Tag: Rowdy Sheetter

  • ಜೂಜಾಟದಲ್ಲಿ ಜಗಳ – ರೌಡಿಶೀಟರ್‌ನನ್ನು ಕೊಚ್ಚಿ ಕೊಂದವರು ಅರೆಸ್ಟ್

    ಜೂಜಾಟದಲ್ಲಿ ಜಗಳ – ರೌಡಿಶೀಟರ್‌ನನ್ನು ಕೊಚ್ಚಿ ಕೊಂದವರು ಅರೆಸ್ಟ್

    ಶಿವಮೊಗ್ಗ: ನಗರದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿಯ ಸಹೋದರ ಗಿರೀಶ್ ನನ್ನು ಕೊಚ್ಚಿಕೊಲೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಮಾಡಿದ ಆರೋಪಿಗಳಾದ ಅಜ್ರು, ಸಲ್ಮಾನ್, ಶೋಯೆಬ್ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ರು ಹಾಗೂ ಆತನ ತಂಡ ಗುರುವಾರ ಸಂಜೆ ಶಿವಮೊಗ್ಗದ ಗೋಪಾಳ ಬಳಿಯ ಸಿದ್ದೇಶ್ವರ ವೃತ್ತದ ಬಳಿ ಗಿರೀಶ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

    ಅಜ್ರು ಹಾಗೂ ಕೊಲೆಯಾದ ಗಿರೀಶ್‍ನ ಸಂಬಂಧಿ ಹರೀಶ್ ಇಬ್ಬರು ನಿನ್ನೆ ಮಧ್ಯಾಹ್ನ ಜೂಜಾಟದಲ್ಲಿ ತೊಡಗಿದ್ದರು. ಈ ವೇಳೆ ಅಜ್ರು ಹಾಗೂ ಹರೀಶ್ ನಡುವೆ ಗಲಾಟೆ ನಡೆದಿತ್ತು. ಈ ವಿಷಯ ಗಿರೀಶ್‍ನಿಗೆ ತಿಳಿಯುತ್ತಿದ್ದಂತೆ ಗಿರೀಶ್ ಸ್ಥಳಕ್ಕೆ ತೆರಳಿ ಅಜ್ರು ಜೊತೆ ಗಲಾಟೆ ಮಾಡಿಕೊಂಡಿದ್ದ. ಇದೇ ಜಿದ್ದನ್ನು ಇಟ್ಟುಕೊಂಡ ಅಜ್ರು ಹಾಗೂ ಆತನ ಸಹೋದರರು ಸ್ನೇಹಿತರೊಂದಿಗೆ ಸಿದ್ದೇಶ್ವರ ವೃತ್ತದ ಬಳಿ ಗಿರೀಶ್ ಬರುವುದನ್ನು ಕಾಯುತ್ತಾ ಕುಳಿತಿದ್ದರು. ಗಿರೀಶ್ ಬೈಕ್ ನಲ್ಲಿ ಬರುತ್ತಿದ್ದನ್ನು ಗಮನಿಸಿದ ಅಜ್ರು ಹಾಗೂ ಆತನ ತಂಡ ಏಕಾಏಕಿ ಗಿರೀಶ್‍ನ ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.

    ಹಲ್ಲೆಗೊಳಗಾದ ಗಿರೀಶ್ ನರಳಿ ನರಳಿ ಪ್ರಾಣ ಬಿಟ್ಟ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ತುಂಗಾನಗರ ಠಾಣೆ ಪೊಲೀಸರು ಗಿರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ರು, ಸಲ್ಮಾನ್, ಶೋಯೆಬ್ ಸೇರಿದಂತೆ 6 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಇನ್ನು ಉಳಿದ ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ರೌಡಿ ಲಕ್ಷ್ಮಣನ ಕೊಲೆಗೂ ಮುನ್ನ ಗೋರಿ ಬಳಿ ನಡೆದಿತ್ತು ಮಹಾಪೂಜೆ!

