Tag: rowdysheeter

  • ಹೊಟ್ಟೆಗೆ ಚಾಕುವಿನಿಂದ ಇರಿದು ರೌಡಿಶೀಟರ್ ಬರ್ಬರ ಹತ್ಯೆ

    ಹೊಟ್ಟೆಗೆ ಚಾಕುವಿನಿಂದ ಇರಿದು ರೌಡಿಶೀಟರ್ ಬರ್ಬರ ಹತ್ಯೆ

    ತುಮಕೂರು: ರೌಡಿಶೀಟರ್ ಒಬ್ಬನನ್ನು ಮತ್ತೊಂದು ರೌಡಿ ಗುಂಪು ಕೊಲೆಗೈದು ಪರಾರಿಯಾದ ಘಟನೆ ತುಮಕೂರು ನಗರದ ಎಸ್‍ಐಟಿ ಬಡವಾವಣೆಯ ಮಂಜುಶ್ರೀ ಬಾರ್ ಎದುರು ನಡೆದಿದೆ.

    ಮಂಜು ಅಲಿಯಾಸ್ ಆರ್ ಎಕ್ಸ್ ಮಂಜ (31) ಕೊಲೆಯಾದ ರೌಡಿಶೀಟರ್. ರಾತ್ರಿ ಸ್ನೇಹಿತರ ಜೊತೆ ಮಾತನಾಡಿ ಮನೆಗೆ ಹೋಗುವಾಗ 9.45ರ ಸುಮಾರಿನಲ್ಲಿ ಕೃತ್ಯ ನಡೆದಿದೆ.

    ನಾಲ್ಕೈದು ರೌಡಿಗಳು ಬಂದು ಮಂಜು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಹತ್ಯೆ ಮಾಡಿದ ನಂತರ ರೌಡಿ ಗುಂಪು ಸ್ಥಳದಿಂದ ಪರಾರಿಯಾಗಿದೆ. ಹೀಗಾಗಿ ಕೊಲೆ ಮಾಡಿರುವ ರೌಡಿಗಳು ಯಾರೆಂದು ತಿಳಿದುಬಂದಿಲ್ಲ.

    ಸ್ಥಳಕ್ಕೆ ಎನ್ ಇಪಿಎಸ್ ಪೊಲೀಸರು ದೌಡಾಯಿಸಿದ್ದು, ಎನ್‍ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ರೌಡಿಶೀಟರ್ ಬಳ್ಳಾರಿ ಶಿವನ ದರ್ಬಾರ್ – ಪೆರೋಲ್ ಬಂದವನ ಸ್ವಾಗತಕ್ಕೆ 20 ಕಾರುಗಳು!

    ರೌಡಿಶೀಟರ್ ಬಳ್ಳಾರಿ ಶಿವನ ದರ್ಬಾರ್ – ಪೆರೋಲ್ ಬಂದವನ ಸ್ವಾಗತಕ್ಕೆ 20 ಕಾರುಗಳು!

    – ಹುಟ್ಟೂರು ಕನಕಪುರದಲ್ಲಿ ಭರ್ಜರಿ ಬಾಡೂಟ

    ಬೆಂಗಳೂರು: ಪೆರೋಲ್ ಮೇಲೆ ಬಂದ ರೌಡಿಯೊಬ್ಬನ ಅದ್ಧೂರಿ ವೈಭೋಗದ ಸ್ಟೋರಿ ಇದಾಗಿದೆ. ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ. ಆದರೆ ರೌಡಿ ಶೀಟರ್ ಬಳ್ಳಾರಿ ಶಿವನಿಗೆ ಮಾತ್ರ ಅದ್ಧೂರಿ ಸ್ವಾಗತ ಕೋರಲಾಗಿದೆ.

    ಹೌದು. ಟ್ಯಾಬ್ ರಘು, ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ಬಳ್ಳಾರಿ ಶಿವನ ಮೇಲಿವೆ. ತಲಘಟ್ಟಪುರ, ಜೆಪಿನಗರ ಹಾಗೂ ಹನುಮಂತನಗರದಲ್ಲಿ ರೌಡಿ ಶೀಟರ್ ಆಗಿರುವ ಬಳ್ಳಾರಿ ಶಿವ, ಕೊಲೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷದಿಂದ ಜೈಲಿನಲ್ಲಿದ್ದಾನೆ.

