Tag: Rowdy Lakshmana

  • ರೌಡಿ ಲಕ್ಷ್ಮಣನ ಕೊಲೆಗೂ ಮುನ್ನ ಗೋರಿ ಬಳಿ ನಡೆದಿತ್ತು ಮಹಾಪೂಜೆ!

    ರೌಡಿ ಲಕ್ಷ್ಮಣನ ಕೊಲೆಗೂ ಮುನ್ನ ಗೋರಿ ಬಳಿ ನಡೆದಿತ್ತು ಮಹಾಪೂಜೆ!

    ಬೆಂಗಳೂರು: ನಗರದ ಕುಖ್ಯಾತ ರೌಡಿ ರೌಡಿ ಲಕ್ಷ್ಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮಣ ಕೊಲೆಗೆ ಮೊದಲೇ ಸ್ಕೆಚ್ ರೂಪಿಸಿ ಗೋರಿ ಬಳಿ ಆರೋಪಿಗಳು ಮಹಾಪೂಜೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

    ಲಕ್ಷ್ಮಣ ಕೊಲೆಯ ಹಿಂದಿನ ದಿನವೇ ಮಹಾಪೂಜೆ ನಡೆಸಿದ್ದ ಆರೋಪಿಗಳು, ಮಚ್ ಮಂಜನ ಗೋರಿ ಬಳಿ ಆತನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ನಡೆದಿದ್ದ ಮಚ್ ಮಂಜನ ಕೊಲೆಗೆ ಪ್ರತಿಕಾರವಾಗಿಯೇ ಲಕ್ಷ್ಮಣ ಕೊಲೆ ನಡೆಸಿದ್ದಾರೆ. ನಗರದ ಸೋಲೂರು ಬಳಿಯಿ ಮಚ್ ಮಂಜುನ ಗೋರಿ ಇದ್ದು, ಈ ಸ್ಥಳದಲ್ಲೇ ಆರೋಪಿಗಳು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಟ್ ರಾಜನ ಕಾಲಿಗೆ ಗುಂಡಿಟ್ಟ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೇ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಕೊಲೆ ಪ್ರಕರಣದಲ್ಲಿ ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ಮೂಡಿದ್ದು, ಆ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

    ಇತ್ತ ಲಕ್ಷ್ಮಣ ಕೊಲೆ ಮಾಡಿದ್ದ ದಿನವೇ 6 ಜನ ಆರೋಪಿಗಳು ಕೂಡ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ ಆರೋಪಿಗಳ ಗ್ಯಾಂಗ್‍ನಲ್ಲಿ ಅಂದು ಒಬ್ಬನ ಬರ್ತ್ ಡೇ ಇದ್ದ ಕಾರಣ ಸ್ಥಳದಿಂದ ಪರಾರಿಯಾಗಿದ್ದರು. ಬರ್ತ್ ಡೇ ಆಚರಿಸಿಕೊಂಡ ಬಳಿಕ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಇನ್ನು ಪ್ರಕರಣದಲ್ಲಿ ಗುಂಡೇಟು ತಿಂದಿರುವ ಕ್ಯಾಟ್ ರಾಜನ ವಿರುದ್ಧವೂ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ಬೆಂಗಳೂರು: ಕುಖ್ಯಾತ ಪಾತಕಿ ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಆರೋಪಿ ಕ್ಯಾಟ್ ರಾಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಪ್ರಕರಣದಲ್ಲಿ ರೌಡಿ ಲಕ್ಷ್ಮಣ ಕೊಲೆ ಮಾಡಲು ಬಳಸಿದ್ದ ಮಚ್ಚನ್ನು ರಿಕವರಿ ಮಾಡಲು ಕರೀಂ ಸಾಬ್ ಪಾಳ್ಯಕ್ಕೆ ಹೋದಾಗ ಕ್ಯಾಟ್ ರಾಜ ತಿರುಗಿಬಿದ್ದಿದ್ದ. ಈ ವೇಳೆ ಪೊಲೀಸರ ಮೇಲೆ ಕಲ್ಲು ಎಸೆದಿದ್ದ. ಈ ಮೂಲಕ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಮುಂದಾಗಿದ್ದನು.

    ಕ್ಯಾಟ್‍ರಾಜ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಕ್ಯಾಟ್ ರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕ್ಯಾಟ್‍ರಾಜ ಕೊಲೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಸಿಸಿಬಿ ವಶಕ್ಕೆ ನೀಡಿದ್ದು, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಬಂಧನ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕ್ಯಾಟ್ ರಾಜ ಬಿಟ್ಟರೆ ಸದ್ಯ ಶ್ರೀಕಂಠ ಎಂಬವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದಹಾಗೇ ಲಕ್ಷ್ಮಣ ಹತ್ಯೆಯಲ್ಲಿ 6 ಜನರ ಆರೋಪಿಗಳು ಭಾಗಿಯಾಗಿದ್ದರು. ಹತ್ಯೆ ನಡೆದ ದಿನವೇ ಎಲ್ಲಾ ಆರೋಪಿಗಳು ಪೊಲೀಸರ ಮುಂದೇ ಶರಣಾಗಬೇಕೆಂದು ತೀರ್ಮಾನಿಸಿದ್ದರು. ಆದರೆ ಗ್ಯಾಂಗ್‍ನಲ್ಲಿ ಒಬ್ಬನ ಬರ್ತ್ ಡೇ ಇದ್ದ ಕಾರಣ ಪಾರ್ಟಿ ಮಾಡಲು ಸ್ಥಳದಿಂದ ಪರಾರಿಯಾಗಿದ್ದರು.

    ಲಕ್ಷ್ಮಣನನ್ನು ಹತ್ಯೆ ಮಾಡಲು ಆರೋಪಿಗಳು ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಲಕ್ಷ್ಮಣ ಅಂದು ಎಷ್ಟೊತ್ತಿಗೆ ಆಗಮಿಸುತ್ತಾನೆ ಎಂಬುವುದು ಆಕೆಗೆ ಮಾತ್ರ ತಿಳಿದಿತ್ತು ಎನ್ನಲಾಗಿದೆ. ಈ ಸಂಬಂಧ ಲಕ್ಷ್ಮಣ ಬಳಿ ಲಾಡ್ಜ್ ರೂಮ್ ಒಂದರ ಕೀ ಪತ್ತೆಯಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv