Tag: rowdysheeter

  • ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ

    ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ

    ಚಾಮರಾಜನಗರ: ಪರೇಡ್ ವೇಳೆ ರೌಡಿಶೀಟರ್‌ಗೆ ಎಸ್‍ಪಿ ಹೆಚ್.ಡಿ ಆನಂದ್ ಕುಮಾರ್ ಅವರು ಕಪಾಳಮೋಕ್ಷ ಮಾಡಿದ್ದಾರೆ.

    ಗೌರಿ-ಗಣೇಶ, ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಎಸ್‍ಪಿ ರೌಡಿಗಳ ಪರೇಡ್ ಆಯೋಜಿಸಿದರು. ಈ ವೇಳೆ ಎಸ್‍ಪಿ ರೌಡಿಶೀಟರ್‌ಗಳಿಗೆ ಪ್ರಶ್ನೆ ಕೇಳುತ್ತಿದ್ದರು. ಆದರೆ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಹುಸಿ ನಗುತ್ತಿದ್ದನು. ಇದರಿಂದ ಕೋಪಗೊಂಡ ಎಸ್‍ಪಿ ಕಪಾಳಮೋಕ್ಷ ಮಾಡಿದ್ದಾರೆ.

    ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನನಲ್ಲಿ ಎಸ್‍ಪಿ ಹೆಚ್.ಡಿ ಆನಂದ್ ಕುಮಾರ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಯಿತು. ಈ ವೇಳೆ ಚಾಮರಾಜನಗರ ವಿಭಾಗದ 150ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪರೇಡ್‍ನಲ್ಲಿ ಭಾಗಿಯಾದರು.

    ಬಳಿಕ ಎಸ್‍ಪಿ ಆನಂದ್ ಕುಮಾರ್ ಅವರು ಸಮಾಜ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್‍ಗಳಿಗೆ ಬಿಸಿ ಮುಟ್ಟಿಸುವ ಮೂಲಕ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

  • ರಾಮನಗರ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್

    ರಾಮನಗರ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್

    ರಾಮನಗರ: ಬೆಳ್ಳಂಬೆಳಗ್ಗೆ ರಾಮನಗರ ಜಿಲ್ಲಾ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್ ನಡೆದಿದೆ.

    ರೌಡಿಶೀಟರ್ ಸೈಲೆಂಟ್ ಸುನೀಲನ ಶಿಷ್ಯನ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ರೌಡಿಶೀಟರ್ ರೇಣುಕಾ ಪ್ರಸಾದ್ ಅಲಿಯಾಸ್ ನರಿ ಗುಂಡೇಟು ತಿಂದ ಆರೋಪಿ. ಅಂದಹಾಗೆ 4-5 ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ರೇಣುಕಾ ಪ್ರಸಾದ್ ಪೊಲೀಸರಿಗೆ ಬೇಕಾಗಿದ್ದನು. ಇತ್ತೀಚೆಗೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದನು.

    ತಡರಾತ್ರಿ ಬೆಂಗಳೂರು ದಕ್ಷಿಣ ತಾಲೂಕಿನ ಚಂದ್ರಪ್ಪ ಸರ್ಕಲ್ ಬಳಿಯ ಬಾರ್ ವೊಂದರಲ್ಲಿ ಕುಡಿದು ಗಲಾಟೆ ಮಾಡಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 70 ಸಾವಿರ ದೋಚಿ ಪರಾರಿಯಾಗಿದ್ದನು. ನಂತರ ಕುಂಬಳಗೂಡು ಸಮೀಪದ ವಿನಾಯಕನಗರದ ಶ್ರೀನಿಧಿ ಲಾಡ್ಜ್ ನಲ್ಲಿ ಅವಿತಿದ್ದ ರೌಡಿಶೀಟರ್ ರೇಣುಕಾ ಪ್ರಸಾದ್‍ನನ್ನು ಹಿಡಿಯಲು ತೆರಳಿದ್ದ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಹಾಗೂ ಸಿಬ್ಬಂದಿ ಮೇಲೆ ಡ್ರ್ಯಾಗರ್ ನಿಂದ ಹಲ್ಲೆಗೆ ಮುಂದಾಗಿ ಪೇದೆ ಹುಲಿರಾಯ ಎಂಬವರಿಗೆ ಇರಿದಿದ್ದಾನೆ.

    ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ರವಿ ಅವರು ರೌಡಿಶೀಟರ್ ರೇಣುಕಾ ಪ್ರಸಾದ್‍ನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟು ತಿಂದ ರೌಡಿಶೀಟರ್ ರೇಣುಕಾ ಪ್ರಸಾದ್‍ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೇದೆ ಹುಲಿರಾಯನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಬೆಂಗ್ಳೂರಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ – ನಡುರೋಡಲ್ಲೇ ಭೀಕರ ಡಬಲ್ ಮರ್ಡರ್

    ಬೆಂಗ್ಳೂರಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ – ನಡುರೋಡಲ್ಲೇ ಭೀಕರ ಡಬಲ್ ಮರ್ಡರ್

    – ಸಿನಿಮೀಯ ಸ್ಟೈಲ್‍ನಲ್ಲಿ ಅಟ್ಟಾಡಿಸಿ ಹತ್ಯೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು, ನಡು ರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ರೌಡಿ ಶೀಟರ್ ತಮ್ಮ ಮಂಜ ಮತ್ತು ನವೀನ್ ಹತ್ಯೆಗೊಳಗಾದವರು. ಈ ಘಟನೆ ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪುಟ್ಟೇನಹಳ್ಳಿ ಜಂಕ್ಷನ್ 24ನೇ ಕ್ರಾಸ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ನವೀನ್ ಕುಮಾರ್ ಕೊಲೆ ಮಾಡಿದರೆ, ಪುಟ್ಟೇನಹಳ್ಳಿ ಜಂಕ್ಷನ್ ಸಮೀಪದ ನಂದನಿ ಹೋಟೆಲ್ ಬಳಿ ತಮ್ಮ ಮಂಜನನ್ನು ಹಂತಕರು ಮುಗಿಸಿದ್ದಾರೆ.

    ಸುಮಾರು 200 ಮೀಟರ್ ಅಂತರದಲ್ಲಿ ಹಂತಕರ ತಂಡ ಇಬ್ಬರನ್ನೂ ಕೊಚ್ಚಿ ಕೊಂದಿದೆ. ನವೀನ್ ಬಿಲ್ಡರ್ ಒಬ್ಬರ ಮಗನಾಗಿದ್ದು, ಭಾನುವಾರ ರಾತ್ರಿ ಮಂಜನ ಜೊತೆ ಊಟಕ್ಕೆ ಹೋಗಿದ್ದನು. ತಮ್ಮ ಮಂಜನ ವಿರುದ್ಧ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಎರಡು ಕಡೆ ರೌಡಿ ಶೀಟ್ ಇದೆ. ಈ ಪೈಕಿ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣ ಸಹ ಒಂದಾಗಿದೆ. ಸದ್ಯ, ಇದೇ ಪ್ರಕರಣದಲ್ಲಿ ಮೃತಪಟ್ಟ ಟ್ಯಾಬ್ಲೆಟ್ ರಘು ಕಡೆಯವರಿಂದಲೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ.

    ಸಿನಿಮೀಯ ರೀತಿಯಲ್ಲಿ 7-10 ಜನರ ಗುಂಪು ಸ್ಯಾಂಟ್ರೊ ಸ್ಪೋರ್ಟ್ಸ್ ಕಾರಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದು ಅಟ್ಯಾಕ್ ಮಾಡಿದೆ. ಕಾರಿನಲ್ಲಿ ಅಟ್ಟಾಡಿಸುವ ರಭಸಕ್ಕೆ ಲೈಟ್ ಕಂಬ ಮುರಿದು ಬಿದ್ದಿದೆ. ಬಳಿಕ ಮನಸ್ಸೋ ಇಚ್ಚೇ ಮಚ್ಚಿನೇಟು ನೀಡಿದೆ. ಲಾಂಗಿನೇಟಿಗೆ ಇಬ್ಬರೂ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