    ಕಳೆದ ವಾರ ಪೆರೋಲ್ ಮೇಲೆ ಬಳ್ಳಾರಿ ಶಿವ ಜೈಲಿನಿಂದ ಹೊರ ಬಂದಿದ್ದ. ಈ ವೇಳೆ ಹುಟ್ಟೂರು ಕನಕಪುರದ ಹಳ್ಳಿಯಲ್ಲಿ ಬಾಡೂಟ ಹಾಕಿಸಿದ್ದ. ಬಳ್ಳಾರಿ ಶಿವನ ಕಾರಿನ ಹಿಂದೆ 20ಕ್ಕೂ ಹೆಚ್ಚು ಕಾರುಗಳಲ್ಲಿ ಬೆಂಬಲಿಗರು ಫಾಲೋ ಮಾಡಿದರು. ಈ ಮೂಲಕ ಬಳ್ಳಾರಿ ಶಿವನ ಹಿಂದೆ ಬೆಂಬಲಿಗರ ದಂಡೇ ಹರಿದು ಬಂತು.

    ಬಳ್ಳಾರಿ ಶಿವನ ವೈಭೋಗ ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಇತ್ತೀಚೆಗೆ ರೌಡಿ ಆಟೋ ರಾಮನ ವೈಭೋಗ ಕಂಡು ಜನ ಬೆರಗಾಗಿದ್ದರು. ಸದ್ಯ ಸದ್ಯ ಪೆರೋಲ್ ಮುಗಿಸಿರುವ ಬಳ್ಳಾರಿ ಶಿವ ಮತ್ತೆ ಜೈಲು ಸೇರಿದ್ದಾನೆ.

  • ಚೇಸ್ ಮಾಡಿ, ಕಾರು ಅಡ್ಡ ಹಾಕಿದಾಗ ಪೊಲೀಸರ ಮೇಲೆ ತಲವಾರು ಬೀಸಿದ ಕೊಲೆ ಆರೋಪಿ

    ಚೇಸ್ ಮಾಡಿ, ಕಾರು ಅಡ್ಡ ಹಾಕಿದಾಗ ಪೊಲೀಸರ ಮೇಲೆ ತಲವಾರು ಬೀಸಿದ ಕೊಲೆ ಆರೋಪಿ

    – ಗುಂಡ್ಯದಲ್ಲಿ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

    ಮಂಗಳೂರು: ರೌಡಿಶೀಟರ್ ಚೆನ್ನೈ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗುಂಡ್ಯ ಬಳಿ ಈ ಘಟನೆ ನಡೆದಿದೆ. ಶುಕ್ರವಾರ ಬಂಟ್ವಾಳದ ಮೆಲ್ಕಾರ್ ಬಳಿ ಉಮಾರ್ ಫಾರೂಕ್ ಕೊಲೆ ನಡೆದಿತ್ತು. ಈ ಪ್ರಕರಣದ ಆರೋಪಿ ಖಲೀಲ್ ಮತ್ತು ತಂಡ ಕಾರಿನಲ್ಲಿ ತೆರಳುತ್ತಿತ್ತು. ಇದರ ನಿಖರ ಮಾಹಿತಿ ಪಡೆದ ಪೊಲೀಸರು ಆರೋಪಿ ಖಲೀಲ್ ಮತ್ತು ತಂಡವನ್ನು ಬಂಟ್ವಾಳ ಪಿಎಸ್‍ಐಗಳಾದ ಅವಿನಾಶ್ ಮತ್ತು ಪ್ರಸನ್ನ ಟೀಂ ಚೇಸ್ ಮಾಡಿತ್ತು.

