Tag: Royal Challengers Bengaluru

  • ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    – ಕಾಲ್ತುಳಿತದಲ್ಲಿ ನರಕಯಾತನೆಯ ಅನುಭವ ಬಿಚ್ಚಿಟ್ಟ ಪ್ರಶಾಂತ್

    ಬೆಂಗಳೂರು: ಕಾಲ್ತುಳಿತದ (Chinnaswamy Stampede) ವೇಳೆ ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಉಸಿರಾಡೋಕೆ ತುಂಬಾ ಕಷ್ಟ ಆಗ್ತಿತ್ತು ಎಂದು ಗಾಯಾಳು ಪ್ರಶಾಂತ್ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿದ ಅವರು, ನಾನು ನನ್ನ ತಾಯಿ ಜೊತೆ ಕೋರ್ಟ್ ಕೆಲಸಕ್ಕೆಂದು ಹೋಗಿದ್ದೆ, ಆ ವೇಳೆ ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನು ನನ್ನ ತಾಯಿಯನ್ನು ಮನೆಗೆ ಕಳುಹಿಸಿದೆ. ಜನರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು, ನಾನಿರುವ ಜಾಗದಲ್ಲಿಯೇ ಇಬ್ಬರು ಸಾವನ್ನಪ್ಪಿದರು. ನಾನು ನಮ್ಮ ಮನೆಯವರಿಗೆ ಕಾಲ್ ಮಾಡಿ, ನಂಗೆ ಬರೋಕೆ ಆಗಲ್ಲ ಕ್ಷಮಿಸಿ ಬಿಡಿ ಎಂದು ಹೇಳಿದೆ.ಇದನ್ನೂ ಓದಿ: ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ನಾನು ಕೆಳಗೆ ಬಿದ್ದಾಗ ನನ್ನನ್ನು ತುಳಿದುಕೊಂಡು ಹೋಗುತ್ತಿದ್ದರು. ನಾನು ಎಷ್ಟೇ ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಆಕ್ಸಿಜನ್ ಕೂಡ ಸಿಗುತ್ತಿರಲಿಲ್ಲ. ಉಸಿರಾಡೋಕೆ ತುಂಬಾ ಕಷ್ಟ ಆಗುತ್ತಿತ್ತು. ಎಲ್ಲರೂ ತುಳಿದುಕೊಂಡು ಹೋಗುತ್ತಿರುವಾಗ ಓರ್ವ ವ್ಯಕ್ತಿ ಬಂದು ನನ್ನನ್ನು ಖಾಲಿ ಜಾಗಕ್ಕೆ ಬಿಟ್ಟರು. ಆಗ ಸ್ವಲ್ಪ ಉಸಿರಾಡೋಕೆ ಆಯ್ತು. ಆದರೆ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಬರಲಿಲ್ಲ. ಬಳಿಕ ನಮ್ಮ ಮನೆಯವರೇ ನನ್ನನ್ನು ಹುಡುಕಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ನನ್ನನ್ನ ಬೌರಿಂಗ್ ಆಸ್ಪತ್ರೆಗೆ (Bowring Hospital) ದಾಖಲಿಸಿದರು. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಇವರೆಗೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಮ್ಮ ಕರಾಳ ಅನುಭವ ಹಂಚಿಕೊಂಡರು.

    ಕಾಲ್ತುಳಿತದ ವೇಳೆ ನಿಧಿ ಎಂಬ ಯುವತಿಯ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಆದರೂ ಕೂಡ ಜನರು ಬ್ಯಾರಿಕೇಡ್‌ನ್ನು ತುಳಿದುಕೊಂಡು ಓಡಾಡುತ್ತಿದ್ದರು. ಯುವತಿ ಎಡಗೈ ಮತ್ತು ಎಡಗಾಲಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಸದ್ಯ ಟ್ರೀಟ್‌ಮೆಂಟ್ ಪಡೆದು ಡಿಸ್ಚಾರ್ಜ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಅದೇ ದಿನ ದಿಢೀರನೇ ಆರ್‌ಸಿಬಿ (RCB) ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

  • ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

    ಆರ್‌ಸಿಬಿ ಫ್ಯಾನ್ಸ್‌ಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟ ಕಿಂಗ್ ಕೊಹ್ಲಿ

