Tag: RPF

  • ರೈಲಿನಲ್ಲಿ ನಾಲ್ವರಿಗೆ ಶೂಟೌಟ್ ಮಾಡಿದ್ದ ಅಧಿಕಾರಿ ಸೇವೆಯಿಂದ ವಜಾ

    ರೈಲಿನಲ್ಲಿ ನಾಲ್ವರಿಗೆ ಶೂಟೌಟ್ ಮಾಡಿದ್ದ ಅಧಿಕಾರಿ ಸೇವೆಯಿಂದ ವಜಾ

    ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರಿಗೆ ಗುಂಡಿಕ್ಕಿದ್ದ ರೈಲ್ವೆ ಪೊಲಿಸ್ ಪಡೆ(RPF) ಕಾನ್ಸ್ ಟೆಬಲ್ ಚೇತನ್ ಸಿಂಗ್ ಚೌಧರಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.

    ಜೈಪುರ-ಮುಂಬೈ (Jaipur- Mumbai) ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಜುಲೈ 31ರಂದು ಈ ಘಟನೆ ನಡೆದಿತ್ತು. ಇದೀಗ ಮುಂಬೈ ಕೇಂದ್ರದ ಆರ್ ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಆಗಸ್ಟ್ 14ರಂದು ಚೌಧರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಜುಲೈ 31ರಂದು ಮೂವರು ಪ್ರಯಾಣಿಕರಾದ ಅಬ್ದುಲ್ ಖಾದರ್, ಮುಹಮ್ಮದ್ ಹುಸೇನ್ ಭನ್ಪುರವಾಲ, ಸಯ್ಯದ್ ಸೈಫುದ್ದೀನ್ ಹಾಗೂ ಅಸ್ಗರ್ ಅಬ್ಬಾಸ್ ಶೇಖ್ ಅವರು ರೈಲಿನ ವಿವಿಧ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರೋಪಿ ಚೌಧರಿ ರೈಲಿನಲ್ಲಿ ಫೈರಿಂಗ್ ಮಾಡಿದ್ದನು. ಅಲ್ಲದೆ ರೈಲಿನ ಪ್ಯಾಂಟ್ರಿ ಕಾರ್ ಬಳಿ ತೆರಳಿ ಮತ್ತೊಬ್ಬ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಎಸ್ 6 ಕೋಚ್‍ಗೆ ತೆರಳಿ ಮತ್ತೊಬ್ಬ ಪ್ರಯಾಣಿಕನ ಮೇಲೆ ಗುಂಡು ಹಾರಿಸಿದ್ದನು. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಪೇದೆ

    ಹತ್ಯೆ ಮಾಡಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಮೇಲಧಿಕಾರಿ ಎಎಸ್‍ಐ ಟಿಕಾರಾಂ ಮೀನಾ ಮತ್ತು ಇತರ ಮೂವರು ಪ್ರಯಾಣಿಕರನ್ನು ಆರೋಪಿ ಚೌಧರಿ ಗುಂಡಿಕ್ಕಿ ಕೊಂದಿದ್ದು ಹೇಗೆ ಎಂಬುದರ ಕುರಿತು ನ್ಯಾಯಾಲಯದ ಅವಲೋಕನದ ನಂತರ ಆರ್‍ಪಿಎಫ್ ಇಲಾಖೆಯಿಂದ ಈ ನಿರ್ಧಾರವು ಬಂದಿದೆ. ಪ್ರಸ್ತುತ ಆರೋಪಿ ಚೌಧರಿ ಜೈಲಿನಲ್ಲಿ ಮತ್ತು ನ್ಯಾಯಾಂಗ ಬಂಧನದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಪೇದೆ

    ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಪೇದೆ

    ಜೈಪುರ: ಮಹಾರಾಷ್ಟ್ರದ (Maharashtra0 ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಎಕ್ಸ್‌ಪ್ರೆಸ್ (Jaipur-Mumbai Express) ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಪೇದೆ ಗುಂಡು (Bullet) ಹಾರಿಸಿದ್ದು, ಆರ್‌ಪಿಎಫ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.

    ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಜೈಪುರದಿಂದ ಮುಂಬೈಗೆ ರೈಲು ಚಲಿಸುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಪೇದೆ ಸಬ್ ಇನ್ಸ್ಪೆಕ್ಟರ್ ಜೊತೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದಾನೆ. ಈ ವೇಳೆ ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ಅವರಿಬ್ಬರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೇದೆ ಕೋಪಗೊಂಡು ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ:‌ ಮೂವರಿಂದ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ – ಆರೋಪಿಗಳು ಅರೆಸ್ಟ್

    ಆರೋಪಿ ಆರ್‌ಪಿಎಫ್ ಪೇದೆಯನ್ನು ಚೇತನ್ ಸಿಂಗ್ ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ರೈಲಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆಗೈದ ಪಾಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲನ್ನು ಗಮನಿಸದೇ ಪ್ಲಾಟ್‍ಫಾರ್ಮ್‍ನಿಂದ ಹಳಿಗೆ ಇಳಿದ ವೃದ್ಧ – ಆರ್‌ಪಿಎಫ್ ಸಿಬ್ಬಂದಿಯಿಂದ ರಕ್ಷಣೆ

    ರೈಲನ್ನು ಗಮನಿಸದೇ ಪ್ಲಾಟ್‍ಫಾರ್ಮ್‍ನಿಂದ ಹಳಿಗೆ ಇಳಿದ ವೃದ್ಧ – ಆರ್‌ಪಿಎಫ್ ಸಿಬ್ಬಂದಿಯಿಂದ ರಕ್ಷಣೆ