    ಕಾರು ಅಡ್ಡ ಹಾಕಿದಾಗ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ಬೀಸಿದ್ದಾನೆ. ತಲವಾರು ಬೀಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಎಸ್‍ಐ ಅವಿನಾಶ್, ಖಲೀಲ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಸ್‍ಐ ಪ್ರಸನ್ನಗೆ ಸಣ್ಣ ಗಾಯಗಳಾಗಿದೆ. ಈ ವೇಳೆ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿ ಖಲೀಲ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಿನ್ನೆ ಸಂಜೆ ವೈಯಕ್ತಿಕ ದ್ವೇಷದಿಂದ ಮಾರಕಾಯುಧಗಳಿಂದ ದಾಳಿ ಮಾಡಿ ರೌಡಿ ಶೀಟರ್ ಫಾರೂಕ್ ಹತ್ಯೆ ಮಾಡಲಾಗಿತ್ತು. ಕಾರಲ್ಲಿ ಬಂದ ದುಷ್ಕರ್ಮಿಗಳು ಫಾರೂಕ್ ನನ್ನು ತಲವಾರಿನಿಂದ ಹಿಗ್ಗಾಮುಗ್ಗ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದರು. ಘಟನೆ ನಡೆದ ಕೂಡಲೇ ಫಾರೂಕ್ ನನ್ನು ಪೊಲೀಸ್ ಜೀಪ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಮದುಮಗಳ ಕೈ ಹಿಡಿಯಲು ಹೋಗಿ ಹೆಣವಾದ ರೌಡಿ ಶೀಟರ್

    ಮದುಮಗಳ ಕೈ ಹಿಡಿಯಲು ಹೋಗಿ ಹೆಣವಾದ ರೌಡಿ ಶೀಟರ್

    – ಮಸಣವಾದ ಮದುವೆ ಮನೆ

    ಯಾದಗಿರಿ: ಮದುವೆ ಮನೆಗೆ ಹೋಗಿ ಮದುಮಗಳ ಕೈ ಹಿಡಿಯಲು ಮುಂದಾದ ರೌಡಿ ಶೀಟರ್, ಆಕೆಯ ತಂದೆ ಮತ್ತು ಸಹೋದರರಿಂದ ಕೊಲೆಯಾಗಿದ್ದಾನೆ. ಈ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಪರಮೇಶ್ವರಪಲ್ಲಿಯಲ್ಲಿ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೊಹಮ್ಮದ್ ಹನೀಪ್ (34) ಕೊಲೆಯಾದವನಾಗಿದ್ದು, ಈತ ಚಿನ್ನಕಾರ ಗ್ರಾಮದ ರೌಡಿ ಶೀಟರ್. ಆರೋಪಿಗಳನ್ನು ಮದುಮಗಳ ತಂದೆ ತಂದೆ ರಸೂಲ್ ಮತ್ತು ಮಕ್ಕಳಾದ ಗುಲಾಮ್, ಇರ್ಫಾನ್, ಹಾರೂನ್ ಎಂದು ಗುರುತಿಸಲಾಗಿದೆ.

    ಸೋಮವಾರ ಮಧ್ಯಾಹ್ನ ಪರಮೇಶ್ವರಪಲ್ಲಿಯ ತನ್ನ ಸಂಬಂಧಿ ರಸೂಲ್ ರ ಮಗಳ ಮದುವೆಗೆ ಹೋಗಿದ್ದ. ಮದುವೆಯಲ್ಲಿ ಅಸಭ್ಯ ವರ್ತನೆ ತೋರಿದ ಮೊಹಮ್ಮದ್, ವೇದಿಕೆ ಮೇಲೇರಿ ಮದುಮಗಳ ಕೈ ಹಿಡಿಯಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಮದುಮಗಳ ತಂದೆ ಮತ್ತು ಸಹೋದರರು, ಮೊಹಮ್ಮದ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

    ಈ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 100ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್- ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

    100ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್- ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

    ನೆಲಮಂಗಲ: ಗ್ರಾಮ ಪಂಚಾಯ್ತಿ ಚುನಾವಣೆ ಮತ್ತು ಮುಂದೆ ಬರುವ ಹಬ್ಬ, ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನೆಲಮಂಗಲ ಉಪವಿಭಾಗ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗದಲ್ಲಿ, ರಾತ್ರೋರಾತ್ರಿ ರೌಡಿಗಳಿಗೆ ಶಾಕ್ ನೀಡಿದ ಪೊಲೀಸರು, 100ಕ್ಕೂ ರೌಡಿಗಳ ಪರೇಡ್ ನಡೆಸಿದ್ದಾರೆ. ನೆಲಮಂಗಲ ಉಪವಿಭಾಗದ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ರೌಡಿಗಳ ಬಳಿಯಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