    ಬೆಂಗಳೂರು: ಇದೀಗ ಬೆಂಗಳೂರಿಗೆ ಬಂದಿಳಿದ ಆರ್‌ಸಿಬಿ ತಂಡವು ಹೆಚ್‌ಎಎಲ್‌ನಿಂದ ತಾಜ್ ವೆಸ್ಟೆಂಡ್ ಹೊಟೇಲ್‌ಗೆ ತೆರಳುತ್ತಿದ್ದ ವೇಳೆ ಅಭಿಮಾನಿಗಳನ್ನ ಕಂಡ ವಿರಾಟ್ ಕೊಹ್ಲಿ, ಚಾಂಪಿಯನ್ ಟ್ರೋಫಿಯನ್ನು ತೋರಿಸಿ ಸಂತಸಪಟ್ಟರು.

    18 ವರ್ಷಗಳ ಬಳಿಕ ಮೊದಲ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು. ಹೆಚ್‌ಎಎಲ್‌ನಿಂದ ತಾಜ್ ವೆಸ್ಟೆಂಡ್‌ವರೆಗಿನ ದಾರಿಯುದ್ದಕ್ಕೂ ಅಭಿಮಾನಿಗಳ ಸಾಗರವೇ ನೆರೆದಿತ್ತು. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

    ರಸ್ತೆ ಇಕ್ಕೆಲಗಳಲ್ಲೆಲ್ಲಾ ಫ್ಯಾನ್ಸ್ ನಿಂತು `ಆರ್‌ಸಿಬಿ.. ಆರ್‌ಸಿಬಿ.. ಕೊಹ್ಲಿ.. ಕೊಹ್ಲಿ’ ಎಂದು ಕೂಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಫ್ಯಾನ್ಸ್‌ಗಳ ಹರುಷವನ್ನು ಕಂಡ ವಿರಾಟ್ ಕೊಹ್ಲಿ ಅವರು ಬಸ್‌ನಲ್ಲೇ ಕುಳಿತು ಅಭಿಮಾನಿಗಳಿಗೆ ಚಾಂಪಿಯನ್ ಟ್ರೋಫಿ ತೋರಿಸಿ ಖುಷಿಪಟ್ಟರು. ಇದನ್ನೂ ಓದಿ: ಬೆಂಗಳೂರಿಗೆ ʻರಾಯಲ್‌ʼ ಆಗಿ ಎಂಟ್ರಿ ಕೊಟ್ಟ ಆರ್‌ಸಿಬಿ ತಂಡ

    ಟ್ರೋಫಿ ಮೇಲೆ ಕೈತಟ್ಟಿ ‘ಈ ಸಲ ಕಪ್ ನಮ್ದು’ ಎಂಬಂತೆ ಸನ್ನೆ ಮಾಡಿದರು. ಕೊಹ್ಲಿಯನ್ನು ಕಂಡು ಅಭಿಮಾನಿಗಳು ಫುಲ್ ಥ್ರಿಲ್ ಆದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವ – ಟಿಕೆಟ್‌, ಪಾಸ್‌ ಹೊಂದಿದವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

  • ಆರ್‌ಸಿಬಿ ಜೆರ್ಸಿ, ಪಂಜಾಬ್‌ ಪೇಟಾ ಧರಿಸಿದ ಕ್ರಿಸ್‌ ಗೇಲ್‌ – ವೈರಲ್‌ ಆಯ್ತು ಸ್ಪೆಷಲ್‌ ಲುಕ್‌

    ಆರ್‌ಸಿಬಿ ಜೆರ್ಸಿ, ಪಂಜಾಬ್‌ ಪೇಟಾ ಧರಿಸಿದ ಕ್ರಿಸ್‌ ಗೇಲ್‌ – ವೈರಲ್‌ ಆಯ್ತು ಸ್ಪೆಷಲ್‌ ಲುಕ್‌

    ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಬಹು ನಿರೀಕ್ಷಿತ IPL 2025 ಫೈನಲ್ ಪಂದ್ಯಕ್ಕೆ ಉತ್ಸಾಹ ಹೆಚ್ಚಾಗಿದೆ. T20 ದಂತಕಥೆ ಕ್ರಿಸ್ ಗೇಲ್ (Chris Gayle) ಅವರ ವೈರಲ್ ಚಿತ್ರವು‌ ಶ್ರೀಮಂತ ಲೀಗ್‌ನ ಉನ್ಮಾದವನ್ನು ಮತ್ತಷ್ಟು ಹೆಚ್ಚಿಸಿದೆ.