    ಘಟನೆ ತಿಳಿದು ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳಾದ ಸೌತ್ ಡಿಸಿಪಿ ಡಾ.ರೋಹಿಣಿ ಸೆಪೆಟ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡುವಾಗ ಆಕ್ಸಿಡೆಂಟ್ ಆದ ಕಾರನ್ನು ಅಲ್ಲೆ ಬಿಡಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೃತ್ಯಕ್ಕೆ ಬಳಸಿದ ಕಾರು ವೀರಭಧ್ರಸ್ವಾಮಿ ಎಂಬವರ ಹೆಸರಿನಲ್ಲಿದೆ. ಘಟನೆ ನಡೆದ ಜಾಗದಲ್ಲಿ ಒಂದು ಪೀಠೋಪಕರಣ ಮಳಿಗೆ ಇದ್ದು, ಸಿಸಿ ಕ್ಯಾಮೆರಾ ಇದೆ. ಆದರೆ ಕಳೆದ 8 ದಿನಗಳಿಂದ ಕೆಲಸ ಮಾಡುತ್ತಿಲ್ಲ. ಪ್ರಕರಣದ ಸಂಬಂಧ ಸದ್ಯ ಜೆಪಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    ವೀಕೆಂಡ್ ಆದರೂ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಇಲ್ಲ. ಮುಖ್ಯರಸ್ತೆಯಲ್ಲಿ ಪೊಲೀಸರ ಗಸ್ತಿಲ್ಲ. ಇದರಿಂದಾಗಿಯೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.

  • ರೌಡಿಶೀಟರ್ ಮೇಲೆ ಮಹಿಳಾ ಪೇದೆಗಾಯ್ತು ಲವ್

    ರೌಡಿಶೀಟರ್ ಮೇಲೆ ಮಹಿಳಾ ಪೇದೆಗಾಯ್ತು ಲವ್

    ನವದೆಹಲಿ: ಕಳ್ಳನ ಮೇಲೆ ಮಹಿಳಾ ಪೊಲೀಸ್ ಲವ್ ಆಗೋದನ್ನು ಸಿನಿಮಾಗಳಲ್ಲಿ ನೋಡಿರುತ್ತವೆ. ಇದೇ ರೀತಿಯ ಕಥೆಯನ್ನೊಳಗೊಂಡಿರುವ ಹಲವು ಸಿನಿಮಾಗಳಿವೆ. ಸಿನಿಮಾ ರೀತಿಯಲ್ಲಿ ನೋಯ್ಡಾದ ಮಹಿಳಾ ಪೊಲೀಸ್ ಪೇದೆಗೆ ರೌಡಿಶೀಟರ್ ಮೇಲೆ ಪ್ರೇಮಾಂಕುರವಾಗಿದ್ದು, ಇಬ್ಬರು ಮದುವೆ ಆಗಿದ್ದಾರೆ.

    ಉತ್ತರ ಪ್ರದೇಶದ ಮೂಲದ ಮಹಿಳಾ ಪೊಲೀಸ್ ಪೇದೆ ನೋಯ್ಡಾದ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರೌಡಿಶೀಟರ್ ರಾಹುಲ್ ಟಸಾರಾನ ಮೇಲೆ ಪ್ರೇಮಾಂಕುರವಾಗಿದೆ. ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಮತ್ತು ಮಹಿಳಾ ಪೊಲೀಸ್ ಪೇದೆ ರಹಸ್ಯ ಸ್ಥಳದಲ್ಲಿ ಮದುವೆಯಾಗಿದ್ದು, ಫೋಟೋಗಳು ವೈರಲ್ ಆಗಿವೆ.

    ರಾಹುಲ್ ಮೇಲೆ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ನಡೆದ ಉದ್ಯಮಿ ಮನಮೋಹನ್ ಗೋಯಲ್ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಸಹ ಅನುಭವಿಸಿದ್ದಾನೆ. ಈ ಹಿಂದೆ ರಾಹುಲ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿತ್ತು.