    ದಾವಣಗೆರೆ: ರೈಲು (Train) ಬರುವುದನ್ನು ಗಮನಿಸದೇ ಹಳಿ ದಾಟಲು ಹೋದ ವೃದ್ಧನನ್ನು ಆರ್‌ಪಿಎಫ್ (RPF) ಸಿಬ್ಬಂದಿ ರಕ್ಷಿಸಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

    ರೈಲ್ವೇ ಪ್ಲಾಟ್‍ಫಾರ್ಮ್‍ನಿಂದ ವೃದ್ಧ ಕೆಳಗಿಳಿದಿದ್ದಾನೆ. ಈ ವೇಳೆ ರೈಲು ಸಮೀಪಕ್ಕೆ ಬಂದಿದೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಪಿಸ್ತೂಲ್ ತೋರಿಸಿ ಉದ್ಯಮಿಗೆ ಬೆದರಿಕೆ – 50 ಲಕ್ಷ ರೂ. ದರೋಡೆ

    ರಂಗಪ್ಪ ಎಂಬ ವೃದ್ಧ ಹಳಿ ದಾಟುವ ವೇಳೆ ಅದೇ ಮಾರ್ಗದಲ್ಲಿ ರೈಲು ಬಂದಿದೆ. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಆರ್‌ಪಿಎಫ್ ಕಾನ್ಸ್‌ಟೇಬಲ್ ಶಿವಾನಂದ ವೃದ್ಧನನ್ನು ಕಾಪಾಡಿದ್ದಾರೆ. ಕೊಚವಲ್ಲಿ – ಹುಬ್ಬಳ್ಳಿ ಎಕ್ಸ್‌ಪ್ರೆಸ್ ಟ್ರೈನ್ ಇದಾಗಿದ್ದು, ಕೊಚವಲ್ಲಿಯಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆ ರೈಲು ನಿಲ್ದಾಣಕ್ಕೆ ಆಗಮಿಸುವ ವೇಳೆ ಈ ಘಟನೆ ನಡೆದಿದೆ.

    ಕಾನ್ಸ್‌ಟೇಬಲ್ ಶಿವಾನಂದ ಅವರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಜೈನ ಧರ್ಮ ಸಂಪ್ರದಾಯದಂತೆ ಜೈನಮುನಿ ಅಂತ್ಯಸಂಸ್ಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ

    ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ

    ದಾವಣಗೆರೆ: ವಂದೇ ಭಾರತ್ (Vande Bharat) ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷದ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ದಾವಣಗೆರೆಯಲ್ಲಿ (Davanagere) ವಶಕ್ಕೆ ಪಡೆದಿದ್ದಾರೆ.

    ವಂದೇ ಭಾರತ್ ರೈಲು ಧಾರವಾಡದಿಂದ (Dharwad) ದಾವಣಗೆರೆಗೆ ಆಗಮಿಸುತ್ತಿದ್ದ ಸಂದರ್ಭ ಇಬ್ಬರು ಮಕ್ಕಳು ರೈಲಿಗೆ ಕಲ್ಲು ಹೊಡೆದಿದ್ದು, ಕಲ್ಲಿನ ಹೊಡೆತಕ್ಕೆ ರೈಲಿನ ಕಿಟಕಿ ಗಾಜು ಬಿರುಕು ಬಿಟ್ಟಿತ್ತು. ಈ ಹಿನ್ನೆಲೆ ಇಬ್ಬರು ಮಕ್ಕಳನ್ನು ಆರ್‌ಪಿಎಫ್ (RPF) ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಎದುರೇ ಎಸ್‌ಎಸ್‌ಎಲ್‌ಸಿ ಹುಡುಗರ ಫೈಟ್ – ಎಸ್‌ಐ ಮೂಗಿಗೆ ಗಾಯ

    ಇವರಿಬ್ಬರು ದಾವಣಗೆರೆಯ ಎಸ್‌ಎಸ್ ನಗರ ಹಾಗೂ ಭಾಷಾ ನಗರದವರಾಗಿದ್ದು, ದಾವಣಗೆರೆ ರೈಲ್ವೆ ಪೊಲೀಸರು ಹಾಗೂ ಆರ್‌ಪಿಎಫ್ ಪೊಲೀಸರ ನೇತೃತ್ವದಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆದು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ನ್ಯಾಯಬೆಲೆ ಅಂಗಡಿ ಬಂದ್

    ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ಈ ವಂದೇ ಭಾರತ್ ರೈಲನ್ನು ಲೋಕಾರ್ಪಣೆಗೊಳಿಸಿದ್ದರು. ಜುಲೈ 1ರ ಶನಿವಾರ 3:30ಕ್ಕೆ ಇಬ್ಬರು ಮಕ್ಕಳು ಈ ಕೃತ್ಯವೆಸಗಿದ್ದಾರೆ. ಘಟನೆಯ ಹಿನ್ನೆಲೆ ಆರ್‌ಪಿಎಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜಿಸಿ ವಿಕೃತಿ- ದುಷ್ಕರ್ಮಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲು ನಿಲ್ದಾಣದಲ್ಲಿ ಪ್ರಸಾರವಾದ `ಬ್ಲೂ ಫಿಲ್ಮ್’ ನನ್ನದೇ ಎಂದ ಪೋರ್ನ್ ಸ್ಟಾರ್

    ರೈಲು ನಿಲ್ದಾಣದಲ್ಲಿ ಪ್ರಸಾರವಾದ `ಬ್ಲೂ ಫಿಲ್ಮ್’ ನನ್ನದೇ ಎಂದ ಪೋರ್ನ್ ಸ್ಟಾರ್

    ಪಾಟ್ನಾ: ಇಲ್ಲಿನ ರೈಲು ನಿಲ್ದಾಣದ (Patna Railway Station) ಟಿವಿ ಪರದೆಯ (TV Screens) ಮೇಲೆ `ನೀಲಿ ಚಿತ್ರ’ ಪ್ರಸಾರವಾಗಿರುವುದು ಘಟನೆ ಬೆಳಕಿಗೆ ಬಂದಿತ್ತು.

