Tag: RPF

  • ಆರ್‌ಪಿಎಫ್‌ನಲ್ಲಿ ಮಹಿಳೆಯರಿಗೆ 50% ಮೀಸಲಾತಿ: ಸಚಿವ ಪಿಯೂಶ್ ಗೋಯಲ್

    ಆರ್‌ಪಿಎಫ್‌ನಲ್ಲಿ ಮಹಿಳೆಯರಿಗೆ 50% ಮೀಸಲಾತಿ: ಸಚಿವ ಪಿಯೂಶ್ ಗೋಯಲ್

    ನವದೆಹಲಿ: ಭಾರತೀಯ ರೈಲ್ವೇಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ರೈಲ್ವೇ ಸುರಕ್ಷಾ ದಳ(ಆರ್‌ಪಿಎಫ್‌)ದ ಪರೀಕ್ಷೆಯಲ್ಲಿ 50% ಮಹಿಳೆಯರಿಗೆ ಮೀಸಲಾತಿ ನೀಡುವುದಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಪ್ರಕಟಿಸಿದ್ದಾರೆ.

    ಶನಿವಾರ ಮಹಿಳಾ ಸಿಬ್ಬಂದಿ ಉತ್ತರ ಪ್ರದೇಶದ ಅಜಂಗಢ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಹಸಿರು ನಿಶಾನೆ ತೋರಿಸಿದ ಒಂದು ದಿನದ ನಂತರ ಪಿಯೂಶ್ ಗೋಯಲ್ ಅವರಿಂದ ಈ ಘೋಷಣೆ ಪ್ರಕಟವಾಗಿದೆ.

    9500 -10000 ಆರ್‌ಪಿಎಫ್‌ ಹುದ್ದೆಗಳ ನೇಮಕಾತಿ ಮುಂದಿನ ದಿನಗಳಲ್ಲಿ ನಡೆಯಲಿದ್ದು ಮಹಿಳೆಯರಿಗೆ 50% ಮೀಸಲಾತಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

    ಇದರ ಜೊತೆಯಲ್ಲೇ ಶೀಘ್ರವೇ ರೈಲ್ವೇಗೆ 13 ಸಾವಿರ ಉದ್ಯೋಗಿಗಳ ನೇಮಕವಾಗಲಿದೆ. ಈ ಉದ್ಯೋಗಳ ಸಂಬಂಧ ಸಚಿವಾಲಯ ಯಾವುದೇ ಸಂದರ್ಶನವನ್ನು ನಡೆಸುವುದಿಲ್ಲ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಮಹಿಳಾ ಬೋಗಿಯಲ್ಲೇ ರೇಪ್‍ಗೆ ಯತ್ನ: ಆರ್ ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ರಕ್ಷಣೆ

    ಮಹಿಳಾ ಬೋಗಿಯಲ್ಲೇ ರೇಪ್‍ಗೆ ಯತ್ನ: ಆರ್ ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ರಕ್ಷಣೆ

    ಚೆನ್ನೈ: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯನ್ನು ರೈಲ್ವೇ ಭದ್ರತಾ ದಳ(ಆರ್ ಪಿಎಫ್) ಸಿಬ್ಬಂದಿಯೊಬ್ಬರು ರಕ್ಷಿಸಿರುವುದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಮಹಿಳೆಯನ್ನು ರಕ್ಷಿಸಿದವರು ಆರ್ ಪಿಎಫ್ ನ ಕಾನ್‍ಸ್ಟೇಬಲ್ ಕೆ.ಶಿವಾಜಿ ಆಗಿದ್ದು, ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಸತ್ಯರಾಜ್ (26) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 11.45 ಗಂಟೆಗೆ ಎಂಆರ್ ಟಿಎಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ರೈಲು ಪಾರ್ಕ್ ಟೌನ್‍ನಿಂದ ಚಲಿಸುತ್ತಿದ್ದಂತೆ ಮಹಿಳೆ ಕಿರುಚುತ್ತಿದ್ದ ಶಬ್ದವನ್ನು ಕೆ.ಶಿವಾಜಿ ಅವರು ಕೇಳಿಸಿಕೊಂಡಿದ್ದಾರೆ. ತಕ್ಷಣವೇ ಚಿಂತಿದ್ರೆಪ್ ನಿಲ್ದಾಣಕ್ಕೆ ರೈಲು ಬಂದು ನಿಲ್ಲುವಷ್ಟರಲ್ಲಿ ಅವರು ಮಹಿಳಾ ಬೋಗಿಗೆ ದೌಡಾಯಿಸಿದ್ದಾರೆ. ಈ ವೇಳೆ ರಕ್ತ ಸ್ರಾವವಾಗಿ ಮಹಿಳೆ ಬಿದ್ದಿದ್ದರು. ಕೂಡಲೇ ಅವರು ಮಹಿಳೆಯನ್ನು ರಕ್ಷಿಸಿದ್ದು, ಆರೋಪಿಯು ಮದ್ಯ ಸೇವನೆ ಮಾಡಿದ್ದ ಎಂದು ವರದಿಯಾಗಿದೆ.

