Tag: Rowdism

  • ಸಿನಿಮಾ ಶೈಲಿಯಲ್ಲಿ ಯುವಕನ ಕೊಲೆಗೆ ಸಂಚು – ಕೈಗೆ ಚಾಕು ಇರಿತ

    ಸಿನಿಮಾ ಶೈಲಿಯಲ್ಲಿ ಯುವಕನ ಕೊಲೆಗೆ ಸಂಚು – ಕೈಗೆ ಚಾಕು ಇರಿತ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ತಡರಾತ್ರಿ ಬಾಲ ಬಿಚ್ಚಿರುವ ಪುಡಿ ರೌಡಿಗಳು ಸಿನಿಮೀಯ ರೀತಿಯಲ್ಲಿ ಯುವಕನ ಕೊಲೆಗೆ ಸಂಚು ರೂಪಿಸಿ ಆತನ ಮೇಲೆ ದಾಳಿ ಮಾಡಿದ್ದಾರೆ.

    ಚೇತನ್ ಎಂಬಾತನ ಬೈಕ್ ಗೆ ಕಾರ್ಪೋರೇಷನ್ ಬ್ಯಾಂಕ್ ಬಳಿ ಡಿಕ್ಕಿ ಹೊಡೆದ ಕಾರ್ತಿಕ್ ಹಾಗೂ ಆತನ ಸಹಚರರು ಆತನ ಮೇಲೆ ಮಾರಕಾಸ್ತ್ರಗಳಿಂದ ಮುಗಿಬಿದ್ದು ಅಟ್ಯಾಕ್ ಮಾಡಿದ್ದಾರೆ. ದಾಳಿ ವೇಳೆ ಕೈಗೆ ಗಂಭೀರವಾದ ಗಾಯವಾದ ನಂತರ ತನ್ನ ಬೈಕ್ ಅಲ್ಲೇ ಬಿಟ್ಟು ಚೇತನ್ ತನ್ನ ಸ್ನೇಹಿತನ ಮತ್ತೊಂದು ಬೈಕ್ ನಲ್ಲಿ ಪರಾರಿಯಾಗಿ ಪ್ರಾಣ ಉಳಿಸಿಕೊಂಡಿದ್ದಾನೆ.

    ಚೇತನ್ ಪರಾರಿಯಾದ ಎಂಬ ಸಿಟ್ಟಿಗೆ ಕಾರ್ತಿಕ್ ಹಾಗೂ ಆತನ ಸಹಚರರು ಚೇತನ್ ಯಮಹಾ ಎಫ್ ಝಡ್ ಬೈಕಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಅಂದಹಾಗೆ ಬಾಗೇಪಲ್ಲಿ ಪಟ್ಟಣದ ಕಾರ್ತಿಕ್ ಹಾಗೂ ಪ್ರಾಣಾಪಾಯದಿಂದ ಬಚಾವ್ ಆದ ಚೇತನ್ ಗ್ಯಾಂಗ್ ನಡುವೆ ಗ್ಯಾಂಗ್ ವಾರ್ ನಡೆಯುತ್ತಿತ್ತು ಎನ್ನಲಾಗಿದೆ. ಪೆಟ್ರೋಲ್ ಬಂಕ್ ಬಳಿ ಕಳೆದ ಒಂದು ತಿಂಗಳ ಹಿಂದೆ ಸಣ್ಣ ವಿಚಾರಕ್ಕೆ ಇಬ್ಬರು ನಡುವೆ ಜಗಳ ನಡೆದಿತ್ತು.

    ಈ ಜಗಳಕ್ಕೆ ಸೇಡು ತೀರಿಸಿಕೊಳ್ಳಲು ಕಾರ್ತಿಕ್ ಈಗ ಅಟ್ಯಾಕ್ ಮಾಡಿರಬೇಕು ಎಂದು ಗಾಯಾಳು ಚೇತನ್ ಹೇಳಿದ್ದಾನೆ. ಆದರೆ ಇದು ಸಣ್ಣ ವಿಚಾರ ಅಲ್ಲ ಯಾವುದೋ ಹುಡುಗಿಗಾಗಿ ಈ ಗ್ಯಾಂಗ್ ವಾರ್ ನಡಿದಿದೆ ಎಂದು ಸಾರ್ವಜನಿಕನ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಕಾರ್ತಿಕ್ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ.

