Tag: rowdysheeter

  • ಮತ್ತೊಮ್ಮೆ ರೌಡಿಶೀಟರ್ ಯಶಸ್ವಿನಿ ಅಟ್ಟಹಾಸ – ಮಾರ್ಗ ಮಧ್ಯೆ ಅಡ್ಡಗಟ್ಟಿ ಮಹಿಳೆಗೆ ಥಳಿತ

    ಮತ್ತೊಮ್ಮೆ ರೌಡಿಶೀಟರ್ ಯಶಸ್ವಿನಿ ಅಟ್ಟಹಾಸ – ಮಾರ್ಗ ಮಧ್ಯೆ ಅಡ್ಡಗಟ್ಟಿ ಮಹಿಳೆಗೆ ಥಳಿತ

    ಬೆಂಗಳೂರು: ಶ್ರೀರಾಮಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ರೌಡಿಶೀಟರ್ ಯಶಸ್ವಿನಿ ಮತ್ತೊಮ್ಮೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಲಲಿತಾ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ಗಂಗಮ್ಮನಗುಡಿ ನೀಲಗಿರಿ ತೊಪ್ಪಿನಲ್ಲಿ ಈ ಘಟನೆ ನಡೆದಿದೆ. ಲಲಿತಾ ಅವರು ದಾರಿಯಲ್ಲಿ ಹೋಗುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿ ಯಶಸ್ವಿನಿ ಹಾಗೂ 8 ಜನ ಮಹಿಳೆಯರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಪರಿಣಾಮ ಗಾಯಗೊಂಡಿರುವ ಲಲಿತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

    ಹಲ್ಲೆ ಯಾಕೆ..?
    ಯಶಸ್ವಿನಿ ವಿರುದ್ಧ ಲಲಿತಾ ದೂರು ನೀಡಿದ್ದು, ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಶುಕ್ರವಾರ ನ್ಯಾಯಾಲಯದಲ್ಲಿ ತೀರ್ಪು ಬರೋದಿತ್ತು. ನ್ಯಾಯಾಲಯಕ್ಕೆ ಲಲಿತಾ ಹಾಜರಾಗಬಾರದೆಂದು ಲಲಿತಾರ ಮೇಲೆ ಯಶಸ್ವಿನಿ & ಟೀಂ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ: ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಬನಶಂಕರಿ ಠಾಣೆಯ ರೌಡಿಶೀಟರ್ ಆಗಿರುವ ಯಶಸ್ವಿನಿಗಾಗಿ ಗಂಗಮ್ಮನಗುಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೂವರೆ ತಿಂಗಳ ಅವಧಿಯಲ್ಲೇ ಇಬ್ಬರು ರೌಡಿಶೀಟರ್‌ಗಳ ಬರ್ಬರ ಹತ್ಯೆ

    ಒಂದೂವರೆ ತಿಂಗಳ ಅವಧಿಯಲ್ಲೇ ಇಬ್ಬರು ರೌಡಿಶೀಟರ್‌ಗಳ ಬರ್ಬರ ಹತ್ಯೆ

    ಶಿವಮೊಗ್ಗ: ನಗರದಲ್ಲಿ ಪೊಲೀಸ್ ವ್ಯವಸ್ಥೆ ಇದೆಯೋ-ಇಲ್ಲವೋ ಎಂಬ ಅನುಮಾನ ದಟ್ಟವಾಗಿದೆ. ರೌಡಿ ಶೀಟರ್ ಗಳು ತಮ್ಮ ಎದುರಾಳಿಗಳನ್ನು ನಡುಬೀದಿಯಲ್ಲೇ ಕೊಚ್ಚಿ ಪರಾರಿ ಆಗುತ್ತಿದ್ದರೆ ಪೊಲೀಸರು ಮಾತ್ರ ಕೈಕಟ್ಟಿ ಕುಳಿತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ.

