಟ್, ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನೂರಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ಜಾಗದಲ್ಲಿ ನಡೆಯುತ್ತಿದೆ. ಸಿನಿಮಾದ ನಾಯಕ ನಟರಾದ ಜ್ಯೂ.ಎನ್‍ಟಿಆರ್, ರಾಮ್ ಚರಣ್ ಹಾಗೂ ನಿರ್ದೇಶಕ ರಾಜಮೌಳಿ, ಆಲಿಯಾ ಭಟ್ ಸೇರಿದಂತೆ ಬಹುತೇಕ ತಾರಾಗಣವೇ ಕಾರ್ಯಕ್ರಮದಲ್ಲಿ ಹಾಜರಿರಲಿದೆ. ಇದನ್ನೂ ಓದಿ : ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರು ಗರಂ

    ಕಳೆದ ರಾತ್ರಿಯೇ ಬೆಂಗಳೂರಿಗೆ ಕೆಲವು ನಟರು ಆಗಮಿಸಿದ್ದರಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟರನ್ನ ನೋಡಲು ಏರ್ಪೋರ್ಟ್ ನಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟರನ್ನು ಸಂಭ್ರಮದಿಂದ ಬರಮಾಡಿಕೊಂಡರು. ಇದನ್ನೂ ಓದಿ: ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

    ಕೇವಲ ಸಿನಿಮಾ ನಟರು ಮಾತ್ರವಲ್ಲ, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರ ಸುಧಾಕರ್ ಸೇರಿದಂತೆ ಕೆಲ ರಾಜಕಾರಣಿಗಳು ಕೂಡ ಭಾಗಿ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮವನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಹಾಗಾಗಿ ಟನ ಶಿವರಾಜ್ ಕುಮಾರ್ ಕೂಡ ಭಾಗಿ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ : ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರ

    ಈಗಾಗಲೇ ಲಕ್ಷಾಂತರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಡೀ ದೇಶದಲ್ಲೇ ಅತಿ ದೊಡ್ಡದಾದ ಇವೆಂಟ್ ಇದಾಗಿದೆ. ಭದ್ರತೆ ಮತ್ತು ಸರ್ವ ಸಿದ್ಧತೆಯನ್ನು ಮಾಡಿಕೊಂಡು ಇವೆಂಟ್ ಮಾಡಲಾಗುತ್ತಿದೆ ಎಂದಿದೆ ಚಿತ್ರತಂಡ.

  • ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಪ್ರೀ ರಿಲೀಸ್ ಕನ್ನಡ ಇವೆಂಟ್ ಬೆಂಗಳೂರಿನಲ್ಲಿ ಮಾಡುವುದಾಗಿ ಈ ಹಿಂದೆ ಘೋಷಣೆ ಆಗಿತ್ತು. ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಇವೆಂಟ್ ಮಾಡುವ ಕುರಿತು ಚಿತ್ರತಂಡವೇ ಹೇಳಿತ್ತು. ಕೋವಿಡ್ ನಿಯಮ ಪಾಲನೆಯ ಕಾರಣದಿಂದಾಗಿ ಕಾರ್ಯಕ್ರಮ ಆಗಲಿಲ್ಲ. ಇದೀಗ ಅದೇ ಇವೆಂಟ್ ಬೆಂಗಳೂರಿನಿಂದ ಶಿಫ್ಟ್ ಆಗಿದೆ. ಮಾರ್ಚ್ 19ರಂದು ಸಿನಿಮಾದ ಪ್ರೀ ರಿಲೀಸ್ ಕನ್ನಡ ಇವೆಂಡ್ ಆಂಧ್ರದ ಗಡಿಭಾಗವಾದ ಚಿಕ್ಕ ಬಳ್ಳಾಪುರದಲ್ಲಿ ನಡೆಯಲಿದೆ. ಇದನ್ನೂ ಓದಿ : ದೌರ್ಜನ್ಯ ಖಂಡಿಸಿ, ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ

    ಬೆಂಗಳೂರಿನಲ್ಲಿ ಮಾಡಲು ಹೊರಟಿದ್ದ ಇವೆಂಟ್ ಅಲ್ಲಿಗೆ ಶಿಫ್ಟ್ ಆಗಲು ಕಾರಣ ಟ್ರಾಫಿಕ್ ಜಾಮ್ ಎನ್ನುತ್ತಿದೆ ಚಿತ್ರತಂಡ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ಹೋದರೆ, ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ತೊಂದರೆ ಆಗುತ್ತದೆ. ಹಾಗಾಗಿ ಚಿಕ್ಕ ಬಳ್ಳಾಪುರದಲ್ಲಿ ಮಾಡಲು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ

    ಕನ್ನಡ ಮತ್ತು ತೆಲುಗಿನ ಖ್ಯಾತ ಗಣ್ಯರೆಲ್ಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯ ಅತಿಥಿಯಾಗಿ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆಯಂತೆ. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೇ ಮೊದಲ ಬಾರಿಗೆ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಜೊತೆಯಾಗಿ ನಟಿಸಿದ್ದಾರೆ. ಇಬ್ಬರ ಫ್ಯಾನ್ಸ್ ಮಧ್ಯ ಆಗಾಗ್ಗೆ ಸ್ಟಾರ್ ವಾರ್ ನಡೆಯುತ್ತಿತ್ತು. ಹೀಗಾಗಿ ಇಬ್ಬರೂ ಅಭಿಮಾನಿಗಳು ಒಟ್ಟಿಗೆ ಸಿನಿಮಾ ನೋಡುವುದು ಇದೊಂದು ಸಿನಿಮಾದ ಐತಿಹಾಸಿಕ ದಾಖಲೆ ಎಂದು ಬಣ್ಣಿಸಲಾಗುತ್ತಿದೆ.

  • ಕನ್ನಡದಲ್ಲಿಯೇ ಧನ್ಯವಾದ ಅರ್ಪಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ರಾಜಮೌಳಿ

    ಕನ್ನಡದಲ್ಲಿಯೇ ಧನ್ಯವಾದ ಅರ್ಪಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ರಾಜಮೌಳಿ

    ಹೈದರಾಬಾದ್: ಬಾಹುಬಲಿ ಖ್ಯಾತಿಯ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿಯವರು ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ಹೆಸರುವಾಸಿ, ಸದಾ ವಿಭಿನ್ನ ಆಲೋಚನೆ ಉನ್ನತ ಮಟ್ಟದ ಸಿನಿಮಾ ಮಾಡುವ ಅವರ ತುಡಿತ ನಿಬ್ಬೆರಗಾಗುವಂತೆ ಮಾಡಿದೆ. ಇದೀಗ ಅವರ ಮುಂದಿನ ಆರ್‍ಆರ್‍ಆರ್ ಸಿನಿಮಾ ಸಹ ಸೆಟ್ಟೇರಿದ್ದು, ಈ ಸಿನಿಮಾ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

    ಎಸ್.ಎಸ್.ರಾಜಮೌಳಿ ಅವರ ಆರ್‍ಆರ್‍ಆರ್ ಸಿನಿಮಾ ಈಗಾಗಲೇ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ, ಕುತೂಹಲವನ್ನು ಹುಟ್ಟುಹಾಕಿದೆ. ಇದರ ಮಧ್ಯೆಯೇ ರಾಮ್ ಚರಣ್‍ತೇಜಾ ಅವರ ಹುಟ್ಟುಹಬ್ಬಕ್ಕೆ ‘ಕೊಮರಂ ಭೀಮ್’ ಟೀಸರ್ ಬಿಡುಗಡೆ ಮಾಡಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟೀಸರ್ ಕನ್ನಡದಲ್ಲಿಯೂ ಬಿಡುಗಡೆಯಾಗಿತ್ತು. ಇದಾದ ಬೆನ್ನಲ್ಲೇ ಈ ಕನ್ನಡ ಟೀಸರ್‍ಗೆ ಸ್ವತಃ ಜೂನಿಯರ್ ಎನ್‍ಟಿಆರ್ ತಾವೇ ಧ್ವನಿ ನೀಡಿದ್ದು ಎಂಬುದು ತಿಳಿಯಿತು. ಇದು ಕನ್ನಡಿಗರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟಿದೆ. ಈ ಮೂಲಕ ಚಿತ್ರ ತಂಡ ಸಹ ಕನ್ನಡದ ಮೇಲೆ ಎಷ್ಟು ಒಲವು ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಹೀಗಾಗಿ ಕನ್ನಡಿಗರು ಸಹ ಅಷ್ಟೇ ಪ್ರೀತಿಯನ್ನು ತೋರಿಸುತ್ತಿದ್ದಾರೆ.

    ನಿರ್ದೇಶಕ ರಾಜಮೌಳಿ ಮೂಲತಃ ಕನ್ನಡಿಗರು, ರಾಯಚೂರಿನ ಮಾನ್ವಿ ಅವರು ಎಂಬುದು ತಿಳಿದಿರುವ ವಿಚಾರ. ಹೀಗಾಗಿ ಅವರು ಕರ್ನಾಟಕ ಹಾಗೂ ಕನ್ನಡದ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ ಸಹ. ಹೀಗಾಗಿಯೇ ಇದೀಗ ಕನ್ನಡಿಗರಿಗೆ ಕನ್ನಡದಲ್ಲಿಯೇ ಧನ್ಯವಾದ ಹೇಳಿದ್ದಾರೆ. ನಟ ರಾಮ್ ಚರಣ್ ‘ಆರ್‍ಆರ್‍ಆರ್’ ಸಿನಿಮಾದಲ್ಲಿ ‘ಕೊಮರಂ ಭೀಮ್’ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಪಾತ್ರ ಯಾವ ರೀತಿ ಇರಲಿದೆ ಎಂಬ ಬಗ್ಗೆ ಸಣ್ಣ ಪರಿಚಯವನ್ನು ಈ ಟೀಸರ್ ನಲ್ಲಿ ನೀಡಲಾಗಿದೆ.

