Tag: rowdy naga

  • ಹೆಣ್ಣೂರು ಪೊಲೀಸರಿಗೆ ತಲೆ ನೋವಾದ ರೌಡಿ ನಾಗನ 17 ಕೋಟಿ ರೂ. ಹಣ

    ಹೆಣ್ಣೂರು ಪೊಲೀಸರಿಗೆ ತಲೆ ನೋವಾದ ರೌಡಿ ನಾಗನ 17 ಕೋಟಿ ರೂ. ಹಣ

    ಬೆಂಗಳೂರು: ರೌಡಿ ನಾಗನ ಬರೋಬ್ಬರಿ 17 ಕೋಟಿ ರೂ. ಹಳೆ ನೋಟುಗಳನ್ನು ಹೆಣ್ಣೂರು ಪೊಲೀಸರು ಪ್ರತಿದಿನ ಕಾಯುತ್ತಿದ್ದಾರೆ.

    ಕಬ್ಬಿಣದ ಸರಳುಗಳಿಂದ ಫುಲ್ ಸೆಕ್ಯುರಿಟಿಯಿಂದ ಲಾಕ್ ಮಾಡಿ ಸೀಲ್ ಮಾಡಿರುವ ಹಣದ ಪೆಟ್ಟಿಗೆಗಳನ್ನು ಪೊಲೀಸರು ಕಾವಲು ಕಾಯುತ್ತಿದ್ದಾರೆ. ರೌಡಿ ನಾಗನ ಶ್ರೀರಾಮಪುರದ ಮನೆ ಮೇಲೆ ದಾಳಿ ಮಾಡಿದಾಗ ಪೊಲೀಸರು ಮಂಚದ ಕೆಳಗೆ, ಪೆಟ್ಟಿಗೆ, ಕಬೋರ್ಡ್ ಹೀಗೆ ಎಲ್ಲಿ ನೋಡಿದರೂ ಹಳೆಯ ನೋಟುಗಳನ್ನ ಪತ್ತೆ ಮಾಡಿದ್ದರು.

    ಹೆಣ್ಣೂರು ಪೊಲೀಸರು ಬರೋಬ್ಬರಿ 17 ಕೋಟಿ ರೂ. ಹಳೆ ನೋಟನ್ನ ನಾಗನ ಮನೆಯಲ್ಲಿ ವಶಪಡಿಸಿಕೊಂಡಿದ್ದರು. ಬಳಿಕ ಸೀಜ್ ಆದ ಹಣವನ್ನ ಬೆಂಗಳೂರಿನ ಆರ್ ಬಿಐ ಪ್ರಾದೇಶಿಕ ಕಚೇರಿಗೆ ಒಪ್ಪಿಸಲಾಗುತ್ತೆ ಎಂದು ಪೊಲೀಸರು ಹೇಳಿದ್ದರು. ಆದರೆ ಇದುವರೆಗೂ 17 ಕೋಟಿ ರೂ. ಹಳೆಯ ನೋಟುಗಳನ್ನು ಆರ್ ಬಿಐ ವಶಪಡಿಸಿಕೊಂಡಿಲ್ಲ.

    ಬ್ಯಾಂಕ್ ನೋಟ್ ಸೆಷೆಸನ್ ಆಫ್ ಲಯಾಬಿಲಿಟೀಸ್ ಆರ್ಡಿನೆನ್ಸ್ ಆಕ್ಟ್ ಪ್ರಕಾರ ಸೀಜ್ ಮಾಡಿದ ಹಣವನ್ನ ಆರ್‍ಬಿಐ ಸ್ವೀಕಾರ ಮಾಡುವಂತಿಲ್ಲ. ಕೇಂದ್ರ ಹಣಕಾಸು ಇಲಾಖೆ ಸೀಜ್ ಮಾಡಿರುವ ಹಳೆಯ ನೋಟುಗಳನ್ನ ಸ್ವೀಕಾರ ಮಾಡಬಹುದು ಅಂತಾ ಕಾಯ್ದೆ ಮಾಡಬೇಕು. ಆನಂತರವಷ್ಟೇ ನೋಟುಗಳನ್ನ ಸ್ವೀಕಾರ ಮಾಡಲು ಸಾಧ್ಯ ಅಂತ ಆರ್‍ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.

