Tag: Rowdy Sheeters

  • ಮಂಗಳೂರು | ನಡುರಾತ್ರಿ ತಲ್ವಾರ್‌ ಹಿಡಿದು ಹೊಡೆದಾಡಿಕೊಂಡ ರೌಡಿಶೀಟರ್‌ಗಳು

    ಮಂಗಳೂರು | ನಡುರಾತ್ರಿ ತಲ್ವಾರ್‌ ಹಿಡಿದು ಹೊಡೆದಾಡಿಕೊಂಡ ರೌಡಿಶೀಟರ್‌ಗಳು

    ಮಂಗಳೂರು: ನಡುರಾತ್ರಿ ರೌಡಿಶೀಟರ್‌ಗಳು (Rowdy Sheeters) ತಲ್ವಾರ್ ಹಿಡಿದು ಗಲಾಟೆ ಮಾಡಿಕೊಂಡಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪೂರ್ವದ್ವೇಷದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರ ಗುಂಪಿನ ಮಧ್ಯೆ ತಲ್ವಾರ್ ದಾಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ‌ ರೌಡಿಗಳ ಗ್ಯಾಂಗ್ ನಡುಬೀದಿಯಲ್ಲಿ ಯುವಕರನ್ನ ಅಟ್ಟಾಡಿಸಿ ತಲ್ವಾರಿನಲ್ಲಿ ಕೊಚ್ಚಿದ್ದು, ಗಾಯಗೊಂಡ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬವರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಶಿವಮೊಗ್ಗ| ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ದ ಕಾರು

    ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂಬವರು ಹಲ್ಲೆ ನಡೆಸಿದ ಆರೋಪಿಗಳು. ಗಾಯಗೊಂಡ ತಸ್ಲೀಮ್ ಹಾಗೂ ಸ್ನೇಹಿತರು ಮಾತನಾಡುತ್ತಿದ್ದ ವೇಳೆ ತಸ್ಲೀಮ್‌ಗೆ ಕರೆಯೊಂದು ಬಂದಿತ್ತು. ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತ ಇರುವಲ್ಲಿಗೆ ಬರುವಂತೆ ಸವಾಲು ಹಾಕಿದ್ದ. ಈ ವೇಳೆ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ ಅಲ್ಲಿ ಆರೋಪಿಗಳು ದಾಳಿ ನಡೆಸಿದ್ದಾರೆ.

    ಈ ಸಂಬಂಧ ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೋತುಬಿದ್ದ ವಿದ್ಯುತ್ ವೈರ್‌ಗೆ ಇಬ್ಬರು ರೈತರು ಬಲಿ – ಸೆಸ್ಕ್ ಜೂನಿಯರ್ ಎಂಜಿನಿಯರ್, ಲೈನ್‌ಮ್ಯಾನ್ ಸಸ್ಪೆಂಡ್

  • ರಾಜ್ಯಾದ್ಯಂತ ಒಂದೂವರೆ ತಿಂಗಳಲ್ಲಿ 7361 ರೌಡಿಗಳು ರೌಡಿ ಪಟ್ಟಿಯಿಂದ ಔಟ್

    ರಾಜ್ಯಾದ್ಯಂತ ಒಂದೂವರೆ ತಿಂಗಳಲ್ಲಿ 7361 ರೌಡಿಗಳು ರೌಡಿ ಪಟ್ಟಿಯಿಂದ ಔಟ್

    ಬೆಂಗಳೂರು: ಚುನಾವಣೆ (Election)  ಸಮೀಪದಲ್ಲಿ ಈ ವರ್ಷದ ಮೊದಲ 45 ದಿನಗಳಲ್ಲಿ ದಾಖಲೆ ಪ್ರಮಾಣದ ರೌಡಿಶೀಟರ್‌ಗಳನ್ನು ರೌಡಿಶೀಟ್ ಪಟ್ಟಿಯಿಂದ ಕೈಬಿಟ್ಟಿರುವುದು ಅನುಮಾನಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ.