    ಐಪಿಎಲ್ ವೃತ್ತಿಜೀವನದಲ್ಲಿ ಎರಡೂ ಫ್ರಾಂಚೈಸಿಗಳಿಗಾಗಿ ಆಡಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ, ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮ್ಯಾಚ್‌ ವೇಳೆ ಆರ್‌ಸಿಬಿ ಜೆರ್ಸಿ ಹಾಗೂ ಸಾಂಪ್ರದಾಯಿಕ ಪಂಜಾಬಿ ಪೇಟ ಧರಿಸಿ ಕಾಣಿಸಿಕೊಂಡಿದ್ದಾರೆ. ಗೇಲ್‌ ಹೊಸ ಲುಕ್‌ ಸಖತ್‌ ವೈರಲ್‌ ಆಗಿದೆ. ಇದನ್ನೂ ಓದಿ: For The First Time ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ – ಇಂದಿನ ಲಕ್‌ ಹೇಗಿದೆ?

    ಗೇಲ್ ಅವರನ್ನು ಟಿ20 ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರ ಐಪಿಎಲ್ ವೃತ್ತಿಜೀವನದಲ್ಲಿ 4,965 ರನ್‌ಗಳನ್ನು ಗಳಿಸಿದ್ದಾರೆ. ಐಪಿಎಲ್ 2011 (608 ರನ್‌ಗಳು) ಮತ್ತು ಐಪಿಎಲ್ 2012 (733 ರನ್‌ಗಳು) ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದರು.

    ಐಪಿಎಲ್‌ 2025ರ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಸೆಣಸುತ್ತಿದೆ. ರಜತ್ ಪಾಟಿದಾರ್ ನೇತೃತ್ವದ ತಂಡವು ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಬಲ ಪ್ರದರ್ಶನ ನೀಡಿತ್ತು. ಜೋಶ್ ಹ್ಯಾಜಲ್‌ವುಡ್ ಮತ್ತು ಸುಯಾಶ್ ಶರ್ಮಾ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಪಂಜಾಬ್‌ ವಿರುದ್ಧ ಇನ್ನೂ 60 ಎಸೆತಗಳು ಬಾಕಿ ಇರುವಾಗ ಆರ್‌ಸಿಬಿ ಸಮಗ್ರ ಗೆಲುವು ಸಾಧಿಸಿತ್ತು. ಇದನ್ನೂ ಓದಿ: Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

    ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡದ ವಿರುದ್ಧ ಕ್ವಾಲಿಫೈಯರ್ 2 ರಲ್ಲಿ ಗೆಲುವು ದಾಖಲಿಸಿ PBKS ಫಾರ್ಮ್‌ಗೆ ಬಂದಿತ್ತು. ಶ್ರೇಯಸ್ ಅಯ್ಯರ್ ಕೇವಲ 41 ಎಸೆತಗಳಲ್ಲಿ 87 ರನ್ ಗಳಿಸಿ ಪಂದ್ಯ ಗೆಲ್ಲುವ ಮೂಲಕ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ್ದರು. 11 ವರ್ಷಗಳ ನಂತರ ಐಪಿಎಲ್ 2025 ರ ಫೈನಲ್‌ಗೆ ಪಂಜಾಬ್‌ ಲಗ್ಗೆ ಇಟ್ಟಿದೆ.

    18 ಋತುಗಳ ನಂತರ, ಈ ಎರಡೂ ಫ್ರಾಂಚೈಸಿಗಳು ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಸೆಣಸುತ್ತಿವೆ. ಇದು ಪಂದ್ಯಾವಳಿಯ ಪರಂಪರೆಯಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಇದನ್ನೂ ಓದಿ: IPL Final | ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌

  • RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

    RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

    – ಸ್ಟೇಡಿಯಂನಿಂದ ವೀಡಿಯೋ ಹಂಚಿಕೊಂಡ ನಟ ಸಾಯಿಕುಮಾರ್‌

    ಅಹಮದಾಬಾದ್: ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಜೂ.3 ಪ್ರಮುಖವಾದ ದಿನ. ಎಲ್ಲರ ಚಿತ್ತ ಐಪಿಎಲ್‌ 2025ರ ಫೈನಲ್‌ ಪಂದ್ಯದ ಕಡೆಗೆ ನೆಟ್ಟಿದೆ. ಆರ್‌ಸಿಬಿ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಪಂಜಾಬ್‌ ವಿರುದ್ಧ ಫೈನಲ್‌ ಪಂದ್ಯ ನಡೆಯುತ್ತಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಫ್ಯಾನ್ಸ್‌ ಹವಾ ಜೋರಾಗಿದೆ.