    ರೌಡಿ ಲಕ್ಷ್ಮಣನ ಕೊಲೆಗೂ ಮುನ್ನ ಗೋರಿ ಬಳಿ ನಡೆದಿತ್ತು ಮಹಾಪೂಜೆ!

    ಬೆಂಗಳೂರು: ನಗರದ ಕುಖ್ಯಾತ ರೌಡಿ ರೌಡಿ ಲಕ್ಷ್ಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮಣ ಕೊಲೆಗೆ ಮೊದಲೇ ಸ್ಕೆಚ್ ರೂಪಿಸಿ ಗೋರಿ ಬಳಿ ಆರೋಪಿಗಳು ಮಹಾಪೂಜೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

    ಲಕ್ಷ್ಮಣ ಕೊಲೆಯ ಹಿಂದಿನ ದಿನವೇ ಮಹಾಪೂಜೆ ನಡೆಸಿದ್ದ ಆರೋಪಿಗಳು, ಮಚ್ ಮಂಜನ ಗೋರಿ ಬಳಿ ಆತನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ನಡೆದಿದ್ದ ಮಚ್ ಮಂಜನ ಕೊಲೆಗೆ ಪ್ರತಿಕಾರವಾಗಿಯೇ ಲಕ್ಷ್ಮಣ ಕೊಲೆ ನಡೆಸಿದ್ದಾರೆ. ನಗರದ ಸೋಲೂರು ಬಳಿಯಿ ಮಚ್ ಮಂಜುನ ಗೋರಿ ಇದ್ದು, ಈ ಸ್ಥಳದಲ್ಲೇ ಆರೋಪಿಗಳು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಟ್ ರಾಜನ ಕಾಲಿಗೆ ಗುಂಡಿಟ್ಟ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೇ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಕೊಲೆ ಪ್ರಕರಣದಲ್ಲಿ ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ಮೂಡಿದ್ದು, ಆ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

    ಇತ್ತ ಲಕ್ಷ್ಮಣ ಕೊಲೆ ಮಾಡಿದ್ದ ದಿನವೇ 6 ಜನ ಆರೋಪಿಗಳು ಕೂಡ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ ಆರೋಪಿಗಳ ಗ್ಯಾಂಗ್‍ನಲ್ಲಿ ಅಂದು ಒಬ್ಬನ ಬರ್ತ್ ಡೇ ಇದ್ದ ಕಾರಣ ಸ್ಥಳದಿಂದ ಪರಾರಿಯಾಗಿದ್ದರು. ಬರ್ತ್ ಡೇ ಆಚರಿಸಿಕೊಂಡ ಬಳಿಕ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಇನ್ನು ಪ್ರಕರಣದಲ್ಲಿ ಗುಂಡೇಟು ತಿಂದಿರುವ ಕ್ಯಾಟ್ ರಾಜನ ವಿರುದ್ಧವೂ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ಬೆಂಗಳೂರು: ಕುಖ್ಯಾತ ಪಾತಕಿ ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಆರೋಪಿ ಕ್ಯಾಟ್ ರಾಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಪ್ರಕರಣದಲ್ಲಿ ರೌಡಿ ಲಕ್ಷ್ಮಣ ಕೊಲೆ ಮಾಡಲು ಬಳಸಿದ್ದ ಮಚ್ಚನ್ನು ರಿಕವರಿ ಮಾಡಲು ಕರೀಂ ಸಾಬ್ ಪಾಳ್ಯಕ್ಕೆ ಹೋದಾಗ ಕ್ಯಾಟ್ ರಾಜ ತಿರುಗಿಬಿದ್ದಿದ್ದ. ಈ ವೇಳೆ ಪೊಲೀಸರ ಮೇಲೆ ಕಲ್ಲು ಎಸೆದಿದ್ದ. ಈ ಮೂಲಕ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಮುಂದಾಗಿದ್ದನು.