    ಭಾನುವಾರ ಸುಮಾರು 3 ನಿಮಿಷಯಗಳ ಕಾಲ ನೀಲಿಚಿತ್ರ ಪ್ರಸಾರವಾಗಿದ್ದು, ಪ್ರಯಾಣಿಕರು ತಬ್ಬಿಬ್ಬಾಗಿದ್ದರು. ರೈಲ್ವೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳಾ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿತ್ತು. ಇದನ್ನೂ ಓದಿ: ದೆಹಲಿ ಹೊಸ ಮದ್ಯ ನೀತಿ ಹಗರಣ – ಕೆ. ಕವಿತಾ ಮೊಬೈಲ್ ವಶಕ್ಕೆ ಪಡೆದ ಇಡಿ

    ಟಿವಿ ಪರದೆಯ ಮೇಲೆ ವೀಡಿಯೋ ಪ್ರಸಾರದ ದೃಶ್ಯವನ್ನು ಕೆಲವರು ವೀಡಿಯೋ ಮಾಡಿ, ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ನೆಟ್ಟಿಗನೊಬ್ಬ ಇದು ನಿಮ್ಮ ವೀಡಿಯೋ, ನಿಮಗೆ ತಿಳಿದಿದೆಯೇ? ಎಂದು ಪೋರ್ನ್ ಸ್ಟಾರ್ ಕೇಂದ್ರ ಲಸ್ಟ್ಗೆ ಟ್ಯಾಗ್ ಮಾಡಿದ್ದಾನೆ. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಲಸ್ಟ್ ಹೌದು.. ಅದು ನನ್ನದೇ ಎಂದು ಭಾವಿಸುತ್ತೇನೆ’ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾಳೆ.

    ಅಲ್ಲದೇ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಂಡಿಯಾ ಎಂದು ಟೈಪ್ ಮಾಡಿದ್ದು ಹಾಟ್ ರಾಷ್ಟ್ರಧ್ವಜದ ಸಿಂಬಲ್ ಹಾಗೂ ಬಿಹಾರ್ ರೈಲ್ವೆಸ್ಟೇಷನ್ ಹ್ಯಾಶ್‌ಟ್ಯಾಗ್‌ನೊಂದಿಗೆ (#BiharRailwayStation) ತನ್ನ ಹಾಟ್‌ಫೋಟೋವನ್ನ ಹಂಚಿಕೊಂಡಿದ್ದಾಳೆ. ಈ ಚಿತ್ರ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: ನಟಿ ಕಿರಣ್ ಖೇರ್ ಗೆ ಕೋವಿಡ್ : ಆತಂಕದಲ್ಲಿ ಬಾಲಿವುಡ್

    ಏನಿದು ಘಟನೆ?
    ಮಾರ್ಚ್ 19ರ ಸಂಜೆ ಜನನಿಬಿಡವಾಗಿದ್ದ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಂಬರ್ 10ರಲ್ಲಿ ಬ್ಲೂ ಫಿಲ್ಮ್ ಪ್ರಸಾರ ಆಗಿದ್ದು, ಈ ಸಂಬಂಧ ಖಾಸಗಿ ಸಂಸ್ಥೆ ವಿರುದ್ದ ಎಫ್‌ಐಆರ್ ದಾಖಲಾಗಿದೆ.

    ಈ ರೀತಿ ವಿಡಿಯೋ ಪ್ಲೇ ಆದ ಕೂಡಲೇ ಗೊಂದಲಕ್ಕೆ ಒಳಗಾದ ಪ್ರಯಾಣಿಕರು ಕೂಡಲೇ ರೈಲ್ವೆ ಅಧಿಕಾರಿಗಳನ್ನ ಸಂಪರ್ಕಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀರು, ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ತಪಾಸಣೆ ಆರಂಭಿಸಿದ್ದರು. ಇಷ್ಟಾಗುವ ವೇಳೆಗೆ 3 ನಿಮಿಷಗಳ ಕಾಲ ಪ್ಲೇ ಆದ ಪೋರ್ನ್ ವೀಡಿಯೋ ನಂತರ ಬಂದ್ ಆಯಿತು. ಬಳಿಕ ಎಂದಿನಂತೆ ರೈಲುಗಳ ಆಗಮನ, ನಿರ್ಗಮನ ಮಾಹಿತಿ ಪ್ರಸಾರವಾಯಿತು.

    ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು, ಕೋಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಟಿವಿಗಳ ನಿರ್ವಹಣೆ ಗುತ್ತಿಗೆ ನೀಡಿರೋದನ್ನು ಖಚಿತಪಡಿಸಿಕೊಂಡು ಆ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ. ಖಾಸಗಿ ಏಜೆನ್ಸಿಯ ಹಲವರನ್ನು ವಶಕ್ಕೆ ಪಡೆದಿದ್ದು, ಆ ಸಮಯದಲ್ಲಿ ಇದ್ದ ಟಿವಿ ಆಪರೇಟರ್‌ಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಾ ಎಡವಟ್ಟು; ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ – ತಬ್ಬಿಬ್ಬಾದ ಜನ!

    ಮಹಾ ಎಡವಟ್ಟು; ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್‌ʼ ಪ್ರದರ್ಶನ – ತಬ್ಬಿಬ್ಬಾದ ಜನ!

