Tag: rowdysheeter

  • ರುಂಡ-ಮುಂಡ ಬೇರ್ಪಟ್ಟ ರೀತಿಯಲ್ಲಿ ಕಿಡ್ನಾಪ್ ಆಗಿದ್ದ ರೌಡಿಶೀಟರ್ ಶವ ಪತ್ತೆ!

    ರುಂಡ-ಮುಂಡ ಬೇರ್ಪಟ್ಟ ರೀತಿಯಲ್ಲಿ ಕಿಡ್ನಾಪ್ ಆಗಿದ್ದ ರೌಡಿಶೀಟರ್ ಶವ ಪತ್ತೆ!

    ಬೆಂಗಳೂರು: ರೌಡಿಶೀಟರ್ ಒಬ್ಬನನ್ನು ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹೊಸೂರಿನಲ್ಲಿ ನಡೆದಿದೆ.

    ಹೊಸೂರಿನ ಬಾಗಲೂರು ರಸ್ತೆಯ ನಿವಾಸಿ ಚೇತು(36) ಭೀಕರವಾಗಿ ಕೊಲೆಯಾದ ರೌಡಿಶೀಟರ್. ಚೇತುವನ್ನು 2 ದಿನಗಳ ಹಿಂದೆ ಮನೆ ಬಳಿಯಿಂದ ಅಪಹರಿಸಲಾಗಿತ್ತು. ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಆದರೆ ಇಂದು ಹೊಸೂರಿನ ಮತ್ತಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೇತುವಿನ ಶವ ರುಂಡ ಮುಂಡ ಬೇರ್ಪಟ್ಟ ರೀತಿಯಲ್ಲಿ ಪತ್ತೆಯಾಗಿದೆ.

    ಚೇತು ಈ ಹಿಂದೆ ಹೊಸೂರಿನ ರಿಯಲ್ ಎಸ್ಟೇಟ್ ಉದ್ಯಮಿ ವಸಂತಮ್ ಹಾಗೂ ಸ್ಟಿಲ್ ವ್ಯಾಪಾರಿ ಮುಸ್ತಾಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈತನ ಮೇಲೆ ಹೊಸೂರು ಮತ್ತಿಕೆರೆ ಹಾಗೂ ಆನೇಕಲ್ ತಾಲೂಕಿನ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿದ್ದವು.

    ಇದೀಗ ಮತ್ತಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ರೌಡಿಗಳ ನಿಯಂತ್ರಣ ಯಜ್ಞಕ್ಕೆ ಮುಂದಾದ ಬೆಂಗ್ಳೂರು ಪೊಲೀಸ್- ರಾತ್ರೋರಾತ್ರಿ ರೌಡಿ ಕಾಲಿಗೆ ಗುಂಡೇಟು

    ರೌಡಿಗಳ ನಿಯಂತ್ರಣ ಯಜ್ಞಕ್ಕೆ ಮುಂದಾದ ಬೆಂಗ್ಳೂರು ಪೊಲೀಸ್- ರಾತ್ರೋರಾತ್ರಿ ರೌಡಿ ಕಾಲಿಗೆ ಗುಂಡೇಟು

    ಬೆಂಗಳೂರು: ನಗರದ ಪೊಲೀಸರ ರಿವಾಲ್ವರ್ ಮತ್ತೆ ಘರ್ಜಿಸಿದೆ. ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಆರ್‍ಎಂಸಿ ಯಾರ್ಡ್ ಇನ್ಸ್‍ಪೆಕ್ಟರ್ ಮಹ್ಮದ್ ಮುಖರಾಮ್, ರೌಡಿ ಅಶ್ವಥ್ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಕಳೆದ ರಾತ್ರಿ ರಾಬರಿ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ರೌಡಿ ಅಶ್ವಥ್ ನನ್ನು ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಅಶ್ವಥ್ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ರಿವಾಲ್ವರ್‍ಗೆ ಕೆಲಸ ಕೊಟ್ಟ ಇನ್ಸ್ ಪೆಕ್ಟರ್ ಮಹ್ಮದ್, ಎರಡು ಸುತ್ತು ಗುಂಡು ಹಾರಿಸಿದ್ದಾರೆ.

