Tag: Ross Taylor

  • 49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    ಬೆಂಗಳೂರು: 49 ಶತಕಗಳ ಮೂಲಕ ಸಚಿನ್ (Sachin) ದಾಖಲೆ ಸರಿಗಟ್ಟಿರುವ ಕೊಹ್ಲಿ (Virat Kohli) ತಮ್ಮ 35ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡರು. 49 ಶತಕ ಬಾರಿಸಿದ್ದೇನೋ ಸರಿ, ಆದು ಯಾವ ತಂಡದ ವಿರುದ್ಧ ಎಂದು ಗೊತ್ತಾಗಬೇಕಲ್ಲ. ಅದಕ್ಕೆ ಈ ಎಲ್ಲ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

    ಶತಕ ಬಾರಿಸುವುದೆಂದರೆ ಸಚಿನ್ ಹಾಗೂ ಕೊಹ್ಲಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಎಂದರೆ ಅಚ್ಚುಮೆಚ್ಚು. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿದ್ದರೆ, ಕೊಹ್ಲಿ 8 ಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಬ್ಬರೂ ತಲಾ 5 ಶತಕ ದಾಖಲಿಸಿದ್ದಾರೆ.

    ಆ `49 ಶತಕ’ಗಳು ಯಾರ ವಿರುದ್ಧ..?

    ಆಸ್ಟ್ರೇಲಿಯಾ ವಿರುದ್ಧ ಸಚಿನ್ 9, ಕೊಹ್ಲಿ 8 ಶತಕ
    ಬಾಂಗ್ಲಾದೇಶದ ವಿರುದ್ಧ ಸಚಿನ್ 1, ವಿರಾಟ್ ಕೊಹ್ಲಿ 5 ಶತಕ
    ಇಂಗ್ಲೆಂಡ್ ವಿರುದ್ಧ ಸಚಿನ್ 2, ವಿರಾಟ್ 3 ಶತಕ
    ನ್ಯೂಜಿಲೆಂಡ್ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಪಾಕಿಸ್ತಾನ ವಿರುದ್ಧ ಸಚಿನ್ 5 ಶತಕ, ವಿರಾಟ್ 3 ಶತಕ
    ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಶ್ರೀಲಂಕಾ ವಿರುದ್ಧ ಸಚಿನ್ 8 ಹಾಗೂ ವಿರಾಟ್ 10 ಶತಕ
    ವೆಸ್ಟ್ ಇಂಡೀಸ್ ವಿರುದ್ಧ ಸಚಿನ್ 4, ವಿರಾಟ್ 9 ಶತಕ
    ಜಿಂಬಾಬ್ವೆ ವಿರುದ್ಧ ಸಚಿನ್ 5, ವಿರಾಟ್ 1 ಶತಕ
    ಕೀನ್ಯಾ ವಿರುದ್ಧ ಸಚಿನ್ 4 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ
    ನಮೀಬಿಯಾ ವಿರುದ್ಧ ಸಚಿನ್ 1 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ.

  • Virat Kohli – ಬರ್ತ್ ಡೇಯಂದೇ ಸೆಂಚುರಿ ಬಾರಿಸಿದ 7ನೇ ಆಟಗಾರ..!

    Virat Kohli – ಬರ್ತ್ ಡೇಯಂದೇ ಸೆಂಚುರಿ ಬಾರಿಸಿದ 7ನೇ ಆಟಗಾರ..!

    – ವಿಶ್ವಕಪ್‌ನಲ್ಲಿ ಜನ್ಮದಿನದಂದೇ ಭಾರತದ ಪರ ಮೊದಲ ಸೆಂಚುರಿ

    ಕೋಲ್ಕತ್ತಾ: ಕಿಂಗ್ ಕೊಹ್ಲಿ (Virat Kohli) ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೊಸ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ (W0rld Cup) ಪಂದ್ಯದಲ್ಲಿ ಬರ್ತ್ ಡೇಯಂದೇ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

    ದಕ್ಷಿಣ ಆಫ್ರಿಕಾ (South Africa) ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ತನ್ನ ವೃತ್ತಿ ಬದುಕಿನ 49ನೇ ಏಕದಿನ ಶತಕ ದಾಖಲಿಸಿದರು. 101 ರನ್ ಗಳಿಸಿದ ಕೊಹ್ಲಿ ಅಜೇಯರಾಗಿಯೇ ಉಳಿದರು. ಅಲ್ಲದೆ ವಿಶ್ವಕಪ್‌ನಲ್ಲಿ 4ನೇ ಸೆಂಚುರಿ ಬಾರಿಸಿದರು. ಈ ಮೂಲಕ 49 ಶತಕ ಬಾರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು.

    ಇನ್ನಿಂಗ್ಸ್ ಮಧ್ಯೆ ಬ್ರೇಕ್‌ನಲ್ಲಿ ಬರ್ತ್ ಡೇ ದಿನದ ಶತಕ ಹೇಗನ್ನಿಸ್ತು? ಎಂಬ ವೀಕ್ಷಕ ವಿವರಣೆಗಾರರ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ಭಾರತಕ್ಕಾಗಿ ಆಡುವುದು ನನಗೆ ಹೆಮ್ಮೆ. ಇಷ್ಟೊಂದು ಅಭಿಮಾನಿಗಳ ಮುಂದೆ ಈ ಸಾಧನೆ ನೀಡಿರುವುದು ಖುಷಿ ತಂದಿದೆ ಎಂದರು.

    ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಇದುವರೆಗೆ 7 ಆಟಗಾರರು ಬರ್ತ್ ಡೇಯಂದೇ ಶತಕ ಬಾರಿಸಿದ್ದಾರೆ.

    1. ವಿನೋದ್ ಕಾಂಬ್ಳಿ, ಭಾರತ 21ನೇ ಶತಕ, ಇಂಗ್ಲೆಂಡ್ ವಿರುದ್ಧ ಅಜೇಯ 100 ರನ್, ಜೈಪುರ, 1993

    ಇಂಗ್ಲೆಂಡ್ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 149 ಎಸೆತಗಳಲ್ಲಿ ಶತಕ ಬಾರಿಸಿದ ವಿನೋದ್ ಕಾಂಬ್ಳಿ (Vinod Kambli) ಅಜೇಯರಾಗಿ ಉಳಿದರು. 9 ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡ ಶತಕ ಕಾಂಬ್ಳಿ ಬಾರಿಸಿದರೂ ಭಾರತ ಈ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿತ್ತು.

    2. ಸಚಿನ್ ತೆಂಡೂಲ್ಕರ್, ಭಾರತ, 25ನೇ ಶತಕ, ಆಸ್ಟ್ರೇಲಿಯಾ ವಿರುದ್ಧ 134, ಶಾರ್ಜಾ, 1998

    1998ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಒನ್‌ಡೇ ಮ್ಯಾಚ್ ದಿನ 25ನೇ ಬರ್ತ್ಡೇ ಆಚರಿಸಿದ ಸಚಿನ್ (Sachin Tendulkar) ತಮ್ಮ 25ನೇ ಶತಕವನ್ನು ಅರ್ಥಪೂರ್ಣವಾಗಿ ಬಾರಿಸಿದರು. 131 ಎಸೆತಗಳಲ್ಲಿ 12 ಬೌಂಡರಿ ಹಾಘೂ 3 ಸಿಕ್ಸರ್ ಒಳಗೊಂಡ 134 ರನ್ ಬಾರಿಸಿದರು. ಈ ಪಂದ್ಯವನ್ನು ಭಾರತ ಆರು ವಿಕೆಟ್‌ಗಳಿಂದ ಗೆದ್ದಿತ್ತು.

    3. ಸನತ್ ಜಯಸೂರ್ಯ, ಶ್ರೀಲಂಕಾ, 39ನೇ ಬರ್ತ್ಡೇ, ಬಾಂಗ್ಲಾದೇಶದ ವಿರುದ್ಧ 130 ರನ್, ಕರಾಚಿ, 2008

    2008ರಲ್ಲಿ 39ನೇ ಬರ್ತ್ಡೇ ದಿನ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪಂದ್ಯಲ್ಲಿ ಸನತ್ ಜಯಸೂರ್ಯ ಶತಕ ಬಾರಿಸಿದರು. 88 ಎಸೆತಗಳಲ್ಲಿ 16 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡ ಇನ್ನಿಂಗ್ಸ್ನಲ್ಲಿ ಜಯಸೂರ್ಯ 130 ರನ್ ಗಳಿಸಿರು. ಈ ಪಂದ್ಯದಲ್ಲಿ ಶ್ರೀಲಂಕಾ 158 ರನ್ ಅಂತರದಿಂದ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿತ್ತು.

    4. ರಾಸ್ ಟೇಲರ್, ನ್ಯೂಜಿಲೆಂಡ್, 27ನೇ ಬರ್ತ್ಡೇ, ಪಾಕಿಸ್ತಾನ ವಿರುದ್ಧ ಅಜೇಯ 131 ರನ್, ಪಲ್ಲೆಕೆಲೆ, 2011

    ವಿಶ್ವಕಪ್ ಪಂದ್ಯಾವಳಿಯಲ್ಲಿ ಬರ್ತ್ಡೇ ಆಚರಿಸಿಕೊಂಡ ಮೊದಲ ಆಟಗಾರ ರಾಸ್ ಟೇಲರ್ (Ross Taylor). ಶತಕದ ಜೊತೆ 27ನೇ ಬರ್ತ್ಡೇ ಆಚರಿಸಿಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯಲ್ಲಿ 124 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸ್ ಜೊತೆ 131 ರನ್ ಬಾರಿಸಿದ್ದರು. ಈ ಪಂದ್ಯವನ್ನು ನ್ಯೂಜಿಲೆಂಡ್ 110 ರನ್ ಗಳಿಂದ ಗೆದ್ದಿತ್ತು.

    5. ಟಾಮ್ ಲ್ಯಾಥಮ್, ನ್ಯೂಜಿಲೆಂಡ್, 30ನೇ ಶತಕ, ನೆದರ್ಲೆಂಡ್ ವಿರುದ್ಧ ಅಜೇಯ 140 ರನ್, ಹ್ಯಾಮಿಲ್ಟನ್, 2022

    ನೆದರ್ಲೆಂಡ್ ವಿರುದ್ಧದ ಹ್ಯಾಮಿಲ್ಟನ್‌ನಲ್ಲಿ 2022ರಲ್ಲಿ ನಡೆದ 123 ಎಸೆತಗಳಲ್ಲಿ 140 ರನ್ ಗಳಿಸಿ ಟಾಮ್ ಲ್ಯಾಥಮ್ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್ 10 ಬೌಂಡರಿ ಹಾಘೂ 5 ಸಿಕ್ಸರ್ ಗಳನ್ನೊಳಗೊಂಡಿತ್ತು. ನ್ಯೂಜಿಲೆಂಡ್ ಈ ಪಂದ್ಯವನ್ನು 118 ರನ್ ಅಂತರದಿಂದ ಗೆದ್ದಿತ್ತು.

    6. ಮಿಚೆಲ್‌ ಮಾರ್ಷ್‌, ಆಸ್ಟ್ರೇಲಿಯಾ, 32ನೇ ಬರ್ತ್ಡೇ, ಪಾಕಿಸ್ತಾನ ವಿರುದ್ಧ 121, ಬೆಂಗಳೂರು 2023

    ಈ ಬಾರಿಯ ವಿಶ್ವಕಪ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್‌ ಮಾರ್ಷ್‌ ಬರ್ತ್ಡೇ ದಿನವೇ ಸೆಂಚುರಿ ಬಾರಿಸಿದರು. 108 ಬಾಲಲ್ಲಿ 121 ರನ್ ಗಳಿಸಿದರು. 10 ಫೋರ್ ಹಾಗೂ 9 ಸಿಕ್ಸರ್ ಒಳಗೊಂಡ ಇನ್ನಿಂಗ್ಸ್ ಇದಾಗಿತ್ತು.

    7. ವಿರಾಟ್ ಕೊಹ್ಲಿ, ಭಾರತ, 35ನೇ ಬರ್ತ್ಡೇ, ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 101 ರನ್, ಕೋಲ್ಕತ್ತಾ, 2023

    ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಬರ್ತ್ಡೇ ದಿನ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. 121 ಎಸೆತಗಳಲ್ಲಿ ಕೊಹ್ಲಿ 10 ಬೌಂಡರಿಗಳ ಸಹಿತ 101 ರನ್ ಬಾರಿಸಿದರು. ಅಲ್ಲದೇ ಇದೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಗೆ ತಮ್ಮ ಹೆಸರನ್ನೂ ಸೇರಿಸಿಕೊಂಡರು.

  • ನನ್ನ ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌: ಜೈಶಂಕರ್‌

    ನನ್ನ ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌: ಜೈಶಂಕರ್‌

    ನವದೆಹಲಿ: ನನಗೆ ವೈಯಕ್ತಿಕವಾಗಿ ನೆಚ್ಚಿನ ಆಟಗಾರ ನ್ಯೂಜಿಲೆಂಡ್ (New Zealand) ಕ್ರಿಕೆಟಿಗ ರಾಸ್ ಟೇಲರ್ (Ross Taylor) ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S. Jaishankar) ತಿಳಿಸಿದರು.