    ಹೌದು. ನಗರದಲ್ಲಿ ಒಂದೂವರೆ ತಿಂಗಳ ಅವಧಿಯಲ್ಲಿ ಇಬ್ಬರು ರೌಡಿಶೀಟರ್ ಗಳು ಪರಸ್ಪರ ಎದುರಾಳಿಗಳಿಂದ ಹತ್ಯೆಯಾಗಿದ್ದಾರೆ. ಕಳೆದ ತಿಂಗಳು ಬಂಕ್ ಬಾಲು ಮರ್ಡರ್ ಆಗಿತ್ತು. ಇಂದು ಮಾರ್ಕೆಟ್ ಗೋವಿಂದನ ಹತ್ಯೆಯಾಗಿದೆ. ಕೋಕಾ ಕಾಯ್ದೆಯಡಿ ಬೇಕಾಗಿದ್ದ ಈತ ಪೊಲೀಸ್ ದಾಖಲೆಗಳ ಪ್ರಕಾರ ನಾಪತ್ತೆ ಆಗಿದ್ದ. ಆದರೆ ಇಂದು ಈತನ ಎದುರಾಳಿ ತಂಡದವರು ಗೋವಿಂದನನ್ನು ಶಿವಮೊಗ್ಗದಲ್ಲೇ ಬೇರೆ ಎಲ್ಲೋ ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ಆತನ ತಂದೆಯ ಮನೆ ಮುಂದೆ ಓಮ್ನಿಯಲ್ಲಿ ತಂದು ಬಿಸಾಡಿ ಹೋಗಿದ್ದಾರೆ.

    ಇದರ ಹಿಂದೆ ಕರಾಬ್ ಶಿವು ಇನ್ನಿತರರು ಈ ಕೃತ್ಯ ಮಾಡಿದ್ದಾರೆ ಎಂಬುದು ಸಂಬಂಧಿಗಳು ಆರೋಪಿಸುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆ ಎಂದು ಹೇಳುತ್ತಿದ್ದಾರೆ. ಎರಡು ತಿಂಗಳ ಹಿಂದೆ ನಡೆದಿದ್ದ ಮಾರ್ಕೆಟ್ ಗಿರಿ ಹತ್ಯೆಯಲ್ಲಿ ಗೋವಿಂದ ಹಾಗೂ ಹಾಗೂ ಈತನ ಸಹೋದರ ಮಾರ್ಕೆಟ್ ಲೋಕಿ ಕೈವಾಡ ಇದೆ ಎನ್ನಲಾಗಿತ್ತು. ಇದೇ ವೈಷಮ್ಯದಿಂದ ಮಾರ್ಕೆಟ್ ಗಿರಿ ಗುಂಪಿನ ಕರಾಬ್ ಶಿವು ಇನ್ನಿತರರು ಗೋವಿಂದನನ್ನು ಇಂದು ಕೊಚ್ಚಿದ್ದಾರೆ.

    ಗೋವಿಂದನ ಇನ್ನೊಬ್ಬ ಸಹೋದರ ತುಳಸಿರಾಮ ಕೂಡ ಇದೇ ರೀತಿ ಹತ್ಯೆಯಾಗಿದ್ದ. ಇನ್ನೊಬ್ಬ ಸಹೋದರ ಮಾರ್ಕೆಟ್ ಲೋಕಿ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಈ ರೌಡಿಗಳನ್ನು ಮಟ್ಟ ಹಾಕಬೇಕಿದ್ದ ಪೊಲೀಸರು ಮರಳು ದಂಧೆಯಲ್ಲಿ ಸಿಕ್ಕಿಬಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಅರ್ಜಿ ಸಲ್ಲಿಸಿ ನಾಪತ್ತೆ ಆಗಿದ್ದಾರೆ.

    ಮರಳು, ಗಾಂಜಾ, ಓಸಿ-ಮಟ್ಕಾ ದಂಧೆಗಳು ಶಿವಮೊಗ್ಗ ನಾಗರಿಕರಲ್ಲಿ ಆತಂಕ ಮೂಡಿಸಿವೆ. ಈ ಅಕ್ರಮ ದಂಧೆಗಳಿಂದ ಹಣ ಮಾಡಿದವರು ಸಮಾಜದ್ರೋಹಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇವರಿಗೆ ಪೊಲೀಸರೇ ಅಭಯಹಸ್ತ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂಬೆಳಗ್ಗೆ ರೌಡಿಶೀಟರ್​ಗಳಿಗೆ ಬಿಸಿ ಮುಟ್ಟಿಸಿದ ಡಿಸಿಪಿ ಅಣ್ಣಾಮಲೈ

