Tag: rowdies

  • ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!

    ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಐವರು ಶಂಕಿತ ಉಗ್ರರ (Suspected Terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ರೋಚಕ ಅಪ್ಡೇಟ್‍ಗಳು ಸಿಗುತ್ತಿದೆ. ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಪೈಜಲ್ ರಬ್ಬಾನಿ ಬಂಧಿತ ಶಂಕಿತ ಉಗ್ರರಾಗಿದ್ದು, ಪ್ರಮುಖ ಲೀಡರ್ ಜುನೈದ್ ತಲೆಮರೆಸಿಕೊಂಡಿದ್ದಾನೆ.

    ರೌಡಿಗಳಾಗಿದ್ದ ಶಂಕಿತರು: ಬೆಂಗಳೂರಿನಲ್ಲಿ ಸದ್ದಿಲ್ಲದೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಶಂಕಿತರು ಅಸಲಿಗೆ ರೌಡಿಗಳಾಗಿದ್ದರು. ಇವರೆಲ್ಲ 2017ರಲ್ಲಿ ಆರ್ ಟಿ ನಗರದಲ್ಲಿ ನೂರ್ ಅಹ್ಮದ್‍ನ ಕಿಡ್ನಾಪ್ ಕಮ್ ಮರ್ಡರ್ ಕೇಸ್ ನ ಆರೋಪಿಗಳು. ಈ ಕೇಸಲ್ಲಿ 21 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಕೊಲೆ ಮಾಡಿ ಜೈಲು ಸೇರಿದ ರೌಡಿಗಳಿಂದ ಇದೀಗ ಬ್ಲ್ಯಾಸ್ಟ್ ಗೆ ಸಂಚು ರೂಪಿಸಲಾಗುತ್ತಿತ್ತು.

    ಜೈಲು ಸೇರಿದವರಿಗೆ ಟೆರರಿಸ್ಟ್ ಗಳ ಲಿಂಕ್: ಕೊಲೆ ಮಾಡಿ ಪರಪ್ಪನ ಅಗ್ರಹಾರ (Parappana Agrahara) ಸೇರಿದವರಿಗೆ ಜೈಲು ಸಿಬ್ಬಂದಿ ಟೆರರಿಸ್ಟ್ ಸೆಲ್ ನೀಡಿದ್ದರು. ಈ ವೇಳೆ ಶಂಕಿತರು ಜೈಲಿನಲ್ಲಿ ಟೆರರಿಸ್ಟ್ (Terrorist) ಗಳ ವಿಶ್ವಾಸ ಗಳಿಸಿದ್ದರು. ಜೈಲಿನಲ್ಲೇ ಶಂಕಿತರಿಗೆ ಮೈಂಡ್ ವಾಶ್, ಟ್ರೈನಿಂಗ್ ನಡೆದಿತ್ತು. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವಂತೆ ಮೈಂಡ್ ವಾಶ್ ಮಾಡಲಾಗಿತ್ತು. ಅಂತೆಯೇ ಜೈಲಿನಿಂದ ರಿಲೀಸ್ ಆದ ಬಳಿಕ ಬೆಂಗಳೂರಲ್ಲಿ ದೊಡ್ಡ ಸ್ಫೋಟ ನಡೆಸಲು ಪ್ಲಾನ್ ಮಾಡಿದ್ದರು.

    ಜಮತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯಕ್ಕೆ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಂಕಿತರು ಜಮಾತ್ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಬಗ್ಗೆ ಪೊಲೀಸರಿಗೆ ಒಂದಷ್ಟು ಸಾಕ್ಷ್ಯಗಳು ಲಭ್ಯವಾಗಿದೆ. ಆರೋಪಿಗಳ ಬಂಧನದ ವೇಳೆ 4 ಪಿಸ್ತೂಲ್, ಸ್ಫೋಟಕ ವಸ್ತುಗಳು ವಾಕಿಟಾಕಿ, ಮೊಬೈಲ್‍ಗಳು ಪತ್ತೆ ಆಗಿದೆ. ಈ ಸಂಬಂಧ ಎನ್‍ಐಎ (NIA) ಅಧಿಕಾರಿಗಳು ಹಾಗೂ ಸಿಸಿಬಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜುನೈದ್ ಸದ್ಯ ವಿದೇಶದಲ್ಲಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಶಂಕಿತರ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಐಪಿಸಿ 120, 121 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ರಾಷ್ಟ್ರದ್ರೋಹ ಆರೋಪದ ಮೇಲೆ ಎಫ್‍ಐಆರ್ ದಾಖಲಾಗಿದೆ. ವಶಕ್ಕೆ ಪಡೆದ ಶಂಕಿತರನ್ನ ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

