Tag: Royal Challengers Bangaluru

  • ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಬೆಂಗಳೂರು: ಎಲಿಸ್‌ ಪೆರ್ರಿಯ ಭರ್ಜರಿ ಫಿಫ್ಟಿ ಆಟಕ್ಕೆ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 148 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.

    ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ, ಡೆಲ್ಲಿಗೆ 148 ರನ್‌ ಗಳ ಗುರಿಯನ್ನು ನೀಡಿತು.ಇದನ್ನೂ ಓದಿ: Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    ಆರ್‌ಸಿಬಿ ತಂಡದ ಸ್ಮೃತಿ ಮಂಧಾನ 8 ರನ್‌ ಗಳಿಗೆ ಔಟ್‌ ಆಗಿ ಆರಂಭದಲ್ಲಿ ನಿರಾಸೆ ಮೂಡಿಸಿದರು. ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿ ವ್ಯಾಟ್‌ 18 ಎಸೆತಗಳಲ್ಲಿ 21 ರನ್‌ ಗಳಿಸಿ ಔಟಾದರು. ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಪೆರ್ರಿ, ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂದು ಮತ್ತೆ ಫಾರ್ಮ್‌ಗೆ ಬಂದ ಪೆರ್ರಿ ಭರ್ಜರಿ 3 ಸಿಕ್ಸ್, 3 ಬೌಂಡರಿ ಬಾರಿಸಿ 47 ಎಸೆತಗಳಲ್ಲಿ 60 ರನ್‌ಗಳಿಸಿದರು. ಪೆರ್ರಿಗೆ ಜೊತೆಯಾದ ರಾಘ್ವಿ ಬಿಸ್ಟ್‌ 32 ಎಸೆತಗಳಲ್ಲಿ 33 ರನ್‌ ಗಳಿಸಿದರು.

    ಇನ್ನುಳಿದಂತೆ ರಿಚಾ ಘೋಷ್‌ 5, ಕನಿಕಾ ಅಹುಜಾ 2 ಹಾಗೂ ಜಾರ್ಜಿಯಾ 12 ರನ್‌ ಗಳಿಸಿದರು. ಡೆಲ್ಲಿ ಪರ ಬೌಲಿಂಗ್‌ ಮಾಡಿದ ಶಿಖಾ ಹಾಗೂ ಚರಣಿ ತಲಾ 2 ವಿಕೆಟ್‌ ಪಡೆದುಕೊಂಡರೆ. ಕಪ್ಪ್‌ 1 ವಿಕೆಟ್‌ ಪಡೆದುಕೊಂಡರು.ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

  • ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್‌ ಭಾವುಕ ವಿದಾಯ

    ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್‌ ಭಾವುಕ ವಿದಾಯ

    – ನಿಮ್ಮಂಥ ಅಭಿಮಾನಿಗಳು ಜಗತ್ತಿನಲ್ಲೇ ಇಲ್ಲ: RCB ಫ್ಯಾನ್ಸ್‌ ಕೊಂಡಾಡಿದ ವೇಗಿ

    ಮುಂಬೈ: ವೇಗಿ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

    ಕ್ರಿಕೆಟಿಗನಾಗಿ ವಿಕಸನಗೊಳ್ಳಲು ವೇದಿಕೆಯನ್ನು ನೀಡಿದ ಫ್ರಾಂಚೈಸಿಗೆ ಮತ್ತು ಅಭಿಮಾನಿಗಳಿಗೆ ಸಿರಾಜ್‌ ಧನ್ಯವಾದ ತಿಳಿಸಿದ್ದಾರೆ. ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ರ (IPL 2025) ಮೆಗಾ ಹರಾಜಿನಲ್ಲಿ ಆರ್‌ಸಿಬಿ, ಸಿರಾಜ್‌ನನ್ನು ಖರೀದಿಸಲಿಲ್ಲ. ಆರ್‌ಸಿಬಿ ಜೊತೆಗಿನ ಸಿರಾಜ್ ಅವರ ಏಳು ವರ್ಷಗಳ ಪ್ರಯಾಣ ಕೊನೆಗೊಂಡಿದೆ. ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ಸಿರಾಜ್‌ ಭಾವುಕ ಪೋಸ್ಟ್‌ನಲ್ಲೇನಿದೆ?

    ನನ್ನ ಪ್ರೀತಿಯ ಆರ್‌ಸಿಬಿಗೆ..
    ಆರ್‌ಸಿಬಿ ಜೊತೆಗಿನ 7 ವರ್ಷಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ. ನಾನು ಆರ್‌ಸಿಬಿ ಶರ್ಟ್‌ನಲ್ಲಿ ನನ್ನ ಸಮಯವನ್ನು ಹಿಂತಿರುಗಿ ನೋಡಿದಾಗ ನನ್ನ ಹೃದಯವು ಕೃತಜ್ಞತೆ, ಪ್ರೀತಿ ಮತ್ತು ಭಾವನೆಯಿಂದ ತುಂಬಿದೆ.