    ಪೊಲೀಸರು ಹಳೆ ನೋಟು ರದ್ದಿಗೆ ಹೋಗುತ್ತದೆ ಎಂದು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಹಳೇ ನೋಟು ಅಕ್ರಮ ಸಂಗ್ರಹದ ಪ್ರಕರಣ ಅಡಿ ರೌಡಿ ನಾಗ ಕೇಸ್ ಎದುರಿಸುತ್ತಿದ್ದು, ಪ್ರಮುಖ ಸಾಕ್ಷಿಯಾಗಿ ಇದೇ 17 ಕೋಟಿ ಹಣವನ್ನು ಪೊಲೀಸರು ಸಲ್ಲಿಸಬೇಕಿದೆ. ಆದ್ದರಿಂದ ಈ ಹಣವನ್ನು ಪೊಲೀಸರು ಕಾವಲು ಕಾಯುವಂತಾಗಿದೆ.

  • ಇಂದು ರೌಡಿ ನಾಗ, ಮಕ್ಕಳಿಗೆ ಬಿಡುಗಡೆ ಸಾಧ್ಯತೆ

    ಇಂದು ರೌಡಿ ನಾಗ, ಮಕ್ಕಳಿಗೆ ಬಿಡುಗಡೆ ಸಾಧ್ಯತೆ

    ಬೆಂಗಳೂರು: ಕೋಟ್ಯಾಂತರ ರೂಪಾಯಿ ಹಳೇ ನೋಟು ಬದಲಾವಣೆ ದಂಧೆ ಪ್ರಕರಣದಲ್ಲಿ ಸಿಲುಕಿಕೊಂಡು ಪೊಲೀಸರ ಅತಿಥಿಯಾಗಿದ್ದ ರೌಡಿ ನಾಗ ಇಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ.

    ನಾಲ್ಕು ದಿನಗಳ ಹಿಂದೆ ಹೈಕೋರ್ಟ್ ನಲ್ಲಿ ಜಾಮೀನು ಪಡೆದಿರೋ ನಾಗ ಇಂದು ಸಂಜೆ 6 ಗಂಟೆ ಬಳಿಕ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕಾನೂನು ಪ್ರಕ್ರಿಯೆಗಳು ಮುಗಿಯದ ಹಿನ್ನೆಲೆಯಲ್ಲಿ ಇಷ್ಟು ದಿನ ಬಿಡುಗಡೆಯಾಗಿರಲಿಲ್ಲ. ಇಂದು ಪ್ರಕ್ರಿಯೆಗಳು ಮುಗಿಯೋ ಸಾಧ್ಯತೆಗಳಿದ್ದು, ರೌಡಿ ನಾಗ ಮತ್ತು ಮಕ್ಕಳಾದ ಗಾಂಧಿ, ಶಾಸ್ತ್ರಿ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ.

    ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಡಿ ಪೊಲೀಸರು ಏಪ್ರಿಲ್ 14ರಂದು ನಾಗನನ್ನು ಬಂಧಿಸಲು ಹೋಗಿದ್ದರು. ಮಾರ್ಚ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಎಂಬವರನ್ನ ಅಪಹರಿಸಲಾಗಿತ್ತು. ಕಿಡ್ನ್ಯಾಪ್ ತಂಡ ಶ್ರೀರಾಮಪುರದ ನಾಗನ ಮನೆಗೆ ಉಮೇಶ್‍ರನ್ನ ಕರೆತಂದು 50 ಲಕ್ಷ ರೂ. ಹಣ ವಸೂಲಿ ಮಾಡಿದ್ರು. ಕೊಲೆ ಬೆದರಿಕೆ ಇದ್ದ ಕಾರಣ ಉದ್ಯಮಿ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ನಂತರ ಏಪ್ರಿಲ್ 07 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ದರು. ಹೀಗಾಗಿ ಕೋರ್ಟ್‍ನಿಂದ ಸರ್ಚ್ ವಾರೆಂಟ್ ತಂದು ಹೆಣ್ಣೂರು ಇನ್ಸ್ ಪೆಕ್ಟರ್ ಶ್ರೀನಿವಾಸ್, ಮಲ್ಲೇಶ್ವರಂ ಎಸಿಪಿ ಸೇರಿದಂತೆ 40 ಕ್ಕೂ ಹೆಚ್ಚು ಪೊಲೀಸರು ನಾಗನ ಮನೆ ಹಾಗೂ ಸ್ನೇಹ ಸೇವಾ ಸಮಿತಿ ಕಚೇರಿಯ ಮೇಲೆ ದಾಳಿ ಮಾಡಿದ್ದರು.