  • ರೌಡಿಸಂ ತೋರಿಸೋದಕ್ಕೆ ಹೋಗಿ ಹೆಣವಾದ ಬೈಕ್ ಸವಾರ

    ರೌಡಿಸಂ ತೋರಿಸೋದಕ್ಕೆ ಹೋಗಿ ಹೆಣವಾದ ಬೈಕ್ ಸವಾರ

    ಬೆಂಗಳೂರು: ರೈಲ್ವೆ ಗೇಟ್ ಕ್ರಾಸಿಂಗ್ ಜಾಗದಲ್ಲಿ ಬೈಕ್ ಸವಾರನೊಬ್ಬ ರೌಡಿಸಂ ತೋರಿಸೋದಕ್ಕೆ ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ.

    ರೈಲ್ ಪಾಸ್ ಆದಮೇಲೆ ಗೇಟ್ ಓಪನ್ ಆಗಿದ್ದು, ಈ ಸಂದರ್ಭದಲ್ಲಿ ಸವಾರನೊಬ್ಬ ಪೋನಿನಲ್ಲಿ ಮಾತನಾಡಿಕೊಂಡು ರಸ್ತೆ ಮಧ್ಯೆ ಬೈಕ್ ನಿಲ್ಲಿಸಿಕೊಂಡು ಬಿಲ್ಡಪ್ ಕೊಡುತ್ತಿದ್ದನು. ಈ ವೇಳೆ ಹಿಂದೆಯಿಂದ ವಾಹನ ಸವಾರರು ಹಾರ್ನ್ ಮಾಡಿದಾಗ ಬೈಕ್ ನಿಲ್ಲಿಸಿ ಆವಾಜ್ ಹಾಕಿದ್ದಾನೆ. ಅಲ್ಲದೆ ತನ್ನ ಬೈಕ್ ನಲ್ಲಿದ್ದ ಕತ್ತಿಯನ್ನು ತೆಗೆದು ರೌಡಿಸಂ ತೋರಿಸಲು ಮುಂದಾಗಿದ್ದಾನೆ.

    ಇದೇ ಸಮಯದಲ್ಲಿ ಮತ್ತೊಬ್ಬ ಬೈಕ್ ಸವಾರ ಆತನ ಕೈಯಲ್ಲಿದ್ದ ಕತ್ತಿಯನ್ನು ಕಿತ್ತುಕೊಂಡು ಒಂದೇ ಏಟು ಕುತ್ತಿಗೆಗೆ ಹೊಡೆದಿದ್ದಾನೆ. ಅಷ್ಟೇ ಒಂದೇ ಏಟಿಗೆ ನೆಲಕ್ಕುರಿಳಿದ ಆ ಪುಡಿ ರೌಡಿ ಕೊನೆಯುಸಿರೆಳೆದಿದ್ದಾನೆ. ಸುಮ್ಮನೆ ಕಾಲು ಕೆರೆದುಕೊಂಡು ಗಲಾಟೆ ಮಾಡುಲು ಹೋದವ ಸ್ಮಶಾನ ಸೇರಿದ್ದಾನೆ.

    ರಸ್ತೆಯಲ್ಲಿ ರೌಡಿಸಂ ಮಾಡಲು ಹೋದವನಿಗೆ ಆತನ ಕತ್ತಿಯಲ್ಲೇ ಹೊಡೆದ ವ್ಯಕ್ತಿ ನನಗೂ ಇದಕ್ಕೂ ಸಂಬಂಧವೇ ಇಲ್ಲದವನಂತೆ ತನ್ನ ಬೈಕಿನಲ್ಲಿ ಹೋಗಿದ್ದಾನೆ. ಈ ಘಟನೆಯ ದೃಶ್ಯ ರೈಲ್ವೆ ಗೇಟಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಈ ಘಟನೆ ಯಾವ ಪ್ರದೇಶದಲ್ಲಿ ಆಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ಇದು ಉತ್ತರ ಭಾರತದ ಕಡೆ ಕಳೆದ ಗುರುವಾರ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.

