Tag: rowdy baby

  • ಬಾಲಿವುಡ್‌ನತ್ತ ರೌಡಿಬೇಬಿ ಸಾಯಿ ಪಲ್ಲವಿ

    ಬಾಲಿವುಡ್‌ನತ್ತ ರೌಡಿಬೇಬಿ ಸಾಯಿ ಪಲ್ಲವಿ

    ಸೌತ್ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ,(Sai Pallavi) `ಗಾರ್ಗಿ’ ಸಿನಿಮಾ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ರೌಡಿ ಬೇಬಿ ಬಾಲಿವುಡ್ (Bollywood) ಕಡೆ ಮುಖ ಮಾಡಿದ್ದಾರೆ. ಸೀತಾ ಮಾತೆ (Sita) ಪಾತ್ರ ಮಾಡುವ ಮೂಲಕ ಬಿಟೌನ್‌ಗೆ ಲಗ್ಗಿ ಇಡ್ತಿದ್ದಾರೆ.

    ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಸಾಯಿ ಪಲ್ಲವಿ, ಗ್ಲಾಮರ್‌ನಿಂದ ದೂರವಿದ್ದು, ನಟನೆಗೆ ಅವಕಾಶವಿರುವ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಾಯಿಪಲ್ಲವಿ ನಟಿಸಿರುವ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂತಹ ಸೌಂಡ್ ಮಾಡದೇ ಇದ್ದರೂ, ರೌಡಿ ಬೇಬಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾರಂಗವನ್ನೇ ನಟಿ ತೊರೆಯುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಬಾಲಿವುಡ್‌ಗೆ ಲಗ್ಗೆ ಇಡುವ ಮೂಲಕ ಎಲ್ಲಾ ಗಾಸಿಪ್‌ಗೂ ನಟಿ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಭೇಟಿ

    ಬಾಲಿವುಡ್‌ನ ನಿರ್ಮಾಪಕ ಮಧು ಮಂತೇನಾ ನಿರ್ಮಾಣದಲ್ಲಿ ರಾಮಾಯಣ (Ramayana) ಕಾವ್ಯವನ್ನ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಸೀತೆಯಾಗಿ ನಟಿಸಲು ಸಾಯಿ ಪಲ್ಲವಿಗೆ ಬುಲಾವ್ ಬಂದಿದೆ. ಈ ಹಿಂದೆ ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆಗೆ ಕೇಳಲಾಗಿತ್ತಂತೆ, ಆದರೆ ಈಗ ಸಾಯಿಪಲ್ಲವಿನೇ ಸೀತಾ ಪಾತ್ರಕ್ಕೆ ಸೂಕ್ತ ಎಂದೇನಿಸಿ ಕೇಳಲಾಗಿದೆ.

    ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್,(Ranbir Kapoor) ರಾವಣನ ಪಾತ್ರಕ್ಕೆ ಹೃತಿಕ್ ರೋಷನ್ (Hrithik Roshan) ನಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಲ್ಲಾ ಓಕೆ ಆದರೆ 2023ರಲ್ಲಿ ಸೆಪ್ಟೆಂಬರ್ ಸಿನಿಮಾ ಸೆಟ್ಟೇರಲಿದೆ. ರಣ್‌ಬೀರ್, ಹೃತಿಕ್, ಸಾಯಿಪಲ್ಲವಿ ಈ ಮೂವರನ್ನು ಒಟ್ಟಿಗೆ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

    ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

    ಚೆನ್ನೈ: ಧನಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಸಿನಿಮಾ ಅಷ್ಟೇನು ಯಶಸ್ಸು ಕಾಣದಿದ್ದರೂ ರೌಡಿ ಬೇಬಿ ಹಾಡು ಮಾತ್ರ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಹೀಗಾಗಿ 100 ಕೋಟಿ ವ್ಯೂ ಪಡೆದಿದ್ದು, ಚಿತ್ರತಂಡ ಸಂಭ್ರಮಿಸುತ್ತಿದೆ. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಾಜಿ ಮೋಹನ್ ನಿರ್ದೇಶನದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡನ್ನು ಯುವನ್ ಶಂಕರ್ ರಾಜಾ ಕಂಪೋಸ್ ಮಾಡಿದ್ದು, ಸಖತ್ ಹಿಟ್ ಆಗಿದೆ. ಇದೀಗ ಯೂಟ್ಯೂಬ್‍ನಲ್ಲಿ 1 ಬಿಲಿಯನ್ ವ್ಯೂವ್ಸ್ ಸಹ ಪಡೆದಿದೆ. ಚಿತ್ರತಂಡ ಇದರ ಸಂಭ್ರಮಾಚರಣೆ ಮಾಡಿದೆ. ಅಲ್ಲದೆ ಧನುಶ್ ಅವರ ವಂಡರ್‍ಬಾರ್ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದೆ.