    ಪೊಲಿಸರು ದಾಳಿ ಮಾಡುತ್ತಿದ್ದಂತೆಯೇ ನಾಗ ಮನೆಯಿಂದ ಪರಾರಿಯಾಗಿದ್ದು, ಆ ಬಳಿಕ ಆತನನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    https://www.youtube.com/watch?v=ehMXPLXNDUc

     

     

  • ಫಿನಾಯಿಲ್ ಕುಡಿದು ಜೈಲಿನಲ್ಲಿ ರೌಡಿ ನಾಗನಿಂದ ಆತ್ಮಹತ್ಯೆ ಯತ್ನ

    ಫಿನಾಯಿಲ್ ಕುಡಿದು ಜೈಲಿನಲ್ಲಿ ರೌಡಿ ನಾಗನಿಂದ ಆತ್ಮಹತ್ಯೆ ಯತ್ನ

    ಬೆಂಗಳೂರು: ನಗರದ ಪರಪ್ಪನ ಅಗ್ರಹಾರದಲ್ಲಿದ್ದ ರೌಡಿ ನಾಗಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ರೌಡಿ ನಾಗನನ್ನು ಜೈಲಿನಲ್ಲಿ ಎಲ್ಲಾ ಕೈದಿಗಳ ಜೊತೆಯಲ್ಲಿಯೇ ಇರಿಸಲಾಗಿತ್ತು. ಆದ್ರೆ ನಾಗ ಮಾತ್ರ ತನಗೆ ಆರೋಗ್ಯ ಸಮಸ್ಯೆಯಿದ್ದು, ಪ್ರತ್ಯೇಕವಾಗಿ ಆಸ್ಪತ್ರೆ ವಾರ್ಡ್‍ನಲ್ಲಿ ಇರಿಸಿ ಎಂದು ಬೇಡಿಕೆ ಇಟ್ಟಿದ್ದನು. ನಾಗನ ಬೇಡಿಕೆಯನ್ನು ಜೈಲಾಧಿಕಾರಿಗಳು ನಿರಾಕರಿಸಿದ್ದರು.

    ಇದರಿಂದ ಬೇಸರಗೊಂಡ ನಾಗ ಜೈಲಿನ ಟಾಯ್ಲೆಟನಲ್ಲಿದ್ದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸಹ ಕೈದಿಗಳು ನಾಗನನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಸಿನೀಮಿಯ ಮಾದರಿಯಲ್ಲಿ ಬೆಂಗಳೂರು ಪೊಲೀಸರಿಂದ ರೌಡಿ ನಾಗ ಅರೆಸ್ಟ್

    ಬಾಂಬ್ ನಾಗನ ಮನೆಯ ಮೇಲೆ ನಡೆದ ದಾಳಿಯ ಸಂದರ್ಭದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

     

     

     

  • ಸಿನೀಮಿಯ ಮಾದರಿಯಲ್ಲಿ ಬೆಂಗಳೂರು ಪೊಲೀಸರಿಂದ ರೌಡಿ ನಾಗ ಅರೆಸ್ಟ್

    ಸಿನೀಮಿಯ ಮಾದರಿಯಲ್ಲಿ ಬೆಂಗಳೂರು ಪೊಲೀಸರಿಂದ ರೌಡಿ ನಾಗ ಅರೆಸ್ಟ್

    ಬೆಂಗಳೂರು: ಪೊಲೀಸರ ಕೈಗೆ ಸಿಗದೇ ನಿಗೂಢ ಸ್ಥಳದಿಂದ ಸಿಡಿ ರಿಲೀಸ್ ಮಾಡ್ತಿದ್ದ ರೌಡಿ ನಾಗನನ್ನು ಬೆಂಗಳೂರು ಪೊಲೀಸರ ವಿಶೇಷ ತಂಡ ಕೊನೆಗೂ ತಮಿಳುನಾಡಿನಲ್ಲಿ ಬಂಧಿಸಿದೆ.

    ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯೊಂದಿಗೆ ಇದ್ದ ನಾಗನನ್ನು ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರತಿ ದಿನ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಸುತ್ತಾಡುತ್ತಿದ್ದ ನಾಗ ದೇವಸ್ಥಾನ, ಹಾಗೂ ಮದುವೆ ಮಂಟಪಗಳ ಬಳಿ ಉಳಿದುಕೊಳ್ಳುತ್ತಿದ್ದ. ಇಂದು ಒಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಅರ್ಕಾಟ್ ಬಳಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಾಗನ ಮಗ ಗಾಂಧಿ ವಾಹನ ಚಲಾಯಿಸುತ್ತಿದ್ದ. ಪೊಲೀಸರು ಕೊನೆಗೆ ಒಂದೂವರೆ ಕಿ.ಮೀ ಬೆನ್ನೆಟ್ಟಿ ನಾಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ವಾಹನ ಸುತ್ತುವರೆಯುತ್ತಿದ್ದಂತೆ ನಾಗ ಕೂಗಡಿದ್ದ ಎನ್ನುವ ಮಾಹಿತಿ ಸಿಕ್ಕಿದೆ.

    ಎಸಿಪಿ ರವಿಕುಮಾರ್ ಸೂಚನೆಯಂತೆ ಶರಣಾಗುವಂತೆ ವಕೀಲ ಶ್ರೀರಾಮ ರೆಡ್ಡಿ ನಾಗನಿಗೆ ಸೂಚಿಸಿದ್ದರು. ಎರಡೂ ದಿನದ ಹಿಂದೆ ಶ್ರೀರಾಮ ರೆಡ್ಡಿ ಸೂಚಿಸಿದ್ದರೂ ನಾಗ ವಕೀಲರ ಮಾತನ್ನು ತಿರಸ್ಕರಿಸಿದ್ದ.

    ನಾಗ ತಮಿಳುನಾಡಿನಲ್ಲಿ ಇದ್ದಾನೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ ಎಲ್ಲಿ ಉಳಿದುಕೊಂಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ. ಯಾಕೆಂದರೆ ಪ್ರತಿದಿನ ಬೇರೆ ಬೇರೆ ಸ್ಥಳಗಳನ್ನು ಬದಲಾಯಿಸುತ್ತಿದ್ದ. ಏಪ್ರಿಲ್ 14ರಂದು ಪೊಲೀಸರು ನಾಗನ ಮನೆ ಮೇಲೆ ದಾಳಿ ನಡೆಸಿದ್ದರು. ಅಂದಿನಿಂದ ನಾಪತ್ತೆಯಾಗಿದ್ದ ನಾಗನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಂತಿಮವಾಗಿ ಪೊಲೀಸರು 27 ದಿನಗಳ ಬಳಿಕ ನಾಗನನ್ನು ಬಂಧಿಸಿದ್ದಾರೆ.