    ಕ್ಯಾಟ್‍ರಾಜ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಕ್ಯಾಟ್ ರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕ್ಯಾಟ್‍ರಾಜ ಕೊಲೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಸಿಸಿಬಿ ವಶಕ್ಕೆ ನೀಡಿದ್ದು, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಬಂಧನ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕ್ಯಾಟ್ ರಾಜ ಬಿಟ್ಟರೆ ಸದ್ಯ ಶ್ರೀಕಂಠ ಎಂಬವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದಹಾಗೇ ಲಕ್ಷ್ಮಣ ಹತ್ಯೆಯಲ್ಲಿ 6 ಜನರ ಆರೋಪಿಗಳು ಭಾಗಿಯಾಗಿದ್ದರು. ಹತ್ಯೆ ನಡೆದ ದಿನವೇ ಎಲ್ಲಾ ಆರೋಪಿಗಳು ಪೊಲೀಸರ ಮುಂದೇ ಶರಣಾಗಬೇಕೆಂದು ತೀರ್ಮಾನಿಸಿದ್ದರು. ಆದರೆ ಗ್ಯಾಂಗ್‍ನಲ್ಲಿ ಒಬ್ಬನ ಬರ್ತ್ ಡೇ ಇದ್ದ ಕಾರಣ ಪಾರ್ಟಿ ಮಾಡಲು ಸ್ಥಳದಿಂದ ಪರಾರಿಯಾಗಿದ್ದರು.

    ಲಕ್ಷ್ಮಣನನ್ನು ಹತ್ಯೆ ಮಾಡಲು ಆರೋಪಿಗಳು ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಲಕ್ಷ್ಮಣ ಅಂದು ಎಷ್ಟೊತ್ತಿಗೆ ಆಗಮಿಸುತ್ತಾನೆ ಎಂಬುವುದು ಆಕೆಗೆ ಮಾತ್ರ ತಿಳಿದಿತ್ತು ಎನ್ನಲಾಗಿದೆ. ಈ ಸಂಬಂಧ ಲಕ್ಷ್ಮಣ ಬಳಿ ಲಾಡ್ಜ್ ರೂಮ್ ಒಂದರ ಕೀ ಪತ್ತೆಯಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗನ್ ತೋರಿಸಿ ರಾಜಕಾರಣಿಗಳನ್ನ ಬೆದರಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್!

    ಗನ್ ತೋರಿಸಿ ರಾಜಕಾರಣಿಗಳನ್ನ ಬೆದರಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್!

    ಮೈಸೂರು: ಬಿಜೆಪಿ ಕಾರ್ಯಕರ್ತನೋರ್ವ ಅನಧಿಕೃತ ಪಿಸ್ತೂಲ್ ಖರೀದಿಸಿ ರಾಜಕಾರಣಿಗಳ ಬೆದರಿಸಲು ಸ್ಕೆಚ್ ರೆಡಿ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

    ಧನರಾಜ್ ಭೊಲಾ ಬಂಧಿತ ಬಿಜೆಪಿ ಕಾರ್ಯಕರ್ತ. ಬಂಧಿತನ ವಿಚಾರಣೆ ನಡೆಸಿದಾಗ ಈ ಪಿಸ್ತೂಲ್ ವ್ಯವಹಾರದ ಕಿಂಗ್ ಪಿನ್ ಮೈಸೂರು ಜೈಲಿನಲ್ಲಿರುವ ಖೈದಿ ಎಂಬುದು ಗೊತ್ತಾಗಿದೆ. ಮೈಸೂರಿನ ಜೈಲಿನಲ್ಲಿರುವ ಅಫ್ಸರ್ ಖಾನ್, ಶಾಹಿನ್ ಮತ್ತು ಸಾಧಿಕ್ ಪಾಷಾ ಎಂಬವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