    100ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಪೊಲೀಸ್ ಸಿಬ್ಬಂದಿ ಹಾಗೂ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಚೆನ್ನಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ನಂತರ ಇಂದು ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಪರೇಡ್ ನಡೆಸಿದರು. ಇತ್ತಿಚೇಗೆ ರಿಯಲ್ ಎಸ್ಟೇಟ್, ಲ್ಯಾಂಡ್ ಮಾಫಿಯಾ ದಲ್ಲಿ ಸ್ಥಳೀಯರ ರೌಡಿಗಳ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆ ನೆಲಮಂಗಲ ಡಿವೈಎಸ್‍ಪಿ ಮೋಹನ್, ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಮಾದನಾಯಕನಹಳ್ಳಿ ಇನ್ಸ್ ಪೆಕ್ಟರ್ ಸತ್ಯನಾರಯಣ ನೇತೃತ್ವದಲ್ಲಿ ದಾಳಿ ನಡೆಸಿ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಇತ್ತೀಚೆಗೆ ನೆಲಮಂಗಲದಲ್ಲಿ ಯುವಕನ ಕೊಲೆ ಕೇಸ್ ನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ರೌಡಿ ಚಟುವಟಿಕೆಗೆ ಖಡಕ್ ಆಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

  • ಎನ್‌ಕೌಂಟರ್‌ಗೆ ಬೆಚ್ಚಿಬಿದ್ದ ರೌಡಿಸಂ – ಠಾಣೆಗೆ ಬಂದು ಶರಣಾದ ರೌಡಿಶೀಟರ್‌ಗಳು

    ಎನ್‌ಕೌಂಟರ್‌ಗೆ ಬೆಚ್ಚಿಬಿದ್ದ ರೌಡಿಸಂ – ಠಾಣೆಗೆ ಬಂದು ಶರಣಾದ ರೌಡಿಶೀಟರ್‌ಗಳು

    ಬೆಂಗಳೂರು: ನಗರದ ಕುಖ್ಯಾತ ರೌಡಿಶೀಟರ್ ಸ್ಲಂ ಭರತನ ಎನ್‍ಕೌಂಟರ್ ಆದ್ಮೇಲೆ ಇಡೀ ಬೆಂಗಳೂರು ರೌಡಿಸಂ ಬೆಚ್ಚಿಬಿದ್ದಿದೆ. ಒಂದಷ್ಟು ಸ್ವಯಂ ಘೋಷಿತ ರೌಡಿಗಳು ಊರು ಬಿಟ್ಟರೆ, ಮತ್ತಷ್ಟು ರೌಡಿಗಳು ಸಾರ್ ನನ್ನನ್ನ ಕಾಪಾಡಿ ಎಂದು ತಾವೇ ಪೊಲೀಸರಿಗೆ ಶರಣಾಗುತ್ತಿದ್ದಾರೆ.

    ಸ್ಲಂ ಭರತನ ಎನ್‍ಕೌಂಟರ್ ನಂತರ ಆತನ ಸಹಚರರು ಸೇರಿದಂತೆ ಸಾಕಷ್ಟು ರೌಡಿಗಳು ಊರು ಬಿಟ್ಟಿದ್ದಾರೆ. ಇದರ ಮಧ್ಯೆ ನಗರದ ಉತ್ತರವಲಯದಲ್ಲಿ ಆಕ್ಟೀವ್ ಆಗಿದ್ದ ರೌಡಿಗಳೆಲ್ಲಾ ಒಬ್ಬೊಬ್ಬರಾಗಿ ಪೊಲೀಸರ ಮುಂದೆ ಮಂಡಿಯೂರಿ ಶರಣಾಗಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಅಟ್ಯಾಕ್- ಫೈರಿಂಗ್‍ಗೆ ಸ್ಲಂ ಭರತ್ ಸಾವು

    ಕೊಲೆ, ಕೊಲೆ ಯತ್ನ, ರಾಬರಿ, ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಐವರು ರೌಡಿಶೀಟರ್‌ಗಳು ಗುರುವಾರ ಏಕಾಏಕಿ ಕೋರ್ಟ್ ಮುಂದೆ ಶರಣಾಗಿದ್ದಾರೆ. ಮಧು ಅಲಿಯಾಸ್ ಸ್ಲಂ ಮಧು, ವಿನಯ್ ಕುಮಾರ್ ಅಲಿಯಾಸ್ ಮಿಂಡ, ಅಜಯ್ ಅಲಿಯಾಸ್ ಗಜ್ಜಿ, ಮುನಿರಾಜು ಅಲಿಯಾಸ್ ಕರಿಯ, ಸತೀಶ್ ಅಲಿಯಾಸ್ ತುರೆ, ಶರಣಾದ ರೌಡಿಗಳು.