    ಭಾರತ (India) ಮತ್ತು ನ್ಯೂಜಿಲೆಂಡ್‌ ನಡುವಿನ ಕ್ರಿಕೆಟ್‌ ಬಾಂಧವ್ಯವನ್ನು ಶ್ಲಾಘಿಸಿದ ಅವರು, ನಮಗೆ ನ್ಯೂಜಿಲೆಂಡ್‌ ಎಂದಾಗ ಅನೇಕ ವಿಷಯಗಳು ಮನಸ್ಸಿಗೆ ಬರುತ್ತದೆ. ಆದರೆ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಕ್ರಿಕೆಟ್‌ (Cricket) ಎಂದು ಹೇಳುತ್ತೇನೆ. ಭಾರತ ಹಾಗೂ ನ್ಯೂಜಿಲೆಂಡ್‌ ದೇಶಗಳು ಕ್ರಿಕೆಟ್‌ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿಯನ್ನು ಹೊಂದಿವೆ ಎಂದು ಹೇಳಿದರು.

    ಭಾರತೀಯರು ಎಂದಿಗೂ ಜಾನ್ ರೈಟ್ ಅವರನ್ನು ಮರೆಯುವುದಿಲ್ಲ ಎಂದ ಅವರು, ಭಾರತೀಯರಿಗೆ ಹೆಚ್ಚು ತಿಳಿದಿರುವ ನ್ಯೂಜಿಲೆಂಡ್ ಆಟಗಾರ ವಿಲಿಯಮ್ಸನ್ ಆಗಿದ್ದಾರೆ. ಅವರು ನಮ್ಮ ದೇಶದ ವಿರುದ್ಧ ಆಡುವುದನ್ನು ಹೊರತು ಪಡಿಸಿ ಹೆಚ್ಚಿನ ಸಮಯ ನಾವು ಅವರನ್ನು ಇಷ್ಟ ಪಡುತ್ತೇವೆ. ಆದರೆ ನನ್ನ ನೆಚ್ಚಿನ ಆಟಗಾರ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಆದರೆ ಅದು ಬೇರೆ ವಿಷಯ ಎಂದು ಈ ವೇಳೆ ತಿಳಿಸಿದರು.

    ಭಾರತದ ಮಾಜಿ ಕೋಚ್‌ ನ್ಯೂಜಿಲೆಂಡ್‌ನ ಜಾನ್‌ ರೈಟ್‌, ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ (CSK) ಮುಖ್ಯ ಕೋಚ್‌ ನೈಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್‌ ಫ್ಲೆಮಿಂಗ್‌ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದರು. ಫ್ಲೆಮಿಂಗ್‌ 2010, 2011, 2018 ಹಾಗೂ 2021ರಲ್ಲಿ CSK ಟೀಂಗೆ ಕೋಚ್‌ ಆಗಿ ಮಾರ್ಗದರ್ಶನ ನೀಡಿದ್ದರು. ಈ ಸಮಯದಲ್ಲಿ ಐಪಿಎಲ್‌ನ ಕಿರೀಟವನ್ನು CSK ತಂಡ ತನ್ನದಾಗಿಸಿಕೊಂಡಿತ್ತು. ಇದರ ಜೊತೆಗೆ ಕಿವೀಸ್‌ನ ನಾಯಕ ವಿಲಿಯಮ್ಸನ್‌ ಸನ್‌ರೈಸರ್ಸ್‌ ಹೈದರಾಬಾದ್‌ನ ಪ್ರಸ್ತುತ ನಾಯಕರಾಗಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

  • IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು –  ರಾಸ್‌ ಟೇಲರ್‌ ರೋಚಕ ಅನುಭವ

    IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು – ರಾಸ್‌ ಟೇಲರ್‌ ರೋಚಕ ಅನುಭವ

    ಮುಂಬೈ: ಐಪಿಎಲ್‌ ನಲ್ಲಿ ಸೊನ್ನೆ ರನ್‌ಗಲಿಗೆ ಔಟಾಗಿದ್ದಕ್ಕೆ ಫ್ರಾಂಚೈಸಿ ತಂಡದ ಮಾಲೀಕರೊಬ್ಬರು ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ದರು ಎಂದು ನ್ಯೂಜಿಲ್ಯಾಂಡ್ ಫೇಮಸ್‌ ಕ್ರಿಕೆಟಿಗ ರಾಸ್ ಟೇಲರ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲಿ 2011ರ ಐಪಿಎಲ್ ಸೀಸನ್ ನಲ್ಲಿ ತಮಗೆ ಆದ ರೋಚಕ ಅನುಭವವನ್ನು ಬಹಿರಂಗಪಡಿಸಿದ್ದಾರೆ.

    ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲಿಕರ ಪೈಕಿ, ಓರ್ವ ತಮಗೆ 3-4 ಬಾರಿ ಕಪಾಳ ಮೋಕ್ಷ ಮಾಡಿದ್ದರು ಎಂಬ ಅಘಾತಕಾರಿ ಅಂಶ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    “ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಡಕ್ ಔಟ್ ಆದ ಬೆನ್ನಲ್ಲೇ ಫ್ರಾಂಚೈಸಿ ಮಾಲಿಕರೊಬ್ಬರು ಕಪಾಳಮೋಕ್ಷ ಮಾಡಿದ್ದರು ಎಂದು ಟೇಲರ್ ತಮ್ಮ ಹೊಸ ಆತ್ಮಚರಿತ್ರೆ ʻರಾಸ್ ಟೇಲರ್; ಬ್ಲಾಕ್ ಅಂಡ್‌ ವೈಟ್ʼ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    195 ರನ್ ಗಳ ಚೇಸಿಂಗ್ ಸವಾಲು ಇತ್ತು, ನಾನು ಎಲ್ ಬಿಡಬ್ಲ್ಯೂಗೆ ಡಕ್ ಔಟ್ ಆದೆ, ನಾವು ಗುರಿಯ ಸಮೀಪ ಹೋಗಲು ಸಾಧ್ಯವಾಗಲಿಲ್ಲ ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

    ಪಂದ್ಯದ ಬಳಿಕ ಹೋಟೆಲ್‌ನ ಟಾಪ್‌ ಫ್ಲೋರ್‌ ಡ್ರೆಸ್ಸಿಂಗ್‌ ರೂಂ ನಲ್ಲಿದ್ದ ನನಗೆ ರಾಯಲ್ ಚಾಲೆಂಜರ್ಸ್ ನ ಮಾಲಿಕರ ಪೈಕಿ ಓರ್ವರು, ʻರಾಸ್ ಟೇಲರ್ ನಾವು ನಿಮಗೆ ಡಕ್ ಔಟ್ ಆಗುವುದಕ್ಕಾಗಿ ಮಿಲಿಯನ್ ಡಾಲರ್ಸ್ ಹಣ ನೀಡಿಲ್ಲ ಎಂದು 3-4 ಬಾರಿ ಕಪಾಳಕ್ಕೆ ಬಾರಿಸಿದ್ದರು ʼಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ರಾಸ್ ಟೇಲರ್

    ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ರಾಸ್ ಟೇಲರ್

    ವೆಲ್ಲಿಂಗ್ಟನ್: 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ನ್ಯೂಜಿಲೆಂಡ್ ತಂಡದ ಖ್ಯಾತ ಆಟಗಾರ ರಾಸ್ ಟೇಲರ್ ವಿದಾಯ ಹೇಳಿದ್ದಾರೆ.

    ಸೋಮವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಟೇಲರ್ ವಿದಾಯ ಹೇಳಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯಸ್ಥ ಮಾರ್ಟಿನ್ ಸ್ನೇಡನ್ ಅವರು ಟೇಲರ್‌ಗೆ ಬೀಳ್ಕೊಡುಗೆ ನೀಡಿ, ಸನ್ಮಾನಿಸಿದರು. ಇದನ್ನೂ ಓದಿ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಸೇಡಾನ್ ಪಾರ್ಕ್‍ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 115 ರನ್‍ಗಳಿಂದ ಜಯಗಳಿಸಿತು. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ ಅವರು ಕೇವಲ 14 ರನಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಹಿಂದೆ ಜನವರಿಯಲ್ಲಿ ಅವರು ಬಾಂಗ್ಲಾ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಧುಮೇಹ ನಿರ್ವಹಣೆ ಹೇಗೆ?

    2006ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದ ಅವರು, ನಂತರದಲ್ಲಿ ನ್ಯೂಜಿಲೆಂಡ್ ತಂಡದ ಬೆಸ್ಟ್ ಬ್ಯಾಟರ್ ಆಗಿ ಹೊರಹೊಮ್ಮಿದರು. ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‍ನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. 2015 ರಲ್ಲಿ ಪರ್ತ್‍ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 290 ವೈಯಕ್ತಿಕ ರನ್‍ಗಳನ್ನು ಗಳಿಸಿದ್ದು, ಅದು ಅವರ ಜೀವನಶ್ರೇಷ್ಠ ಪಂದ್ಯವಾಗಿದೆ.