    ಪಿಸ್ತೂಲಿಗಾಗಿ ಜೈಲಿಗೆ ಎಂಟ್ರಿ ಹಾಕುತ್ತಿದ್ದ ವ್ಯಕ್ತಿಗಳು ಹಣ ಪಾವತಿ ಮಾಡಿದ್ರೆ, ಅಫ್ಸರ್ ಖಾನ್ ಪಿಸ್ತೂಲು ಮಾರಾಟ ಮಾಡುವ ವ್ಯಕ್ತಿಯ ಮೊಬೈಲ್ ನಂಬರ್ ನೀಡುತ್ತಿದ್ದ. ಆ ಹಣವನ್ನು ಪಡೆಯಲು ಮತ್ತೊಬ್ಬ ವ್ಯಕ್ತಿ ಎಂಟ್ರಿ ಹಾಕಿಸಿ ಅವರಿಂದ ನಗದನ್ನು ಸಂಗ್ರಹಿಸುತ್ತಿದ್ದನು. ಜೈಲಿನಿಂದಲೇ ವ್ಯವಹಾರ ಕುದುರಿಸುತ್ತಿದ್ದ ಅಫ್ಸರ್ ಪಾಷಾ ಮಡಿಕೇರಿ ಹಾಗೂ ಚಾಮರಾಜ ನಗರದಲ್ಲಿನ ವ್ಯಕ್ತಿಗಳಿಗೆ 60 ರಿಂದ 70 ಸಾವಿರಕ್ಕೆ ಪಿಸ್ತೂಲ್ ಮಾರಾಟ ಮಾಡಿಸಿದ್ದಾನೆ ಎಂಬ ಮಾಹಿತಿಗಳು ತಿಳಿದು ಬಂದಿವೆ. ಹೀಗೆ ಅಕ್ರಮವಾಗಿ ಖರೀದಿಸಿದ ಪಿಸ್ತೂಲ್‍ನಿಂದ ಧನರಾಜ್ ತಂಡವೊಂದನ್ನು ಕಟ್ಟಿಕೊಂಡು ಶ್ರೀಮಂತರು ಮತ್ತು ರಾಜಕಾರಣಿಗಳನ್ನು ಬೆದರಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದನು.

    ಖಚಿತ ಮಾಹಿತಿ ಆಧರಿಸಿ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ದಾಳಿ ನಡೆಸಿ ಧನರಾಜ್ ಭೊಲಾ ಹಾಗೂ ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಿಂಗ್ ಪಿನ್ ಅಫ್ಸರ್ ಖಾನ್ ಪಾತ್ರ ಬೆಳಕಿಗೆ ಬಂದಿದೆ. ಬಂಧಿತರಿಂದ ಒಂದು ಪಿಸ್ತೂಲು ಹಾಗೂ 12 ಗುಂಡುಗಳು ವಶಪಡಿಸಿಕೊಳ್ಳಾಗಿದೆ. ಚುನಾವಣೆ ವೇಳೆ ರಾಜಕಾರಿಣಿಗಳನ್ನೂ ಬೆದರಿಸಲು ಈ ತಂಡ ಸ್ಕೆಚ್ ಹಾಕಿತ್ತು ಅನ್ನೋ ಮಾಹಿತಿ ಪೊಲೀಸರಿಗೆ ಆರೋಪಿಗಳು ತಿಳಿಸಿದ್ದಾರೆ. ಧನರಾಜ್ ಭೋಲಾ ಒಬ್ಬ ರೌಡಿ ಶೀಟರ್ ಕೂಡ ಆಗಿದ್ದಾನೆ.