    ಲವ್ ಆಗಿದ್ದು ಹೇಗೆ?
    ಉದ್ಯಮಿ ಮನಮೋಹನ್ ಗೋಯಲ್ ಪ್ರಕರಣದಲ್ಲಿ ಆರೋಪಿಯಾಗಿರುವವ ರಾಹುಲ್ ಜಾಮೀನಿನ ಮೇಲೆ ಹೊರ ಬಂದಿದ್ದನು. ನ್ಯಾಯಾಲದಯ ಆದೇಶದನ್ವಯ ರಾಹುಲ್ ನನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆಯನ್ನು ರಾಹುಲ್ ಮನೆಯ ಡ್ಯೂಟಿಗೆ ಹಾಕಲಾಕಿತ್ತು. ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಬದಲಾದ ದಿನಗಳಲ್ಲಿ ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿದೆ. ಮದುವೆ ಬಳಿಕ ಅಜ್ಞಾತಸ್ಥಳದಲ್ಲಿ ಜೋಡಿ ಉಳಿದುಕೊಂಡಿದೆ.

  • ಬೆಂಗಳೂರಿನಲ್ಲಿ ತಡರಾತ್ರಿ ರೌಡಿಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರಿನಲ್ಲಿ ತಡರಾತ್ರಿ ರೌಡಿಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ರಾತ್ರಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಇನ್ಸ್ ಪೆಕ್ಟರ್ ವೀರೂಪಾಕ್ಷ ಸ್ವಾಮಿ, ರೌಡಿಶೀಟರ್ ಅಶೋಕ್ ಅಲಿಯಾಸ್ ಅರ್ಜುನ್ (22) ಕಾಲಿಗೆ ಫೈರ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ರೌಡಿಶೀಟರ್ ಅಶೋಕ್ ರಾಬರಿ ಮಾಡಿ ಪರಾರಿಯಾಗಿದ್ದನು. ಅಶೋಕ್, ಮೆಹರ್ ಅಲಿ ಎಂಬವರ ಮನೆಗೆ ಮನೆಗೆ ನುಗ್ಗಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದನು.

    ಪೊಲೀಸರು ಎರಡು ದಿನಗಳಿಂದ ಅಶೋಕ್‍ಗಾಗಿ ಹುಡುಕಾಟ ನಡೆಸುತ್ತಿದ್ದರು. ಬಳಿಕ ಸೋಮವಾರ ರಾತ್ರಿ ಅಶೋಕ್ ಕಸ್ತೂರಿನಗರದಲ್ಲಿ ಇರೋದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು ಮಾಹಿತಿ ಪಡೆದ ಇನ್ಸ್ ಪೆಕ್ಟರ್ ವೀರೂಪಾಕ್ಷ ಸ್ವಾಮಿ ಸ್ಥಳಕ್ಕೆ ಹೋಗಿ ಸರಂಡರ್ ಆಗುವಂತೆ ಸೂಚಿಸಿದ್ದಾರೆ.

    ಸರಂಡರ್ ಆಗು ಎಂದು ಪೊಲೀಸರು ಹೇಳಿದ್ದಾರೆ ಅಶೋಕ್ ಡ್ರ್ಯಾಗರ್ ನಿಂದ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಪೊಲೀಸ್ ಪೇದೆ ಸೌದಾಗರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಆರೋಪಿ ಅಶೋಕ್ ಬಲಗಾಲಿಗೆ ಫೈರ್ ಮಾಡಿದ್ದಾರೆ. ಸದ್ಯ ಗಾಯಾಳು ಅಶೋಕ್ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    2016ರಲ್ಲಿ ಅಶೋಕ್ ಪೊಲೀಸರ ಮೇಲೆ ಹಾಕಿ ಸ್ಟಿಕ್‍ನಿಂದ ಹಲ್ಲೆ ಮಾಡಿದ್ದನು. ಈ ಪ್ರಕರಣದಲ್ಲಿ ಅಶೋಕ್ ಜೈಲು ಸೇರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದನು. ಸದ್ಯ ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ತಡರಾತ್ರಿ ಸಿಸಿಬಿ ಭರ್ಜರಿ ಬೇಟೆ – 250 ಡ್ಯಾನ್ಸ್ ಗರ್ಲ್ಸ್, 5 ಲಕ್ಷ, ಕಾರು ಸೀಜ್

    ಬೆಂಗ್ಳೂರಲ್ಲಿ ತಡರಾತ್ರಿ ಸಿಸಿಬಿ ಭರ್ಜರಿ ಬೇಟೆ – 250 ಡ್ಯಾನ್ಸ್ ಗರ್ಲ್ಸ್, 5 ಲಕ್ಷ, ಕಾರು ಸೀಜ್