    ಬೆಳ್ಳಂಬೆಳಗ್ಗೆ ರೌಡಿಶೀಟರ್​ಗಳಿಗೆ ಬಿಸಿ ಮುಟ್ಟಿಸಿದ ಡಿಸಿಪಿ ಅಣ್ಣಾಮಲೈ

    ಬೆಂಗಳೂರು: ಬೆಳ್ಳಂ ಬೆಳಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ರೌಡಿಶೀಟರ್​ಗಳಿಗೆ ಬಿಸಿ ಮುಟ್ಟಿಸಿದ್ದು, ಮನೆ ಮೇಲೆ ದಾಳಿ ಮಾಡಿದ್ದಾರೆ.

    ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಹಾಗೂ ಎಸಿಪಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸುಬ್ರಮಣ್ಯಪುರ ಉಪ ವಿಭಾಗದ 5 ಸ್ಟೇಷನ್ ಪೊಲೀಸರು ದಾಳಿ ನಡೆಸಿದ್ದಾರೆ. ಕುಖ್ಯಾತ ರೌಡಿಶೀಟರ್ ಗಳು ಹಾಗೂ ಎಂಓಬಿ ಅಸಾಮಿಗಳ ಮನೆ ಮೇಲೆ ಪೊಲೀಸರು ರೇಡ್ ನಡೆಸಿದ್ದಾರೆ.

    ಕೋಣನಕುಂಟೆ, ಸುಬ್ರಮಣ್ಯಪುರ, ಕುಮಾರಸ್ವಾಮಿ ಲೇಔಟ್, ತಲ್ಲಘಟ್ಟಪುರ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಮಾರಕಾಸ್ತ್ರಗಳು ಹಾಗೂ ದಾಖಲೆ ಇಲ್ಲದ ನೂರಾರು ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ರೌಡಿಗಳು ಕೊಲೆ, ಕೊಲೆ ಯತ್ನ, ರಾಬರಿ, ಡಕಾಯಿತಿ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ದಾಳಿ ನಡೆಸಿದ ಬಳಿಕ ಡಿಸಿಪಿ ಅಣ್ಣಾಮಲೈ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಡರಾತ್ರಿ ಇಬ್ಬರು ರೌಡಿಶೀಟರ್ ಗಳ ಬರ್ಬರ ಕೊಲೆ

    ತಡರಾತ್ರಿ ಇಬ್ಬರು ರೌಡಿಶೀಟರ್ ಗಳ ಬರ್ಬರ ಕೊಲೆ

    ಬೆಂಗಳೂರು: ತಡರಾತ್ರಿ ಇಬ್ಬರು ರೌಡಿಶೀಟರ್ ಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.

    ಮುರುಗನ್ ಹಾಗೂ ಪಳನಿ ಕೊಲೆಯಾದ ರೌಡಿಶೀಟರ್ ಗಳು. ಬುಧವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ಇಬ್ಬರನ್ನು ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವರ್ಸ್ ಕಾಲೋನಿಯಲ್ಲಿ ಬರ್ಬರವಾಗಿ ಅಟ್ಟಾಡಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಕಳೆದ ವಾರ ಪಳನಿ, ಮುರುಗನ್ ಮತ್ತು ಮಂಜನ ಟೀಂನವರು ಬರ್ತ್ ಡೆ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಳೆಯ ರೌಡಿಶೀಟರ್ ಗಳೆಲ್ಲಾ ಬಂದಿದ್ದರು. ಈ ವೇಳೆ ಪಳನಿ ಮತ್ತು ಮುರುಗನ್ ಟೀಂ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ತಡರಾತ್ರಿ ಕುಡಿದು ಬೈಕಿನಲ್ಲಿ ವಾಪಸ್ಸು ತೆರಳುತ್ತಿದ್ದ ಮುರುಗನ್ ಹಾಗೂ ಪಳನಿ ಮೇಲೆ ಆಟೋದಲ್ಲಿ ಬಂದಿದ್ದ 8 ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜೈಲಿನಿಂದ ಹೊರಬಂದ ರೌಡಿಗೆ ಅದ್ಧೂರಿ ಸ್ವಾಗತ

    ಜೈಲಿನಿಂದ ಹೊರಬಂದ ರೌಡಿಗೆ ಅದ್ಧೂರಿ ಸ್ವಾಗತ

    ಕಲಬುರಗಿ: ವಿದೇಶಕ್ಕೆ ಹೋಗಿ ಬಂದಾಗ ಅಥವಾ ಸಮಾಜ ಮುಖಿ ಕೆಲಸ ಮಾಡಿದ್ರೆ ಅದ್ಧೂರಿ ಸ್ವಾಗತ ಮಾಡಲಾಗುತ್ತದೆ. ಆದ್ರೆ ಕಲಬುರಗಿಯಲ್ಲಿ ಜೈಲಿಂದ ಬಿಡುಗಡೆಯಾದ ರೌಡಿಶೀಟರ್‍ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

    ಕಲಬುರಗಿಯ ಮಂಗರವಾಡಿ ನಿವಾಸಿ ವೀರತಾ ಉಪಾಧ್ಯ ಎಂಬ ರೌಡಿ ಶೀಟರ್, ಏಪ್ರಿಲ್ 21ರಂದು ವಿಜಯ ಬಗಲಿ ಎಂಬ ಯುವಕನನ್ನು ಕೊಲೆ ಮಾಡಿ ಜೈಲು ಸೇರಿದ್ದನು. ಎರಡು ದಿನದ ಹಿಂದೆ ಜೈಲಿನಿಂದ ಬೇಲ್ ಮೇಲೆ ಹೊರ ಬಂದಿದ್ದಾನೆ. ಹೀಗೆ ಬರುವಾಗ ಆತನನ್ನು ವಿಶೇಷವಾಗಿ ಸ್ವಾಗತಿಸಲಾಗಿದೆ.

    ಜೈಲಿನಿಂದ ಬರುವಾಗ ಹವಾ ಇರಲಿ ಅಂತಾ ಬಡಾವಣೆಯಲ್ಲಿ ಬೌನ್ಸರ್‍ಗಳ ಸಮೇತ ಅದ್ಧೂರಿ ಮೆರವಣಿಗೆ ಮೂಲಕ ಆತನನ್ನು ಕರೆತರಲಾಗಿದೆ. ಈ ಮೂಲಕ ರೌಡಿಗಳು ಕಲಬುರಗಿಯಲ್ಲಿ ತಮ್ಮ ಇಮೇಜ್ ನ ಬಿಲ್ಡಪ್ ನೀಡುತ್ತಿದ್ದಾರೆ. ಅಲ್ಲದೇ ರೌಡಿಗಳಿಗೆ ಪೊಲೀಸರ ಭಯ ಇಲ್ಲವಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗ್ಳೂರು ನಂತ್ರ ಎಚ್ಚೆತ್ತ ನೆಲಮಂಗಲ ಪೊಲೀಸರು: ರೌಡಿಗಳಿಗೆ ಖಡಕ್ ವಾರ್ನಿಂಗ್

    ಬೆಂಗ್ಳೂರು ನಂತ್ರ ಎಚ್ಚೆತ್ತ ನೆಲಮಂಗಲ ಪೊಲೀಸರು: ರೌಡಿಗಳಿಗೆ ಖಡಕ್ ವಾರ್ನಿಂಗ್

    ಬೆಂಗಳೂರು: ಪೊಲೀಸರು ಇತ್ತೀಚೆಗೆ ನಗರದ ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಮೂಲಕ ಎಚ್ಚರಿಕೆಯನ್ನ ನೀಡಿದ್ದರು. ಇದರಿಂದ ಎಚ್ಚೆತ್ತ ನೆಲಮಂಗಲ ವ್ಯಾಪ್ತಿಯ ಪೊಲೀಸರು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವ ಶಂಕರ್ ನೇತೃತ್ವದಲ್ಲಿ ರೌಡಿ ಪರೇಡ್ ಮಾಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಎಸ್.ಪಿ ಖಡಕ್ ವಾರ್ನಿಂಗ್ ಗೆ ಪ್ರತಿಯೊಬ್ಬ ರೌಡಿಶೀಟರ್ ಗಳು ಭಾಗಿಯಾಗಿದ್ದರು. ಒಟ್ಟು 166 ಜನ ರೌಡಿ ಶೀಟರ್ ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.