    ಪಾಟ್ನಾ:‌ ಬಸ್‌ ಹಾಗೂ ರೈಲು ನಿಲ್ದಾಣಗಳಲ್ಲಿ ಮಾಹಿತಿ ಪ್ರಸಾರ ಮಾಡುವ ಉದ್ದೇಶದಿಂದ ಟಿವಿ‌ ಸ್ಕ್ರೀನ್‌ಗಳನ್ನ ಅಳವಡಿಸಿರುತ್ತಾರೆ. ಹಾಗೆಯೇ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ (Patna Railway Station) ಪ್ರಯಾಣಿಕರಿಗೆ ರೈಲು ಸಂಚಾರದ ಮಾಹಿತಿ ನೀಡುವ ಉದ್ದೇಶದಿಂದ ಹಾಕಿದ್ದ ಟಿವಿ ಪರದೆಯ (TV Screens) ಮೇಲೆ ʻನೀಲಿ ಚಿತ್ರʼ ಪ್ರಸಾರವಾಗಿರುವುದು ಕಂಡುಬಂದಿದೆ.

    ಸುಮಾರು 3 ನಿಮಿಷಯಗಳ ಕಾಲ ನೀಲಿಚಿತ್ರ ಪ್ರಸಾರವಾಗಿದ್ದು, ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ರೈಲ್ವೆ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಹಿಳಾ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿದೆ. ಕೆಲವರು ಇದನ್ನು ವೀಡಿಯೋ ಮಾಡಿಕೊಂಡಿದ್ದು, ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಏನಿದು ಘಟನೆ?
    ರೈಲ್ವೆ ಇಲಾಖೆಯು ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಟಿವಿಗಳ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದೆ. ಈ ಸಂಸ್ಥೆಯ ಸಿಬ್ಬಂದಿ ಎಡವಟ್ಟಿನಿಂದ ನೀಲಿ ಚಿತ್ರ ಪ್ರದರ್ಶನವಾಗಿದೆ. ಭಾನುವಾರ ಸಂಜೆ ಜನನಿಬಿಡವಾಗಿದ್ದ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್‌ ನಂಬರ್ 10ರಲ್ಲಿ ಬ್ಲೂ ಫಿಲ್ಮ್ ಪ್ರಸಾರ ಆಗಿದ್ದು, ಈ ಸಂಬಂಧ ಖಾಸಗಿ ಸಂಸ್ಥೆ ವಿರುದ್ದ ಎಫ್‌ಐಆರ್ ದಾಖಲಾಗಿದೆ.

    ಈ ರೀತಿ ವಿಡಿಯೋ ಪ್ಲೇ ಆದ ಕೂಡಲೇ ಗೊಂದಲಕ್ಕೆ ಒಳಗಾದ ಪ್ರಯಾಣಿಕರು ಕೂಡಲೇ ರೈಲ್ವೆ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸ್ ಅಧಿಕಾರಿಗಳು (RPF) ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ತಪಾಸಣೆ ಆರಂಭಿಸಿದ್ದಾರೆ. ಇಷ್ಟಾಗುವ ವೇಳೆಗೆ 3 ನಿಮಿಷಗಳ ಕಾಲ ಪ್ಲೇ ಆದ ಪೋರ್ನ್ ವೀಡಿಯೋ ನಂತರ ಬಂದ್ ಆಯಿತು. ಬಳಿಕ ಎಂದಿನಂತೆ ರೈಲುಗಳ ಆಗಮನ, ನಿರ್ಗಮನ ಮಾಹಿತಿ ಪ್ರಸಾರವಾಯಿತು. ಇದನ್ನೂ ಓದಿ: ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಈ ಕುರಿತಾಗಿ ತನಿಖೆ ನಡೆಸಿದ ಪೊಲೀಸರು, ಕೋಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಟಿವಿಗಳ ನಿರ್ವಹಣೆ ಗುತ್ತಿಗೆ ನೀಡಿರೋದನ್ನು ಖಚಿತಪಡಿಸಿಕೊಂಡು ಆ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ರೈಲ್ವೆ ಇಲಾಖೆಯು ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ. ಖಾಸಗಿ ಏಜೆನ್ಸಿಯ ಹಲವರನ್ನು ವಶಕ್ಕೆ ಪಡೆದಿದ್ದು, ಆ ಸಮಯದಲ್ಲಿ ಇದ್ದ ಟಿವಿ ಆಪರೇಟರ್‌ಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಯಾರನ್ನೂ ಹಳಿ ದಾಟಲು ಬಿಡಲ್ಲ – ರೈಲ್ವೇ ನಿಲ್ದಾಣದಲ್ಲಿ ಶ್ವಾನ ಪಾಲಕ

    ಯಾರನ್ನೂ ಹಳಿ ದಾಟಲು ಬಿಡಲ್ಲ – ರೈಲ್ವೇ ನಿಲ್ದಾಣದಲ್ಲಿ ಶ್ವಾನ ಪಾಲಕ

    ಚೆನ್ನೈ: ಬುದ್ಧಿವಂತ ಪ್ರಾಣಿ ಎಂದು ಹೆಸರು ಪಡೆದಿರುವ ನಾಯಿಯೊಂದು ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಪಾಲಕನಂತೆ ಕೆಲಸ ಮಾಡುತ್ತಿದೆ. ಪ್ರಯಾಣಿಕರು ರೈಲಿನ ಹಳಿಗಳನ್ನು ದಾಟದಂತೆ, ರೈಲಿನ ಫುಟ್ ಬೋರ್ಡಿನಲ್ಲಿ ನಿಂತು ಪ್ರಯಾಣಿಸದಂತೆ ಎಚ್ಚರಿಕೆ ವಹಿಸುತ್ತಿದೆ.

