Tag: RR Nagar Police Station

  • ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಬೆಂಗಳೂರು: ಮನೆ ಮಾರಾಟ ಪ್ರಕರಣದಲ್ಲಿ ಮಹಿಳೆ 50 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಸ್ಯಾಂಡಲ್‍ವುಡ್ ನಟ, ನಿರ್ದೇಶಕ ನಾಗಶೇಖರ್ ಅವರು  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಆರ್.ಆರ್.ನಗರದ ಜಯಣ್ಣ ಲೇಔಟ್‍ನಲ್ಲಿ ಮನೆ ಖರೀದಿಸಲು ನಾಗಶೇಖರ್ ಅವರು ಮುಂದಾಗಿದ್ದರು. ನಂತರ ಮನೆ ಖರೀದಿಗೆ ಮಾತುಕತೆ ನಡೆಸಿ ಮೀನಾ ಅವರಿಗೆ 2 ಕೋಟಿ 70 ಲಕ್ಷ ರೂಪಾಯಿಯನ್ನು ನೀಡಿದ್ದರು. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ

    nagashekar

    ಕಳೆದ 2020ರ ಆಗಸ್ಟ್‌ನಲ್ಲಿ ಮನೆ ಖರೀದಿ ಸಂಬಂಧ ಮೀನಾರ ಜೊತೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದ ನಾಗಶೇಖರ್ ಹಂತ ಹಂತವಾಗಿ ಮೀನಾ ಖಾತೆಗೆ 50 ಲಕ್ಷ ವರ್ಗಾಯಿಸಿದ್ದರು. ಆದರೆ ಸೇಲ್ ಅಗ್ರಿಮೆಂಟ್ ನಂತರ ಮೀನಾ ಅವರು ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿದ್ದಾರೆ. ಹೀಗಾಗಿ ಅಡ್ವಾನ್ಸ್ ಆಗಿ ಸೇಲ್ ಅಗ್ರಿಮೆಂಟ್ ವೇಳೆ ಪಡೆದಿದ್ದ 50 ಲಕ್ಷ ಹಣ ಹಿಂದಿರುಗಿಸುವಂತೆ ಮೀನಾ ಬಳಿ ಕೇಳಿದ್ದಾರೆ. ಇದನ್ನೂ ಓದಿ: ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಹೈಲೈಟ್ ಆಗಿರುತ್ತೆ: ಪ್ರಭಾಸ್

    nagashekar

    ಹಣ ಹಿಂದಿರುಗಿಸದೇ ಮೀನಾ ಸತಾಯಿಸಿದ ಕಾರಣ ಇದೀಗ ನಾಗಶೇಖರ್ ಅವರು ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಮೀನಾ ಹಾಗೂ ರಾಜ್ ಕುಮಾರ್ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೀನಾ ಪರಾರಿಯಾಗಿದ್ದು, ಇತ್ತ ದುಡ್ಡು ಇಲ್ಲದೇ ಮನೆಯೂ ಸಿಗದೇ ನಾಗಶೇಖರ್ ಕಂಗಾಲಾಗಿದ್ದಾರೆ.