    ಈ ಕುರಿತು ಮಾತನಾಡಿದ ಅವರು, ನನ್ನ ಈ 16 ವರ್ಷಗಳಲ್ಲಿ ಅದ್ಭುತವಾದ ಹಲವಾರು ಕ್ಷಣಗಳನ್ನು ಅನುಭವಿಸಿದ್ದೇನೆ. ಅದರಲ್ಲಿ ಕೆಲ ಸುಂದರ ನೆನಪುಗಳು ಇವೆ. ಕ್ರಿಕೆಟ್ ಆಟವೀಗ ಜಾಗತಿಕ ಮಟ್ಟದಲ್ಲಿ ಉತ್ತಮ ಕ್ರೀಡೆಯಾಗಿ ಮಿಂಚುತ್ತಿದೆ. ಇಂದಿನ ಎಲ್ಲ ನವ ಆಟಗಾರರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ನನ್ನ ಸಹ ಆಟಗಾರರು ಮತ್ತು ನ್ಯೂಜಿಲೆಂಡ್ ತಂಡದ ಕ್ರಿಕೆಟ್ ಬೋರ್ಡ್‍ಗೆ ನಾನು ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ನ್ಯೂಜಿಲೆಂಡ್ ತಂಡದ ಅಭಿಮಾನಿಗಳಿಗೆ ನಾನು ಸದಾ ಚಿರಋಣಿ ಆಗಿ ಇರುತ್ತೇನೆ ಎಂದರು. ಈ ಹಿಂದೆ ರಾಸ್ ಟೇಲರ್ ಅವರು ಐಪಿಎಲ್‍ನಲ್ಲಿ ನಮ್ಮ ಆರ್‍ಸಿಬಿ ತಂಡದ ಪರವಾಗಿ ಆಡಿದ್ದರು.

  • ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ರಾಸ್ ಟೇಲರ್

    ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ರಾಸ್ ಟೇಲರ್

    ವೆಲ್ಲಿಂಗ್ಟನ್: ನ್ಯೂಜಿಲೆಂಡ್‍ನ ಬಲಗೈ ಬ್ಯಾಟ್ಸ್ ಮನ್ ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬೇಸಿಗೆಯಲ್ಲಿ ತವರು ನೆಲದಲ್ಲಿ ನಡೆಯುವ 3 ಅಂತಾರಾಷ್ಟ್ರೀಯ ಪಂದ್ಯಗಳ ನಂತರ ನಿವೃತ್ತಿ ಪಡೆಯುವುದಾಗಿ ಅವರು ತಿಳಿಸಿದ್ದಾರೆ.

    ಶನಿವಾರದಿಂದ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಸರಣಿ ನಡೆಯಲಿದ್ದು, ಇದಾದ ಬಳಿಕ ಟೆಸ್ಟ್ ಪಂದ್ಯಕ್ಕೆ ವಿದಾಯ ಹೇಳುತ್ತೇನೆ. ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಆಸ್ಟ್ರೇಲಿಯಾ ಮತ್ತು ನೆದಲ್ಯಾರ್ಂಡ್ಸ್ ವಿರುದ್ಧದ ಏಕದಿನ ಪಂದ್ಯಗಳಿವೆ. ಇವು ನನ್ನ ಪಾಲಿನ ಕೊನೆಯ ಪಂದ್ಯಗಳಾಗಿದ್ದು, ಇದಾದ ಬಳಿಕ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಿಗೂ ವಿದಾಯ ಹೇಳುತ್ತೇನೆ ಎಂದು 37 ವರ್ಷ ವಯಸ್ಸಿನ ರಾಸ್ ಟೇಲರ್ ಟ್ವಿಟ್ಟರ್ ಲ್ಲಿ ತಿಳಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಏನಿದೆ?: ಇದೊಂದು ಅದ್ಭುತ ಪ್ರಯಾಣವಾಗಿದೆ. ನನ್ನ ದೇಶವನ್ನು ಪ್ರತಿನಿಧಿಸಿರುವುದು ನನ್ನ ಜೀವಿತಾವಧಿಯ ಅದೃಷ್ಟ ಎಂದು ಭಾವಿಸುತ್ತೇನೆ. ಕೆಲವರು ಶ್ರೇಷ್ಠರ ಜೊತೆಗೆ ಹಾಗೂ ಅವರ ವಿರುದ್ಧ ಆಡುವ ಸೌಭಾಗ್ಯ ನನಗೆ ದೊರೆತಿದೆ. ದಾರಿಯುದ್ದಕ್ಕೂ ಒಳ್ಳೆಯ ನೆನಪುಗಳು ಹಾಗೂ ಸ್ನೇಹವನ್ನು ಸಂಪಾದಿಸಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಒಂದೆಲ್ಲಾ ಒಂದು ದಿನ ಕೊನೆಗೊಳ್ಳಬೇಕು. ಹಾಗೇ ನಾನು ನಿವೃತ್ತಿ ಹೊಂದಲು ಇದು ಸರಿಯಾದ ಸಮಯ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ಇಂದು ನಾನು ಬೇಸಿಗೆಯ ಕೊನೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ಬಾಂಗ್ಲಾದೇಶದ ವಿರುದ್ಧ ಇನ್ನೂ ಎರಡು ಟೆಸ್ಟ್‍ಗಳು ಹಾಗೂ ಆಸ್ಟ್ರೇಲಿಯಾ ಮತ್ತು ನೆದರ್‌ ಲ್ಯಾಂಡ್ಸ್ ವಿರುದ್ಧ ಆರು ಏಕದಿನ ಪಂದ್ಯಗಳಿವೆ. ಇದಾದ ಬಳಿಕ ನಿವೃತ್ತಿ ಘೋಷಿಸುತ್ತೇನೆ. 17 ವರ್ಷಗಳಿಂದ ಬೆಂಬಲಿಸಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ

    ಟೇಲರ್ 2006ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. 109 ಟೆಸ್ಟ್ ಪಂದ್ಯದಲ್ಲಿ 7,577 ರನ್, 233 ಏಕದಿನ ಪಂದ್ಯಗಳಲ್ಲಿ 8,581 ರನ್ ಮತ್ತು 102 ಟಿ20 ಪಂದ್ಯಗಳಲ್ಲಿ 1,909 ರನ್‍ಗಳನ್ನು ಗಳಿಸಿದ್ದಾರೆ. ಐಪಿಎಲ್‍ನಲ್ಲೂ ಆಡಿರುವ ರಾಸ್ ಟೇಲರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಡೆಲ್ಲಿ ಡೇರ್ ಡೇವಿಲ್ಸ್ ಪುಣೆ ವಾರಿಯರ್ಸ್ ಪರ ಆಡಿದ್ದಾರೆ.

  • ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ

    ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ

    – ನ್ಯೂಜಿಲೆಂಡಿಗೆ 4 ವಿಕೆಟ್‍ಗಳ ಜಯ
    – 73 ಎಸೆತಗಳಲ್ಲಿ ಟೇಲರ್ ಶತಕ

    ಹ್ಯಾಮಿಲ್ಟನ್: ಕ್ಲೀನ್‍ಸ್ವಿಪ್ ಮೂಲಕ ಟಿ20 ಸರಣಿ ಗೆದ್ದು ಬೀಗಿದ್ದ ಭಾರತವನ್ನು ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಿಸಿದೆ. 4 ವಿಕೆಟ್‍ಗಳ ಜಯ ಪಡೆದ ನ್ಯೂಜಿಲೆಂಡ್ 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಹ್ಯಾಮಿಲ್ಟನ್‍ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 11 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ನ್ಯೂಜಿಲೆಂಡ್ ಪರ ರಾಸ್ ಟೇಲರ್ ಔಟಾಗದೆ 109 ರನ್ (84 ಎಸೆತ, 10 ಬೌಂಡರಿ, 4 ಸಿಕ್ಸರ್), ಹೆನ್ರಿ ನಿಕೋಲ್ಸ್ 78 ರನ್ (82 ಎಸೆತ, 11 ಬೌಂಡರಿ), ಟಾಮ್ ಲಾಥಮ್ 69 ರನ್ (48 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮಿಂಚಿ  ಸ್ಯಾಂಟ್ನರ್ ಔಟಾಗದೆ 12 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿದರು.

    ಭಾರತದ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‍ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿಯು 85 ರನ್ ಜೊತೆಯಾಟದ ಕೊಡುಗೆ ನೀಡಿತು. ಮಾರ್ಟಿನ್ ಗಪ್ಟಿಲ್ 32 ರನ್ (41 ಎಸೆತ, ಬೌಂಡರಿ) ಸಿಡಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ಟಾಮ್ ಬ್ಲುಂಡೆಲ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತರೆಳಿದರು.

    ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದ ಹೆನ್ರಿ ನಿಕೋಲ್ಸ್ ಗೆ ರಾಸ್ ಟೇಲರ್ ಸಾಥ್ ನೀಡಿದರು. ಈ ಜೋಡಿ 3ನೇ ವಿಕೆಟ್‍ಗೆ 62 ರನ್ ಜೊತೆಯಾಟದ ಕೊಡುಗೆ ನೀಡಿದರು. ಆದರೆ 78 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ಇನ್ನಿಂಗ್ಸ್ ನ 29ನೇ ಓವರಿನಲ್ಲಿ ಒಂಟಿ ರನ್ ಕದಿಯಲು ಹೋಗಿ ವಿರಾಟ್ ಕೊಹ್ಲಿ ಅವರಿಂದ ರನೌಟ್ ಆದರು. ಬಳಿಕ ಮೈದಾಕ್ಕಿಳಿದ ಟಾಂಮ್ ಲಾಥಮ್ ರಾಸ್ ಟೇಲರ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿ 138 ರನ್ ಗಳಿಸಿ ತಂಡವನ್ನು ಗೆಲುವಿ ದಡಕ್ಕೆ ಸಮೀಪಿಸಿತು.