    ಗುಜರಾತ್‌ನ ಅಹಮದಾಬಾದ್‌ನ ಮೈದಾನದಲ್ಲಿರುವ ಆರ್‌ಸಿಬಿ ಅಭಿಮಾನಿಗಳು ವೀಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಆರ್‌ಸಿಬಿ ಅಭಿಮಾನಿಗಳೇ ಹೆಚ್ಚಿದ್ದಾರೆ. ಪಂಜಾಬ್‌ ಫ್ಯಾನ್ಸ್‌ ತುಂಬಾ ಕಡಿಮೆ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

    ಕನ್ನಡದ ಹಿರಿಯ ನಟ ಸಾಯಿಕುಮಾರ್‌ ಕೂಡ ಮೈದಾನದಲ್ಲಿ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅಲ್ಲಿನ ಆರ್‌ಸಿಬಿ ಕ್ರೇಜ್‌ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಸ್ಟೇಡಿಯಂ ತುಂಬಾ ಜನ ಆರ್‌ಸಿಬಿ.. ಆರ್‌ಸಿಬಿ ಎಂದು ಘೋಷಣೆ ಕೂಗುತ್ತಿದ್ದಾರೆ. ಬಹುಪಾಲು ಬೆಂಗಳೂರು ಫ್ಯಾನ್ಸ್‌ ಇಲ್ಲಿದ್ದಾರೆಂದು ತಿಳಿಸಿದ್ದಾರೆ.

    ಸ್ಟೇಡಿಯಂನ ಒಳಗೂ ಮತ್ತು ಹೊರಗೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ. ಕರ್ನಾಟಕದಲ್ಲಂತೂ ಐಪಿಎಲ್‌ ಫೀವರ್‌ ಜೋರಾಗಿದೆ. ಆರ್‌ಸಿಬಿ ಗೆಲುವಿಗಾಗಿ ಜನರು ಪ್ರಾರ್ಥಿಸುತ್ತಿದ್ದಾರೆ.

  • ಆರ್‌ಸಿಬಿ ಗೆಲ್ಲಲೆಂದು ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡ್ತೇನೆ: ಲಕ್ಷ್ಮಿ ಹೆಬ್ಬಾಳ್ಕರ್

    ಆರ್‌ಸಿಬಿ ಗೆಲ್ಲಲೆಂದು ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡ್ತೇನೆ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ಆರ್‌ಸಿಬಿ (RCB) ಕಪ್ ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.

    ನಾಳೆ ಆರ್‌ಸಿಬಿ ಫೈನಲ್ ಪಂದ್ಯ ಎದುರಿಸುತ್ತಿರುವ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನಾನು ಕಿಕ್ರೆಟ್‌ನ ದೊಡ್ಡ ಅಭಿಮಾನಿ. ಈ ಬಾರಿ ಫೈನಲ್‌ನಲ್ಲಿ ಆರ್‌ಸಿಬಿ ಆಟಗಾರರಿಗೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಮಾಡ್ತೇನೆ ಎಂದರು. ಇದನ್ನೂ ಓದಿ: ಈ ಬಾರಿ ಕಳೆಯಲಿದೆಯೇ ಫೈನಲ್‌ ಕಂಟಕ? – ಕಪ್‌ ಗೆದ್ದು ಅಭಿಮಾನಿಗಳಿಗೆ ಔತಣ ಕೊಡಲಿದೆಯೇ ಆರ್‌ಸಿಬಿ?