    ಕೇವಲ ಉತ್ತರವಲಯದ ರೌಡಿಗಳು ಮಾತ್ರವಲ್ಲದೇ ಸ್ಲಂ ಭರತನ ಎನ್‍ಕೌಂಟರ್‍ಗೆ ಇಡೀ ಬೆಂಗಳೂರು ಅಪರಾಧ ಲೋಕವೇ ಬೆಚ್ಚಿ ಬಿದ್ದಿದ್ದು, ನಗರದ ವಿವಿಧ ವಲಯಗಳ ಪೊಲೀಸ್ ಠಾಣೆಗಳ ರೌಡಿಗಳು ತಾವಾಗಿಯೇ ಪೊಲೀಸರು ಮತ್ತು ಕೋರ್ಟ್ ಮುಂದೆ ಶರಣಾಗಿ ಇನ್ಮುಂದೆ ಯಾವುದೇ ಅಪರಾಧ ಚಟುವಟಿಗಳಲ್ಲಿ ಭಾಗಿಯಾಗಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್ – ಮಚ್ಚಿನಿಂದ ಕೊಚ್ಚಿ ಕೊಲೆಗೈದವ ತಿಂದ ಗುಂಡೇಟು

    ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್ – ಮಚ್ಚಿನಿಂದ ಕೊಚ್ಚಿ ಕೊಲೆಗೈದವ ತಿಂದ ಗುಂಡೇಟು

    ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ರೌಡಿಶೀಟರ್ ಯೂನಿಸ್ ಗುಂಡೇಟು ತಿಂದ ಕೊಲೆ ಆರೋಪಿ. ಕೊಲೆಯಾಗಿದ್ದ ಭಟ್ಟಿ ಅಮ್ಚಾದ್ ಮತ್ತು ಯೂನಿಸ್ ಗ್ಯಾಂಗ್ ನಡುವೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಗಾಗ ಕೊಲೆಯತ್ನಗಳು, ಹೊಡೆದಾಟಗಳು ನಡೆಯುತ್ತಿದ್ದವು. ಕಳೆದ ಭಾನುವಾರ ಅಂಗಡಿಯಲ್ಲಿದ್ದ ಭಟ್ಟಿ ಅಮ್ಚಾದ್ ಮೇಲೆ ಯೂನಿಸ್ ಗ್ಯಾಂಗ್‍ನ ಏಳೆಂಟು ಜನ ಏಕಾಏಕಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ, ಅಟ್ಟಾಡಿಸಿಕೊಂಡು ಹೋಗಿ ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಡಿ.ಜೆ ಹಳ್ಳಿ ಪೊಲೀಸರು, ಪ್ರಮುಖ ಆರೋಪಿ ಯೂನಿಸ್‍ನನ್ನು ಬಂಧಿಸಿ, ಇಂದು ಮುಂಜಾನೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೇದೆ ಆನಂದ್ ಮೇಲೆ ಆರೋಪಿ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಡಿ.ಜೆ ಹಳ್ಳಿ ಇನ್ಸ್‌ಪೆಕ್ಟರ್ ಕೇಶವಮೂರ್ತಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ರೌಡಿಶೀಟರ್ ಯೂನಿಸ್ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಖಾಕಿ ತುಪಾಕಿ – ಗುಂಡೇಟು ತಿಂದ ರೌಡಿಶೀಟರ್

    ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಖಾಕಿ ತುಪಾಕಿ – ಗುಂಡೇಟು ತಿಂದ ರೌಡಿಶೀಟರ್

    ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್ ಓರ್ವನ ಕಾಲಿಗೆ ಗುಂಡು ಹೊಡೆದಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಾಜಗೋಪಾಲ್ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸೀನ ಅಲಿಯಾಸ್ ಸೀಗಡಿ ಸೀನನಿಗೆ ಪೊಲೀಸರಿಂದ ಗುಂಡೇಟು ಬಿದ್ದಿದೆ. ಪ್ರಕರಣವೊಂದರ ಸಂಬಂಧ ರೌಡಿಶೀಟರ್ ನನ್ನು ಬಂಧಿಸಲು ಪೊಲೀಸರು ತೆರೆಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಸೀನನಿಂದ ಆತ್ಮರಕ್ಷಣೆಗಾಗಿ ರಾಜಗೋಪಾಲ್ ನಗರ ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹರಿಸಿದ್ದಾರೆ. ಆದರೂ ಸೀನ ಪೊಲೀಸರ ಮೇಲೆ ದಾಳಿ ಮುಂದುವರೆಸಿದನು. ಇದೇ ವೇಳೆ ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಇನ್‍ಸ್ಪೆಕ್ಟರ್ ದಿನೇಶ್ ಪಾಟೀಲ್ ಸೀನನ ಕಾಲಿದೆ ಗುಂಡು ಹೊಡೆದಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್ ಸೀನನನ್ನ ಬಂಧಿಸಲು ತೆರಳಿದ್ದ ರಾಜಗೋಪಾಲನಗರ ಇನ್‍ಸ್ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಲು ಮುಂದಾದನು. ಅಲ್ಲದೇ ಸೀನ ಪೇದೆ ವೀರಭದ್ರಪ್ಪ ಅವರಿಗೆ ತಿವಿದು ಹಲ್ಲೆ ಮಾಡಿದ್ದಾನೆ.

    ಈ ಹಿಂದೆ ರಾಜಗೋಪಾಲ ನಗರದಲ್ಲಿ 11 ಆಟೋ ಹಾಗೂ 4 ಕಾರಿನ ಗಾಜು ಹೊಡೆದು ಹಾಕಿ ಸೀನ ಹಾಗೂ ಆತನ ಸಹಚರರು ರೌಡಿಸಂ ಮಾಡಿದ್ದರು. ಈ ಪ್ರಕರಣ ಸಂಬಂಧ ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಸೀನ ಪ್ರಯತ್ನ ಮಾಡಿದ. ಸದ್ಯ ಪೇದೆ ಹಾಗೂ ರೌಡಿಶೀಟರ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.

  • ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರಿಂದ ಫೈರಿಂಗ್ – ಇಬ್ಬರು ರೌಡಿಶೀಟರ್ ಗಳಿಗೆ ಗುಂಡೇಟು

    ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರಿಂದ ಫೈರಿಂಗ್ – ಇಬ್ಬರು ರೌಡಿಶೀಟರ್ ಗಳಿಗೆ ಗುಂಡೇಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ರೌಡಿಶೀಟರ್ ಗಳ ಕಾಲಿಗೆ ಸಿಸಿಬಿ ಪೊಲೀಸರ ಗುಂಡೇಟು ಬಿದ್ದಿದೆ.

    ಸತೀಶ್ ಮತ್ತು ಮಹೇಶ್ ಅಲಿಯಾಸ್ ಹಂದಿ ಮಹೇಶ್ ಗುಂಡೇಟು ತಿಂದ ರೌಡಿಶೀಟರ್ ಗಳು. ರೌಡಿಶೀಟರ್ ಸತೀಶ್ ಮೇಲೆ ಐದು ಪ್ರಕರಣಗಳು, ಹಂದಿ ಮಹೇಶ್ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ನಗರ ಮೈಕೋ ಲೇಔಟ್ ಬಳಿಯ ರಂಕಾ ಕಾಲೋನಿಯಲ್ಲಿ ಇಬ್ಬರು ಇರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಸಿಸಿಬಿ ಇನ್‍ಸ್ಪೆಕ್ಟರ್ ಗಳಾದ ಪುನೀತ್, ಕೇಶವಮೂರ್ತಿ ಮತ್ತವರ ತಂಡ ಇಬ್ಬರನ್ನು ಸೆರೆಹಿಡಿಯಲು ಯತ್ನಿಸಿದ್ದರು.

    ಈ ವೇಳೆ ಪೊಲೀಸ್ ಪೇದೆ ಹನುಮೇಶ್ ಎಂಬವರಿಗೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಇಬ್ಬರು ಯತ್ನಿಸಿದ್ದರು. ತಕ್ಷಣ ಅಲರ್ಟ್ ಆದ ಇಬ್ಬರು ಇನ್‍ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಇಬ್ಬರು ರೌಡಿಶೀಟರ್ ಗಳ ಕಾಲಿಗೆ ಗುಂಡೇಟು ಹೊಡೆದು ಖೆಡ್ಡಾಗೆ ಬೀಳಿಸಿದ್ದಾರೆ. ಪೇದೆ ಮತ್ತು ಇಬ್ಬರು ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ತನಿಖೆ ಮುಂದುವರೆದಿದೆ.