    ಈ ಶ್ವಾನಕ್ಕೆ ಅಲ್ಲಿನ ರೈಲ್ವೇ ಸಿಬ್ಬಂದಿ ಚಿನ್ನಪೋನು ಎಂದು ಹೆಸರಿಟ್ಟಿದ್ದಾರೆ. ಈ ನಾಯಿಯನ್ನು ಎರಡು ವರ್ಷದ ಹಿಂದೆ ಯಾರೋ ತಂದು ಚೆನ್ನೈನ ಪಾರ್ಕ್ ಟೌನ್ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಈ ನಾಯಿ ರೈಲ್ವೇ ನಿಲ್ದಾಣದಲ್ಲೇ ವಾಸವಾಗಿದೆ.

    ಪಾರ್ಕ್ ಟೌನ್ ರೈಲ್ವೇ ನಿಲ್ದಾಣದಲ್ಲಿ ದಿನ ಪ್ರಯಾಣ ಮಾಡುವವರಿಗೆ ಚಿನ್ನಪೋನು ಬಹಳ ಅಚ್ಚುಮೆಚ್ಚಾಗಿದ್ದು, ನಾಯಿ ಸೂಕ್ಷ್ಮತೆ ಮತ್ತು ಆದರ ಕಾರ್ಯವೈಖರಿ ಕಂಡು ಜನರು ಬೆರಗಾಗಿದ್ದಾರೆ. ಯಾರಾದರು ಈ ನಾಯಿಯ ಮುಂದೆ ರೈಲ್ವೇ ಹಳಿಯನ್ನು ದಾಟಿದರೆ ಅವರನ್ನು ಕಂಡು ಬೊಗಳುವ ನಾಯಿ ಅವರನ್ನು ಹಳಿ ದಾಟಲು ಬಿಡುವುದಿಲ್ಲ. ಹಾಗೆಯೇ ಯಾರದರೂ ಪ್ರಯಾಣಿಕರು ರೈಲಿನ ಫುಟ್ ಬೋರ್ಡ್ ಮೇಲೆ ನಿಂತುಕೊಂಡು ಪ್ರಯಾಣಿಸಿದರೆ ಅವರನ್ನು ನೊಡಿ ಬೊಗಳಿ ಅವರನ್ನು ಒಳಗೆ ಹೋಗುವಂತೆ ಸೂಚಿಸುತ್ತದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸ್ಥಳೀಯರೊಬ್ಬರು, ಚಿನ್ನಪೋನು ಸುಮಾರು ಎರಡು ವರ್ಷದ ಹಿಂದಿನಿಂದಲೂ ಇಲ್ಲೇ ಇದೆ. ಇದನ್ನು ಯಾರೋ ತಂದು ಇಲ್ಲಿ ಬಿಟ್ಟು ಹೋಗಿದ್ದರು. ಅಂದಿನಿಂದ ಈ ನಾಯಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್.ಪಿ.ಎಫ್) ಸಿಬ್ಬಂದಿಯೊಂದಿಗೆ ಇತ್ತು. ಹಾಗಾಗಿ ಅವರು ಮಾಡುವ ರೀತಿಯಲ್ಲೇ ಇದು ಕೂಡ ಕೆಲಸ ಮಾಡುತ್ತದೆ. ಪ್ರಯಾಣಿಕರನ್ನು ರೈಲ್ವೇ ಹಳಿ ದಾಟಲು ಬಿಡುವುದಿಲ್ಲ. ರೈಲು ಚಲಿಸುವಾಗ ಹತ್ತಿರಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಈ ನಾಯಿ ಆರ್.ಪಿ.ಎಫ್ ಸಿಬ್ಬಂದಿಯ ರೀತಿಯಲ್ಲೇ ದಿನಲು ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವುದನ್ನು ಸ್ಥಳಿಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರತದ ರೈಲ್ವೇ ಇಲಾಖೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಎರಡು ವರ್ಷದಿಂದ ರೈಲ್ವೇ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿರುವ ನಾಯಿಗೆ ಧನ್ಯವಾದಗಳು ಎಂದು ಬರೆದುಕೊಂಡಿದೆ.