    ರಾಜ್ಯದ ವಿವಿಧೆಡೆ ಬರೋಬ್ಬರಿ 7,361 ರೌಡಿಶೀಟರ್‌ಗಳನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಕಳೆದ ಐದು ವರ್ಷದಲ್ಲಿ 26 ಸಾವಿರಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಇದನ್ನೂ ಓದಿ: ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    2018ರಲ್ಲಿ 3,489, 2019ರಲ್ಲಿ 2,195, 2020ರಲ್ಲಿ 1,718, 2021ರಲ್ಲಿ 8,062, 2022ರಲ್ಲಿ 3,314 ಮತ್ತು 2023ರ ಆರಂಭದಲ್ಲಿ 7,361 ರೌಡಿಶೀಟರ್‌ಗಳನ್ನು ರೌಡಿ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಗೃಹ ಮಂತ್ರಿಗಳು ಲಿಖಿತ ಉತ್ತರ ನೀಡಿದ್ದಾರೆ.

    2023 ರಲ್ಲಿ ಬೆಂಗಳೂರು ನಗರದಲ್ಲಿ 17 ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿ ರೌಡಿಶೀಟರ್‌ಗಳ ಬಗ್ಗೆ ಬಿಜೆಪಿಯನ್ನ ತೆಗಳೋದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ – ಆರಗ ಜ್ಞಾನೇಂದ್ರ

    ಡಿಕೆಶಿ ರೌಡಿಶೀಟರ್‌ಗಳ ಬಗ್ಗೆ ಬಿಜೆಪಿಯನ್ನ ತೆಗಳೋದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ – ಆರಗ ಜ್ಞಾನೇಂದ್ರ

    ಬೆಂಗಳೂರು: ಡಿ.ಕೆ.ಶಿವಕುಮಾರ್‌ (D.K.Shivakumar) ರೌಡಿಶೀಟರ್‌ಗಳ ಬಗ್ಗೆ ಬಿಜೆಪಿ ಪಕ್ಷವನ್ನು ತೆಗಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಚಾಟಿ ಬೀಸಿದರು.

    ಸಚಿವ ಅಶ್ವಥ್ ನಾರಾಯಣ (Ashwath Narayan) ಜೊತೆ ರೌಡಿಗಳು ಇರೋ ಫೋಟೋ ವೈರಲ್ ಆಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷಕ್ಕೆ ರೌಡಿಶೀಟರ್‌ಗಳು (Rowdy Sheeters), ಸಮಾಜ ದ್ರೋಹಿಗಳ ಅವಶ್ಯಕತೆ ಇಲ್ಲ. ನಮಗೆ ಜನ ಬೆಂಬಲ‌ ಇದೆ. ಬಿಜೆಪಿ (BJP) ‌ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾನೂನು ಉಲ್ಲಂಘನೆ ಮಾಡಿದ್ರೆ ಮಹಾರಾಷ್ಟ್ರದ ಸಚಿವರ ಮೇಲೂ ಕ್ರಮ: ಆರಗ ಎಚ್ಚರಿಕೆ

    ಅನೇಕ ಜನರು ನಮ್ಮ ಜೊತೆ ಫೋಟೋ ‌ತೆಗೆಸಿಕೊಳ್ತಾರೆ. ಕೊಡೊಲ್ಲ ಅಂದ್ರೆ ನಮಗೆ ದುರಹಂಕಾರ ಎಂದುಕೊಳ್ತಾರೆ. ಹೀಗಾಗಿ ಫೋಟೋ ತೆಗೆಸಿಕೊಳ್ತೀವಿ. ಹಾಗಂತ ಅವರು ನಮಗೆ ಪರಿಚಯ, ಬೆಂಬಲ ಇದೆ ಅಂತ ಅಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ, ರೌಡಿಗಳಿಂದ ವ್ಯವಸ್ಥೆ ಹಾಳಾಗಬಾರದು. ಅದಕ್ಕೆ ‌ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.

    ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ ಅವರು, ಡಿ.ಕೆ.ಶಿವಕುಮಾರ್ ಇಂತಹ ಮಾತು ಹೇಳೋದು ಅವರ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ. ಅವರು ಯಾರ ಜೊತೆ ಇದ್ದರು, ಯಾರನ್ನು ಸೇರಿಸಿಕೊಂಡು ರಾಜಕೀಯ ಮಾಡಿದ್ರು ಎಲ್ಲವೂ ಗೊತ್ತಿದೆ. ಅವರು ಇದರ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್‌ ಬಿರುದು ನಾವಲ್ಲ, ಜನರೇ ನೀಡಿದ್ದಾರೆ – ಸಿದ್ದುಗೆ ಬಿಜೆಪಿ ಟಾಂಗ್‌

    ಬಿಜೆಪಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ರೌಡಿಶೀಟರ್‌ ಸೈಲೆಂಟ್‌ ಸುನಿಲ್‌ (Silent Sunil) ಭಾಗವಹಿಸಿದ್ದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ (Congress) ಟೀಕಾಪ್ರಹಾರ ನಡೆಸಿತ್ತು. ರೌಡಿಗಳನ್ನು ರಾಜಕೀಯಕ್ಕೆ ತರಲಾಗುತ್ತಿದೆ ಎಂದು ಟೀಕಿಸಿತ್ತು. ಇದು ಎರಡು ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ

    ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ

    ಬೆಂಗಳೂರು: ರೌಡಿ ರಾಜಕೀಯದಿಂದ (Rowdy Sheeters) ಮುಜಗರಕ್ಕೆ ಇಡಾಗಿದ್ದ ಸಿಸಿಬಿ (CCB) ಬೆಂಗಳೂರು (Bengaluru) ರೌಡಿಗಳ ವಿಷಯದಲ್ಲಿ ಖಡಕ್ ತೀರ್ಮಾನ ತೆಗೆದುಕೊಂಡಿದೆ. ರೌಡಿಗಳು ಊರು ಬಿಡುವಂತೆ ವಾರ್ನಿಂಗ್ ಮಾಡಿದ್ದಾರೆ.

    ರೌಡಿ ರಾಜಕೀಯಕ್ಕೆ ಬೆಚ್ಚಿಬಿದ್ದ ಸಿಸಿಬಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋದಕ್ಕೆ ರೌಡಿಗಳನ್ನ ಊರು ಬಿಡಿಸಿದ್ದಾರೆ. ಸೈಲೆಂಟ್ ಸುನೀಲ ರಾಜಕೀಯ ಕಾರ್ಯಕ್ರಮದಲ್ಲಿ ಕಂಡಿದ್ದು ಸಿಸಿಬಿಗೆ ದೊಡ್ಡ ಮುಜುಗರ ಊಂಟು ಮಾಡಿದೆ. ಅಲ್ಲದೇ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ರೌಡಿ ಸುನೀಲನ ತಡಕಾಟದಲ್ಲಿದೆ. ಇದನ್ನೂ ಓದಿ: ಡಿ.6 ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇವೆ – ಬೊಮ್ಮಾಯಿಗೆ ʼಮಹಾʼ ಸಚಿವರ ಸವಾಲು

    ಹಾಗಾಗಿ ಉಳಿದ ರೌಡಿಗಳನ್ನ ಸಿಸಿಬಿ ಪೊಲೀಸರು ಬೆಂಗಳೂರು ಬಿಡಿಸಿ ಕಳಿಸಿದ್ದಾರೆ. ಅಷ್ಟೇ ಅಲ್ಲದೇ ರೌಡಿಗಳಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ರಾಜಕೀಯ ಕಾರ್ಯಕ್ರಮಗಳ ವೇದಿಕೆಯಲ್ಲಿ ಕಂಡು ಬಂದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.

    ಹಾಗಾಗಿ ಬೆಂಗಳೂರಿನಲ್ಲಿ ಪಂಟ್ರು ಅಂದುಕೊಂಡು ತಿರಗಾಡುತ್ತಿದ್ದ ರೌಡಿಗಳು ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹೀಗೆ ಬೇರೆ ಬೇರೆ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಸಿಸಿಬಿ ಖಡಕ್ ವಾರ್ನ್ನಿಂದ ಬೆಚ್ಚಿಬಿದ್ದಿರೋ ಬೆಂಗಳೂರು ರೌಡಿಗಳು ಸದ್ಯಕ್ಕೆ ಬೆಂಗಳೂರು ಕಡೆ ಮುಖಮಾಡುವುದು ವಿರಳ. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

  • ರೌಡಿ ಶೀಟರ್​ಗಳ  ಅಟ್ಟಹಾಸ- ರಾಡ್‍ನಿಂದ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ

    ರೌಡಿ ಶೀಟರ್​ಗಳ ಅಟ್ಟಹಾಸ- ರಾಡ್‍ನಿಂದ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಧಾರವಾಡ: ರೌಡಿ ಶೀಟರ್ ಪಟ್ಟಿಗೆ ಸೇರಿರುವ ಮೂವರು ಸಹೋದರರು ಜೊತೆಗೂಡಿ 7 ಮಂದಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ವಿದ್ಯಾರ್ಥಿಗಳ ಮೈಮೇಲೆ ರಕ್ತ ಹೆಪ್ಪುಗಟ್ಟುವ ಹಾಗೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ರೌಡಿಶೀಟರ್ ಗಳನ್ನು ಮಂಜುನಾಥ ಹಿರೇಮನಿ, ತಿರುಪತಿ ಹಿರೇಮನಿ ಹಾಗೂ ಅನುರಾಗ್ ಹಿರೇಮನಿ ಎಂದು ಗುರುತಿಸಲಾಗಿದ್ದು, ಈ ಮೂವರು ಲಕ್ಷ್ಮಿಸಿಂಗನಕೆರೆ ಬಡಾವಣೆಯ ನಿವಾಸಿಗಳು. ಇವರು ಕ್ಷುಲ್ಲಕ ಕಾರಣಕ್ಕೆ ಮನಸ್ಸೋ ಇಚ್ಛೆ ರಾಡ್ ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದೆ. ಆದರೆ ಹಲ್ಲೆಯಿಂದ ಭಯಗೊಂಡಿದ್ದ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಅಂಜಿದ್ದಾರೆ. ಧಾರವಾಡದ ಕಾಲೇಜೊಂದರಲ್ಲಿ ಪದವಿ ಓದುವ 7 ವಿದ್ಯಾರ್ಥಿಗಳ ಮೇಲೆ ಈ ಹಲ್ಲೆ ನಡೆದಿದ್ದು, ಹಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳ ಮೈಮೇಲೆ ಬರೆ ಬಿದ್ದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಈ ವಿದ್ಯಾರ್ಥಿಗಳು ಎಸಿಪಿಯನ್ನು ಕದ್ದು ಮುಚ್ಚಿ ಭೇಟಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ರೌಡಿಗಳು ಮತ್ತೆ ಹಲ್ಲೆ ಮಾಡಬಹುದು ಎಂಬ ಭಯದಿಂದ ವಿದ್ಯಾರ್ಥಿಗಳು ಇನ್ನೂ ದೂರು ದಾಖಲಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

  • ಮದ್ವೆಯಾಗೋಕೆ ಹೋಗ್ಬೇಡ, ಜಾಸ್ತಿ ದಿನ ಉಳಿಯಲ್ಲ ನೀನು – ರೌಡಿಗೆ ಡಿಸಿಪಿ ಗಿರೀಶ್ ವಾರ್ನ್

    ಮದ್ವೆಯಾಗೋಕೆ ಹೋಗ್ಬೇಡ, ಜಾಸ್ತಿ ದಿನ ಉಳಿಯಲ್ಲ ನೀನು – ರೌಡಿಗೆ ಡಿಸಿಪಿ ಗಿರೀಶ್ ವಾರ್ನ್

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿಗಳಿಗೆಲ್ಲ ಸಿಸಿಬಿ ಪೊಲೀಸರು ಪರೇಡ್ ಮಾಡಿದ್ದಾರೆ.

    ಸೈಲೆಂಟ್ ಸುನೀಲ, ಕುಣಿಗಲ್ ಗಿರಿ, ಪಪ್ಪು, ಒಂಟೆ ರೋಹಿತಾ, ಗುಜುರಿ ಅಸೀಫ್, ದಡಿಯಾ ಮಹೇಶ್, ರಾಬ್ರಿ ಗಿರಿ ಸೇರಿ ಕುಖ್ಯಾತರಿಗೆಲ್ಲಾ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ಜೊತೆಗೆ ಕುಖ್ಯಾತ ಹಳೆ ಪಂಟರ್ ತನ್ವೀರ್ ಸೇರಿ 300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ ಮಾಡಲಾಗಿದೆ.