    ಕಾಮನ್ ಡಿಪಿ(ಸಿಡಿಪಿ) ಮೂಲಕ ರೌಡಿಬೇಬಿಹಿಟ್ಸ್1ಬಿಲಿಯನ್‍ವ್ಯೂವ್ಸ್ ಹ್ಯಾಷ್ ಟ್ಯಾಗ್‍ನೊಂದಿಗೆ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಕೇವಲ ಧನುಷ್ ಫೋಟೋ ಮಾತ್ರವಿದ್ದು, ಸಾಯಿಪಲ್ಲವಿ ಅವರನ್ನು ಸೈಡ್‍ಲೈನ್ ಮಾಡಲಾಗಿದೆ. ಹೀಗಾಗಿ ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧನುಷ್ ಉತ್ತಮ ಡ್ಯಾನ್ಸರ್ ಆಗಿರಬಹುದು ಆದರೆ ಸಾಯಿ ಪಲ್ಲವಿ ಹಾಗೂ ಯುವನ್ ಅವರ ಸಂಗೀತದಿಂದ ಹಾಡು ಹಿಟ್ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

    ಇನ್ನೂ ಕೆಲ ಅಭಿಮಾನಿಗಳು ಸಾಯಿ ಪಲ್ಲವಿ ಮಾತ್ರ ಇರುವ ಸಿಡಿಪಿಯನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

    ರೌಡಿ ಬೇಬಿ ಹಾಡಿನಲ್ಲಿ ಧನುಷ್ ಜೊತೆಗೆ ಸಾಯಿಪಲ್ಲವಿ ಸಹ ಅಷ್ಟೇ ಪವರ್‍ಫುಲ್ ಸ್ಟೆಪ್ ಹಾಕಿದ್ದು, ಭರ್ಜರಿ ಡ್ಯಾನ್ಸ್ ಮಾಡಿದ್ದರು. ಇಬ್ಬರ ಕಾಂಬಿನೇಶನ್ ಹಾಗೂ ಯುವನ್ ಶಂಕರ್ ಅವರ ಕಂಪೋಸ್, ಪ್ರಭುದೇವ್ ಹಾಗೂ ಜಾನಿ ಕೋರಿಯೋಗ್ರಫಿಯಲ್ಲಿ ಸಾಂಗ್ ಮೂಡಿಬಂದಿತ್ತು. ಈಗ ಸಂಭ್ರಮದ ವೇಳೆ ಇವರ್ಯಾರ ಚಿತ್ರ ಹಾಕದೇ, ಕೇವಲ ಧನುಷ್ ಫೊಟೋ ಹಾಕಿದ್ದಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.

    2015ರಲ್ಲಿ ಬಿಡುಗಡೆಯಾದ ಮಾರಿ ಸಿನಿಮಾ ಸಖತ್ ಹಿಟ್ ಆಗಿತ್ತು. ಹೀಗಾಗಿ ಈ ಸಿನಿಮಾದ ಸೀಕ್ವೆಲ್ ಎಂಬಂತೆ ಮಾರಿ 2 ಸಿನಿಮಾ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರವನ್ನು ಸ್ವತಃ ಧನುಷ್ ಅವರು ತಮ್ಮ ಸ್ವಂತ ಬ್ಯಾನರ್‍ನಲ್ಲಿ ವಂಡರ್‍ಬಾರ್ ಫಿಲಂಸ್ ಅಡಿ ನಿರ್ಮಿಸಿದ್ದರು. ಆದರೆ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ರೌಡಿ ಬೇಬಿ ಹಾಡು ಮಾತ್ರ ಭರ್ಜರಿ ಸದ್ದು ಮಾಡಿತ್ತು.

  • ರೌಡಿ ಬೇಬಿ ಹಾಡಿಗೆ ಸೊಂಟ ಬಳುಕಿಸಿದ ಅಜ್ಜಿ – ವಿಡಿಯೋ ವೈರಲ್

    ರೌಡಿ ಬೇಬಿ ಹಾಡಿಗೆ ಸೊಂಟ ಬಳುಕಿಸಿದ ಅಜ್ಜಿ – ವಿಡಿಯೋ ವೈರಲ್

    – ಅಜ್ಜಿ ಹೆಜ್ಜೆಗೆ ಕಿರಣ್ ಬೇಡಿ ಫಿದಾ

    ಪಾಂಡಿಚೇರಿ: ನಗರದಲ್ಲಿ ಪೊಂಗಲ್ ಸಂಭ್ರಮಾಚರಣೆ ವೇಳೆ ಅಜ್ಜಿಯೊಬ್ಬರು ರೌಡಿ ಬೇಬಿ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ್ದು, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ವಿಡಿಯೋವನ್ನು ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರು ಅಜ್ಜಿ ಡ್ಯಾನ್ಸ್ ಗೆ ಫಿದಾ ಆಗಿದ್ದು, ಇಳಿ ವಯಸ್ಸಿನಲ್ಲೂ ಖುಷಿಯಿಂದ ಡ್ಯಾನ್ಸ್ ಮಾಡಿದ ಅಜ್ಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