    ಅಶ್ವಥ್ ಬಲಗಾಲಿಗೆ ಗಾಯವಾಗಿದ್ದು, ಇದೀಗ ಆತನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯಷ್ಟೇ ಕೋಣನಕುಂಟೆ ವ್ಯಾಪ್ತಿಯಲ್ಲಿ ಪೊಲೀಸ್ ಫೈರಿಂಗ್ ನಡೆದಿತ್ತು. ರೌಡಿಶೀಟರ್ ಸಂತೂ ಅಲಿಯಾಸ್ ಪಳನಿ ಕಾಲಿಗೆ ಕೋಣನಕುಂಟೆ ಪೊಲೀಸರು ಗುಂಡು ಹಾರಿಸಿದ್ದರು.

    ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ರೌಡಿಶೀಟರ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ರೌಡಿಶೀಟರ್ ಪಳನಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಹೀಗಾಗಿ ಭಾನುವಾರ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ರೌಡಿಶೀಟರ್ ಪಳನಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ಬೆಂಗ್ಳೂರಲ್ಲಿ ಗುಂಡು ಹಾರಿಸಿ ನಟೋರಿಯಸ್ ರೌಡಿಶೀಟರ್ ನ ಬಂಧನ

    ಬೆಂಗ್ಳೂರಲ್ಲಿ ಗುಂಡು ಹಾರಿಸಿ ನಟೋರಿಯಸ್ ರೌಡಿಶೀಟರ್ ನ ಬಂಧನ

    ಬೆಂಗಳೂರು: ನಗರದಲ್ಲಿ ನಟೋರಿಯಸ್ ರೌಡಿಗೆ ಪೊಲೀಸರು ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ. ನಟೋರಿಯಸ್ ರೌಡಿ ರಾಜದೊರೆ ಕಾಲಿಗೆ ಗುಂಡೇಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೌಡಿಶೀಟರ್ ಪಳನಿಯ ಸಹಚರನಾಗಿದ್ದ ರಾಜದೊರೆ 18 ಪ್ರಕರಣಗಳಲ್ಲಿ ಆರೋಪಿ. ಬೆಂಗಳೂರಲ್ಲಿ ಕುಕೃತ್ಯ ನಡೆಸಿ ತಮಿಳುನಾಡಿಗೆ ಓಡಿ ಹೋಗುತ್ತಿದ್ದ. ಶುಕ್ರವಾರ ಅರೆಸ್ಟ್ ಮಾಡಲು ಹೋದಾಗ ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಲು ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಮಹದೇವಪ್ಪ ಟೀಂ ಸೋಲದೇವನಹಳ್ಳಿ ಬಳಿ ಆತನ ಕಾಲಿಗೆ ಎರಡು ಸುತ್ತು ಗುಂಡುಹಾರಿಸಿ ಬಂಧಿಸಿದ್ದಾರೆ. ಘಟನೆಯಲ್ಲಿ ಸಿಸಿಬಿ ಪೊಲೀಸ್ ಪೇದೆ ನರಸಿಂಹಮೂರ್ತಿ ಅವರಿಗೆ ಗಂಭೀರ ಗಾಯವಾಗಿದ್ದು, ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಇತ್ತೀಚೆಗಷ್ಟೇ ಹಲಸೂರು ಕೆರೆಯ ಗುರುದ್ವಾರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ರೌಡಿಶೀಟರ್ ಕಾರ್ತಿಕ್ ನನ್ನು ಪೊಲೀಸ್ ಪೇದೆ ಬಸವರಾಜ್ ಬನ್ಕರ್ ತಡೆದಿದ್ದರು. ಈ ವೇಳೆ ರೌಡಿಶೀಟರ್ ಪೊಲೀಸರಿಗೆ ಡ್ರಾಗರ್ ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಜೊತೆಗಿದ್ದ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಆತನ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದರು.