    ಬಾಂಬ್ ನಾಗನ ಮನೆಯ ಮೇಲೆ ನಡೆದ ದಾಳಿಯ ಸಂದರ್ಭದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

  • ನನ್ನ  ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು: ರೌಡಿ ನಾಗನ ಮನಿ ಬಾಂಬ್

    ನನ್ನ ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು: ರೌಡಿ ನಾಗನ ಮನಿ ಬಾಂಬ್

    – ಈ ವಿಡಿಯೋದಲ್ಲಿರುವ ಸತ್ಯಾಸತ್ಯತೆ ಪಬ್ಲಿಕ್ ಟಿವಿ ದೃಢೀಕರಿಸಲ್ಲ
    – ಮಂಜುನಾಥ್ ನನ್ನ ಪಿಎ ಅಲ್ಲ: ಸಿಎಂ

    ಬೆಂಗಳೂರು: ನನ್ನ ಮನೆಯಲ್ಲಿ ಸಿಕ್ಕಿದ ಹಣ ಸರ್ಕಾರಿ ಅಧಿಕಾರಿಗಳ ದುಡ್ಡು ಎನ್ನುವ ಸ್ಫೋಟಕ ಮಾಹಿತಿಯನ್ನು ರೌಡಿ ನಾಗ ತಿಳಿಸಿದ್ದಾನೆ.

    ವಿಡಿಯೋ ಹೇಳಿಕೆಯಲ್ಲಿ, ಮನೆಯಲ್ಲಿದ್ದ ಕಪ್ಪು ಹಣ ಸಿಎಂ ಪಿಎ ಮಂಜುನಾಥ್‍ಗೆ ಸೇರಿದ್ದು. ನನ್ನ ಮನೆಯಲ್ಲಿ ಐಎಎಸ್ ಅಧಿಕಾರಿಗಳೇ ಹಣವನ್ನು ಬಚ್ಚಿಡುತ್ತಿದ್ದರು ಎನ್ನುವ ಮನಿ ಬಾಂಬನ್ನು ನಾಗರಾಜ್ ಅಲಿಯಾಸ್ ರೌಡಿನಾಗ ಹೇಳಿದ್ದಾನೆ.

    ಐಪಿಎಸ್ ಅಧಿಕಾರಿಗಳೇ ಖುದ್ದು ನೋಟು ಬದಲಿಸಲು ನನ್ನ ಬಳಿ ಬಂದಿದ್ರು. ಕಾರ್ ಡೀಲರ್ ನಡೆಸುತ್ತಿರುವ ಕಿಶೋರ್, ಮಧು, ಉಮೇಶ್, ನವೀನ, ಗಣೇಶ ನನ್ನ ಬಳಿ ಹಣ ತೆಗೆದುಕೊಂಡು ಬಂದಿದ್ದರು. ಈ ಹಳೇ ನೋಟು ವಿನಿಮಯದ ದಂಧೆಯ ರೂವಾರಿ ಸಿಎಂ ಪಿಎ ಮಂಜುನಾಥ್. ಅಧಿಕಾರಿಗಳ ಬಣ್ಣ ಬಯಲಾಗುತ್ತೆ ಅಂತ ಕೊನೆಗೆ ನನ್ನನ್ನು ಸಾಯಿಸಲು ಬಂದಿದ್ರು. ಮನೆ ಮೇಲೆ ದಾಳಿ ಹೆಸರಲ್ಲಿ ನನ್ನನ್ನ ಕೊಲ್ಲೋಕೆ ಪೊಲೀಸರು ಸಂಚು ರೂಪಿಸಿದ್ರು. ನಾನು ತಪ್ಪು ಮಾಡಿಲ್ಲ. ನನ್ನನ್ನು ಬದುಕಲು ಬಿಡಿ ಎಂದ ರೌಡಿನಾಗ ವಿಡಿಯೋದಲ್ಲಿ ತಿಳಿಸಿದ್ದಾನೆ.

