Tag: Rowdy Pictures Tollywood

  • ಬಿಲ್ ಗೇಟ್ಸ್ ಭೇಟಿ ಮಾಡಿದ ನಟ ಮಹೇಶ್ ಬಾಬು ದಂಪತಿ

    ಬಿಲ್ ಗೇಟ್ಸ್ ಭೇಟಿ ಮಾಡಿದ ನಟ ಮಹೇಶ್ ಬಾಬು ದಂಪತಿ

    ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು `ಸರ್ಕಾರು ವಾರಿ ಪಾಟ’ ಯಶಸ್ಸಿನ ನಂತರ ತಮ್ಮ ಕುಟುಂಬದ ಜತೆ ವಿದೇಶಕ್ಕೆ ಹಾರಿದ್ದಾರೆ. ಈ ವೇಳೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನು ಮಹೇಶ್ ಬಾಬು ಭೇಟಿಯಾಗಿದ್ದಾರೆ. ಜತೆಗೆ ಪತ್ನಿ ನಮೃತಾ ಕೂಡ ಸಾಥ್ ನೀಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Mahesh Babu (@urstrulymahesh)

    `ಸರ್ಕಾರು ವಾರಿ ಪಾಟ’ ಸಕ್ಸಸ್ ನಂತರ ಮಹೇಶ್ ಬಾಬು ಮತ್ತು ಅವರ ಕುಟುಂಬ ವಿದೇಶಕ್ಕೆ ಹರಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿದೇಶಕ್ಕೆ ತೆರೆಳಿದ್ದಾರೆ. ಈ ವೇಳೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನು ಪ್ರಿನ್ಸ್ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಭೇಟಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Mahesh Babu (@urstrulymahesh)

    `ಮಾನ್ಯ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಪ್ರಪಂಚ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಇವರು ಒಬ್ಬರು. ನಿಜಕ್ಕೂ ಇವರೂ ಸ್ಪೂರ್ತಿ’ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ. ಇನ್ನು ಇವರಿಬ್ಬರ ಭೇಟಿಯ ಬೆನ್ನಲ್ಲೇ ಬೆಲ್ ಗೇಟ್ಸ್ ಬಯೋಪಿಕ್ ಕುರಿತು ಸಖತ್ ಸದ್ದು ಮಾಡುತ್ತಿದೆ. ಅದಕ್ಕಾಗಿ ಮಹೇಶ್ ಬಾಬು ಮತ್ತು ಬಿಲ್ ಗೇಟ್ಸ್ ಭೇಟಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ನಲ್ಲಿ ಅದೇನೇ ಇರಲಿ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್ ಸದ್ದು ಮಾಡುತ್ತಿದೆ.

    Live Tv

  • ರೌಡಿಗಳಿಗೆ ಉತ್ತೇಜನ ಕಾರಣಕ್ಕೆ ನಯನತಾರಾ ಮೇಲೆ ದೂರು ದಾಖಲು

    ರೌಡಿಗಳಿಗೆ ಉತ್ತೇಜನ ಕಾರಣಕ್ಕೆ ನಯನತಾರಾ ಮೇಲೆ ದೂರು ದಾಖಲು

    ಮಿಳಿನ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಪ್ರಣಯದ ಹಕ್ಕಿಗಳಂತೆ ಎಲ್ಲಿಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಯ ಮೇಲೆ ದೂರು ದಾಖಲಾಗಿದ್ದು, ದೂರಿನಲ್ಲಿ ಇವರು ರೌಡಿಗಳಿಗೆ ಉತ್ತೇಜಿಸುತ್ತಾರೆ ಎಂದು ಬರೆಯಲಾಗಿದೆ.

    ನಯನತಾರಾ ಮತ್ತು ವಿಘ್ವೇಶ್ ಶಿವನ್ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯಿದೆ. ಇಬ್ಬರೂ ಈಗಾಗಲೇ ಎರಡು ವರ್ಷದಿಂದ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಪ್ರೀತಿಯ ನೆನಪಾಗಾಗಿ ಅವರು ‘ರೌಡಿ ಪಿಕ್ಚರ್ಸ್’ ಸಂಸ್ಥೆಯನ್ನು ಶುರು ಮಾಡಿದ್ದರು. ಈ ಸಂಸ್ಥೆಯಿಂದ ಭೂಗತ ಜಗತ್ತಿನ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ದೂರು ದಾರರು ಆರೋಪ ಮಾಡಿದ್ದಾರೆ. ಇವರ ಚಿತ್ರಗಳಿಂದಾಗಿ ರೌಡಿಗಳಿಗೆ ಮತ್ತಷ್ಟು ಉತ್ತೇಜನ ಸಿಗುತ್ತಿದೆ ಎಂದೂ ದೂರಲಾಗಿದೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ರೌಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಂತಹ ಬಹುತೇಕ ಸಿನಿಮಾಗಳು ರೌಡಿಸಂ ಹಿನ್ನೆಲೆಯ ಕಥೆಯನ್ನೇ ಒಳಗೊಂಡಿವೆ. ಅಲ್ಲದೇ ವಿಘ್ನೇಶ್ ಶಿವನ್ ನಿರ್ದೇಶನದ, ವಿಜಯ್ ಸೇತುಪತಿ ನಟನೆಯ ‘ರೌಡಿಧಂ’ ಸಿನಿಮಾ ಕೂಡ ಅಂಥದ್ದೇ ಕಥೆಯನ್ನು ಹೊಂದಿತ್ತು. ಈ ಸಿನಿಮಾದಲ್ಲಿ ನಯನತಾರಾ ಕೂಡ ನಟಿಸಿದ್ದರು. ಇಲ್ಲಿಯೇ ನಯನತಾರಾಗೂ ಮತ್ತು ವಿಘ್ನೇಶ್ ಗೂ ಪ್ರೇಮಾಂಕುರವಾಗಿತ್ತು.