    ಆರೋಪಿ ಸತ್ಯರಾಜ್ ಖಾಸಗಿ ಸಂಸ್ಥೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯು 25 ವರ್ಷದವರಾಗಿದ್ದು, ಮಹಿಳಾ ಮೀಸಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಬಡವರಾಗಿದ್ದು, ಕೆಲಸದಿಂದ ಮನೆಗೆ ಮರಳುತ್ತಿರುವ ವೇಳೆ ಈ ಘಟನೆ ನಡೆದಿದೆ.

    ನಾನು ಮಹಿಳೆಯರ ಮೀಸಲು ಬೋಗಿಯಲ್ಲಿ ಕುಳಿತ್ತಿದ್ದೆ. ಸ್ವಲ್ಪ ನಿದ್ರೆಗೆ ಜಾರಿದ್ದೆ. ನನ್ನ ಮುಂದೆ ವ್ಯಕ್ತಿ ಬಂದು ನಿಂತ. ತಕ್ಷಣವೇ ನಾನು ಕಿರಿಚಿದೆ. ಆತ ನನ್ನನ್ನು ಎಳೆದು ಕೆಳಗೆ ದೂಡಿದ. ಆಗ ನಾನು ಪ್ರಜ್ಞೆ ತಪ್ಪಿಬಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

    ಹಲ್ಲೆಗೆ ಒಳಗಾದ ಮಹಿಳೆಯಿಂದ ದೂರು ದಾಖಲಿಸಿಕೊಂಡಿದ್ದು, ಆರೋಪಿಯ ಬಂಧಿಸಲಾಗಿದೆ. ಮಹಿಳೆಯು ಕಿರುಚಿದ್ದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿದೆ ಎಂದು ರೈಲ್ವೆ ಪೊಲೀಸ್ ಜನರಲ್ ಇನ್ಸ್‍ಪೆಕ್ಟರ್ ಪೊನ್ ಮನಿಕಾವೆಲ್ ಹೇಳಿದ್ದಾರೆ. ಅಲ್ಲದೇ ಅವರು ಪೊಲೀಸ್ ಕಾನ್ಸ್‍ಸ್ಟೇಬಲ್ ಕೆ.ಶಿವಾಜಿ ಅವರ ಸಾಹಸ ಹಾಗೂ ಜಾಗೃತಿಯನ್ನು ಮೆಚ್ಚಿ 5 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

  • 2.97 ಕೋಟಿ ರೂ. ಮೌಲ್ಯದ ರೈಲ್ವೆ ವಸ್ತುಗಳು ಸಿಕ್ತು: ಕಳ್ಳರು ಜಾಸ್ತಿ ಕದಿಯೋದು ಏನು ಗೊತ್ತೆ?

    2.97 ಕೋಟಿ ರೂ. ಮೌಲ್ಯದ ರೈಲ್ವೆ ವಸ್ತುಗಳು ಸಿಕ್ತು: ಕಳ್ಳರು ಜಾಸ್ತಿ ಕದಿಯೋದು ಏನು ಗೊತ್ತೆ?

    ನವದೆಹಲಿ: 2017-2018ರ ಅವಧಿಯಲ್ಲಿ ಒಟ್ಟು 2.97 ಕೋಟಿ ರೂ. ಮೌಲ್ಯದ ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಭದ್ರತಾ ದಳ (ಆರ್ ಪಿಎಫ್) ತಿಳಿಸಿದೆ.

    2016-2017ರಲ್ಲಿ ಆರ್‍ಪಿಎಫ್ 5,219 ಪ್ರಕರಣ ದಾಖಲಿಸಿ 5,458 ಬಂಧಿಸಿ 1.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2017-2018ರಲ್ಲಿ ಈ ಸಂಖ್ಯೆ 5,239ಕ್ಕೆ ಏರಿಕೆಯಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ದ್ವಿಗುಣವಾಗಿದೆ.