    ನಾಲ್ಕನೇ ವಿಕೆಟ್‍ಗೆ ನ್ಯೂಜಿಲೆಂಡ್ 309 ರನ್ ಪೇರಿಸಿತ್ತು. ಆದರೆ ರಾಸ್ ಟೇಲರ್‍ಗೆ ಸಾಥ್ ನೀಡಲು ವಿಫಲರಾದ ಜೇಮ್ಸ್ ನೀಶಮ್ 9 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ 1 ರನ್‍ಗೆ ವಿಕೆಟ್ ಒಪ್ಪಿಸಿದರು. ಇನ್ನಿಂಗ್ಸ್ 47ನೇ ಮುಕ್ತಾಯಕ್ಕೆ ನ್ಯೂಜಿಲೆಂಡ್ 334 ರನ್ ಪೇರಿಸಿತ್ತು. ಕೊನೆಯ 18 ಎಸೆತಗಳಲ್ಲಿ 14 ಅಗತ್ಯವಿತ್ತು. ಆಗ ರಾಸ್ ಟೇಲರ್ ಒಂಟಿ ರನ್ ತೆಗೆದರೆ, ಮಿಚೆಲ್‌ ಸ್ಯಾಂಟ್ನರ್ ಸಿಕ್ಸ್, ಬೌಂಡರಿ ಹಾಗೂ ಒಂಟಿ ರನ್ ಗಳಿಸಿದರು. ಪಂದ್ಯದ ಕೊನೆಯವರೆಗೂ ರಾಸ್ ಟೇಲರ್ ಔಟಾಗದೆ ಇದ್ದಿದ್ದು ಗೆಲುವಿಗೆ ಕಾರಣವಾಯಿತು. ಕಳೆದ ಟಿ20 ಪಂದ್ಯದಲ್ಲಿ ರಾಸ್ ಟೇಲರ್ ವಿಕೆಟ್ ಬಳಿಕ ಎಲ್ಲಾ ಆಟಗಾರರು ಬಹುಬೇಗ ವಿಕೆಟ್ ಪೆವಿಲಿಯನ್ ತೆರಳಿದ್ದು ಸೂಪರ್ ಓವರ್ ಹಾಗೂ ಸೋಲಿಗೆ ಕಾರಣವಾಗಿತ್ತು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಶ್ರೇಯಸ್ ಅಯ್ಯರ್ ರನ್ 103 (107 ಎಸೆತ, 11 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ ಔಟಾಗದೆ 88 ರನ್ (64 ಎಸೆತ, 3 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 51 ರನ್ (63 ಎಸೆತ, 6 ಬೌಂಡರಿ) ಹಾಗೂ ಕೇದಾರ್ ಜಾದವ್ ಔಟಾಗದೆ 26 ರನ್ (15 ಎಸೆತ, 3 ಬೌಂಡರಿ, ಸಿಕ್ಸ್) ಸೇರಿ 4 ವಿಕೆಟ್‍ಗೆ 347 ರನ್ ಪೇರಿಸಿತ್ತು.

    ಇತರೇ ರನ್: ನ್ಯೂಜಿಲೆಂಡ್ ಬೌಲರ್ ಗಳು ಇತರೇ ರೂಪದಲ್ಲಿ 27 ರನ್(7 ಲೆಗ್ ಬೈ, 1 ನೋಬಾಲ್, 19 ವೈಡ್) ನೀಡಿದ್ದರೆ ಭಾರತ 29 ರನ್(4 ಲೆಗ್ ಬೈ, 1 ನೋಬಾಲ್, 24 ವೈಡ್) ನೀಡಿತ್ತು.

    ನ್ಯೂಜಿಲೆಂಡ್ ರನ್ ಏರಿದ್ದು ಹೇಗೆ?
    50 ರನ್- 59 ಎಸೆತ
    100 ರನ್- 107 ಎಸೆತ
    150 ರನ್- 153 ಎಸೆತ
    200 ರನ್- 222 ಎಸೆತ
    250 ರನ್- 239 ಎಸೆತ
    300 ರನ್- 243 ಎಸೆತ