    ರಾಮ್ ಚರಣ್ ಅವರ ‘ಕೊಮರಂ ಭೀಮ್’ ಟೀಸರ್ ಭರ್ಜರಿ ಹಿಟ್ ಆಗಿದ್ದರಿಂದ ರಾಜಮೌಳಿ ಖುಷಿಯಾಗಿದ್ದಾರೆ. ಕನ್ನಡ ವರ್ಷನ್ ಟೀಸರ್‍ನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ‘ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ. ಇದನ್ನು ಕಂಡ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಎಲ್ಲ ಭಾಷೆಯ ಸಿನಿಪ್ರಿಯರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

    ಈ ಸಿನಿಮಾ ಕನ್ನಡ, ತೆಲುಗು, ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಂತೆಯೇ ರಾಮ್ ಚರಣ್ ಬರ್ತ್ ಡೇಗೆ ಬಿಡುಗಡೆಯಾದ ‘ಕೊಮರಂ ಭೀಮ್’ ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಆ ಟೀಸರ್‍ಗೆ ನಟ ಜೂ.ಎನ್‍ಟಿಆರ್ ಕನ್ನಡದಲ್ಲೇ ಧ್ವನಿ ನೀಡಿದ್ದು, ‘ಇವನ್ನ ಕಂಡರೆ ಕಾಡ್ಗಿಚ್ಚು ನಿಂತಿರುವಂಗೆ ಕಾಣ್ತದೆ, ಎದುರಿಗೆ ನಿಂತರೆ ಬರ ಸಿಡಿಲು ಮೇಲೆ ಬಿದ್ದಂಗಾಯ್ತದೆ, ಸಾವಿಗೆ ಕೂಡ ಬೆವರು ಸುರಿದಂಗಾಯ್ತದೆ….ಬಾಳಾಗಲಿ ಬಂದೂಕಾಗಲಿ ಅವನ ಮಾತೇ ಕೇಳ್ತದೆ….ಎಂಬ ಖಡಕ್ ಡೈಲಾಗ್ ಕನ್ನಡ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.

    ರಾಜಮೌಳಿಯವರ ಫೇಸ್ಬುಕ್ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಸಹ ನಿಮ್ಮ ಹೆಚ್ಚು ಅಭಿಮಾನಿಗಳಿದ್ದಾರೆ. ನೀವು ಭಾರತ ಸಿನಿಮಾ ರಂಗದ ಹೆಮ್ಮೆ. ಕನ್ನಡದಲ್ಲಿ ಡಬ್ ಮಾಡುತ್ತಿರುವುದಕ್ಕೆ ಧನ್ಯವಾದ, ವಿಯ್ ಆರ್ ಲವ್ ಯು ಸರ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, ಜೂನಿಯರ್ ಎನ್‍ಟಿಆರ್ ವಾಯ್ಸ್ ತುಂಬಾ ಚೆನ್ನಾಗಿದೆ. ಅವರ ಧ್ವನಿ ಕನ್ನಡಕ್ಕೆ ಹೊಂದಿಕೊಳ್ಳುತ್ತದೆ. ಅವರ ತಾಯಿ ಸಹ ಕುಂದಾಪುರದವರೆಂದು ಗೊತ್ತು. ಹೀಗಾಗಿ ಅವರಿಗೆ ಸೂಟ್ ಆಗುತ್ತಿದೆ. ನನಗೆ ಇಷ್ಟವಾಯಿತು ಎಂದು ತಿಳಿಸಿದ್ದಾರೆ. ಇನ್ನೂ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇನ್ನೂ ವಿಶೇಷ ಎಂಬಂತೆ ‘ಈಗ’ ಖ್ಯಾತಿಯ ನಿರ್ಮಾಪಕ ಹಾಗೂ ರಾಜಮೌಳಿಯ ಆಪ್ತ ಸಾಯಿ ಕೊರ್ರಪಟಿ ‘ಆರ್‍ಆರ್‍ಆರ್’ ಕನ್ನಡ ವರ್ಷನ್ ಅನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲಿದ್ದಾರಂತೆ.