    ಈ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಎಲ್ಲರೂ ತುಂಬಾ ಚೆನ್ನಾಗಿ ಆಡಿದ್ದಾರೆ. ಆರ್‌ಸಿಬಿ ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ನಾನು ವಿಶೇಷ ಪ್ರಾರ್ಥನೆ ಮಾಡುತ್ತೇನೆ. ಆರ್‌ಸಿಬಿ ಒಂದಲ್ಲ ಎರಡಲ್ಲ, ನಾಲ್ಕು ಬಾರಿ ಫೈನಲ್‌ಗೆ ಬಂದಿದೆ. ಆದರೆ ಈ ಬಾರಿ `ಕಪ್ ನಮ್ದೇ’ ಎಂದು ಹೇಳಿ ಆರ್‌ಸಿಬಿ ಫ್ಯಾನ್‌ಗಳನ್ನು ಹುರಿದುಂಬಿಸಿದರು. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್‌ ಅಯ್ಯರ್‌ ಅರ್ಹರು – ರಾಜಮೌಳಿ

    ಜೂ. 03ರಂದು ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಫೈನಲ್ ಟ್ರೋಫಿಗೆ ಗುದ್ದಾಡಲಿದೆ. ಇದೀಗ ಎಲ್ಲೆಡೆ ಆರ್‌ಸಿಬಿ ಫ್ಯಾನ್ಸ್‌ಗಳಿಂದ ಈ ಸಲ `ಕಪ್ ನಮ್ದೇ’ ಎಂಬ ಜಯಘೋಷ ಕೇಳುತ್ತಿದೆ.

  • ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಚಂಡೀಗಢ: ಮಲ್ಲನ್‌ಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 102 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ ಸಿಡಿಸಿ ಗೆಲುವು ಸಾಧಿಸಿದೆ. ಈ ಮೂಲಕ 4ನೇ ಬಾರಿಗೆ ಫೈನಲ್‌ಗೆ ಎಂಟ್ರಿಕೊಟ್ಟಿದೆ.

    2009, 2011, 2016ರ ಬಳಿಕ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್‌ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 7 ವರ್ಷಗಳಲ್ಲಿ ನಡೆದ ಐಪಿಎಲ್‌ ಆವೃತ್ತಿಗಳಲ್ಲಿ ಐಪಿಎಲ್‌ ಕ್ವಾಲಿಫೈರ್‌-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಯಾವ ವರ್ಷ – ಯಾವ ತಂಡ?
    2018 – CSK.
    2019 – MI.
    2020 – MI.
    2021 – CSK.
    2022 – GT.
    2023 – CSK.
    2024 – KKR
    2025 – ….?

    2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

    ಚಂಡೀಗಢ: ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ (RCB) ವಿರುದ್ಧ ಪಂಜಾಬ್‌ (PBKS) ಮತ್ತೊಂದು ಕೆಟ್ಟ ದಾಖಲೆ ಬರೆದಿದೆ.

    ಚಂಡೀಗಢದ ಮುಲ್ಲನಪುರದಲ್ಲಿ ನಡೆಯುತ್ತಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ ಆಯಿತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲೇ 6 ನೇ ಬಾರಿಗೆ ಅಲ್ಪ ಮೊತ್ತದ ಕೆಟ್ಟ ದಾಖಲೆ ಬರೆಯಿತು. ಆರ್‌ಸಿಬಿ ವಿರುದ್ಧವೇ ಮೂರನೇ ಬಾರಿಗೆ ಅಲ್ಪ ಮೊತ್ತದ ಕೆಟ್ಟ ದಾಖಲೆಯನ್ನು ಪಂಜಾಬ್‌ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    2015 ರಲ್ಲಿ (13.4 ಓವರ್‌) ಮತ್ತು 2018ರಲ್ಲಿ ಆರ್‌ಸಿಬಿ ವಿರುದ್ಧ 88 ರನ್‌ಗೆ (15.1 ಓವರ್‌ಗೆ) ಪಂಜಾಬ್‌ ಆಲೌಟ್‌ ಆಗಿತ್ತು.

    ಗುರುವಾರದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಪರಾಕ್ರಮ ಮೆರೆದಿದ್ದಾರೆ. ಪಂಜಾಬ್‌ ತಂಡ 14.1 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್‌ ಆಗಿದೆ.