    – ಬರ್ತ್‍ಡೇ ಗುಂಗಲ್ಲಿದ್ದ ರೌಡಿಶೀಟರ್ ಎಸ್ಕೇಪ್

    ಬೆಂಗಳೂರು: ಶುಕ್ರವಾರ ತಡ ರಾತ್ರಿ ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಏಕಕಾಲದಲ್ಲಿ ಐದು ಪಬ್ ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 5 ಲಕ್ಷ ನಗದು ವಶಕ್ಕೆ ಪಡೆದು, 250 ಡ್ಯಾನ್ಸ್ ಗರ್ಲ್ಸ್ ಗಳನ್ನು ರಕ್ಷಣೆ ಮಾಡಿದ್ದಾರೆ.

    ನಗರದ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್ ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್ ನಲ್ಲಿ ನಟೋರಿಯಸ್ ರೌಡಿಶೀಟರ್ ಹುಟ್ಟುಹಬ್ಬದ ಪಾರ್ಟಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕುಣಿಗಲ್ ಗಿರಿ ಅಸೋಸಿಯಟ್ಸ್ ವತಿಯಿಂದ ಬರೋಬ್ಬರಿ 250 ಮಹಿಳಾ ಡ್ಯಾನ್ಸರ್ಸ್ ಗಳ ಸಮ್ಮುಖದಲ್ಲಿ ಸಂಭ್ರಮಾಚರಣೆಗೆ ವೇದಿಕೆ ರೆಡಿಯಾಗಿತ್ತು.

    ರೌಡಿಶೀಟರ್ ಕುಣಿಗಲ್ ಗಿರಿಯ ಆಡಂಭರದ ಬರ್ತ್ ಡೇ ಸಂಭ್ರಮಾಚರಣೆಯ ವಿಚಾರ ತಿಳಿದು ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ಮಾಡಿದೆ. ದಾಳಿಯ ವೇಳೆ 250 ಡ್ಯಾನ್ಸ್ ಗರ್ಲ್ಸ್ ಗಳನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತ್ಯೇಕ ಪ್ರಕರಣ ದಾಖಲಿಸಿ ಒಟ್ಟು 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಸಿಸಿಬಿ ದಾಳಿ ಮಾಡುತ್ತಿದ್ದಂತೆಯೇ ಬರ್ತ್ ಡೇ ಬಾಯ್ ರೌಡಿಶೀಟರ್ ಕುಣಿಗಲ್ ಗಿರಿ ಕಟ್ಟಡ ಹಾರಿ ಎಸ್ಕೇಪ್ ಆಗಿದ್ದಾನೆ.

    ಕೆ.ಎ 05 ,5656 ನಂಬರ್ ಇನೋವಾ ಕಾರ್ ಬಿಟ್ಟು ಗಿರಿ ಪರಾರಿಯಾಗಿದ್ದಾನೆ. ಸದ್ಯ ಬರ್ತ್ ಡೇ ಪಾರ್ಟಿಗೆ ತಂದಿದ್ದ ಗಿರೀಶ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿಯ ವೇಳೆ ಒಟ್ಟು ಐದು ಲಕ್ಷ ಹಣವನ್ನೂ ಸಿಸಿಬಿಯವರು ವಶಪಡಿಸಿಕೊಂಡಿದ್ದಾರೆ.

    ಪ್ರಕರಣದ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೌಡಿಶೀಟರ್ ಕುಣಿಗಲ್ ಗಿರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಬೆಂಗಳೂರಿನಲ್ಲಿ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

    ಬೆಂಗಳೂರಿನಲ್ಲಿ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಮೇಲೆ ನಂದಿನಿ ಲೇಔಟ್ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ಮುನಿರಾಜು ಅಲಿಯಾಸ್ ಮುನ್ನಾ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ಬಳಿಕ ಆತನನ್ನು ಬಂಧಿಸಿದ್ದಾರೆ. ಕ್ರಿಕೆಟ್ ಆಡುವ ವಿಚಾರಕ್ಕೆ ಮುನಿರಾಜು ಮತ್ತು ಇನ್ನಿಬ್ಬರು ಸಂದೀಪ್ ಹಾಗೂ ಸುದೀಪ್ ಎಂಬವರ ಮೇಲೆ ಹಲ್ಲೆ ಮಾಡಿದ್ದರು.