    ಗಾಯಾಳು ರೌಡಿಶೀಟರ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬಂಧಿಸಲಾಗಿತ್ತು. ರೌಡಿಶೀಟರ್ ಕಾರ್ತಿಕ್ ರೇಪ್ ಕೇಸ್‍ನಲ್ಲಿ ಏಳು ವರ್ಷ ಶಿಕ್ಷೆ ಅನುಭವಿಸಿದ್ದ. ಅಲ್ಲದೇ ಈತನ ವಿರುದ್ಧ ಕಲಾಸಿಪಾಳ್ಯದಲ್ಲಿ ನಾಲ್ಕು ಪ್ರಕರಣಗಳಿತ್ತು.

  • ಡ್ರಾಗರ್‍ನಿಂದ ಇರಿದು ಎಸ್ಕೇಪ್ ಆಗಲು ರೌಡಿ ಯತ್ನ-ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಫೈರಿಂಗ್

    ಡ್ರಾಗರ್‍ನಿಂದ ಇರಿದು ಎಸ್ಕೇಪ್ ಆಗಲು ರೌಡಿ ಯತ್ನ-ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಫೈರಿಂಗ್

    ಬೆಂಗಳೂರು: ನಗರದಲ್ಲಿ ರೌಡಿ ಕಾಲಿಗೆ ಗುಂಡೇಟು ಬಿದ್ದಿದೆ. ಶನಿವಾರ ರಾತ್ರಿ ಹಲಸೂರು ಕೆರೆಯ ಗುರುದ್ವಾರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ರೌಡಿಶೀಟರ್ ಕಾರ್ತಿಕ್‍ ನನ್ನು ಪೊಲೀಸ್ ಪೇದೆ ಬಸವರಾಜ್ ಬನ್ಕರ್ ತಡೆದಿದ್ದಾರೆ.

    ಈ ವೇಳೆ ರೌಡಿಶೀಟರ್ ಪೊಲೀಸರಿಗೆ ಡ್ರಾಗರ್‍ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಜೊತೆಗಿದ್ದ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಆತನ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿಕಟ್ಟಿದ್ರು.

    ಸದ್ಯ ಗಾಯಾಳು ರೌಡಿಶೀಟರ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿಶೀಟರ್ ಕಾರ್ತಿಕ್ ರೇಪ್ ಕೇಸ್‍ನಲ್ಲಿ ಏಳು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಅಲ್ಲದೇ ಈತನ ವಿರುದ್ಧ ಕಲಾಸಿಪಾಳ್ಯದಲ್ಲಿ ನಾಲ್ಕು ಪ್ರಕರಣಗಳಿತ್ತು ಅಂತ ತಿಳಿದುಬಂದಿದೆ.