    ಸ್ಫೋಟಕ ವಸ್ತುಗಳು ಪತ್ತೆ: ಶಂಕಿತ ಉಗ್ರರ ಬಳಿ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡುಗಳು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಗಳು ಹಾಗೂ 4 ಗ್ರೆನೈಡ್ ಗಳು ಪತ್ತೆಯಾಗಿವೆ.

    ಟಾರ್ಗೆಟ್ ಬೆಂಗಳೂರು: ಶಂಕಿತ ಉಗ್ರರು ಬೆಂಗಳೂರು ಸಿಟಿಯನ್ನೇ ಟಾರ್ಗೆಟ್ ಮಾಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ಅರೆಸ್ಟ್ ಆದ ಎಲ್ಲಾ ಶಂಕಿತರು ಬೆಂಗಳೂರು ಸ್ಥಳೀಯ ನಿವಾಸಿಗಳೇ ಆಗಿದ್ದಾರೆ. ಉಗ್ರರ ಜೊತೆ ಕಾಂಟ್ಯಾಕ್ಟ್ ಆಗಿ ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು? ಏನು ಅನ್ನೋದರ ಬಗ್ಗೆಯೂ ಟ್ರೈನಿಂಗ್ ಪಡೆದಿದ್ದರು. ಶಂಕಿತರ ಟೀಂ ಎಲ್ಲಾ ಕಡೆಯೂ ಆಕ್ಟೀವ್ ಆಗಿತ್ತು. ಬೆಂಗಳೂರಿನ ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್ ಗೆ ಪ್ಲಾನ್ ಮಾಡಿದ್ದ ಮಾಹಿತಿ ಸಿಕ್ಕಿದೆ. ಎಲ್ಲಾ ಪ್ಲಾನ್ ಮಾಡಿಕೊಂಡು ಎಕ್ಸಿಕ್ಯೂಟ್‍ಗೆ ಕಾಯುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೌಡಿಗಳ ಚಳಿ ಬಿಡಿಸಿದ ರವಿ ಚೆನ್ನಣ್ಣನವರ್

    ರೌಡಿಗಳ ಚಳಿ ಬಿಡಿಸಿದ ರವಿ ಚೆನ್ನಣ್ಣನವರ್

    ಬೆಂಗಳೂರು: ಹವಾ ಮಾಡ್ತೀವಿ, ರೌಡಿಸಂ ಮಾಡ್ತೀವಿ, ಹೆಸರು ಮಾಡ್ತೀವಿ, ನಂದೆ ಹವಾ ಇರ್ಬೇಕು ಎಂದು ಓಡಾಡುತ್ತಿದ್ದವರಿಗೆ ಆನೇಕಲ್ ಉಪ ವಿಭಾಗದ ಪೊಲೀಸರು ಚಳಿ ಬಿಡಿಸಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಆನೇಕಲ್ ಉಪವಿಭಾಗದ ಏಳು ಠಾಣೆಯ ಪೋಲಿಸರು ಭಾನುವಾರ ಸ್ಪೆಷಲ್ ಡ್ರೈವ್ ಮಾಡಿ ರೌಡಿ ಶೀಟರ್ಸ್ ಗಳ ಮನೆಗಳಿಗೆ ತೆರಳಿ ರೈಡ್ ಮಾಡಿ ಸುಮಾರು ನೂರಕ್ಕು ಹೆಚ್ಚು ರೌಡಿ ಶೀಟರ್ ಗಳನ್ನು ಠಾಣೆಗೆ ಕರೆಸಿದ್ದಾರೆ. ಇಂದು ಎಸ್‍ಪಿ ರವಿ.ಡಿ.ಚೆನ್ನಣ್ಣನವರ್ ನೇತೃತ್ವದಲ್ಲಿ ಎಲ್ಲ ಠಾಣೆಯ ರೌಡಿಗಳನ್ನು ಒಂದೆಡೆ ಕರೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಇನ್ನೇನು ಹಬ್ಬ, ಬಿಬಿಎಂಪಿ ಚುನಾವಣೆ ಮತ್ತು ಪಂಚಾಯಿತಿ ಎಲೆಕ್ಷನ್ ಬರುತ್ತಿವೆ. ಈ ವೇಳೆ ಯಾರೂ ಬಾಲ ಬಿಚ್ಚಬಾರದು, ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಆನೇಕಲ್ ಠಾಣೆಯ ಮುಂಭಾಗದಲ್ಲಿ ಎಲ್ಲ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಕೆಲವರು ನಾನು ಅಲ್ಲಿ ಹವಾ ಇಟ್ಟಿದ್ದೇನೆ ಎಂದು ಪೊಲೀಸರಿಗೆ ಬೆದರಿಕೆ ಒಡ್ಡಿರುವ ಘಟನೆಗಳು ನಡೆದಿದ್ದು, ಇದೆಲ್ಲ ಇನ್ನು ಮುಂದೆ ನಡೆದರೆ ನಿಮ್ಮ ಬಾಲ ಕಟ್ ಮಾಡಬೇಕಾಗುತ್ತದೆ ರವಿ ಚೆನ್ನಣ್ಣನವರ್ ವಾರ್ನ್ ಮಾಡಿದ್ದಾರೆ.

