Tag: Royal Challengers

  • 750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    ನವದೆಹಲಿ: ಐಪಿಎಲ್ ಹರಾಜಿನಲ್ಲಿ ಡೆಕ್ಕನ್ ಚಾರ್ಜರ್ಸ್ (Deccan Chargers) ತಂಡಕ್ಕೆ ಆಯ್ಕೆಯಾದಾಗಿನ ರೋಚಕ ವಿಚಾರವೊಂದನ್ನು ರೋಹಿತ್ ಶರ್ಮಾ (Rohit Sharma) ತೆರಿದಿಟ್ಟಿದ್ದಾರೆ.

    2008ರಲ್ಲಿ ಮೊದಲ ಬಾರಿಗೆ ಐಪಿಎಲ್ ( IPL) ಆರಂಭವಾಗಿತ್ತು. ಈ ವೇಳೆ 20 ವರ್ಷದ ರೋಹಿತ್ ಶರ್ಮಾ ಅವರನ್ನು ಡೆಕ್ಕನ್ ಚಾರ್ಜರ್ಸ್ ತಂಡ ಖರೀದಿಸಿತ್ತು. ಹರಾಜಾದ ವಿಷಯ ತಿಳಿದು ಅಚ್ಚರಿಗೊಂಡಿದ್ದ ರೋಹಿತ್ ಶರ್ಮಾ ಸಿಕ್ಕಿದ ಹಣದಿಂದ ಕಾರನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಿದ್ದ ವಿಚಾರವನ್ನು ಈಗ ಬಹಿರಂಗ ಮಾಡಿದ್ದಾರೆ. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಹೈದರಾಬಾದ್ ತಂಡ 7,50,000 ಡಾಲರ್ ನೀಡಿ ಖರೀದಿಸಿದಾಗ ಅಂದು ನಾನು 3 ರಿಂದ 3.5 ಕೋಟಿ ರೂ. ಸಿಗಬಹುದು ಎಂದು ಅಂದುಕೊಂಡಿದ್ದೆ. ಅದರಲ್ಲೂ ನನ್ನ ಬಿಡ್ ಬಹಳ ತಡವಾಗಿ ಆಗಿತ್ತು. ಇಷ್ಟೊಂದು ಮೊತ್ತದ ಹಣವನ್ನು ಕೇಳಿ ನಾನು ಕಾರು ಖರೀದಿಸುವ ಬಗ್ಗೆ ಅಲ್ಲೇ ಯೋಚಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಸೆಣಸಿದ್ದ ಅವರು ಮೂರು ಅವೃತ್ತಿಯಲ್ಲಿ 1170 ರನ್ ದಾಖಲಿಸಿಕೊಂಡಿದ್ದರು. ನಂತರ 2011ರಲ್ಲಿ ಮುಂಬೈ ತಂಡ 13 ಕೋಟಿ ರೂ.ಗಳಿಗೆ ಅವರನ್ನು ಖರೀದಿಸಿತ್ತು. ಅಂದಿನಿಂದ ಮುಂಬೈ ಇಂಡಿಯನ್ (Mumbai Indians) ತಂಡದ ಸದಸ್ಯರಾಗಿ ಉಳಿದ ರೋಹಿತ್ 2013ರಲ್ಲಿ ತಂಡದ ಗೆಲುವಿನಲ್ಲಿ ಪಾತ್ರವಹಿಸಿದ್ದರು. 2015, 2017, 2019 ಹಾಗೂ 2020ರ ತಂಡವನ್ನು ಮುನ್ನಡೆಸಿದ್ದರು.

    ಈ ಬಾರಿಯ ಐಪಿಎಲ್‍ಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹತ್ತು ವರ್ಷ ಪೂರೈಸಲಿದ್ದಾರೆ. ಎಪ್ರಿಲ್ 2 ರಂದು ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal Challengers) ವಿರುದ್ಧ ಆಡಲಿದ್ದಾರೆ. ಇದನ್ನೂ ಓದಿ: ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ

  • ಪಡಿಕ್ಕಲ್, ಕೊಹ್ಲಿ ಬೊಂಬಾಟ್ ಆಟಕ್ಕೆ ಮಣಿದ ರಾಜಸ್ಥಾನ- ಆರ್‌ಸಿಬಿಗೆ 8 ವಿಕೆಟ್ ಗೆಲುವು

    ಪಡಿಕ್ಕಲ್, ಕೊಹ್ಲಿ ಬೊಂಬಾಟ್ ಆಟಕ್ಕೆ ಮಣಿದ ರಾಜಸ್ಥಾನ- ಆರ್‌ಸಿಬಿಗೆ 8 ವಿಕೆಟ್ ಗೆಲುವು

    -ಅಂಕ ಪಟ್ಟಿಯಲ್ಲಿ ಮೊದಲ‌‌ ಸ್ಥಾನಕ್ಕೆ ಏರಿದ ಆರ್‌ಸಿಬಿ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2020ರ ಆವೃತಿಯಲ್ಲಿ 3ನೇ ಗೆಲುವು ಪಡೆದಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‍ಗಳ ಗೆಲುವು ಪಡೆದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 6 ಪಾಯಿಂಟ್ ಗಳೊಂದಿಗೆ ನಂ.1 ಸ್ಥಾನಕ್ಕೆ ಏರಿದೆ.

    ಪಡಿಕ್ಕಲ್ (63 ರನ್), ವಿರಾಟ್ ಕೊಹ್ಲಿ (72 ರನ್) ಅರ್ಧ ಶತಕದ ನೆರವಿನಿಂದ 155 ರನ್‍ಗಳ ಗುರಿಯನ್ನು 5 ಎಸೆತ ಬಾಕಿ ಇರುವಂತೆಯೇ ಆರ್‌ಸಿಬಿ ಗುರಿ ಮುಟ್ಟಿತು. 19.1 ಓವರ್ ನಲ್ಲಿ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.

    155 ರನ್ ಗಳ ಸ್ಪರ್ಧತ್ಮಾಕ ರನ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಬೌಂಡರಿ, ಸಿಕ್ಸರ್ ಮೂಲಕ ಸ್ಫೋಟಕ ಆರಂಭವನ್ನೇ ನೀಡಿದರು. ಆದರೆ ತಂಡ 2.3 ಓವರ್ ಗಳಲ್ಲಿ 25 ರನ್ ಗಳಿಸಿದ್ದ ವೇಳೆ ಫಿಂಚ್, ಗೋಪಾಲ್‍ಗೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ರಾಜಸ್ಥಾನ ತಂಡ ನಾಯಕ ತೆಗೆದುಕೊಂಡ ಡಿಆರ್‍ಎಸ್ ಮನವಿ ಸಫಲತೆಯನ್ನು ನೀಡಿತ್ತು.

    ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿದ್ದ ಪಡಿಕ್ಕಲ್ ಜೊತೆ ಕೂಡಿಕೊಂಡ ನಾಯಕ ಕೊಹ್ಲಿ ತಾಳ್ಮೆ ಆಟಕ್ಕೆ ಮುಂದಾದರು. ಪವರ್ ಪ್ಲೇ ಅಂತ್ಯ ವೇಳೆಗೆ ಆರ್‌ಸಿಬಿ ವಿಕೆಟ್ ಕಳೆದುಕೊಂಡು 50 ರನ್ ಗಳಿಸಿತ್ತು.

    ಪಡಿಕ್ಕಲ್ ಬೊಂಬಾಟ್ ಬ್ಯಾಟಿಂಗ್: ಇನ್ನಿಂಗ್ಸ್ ಆರಂಭದಿಂದಲೂ ರಾಜಸ್ಥಾನ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಿಸಿದ ಪಡಿಕ್ಕಲ್ 2020ರ ಆವೃತ್ತಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ಇನಿಂಗ್ಸ್ ನಲ್ಲಿ ತಂಡ 124 ರನ್ ಗಳಿಸಿದ್ದ ಸಂದರ್ಭದಲ್ಲಿ, 15 ಓವರಿನ 5ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದರು.

    ಫಾರ್ಮ್‍ಗೆ ಮರಳಿದ ಕೊಹ್ಲಿ: ಐಪಿಎಲ್ 2020ರ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‍ನಲ್ಲಿ ವಿಫಲವಾಗಿದ್ದ ಕೊಹ್ಲಿ ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದರು. ಇನ್ಸಿಂಗ್ ಆರಂಭದಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 8 ಇನ್ನಿಂಗ್ಸ್ ಗಳ ಬಳಿಕ ಕೊಹ್ಲಿ ಅರ್ಧ ಶತಕ ಗಳಿಸಿದ್ದರು. ಇನ್ಸಿಂಗ್‍ನಲ್ಲಿ 71 ರನ್ ಗಳಿಸಿದ್ದ ಸಂದರ್ಭದಲ್ಲಿ ಕೊಹ್ಲಿ ಐಪಿಎಲ್‍ನಲ್ಲಿ 5500 ರನ್‍ಗಳನ್ನು ಪೂರ್ಣಗೊಳಿಸಿದರು.