  • ತಡರಾತ್ರಿ ಮಂಗ್ಳೂರಲ್ಲಿ ಗ್ಯಾಂಗ್‍ವಾರ್ -ಇಬ್ಬರು ರೌಡಿಶೀಟರ್ ಗಳ ಬರ್ಬರ ಹತ್ಯೆ

    ತಡರಾತ್ರಿ ಮಂಗ್ಳೂರಲ್ಲಿ ಗ್ಯಾಂಗ್‍ವಾರ್ -ಇಬ್ಬರು ರೌಡಿಶೀಟರ್ ಗಳ ಬರ್ಬರ ಹತ್ಯೆ

    ಮಂಗಳೂರು: ಕಳೆದ ರಾತ್ರಿ ಮಂಗಳೂರು ಹೊರವಲಯದ ಪರಂಗಿಪೇಟೆಯಲ್ಲಿ ಗ್ಯಾಂಗ್‍ವಾರ್ ನಡೆದಿದ್ದು, ಇಬ್ಬರು ರೌಡಿ ಶೀಟರ್‍ಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಹಳೇ ವೈಷಮ್ಯದಲ್ಲಿ ಎರಡು ರೌಡಿ ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, 26 ವರ್ಷದ ಅಡ್ಯಾರು ನಿವಾಸಿ ಫಯಾಜ್ ಹಾಗೂ 24 ವರ್ಷದ ಝಿಯಾ ಕೊಲೆಯಾಗಿದ್ದಾರೆ. ಸುಮಾರು 11.30ರ ಹೊತ್ತಿಗೆ ಫಯಾಜ್ ತನ್ನ ಗೆಳೆಯರ ಜೊತೆಗೆ ನಿಂತಿದ್ದಾಗ ಇನ್ನೊಂದು ತಂಡ ಸುಮೋದಲ್ಲಿ ಆಗಮಿಸಿ ಐವರ ಮೇಲೆ ತಲವಾರ್‍ನಿಂದ ದಾಳಿ ನಡೆಸಿದೆ.

    ಫಯಾಜ್ ಸ್ಥಳದಲ್ಲಿಯೇ ಮೃತಪಟ್ಟರೆ, ಝಿಯಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳಿದಂತೆ ಫಜಲ್, ಮುಶ್ತಾಕ್, ಹಮೀಜ್ ಗಾಯಗೊಂಡಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಳೆ ವೈಷಮ್ಯವೇ ಈ ಕೊಲೆಗಳಿಗೆ ಕಾರಣ ಎನ್ನಲಾಗಿದೆ.

    ಆರೋಪಿಗಳ ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

  • ಮಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

    ಮಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

    ಮಂಗಳೂರು: ನಗರದಲ್ಲಿ ರೌಡಿಶೀಟರೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಮಂಗಳೂರು ಹೊರವಲಯದ ವಾಮಂಜೂರಿನ ಅಮೃತನಗರ ಎಂಬಲ್ಲಿ ಮಾಜಿ ಪಾತಕಿ ವಾಮಂಜೂರು ರೋಹಿಯ ಪುತ್ರ ಪವನ್ ರಾಜ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

    ತಂದೆ ರೋಹಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತೋಷ್ ಕೊಟ್ಟಾರಿ ಎಂಬಾತನಿಗೆ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಆರೋಪ ಮೃತ ಪವನ್ ಮೇಲಿತ್ತು. ಅಲ್ಲದೆ ಸ್ಥಳೀಯ ಕಾರ್ಪೋರೇಟರ್ ಜಯಪ್ರಕಾಶ್ ವಿರುದ್ಧ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಈತ ಬಂಧಿತನಾಗಿದ್ದ. ಇಷ್ಟು ಮಾತ್ರವಲ್ಲದೇ ಎರಡು ದರೋಡೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದನು.

    ಇದೀಗ ಸ್ಥಳೀಯ ಎದುರಾಳಿ ತಂಡ ಕೊಚ್ಚಿ ಕೊಲೆಗೈದಿರುವ ಮಾಹಿತಿಯಿದೆ. ಈ ಕುರಿತು ಮಂಗಳೂರಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಪವನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ರೌಡಿಶೀಟರ್ ಎಂಬುವುದಾಗಿ ದಾಖಲಾಗಿದೆ.