  • ರೈಲ್ವೆ ಹಳಿ ದಾಟುವವರನ್ನು ಹೊತ್ತೊಯ್ಯುವ ಯಮರಾಜ

    ರೈಲ್ವೆ ಹಳಿ ದಾಟುವವರನ್ನು ಹೊತ್ತೊಯ್ಯುವ ಯಮರಾಜ

    -ಪಶ್ಚಿಮ ರೈಲ್ವೆ, ಆರ್‌ಪಿಎಫ್‌ನ ಹೊಸ ಪ್ಲಾನ್

    ಮುಂಬೈ: ರೈಲು ಬರುತ್ತಿರುವುದನ್ನು ಗಮನಿಸದೆ ಬೇಕಾಬಿಟ್ಟಿ ರೈಲ್ವೆ ಹಳಿಗಳ ಮೇಲೆ ಓಡಾಡುವುದು, ಹಳಿ ದಾಟುವವರ ಮುಂದೆ ಯಮರಾಜ ಪ್ರತ್ಯಕ್ಷವಾಗಿ ಅವರನ್ನು ಹೊತ್ತೊಯ್ಯುತ್ತಿರುವ ವಿಡಿಯೋ, ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಇದೇನಪ್ಪಾ ಯಮರಾಜ ಎಲ್ಲಿಂದ ಪ್ರತ್ಯಕ್ಷನಾಗ್ತಾನೆ? ಏನಿದು ಹೊಸ ಕಥೆ ಎಂದು ಹತ್ತಾರು ಪ್ರಶ್ನೆ ಕಾಡುತ್ತದೆ. ಆದರೆ ಈ ಯಮರಾಜ ನಿಮ್ಮ ಜೀವ ತೆಗೆಯುವುದಿಲ್ಲ, ಬದಲಿಗೆ ನಿಮ್ಮ ಜೀವ ಉಳಿಸುತ್ತಾನೆ. ಹೌದು. ಮುಂಬೈನಲ್ಲಿ ರೈಲ್ವೆ ಹಳಿ ದಾಟುವವರ ಮುಂದೆ ಯಮರಾಜ ಬಂದು ಅವರನ್ನು ಹೊತ್ತೊಯ್ದು, ಹಳಿಯಿಂದ ಬದಿಗೆ ತಂದು ಬಿಡುತ್ತಾನೆ. ಅಸಲಿಗೆ ಈ ಯಮರಾಜ ಹೀಗೆ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯಕ್ಷವಾಗಲು ಕಾರಣ ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್‌ ಇಲಾಖೆ. ಇದನ್ನೂ ಓದಿ:ಹಳಿ ದಾಟಲು ಹೋಗಿ ರೈಲಿನ ಅಡಿ ಸಿಲುಕಿದ್ದ ಅಜ್ಜಿ ಪವಾಡ ರೀತಿ ಬಚಾವ್

    ರೈಲ್ವೆ ಹಳಿಗಳನ್ನು ಸಾರ್ವಜನಿಕರು ಬೇಕಾಬಿಟ್ಟಿ ದಾಟುವಂತಿಲ್ಲ. ಅದರಲ್ಲೂ ರೈಲು ಬರುತ್ತಿದೆ ಎಂದರೆ ರೈಲ್ವೆ ಸಿಗ್ನಲ್ ದಾಟುವಂತಿಲ್ಲ. ಆದರೂ ಸಾರ್ವಜನಿಕರು, ಪ್ರಯಾಣಿಕರು ರೈಲ್ವೆ ಹಳಿ ದಾಟಲು ಹೋಗಿ ರೈಲಿಗೆ ಸಿಕ್ಕಿ ಸಾವನ್ನಪ್ಪುವ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗಂತೂ ಈ ರೀತಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರಯಾಣಿಕರು, ಸಾರ್ವಜನಿಕರ ಜೀವ ಉಳಿಸಲು ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್‌ ಇಲಾಖೆ ಯಮರಾಜನ ಹೊಸ ಪ್ಲಾನ್ ಮಾಡಿದ್ದಾರೆ.

    ರೈಲ್ವೆ ಹಳಿಗಳ ಮೇಲೆ ಓಡಾಡುವವರನ್ನು ತಡೆಯಲೆಂದೇ ಪಶ್ಚಿಮ ರೈಲ್ವೆ ಹಾಗೂ ಆರ್‌ಪಿಎಫ್‌ ಹೊಸ ಯೋಜನೆ ಜಾರಿಗೆ ತಂದಿದೆ. ರೈಲ್ವೆ ಹಳಿ ದಾಟುವ ಬಗ್ಗೆ ಜಾಗೃತಿ ಮೂಡಿಸಲು ಯಮರಾಜನ ವೇಷಧಾರಿಯೊಬ್ಬನನ್ನು ನಿಯೋಜಿಸಿದೆ. ಈತ ಹಳಿ ಮೇಲೆ ಸಾಗುವ ಮಂದಿಯನ್ನು ತಡೆದು, ಅವರನ್ನು ಹೊತ್ತುಕೊಂಡು ಬಂದು ರಸ್ತೆಗೆ ಅಥವಾ ಪ್ಲಾಟ್‍ಫಾರ್ಮ್ ಮೇಲೆ ತಂದು ಬಿಡುತ್ತಾನೆ. ಹಳಿ ದಾಟಬೇಡಿ, ಸ್ಕೈವಾಕ್‍ಗಳನ್ನು ಬಳಲಿ ಎಂದು ಜಾಗೃತಿ ಮೂಡಿಸುತ್ತಾನೆ.

    ಸೆಪ್ಟೆಂಬರ್ ನಲ್ಲಿ, ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತಾಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ಲಾಟ್‍ಫಾರ್ಮ್ ದಾಟಲು ಯತ್ನಿಸುತ್ತಿದ್ದ ವೃದ್ಧೆಯೊಬ್ಬರು ಹಳಿಗಳ ಮೇಲೆ ಜಾರಿಬಿದ್ದಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ರೈಲಿನ ಕೆಳಗೆ ಸಿಲುಕಿದ್ದು, ಅದೃಷ್ಟವಶಾತ್ ಬದುಕುಳಿದಿದ್ದರು. ಈ ಘಟನೆ ಸಾಕಷ್ಟು ಸುದ್ದಿಯಾಗಿತ್ತು. ಆದ್ದರಿಂದ ಈ ರೀತಿ ಪ್ರಕರಣಗಳನ್ನು ತಡೆಯಲು ರೈಲ್ವೆ ಇಲಾಖೆ ಯಮರಾಜನನ್ನು ನೇಮಿಸುವ ಮೂಲಕ ಹೊಸ ಪ್ಲಾನ್ ಮಾಡಿದೆ.

    ಯಮರಾಜನ ವೇಷಧಾರಿ ಹಳಿ ದಾಟುತ್ತಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಫೋಟೋವನ್ನು ರೈಲ್ವೆ ಇಲಾಖೆ ಟೀಟ್ ಮಾಡಿತ್ತು. ಈ ಹೊಸ ಕ್ರಮ ಎಲ್ಲರ ಗಮನಸೆಳೆದಿದ್ದು, ಜನರು ಯಮರಾಜನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಯಮರಾಜನ ಫೋಟೋ, ವಿಡಿಯೋ ವೈರಲ್ ಆಗುತ್ತಿದೆ.