    ಇತ್ತೀಚೆಗೆ ಹೆಚ್ಚು ಸಕ್ರಿಯರಾಗಿದ್ದ ಕೆಲ ರೌಡಿ ಶೀಟರ್ ಗಳು ಇದೆಲ್ಲ ಬಿಟ್ಟು, ತಮ್ಮ ಪಾಡಿಗೆ ತಾವಿದ್ದರೆ ಒಳ್ಳೆಯದು. ರೌಡಿಸಂ ಅಂತ ಹೋದ್ರೆ ಅವರಿಗೆ ದೊಡ್ಡ ಶಾಸ್ತಿಯಾಗುತ್ತದೆ. ಸುಮ್ಮನಿದ್ದರೆ ಸರಿ ಇಲ್ಲವಾದಲ್ಲಿ ಊರು ಬಿಡಿಸಬೇಕಾಗುತ್ತದೆ, ಗೂಂಡಾ ಕಾಯ್ದೆ ಹಾಕಬೇಕಾಗುತ್ತದೆ ಎಂದಿದ್ದಾರೆ.

  • ರೌಡಿಗಳು ಲಾಂಗ್ ಹಿಡಿದು ಓಡಾಡ್ತಿದ್ದಾರೆ: ಮತ್ತೆ ಪೊಲೀಸರ ಮೇಲೆ ಈಶ್ವರಪ್ಪ ಗರಂ

    ರೌಡಿಗಳು ಲಾಂಗ್ ಹಿಡಿದು ಓಡಾಡ್ತಿದ್ದಾರೆ: ಮತ್ತೆ ಪೊಲೀಸರ ಮೇಲೆ ಈಶ್ವರಪ್ಪ ಗರಂ

    ಶಿವಮೊಗ್ಗ: ಶಾಂತವಾಗಿದ್ದ ಮಲೆನಾಡಿನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರನ್ನು ಕಂಡರೆ ಕಳ್ಳ-ಕಾಕರಿಗೆ, ಕೊಲೆಗಾರರಿಗೆ ಭಯವೇ ಇಲ್ಲದಂತಾಗಿದೆ. ಅಪರಾಧ ತಡೆಗಟ್ಟುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿರುವ ಸಚಿವ ಈಶ್ವರಪ್ಪ ಪೊಲೀಸರ ವಿರುದ್ಧ ಇಂದು ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ.