    ಪಾಂಡಿಚೇರಿಯಲ್ಲಿ ಕಿರಣ್ ಬೇಡಿ ಅವರು ನಗರದ ಪೌರ ಕಾರ್ಮಿಕರು ಹಾಗೂ ಸಚ್ಛತಾ ಕಾರ್ಪೊರೇಷನ್‍ನ ಮಹಿಳೆಯರೊಂದಿಗೆ ಪೊಂಗಲ್ ಆಚರಣೆ ಮಾಡಿದ್ದಾರೆ. ಈ ಸಂಭ್ರಮಾಚರಣೆ ವೇಳೆ ಕೆಲವು ಮಹಿಳೆಯರು ಖುಷಿಯಾಗಿ ಕುಣಿದಿದ್ದಾರೆ. ಅದರಲ್ಲೂ ವೃದ್ಧೆಯೊಬ್ಬರು ತಮಿಳಿನ ‘ಮಾರಿ-2’ ಚಿತ್ರದ ‘ರೌಡಿ ಬೇಬಿ’ ಹಾಡಿಗೆ ಸಖತ್ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ. ವೃದ್ಧೆಯ ಡ್ಯಾನ್ಸ್ ಗೆ ಸ್ವತಃ ಕಿರಣ್ ಬೇಡಿ ಅವರೇ ಫಿದಾ ಆಗಿದ್ದಾರೆ.

    ಈ ವಿಡಿಯೋ ಸುಮಾರು 28 ಸಾವಿರಕ್ಕೂ ಅಧಿಕ ಬಾರಿ ವಿಕ್ಷಣೆಯಾಗಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಪೊಂಗಲ್ ಸಂಭ್ರಮಾಚರಣೆಯ ಬಳಿಕ ಕಿರಣ್ ಬೇಡಿಯವರು ದಾನಿಗಳ ಜೊತೆ ಸೇರಿ ಪುರುಷ ಕಾರ್ಮಿಕರಿಗೆ ಟವಲ್ ಹಾಗೂ ಮಹಿಳೆಯರಿಗೆ ಸೀರೆ ಉಡುಗೊರೆಯಾಗಿ ನೀಡಿರುವ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.

  • ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಸುಮುಖ ಎಂಟರ್ ಟೈನರ್ಸ್ ಹಾಗೂ ವಾರ್ ಫುಟ್ ಸ್ಟುಡಿಯೋಸ್ ಲಾಂಛನದಲ್ಲಿ ಎಸ್.ಎಸ್. ರವಿಗೌಡ ಹಾಗೂ ಶ್ಯಾಮಲಾ ರೆಡ್ಡಿ ಅವರು ನಿರ್ಮಿಸುತ್ತಿರುವ ‘ರೌಡಿ ಬೇಬಿ` ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಸಾಗು ಮುಂದೆ ಸಾಗು ಈ ಭೂಮಿ ದೊಡ್ಡದು’ ಹಾಡನ್ನು ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಮಾನ್ ಸಂಗೀತ ನೀಡಿದ್ದಾರೆ.

    ರೆಡ್ಡಿ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಂಗಳೂರು, ಕೇರಳ, ಬೆಂಗಳೂರು ಮುಂತಾದ ಕಡೆ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಈ ಹಿಂದೆ ‘ಪ್ರಯಾಣಿಕರ ಗಮನಕ್ಕೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರೆಡ್ಡಿ ಕೃಷ್ಣ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ, ಚೇತನ್ ಕುಮಾರ್ ಕಿನಾಲ್ ರಾಜ್ ಬರೆದಿದ್ದಾರೆ. ಸಾಮ್ರಾಟ್ ಛಾಯಾಗ್ರಹಣ, ಪ್ರಮೋದ್ ಸೋಮರಾಜ್ ಸಂಕಲನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಎರಡು ಸಾಹಸ ಸನ್ನಿವೇಶಗಳಿದ್ದು, ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.