    ಹಿಂದಿನ ನೆಲಮಂಗಲ ಆಗದಂತೆ ಹಾಗೂ ಚಾಲ್ತಿಯಲ್ಲಿರುವ ರೌಡಿಶೀಟರ್ ಗಳು ಮತ್ತೆ ಜನರಿಗೆ ಧಮ್ಕಿ ಹಾಕಿ ಹಫ್ತ ವಸೂಲಿ, ರಿಯಲ್ ಎಸ್ಟೇಟ್ ದಂದೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಖಡಕ್ ವಾರ್ನಿಂಗ್ ನೀಡಿದ್ದೇವೆ. ಹೈವೇ ದರೋಡೆ ಹಾಗೂ ಇತ್ತಿಚೇಗೆ ನಟ ವಿನೋದ್ ರಾಜ್‍ರಿಂದ ಒಂದು ಲಕ್ಷ ಹಣ ದೋಚಿದ ಪ್ರಕರಣಕ್ಕೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಎಸ್.ಪಿ ಶಿವಶಂಕರ್ ತಿಳಿಸಿದರು.

    ಇತ್ತೀಚೆಗೆ ಬೆಂಗಳೂರಿಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರು ನೇಮಕಗೊಂಡಿದ್ದರು. ನೇಮಕವಾದ ಬಳಿಕ ಬಾರ್ ಆಂಡ್ ರೆಸ್ಟೊರೆಂಟ್, ಜೂಜು ಅಡ್ಡೆ ಮತ್ತು ಪಬ್ ಮೇಲೆ ದಾಳಿ ಮಾಡಿ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಅವರಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಎಚ್ಚರಿಕೆಯನ್ನು ಕೂಡ ಕೊಡುತ್ತಿದ್ದಾರೆ. ಅಲೋಕ್ ಕುಮಾರ್ ಅವರ ಕೆಲಸ ಕಾರ್ಯವನ್ನು ಮೆಚ್ಚಿ ಈಗ ನೆಲಮಂಗಲ ಪೊಲೀಸರು ರೌಡಿಗಳನ್ನು ಕರೆಸಿ ಪರೇಡ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೌಡಿಶೀಟರ್ ನ ಬರ್ಬರ ಹತ್ಯೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ರೌಡಿಶೀಟರ್ ನ ಬರ್ಬರ ಹತ್ಯೆ

    ಬೆಂಗಳೂರು: ವಸಂತಪುರದ ಯಾದಾಳಮ್ಮ ದೇವಸ್ಥಾನದ ಬಳಿ ರೌಡಿಶೀಟರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಸುಶಾಂತ್ ಅಲಿಯಾಸ್ ಪೇಯಿ ಕೊಲೆಯಾದ ರೌಡಿಶೀಟರ್. ಸುಬ್ರಮಣ್ಯಪುರದ ರೌಡಿಶೀಟರ್ ಆಗಿದ್ದ ಸುಶಾಂತ್ ಮೇಲೆ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಶುಕ್ರವಾರ ಸುಶಾಂತ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು, ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ಕೊಲೆಯಾದ ರೌಡಿಶೀಟರ್ ಸುಶಾಂತ್ ವಿರುದ್ಧ ಕೆಂಗೇರಿ, ಆರ್.ಆರ್.ನಗರ ಹಾಗೂ ಸುಬ್ರಮಣ್ಯಪುರದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗದಲ್ಲಿ ರಾತ್ರೋ ರಾತ್ರಿ ಹರಿದ ನೆತ್ತರು – ರೌಡಿಶೀಟರ್ ಮಾರ್ಕೆಟ್ ಗಿರಿಯ ಬರ್ಬರ ಹತ್ಯೆ

    ಶಿವಮೊಗ್ಗದಲ್ಲಿ ರಾತ್ರೋ ರಾತ್ರಿ ಹರಿದ ನೆತ್ತರು – ರೌಡಿಶೀಟರ್ ಮಾರ್ಕೆಟ್ ಗಿರಿಯ ಬರ್ಬರ ಹತ್ಯೆ

    – ಕಾರಿನಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳಿಂದ ಏಕಾಏಕಿ ದಾಳಿ

    ಶಿವಮೊಗ್ಗ: ನಗರದ ಜೆಪಿಎನ್ ರಸ್ತೆಯ ಸೂರ್ಯ ಕಂಫರ್ಟ್ ರೌಡಿಶೀಟರ್ ಓರ್ವನ ಹತ್ಯೆಯಾಗಿದೆ.