    ಶಿವಮೊಗ್ಗ ನಗರದ ಕುವೆಂಪುನಗರ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಮಾತನಾಡಿದ ಸಚಿವರು, ಈ ಹಿಂದೆ ಆನಂದರಾಯರು ಶಿವಮೊಗ್ಗ ಕ್ಷೇತ್ರದ ಶಾಸಕರಾಗಿದ್ದ ವೇಳೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ನಂತರದ ದಿನಗಳಲ್ಲಿ ಅಪರಾಧ ಪ್ರಕರಣಗಳ ಕಡಿಮೆ ಆಗಿದ್ದವು. ಆದರೆ ಇದೀಗ ಮತ್ತೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಶಿವಮೊಗ್ಗ ನಗರದಲ್ಲಿ ರೌಡಿಗಳು ಮಚ್ಚು, ಲಾಂಗ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಗಾಂಜಾ, ಹುಕ್ಕಾ ಸೇವನೆ ಹೆಚ್ಚಾಗಿರುವ ಜೊತೆಗೆ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಹೀಗಿದ್ದರೂ ಪೊಲೀಸರು ಅಪರಾಧ ತಡೆಗಟ್ಟಲು, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇರದಿಂದಾಗಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಪೊಲೀಸರು ಕೆಲಸ ಮಾಡುತ್ತಿದ್ದಾರಾ, ಮಲಗಿದ್ದೀರಾ ಎಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಧೋರಣೆ ಹೀಗೆ ಮುಂದುವರಿದರೆ ಜನರೇ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂದು ಗುಡುಗಿದರು.

    ನಾಗರಿಕರು ದೂರು ನೀಡಲು ಠಾಣೆಗೆ ಹೋದರೆ ವಿನಾಃ ಕಾರಣ ಕಾಯಿಸುತ್ತಾರೆ ಎಂಬ ಆರೋಪ ಸಹ ಪೊಲೀಸರ ಮೇಲಿದೆ. ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ. ನಿಮ್ಮ ಇಲಾಖೆ ಬಗ್ಗೆ ಪ್ರತ್ಯೇಕ ಸಭೆ ನಡೆಸುತ್ತೇನೆ. ನಿಮ್ಮಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

  • ಬೆಂಗ್ಳೂರಿನಲ್ಲಿ ಹಾಡಹಗಲೇ ಮಚ್ಚು ಹಿಡಿದು ಪುಂಡರಿಂದ ಆರ್ಭಟ

    ಬೆಂಗ್ಳೂರಿನಲ್ಲಿ ಹಾಡಹಗಲೇ ಮಚ್ಚು ಹಿಡಿದು ಪುಂಡರಿಂದ ಆರ್ಭಟ

    – ಮಚ್ಚಿನಿಂದ ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಪುಡಿ ಪುಡಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳು ಪುಂಡಾಟ ಮುಂದುವರಿಸಿದ್ದಾರೆ. ಇಂತಹದ್ದೇ ಘಟನೆಯೊಂದು ಚೋಳರ ಪಾಳ್ಯದಲ್ಲಿ ನಡೆದಿದ್ದು, ಪುಂಡರು ಹಾಡಹಗಲೇ ಮಚ್ಚು ಹಿಡಿದು ಆರ್ಭಟ ನಡೆಸಿದ್ದಾರೆ.

    ಚೋಳರ ಪಾಳ್ಯದ 13ನೇ ಕ್ರಾಸ್‍ನಲ್ಲಿ ನಾಲ್ವರು ರೌಡಿಗಳು ರಾಜಾರೋಷವಾಗಿ ಮಚ್ಚಿನಿಂದ ರಸ್ತೆ ಬದಿಗೆ ಸಿಲ್ಲಿಸಿದ್ದ ವಾಹನಗಳ ಗಾಜು ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೇಕರಿಯನ್ನ ಲಾಂಗ್ ಮಚ್ಚಿನಿಂದ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ.

    ರೌಡಿಗಳು ಗಾಂಜಾ ಇಲ್ಲವೇ ಮದ್ಯದ ಮತ್ತಿನಲ್ಲಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪುಂಡಾಟವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

  • ದೇವಸ್ಥಾನದ ಬಳಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಕೆನ್ನೆ ಕೊಯ್ದ ಪುಂಡರು

    ದೇವಸ್ಥಾನದ ಬಳಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಕೆನ್ನೆ ಕೊಯ್ದ ಪುಂಡರು

    ಹಾಸನ: ಕೊರೊನಾ ಲಾಕ್‍ಡೌನ್ ನಡುವೆಯೂ ಹಾಸನದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು ಮನೆ ಬಳಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾರೆ.