  • ರೈಲ್ವೆ ಸ್ಟೇಷನ್‍ನಲ್ಲಿ ಸಿಕ್ಕ ಗ್ರನೇಡ್‍ಗೆ ಬಿಗ್ ಟ್ವಿಸ್ಟ್

    ರೈಲ್ವೆ ಸ್ಟೇಷನ್‍ನಲ್ಲಿ ಸಿಕ್ಕ ಗ್ರನೇಡ್‍ಗೆ ಬಿಗ್ ಟ್ವಿಸ್ಟ್

    ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕ ಅನುಮಾನಾಸ್ಪದ ವಸ್ತು ಪ್ರಕರಣಕ್ಕೆ ಸ್ಫೋಟಕ ತಿರುವ ಸಿಕ್ಕಿದೆ. ಒಬ್ಬ ಮಹಿಳಾ ಅಧಿಕಾರಿಯನ್ನ ಕಟ್ಟಿ ಹಾಕಲು ನಡೆದಿರುವ ಸಂಚು ಎಂದು ಹೇಳಲಾಗುತ್ತಿದೆ.

    ರೈಲ್ವೆ ಇಲಾಖೆಯ ಬೆಂಗಳೂರು ಡಿವಿಷನ್‍ಗೆ ಇತ್ತೀಚಿಗಷ್ಟೇ ಬಂದಿರುವ ಮಹಿಳಾ ಅಧಿಕಾರಿಯನ್ನ ಕಟ್ಟಿ ಹಾಕಲು ಅಲ್ಲಿಯ ಸಿಬ್ಬಂದಿಯೇ ಮಸಲತ್ತು ಮಾಡಿದ್ದಾರೆ ಅನ್ನೋ ಮಾತುಗಳು ರೈಲ್ವೆ ಇಲಾಖೆಯಲ್ಲಿ ಹರಿದಾಡುತ್ತಿದೆ.

    ಆರ್‌ಪಿಎಫ್ ಗೆ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ಆಗಿ ಕಳೆದ ಮೂರು ತಿಂಗಳ ಹಿಂದೆ ದೇವಾ ಸ್ಮಿತಾ ಚಟೋಪಾದ್ಯಾಯ ಅಧಿಕಾರ ವಹಿಸಿಕೊಂಡಿದ್ದಾರೆ. ಉತ್ತರ ಭಾರತದ ಕಡೆ ಕೆಲಸ ಮಾಡಿ ಬೆಂಗಳೂರಿಗೆ ಬಂದಿರುವ ದೇವಾ ಸ್ಮಿತಾ ಆರ್‌ಪಿಎಫ್ ಸಿಬ್ಬಂದಿಗಳಿಗೆ ಫುಲ್ ಆಕ್ಟಿವ್ ಮಾಡಿದ್ದಾರೆ. ಜಡ್ಡು ಹಿಡಿದಿದ್ದ ಆರ್‌ಪಿಎಫ್ ಸಿಬ್ಬಂದಿಗಳಿಗೆ ಆರ್‌ಪಿಎಫ್ ಗೆ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾ ಚಟೋಪಾದ್ಯಾಯ ಬಿಸಿಮುಟ್ಟಿಸಿದ್ದಾರೆ.

    ದೇವಾ ಸ್ಮಿತಾ ಚಟೋಪಾದ್ಯಾಯ ಆರ್‌ಪಿಎಫ್ ಸಿಬ್ಬಂದಿಗಳಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೆ ಈ ಘಟನೆಗೆ ಕಾರಣವಾಯ್ತಾ ಅನ್ನೋ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾ ಖಡಕ್ ನಿರ್ಧಾರದಿಂದ ಕಂಗೆಟ್ಟಿದ್ದ ಆರ್‌ಪಿಎಫ್ ಸಿಬ್ಬಂದಿಗಳೇ ದೇವಾ ಸ್ಮಿತಾರಿಗೆ ಕಪ್ಪು ಚುಕ್ಕೆ ತರಲು ಪ್ಲಾಟ್‍ ಫಾರ್ಮ್‌ನಲ್ಲಿ ಡಮ್ಮಿ ಗ್ರಾನೈಡ್ ತಂದಿಟ್ಟು ಪ್ಯಾನಿಕ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

    ಇನ್ನು ಇಷ್ಟೆಲ್ಲಾ ಪ್ಲಾನ್ ಮಾಡಿದವರು ಉದ್ದೇಶ ಪೂರಕವಾಗಿಯೇ ಸಿಸಿಟಿವಿ ಆಫ್ ಮಾಡಿದ್ರಾ? ಅಥವಾ ಅದೊಂದು ಕಾಕತಾಳಿಯ ಘಟನೆಯಾ ಅನ್ನೋ ಅನುಮಾಗಳು ಕೇಳಿ ಬರುತ್ತಿವೆ. ವಿಧಿ ವಿಜ್ಞಾನ ಪ್ರಯೋಗಾಲಯ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕಿರುವ ಗ್ರಾನೈಟ್ ಸಂಪೂರ್ಣ ಡಮ್ಮಿ ಎಂದು ವರದಿ ಕೊಟ್ಟಿದೆ. ಇತ್ತ ಆರ್‌ಪಿಎಫ್ ನ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾಗೆ ಕಟ್ಟಿ ಹಾಕಲು ಡಮ್ಮಿ ಗ್ರನೇಡ್ ರೂಪದ ವಸ್ತು ಇಟ್ಟಿದ್ದಾರೆ ಎಂದು ಕೇಳಿ ಬರುತ್ತಿರುವ ಮಾತಿಗೆ ಹೊಂದಾಣಿಕೆ ಆಗುತ್ತಿರುವುದಕ್ಕೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    ಉದ್ದೇಶ ಪೂರಕವಾಗಿಯೇ ಈ ಘಟನೆ ಮಾಡಿದರೆ ಡಮ್ಮಿ ಗ್ರನೇಡ್ ಸಿಕ್ಕಿದ್ದಾದರೂ ಎಲ್ಲಿ? ಇಟ್ಟವರು ಯಾರು? ಅನ್ನೋ ಪ್ರಶ್ನೆಗಳಿಗೆ ಪೊಲೀಸರೇ ಉತ್ತರ ನೀಡಬೇಕಾಗುತ್ತದೆ.