  • ಎಸ್ಪಿ ಮೇಡಂ.. ರಕ್ಷಣೆ ಕೊಡಿ: ಕೈ ಕಳೆದುಕೊಂಡ ಮಂಡ್ಯದ ರೌಡಿಶೀಟರ್ ನಿಂದ ವಿಡಿಯೋ ರೆಕಾರ್ಡ್

    ಎಸ್ಪಿ ಮೇಡಂ.. ರಕ್ಷಣೆ ಕೊಡಿ: ಕೈ ಕಳೆದುಕೊಂಡ ಮಂಡ್ಯದ ರೌಡಿಶೀಟರ್ ನಿಂದ ವಿಡಿಯೋ ರೆಕಾರ್ಡ್

    ಮಂಡ್ಯ: ಎಸ್ಪಿ ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ನಿಮ್ಮ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೇನೆ ರಕ್ಷಣೆ ಕೊಡಿ ಅಂತಾ ರೌಡಿಶೀಟರೊಬ್ಬ ವಿಡಿಯೋ ರೆಕಾರ್ಡ್ ಮಾಡಿ ಎಸ್ಪಿಗೆ ಕಳುಹಿಸಿ ಮೊರೆಯಿಟ್ಟಿದ್ದಾನೆ.

    ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ 21 ವರ್ಷದ ರೌಡಿ ಶೀಟರ್ ವರುಣ್ ಮೇಲೆ ಮತ್ತೊಂದು ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಹಲ್ಲೆಯಲ್ಲಿ ವರುಣ್ ಬಲಗೈ ತುಂಡಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್ ವರುಣ್, ತನ್ನ ಮೇಲೆ ಹಲ್ಲೆ ನಡೆದ ರೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

    ಏನಿದೆ ವಿಡಿಯೋದಲ್ಲಿ?: ನಾನು ಜುಲೈ 16 ರಂದು ಕ್ರಿಕೆಟ್ ಆಡಿ ಗೆಳೆಯರಾದ ರೇಣು, ಪ್ರಜ್ವಲ್ ಜೊತೆ ಕುಳಿತಿದ್ದೆ. ಈ ಸಂದರ್ಭದಲ್ಲಿ ವ್ಯಾಸ, ಪುಟಾಣಿ, ಸೋಮ ಸೇರಿದಂತೆ ಏಳು ಜನ ಕಾರಲ್ಲಿ ಬರ್ತಾರೆ. ಮೊದಲು ಕಾರಲ್ಲಿ ನನಗೆ ಗುದ್ದುತ್ತಾರೆ. ನಾನು ಎದ್ದು ಓಡುತ್ತೇನೆ. ಆದರೂ ಬಿಡದೇ ತಲೆಗೆ ಬಲವಾಗಿ ಹೊಡೀತಾರೆ, ಕೈ ಕತ್ತರಿಸುತ್ತಾರೆ. ಬದುಕಿದ್ದಾನೆ ಅಂತಾ ಮತ್ತೆ ಅಟ್ಯಾಕ್ ಮಾಡ್ತಾರೆ. ನನ್ನ ಮೇಲೆ ಅಟ್ಯಾಕ್ ಮಾಡಲು ತೊಪ್ಪನಹಳ್ಳಿ ಪ್ರಕಾಶ್, ಕೆಂಗಲ್, ಜೈಲಲ್ಲಿರುವ ಗೆಡ್ಡೆ ಗಿರಿ ಕಾರಣರು.

    ನನ್ನದು ಡಿಪ್ಲೊಮೋ ಆಗಿದೆ. ನಾನು ಇಂಜಿನಿಯರಿಂಗ್ ಸೇರಬೇಕಿತ್ತು. ನಮ್ಮ ಮನೆಯವರನ್ನು ಯಾರು ನೋಡ್ಕೋತಾರೆ. ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ಎಸ್ಪಿ ಮೇಡಂ ಇದ್ದಾರೆ. ತಲೆ ಕೆಡಿಸಿಕೊಳ್ಳಬೇಡ ಅಂತಿದ್ದಾರೆ. ನಿಮ್ಮ ಮೇಲೆ ನಂಬಿಕೆಯಿಟ್ಟಿದ್ದೇನೆ. ನನಗೆ ರಕ್ಷಣೆ ಕೊಡಿ ಅಂತಾ ರೌಡಿ ಶೀಟರ್ ಎಸ್ಪಿಗೆ ಮೊರೆಯಿಟ್ಟಿರುವ ವಿಡಿಯೋ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ.