    ಹಾಸನದ ಬೇಲೂರು ರಸ್ತೆಯ, ಈಶ್ವರ ದೇವಾಲಯ ಬಳಿ ಆಟೋಚಾಲಕ ನವೀನ್ ಮನೆಯಿದ್ದು, ಅಲ್ಲಿ ಮೂವರು ಯುವಕರು ಸಿಗರೇಟ್ ಸೇದುತ್ತಾ ಕೂಗಾಡುತ್ತಿದ್ದರು. ಇದನ್ನು ನೋಡಿದ ಆಟೋ ಚಾಲಕ ನವೀನ್, ಯಾರು ನೀವು, ಯಾಕೆ ಹೀಗೆ ಕೂಗಾಡುತ್ತಿದ್ದೀರಿ. ದೇವಾಲಯದ ಬಳಿ ಸಿಗರೇಟ್ ಸೇದಬಾರದು ಎಂದು ಬುದ್ಧಿವಾದ ಹೇಳಿದ್ದಾರೆ.

    ಇದರಿಂದ ಕೆರಳಿದ ಯುವಕರು ನೀನ್ಯಾವನೋ ಕೇಳೋಕೆ ಎಂದು ಏಕಾಏಕಿ ಚಾಕು ಬೀಸಿದ್ದಾರೆ. ನವೀನ್ ತಕ್ಷಣ ಹಿಂದೆ ಸರಿದಿದ್ದರಿಂದ ಚಾಕು ಕುತ್ತಿಗೆ ಕೊಯ್ಯುವ ಬದಲು ಕೆನ್ನೆಯನ್ನು ಕೊಯ್ದುಕೊಂಡು ಮುಂದೆ ಸಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ನವೀನ್ ಕೂಗಾಟದಿಂದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಹಾಸನ ಪೆನ್ಷನ್ ಮೊಹಲ್ಲ ಠಾಣೆಗೆ ನವೀನ್ ದೂರು ನೀಡಿದ್ದಾರೆ.

  • ಬೆಳ್ಳಂಬೆಳಗ್ಗೆ ಲಾಂಗು ಮಚ್ಚು ಝಳಪಿಸಿದ್ದ ರೌಡಿಗಳು ಅಂದರ್

    ಬೆಳ್ಳಂಬೆಳಗ್ಗೆ ಲಾಂಗು ಮಚ್ಚು ಝಳಪಿಸಿದ್ದ ರೌಡಿಗಳು ಅಂದರ್

    ತುಮಕೂರು: ತುಮಕೂರು ಹೊರವಲಯದ ಊರುಕೆರೆಯಲ್ಲಿ ಸೋವಮಾರ ಬೆಳ್ಳಂಬೆಳಗ್ಗೆ ಲಾಂಗು ಮಚ್ಚು ಝಳಪಿಸಿದ್ದ ಆರೋಪಿಗಳು ಕೊನೆಗೂ ಅಂದರ್ ಆಗಿದ್ದಾರೆ.

    ಊರುಕೆರೆ ನಿವಾಸಿಗಳಾದ ಓ.ಸಿ.ಕೃಷ್ಣಪ್ಪ, ಜಗದೀಶ್ ಹಾಗೂ ಪುರುಷೋತ್ತಮ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಸೋಮವಾರ ಊರುಕೆರೆ ನಿವಾಸಿ ರಾಜಣ್ಣ ನಡೆದು ಹೋಗುತ್ತಿದ್ದಾಗ ಕ್ಯಾತೆ ತೆಗೆಯಲೆಂದೇ ಕಾರು ಮುಟ್ಟಿದ್ದರು. ಬಳಿಕ ರಾಜಣ್ಣ ಪ್ರಶ್ನಿಸಿದ್ದಾಗ ಲಾಂಗು, ಮಚ್ಚು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು.

    ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತುಮಕೂರು ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

    ರಾಜಣ್ಣ ಅವರ ಪತ್ನಿ ಪುಟ್ಟನರಸಮ್ಮ ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ರಾಜಣ್ಣ ಅವರ ಕಾರು ಮುಟ್ಟಿ ಜಗಳ ತೆಗೆದು ಹಲ್ಲೆಗೆ ಯತ್ನಿಸಿದ್ದರು ಎನ್ನಲಾಗಿದೆ.