    ಇದೇ ವೇಳೆ ಸೈಲೆಂಟ್ ಸುನೀಲ ಹಾಗೂ ಕುಣಿಗಲ್ ಗಿರಿಗೆ ಡಿಸಿಪಿ ಗಿರೀಶ್ ಅವರು ಬೆಂಡೆತ್ತಿದ್ದಾರೆ. ಫೇಮಸ್ ಆಗೋಕೆ ಹೊರಟಿದ್ದೀಯಾ?, ಮದುವೆ ಆಗಿದೆಯಾ ನಿಂಗೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇಲ್ಲ ಸರ್ ಮದುವೆ ಆಗಿಲ್ಲ. ಈಗ ಹುಡುಗಿ ಹುಡುಕುತ್ತಿದ್ದಾರೆ. ನನಗೆ 31 ವಯಸ್ಸು ಆಗಿದೆ ಎಂದು ಕುಣಿಗಲ್ ಗಿರಿ ಹೇಳಿದ್ದಾನೆ.

    ಆಗ ಡಿಸಿಪಿ ಗಿರೀಶ್ ಅವರು, ನೀನು ಮದುವೆಯಾಗೋಕೆ ಹೋಗಬೇಡ. ಜಾಸ್ತಿ ದಿನ ಉಳಿಯುವುದಿಲ್ಲ ನೀನು. ನಿನ್ನ ಆಟಗಳು ಗೊತ್ತಿಲ್ಲ ಎಂದು ಆರಾಮಾಗಿದ್ಯಾ? ನಿನ್ನ ಕಳ್ಳಾಟಗಳು ಎಲ್ಲವೂ ಗೊತ್ತಿದೆ. ಮುಂದೆ ಇದೆ ನಿಂಗೆ, ಪರೇಡ್ ಮುಗಿದ ಮೇಲೆ ನೀನು ಇಲ್ಲೇ ಇರು ಎಂದು ವಾರ್ನ್ ಮಾಡಿದ್ದಾರೆ.

    ಇತ್ತ ಸೈಲೆಂಟ್ ಸುನೀಲಗೂ ಮಾತಲ್ಲೇ ಬೆಂಡೆತ್ತಿದ್ದಾರೆ. ಕುಣಿಗಲ್ ಗಿರಿ ಹಾಗೂ ಸೈಲೆಂಟ್ ಸುನೀಲನಿಗೆ ಅಲೋಕ್ ಕುಮಾರ್ ಅವರು ತೀವ್ರ ತರಾಟೆಗೆ ತೆಗೆದುಕೊಂಡ್ರು. ಆದರೆ ಬೈಯುತ್ತಿದ್ದರೂ ಸುನೀಲ, ಅಲೋಕ್ ಕುಮಾರ್ ಅವರನ್ನೇ ನೋಡುತ್ತಾ ನಿಂತಿದ್ದನು. ಅಷ್ಟೇ ಅಲ್ಲದೆ ಏನ್ ಮಾಡುತ್ತೀರಿ ಸರ್ ಎಂದು ಕೇಳಿದ್ದಾನೆ. ಇದರಿಂದ ಗರಂ ಆದ ಅಲೋಕ್ ಕುಮಾರ್ ಅವರು ಆತನ ಕೆನ್ನೆಗೆ ಬಾರಿಸಿ ಸಿಸಿಬಿ ಕಚೇರಿಯ ಸೆಲ್‍ಗೆ ಕರೆದುಕೊಂಡು ಹೋಗಿದ್ದಾರೆ.

  • 25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಟ್ಟಣ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಇಂದು ಬೆಳಗ್ಗೆ ನೆಲಮಂಗಲ ಪಟ್ಟಣ ಠಾಣೆಯ ವ್ಯಾಪ್ತಿಯಲ್ಲಿನ 25ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಕರೆಸಿ, ಸಿಪಿಐ ಶಿವಣ್ಣ ಹಾಗೂ ಪಿಎಸ್‍ಐ ಮಂಜುನಾಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದಿನೇ ದಿನೇ ನೆಲಮಂಗಲ ಪಟ್ಟಣ ಬೆಳೆಯುತ್ತಿದ್ದು, ಅಪರಾಧಗಳು ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆ  ನೀಡಿದ್ದಾರೆ.

    ಅಷ್ಟೇ ಅಲ್ಲದೇ ಹಿಂದಿನ ಪೊಲೀಸ್ ಪರೇಡ್‍ಗೆ ಆಗಮಿಸದವರಿಗೆ ವಾರ್ನಿಂಗ್ ನೀಡಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.