  • ಸಾಲ ತೀರಿಸಲಿಲ್ಲವೆಂದು ರೈತನ ಮನೆಯಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಗೂಂಡಾಗಿರಿ!

    ಸಾಲ ತೀರಿಸಲಿಲ್ಲವೆಂದು ರೈತನ ಮನೆಯಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಗೂಂಡಾಗಿರಿ!

    ಕೊಪ್ಪಳ: ಹತ್ತಾರು ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಉದ್ಯಮಿಗಳ ವಿರುದ್ಧ ಕ್ರಮಕ್ಕೆ ಬ್ಯಾಂಕ್‍ಗಳು ಮುಂದಾಗುತ್ತಿಲ್ಲ. ಆದರೆ ಇಲ್ಲೊಂದು ಸಹಕಾರಿ ಬ್ಯಾಂಕ್ ರೈತನಿಗೆ ಕೊಟ್ಟ 3 ಲಕ್ಷ ರೂ. ಸಾಲಕ್ಕೆ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಳ್ಳಿ ಕ್ರಾಸ್‍ನಲ್ಲಿನ ರೈತ ಸುಕೊ ಸಹಕಾರಿ ಬ್ಯಾಂಕ್ ನಲ್ಲಿ ಹೈನುಗಾರಿಕೆಗಾಗಿ ಸಾಲ ಮಾಡಿದ್ದರು. ಚಿನ್ನ ಮತ್ತು ಭೂಮಿಯನ್ನು ಅಡವಿಟ್ಟುಕೊಂಡು ಬ್ಯಾಂಕ್ ಸಾಲ ನೀಡಿತ್ತು. ಆದ್ರೆ ಪ್ರಕೃತಿ ವಿಕೋಪದಿಂದ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗಿದ್ದರಿಂದ ರೈತ ವಿಷ್ಟುವರ್ಧನ ರೆಡ್ಡಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬ್ಯಾಂಕ್ ಸಿಬ್ಬಂದಿ ರೈತನ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದಾರೆ.

    ಒಂದು ವಾರದ ಹಿಂದೆ ಪೊಲೀಸರ ಸಮೇತ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ರೈತನ ಮನೆ ಬೀಗ ಮುರಿದು, ಗೃಹ ಉಪಯೋಗಿ ವಸ್ತುಗಳನ್ನು ಎತ್ತೊಯ್ಯುವ ಮೂಲಕ ಅಕ್ಷರಶಃ ಗೂಂಡಾಗಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಗೆ ಬೀಗ ಮುದ್ರೆ ಹಾಕಿದ್ದಾರೆ. ಆಗ ಬ್ಯಾಂಕ್ ಗೆ ಹೋಗಿರೋ ರೈತ, ಯಾವ ಕಾನೂನಿನಡಿ ನಮ್ಮ ಮನೆಗೆ ನುಗ್ಗಿ ಹೀಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ನಮಗೂ ಮತ್ತು ಮನೆಗೆ ನುಗ್ಗಿ ವಸ್ತು ತೆಗದುಕೊಂಡು ಹೋಗಿದ್ದಕ್ಕೂ ಸಂಬಂಧವಿಲ್ಲ ಎಂದು ಹಿಂಬರಹ ನೀಡಿದ್ದಾರೆ.

    ಇದರ ವಿರುದ್ಧ ರೈತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಕೃತ್ಯಕ್ಕೆ ರೈತನ ಕುಟುಂಬ ಕಂಗಾಲಾಗಿದೆ.