    ನಿರ್ಮಾಪಕ ರವಿಗೌಡ ಅವರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ಹೀರಕೌರ್, ದಿವ್ಯರಾವ್, ಅರುಣ ಬಾಲರಾಜ್, ಅಮಿತ್, ಕೆಂಪೇಗೌಡ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಅಲ್ಲಿ ರೌಡಿ ಬೇಬಿ, ಇಲ್ಲಿ ಪೊಲೀಸ್ ಬೇಬಿ!

    ಅಲ್ಲಿ ರೌಡಿ ಬೇಬಿ, ಇಲ್ಲಿ ಪೊಲೀಸ್ ಬೇಬಿ!

    ತಮಿಳಿನ ಮಾರಿ-2 ಚಿತ್ರದ ರೌಡಿ ಬೇಬಿ ಹಾಡು ಸೃಷ್ಟಿಸಿರುವ ಸಂಚಲನವೇನು ಸಣ್ಣ ಮಟ್ಟದ್ದಲ್ಲ. ರಾಜ್ಯ ಭಾಷೆಗಳ ಗಡಿರೇಖೆ ಮೀರಿಕೊಂಡು ಈ ಹಾಡು ಎಲ್ಲ ಪ್ರೇಕ್ಷಕರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆ ಮಟ್ಟದ ವೀಕ್ಷಣೆಗೂ ಈ ಹಾಡು ಭಾಜನವಾಗಿದೆ. ಇದೀಗ ಕನ್ನಡದಲ್ಲಿಯೂ ಅದೇ ಧಾಟಿಯದ್ದೊಂದು ಹಾಡು ತಯಾರಾಗಿ ನಿಂತಿದೆ. ಇಂದು ಮೇ 14ರ ಮಂಗಳವಾರ ರುಸ್ತುಂ ಚಿತ್ರದ ಪೊಲೀಸ್ ಬೇಬಿ ಎಂಬ ಹಾಡು ಬಿಡುಗಡೆಯಾಗಲಿದೆ.

    ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರ ಬಿಂದು. ಯಾಕೆಂದರೆ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿಯೇ ಮೈಲಿಗಲ್ಲಾಗುವಂಥಾ ಹೂರಣ ಹೊಂದಿದೆಯೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಸೂಪರ್ ಕಾಪ್ ಆಗಿ ಅಬ್ಬರಿಸಿರೋ ಶಿವಣ್ಣನ ಫೋಟೋಗಳು ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ.

    ಇನ್ನೇನು ಬಿಡುಗಡೆಗೆ ಅಣಿಗೊಳ್ಳುತ್ತಿರುವ ಈ ಚಿತ್ರದ ವಿಶೇಷವಾದ ಹಾಡೊಂದನ್ನು ಸಿದ್ಧಗೊಳಿಸಲಾಗಿದೆ. ಪೊಲೀಸ್ ಬೇಬಿ ಎಂಬ ಈ ಹಾಡು ತಮಿಳಿನ ರೌಡಿ ಬೇಬಿ ಸಾಂಗಿನ ಧಾಟಿಯಲ್ಲಿಯೇ ಇರಲಿದೆಯಂತೆ. ತಮಿಳಿನಲ್ಲಿ ರೌಡಿ ಬೇಬಿ ಹಾಡು ಸಾಹಿತ್ಯ, ಟಪ್ಪಾಂಗುಚ್ಚಿ ಶೈಲಿಯ ಸಂಗೀತ ಮತ್ತು ಎಂಥವರನ್ನೂ ಎದ್ದು ಕುಣಿಯುವಂತೆ ಮಾಡುವಂಥಾ ಕೊರಿಯೋಗ್ರಫಿ ಮೂಲಕವೇ ಪ್ರಸಿದ್ಧಿ ಪಡೆದಿತ್ತು.

    ರುಸ್ತುಂ ಚಿತ್ರದ ರೌಡಿ ಬೇಬಿ ಹಾಡನ್ನೂ ಕೂಡಾ ಇಂಥಾದ್ದೇ ಸಮ್ಮೋಹಕ ಶೈಲಿಯಲ್ಲಿ ರೂಪಿಸಲಾಗಿದೆಯಂತೆ. ಹೇಳಿಕೇಳಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡೋದರಲ್ಲಿ ಎತ್ತಿದ ಕೈ. ಅವರಿಲ್ಲಿ ಯುವಕರೂ ನಾಚುವಂಥಾ ಸ್ಟೆಪ್ಸ್ ಹಾಕಿದ್ದಾರಂತೆ. ಇವರಿಗೆ ಶ್ರದ್ಧಾ ಶ್ರೀನಾಥ್ ಕೂಡಾ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇಂದೇ ಪ್ರೇಕ್ಷಕರನ್ನು ತಲುಪಲಿದೆ.