    https://www.youtube.com/watch?v=3z3Lzx1FcF0&feature=youtu.be

  • ಮಂಡ್ಯದ ಮದ್ದೂರಲ್ಲಿ ರೌಡಿಗಳ ಮಾರಾಮಾರಿ- ಹಳೇ ದ್ವೇಷಕ್ಕೆ ಮತ್ತೊಬ್ಬ ರೌಡಿಯ ಕೈ ಕತ್ತರಿಸಿದ್ರು!

    ಮಂಡ್ಯದ ಮದ್ದೂರಲ್ಲಿ ರೌಡಿಗಳ ಮಾರಾಮಾರಿ- ಹಳೇ ದ್ವೇಷಕ್ಕೆ ಮತ್ತೊಬ್ಬ ರೌಡಿಯ ಕೈ ಕತ್ತರಿಸಿದ್ರು!

    ಮಂಡ್ಯ: ಹಳೇ ದೇಷದ ಹಿನ್ನೆಲೆ, ರೌಡಿಶೀಟರ್ ಮೇಲೆ ರೌಡಿಶೀಟರ್‍ಗಳೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕಸ್ತೂರ್‍ಬಾ ಶಾಲೆ ಬಳಿ ಘಟನೆ ನಡೆದಿದೆ.

    ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮದ್ದೂರು ಪಟ್ಟಣದ ರೌಡಿಶೀಟರ್ ವರುಣ್ ಮೇಲೆ ಲಾಂಗು, ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ವರುಣ್ ಬಲಗೈ ಕಟ್ ಆಗಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.

    ರೌಡಿಶೀಟರ್‍ಗಳಾದ ಸೂರಜ್, ಅಕ್ಷಯ್, ವ್ಯಾಸ, ಸುಹಾಸ್, ಶಿವರಾಜ್, ಪುಟಾಣಿ, ರಾಜೇಶ್, ಗಿರಿ, ವಿನಯ್ ಎಂಬುವರಿಂದ ಹಲ್ಲೆ ನಡೆದಿದೆ. ಗಾಯಾಳು ವರುಣ್‍ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರೌಡಿಶೀಟರ್ ವರುಣ್ ಒಂದೂವರೆ ತಿಂಗಳ ಹಿಂದೆ ವ್ಯಕ್ತಿಯೊಬ್ಬರ ಹತ್ಯೆಗೆ ಯತ್ನಿಸಿ ಜೈಲಿಗೆ ಹೋಗಿದ್ದು, ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನಲಾಗಿದೆ.

    ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

    ಸುಸೂ ಬಂತೆಂದು ಜೀಪಿನಿಂದ ಇಳಿದ ಆರೋಪಿ ಪೊಲೀಸ್ರಿಂದ ಎಸ್ಕೇಪ್!

    ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಪರಾರಿಯಾಗಿರೋ ಘಟನೆಯೊಂದು ನಗರದಲ್ಲಿ ನಡೆದಿದೆ.

    ಕುಖ್ಯಾತ ರೌಡಿ ಶೀಟರ್ ಪ್ರಶಾಂತ್ ಕುಮಾರ್ ಎಸ್ಕೇಪ್ ಅದ ಅರೋಪಿಯಾಗಿದ್ದು, ಶನಿವಾರ ರಾತ್ರಿ ಕೆಆರ್ ಪುರ ಬಳಿಯ ಐಟಿಐ ಗೇಟ್ ಬಳಿ ಈತ ಪರಾರಿಯಾಗಿದ್ದಾನೆ.