    ಜೋಶ್ ಹ್ಯಾಜಲ್‌ವುಡ್ ಮತ್ತು ಸುಯಾಶ್ ಶರ್ಮಾ ತಲಾ ಮೂರು ವಿಕೆಟ್ ಪಡೆದರೆ, ಯಶ್ ದಯಾಳ್ ಎರಡು ವಿಕೆಟ್ ಪಡೆದು ಪಂಜಾಬ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಆರ್‌ಸಿಬಿಗೆ ʻಜೋಶ್‌ʼ – ಟಾಸ್‌ ಗೆದ್ದ ಬೆಂಗಳೂರು ಫೀಲ್ಡಿಂಗ್‌ ಆಯ್ಕೆ

    ಪಂಜಾಬ್‌ ಕಿಂಗ್ಸ್‌ ಅಲ್ಪಮೊತ್ತದ ಕೆಟ್ಟ ದಾಖಲೆ ಪಟ್ಟಿ ಹೀಗಿದೆ..
    15.5 ಓವರ್‌ಗಳಲ್ಲಿ 73/10 vs RPSG (ಪುಣೆ, 2017)
    13.4 ಓವರ್‌ಗಳಲ್ಲಿ 88/10 vs RCB (ಬೆಂಗಳೂರು, 2015)
    15.1 ಓವರ್‌ಗಳಲ್ಲಿ 88/10 vs RCB (ಇಂದೋರ್, 2018)
    20 ಓವರ್‌ಗಳಲ್ಲಿ 92/8 vs CSK (ಡರ್ಬನ್, 2009)
    20 ಓವರ್‌ಗಳಲ್ಲಿ 95/9 vs CSK (ಚೆನ್ನೈ, 2015)

  • RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ವು (Punjab Kings) ಕ್ವಾಲಿಫೈಯರ್‌-1ನಲ್ಲಿ 14.1 ಓವರ್‌ಗಳಲ್ಲೇ 101‌ ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಎದುರಾಳಿ ಆರ್‌ಸಿಬಿಗೆ (RCB) 102 ರನ್‌ಗಳ ಗುರಿ ನೀಡಿದೆ.

    ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಮೊದಲು‌ ಫೀಲ್ಡಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿತು.

    ಉತ್ತಮ ರನ್‌ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಪಂಜಾಬ್‌ ಕಿಂಗ್ಸ್‌ಗೆ  ಆರಂಭದಲ್ಲೇ ಮರ್ಮಾಘಾತವಾಯಿತು. 1.2 ಓವರ್‌ಗಳಲ್ಲಿ 9 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌ ಬಳಿಕ ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿತು. ಪವರ್‌ ಪ್ಲೇನಲ್ಲಿ ಒಂದೆಡೆ ರನ್‌ ಹರಿಯುತ್ತಿದ್ದರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳು ತರಗೆಲೆಗಳಂತೆ ಉದುರುತ್ತಿದ್ದವು. ಇದರಿಂದ ಪವರ್‌ ಪ್ಲೇನಲ್ಲಿ 48 ರನ್‌ ಗಳಿಸುವ ಹೊತ್ತಿಗೆ ಪಂಜಾಬ್‌ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು.

    ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತ:
    ಮೊದಲ ಓವರ್‌ನಲ್ಲಿ ನಿರಾಸೆಗೊಂಡಿದ್ದ ಆರ್‌ಸಿಬಿ ಬೌಲಿಂಗ್‌ ಪಡೆ 2ನೇ ಓವರ್‌ನಿಂದಲೇ ಪಂಜಾಬ್‌ ಬ್ಯಾಟರ್‌ಗಳ ಮೇಲುಗೈ ಸಾಧಿಸಿತು. ಈ ಆವೃತ್ತಿಯಲ್ಲಿ ಮೆರೆದಾಡಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಪೆವಿಲಿಯನ್‌ ಹಾದಿ ತೋರುವಲ್ಲಿ ಯಶಸ್ವಿಯಾದರು. ಸೂಯಶ್‌ ಶರ್ಮಾ (Suyash Sharma) ಸ್ಪಿನ್‌ ಮೋಡಿ, ಜೋಶ್‌ ಹೇಜಲ್ವುಡ್‌, ಯಶ್‌ ದಯಾಳ್‌, ಭುವನೇಶ್ವರ್‌ ಕುಮಾರ್‌ ಅವರ ಉರಿ ಚೆಂಡಿನ ದಾಳಿಗೆ ಪಂಜಾಬ್‌ ರನ್‌ ಕದಿಯಲು ತಿಣುಕಾಡಿತು. ಮಾರ್ಕಸ್‌ ಸ್ಟೋಯ್ನಿಸ್‌, ನೇಹಾಲ್‌ ವಧೇರಾ ಹೊರತುಪಡಿಸಿದ್ರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಂದಂಕಿಯ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