    ಪಂದ್ಯದಲ್ಲಿ ಪಡಿಕ್ಕಲ್, ಕೊಹ್ಲಿ ಜೋಡಿ 80 ಎಸೆತಗಳಲ್ಲಿ 99 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣವಾಯಿತು. ನಾಯಕ ಕೊಹ್ಲಿ ಅಂತಿಮವಾಗಿ 53 ಎಸೆತಗಳಲ್ಲಿ 7 ಬೌಂಡತರಿ, 2 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿ ಅಜೇಯರಾಗಿ ಉಳಿದರು. ಉಳಿದಂತೆ ಆರ್ ಸಿಬಿ ಪರ ಫಿಂಚ್ 8 ರನ್, ಎಬಿಡಿ ಔಟಾಗದೆ 10 ಎಸೆತಗಳಲ್ಲಿ 12 ರನ್ ಗಳಿಸಿದರು.

    ಇದಕ್ಕೂ ಮುನ್ನ ಆರ್‌ಸಿಬಿ ಸ್ಪಿನ್ ಮಾಂತ್ರಿಕ ಚಹಲ್, ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್‍ಗಳ ಟಾರ್ಗೆಟ್ ನೀಡಿತ್ತು. ಆರ್ ಸಿಬಿ ಪರ ಚಹಲ್ ಪ್ರಮುಖ 3 ವಿಕೆಟ್ ಪಡೆದರೆ, ಉದಾನಾ 2 ಹಾಗೂ ಸೈನಿ 1 ವಿಕೆಟ್ ಪಡೆದರು.

    ರಾಜಸ್ಥಾನ ರಾಯಲ್ಸ್ ಪರ ಲೊಮರ್ ಗಳಿಸಿದ ತಾಳ್ಮೆಯ 47 ರನ್ ಹಾಗೂ ಅಂತಿಮ ಸ್ಲಾಗ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದ್ದು, ರಾಜಸ್ಥಾನ ತಂಡ ಇನ್ನಿಂಗ್ಸ್ ನಲ್ಲಿ ಸ್ಪಧಾತ್ಮಕ ಮೊತ್ತ ದಾಖಲಿಸಲು ಕಾರಣವಾಯ್ತು.

  • ವಿವಾದಕ್ಕೆ ಕಾರಣವಾಯ್ತು ಚಹಲ್ ಹಿಡಿದ ಕ್ಯಾಚ್- ಚೆಂಡು ನೆಲಕ್ಕೆ ತಾಗಿತ್ತಾ?

    ವಿವಾದಕ್ಕೆ ಕಾರಣವಾಯ್ತು ಚಹಲ್ ಹಿಡಿದ ಕ್ಯಾಚ್- ಚೆಂಡು ನೆಲಕ್ಕೆ ತಾಗಿತ್ತಾ?

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಮತ್ತೊಂದು ವಿವಾದತ್ಮಾಕ ತೀರ್ಪು ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ ರಾಯಲ್ಸ್, ಬೆಂಗಳೂರು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಘಟನೆ ನಡೆದಿದೆ.

    ಪಂದ್ಯದಲ್ಲಿ 4ನೇ ಓವರಿನ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಬೌಂಡರಿ ಸಿಡಿಸಲು ಮುಂದಾದರು, ಆದರೆ ಈ ವೇಳೆ ಸಂಜು ಬ್ಯಾಟ್‍ಗೆ ಟಚ್‍ಆಗಿ ಸಿಡಿದ ಚೆಂಡನ್ನು ಚಹಲ್ ಕ್ಯಾಚ್ ಪಡೆದರು. ಆದರೆ ಚಹಲ್ ಪಡೆದ ಕ್ಯಾಚ್ ಕುರಿತು ಅನುಮಾನ ವ್ಯಕ್ತಪಡಿಸಿದ ಆನ್‍ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಿದ್ದರು. ರೀಪ್ಲೇ ಗಮನಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