    ರೌಡಿಶೀಟರ್ ಮಾರ್ಕೆಟ್ ಗಿರಿ ಬರ್ಬರವಾಗಿ ಹತ್ಯೆಯಾದ ವ್ಯಕ್ತಿ. ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ವೇಳೆಯಲ್ಲಿ ಮಾರ್ಕೆಟ್ ಗಿರಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಿದ್ದನು. ಗಿರಿ ಕಾರಿನಲ್ಲಿ ಕುಳಿತಾಗ ದಾಳಿ ನಡೆಸಿದ ನಾಲ್ಕೈದು ಜನರು ದಾಳಿ ನಡೆಸಿದ್ದಾರೆ. ಈ ಕೊಲೆಯನ್ನು ಮಾರ್ಕೆಟ್ ಲೋಕಿ ಗ್ಯಾಂಗ್ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ. ಮಾರ್ಕೆಟ್ ಲೋಕಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದು, ಅವನ ಗ್ಯಾಂಗ್ ದಾಳಿ ನಡೆಸಿದೆಯಾ? ಎಂಬ ಶಂಕೆ ವ್ಯಕ್ತವಾಗಿವೆ.

    ರೌಡಿ ಶೀಟರ್ ಆಗಿದ್ದ ಗಿರಿಯ ಅಪರಾಧ ಚಟುವಟಿಕೆಗಳಿಂದ ಹೊರಬಂದು ಹೂವಿನ ವ್ಯಪಾರ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದನು. ಇದೆಲ್ಲದೇ ಇತರೆ ವ್ಯವಹಾರಗಳಲ್ಲಿ ಗಿರಿ ತನ್ನನ್ನು ತೊಡಗಿಸಿಕೊಂಡಿದ್ದನು. ವ್ಯವಹಾರದ ವಿರೋಧಿಗಳೇನಾದ್ರೂ ಕೊಲೆ ಮಾಡಿಸಿದ್ರಾ ಎಂಬ ಅನುಮಾನಗಳು ಸಹ ವ್ಯಕ್ತವಾಗಿವೆ.

    ಕೊಲೆಯ ಬಳಿಕ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೊಡ್ಡ ಪೇಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಟ್ಟಡದ ಮೇಲೇರಿ ವಿದ್ಯುತ್ ತಂತಿ ಹಿಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಕಟ್ಟಡದ ಮೇಲೇರಿ ವಿದ್ಯುತ್ ತಂತಿ ಹಿಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಮಂಡ್ಯ: ಪೊಲೀಸರು ವಿನಾಕಾರಣ ನನ್ನ ಮಗನ ಮೇಲೆ ರೌಡಿಶೀಟರ್ ಪಟ್ಟ ಕಟ್ಟಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕಟ್ಟಡದ ಮೇಲೆ ಹತ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿ ಅವಾಂತರ ಸೃಷ್ಟಿಸಿದ್ದಾರೆ.

    ಈ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ನಾರಗೋನಹಳ್ಳಿ ಗ್ರಾಮದ ರೈತ ರಂಗಶೆಟ್ಟಿ ಎಂಬವರೇ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದವರು.

    ಜಮೀನಿನ ವಿಷಯದಲ್ಲಿ ನಡೆದ ಗಲಾಟೆಗೆ ಪೊಲೀಸರು ನನ್ನ ಮಗನ ಮೇಲೆ ರೌಡಿಶೀಟರ್ ಹಾಕಿದ್ದಾರೆ. ಈಗ ಚುನಾವಣೆ ಸಮಯವಾದ್ದರಿಂದ ಬೇಲ್ ತೆಗೆದುಕೊಳ್ಳಲು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿರುವ ನನ್ನ ಮಗ ರಘುವನ್ನು ಠಾಣೆಗೆ ಕರೆಸಿ ಹಿಂಸೆ ನೀಡಿದ್ದಾರೆ ಎಂದು ರಂಗಶೆಟ್ಟಿ ಆರೋಪಿಸಿದ್ದಾರೆ.