    ಪಂಜಾಬ್‌ ಕಿಂಗ್ಸ್‌ ಪರ ಮಾರ್ಕಸ್‌ ಸ್ಟೋಯ್ನಿಸ್‌ 26 ರನ್‌, ಅಜ್ಮತುಲ್ಲಾ ಒಮರ್ಜೈ, ಪ್ರಭ್‌ಸಿಮ್ರನ್‌ ತಲಾ 18 ರನ್‌, ಪ್ರಿಯಾಂಶ್‌ ಆರ್ಯ 7 ರನ್‌, ಜೋಶ್‌ ಇಂಗ್ಲಿಸ್‌ 4 ರನ್‌. ಶ್ರೇಯಸ್‌ ಅಯ್ಯರ್‌ 2 ರನ್‌, ನೇಹಾಲ್‌ ವಧೇರಾ 8 ರನ್‌, ಶಶಾಂಕ್‌ ಸಿಂಗ್‌ 3, ಹರ್ಪ್ರೀತ್‌ ಬ್ರಾರ್‌ 4 ರನ್‌ ಗಳಿಸಿದ್ರೆ ಮುಶೀರ್‌ ಖಾನ್‌ ಶೂನ್ಯ ಸುತ್ತಿದರು.

    ಆರ್‌ಸಿಬಿ ಪರ ಸೂಯಶ್‌ ಶರ್ಮಾ, ಜೋಶ್‌ ಹೇಜಲ್ವುಡ್‌ ತಲಾ 3 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

  • ಬೆಂಗ್ಳೂರಲ್ಲಿ ಮಳೆ ಕಾಟ – ತವರಿನಲ್ಲಿ ನಡೆಯಬೇಕಿದ್ದ RCB ಕೊನೆಯ ಪಂದ್ಯ ಲಕ್ನೋಗೆ ಶಿಫ್ಟ್

    – ಅಭಿಮಾನಿಗಳಿಗೆ ಭಾರೀ ನಿರಾಸೆ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ (Bengaluru) ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮೇ 23ರಂದು ತವರು ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಲೀಗ್ ಸುತ್ತಿನ ಪಂದ್ಯ ಲಕ್ನೋಗೆ ಸ್ಥಳಾಂತರಿಸಲಾಗಿದೆ.

    ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಮೇ 24ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮೇ 23ರಂದು ಆರ್‌ಸಿಬಿ ತನ್ನ ತವರೂರಲ್ಲಿ ಆಡಬೇಕಿದ್ದ ಲೀಗ್‌ನ ಕೊನೆಯ ಪಂದ್ಯ ಸ್ಥಳಾಂತರಗೊಂಡಿದೆ. ಮೇ 23ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ (Ekana Cricket Stadium) ಆರ್‌ಸಿಬಿ (RCB) ಹಾಗೂ ಎಸ್‌ಆರ್‌ಹೆಚ್ (SRH) ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: ರಾಹುಲ್ ಜೆಟ್‌ ಪ್ರಶ್ನೆಗೆ ಬಿಜೆಪಿ ಪಾಕ್ ಪೋಸ್ಟರ್ – ಬಿರಿಯಾನಿ ತಿಂದವರು ಯಾರು? ಅಂತ ಕಾಂಗ್ರೆಸ್ ಕೌಂಟರ್

    ಮುನ್ನ ಮೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯ ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ತವರು ಕ್ರೀಡಾಂಗಣದಲ್ಲಿ ಆರ್‌ಸಿಬಿ ಈ ಆವೃತ್ತಿಯ ಪಂದ್ಯಗಳನ್ನು ಮುಗಿಸಿದಂತಾಗಿದೆ.

