Tag: rowdysheeter

  • ಊಟ ಮಾಡ್ತಿದ್ದಾಗ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‍ನ ಬರ್ಬರ ಹತ್ಯೆ

    ಊಟ ಮಾಡ್ತಿದ್ದಾಗ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‍ನ ಬರ್ಬರ ಹತ್ಯೆ

    ಬೆಂಗಳೂರು: ಊಟ ಮಾಡುತ್ತಿದ್ದ ವೇಳೆಯಲ್ಲೇ ದುಷ್ಕರ್ಮಿಗಳು ಬಂದು ರೌಡಿಶೀಟರೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.

    ರಂಜಿತ್(30) ಕೊಲೆಯಾದ ರೌಡಿ ಶೀಟರ್. ಈ ಘಟನೆ ನಿನ್ನೆ ತಡರಾತ್ರಿ ಸುಮಾರು 12.30ರ ವೇಳೆಯಲ್ಲಿ ಫ್ರೇಜರ್ ಟೌನ್ ಬಳಿಯ ಗೋಶಾಲೆಯಲ್ಲಿ ನಡೆದಿದೆ.

    ಫ್ರೇಜರ್ ಟೌನ್‍ನ ರೌಡಿ ಶೀಟರ್ ರಂಜಿತ್ ಬುಧವಾರ ರಾತ್ರಿ ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ಗೋಶಾಲೆಯಲ್ಲಿ ಊಟಕ್ಕೆ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಬಂದು ಏಕಾಏಕಿ ರಂಜಿತ್ ಮೇಲೆ ಮಾರಕಾಸ್ತ್ರಗಳಿಂದ ಇರಿದಿದ್ದಾರೆ. ಪರಿಣಾಮ ವಿಪರೀತ ರಕ್ತಸ್ತಾವವಾಗಿ ರಂಜಿತ್ ಗೋವುಗಳ ನಡುವೆ ಪ್ರಾಣಬಿಟ್ಟಿದ್ದಾನೆ.

    ಈ ಹಿಂದೆ ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಸೇರಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿಯೂ ಕೆಲ ಕೇಸ್ ದಾಖಲಾಗಿದ್ದವು. ಸದ್ಯ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಬಳ್ಳಾರಿಯಲ್ಲಿ ರೌಡಿಶೀಟರ್ ಬಂಡಿ ರಮೇಶನ ಭೀಕರ ಹತ್ಯೆ

    ಬಳ್ಳಾರಿಯಲ್ಲಿ ರೌಡಿಶೀಟರ್ ಬಂಡಿ ರಮೇಶನ ಭೀಕರ ಹತ್ಯೆ

    ಬಳ್ಳಾರಿ: ನೆಟೋರಿಸ್ ರೌಡಿ ಬಂಡಿ ರಮೇಶನನ್ನು ಬಳ್ಳಾರಿಯ ಹೊರವಲಯದ ಗುಗ್ಗರಹಟ್ಟಿಯ ಸಾಯಿ ಪವನ್ ಡಾಬಾದಲ್ಲಿ ಇಂದು ಮಧ್ಯಾಹ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.

    2 ಕೊಲೆ ಪ್ರಕರಣ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಂಡಿ ರಮೇಶನನ್ನು ರುಂಡ ಛಿದ್ರವಾಗುವಂತೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಳೆದ ವರ್ಷ ಬಿಜೆಪಿ ಪಕ್ಷ ಸೇಪರ್ಡೆಯಾಗಿ ಬಳ್ಳಾರಿ ನಗರ ಎಸ್‍ಟಿ ಮೋರ್ಚಾ ಅಧ್ಯಕ್ಷನಾಗಿದ್ದ ರಮೇಶ, ಇತ್ತೀಚೆಗಷ್ಟೆ ಬಿಜೆಪಿ ತೊರೆದಿದ್ದ.

    ಬಂಡಿ ರಮೇಶ ಕೊಲೆಯಾಗುತ್ತಿದ್ದಂತೆ ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆಸಿದ್ದಾರೆ.

  • ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

    ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದ ವಿದ್ಯಾರಣ್ಯಪುರದ ರೈನ್ ಬೋ ಲೇಔಟ್‍ನಲ್ಲಿ ರೌಡಿ ಶೀಟರ್ ನಕುಲ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ನಕುಲ್‍ನನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ. ಆಗ ಆತ್ಮರಕ್ಷಣೆಗೆ ಎಸ್‍ಐ ಪುನೀತ್ ನಕುಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಆರೋಪಿ ನಕುಲ್ 2016ರ ಫೆಬ್ರವರಿಯಲ್ಲಿ ನಡೆದಿದ್ದ ಗ್ರಾಮಪಂಚಾಯ್ತಿ ಸದಸ್ಯೆ ಗಂಡನ ಕೊಲೆಯ ಪ್ರಮುಖ ಆರೋಪಿ ಆಗಿದ್ದಾನೆ. ಶುಕ್ರವಾರದಂದು ಜೋಸೆಫ್ ಎಂಬಾತನನ್ನು ಹತ್ಯೆ ಮಾಡಲು ಯತ್ನಿಸಿ, ಸಂಜೆ 6 ಗಂಟೆ ಸಮಯದಲ್ಲಿ ಜೋಸೆಫ್ ಮನೆಗೆ ನುಗ್ಗಿ ಗಲಾಟೆ ಕೂಡ ಮಾಡಿದ್ದ.

    ದೂರಿನ ಮೇರೆಗೆ ನಕುಲ್‍ನನ್ನ ಬಂಧಿಸಲು ಹೋದಾಗ ಪೇದೆ ಸಿದ್ದು ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ನಕುಲ್ ಕಾಲಿಗೆ ಗುಂಡು ಹಾರಿಸಿ ಆತನನ್ನ ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಆರೋಪಿ ನಕುಲ್ ಹಾಗು ಪೇದೆ ಸಿದ್ದು ಅವ್ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ರುಂಡ ಒಂದ್ಕಡೆ, ಮುಂಡ ಒಂದ್ಕಡೆ- ರೌಡಿಶೀಟರ್ ಅಯೂಬ್ ಖಾನ್ ಭೀಕರ ಕೊಲೆ!

    ರುಂಡ ಒಂದ್ಕಡೆ, ಮುಂಡ ಒಂದ್ಕಡೆ- ರೌಡಿಶೀಟರ್ ಅಯೂಬ್ ಖಾನ್ ಭೀಕರ ಕೊಲೆ!

    ಬೆಂಗಳೂರು: ಹಫ್ತಾ ವಸೂಲಿ ಮಾಡೋದು, ಅಲ್ಲದೇ ಸಿಕ್ಕವರನ್ನು ಹೊಡೆದು ಹಲ್ಲೆ ಮಾಡ್ತಿದ್ದ ರೌಡಿಶೀಟರೊಬ್ಬ ಭೀಕರವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ.

    ಮೃತ ರೌಡಿಶೀಟರನ್ನು ಅಯೂಬ್ ಖಾನ್ ಎಂದು ಗುರುತಿಸಲಾಗಿದೆ. ಕೆಜಿ ಹಳ್ಳಿಯ ಗೋವಿಂದಪುರದಲ್ಲಿ ವಾಸವಾಗಿದ್ದ ಅಯೂಬ್ ಕಂಡಕಂಡೋರಿಗೆಲ್ಲಾ ಬೆದರಿಸಿ ಹಣ ದೋಚುತ್ತಿದ್ದ. ಅಲ್ಲದೇ ಸಿಕ್ಕವರನ್ನು ಹೊಡೆದು ಹಲ್ಲೆ ಮಾಡ್ತಿದ್ದ. ಆದ್ರೆ ಶನಿವಾರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವನು ಇಂದು ಬೆಳಗ್ಗೆ ಹೆಣವಾಗಿ ಸಿಕ್ಕಿದ್ದಾನೆ. ಬಾಗಲೂರಿನ ನೀಲಗಿರಿಯ ತೋಪಿನಲ್ಲಿ ಆಯೂಬ್ ರುಂಡ ಮುಂಡ ಬೇರೆ ಬೇರೆಯಾಗಿ ಬಿದ್ದಿತ್ತು.

    ಬಾಗಲೂರು ಬಳಿ ಎರಡು ಎಕರೆ ಜಮೀನಿಗೆ ಹೊಡೆದಾಟ ನಡೆದಿದ್ದು, ಅದಕ್ಕಾಗಿಯೇ ಕೊಲೆ ಮಾಡಿ ಅವನ ಜಮೀನನ ಪಕ್ಕದಲ್ಲೇ ಹಾಕಿದ್ದಾರೆ ಅಂತಾ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಪಿಎಸ್‍ಐ

    ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಪಿಎಸ್‍ಐ

    ಚಿಕ್ಕಬಳ್ಳಾಪುರ: ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಕಾಲಿಗೆ ಪಿಎಸ್‍ಐ ರಿವಾಲ್ವರ್ ನಿಂದ ಗುಂಡು ಹಾರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಭಕ್ತರಹಳ್ಳಿ ಶ್ರೀನಿವಾಸ್ ಅಲಿಯಾಸ್ ದಂಡು ಸೀನನ ಮೇಲೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ಪಿಎಸ್‍ಐ ಸುಂದರ್ ಗುಂಡು ಹಾರಿಸಿದ್ದಾರೆ. ರಾಬರಿ ಪ್ರಕರಣ ಸಂಬಂಧ ರೌಡಿಶೀಟರ್ ಸೀನನನ್ನ ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ.

    ಕುಡಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಸಹಚರರ ಜೊತೆಗೂಡಿ ಇಂಡಿಕಾ ಕಾರಿನಲ್ಲಿದ್ದ ಸೀನನ ಮೇಲೆ ದಾಳಿ ನಡೆಸಿದಾಗ, ಸೀನ ಪ್ರತಿದಾಳಿ ಮಾಡಿ ಪೊಲೀಸರ ಮೇಲೆಯೇ ಲಾಂಗ್‍ನಿಂದ ಬೀಸಿದ್ದಾನೆ.

    ಇದ್ರಿಂದ ಆತ್ಮರಕ್ಷಣೆಗೆ ಅಂತ ಪಿಎಸ್‍ಐ ಸುಂದರ್ ತಮ್ಮ ರಿವಾಲ್ವರ್ ನಿಂದ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದ್ರೂ ಶರಣಾಗದೆ ಪರಾರಿಯಾಗುತ್ತಿದ್ದ ಸೀನನ ಕಾಲಿಗೆ ಪಿಎಸ್‍ಐ ಗುಂಡು ಹಾರಿಸಿದ್ದು, ಸದ್ಯ ಗಾಯಾಳು ಸೀನನನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿದೆ.

    ಪ್ರಕರಣ ಸಂಬಂಧ ಸೀನನ ಮೂವರು ಸಹಚರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೌಡಿಶೀಟರ್ ಸೀನನ ಮೇಲೆ ಪೊಲೀಸರ ಮೇಲಿನ ಹಲ್ಲೆ ಸೇರಿದಂತೆ ಇನ್ನೂ ಹಲವು ಪ್ರಕರಣಗಳಿವೆ.

  • ಬೈಕ್ ತಳ್ಳುವಂತೆ ಅವಾಜ್ ಹಾಕಿದ ರೌಡಿಶೀಟರ್‍ಗೆ ಟೆಕ್ಕಿಗಳಿಂದ ಹಲ್ಲೆ

    ಬೈಕ್ ತಳ್ಳುವಂತೆ ಅವಾಜ್ ಹಾಕಿದ ರೌಡಿಶೀಟರ್‍ಗೆ ಟೆಕ್ಕಿಗಳಿಂದ ಹಲ್ಲೆ

    ಮೈಸೂರು: ರೌಡಿ ಶೀಟರ್ ಮೇಲೆಯೇ ಟೆಕ್ಕಿಗಳು ಹಲ್ಲೆ ಮಾಡಿರೋ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆ ಬಳಿ ನಡೆದಿದೆ.

    ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಭಿ ಎಂಬ ರೌಡಿ ಶೀಟರ್ ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ರೌಡಿ ಶೀಟರ್‍ಗೆ ಇಬ್ಬರು ಟೆಕ್ಕಿಗಳು ಸಿಕ್ಕಿದ್ರು. ಟೆಕ್ಕಿಗಳಿಗೆ ಬೈಕ್ ತಳ್ಳುವಂತೆ ಅಭಿ ಅವಾಜ್ ಹಾಕಿದ್ದ. ರೌಡಿಶೀಟರ್ ಅವಾಜ್‍ಗೆ ಬೆದರಿ ಮೊದಲು ಓಡಿದ ಟೆಕ್ಕಿಗಳು ಸ್ವಲ್ಪ ದೂರ ಓಡಿದ ಬಳಿ ಹಿಂತಿರುಗಿ ಬಂದು ಚಾಕುವಿನಿಂದ ರೌಡಿಶೀಟರ್‍ಗೆ ಇರಿದಿದ್ದಾರೆ.

    ಹಲ್ಲೆಗೊಳಗಾದ ಅಭಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೈದ ಇಬ್ಬರು ಟೆಕ್ಕಿಗಳಾದ ಮೋಹಿತ್ ಹಾಗೂ ತಮಿಳರಸನ್‍ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

    ಸದ್ಯ ಅಭಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.