    ಇವರೆಲ್ಲ ನನ್ನ ಮನೆ ಬಳಿ ದುಡ್ಡು ತಂದಿದ್ದಕ್ಕೆ ಸಿಸಿಟಿವಿ ವಿಡಿಯೋ ಇದೆ. ಇವರ ಬಂಡವಾಳ ಬಯಲಾಗುತ್ತೆ ಅಂತಾ ನನ್ನನ್ನ ಶೂಟ್ ಮಾಡಲು ಬಂದಿದ್ರು. ನಾನು ಏನು ತಪ್ಪು ಮಾಡದಿದ್ದರೂ ನನ್ನನ್ನು ಅವರು ಬದುಕಲು ಬಿಡುತ್ತಿಲ್ಲ. ಉಮೇಶ್‍ನನ್ನು ನಾನು ಕಿಡ್ನ್ಯಾಪ್ ಮಾಡಿಲ್ಲ. ಇಬ್ಬರು ಗನ್ ಮ್ಯಾನ್ ಗಳು ಅವನ ಜೊತೆ ಇರ್ತಾರೆ ಇದು ಹೇಗೆ ಸಾಧ್ಯ..?ಇವರ ಅಕ್ರಮ ಹಣ ಮರೆ ಮಾಚಲು ನನ್ನನ್ನ ಮುಗಿಸಲು ಮಾಡ್ತಿರೊ ತಂತ್ರ ಇದು ಎಂದು ನಾಗ ವಿಡಿಯೋದಲ್ಲಿ ಹೇಳಿದ್ದಾನೆ.

    ಮಂಜುನಾಥ್ ನನ್ನ ಪಿಎ ಅಲ್ಲ: ನಾಗನ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರ್ರಿ ಅದು ಮಂಜುನಾಥ್? ಮಂಜುನಾಥ್ ನನ್ನ ಪಿಎ ಅಲ್ಲ. ಆ ಹೆಸರಿನವರು ಯಾರು ಇಲ್ಲ. ಬಾಂಬ್ ನಾಗನಿಗೂ ನಮಗೂ ಏನ್ರೀ ಸಂಬಂಧ? ಗೊತ್ತಿಲ್ಲದೇ ಏನೇನೂ ಕೇಳಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

    ದುಡ್ಡು ಕೊಟ್ಟಿಲ್ಲ: ರೌಡಿ ನಾಗ ಹೈಕೋರ್ಟ್ ನ್ಯಾಯಾಧೀಶರಿಗೆ ಕಿಕ್ ಬ್ಯಾಕ್ ನೀಡಿರುವ ಆರೋಪವನ್ನು ಆತನ ವಕೀಲ ಶ್ರೀ ರಾಮರೆಡ್ಡಿ ತಿರಸ್ಕರಿಸಿದ್ದಾರೆ. ನಾಗ ಯಾವುದೇ ಜಡ್ಜ್ ಗಳಿಗೆ ಹಣ ನೀಡಿಲ್ಲ. ನಾಗರಾಜ್ ಸಹಿಯನ್ನ ಸ್ಕ್ಯಾನ್ ಮಾಡಿ ಈ ರೀತಿ ಮಾಡಲಾಗಿದೆ. ನಾಗರಾಜ್‍ಗೆ ಜಾಮೀನು ಸಿಗಬಾರದು ಅಂತಾ ಈ ರೀತಿ ಮಾಡಲಾಗಿದೆ. ಇದೆಲ್ಲಾ ಕಾಸರಘಟ್ಟ ರಾಜಣ್ಣನದ್ದೇ ಕೃತ್ಯ ಎಂದು ಅವರು ಹೇಳಿದ್ದಾರೆ. ದುರುದ್ದೇಶ ಪೂರಿತವಾದ ಕೃತ್ಯದ ಬಗ್ಗೆ ರಿಜಿಸ್ಟ್ರಾರ್‍ಗೆ ಶ್ರೀರಾಮ ರೆಡ್ಡಿ ದೂರು ನೀಡಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೂ ಫ್ಯಾಕ್ಸ್ ಮುಖಾಂತರ ದೂರು ನೀಡಿದ್ದಾರೆ.

    ಇದನ್ನೂ ಓದಿ: ಬಾಂಬ್ ನಾಗನ ಕೊಠಡಿಯ ಮಂಚದ ಕಳಗೆ ಸಾವಿರ ಕೋಟಿ ಮೌಲ್ಯದ ಭೂ ದಾಖಲೆ ಪತ್ತೆ – ನಾಗನ ಹೈಫೈ ಮನೆ ಹೇಗಿದೆ ಗೊತ್ತಾ?

    ಇದನ್ನೂ ಓದಿ: ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಸಿಕ್ತಿದೆ ಕೋಟಿ ಕೋಟಿ ಹಳೇ ನೋಟು