    ಈಗಾಗಲೇ 12 ಪಂದ್ಯಗಳನ್ನಾಡಿರುವ ಆರ್‌ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 17 ಅಂಕ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿರೋ ಆರ್‌ಸಿಬಿ ನಂ.1 ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿದೆ.ಇದನ್ನೂ ಓದಿ: ಪಂಜಾಬ್‌ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್ – ಪ್ರೊಫೆಸರ್ ಅರೆಸ್ಟ್

  • ಐಪಿಎಲ್‌ನಿಂದ ಪಡಿಕ್ಕಲ್ ಔಟ್ – ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ ಆರ್‌ಸಿಬಿ

    ಐಪಿಎಲ್‌ನಿಂದ ಪಡಿಕ್ಕಲ್ ಔಟ್ – ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ ಆರ್‌ಸಿಬಿ

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಶಾಕ್ ಎದುರಾಗಿದೆ. ಸ್ಟಾರ್ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್(Devdutt Padikkal) ಆರೋಗ್ಯ ಸಮಸ್ಯೆಯಿಂದ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ.

    ಪಡಿಕ್ಕಲ್ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿದ್ದು, ಆರ್‌ಸಿಬಿಯ(RCB) ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದೀಗ ಪಡಿಕ್ಕಲ್ ಸ್ಥಾನವನ್ನು ತುಂಬಲು ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್‌ವಾಲ್‌ನನ್ನು(Mayank Agarwal) ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಇದನ್ನೂ ಓದಿ: ಬೀಚ್‌ನಲ್ಲಿ ಸುನಾಮಿ ಎಬ್ಬಿಸಿ, ಪಡ್ಡೆ ಹುಡುಗರಿಗೆ ಗ್ಲಾಮರ್‌ ಟ್ರೀಟ್‌ ಕೊಟ್ಟ ರಮ್ಯಾ!

    ಆರ್‌ಸಿಬಿ ಪರ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಪಡಿಕ್ಕಲ್ 10 ಪಂದ್ಯಗಳಲ್ಲಿ 247ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳೂ ಒಳಗೊಂಡಿವೆ. ಹೆಚ್ಚಿನ ಪಂದ್ಯಗಳಲ್ಲಿ ದೇವದತ್ತ್ ಕಳಪೆ ಬ್ಯಾಟಿಂಗ್ ಮೂಲಕ ನಿರಾಶೆ ಮೂಡಿಸಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನು ಜಗತ್ತಿಗೆ ವಿವರಿಸಿದ್ದ ಕರ್ನಲ್ ಸೋಫಿಯಾ ಬೆಳಗಾವಿಯ ಸೊಸೆ!

    ಇನ್ನು ಮಯಾಂಕ್ 2011ರಲ್ಲಿ ಆರ್‌ಸಿಬಿ ಪರ ಆಡುವ ಮೂಲಕ ಐಪಿಎಲ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು ಆರ್‌ಸಿಬಿಯಿಂದ ಹೊರಬಿದ್ದಿದ್ದರು. ಇವರು ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಒಟ್ಟು 127 ಪಂದ್ಯಗಳನ್ನಾಡಿದ್ದಾರೆ.

    ಕಳೆದ ಆವೃತ್ತಿಯಲ್ಲಿ ಸನ್‌ರೈಸ್‌ರ್ಸ್ ಹೈದರಾಬಾದ್(Sunrisers Hyderabad) ಪರ ಇದ್ದ ಮಯಾಂಕ್ ಅಗರ್ವಾಲ್ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಹಾಗಾಗಿ 2025ರ ಐಪಿಎಲ್‌ಗೆ ನಡೆದ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಮಯಾಂಕ್‌ರನ್ನ ಆರ್‌ಸಿಬಿ ಫ್ರಾಂಚೈಸಿಯು 1 ಕೋಟಿ ರೂ.ಗೆ ಖರೀದಿ ಮಾಡಿದೆ. ಇದನ್ನೂ ಓದಿ: ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ

    ಸದ್ಯ ಆರ್‌ಸಿಬಿಗೆ ಲೀಗ್ ಸುತ್ತಿನಲ್ಲಿ ಮೂರು ಪಂದ್ಯಗಳು ಬಾಕಿ ಉಳಿದಿವೆ. ಮೇ 9ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಕಾದಾಟಕ್ಕಿಳಿಯಲಿದೆ. ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹಾಗೂ ಮೇ 17ರಂದು ಕೆಕೆಆರ್ ವಿರುದ್ಧ ತವರು ಕ್ರೀಡಾಂಗಣದಲ್ಲಿ ಆಡಲಿದೆ.