  • ಶಾಂತಿ ಸುವ್ಯವಸ್ಥೆ ಕಾಪಾಡಲು ಮಂಡ್ಯ ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್

    ಶಾಂತಿ ಸುವ್ಯವಸ್ಥೆ ಕಾಪಾಡಲು ಮಂಡ್ಯ ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್

    – ಮಂಡ್ಯದಲ್ಲಿ 38 ರೌಡಿಗಳನ್ನ ಗಡಿಪಾರು ಮಾಡಲು ನಿರ್ಧಾರ

    ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸಕ್ಕರೆ ನಾಡು ಮಂಡ್ಯ ಪುಡಿ ರೌಡಿಗಳ ಅಟ್ಟಹಾಸಕ್ಕೆ ನಲುಗಿದ್ದು, ಕಳೆದೆರಡು ತಿಂಗಳಿಂದ ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಇಂತಹ ಅಪರಾಧ ಪ್ರಕರಣಗಳು ತಡೆಗಟ್ಟಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಜಿಲ್ಲಾಡಳಿತ ಜೊತೆ ಸೇರಿ ಜಿಲ್ಲೆಯ ರೌಡಿಶೀಟರ್‌ಗಳನ್ನ ಗಡಿಪಾರು ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮುಂದಾಗಿದೆ.

    ಕಳೆದೆರಡು ತಿಂಗಳಿನಿಂದ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಕಳೆದ ಡಿಸೆಂಬರ್ ನಿಂದ ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ 5ಕ್ಕೂ ಹೆಚ್ಚು ಕೊಲೆ, 10ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಮತ್ತು ಹಲವು ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಇದರಿಂದ ಸಾರ್ವಜನಿಕರ ನೆಮ್ಮದಿ ಕೆಟ್ಟಿದೆ. ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಜಿಲ್ಲಾ ವ್ಯಾಪ್ತಿಯ 38 ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವಂತೆ ಮಂಡ್ಯ ಎಸ್‍ಪಿ ಪರಶುರಾಮ್ ಜಿಲ್ಲಾಧಿಕಾರಿ ವೆಂಕಟೇಶ್‍ರವರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ವೆಂಕಟೇಶ್, ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾಧ ಜಾಸ್ತಿಯಾಗಿದೆ. ಸಾರ್ವಜನಿಕರ ಶಾಂತಿ ಕಾಪಾಡುವ ಸಲುವಾಗಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ವಿಚಾರಣೆ ಆರಂಭಿಸಲಾಗಿದ್ದು, ಗಡಿಪಾರಿನ ಅವಧಿ ಹಾಗೂ ಗಡಿಪಾರು ವಾಪಸ್ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.

    ಜಿಲ್ಲಾಧಿಕಾರಿ ಗಡಿಪಾರು ಆದೇಶ ಮಾಡುವ ಮುನ್ನವೇ ರೌಡಿಶೀಟರ್ ಓರ್ವನಿಗೆ ಕೆ.ಆರ್ ಪೇಟೆ ಪಿಎಸ್‍ಐ ಬೆವರಿಳಿಸಿದ್ದಾರೆ. ಶ್ರೀಮಂತರನ್ನು ಬೆದರಿಸಿ ಹಣವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದ ಆರೋಪಿಗೆ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ವಾರ್ನಿಂಗ್ ಕೊಟ್ಟಿದ್ದಾರೆ. ಬದಲಾಗದಿದ್ದರೆ ಎನ್‍ಕೌಂಟರ್ ಲಿಸ್ಟ್‌ಗೆ ಸೇರಿಸಿ ಮುಗಿಸಿಬಿಡುತ್ತೀನಿ. ಇದು ಓಲ್ಡ್ ಪೊಲೀಸಿಂಗ್ ಅಲ್ಲ ಅಂತ ವಾರ್ನ್ ಮಾಡಿದ್ದಾರೆ. ವಾರ್ನ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಿಎಸ್‍ಐ ಬ್ಯಾಟರಾಯಗೌಡಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  • ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

    ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

    ಬೆಂಗಳೂರು: ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆ ವಿಭಾಗದ ಪುಡಾರಿಗಳನ್ನು ಕರೆಸಿ ಪರೇಡ್ ಮಾಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಪೂರ್ವ ವಿಭಾಗದ ಬಾಣಸವಾಡಿ, ಹಲಸೂರು, ರಾಮೂರ್ತಿ ನಗರ, ಬೈಯ್ಯಪ್ಪನ ಹಳ್ಳಿ, ಇಂದಿರಾ ನಗರ, ಜೀವನ್ ಭೀಮಾನಗರ ಸೇರಿದಂತೆ ಪೂರ್ವ ವಿಭಾಗದ ಎಲ್ಲಾ ಪೊಲೀಸ್ ರೌಡಿ ಶೀಟರ್ ಗಳನ್ನು ಕರೆದು ಪರೇಡ್ ಮಾಡಲಾಯ್ತು. ಪರೇಡ್‍ನಲ್ಲಿ ಸುಮಾರು 150 ಕ್ಕೂ ಹೆಚ್ಚು ಪುಡಿ ರೌಡಿಗಳಿಗೆ ಲೆಫ್ಟ್ ರೈಟ್ ಮಾಡಿ ಖಡಕ್ ವಾರ್ನ್ ಮಾಡಿದ್ರು. ಅಷ್ಟೇ ಅಲ್ಲದೇ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ನಿರತರಾದರೆ ಗೂಂಡ ಆಕ್ಟ್ ಆಗಿ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಅದರಲ್ಲೂ ಕೆಲ ದಿನಗಳಿಂದ ಪೂರ್ವ ವಿಭಾಗದ ರಾಮಮೂರ್ತಿ ನಗರ, ಬೈಯ್ಯಪ್ಪನಹಳ್ಳಿ ಅಸುಪಾಸಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೌಡಿ ಪರೇಡ್ ಮಾಡಿ ಡಿಸಿಪಿ ವಾರ್ನ್ ಮಾಡಿದ್ದಾರೆ. ಪರೇಡ್ ವೇಳೆ ಆಕ್ಟಿವ್ ಆಗಿರುವ ಅಪಾಯಕಾರಿ ಕ್ರಿಮಿನಲ್‍ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಆಯಾ ಠಾಣಾ ಇನ್ಸ್ ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗೆ ಡಿಸಿಪಿ ಶರಣಪ್ಪ ತಾಕೀತು ಮಾಡಿದರು. ಅಪರಾಧ ಚಟುವಟಿಕೆಯಲ್ಲಿ ಭಾಗಿರುತ್ತಿರುವುದು ಗಮನಕ್ಕೆ ಬಂದರೆ ಮುಲಾಜಿಲ್ಲದೇ ಬಂಧಿಸಿ ಜೈಲಿಗೆ ಕಳಿಸುವಂತೆ ಸೂಚಿಸಿದರು.

  • ಪೊಲೀಸ್ ಸ್ಟೇಷನ್ ಮೇಲೆ ರೌಡಿಗಳ ಅಟ್ಯಾಕ್ – ಠಾಣೆಗೆ ಬೇಕಿದೆ ರಕ್ಷಣೆ

    ಪೊಲೀಸ್ ಸ್ಟೇಷನ್ ಮೇಲೆ ರೌಡಿಗಳ ಅಟ್ಯಾಕ್ – ಠಾಣೆಗೆ ಬೇಕಿದೆ ರಕ್ಷಣೆ

    ಬೆಂಗಳೂರು: ಪೊಲೀಸ್ ಸ್ಟೇಷನ್ ಮೇಲೆ ರೌಡಿಗಳ ಅಟ್ಯಾಕ್ ಮಾಡಿದ್ದು, ಪೊಲೀಸ್ ಠಾಣೆಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗಿದೆ.

    ಬೆಂಗಳೂರಿನ ಮಾರ್ಕೆಟ್ ನಲ್ಲಿರುವ ಪೊಲೀಸ್ ಠಾಣೆಗೆ ಏಕಾಏಕಿ ನುಗ್ಗಿರುವ ಸುಮಾರು 100 ರಿಂದ 200 ಮಂದಿ ಕಲ್ಲು ತೂರಾಟ ಮಾಡಿದ್ದಾರೆ. ಇದರ ಜೊತೆಗೆ ಪೊಲೀಸರು ಅರೆಸ್ಟ್ ಮಾಡಿ ಇಟ್ಟುಕೊಂಡಿದ್ದ ಮೂವರನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದಾರೆ.