  • ಮೋದಿ, ಸೋನಿಯಾ, ರಾಹುಲ್ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿ ಅರೆಸ್ಟ್

    ಮೋದಿ, ಸೋನಿಯಾ, ರಾಹುಲ್ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿ ಅರೆಸ್ಟ್

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ನಾಯಕರ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿಯನ್ನು ರೈಲ್ವೇ ಭದ್ರತಾ ಸಿಬ್ಬಂದಿ (ಆರ್ ಪಿಎಫ್) ಬಂಧಿಸಿದ್ದಾರೆ.

    ಅದ್ವೇಶ್ ದುಬೆ ಬಂಧಿತ ವ್ಯಾಪಾರಿ. ಅದ್ವೇಶ್ ವ್ಯಾಪಾರ ವೇಳೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಗುಜರಾತ್‍ನ ಸೂರತ್ ರೈಲು ನಿಲ್ದಾಣದಲ್ಲಿ ಆರ್ ಪಿಎಫ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಅದ್ವೇಶ್ ದುಬೆ ಗೊಂಬೆ, ಆಟಿ ವಸ್ತುಗಳ ಹಾಗೂ ವೆನಿಟಿ ಬ್ಯಾಗ್ ವ್ಯಾಪಾರಿ. ರೈಲಿನಲ್ಲಿ ವ್ಯಾಪಾರ ಮಾಡುತ್ತಿದ್ದ. ಆದರೆ ಗ್ರಾಹಕರನ್ನು ಮೆಚ್ಚಿಸುವ ಉದ್ದೇಶದಿಂದ ಪ್ರಧಾನಿ ಮೋದಿ, ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ನಾಯಕರ ಮಿಮಿಕ್ರಿ ಮಾಡುತ್ತಿದ್ದ.

    ಪ್ರಯಾಣಿಕರೊಬ್ಬರು ಅದ್ವೇಶ್ ದುಬೆ ಮಿಮಿಕ್ರಿ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ರೈಲ್ವೇ ಪೊಲೀಸರ ಗಮನಕ್ಕೆ ಬಂದಿತ್ತು. ತಕ್ಷಣವೇ ಅದ್ವೇಶ್ ಗಾಗಿ ಹುಡುಕಾಟ ನಡೆಸಿ, ಬಂಧಿಸಿದ್ದಾರೆ.

    ಅದ್ವೇಶ್ ದುಬೆ ಮೂಲತಃ ಉತ್ತರ ಪ್ರದೇಶದ ವಾರಣಾಸಿ ನಿವಾಸಿ. ಅಲ್ಲಿಂದ ಗುಜರಾತ್‍ನ ವಲ್ಸಾದ್‍ಗೆ ವಲಸೆ ಬಂದಿದ್ದಾನೆ. ವಾಪಿ ಹಾಗೂ ಸೂರತ್ ಮಧ್ಯೆ ಸಂಚರಿಸುವ ರೈಲುಗಳಲ್ಲಿ ಗೊಂಬೆ, ಆಟಿಗೆ ಸೇರಿದಂತೆ ಕೆಲವು ವಸ್ತುಗಳನ್ನು ಮಾರಿ ಜೀವನ ನಡೆಸುತ್ತಿದ್ದ ಎಂದು ಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

    ಅದ್ವೇಶ್ ದುಬೆ ಮಿಮಿಕ್ರಿ ವಿಡಿಯೋ ವೈರಲ್ ಆಗಿದ್ದು, ಅದನ್ನು ನಾವು ಪಡೆದಿದ್ದೇವೆ. ಆರೋಪಿಗೆ ಶುಲ್ಕ ವಿಧಿಸಿದ್ದೇವೆ ಎಂದು ಸೂರತ್‍ನ ಆರ್ ಪಿಎಫ್ ಇನ್‍ಸ್ಪೇಕ್ಟರ್ ಈಶ್ವರ್ ಸಿಂಗ್ ಯಾದವ್ ಹೇಳಿದ್ದಾರೆ.

    ಬಂಧಿತ ಅದ್ವೇಶ್ ದುಬೆ ವಿರುದ್ಧ ರೈಲ್ವೇ ಕಾಯ್ದೆ ಸೆಕ್ಷನ್ 44 (ಭಿಕ್ಷಾಟನೆ ನಿಷೇಧ), 145 ಬಿ (ಪ್ರಯಾಣಿಕರಿಗೆ ಕಿರುಕುಳ ಅಥವಾ ನಿಷೇಧಿತ ಭಾಷೆ ಬಳಕೆ) ಹಾಗೂ 147 (ಪರವಾನಿಗೆ ರಹಿತ ವ್ಯಾಪಾರ)ಅಡಿ ಪ್ರಕರಣ ದಾಖಲಾಗಿದೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ 10 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.