    ಪ್ರಕರಣವೊಂದರ ಸಂಬಂಧ ಆರೋಪಿ ಪ್ರಶಾಂತ್‍ನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಕೃತ್ಯ ಎಸಗಿದ್ದ ಸ್ಥಳಗಳ ಮಹಜರು ಮಾಡಲು ಹೋಗಿದ್ರು. ಈ ವೇಳೆ ಮೂತ್ರ ವಿಸರ್ಜನೆ ಮಾಡಬೇಕು ಅಂತ ಆರೋಪಿ ಹೇಳಿದ್ದನು. ಹೀಗಾಗಿ ಪೊಲೀಸರು ರಸ್ತೆ ಬದಿ ಜೀಪ್ ನಿಲ್ಲಿಸಿ ಆತನನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳಾದ ಕಾಂತರಾಜು ಹಾಗೂ ರವಿಚಂದ್ರನನ್ನು ತಳ್ಳಿ ಪರಾರಿಯಾಗಿದ್ದಾನೆ.

    ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಚ್ಚಿ ಬೀಳುವ ದೃಶ್ಯ- ಗೋಶಾಲೆಯಲ್ಲಿ ರೌಡಿ ರಂಜಿತ್‍ನನ್ನು ಕಟುಕರಂತೆ ಕೊಚ್ಚಿ ಕೊಂದ್ರು

    ಬೆಚ್ಚಿ ಬೀಳುವ ದೃಶ್ಯ- ಗೋಶಾಲೆಯಲ್ಲಿ ರೌಡಿ ರಂಜಿತ್‍ನನ್ನು ಕಟುಕರಂತೆ ಕೊಚ್ಚಿ ಕೊಂದ್ರು

    ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರದ ಗೋಶಾಲೆಯಲ್ಲಿ ನಡೆದ ರೌಡಿಶೀಟರ್ ರಂಜಿತ್ ಕೊಲೆ ಪ್ರಕರಣದ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇಬ್ಬರು ಯುವಕರು ಕಟುಕರನ್ನು ಮೀರಿಸುವ ರೀತಿಯಲ್ಲಿ ರಂಜಿತ್‍ನನನ್ನ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ. ಗುರುವಾರ ರಾತ್ರಿ ಪುಲಿಕೇಶಿನಗರದ ಪೊಲೀಸರು ಈ ಇಬ್ಬರು ಆರೋಪಿಗಳಾದ ಶ್ಯಾಮ್ ಮತ್ತು ಸಂತೋಷ್ ಮೇಲೆ ಗುಂಡು ಹಾರಿಸಿದ್ದಾರೆ. ಬಾಣಸವಾಡಿ ಫ್ಲೈಓವರ್ ಬಳಿ ಆರೋಪಿಗಳನ್ನ ಅರೆಸ್ಟ್ ಮಾಡಲು ಮುಂದಾದ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ರು. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.

    ಫ್ರೇಜರ್ ಟೌನ್‍ನ ರೌಡಿಶೀಟರ್ ರಂಜಿತ್ ಬುಧವಾರ ರಾತ್ರಿ ಸುಮಾರು 12.30ರ ವೇಳೆಯಲ್ಲಿ ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ಗೋಶಾಲೆಯಲ್ಲಿ ಊಟಕ್ಕೆ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಬಂದು ಏಕಾಏಕಿ ರಂಜಿತ್ ಮೇಲೆ ಮಾರಕಾಸ್ತ್ರಗಳಿಂದ ಇರಿದಿದ್ದರು. ಪರಿಣಾಮ ವಿಪರೀತ ರಕ್ತಸ್ತಾವವಾಗಿ ರಂಜಿತ್ ಗೋವುಗಳ ನಡುವೆ ಪ್ರಾಣಬಿಟ್ಟಿದ್ದ.

    ಈ ಹಿಂದೆ ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಸೇರಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿಯೂ ಕೆಲ ಕೇಸ್ ದಾಖಲಾಗಿದ್ದವು.

    ಕೊಲೆಗೆ ಸಂಬಂಧಿಸಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    https://www.youtube.com/watch?v=U7-TcO2IuDw&feature=youtu.be