    ಮಾರ್ಕೆಟ್ ಪೊಲೀಸರು ಮಾರುಕಟ್ಟೆಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಓಡಾಡುತ್ತಿದ್ದ ಮೂವರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಇದಕ್ಕೆ ರೊಚ್ಚಿಗೆದ್ದ ಕೆಲ ಕಿಡಿಗೇಡಿಗಳು ಠಾಣೆಗೆ ನುಗ್ಗಿ ಪೊಲೀಸರನ್ನು ಬೆದರಿಸಿ ಬಂಧಿಸಿದ್ದ ಮೂವರನ್ನು ಕರೆದುಕೊಂಡು ಹೋಗಿದ್ದಾರೆ. ಇದರ ಜೊತೆಗೆ ಠಾಣೆಯ ಮುಂದೆ ನಿಲ್ಲಿಸಿದ್ದ ಪೊಲೀಸರ ಬೈಕುಗಳನ್ನು  ಪುಡಿ ಪುಡಿ ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರೇ ಪ್ರಯತ್ನ ಪಟ್ಟಿದ್ದರು ಎನ್ನಲಾಗಿದೆ.

  • ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ರವಿ ಚನ್ನಣ್ಣನವರ್

    ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ರವಿ ಚನ್ನಣ್ಣನವರ್

    ಬೆಂಗಳೂರು: ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರದ ನೂತನ ಎಸ್.ಪಿ ರವಿ.ಡಿ.ಚನ್ನಣ್ಣನವರ್ ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ರವಿ ಚನ್ನಣ್ಣನವರ್ ಭಾಗಿಯಾಗಿದ್ದರು. ಈ ವೇಳೆ, ಬೆಂಗಳೂರು ರಾಜಧಾನಿ ಜೊತೆಯಲ್ಲೇ ಬೆಳೆಯುತ್ತಿರುವ ನೆಲಮಂಗಲ ಪೊಲೀಸ್ ಉಪವಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು. ಅಲ್ಲದೆ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಾರ್ವಜನಿಕರು ಪೊಲೀಸ್ ವ್ಯವಸ್ಥೆಯೊಂದಿಗೆ ಸ್ಪಂದಿಸಿದಾಗ ಸಮಾಜಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ ಎಂದು ರವಿ ಚನ್ನಣ್ಣನವರ್ ಹೇಳಿದರು. ಹಾಗೆಯೇ ನೆಲಮಂಗಲ ಉಪವಿಭಾಗದ ಆರು ಠಾಣೆಗಳ ವ್ಯಾಪ್ತಿಗೆ ಬರುವ ಹಲವಾರು ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಕುಂದು ಕೊರತೆಗಳನ್ನು ವಿವರಿಸಿದರು. ಅದನ್ನು ಆಲಿಸಿದ ಎಸ್.ಪಿ, ಪೊಲೀಸರಿಗೆ ಸವಾಲಗಿರುವ ಗಾಂಜಾ, ಟ್ರಾಫಿಕ್, ಅಕ್ರಮ ಮದ್ಯ, ರೌಡಿ ಚಟುವಟಿಕೆಗಳಿಗೆ ಕಾನೂನು ಪ್ರಕಾರ ಪಾಠ ಹೇಳಲಿದ್ದೇವೆ ಎಂದು ಜನರಿಗೆ ಭರವಸೆ ಕೊಟ್ಟರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೌಡಿಗಳು ಅಪರಾಧ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಜೊತೆಗೆ ಗ್ರಾಮಾಂತರ ಪ್ರದೇಶದ ವಾಹನ ಸವಾರರಿಗೆ ಕೂಡ ಎಚ್ಚರಿಕೆ ನೀಡಿದರು. ಡ್ರಿಂಕ್ ಆಂಡ್ ಡ್ರೈವ್, ರ್‍ಯಾಷ್ ಆಂಡ್ ನೆಗ್ಲಿಜಿಯಂಟ್ ಮತ್ತು ವ್ಹೀಲಿಂಗ್ ಮಾಡಿಕೊಂಡು ವಾಹನ ಓಡಿಸಿದರೆ ವಾಹನ ಮುಟ್ಟುಗೋಲು ಜೊತೆಗೆ ವಾಹನ ಪರವಾನಿಗೆ ರದ್ದು ಮಾಡಲಾಗುತ್ತೆ ಎಂದು ಜನಸಂಪರ್ಕ ಸಭೆಯಲ್ಲಿ ರವಿ ಚೆನ್ನಣ್ಣನವರ್ ವಾರ್ನಿಂಗ್ ನೀಡಿದರು.