    ನಾನು ಮೊದಲು RCB ಜರ್ಸಿಯನ್ನು ಧರಿಸಿದ ದಿನ, ನಾವು ರೂಪಿಸುವ ಬಾಂಧವ್ಯವನ್ನು ನಾನು ಎಂದಿಗೂ ಊಹಿಸಿರಲಿಲ್ಲ. RCB ಬಣ್ಣಗಳಲ್ಲಿ ನಾನು ಬೌಲ್ ಮಾಡಿದ ಮೊದಲ ಎಸೆತದಿಂದ, ಪ್ರತಿ ವಿಕೆಟ್ ಪಡೆದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ, ಪ್ರಯಾಣವು ಚಿಕ್ಕದಾಗಿರಲಿಲ್ಲ. ಅಸಾಧಾರಣವಾದ ಏರಿಳಿತಗಳಿವೆ, ಆದರೆ ಎಲ್ಲದರಲ್ಲೂ ಒಂದು ವಿಷಯ ಸ್ಥಿರವಾಗಿದೆ: ನಿಮ್ಮ ಅಚಲವಾದ ಬೆಂಬಲವು ಕೇವಲ ಫ್ರ್ಯಾಂಚೈಸಿ ಆಗಿರದೇ ಕುಟುಂಬದಂತೆ ಇತ್ತು. ಇದನ್ನೂ ಓದಿ: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – 13ನೇ ವರ್ಷದಲ್ಲೇ ಕೋಟ್ಯಧಿಪತಿ

    RCB ಅಭಿಮಾನಿಗಳು, ಈ ತಂಡದ ಆತ್ಮ. ನೀವು ತರುವ ಶಕ್ತಿ, ನೀವು ನೀಡುವ ಪ್ರೀತಿ, ನೀವು ತೋರಿಸುವ ನಂಬಿಕೆಗೆ ಸಾಟಿಯಿಲ್ಲ. ನಾನು ಆ ಕ್ಷೇತ್ರಕ್ಕೆ ಕಾಲಿಟ್ಟಾಗಲೆಲ್ಲಾ, ನಿಮ್ಮ ಕನಸುಗಳು ಮತ್ತು ಭರವಸೆಗಳ ಭಾರವನ್ನು ನಾನು ಅನುಭವಿಸಿದೆ. ನೀವು ಅಲ್ಲಿಯೇ ಇದ್ದೀರಿ ಎಂದು ನನಗೆ ತಿಳಿದಿತ್ತು. ನನ್ನ ಬೆನ್ನುಲುಬಾಗಿ ನಿಂತು ಮುಂದೆ ಸಾಗುವಂತೆ ಮಾಡಿದ್ದೀರಿ.

    ನಾವು ಆಟದಲ್ಲಿ ಬಿದ್ದಾಗ ನಿಮ್ಮ ಕಣ್ಣೀರನ್ನು ನಾನು ನೋಡಿದ್ದೇನೆ. ನಾವು ಗೆದ್ದಾಗ ನಿಮ್ಮ ಸಂಭ್ರಮಾಚರಣೆಗೆ ನಾನು ಸಾಕ್ಷಿಯಾಗಿದ್ದೇನೆ. ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲೇ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ, ನಿಮ್ಮ ನಿಷ್ಠೆ-ಇದು ನನ್ನ ಜೀವನದುದ್ದಕ್ಕೂ ನಾನು ಪಾಲಿಸುತ್ತೇನೆ ಎಂದು ಭಾವುಕವಾಗಿ ಸಿರಾಜ್‌ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: 10.75 ಕೋಟಿ ಬಿಡ್‌ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ

    ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗೆ ವೇಗದ ಬೌಲರ್ ಅನ್ನು ಖರೀದಿಸಿದೆ. ಹರಾಜಿನ ವೇಳೆ RCB ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಸಹ ಬಳಸಲಿಲ್ಲ. ಇದರಿಂದಾಗಿ ವೇಗಿ ಟೈಟಾನ್ಸ್ ಸೇರಲು ಅವಕಾಶ ಮಾಡಿಕೊಟ್ಟಿತು.

    ಸಿರಾಜ್ ಆರ್‌ಸಿಬಿ ಪರ 87 ಪಂದ್ಯಗಳನ್ನು ಆಡಿದ್ದು, ಐಪಿಎಲ್‌ನಲ್ಲಿ 83 ವಿಕೆಟ್ ಕಿತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದಾಗ RCB ಯಲ್ಲಿ ಗಮನ ಸೆಳೆದಿದ್ದರು.