  • “ಯಾವ ಕೇಸಲ್ಲಿ ಬೇಕಾದ್ರು ಫಿಟ್ ಮಾಡ್ತೀನಿ”- ಧಮ್ಕಿ ಹಾಕಿದ ಲೇಡಿ ಸಿಪಿಐ

    “ಯಾವ ಕೇಸಲ್ಲಿ ಬೇಕಾದ್ರು ಫಿಟ್ ಮಾಡ್ತೀನಿ”- ಧಮ್ಕಿ ಹಾಕಿದ ಲೇಡಿ ಸಿಪಿಐ

    ತುಮಕೂರು: ಜಿಲ್ಲೆಯ ತಿಲಕ್ ಪಾರ್ಕ್ ಬಳಿ ನಡೆಯುತ್ತಿದ್ದ ರೌಡಿಗಳ ಪರೇಡ್‍ನಲ್ಲಿ ಮಹಿಳಾ ಸಿಪಿಐಯೊಬ್ಬರು ‘ಲೇಡಿ ಸಿಂಗಂ’ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಯಾವ ಕೇಸಲ್ಲಿ ಬೇಕಾದರು ಫಿಟ್ ಮಾಡುತ್ತೇನೆ ಎಂದು ರೌಡಿಶೀಟರ್​ಗಳಿಗೆ ಧಮ್ಕಿ ಹಾಕಿದ್ದಾರೆ.

    ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. “ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು, ಮಕ್ಕಳಾ ಮುಚ್ಚಿಕೊಂಡಿರಿ. ಅನ್ನ ತಿನ್ನಲು ಗತಿಯಿಲ್ಲ, ನೆಟ್ಟಗೆ ಬಟ್ಟೆ ಹಾಕೋ ಗತಿಯಿಲ್ಲ ನಿಮಗೆ” ಎಂದು ಹೀನಾಮಾನವಾಗಿ ರೌಡಿಶೀಟರ್​ಗಳಿಗೆ ಬೈದಿದ್ದಾರೆ. ಜೊತೆಗೆ ಚನ್ನಪ್ಪನ ಪಾಳ್ಯದ ಹೆಣ್ಣು ಮಕ್ಕಳು ಬಾರಿ ಆಟ ಆಡ್ತಾರೆ, ಅವರಿಗೆ ಹೇಳಿ ಎಂದು ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ.

    ರೌಡಿಶೀಟರ್​ಗಳಿಗೆ , “ಮಗನೇ ಬೀದಿ ಹೆಣ ಆಗ್ತೀಯಾ, ಮದುವೆ ಮಾಡ್ಕೊಬೇಡ. ನನ್ಮಕ್ಕಳಾ ರೌಡಿಶೀಟರ್ ಗೆ ನಾನು ಏನ್ ಬೇಕಾದರೂ ಮಾಡಬಹುದು. ಯಾರ ಪರ್ಮಿಷನ್ನು ಬೇಕಾಗಿಲ್ಲ. ಯಾರಿಗೂ ಕೇಳಬೇಕಾಗಿಲ್ಲ. ನೀವು ಸಾಯೋ ತನಕನೂ ನಾವು ನಿಮ್ಮನ್ನ ಯಾವ ಕೇಸಲ್ಲಿ ಬೇಕಾದರೂ ಫಿಟ್ ಮಾಡಬಹುದು” ಎಂದು ಸಿಪಿಐ ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ.

    ಅಲ್ಲದೆ ಇವರಿಗೆಲ್ಲಾ ಚೆನ್ನಾಗಿ ವರ್ಕ್ ಮಾಡಿ, ಮದುವೆ ಮಾಡಿಕೊಂಡು ಹೆಂಡತಿ ಮಾಡ್ಕೊಂದರೆ ಅವಳು ಬೇರೆಯವರ ಪಾಲಾಗುತ್ತಾಳೆ ಎಂದು ಸಭ್ಯತೆ ಮೀರಿ ಪಾರ್ವತಮ್ಮ ಮಾತನಾಡಿದ್ದಾರೆ. ಜವಾಬ್ದಾರಿಯುತ ಕೆಲಸದಲ್ಲಿರುವ ಅಧಿಕಾರಿ ಈ ರೀತಿ ವರ್ತಿಸಿರುವುದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.