    ಶೌಚಾಲಯದಲ್ಲಿ ಸರಪಳಿ ಹಾಕಿದ್ದ ಸ್ಟೀಲ್ ಮಗ್, ಬೆಡ್ ಮೇಲೆ ಹಾಕಿದ್ದ ಹಾಸಿಗೆ, ಸ್ನಾನದ ಕೊಣೆಯಲ್ಲಿನ ಶವರ್, ಕಿಟಕಿಯ ಸರಳುಗಳನ್ನು ರೈಲ್ವೆ ನಿಲ್ದಾಣದಲ್ಲಿ ಆರ್‍ಪಿಎಫ್ ವಶಪಡಿಸಿಕೊಂಡಿದೆ. ಸಾಮಾನ್ಯವಾಗಿ ಕಳ್ಳರು ಹಳಿ, ಸೂಚನಾ ಫಲಕ, ವಾಷ್ ಬೇಸಿನ್, ಕನ್ನಡಿ, ನಲ್ಲಿ, ಕೇಬಲ್, ಸೋಲಾರ್ ಪ್ಲ್ಯಾಂಟ್, ತುರ್ತು ಸಂಪರ್ಕ ಸಾಧನಗಳನ್ನು ಕಳವು ಮಾಡುತ್ತಾರೆ. ಅದರಲ್ಲೂ ಎಲೆಕ್ಟ್ರಿಕ್ ವಸ್ತುಗಳಾದ ಬ್ಯಾಟರಿ, ಎಲೆಕ್ಟ್ರಿಕ್ ಕೋಚ್ ಫ್ಯಾನ್, ಸ್ವಿಚ್ ಗಳನ್ನು ಹೆಚ್ಚು ಕಳವು ಮಾಡುತ್ತಿದ್ದರು. ಈ ವಸ್ತುಗಳು 1 ಲಕ್ಷ ಕಿ.ಮೀ. ಒಳಗಡೆಯೇ ದೊರೆತಿವೆ ಆರ್‍ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅನುಮಾನಾಸ್ಪದ ಪ್ರಯಾಣಿಕರನ್ನು ತಡೆದು ಪರಿಶೀಲನೆಗೆ ಒಳಪಡಿಸಲಾಗಿದ್ದು, ಅವರ ಬ್ಯಾಗ್‍ನಲ್ಲಿ ಸ್ಟೀಲ್ ಮಗ್, ಹಾಸಿಗೆ ಹಾಗೂ ಕಬ್ಬಿಣದ ವಸ್ತುಗಳು ದೊರೆತಿವೆ. ಸಿಕ್ಕುಬಿದ್ದ ಆರೋಪಿಗಳಲ್ಲಿ ಹೆಚ್ಚಾಗಿ ವ್ಯಸನಕ್ಕೆ ಒಳಗಾದವರು. ಕಳ್ಳತನ ಎಸಗಿದ ಬಳಿಕ ಆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಆರೋಪಿಗಳನ್ನು ರೈಲ್ವೇ ಕಾಯ್ದೆ ಅಡಿ ಬಂಧಿಸಲಾಗಿದೆ.

    ಆರ್ ಪಿಎಫ್ ಗೆ ಒಟ್ಟು 74,456 ಜನ ಸಿಬ್ಬಂದಿಯ ಅವಶ್ಯವಿದೆ. ಆದರೆ, ಸದ್ಯ ಕೇವಲ 67,000 ಜನ ಸಿಬ್ಬಂದಿ ಇದ್ದಾರೆ. ಅವರಲ್ಲಿ ಕೆಲವರನ್ನು ಪೊಲೀಸ್ ಠಾಣೆಯಲ್ಲಿ ನಿಯೋಜನೆ ಮಾಡಲಾಗಿದೆ. ಹೀಗಾಗಿ ಕಳ್ಳರನ್ನು ಬಂಧಿಸಲು ಸಿಬ್ಬಂದಿಯ ಕೊರತೆ ಎದುರಾಗಿದೆ ಎಂದು ವರದಿಯಾಗಿದೆ.

  • ವಿಡಿಯೋ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ಮಹಿಳೆ- ಆರ್‍ಪಿಎಫ್ ಸಿಬ್ಬಂದಿಯಿಂದ ರಕ್ಷಣೆ

    ವಿಡಿಯೋ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ಮಹಿಳೆ- ಆರ್‍ಪಿಎಫ್ ಸಿಬ್ಬಂದಿಯಿಂದ ರಕ್ಷಣೆ

    ಮುಂಬೈ: ಚಲಿಸುತ್ತಿದ್ದ ರೈಲು ಏರಲು ಮುಂದಾಗಿ ಆಕಸ್ಮಿಕವಾಗಿ ಕೆಳಗೆ ಬಿದ್ದ ಮಹಿಳೆಯನ್ನ ಆರ್‍ಪಿಎಫ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಬುಧವಾರದಂದು ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಂಬರ್ 4ರಲ್ಲಿ ಈ ಘಟನೆ ನಡೆದಿದೆ. ಮಹಿಳೆ ಚಲಿಸುತ್ತಿದ್ದ ರೈಲು ಏರಲು ಯತ್ನಿಸಿದಾಗ ಕೆಳಗೆ ಬಿದ್ದಿದ್ದರು. ಟ್ರ್ಯಾಕ್ ಮೇಲೆ ಮಹಿಳೆ ಬೀಳುವಷ್ಟರಲ್ಲಿ ಅಲ್ಲೇ ಇದ್ದ ಆರ್‍ಪಿಎಫ್(ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಸಿಬ್ಬಂದಿ ಕೂಡಲೇ ಧಾವಿಸಿ ಮಹಿಳೆಯನ್ನ ರಕ್ಷಿಸಿದ್ದಾರೆ.

     

    ಪ್ಲಾಟ್‍ಫಾರ್ಮ್ ನಲ್ಲಿದ್ದ ಇತರೆ ಕೆಲವರೊಂದಿಗೆ ಸೇರಿ ಮಹಿಳೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲಾ ದೃಶ್ಯ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.