  • ರೌಡಿ ನಲಪಾಡ್ ಗೂಂಡಾಗಿರಿ ಪ್ರಕರಣ- ವಿದ್ವತ್ ಅಣ್ಣನ ಹೇಳಿಕೆ ಪಡೆದ ಸಿಸಿಬಿ

    ರೌಡಿ ನಲಪಾಡ್ ಗೂಂಡಾಗಿರಿ ಪ್ರಕರಣ- ವಿದ್ವತ್ ಅಣ್ಣನ ಹೇಳಿಕೆ ಪಡೆದ ಸಿಸಿಬಿ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಯುವಕನ ಮೇಲೆ ನಡೆಸಿದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಗಾಯಾಳು ವಿದ್ವತ್ ಅಣ್ಣ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದಾರೆ.

    ವಿದ್ವತ್ ಅಲ್ಲದೆ ತನ್ನ ಮೇಲೂ ನಲಪಾಡ್ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಗೆ ಬಂದಾಗ ನನ್ನ ಮೇಲೂ ಕೈ ಮಾಡಿದ್ದ ಎಂದು ಸಿಸಿಬಿ ಪೊಲೀಸರ ಮುಂದೆ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಹೀಗಾಗಿ ಇದೀಗ ಸಿಸಿಬಿ ಪೊಲೀಸರು ಸಾತ್ವಿಕ್ ಹೇಳಿಕೆಯನ್ನು ಕೂಡ ಪರಿಗಣಿಸಿದ್ದಾರೆ.

    ವಿದ್ವತ್ ಮೇಲೆ ಹಲ್ಲೆ ನಡೆದ ಬಳಿಕ ಆತನ ಸ್ನೇಹಿತರು ಫೋನ್ ಮಾಡಿ ನನಗೆ ವಿಷಯ ತಿಳಿಸಿದ್ದರು. ನಾನು ಸ್ಥಳಕ್ಕೆ ಬರುವಷ್ಟರಲ್ಲಿ ವಿದ್ವತ್ ನನ್ನು ಮಲ್ಯ ಅಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಬಂದಾಗ ನಲಪಾಡ್ ಹಾಗೂ ಅವನ ಗ್ಯಾಂಗ್ ಇಲ್ಲಿಗೂ ಬಂದಿದ್ದರು. ಈ ವೇಳೆ ಅವರು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿದ್ದಾಗ ನನ್ನ ಮೇಲೂ ಕಿರುಚಾಡಿದ್ದರು. ಇದಕ್ಕೆ ನಾನು ಪ್ರತಿರೋಧ ತೋರಿದಾಗ ನನ್ನ ಮೇಲೆ ಕೈ ಮಾಡಿದರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ಜಾಮೀನಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಪ್ಪನಿಗೆ ರೌಡಿ ನಲಪಾಡ್ ಸೂಚನೆ!

    ಸಿಸಿಬಿ ಪೊಲೀಸರು ಫೆಬ್ರವರಿ 17ರ ರಾತ್ರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಹೇಳಿಕೆ ಪಡೆದಿದ್ದು, ಆಸ್ಪತ್ರೆಯಲ್ಲಿ ವಿದ್ವತ್ ಮೇಲಿನ ಹಲ್ಲೆಯನ್ನು ಸಾತ್ವಿಕ್ ಪ್ರಶ್ನೆ ಮಾಡಿದ್ದನು. ಪ್ರಶ್ನೆ ಮಾಡಿದ್ದಕ್ಕೆ ವಿದ್ವತ್ ನನ್ನ ಆಸ್ಪತ್ರೆಗೆ ದಾಖಲಿಸಬೇಡ ಎಂದು ಸಾತ್ವಿಕ್ ಮೇಲೆ ನಲಪಾಡ್ ಹಲ್ಲೆ ಮಾಡಿದ್ದನು ಎಂಬುದಾಗಿ ವರದಿಯಾಗಿತ್ತು. ಇದನ್ನೂ ಓದಿ: ಜಾಮೀನು ಅರ್ಜಿ ತಿರಸ್ಕೃತ- ನಲಪಾಡ್ ಗೆ ಜೈಲೇ ಗತಿ

    ಶನಿವಾರ ಸಿಸಿಬಿ ಪೊಲೀಸರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದಾರೆ. ಸಾತ್ವಿಕ್ ನನ್ನು ಈ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್