    ಆದರೆ ಮೂರನೇ ಅಂಪೈರ್ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಭಿಮಾನಿಗಳು, ಫೀಲ್ಡ್ ಅಂಪೈರ್ ತೀರ್ಪಿಗೆ ಸಹಮತ ವ್ಯಕ್ತಪಡಿಸಿದಕ್ಕೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಹಲ್ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಚೆಂಡು ಭೂಮಿಗೆ ತಾಗಿದೆ ಎಂದು ವಾದ ಮಂಡಿಸಿದ್ದರೆ. ಮತ್ತೆ ಕೆಲ ಅಭಿಮಾನಿಗಳು ಚಹಲ್ ಬೆರಳು ಚೆಂಡಿನ ಕೆಳಭಾಗದಲ್ಲಿ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

    ಪಂದ್ಯದಲ್ಲಿ ಆರ್‌ಸಿಬಿ ಸ್ಪಿನ್ ಮಾಂತ್ರಿಕ ಚಹಲ್, ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್‍ಗಳ ಟಾರ್ಗೆಟ್ ನೀಡಿದೆ. ಆರ್ ಸಿಬಿ ಪರ ಚಹಲ್ ಪ್ರಮುಖ 3 ವಿಕೆಟ್ ಪಡೆದರೆ, ಉದಾನಾ 2 ಹಾಗೂ ಸೈನಿ 1 ವಿಕೆಟ್ ಪಡೆದರು.

    ರಾಜಸ್ಥಾನ ರಾಯಲ್ಸ್ ಪರ ಲೊಮರ್ ಗಳಿಸಿದ ತಾಳ್ಮೆಯ 47 ರನ್ ಹಾಗೂ ಅಂತಿಮ ಸ್ಲಾಗ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್‍ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದ್ದು, ರಾಜಸ್ಥಾನ ತಂಡ ಇನ್ನಿಂಗ್ಸ್ ನಲ್ಲಿ ಸ್ಪಧಾತ್ಮಕ ಮೊತ್ತ ದಾಖಲಿಸಲು ಕಾರಣವಾಯ್ತು.

  • ಆರ್‌ಸಿಬಿಯಿಂದ ಬೆಂಗ್ಳೂರು ಮಾನ ಹರಾಜು – ತಂಡದ ಹೆಸರು ಬದಲಾಯಿಸುವಂತೆ ಕ್ರಿಕೆಟ್ ಮಂಡಳಿಗೆ ಪತ್ರ

    ಆರ್‌ಸಿಬಿಯಿಂದ ಬೆಂಗ್ಳೂರು ಮಾನ ಹರಾಜು – ತಂಡದ ಹೆಸರು ಬದಲಾಯಿಸುವಂತೆ ಕ್ರಿಕೆಟ್ ಮಂಡಳಿಗೆ ಪತ್ರ

    ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಪರಿಣಾಮ ಬೆಂಗಳೂರಿನ ಮಾನ ಹರಾಜಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬವರು ರಾಜ್ಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದಾರೆ.

    ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿಬಾರಿಯು ಆರ್‌ಸಿಬಿ ಕಳಪೆ ಪ್ರದರ್ಶನ ನೀಡುತ್ತಿದೆ. ಇಡೀ ತಂಡದಲ್ಲಿ ಯಾವ ಕನ್ನಡಿಗ ಆಟಗಾರ ಕೂಡ ಇಲ್ಲ. ಅಲ್ಲದೇ ರಾಜ್ಯದ ಕುಂಬ್ಳೆ ಅವರನ್ನು ಆ ಹುದ್ದೆಯಿಂದ ತೆಗೆಯಲು ತಂಡದ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ತಂಡದ ಕೆಟ್ಟ ನಿರ್ಧಾರದಿಂದ ಬೆಂಗಳೂರಿನ ಮಾನ ಹರಾಜಾಗುತ್ತಿದೆ. ಹಾಗಾಗಿ ರಾಯಲ್ ಚಾಲೆಂಜರ್ಸ್ ತಂಡದ ಹೆಸರಿನಿಂದ ಬೆಂಗಳೂರು ಹೆಸರು ತೆಗೆದು ಹಾಕಿ ಬೆಂಗಳೂರು ಮಾನ ಉಳಿಸುವಂತೆ ಮನವಿ ಮಾಡಿದ್ದಾರೆ.

    ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಪ್ರತಿ ಪಂದ್ಯದಲ್ಲೂ ಅಭಿಮಾನಿಗಳು ತಂಡವನ್ನು ಬೆಂಬಲಿಸಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಇದ್ದರೂ ಕೂಡ ತಂಡದ ಆಡಳಿತ ಮಂಡಳಿ ಆಟಗಾರರನ್ನು ಕಡೆಗಣಿಸಿದೆ. ಅದಾಗ್ಯೂ ತಂಡದಲ್ಲಿ ಉತ್ತಮ ಆಟಗಾರರು ಇದ್ದರು ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಕರ್ನಾಟಕಕ್ಕೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಿಆರ್ ವಿಶ್ವನಾಥ್, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ವೆಂಕಟೇಶ್ ಪ್ರಸಾದ್, ಕಿರ್ಮಾನಿ, ಜಾವಗಲ್ ಶ್ರೀನಾಥ್ ಸೇರಿದಂತೆ ಹಲವು ಹಿರಿಯ ಆಟಗಾರರು ತಂದಿದ್ದ ಕೀರ್ತಿಯನ್ನು ಮಣ್ಣುಪಾಲು ಮಾಡುತ್ತಿರುವ ತಂಡದ ಹೆಸರಿನಿಂದ ಬೆಂಗಳೂರು ಹೆಸರನ್ನು ತೆಗೆದುಹಾಕಿ ಎಂದು ಮನವಿ ಮಾಡಿದ್ದಾರೆ.

    https://twitter.com/WOLFIESTR/status/1112427590986268672

  • ಪಂದ್ಯ ಮುಗಿತು, ಡ್ಯಾಡಿ ಡ್ಯೂಟಿಗೆ ಹಾಜರಾದ ಧೋನಿ: ವಿಡಿಯೋ ವೈರಲ್

    ಪಂದ್ಯ ಮುಗಿತು, ಡ್ಯಾಡಿ ಡ್ಯೂಟಿಗೆ ಹಾಜರಾದ ಧೋನಿ: ವಿಡಿಯೋ ವೈರಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಭರ್ಜರಿ ಪ್ರದರ್ಶನವನ್ನು ನೀಡಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಂದೆಯೆ ಡ್ಯೂಟಿಗೆ ಹಾಜರಾಗಿದ್ದಾರೆ.

    ಹೌದು. ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಧೋನಿ ನಿದ್ದೆ ಬಳಿದ ಬಳಿಕ ಮಗಳು ಝಿವಾಳ ಕೂದಲನ್ನು ಡ್ರೈಯರ್ ನಲ್ಲಿ ಒಣಗಿಸಿದ್ದಾರೆ.

    ಧೋನಿ ಮಗಳ ಕೂದಲನ್ನು ಒಣಗಿಸುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ “Game over, had a nice sleep now back to Daddy’s duties” ಎಂದು ಬರೆದಿದ್ದಾರೆ. ಗುರುವಾರ ಸಂಜೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು 23 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ನೋಡಿದ್ದು ವೈರಲ್ ಆಗಿದೆ.

    ಚೆನ್ನೈ ಹಾಗೂ ಆರ್ ಸಿ ಬಿ ನಡುವೆ ನಡೆದ ಹೈವೋಲ್ಟೇಜ್ ಪಂದ್ಯ ಕಾರಣ ಕ್ರೀಡಾಂಗಣದ ತುಂಬಾ ಅಭಿಮಾನಿಗಳು ತುಂಬಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿ ಬಿ ತಂಡ 205 ರನ್‍ಗಳ ಸವಾಲಿನ ಮೊತ್ತವನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಪರ ರಾಯುಡು ಹಾಗೂ ನಾಯಕ ಎಂಎಸ್ ಧೋನಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಧೋನಿ ಕೇವಲ 30 ಎಸೆತಗಳಲ್ಲಿ ಅಜೇಯ 70 ರನ್ (3ಬೌಂಡರಿ, 8 ಸಿಕ್ಸರ್) ಸಿಡಿಸಿದ್ದರೆ, ಇದಕ್ಕೂ ಮುನ್ನ ಅಂಬಟಿ ರಾಯುಡು 82 (53 ಎಸೆತ 3 ಬೌಂಡರಿ, 8 ಸಿಕ್ಸರ್) ರನ್ ಸಿಡಿಸಿದ್ದರು.

    https://www.instagram.com/p/BiB3dqknOPG/?taken-by=mahi7781