Tag: Rotary Foundation

  • ಬೆಂಗಳೂರು ಉದ್ಯಮಿಯಿಂದ 100 ಕೋಟಿ ದಾನ!

    ಬೆಂಗಳೂರು ಉದ್ಯಮಿಯಿಂದ 100 ಕೋಟಿ ದಾನ!

    ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಒಬ್ಬರು ಬರೋಬ್ಬರಿ 100 ಕೋಟಿ ರೂ. ಹಣವನ್ನು ರೋಟರಿ ಫೌಂಡೇಷನ್ ಗೆ ದಾನ ಮಾಡಿದ್ದಾರೆ.

    ರೊಟೇರಿಯನ್ ದೋಕುಜು ರವಿಶಂಕರ್ ಅವರು 100 ಕೋಟಿ ರೂ. ಹಣವನ್ನು ದಾನ ಮಾಡಿದ್ದಾರೆ. ಇವರು ನೀರು, ನೈರ್ಮಲ್ಯ, ಮೂಲಭೂತ ಶಿಕ್ಷಣ ಮತ್ತು ಮಕ್ಕಳ ಆರೋಗ್ಯ ಸೇರಿದಂತೆ ಹಲವು ಸಾರ್ವಜನಿಕ ಯೋಜನೆಗಳಿವೆ ಅನುಕೂಲವಾಗುವಂತೆ ಈ ದೇಣಿಗೆಯನ್ನು ನೀಡಿದ್ದಾರೆ.

    ರವಿಶಂಕರ್ ಒಬ್ಬ ಸ್ವತಂತ್ರ್ಯ ಹೋರಾಟಗಾರರ ಮಗನಾಗಿದ್ದು, ಇವರು ಆರ್ಥಿಕವಾಗಿ ಜೀವನ ನಡೆಸಲು ಹಿಂದುಳಿದರಿಗಾಗಿ ತಮ್ಮ ಆಸ್ತಿಯಲ್ಲಿ ದೊಡ್ಡ ಮೊತ್ತದ ದಾನ ನೀಡಲು ನಿರ್ಧಾರ ಮಾಡಿದ್ದರು. ರೋಟರಿ ಫೌಂಡೇಷನ್ ಶನಿವಾರ ಸಮಾರಂಭವೊಂದನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಅಲ್ಲಿ ರೋಟರಿ ಸಂಸ್ಥೆಗೆ ಈ ದೇಣಿಗೆ ನೀಡಿದ್ದಾರೆ.

    ರವಿಶಂಕರ್ ಅವರ ತಂದೆ ಕಾಮೆಶ್ ವಿನೋಬಾ ಭಾವೆಯವರ ಭೂದಾನ ಚಳವಳಿಯಲ್ಲಿ (ಲ್ಯಾಂಡ್ ಗಿಫ್ಟ್ ಚಳುವಳಿ) ತೊಡಗಿಸಿಕೊಂಡಿದ್ದರು. ಅವರ ತಂದೆ ಎಲ್ಲರಿಗೂ ದಾನ ನೀಡುತ್ತಿದ್ದರು. ವಿನೋಬಾ ಭಾವೆ ಚಳುವಳಿ ವೇಳೆಯೇ ತಮ್ಮ ಭೂಮಿಯನ್ನು ನೀಡಿದ್ದರು. ಜೊತೆಗೆ ಚಳವಳಿ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು. ಆದರೆ ಅಂತಹ ಲೋಕೋಪಕಾರಿಯನ್ನು ರವಿಶಂಕರ್ ನಾಲ್ಕು ವರ್ಷದ ಹುಡುಗನಾಗಿದ್ದಾಗ ಕಳೆದುಕೊಂಡಿದ್ದರು. ನಂತರ ಅವರ ತಾಯಿಯ ಆರೈಕೆಯಲ್ಲಿ ಬೆಳೆದಿದ್ದರು.

    ರವಿಶಂಕರ್ ಗೆ ಬಡವರ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದರು. ಕಡುಬಡತನದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನಿರ್ಧರಿಸಿದ್ದರು. ರವಿಶಂಕರ್ ನೀಡಿರುವ ಶೇ.50 ರಷ್ಟು ದಾನ ರೋಟರಿ, ಅಂತರಾಷ್ಟ್ರೀಯದ ವಿವಿಧ ದತ್ತಿಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು. “ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ನೀರು ಮತ್ತು ನೈರ್ಮಲ್ಯ, ತಾಯಿಯ ಮತ್ತು ಮಕ್ಕಳ ಆರೋಗ್ಯ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಈ ಆರು ಕ್ಷೇತಗಳಿಗೆ ರವಿಶಂಕರ್ ನೀಡಿದ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ರೋಟರಿ ಸಂಸ್ಥೆ ತಿಳಿಸಿದೆ.

    ರವಿಶಂಕರ್ ಸ್ನೇಹಿತರ ಜೊತೆಗೂಡಿ ಹರಾ ಹೌಸಿಂಗ್ ಎಂಬ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. 2025 ರ ವೇಳೆಗೆ 25 ಬಿಲಿಯನ್ ಡಾಲರ್ ಗಳ ಕಾರ್ಪಸ್ ನಿಧಿಯನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ. ವರ್ಷದಲ್ಲಿ ಸಂಗ್ರಹಿಸಿದ ಹಣವನ್ನು ಪ್ರಪಂಚದಾದ್ಯಂತದ ವಿವಿಧ ದತ್ತಿ ಚಟುವಟಿಕೆಗಳಿಗೆ ನಿಯೋಜಿಸಲಾಗುವುದು ಎಂದು ರೋಟರಿ ಫೌಂಡೇಷನ್ ಹೇಳಿದೆ.