  • ನಲಪಾಡ್‍ನಿಂದ ಹಲ್ಲೆಗೆ ಒಳಗಾಗಿದ್ದ ರಣಜಿ ಆಟಗಾರ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಶೆಟ್ಟರ್

    ನಲಪಾಡ್‍ನಿಂದ ಹಲ್ಲೆಗೆ ಒಳಗಾಗಿದ್ದ ರಣಜಿ ಆಟಗಾರ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಶೆಟ್ಟರ್

    ಬೆಂಗಳೂರು: ರಣಜಿ ಕ್ರಿಕೆಟ್ ಆಟಗಾರ ಅಯ್ಯಪ್ಪ ಮೇಲೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಹಲ್ಲೆ ಮಾಡಿದ್ದಾನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

    ವಿದ್ವತ್ ಅವರನ್ನು ನೋಡಲು ಮಲ್ಯ ಆಸ್ಪತ್ರೆಗೆ ತೆರೆಳಿದ್ದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಬಿಯರ್ ಬಾಟಲ್‍ನಲ್ಲಿ ರಣಜಿ ಪ್ಲೇಯರ್ ಅಯ್ಯಪ್ಪ ಅವರ ಮೇಲೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರನ್ನು ನೀಡಿರಲಿಲ್ಲ ಎಂದು ತಿಳಿಸಿದರು.

    ವಿದ್ವತ್ ಅವರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕಾಂಗ್ರೆಸ್‍ನ ಗೂಂಡಾಗಿರಿ ನೋಡುತ್ತಿದ್ದರೆ ನಮಗೆ ಭಯವಾಗುತ್ತೆ. ಹಲವು ವರ್ಷಗಳಿಂದ ಕಾಂಗ್ರೆಸಿಗರಿಂದ ಹಲ್ಲೆ ನಡೆಯುತ್ತಿರುವ ಬಗ್ಗೆ ಹಲವಾರು ಬಾರಿ ವರದಿಗಳು ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಬೆಂಬಲ ಸೂಚಿಸಿದ ನಟಿ ಸಂಜನಾ

    ನನಗೆ ಅನಿಸಿದ ಪ್ರಕಾರ ಶಾಂತಿನಗರದಲ್ಲಿ ಹಫ್ತಾ ವಸೂಲಿಗೆ ಹಲವಾರು ಹಲ್ಲೆಗಳನ್ನು ನಡೆಸಿರಬಹುದು. ನಲಪಾಡ್ ನಿಂದ ತೊಂದರೆಗೊಳಗಾದವರು ಎಲ್ಲರು ಹೊರ ಬಂದು ಧೈರ್ಯದಿಂದ ದೂರು ಕೊಡಬೇಕು. ಇದರಿಂದ ಹ್ಯಾರಿಸ್ ಮೇಲಿರುವ ಇನ್ನಷ್ಟು ಕ್ರಿಮಿನಲ್ ಪ್ರಕರಣಗಳು ಹೊರ ಬರುತ್ತದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

    ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಗೂಂಡಾಗಿರಿ ಸಂಪೂರ್ಣವಾಗಿ ನೆಲಕಚ್ಚಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ನಿಲ್ಲಿಸಬಹುದು. ನಟ ಶಿವರಾಜ್ ಕುಮಾರ್ ಅವರಿಗೂ ಸಹ ಕಾಂಗ್ರೆಸ್‍ನ ಈ ವರ್ತನೆ ಭಯವನ್ನುಂಟು ಮಾಡಿದೆ. ತಂದೆ-ತಾಯಿಯಾದವರು ಯಾವಾಗಲು ಮಕ್ಕಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

    ರಣಜಿ ಆಟಗಾರನ ಮೇಲೆ 6 ತಿಂಗಳ ಹಿಂದೆ ನಲಪಾಡ್ ಹಲ್ಲೆ ನಡೆಸಿದ್ದ ಎಂದು ಹೋಟೆಲ್ ಒಂದರ ಮ್ಯಾನೇಜರ್ ತಿಳಿಸಿದ್ದರು. ಆದರೆ ಹಲ್ಲೆಗೆ ಒಳಗಾಗಿದ್ದ ಆಟಗಾರ ಯಾರು ಎನ್ನುವುದನ್ನು ತಿಳಿಸಿರಲಿಲ್ಲ.