    ಮುನಿರಾಜು, ಸಂದೀಪ್ ಹಾಗೂ ಸುದೀಪ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರ ಮೇಲೆಯೇ ಮುನಿರಾಜು ಹಲ್ಲೆಗೆ ಯತ್ನಿಸಿದ್ದಾನೆ.

    ಆರೋಪಿ ಮುನಿರಾಜು, ಪಿಸಿ ಬಲರಾಮ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಹಾಗಾಗಿ ಆತ್ಮರಕ್ಷಣೆಗಾಗಿ ನಂದಿನಿ ಲೇಔಟ್ ಪೊಲೀಸ್ ಇನ್ಸ್ ಪೆಕ್ಟರ್ ಲೋಹಿತ್ ಅವರು ಆರೋಪಿ ಮುನಿರಾಜು ಮೇಲೆ ಫೈರಿಂಗ್ ಮಾಡಿದ್ದಾರೆ.

  • ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಲಕ್ಷ್ಮಣ ಬರ್ಬರ ಕೊಲೆ

    ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಲಕ್ಷ್ಮಣ ಬರ್ಬರ ಕೊಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ರೌಡಿಗಳ ನಡುವೆ ಮಾರಾಮಾರಿ ನಡೆದಿದ್ದು, ನಟೋರಿಯಸ್ ರೌಡಿಶೀಟರ್ ಲಕ್ಷ್ಮಣನನ್ನು ಕೊಲೆ ಮಾಡಿರುವ ಘಟನೆ ರಾಜ್‍ಕುಮಾರ್ ರಸ್ತೆಯಲ್ಲಿ ನಡೆದಿದೆ.

    ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಲಕ್ಷ್ಮಣ ಕೊಲೆ ಮಾಡಿದ್ದಾರೆ. ಇಸ್ಕಾನ್ ಸಮೀಪದ ರನೈಜಾನ್ ಅಪಾರ್ಟ್ ಮೆಂಟ್ ಮುಂದೆ ಕೊಲೆ ಮಾಡಲಾಗಿದ್ದು, ಕಳೆದ ವಾರವಷ್ಟೇ ಲಕ್ಷ್ಮಣ ಜೈಲಿನಿಂದ ಹೊರಗೆ ಬಂದಿದ್ದನು. ಲ್ಯಾಂಡ್ ಗ್ರ್ಯಾಬಿಂಗ್ ಕೇಸ್ ನಲ್ಲಿ ಮೃತ ಲಕ್ಷ್ಮಣನನ್ನ ಸಿಸಿಬಿ ಪೊಲೀಸರು ಜೈಲಿಗೆ ಕಳಿಸಿದ್ದರು.

    ರೌಡಿಶೀಟರ್ ಲಕ್ಷ್ಮಣ ಇನ್ನೋವಾ ಕಾರಲ್ಲಿ ಹೋಗುತ್ತಿದ್ದನು. ಈ ವೇಳೆ ಮತ್ತೊಂದು ಕಾರಿನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಬಂದು ಲಕ್ಷ್ಮಣನ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಮಚ್ಚು, ಲಾಂಗ್‍ಗಳಿಂದ ಲಕ್ಷ್ಮಣನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣ ಗಾಯಗೊಂಡಿದ್ದ ಲಕ್ಷ್ಮಣನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಲಕ್ಷ್ಮಣ ಕೊನೆಯುಸಿರೆಳೆದಿದ್ದಾನೆ.

    ಇನ್ನೂ ಘಟನೆ ನಡೆದ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದ ರೌಡಿಗೆ ಪೊಲೀಸರಿಂದ ಗುಂಡು

    ಬೆಂಗ್ಳೂರಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದ ರೌಡಿಗೆ ಪೊಲೀಸರಿಂದ ಗುಂಡು

    ಬೆಂಗಳೂರು: ಕೊಲೆ, ದರೋಡೆ, ರಾಬರಿ ಮಾಡಿ ಜನರನ್ನು ಬೆದರಿಸಿಕೊಂಡು ಬೆಂಗಳೂರಿನಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದ ರೌಡಿ ಮೇಲೆ ಪೊಲೀಸರು ಗುಂಡು ಹಾರಿಸಿ ಉರುಳಿಸಿದ್ದಾರೆ.