  • ತವರಿನಲ್ಲಿ ಆರ್‌ಸಿಬಿಗೆ ಇಂದು ನಿರ್ಣಾಯಕ ಪಂದ್ಯ – ಗೆದ್ದರಷ್ಟೇ ಪ್ಲೇ-ಆಫ್‌ ಕನಸು ಜೀವಂತ

    ತವರಿನಲ್ಲಿ ಆರ್‌ಸಿಬಿಗೆ ಇಂದು ನಿರ್ಣಾಯಕ ಪಂದ್ಯ – ಗೆದ್ದರಷ್ಟೇ ಪ್ಲೇ-ಆಫ್‌ ಕನಸು ಜೀವಂತ

    – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ V/S ಡೆಲ್ಲಿ ಫೈಟ್‌

    ಬೆಂಗಳೂರು: ತವರಿನಲ್ಲಿ ಇಂದು (ಭಾನುವಾರ) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಈ ಪಂದ್ಯ ಗೆದ್ದರಷ್ಟೇ ಆರ್‌ಸಿಬಿಗೆ (RCB) ಪ್ಲೇ-ಆಫ್‌ಗೇರುವ ಕನಸು ಜೀವಂತವಾಗಿರಲಿದೆ. ಒಂದರ್ಥದಲ್ಲಿ ಇದು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.

    ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಇಂದು ನಡೆಯುವ ಪಂದ್ಯದಲ್ಲಿ ಒಂದು ವೇಳೆ ಆರ್‌ಸಿಬಿ ಸೋತರೆ ನಾಕೌಟ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೂ (DC) ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸೋತರೆ ನಾಕೌಟ್‌ ಹಾದಿ ಕಠಿಣವಾಗಲಿದೆ. ಇದನ್ನೂ ಓದಿ: ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟ ಕೆಕೆಆರ್‌

    ಆರ್‌ಸಿಬಿ ಒಟ್ಟು 12 ಪಂದ್ಯಗಳನ್ನು ಆಡಿದ್ದು, 5 ಪಂದ್ಯಗಳಲ್ಲಿ ಜಯಗಳಿಸಿದೆ. ಟೂರ್ನಿಯ ಆರಂಭಿಕ 8 ಪಂದ್ಯಗಳಲ್ಲಿ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ 7 ರಲ್ಲಿ ಸೋತಿದೆ. ಆದರೆ ಕಳೆದ 4 ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನದೊಂದಿಗೆ ಜಯಭೇರಿ ಬಾರಿಸಿದೆ. ಗುಜರಾತ್‌ ವಿರುದ್ಧ 9 ವಿಕೆಟ್‌ಗಳ ಗೆಲುವು ಮತ್ತು ಪಂಜಾಬ್‌ ವಿರುದ್ಧ 60 ರನ್‌ಗಳ ಜಯ ಆರ್‌ಸಿಬಿ ತಂಡದ ರನ್‌ ನೆಟ್‌ ರೇಟನ್ನು ಹೆಚ್ಚಿಸಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ. ಸದ್ಯ ತಂಡಕ್ಕೆ ಎರಡು ಪಂದ್ಯಗಳಿದ್ದು, ಭಾರಿ ಅಂತರದಲ್ಲಿ ಗೆಲ್ಲಬೇಕಿದೆ. ಅದೃಷ್ಟ ಖುಲಾಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಇದೆ.

    ಡೆಲ್ಲಿ 12 ರಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ತಂಡ 12 ಅಂಕ ಸಂಪಾದಿಸಿದ್ದು, ಪ್ಲೇ-ಆಫ್‌ಗೇರಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆರ್‌ಸಿಬಿ ವಿರುದ್ಧ ಇಂದು ನಡೆಯುವ ಪಂದ್ಯದಲ್ಲಿ ಸೋತರೆ ಡೆಲ್ಲಿಗೆ ಪ್ಲೇ-ಆಫ್‌ ಹಾದಿ ಇನ್ನೂ ಕಠಿಣವಾಗಲಿದೆ. ಇದನ್ನೂ ಓದಿ: ಟೆಸ್ಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಜೇಮ್ಸ್ ಆಂಡರ್ಸನ್ ನಿವೃತ್ತಿ

    ವಿರಾಟ್‌ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಪಂದ್ಯಗಳಲ್ಲಿ ದಾಖಲೆ ಕೂಡ ಬರೆಯುತ್ತಿದ್ದಾರೆ. ತವರಿನಲ್ಲಿ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ವಿಲ್‌ ಜಾಕ್ಸ್‌, ರಜತ್‌ ಪಾಟೀದಾರ್‌ ಕೂಡ ನಿರೀಕ್ಷೆ ಮೂಡಿಸಿದ್ದಾರೆ. ಡು ಪ್ಲೆಸಿಸ್‌ ಮತ್ತು ದಿನೇಶ್‌ ಕಾರ್ತಿಕ್‌ ತಂಡದ ಕೈ ಹಿಡಿಯಬೇಕಿದೆ. ಬೌಲರ್‌ಗಳು ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದನ್ನೇ ಮುಂದುವರಿಸಿದರೆ ತಂಡಕ್ಕೆ ಸಹಕಾರಿಯಾಗಲಿದೆ.

    ಡೆಲ್ಲಿ ತಂಡದಲ್ಲೂ ಜೇಕ್‌ ಫ್ರೇಸರ್‌, ಅಭಿಷೇಕ್‌ ಪೊರೆಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಡೆಲ್ಲಿ ಬೌಲರ್‌ಗಳು ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ. ಇಂದು ಸಂಜೆ 7:30 ಪಂದ್ಯ ನಡೆಯಲಿದೆ.