    ಪೊಲೀಸರ ಕಿರುಕುಳದಿಂದ ನನಗೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ರಂಗಶೆಟ್ಟಿ ನಾಗಮಂಗಲದ ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಕಟ್ಟಡದ ಮೇಲೆ ಹತ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ರು. ಇದನ್ನು ನೋಡಿದ ಸಾರ್ವಜನಿಕರು ಆತ್ಮಹತ್ಯೆ ಮಾಡಿಕೊಳ್ಳದಂತೆ ರಂಗಸ್ವಾಮಿಯವರನ್ನು ಕೂಗಿಕೊಂಡಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೊನೆಗೆ ಸಾವಜನಿಕರು ಉಪಾಯವಾಗಿ ರಂಗಸ್ವಾಮಿಯನ್ನು ಕೆಳಗಿಳಿಸಿ ನಿಟ್ಟುಸಿರುಬಿಟ್ಟಿದ್ದಾರೆ. ಆದ್ರೆ ರಂಗಸ್ವಾಮಿಯ ಆರೋಪವನ್ನು ನಿರಾಕರಿಸಿರುವ ಪೊಲೀಸರು ಕಾರಣವಿಲ್ಲದೇ ಯಾರ ಮೇಲೂ ರೌಡಿಶೀಟರ್ ಹಾಕಿಲ್ಲ ಅಂತಿದ್ದಾರೆ.

  • ಬೆಂಗ್ಳೂರಲ್ಲಿ ಪೊಲೀಸರ ಮೇಲೆಯೇ ರೌಡಿ ಹಲ್ಲೆ: ಲಾಂಗು-ಮಚ್ಚೇಟಿನಿಂದ ಪೇದೆಗೆ ಗಂಭೀರ ಗಾಯ

    ಬೆಂಗ್ಳೂರಲ್ಲಿ ಪೊಲೀಸರ ಮೇಲೆಯೇ ರೌಡಿ ಹಲ್ಲೆ: ಲಾಂಗು-ಮಚ್ಚೇಟಿನಿಂದ ಪೇದೆಗೆ ಗಂಭೀರ ಗಾಯ

    ಬೆಂಗಳೂರು: ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರೋ ಘಟನೆ ನಗರದ ಜೆಜೆ ನಗರದಲ್ಲಿ ನಡೆದಿದೆ.

    ಜೆಜೆ ನಗರ ಠಾಣೆಯ ರಾಜೇಂದ್ರ ಹಲ್ಲೆಗೊಳಗಾದ ಪೊಲೀಸ್ ಪೇದೆ. ರೌಡಿಶೀಟರ್ ಮಹಮ್ಮದ್ ಆಲೀಂ ಮತ್ತು ತಂಡದಿಂದ ಈ ಕೃತ್ಯ ನಡೆದಿದೆ. ಜೆಜೆ ನಗರದಲ್ಲಿ ದುಷ್ಕರ್ಮಿಗಳ ಗುಂಪು ಗಾಂಜಾ ಸೇವಿಸಿ ಪುಂಡಾಟ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು.

    ಕಂಟ್ರೋಲ್ ರೂಂ ಮಾಹಿತಿ ಅಧರಿಸಿ ಹೊಯ್ಸಳ ಬೀಟ್‍ನಲ್ಲಿದ್ದ ಪೇದೆ ರಾಜೇಂದ್ರ ಸ್ಥಳಕ್ಕೆ ಹೋಗಿದ್ರು. ಈ ವೇಳೆ ಪೇದೆ ರಾಜೇಂದ್ರ ಅವರ ಮೇಲೆ ದುಷ್ಕರ್ಮಿಗಳು ಮಚ್ಚು, ಲಾಂಗಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಗಾಯಾಳು ಪೇದೆ ರಾಜೇಂದ್ರ ಅವರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

    2016ರಲ್ಲಿ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮಹಮ್ಮದ್ ಅಲೀಂ ಮತ್ತು ತಂಡ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಆರೋಪಿಗಳು ಪುಂಡರ ಗ್ಯಾಂಗ್ ಕಟ್ಟಿಕೊಂಡು ಅಮಾಯಾಕರ ಮೇಲೆ ಹಲ್ಲೆ ಮಾಡಿ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.