    ದಿನೇಶ್ ಗುಂಡೇಟು ತಿಂದ ರೌಡಿಶೀಟರ್. ಈತ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಕೊಲೆ, ದರೋಡೆ ಮಾಡಿ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದನು. ಬುಧವಾರ ರಾತ್ರಿ ಬಾಣಸವಾಡಿ ರೈಲ್ವೇ ಪ್ಯಾರಲಲ್ ಬಳಿ ಇರುವ ಮಾಹಿತಿ ತಿಳಿದು ಪೊಲೀಸರು ಬಂಧಿಸಲು ಹೋಗಿದ್ದರು.

    ಈ ವೇಳೆ ರೌಡಿ ದಿನೇಶ್, ಚಾಕುವಿನಿಂದ ಪೇದೆ ಧರ್ಮೇಶ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಎಸಿಪಿ ಮಹದೇವಪ್ಪ ಅವರು ಆರೋಪಿ ದಿನೇಶ್‍ಗೆ ಶರಣಾಗಲು ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಈ ವೇಳೆ ಆತ ಮತ್ತೆ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಉರುಳಿಸಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.

    ಆರೋಪಿ ದಿನೇಶ್ ನಟೋರಿಯಸ್ ಆಗಿದ್ದು, ಕಳೆದ ಎರಡೂವರೆ ವರ್ಷದಿಂದ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆರೋಪಿ ದಿನೇಶ್ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಕೊಲೆಗಳನ್ನ ಮಾಡಿದ್ದಾನೆ. ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೇಸ್‍ಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ಗರಂ

    ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ಗರಂ

    ಮಂಡ್ಯ: ರೌಡಿ ಶೀಟರ್ ಗಳ ಕೈ ಮೇಲಿದ್ದ ಟ್ಯಾಟೂಗಳನ್ನು ನೋಡಿ ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜ್ ಗರಂ ಆಗಿದ್ದಾರೆ.

    ಅಸುರಕ್ಷಿತವಾಗಿ ಟ್ಯಾಟೂ ಹಾಕಿಸಿಕೊಂಡರೆ ಏಡ್ಸ್ ಬರುವ ಸಾಧ್ಯತೆ ಇದೆ ಎಂದು ಬುದ್ಧಿವಾದ ಹೇಳಿದ್ದಾರೆ. ಶನಿವಾರ ಮಂಡ್ಯದ ಡಿಆರ್ ಗ್ರೌಂಡ್‍ನಲ್ಲಿ ರೌಡಿಶೀಟರ್ ಗಳ ಪೆರೇಡ್ ಹಮ್ಮಿಕೊಳ್ಳಲಾಗಿತ್ತು. ಮಂಡ್ಯ ಜಿಲ್ಲೆಯ ಎಲ್ಲ ರೌಡಿಶೀಟರ್ ಗಳನ್ನು ಒಂದು ಕಡೆ ಕರೆಸಿ ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಸನ್ಮಾರ್ಗದಲ್ಲಿ ನಡೆಯುವಂತೆ ಎಚ್ಚರಿಕೆ ನೀಡಲಾಯಿತು.

    ಈ ವೇಳೆ ಬಹುತೇಕ ರೌಡಿ ಶೀಟರ್‍ಗಳು ಟ್ಯಾಟೂ ಹಾಕಿಸಿಕೊಂಡಿದ್ದನ್ನು ಗಮನಿಸಿದ ಎಸ್‍ಪಿ ಗರಂ ಆಗಿದ್ದಲ್ಲದೇ ಅಸುರಕ್ಷಿತವಾಗಿ ಟ್ಯಾಟೂ ಹಾಕಿಸಿಕೊಂಡರೆ ಏಡ್ಸ್ ಬರುತ್ತೆ ಎಂದು ತಿಳುವಳಿಕೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv